For Quick Alerts
ALLOW NOTIFICATIONS  
For Daily Alerts

ಬ್ಯೂಟಿ ಟಿಪ್ಸ್: ಆಕರ್ಷಕ ಮೈಕಾಂತಿ ಪಡೆಯಲು ನೈಸರ್ಗಿಕ ವಿಧಾನ

By Hemanth
|

ಆಕರ್ಷಕ ಮೈಕಾಂತಿ ಪ್ರತಿಯೊಬ್ಬರನ್ನು ಸೆಳೆಯುವುದು. ಅದರಲ್ಲೂ ನಟಿನಟಿಯರಂತೂ ತಮ್ಮ ಮೈಬಣ್ಣದಿಂದಲೇ ಎಲ್ಲರನ್ನು ಆಕರ್ಷಿಸುವರು. ಹೆಚ್ಚಾಗಿ ಇವರು ತುಂಬಾ ದುಬಾರಿ ಕ್ರೀಮ್ ಹಾಗೂ ಮೊಶ್ಚಿರೈಸರ್ ಗಳನ್ನು ಬಳಸಿಕೊಳ್ಳುತ್ತಾರೆ ಎನ್ನುವ ನಂಬಿಕೆ. ಆದರೆ ನಮಗೂ ಇಂತಹ ಮೈಕಾಂತಿ ಬೇಕಿದ್ದರೆ ನೈಸರ್ಗಿಕವಾಗಿಯೇ ಇದನ್ನು ಪಡೆಯಬಹುದು.

ಹೌದು, ಹೆಚ್ಚು ಹಣ ವ್ಯಯ ಮಾಡದರೆ ನೈಸರ್ಗಿಕವಾಗಿಯೇ ಸಿಗುವ ಸಾಮಗ್ರಿಗಳನ್ನು ಬಳಸಿಕೊಂಡು ಮೈಕಾಂತಿ ಹೆಚ್ಚಿಸಬಹುದು. ಚರ್ಮವು ನಿಸ್ತೇಜ ಹಾಗೂ ಕಾಂತಿ ಕಳೆದುಕೊಳ್ಳಲು ಪ್ರಮುಖ ಕಾರಣವೆಂದರೆ ಕಲುಷಿತ ವಾತಾವರಣ, ಒತ್ತಡ, ಬಿಸಿಲಿನಲ್ಲಿರುವ ಹಾನಿಕಾರಕ ಯುವಿ ಕಿರಣಗಳು, ಹಾರ್ಮೋನು ಅಸಮತೋಲನ ಇತ್ಯಾದಿ. ಇವೆಲ್ಲವುಗಳಿಂದಾಗಿ ಚರ್ಮದಲ್ಲಿ ಮೊಡವೆ, ಬೊಕ್ಕೆ, ಕಲೆ ಮೂಡುವುದು. ಇದಕ್ಕಾಗಿ ನೀವು ಮಾರುಕಟ್ಟೆಯಲ್ಲಿ ಸಿಗುವ ಕ್ರೀಮ್ ಗಳ ಬದಲು ಮನೆಯಲ್ಲೇ ಕೆಲವು ಸಾಮಗ್ರಿಗಳಿಂದ ಮನೆಮದ್ದು ತಯಾರಿಸಿಕೊಂಡು ಕಲೆರಹಿತ ಚರ್ಮ ಪಡೆಬಹುದು. ಅದು ಹೇಗೆ ಎಂದು ಈ ಲೇಖನ ಮೂಲಕ ತಿಳಿಯಿರಿ.

 ಅಲೋವೆರಾ ಲೋಳೆ

ಅಲೋವೆರಾ ಲೋಳೆ

ಅಲೋವೆರಾ ಲೋಳೆ ಚರ್ಮದಲ್ಲಿರುವ ಯಾವುದೇ ರೀತಿಯ ಕಲೆಗಳನ್ನು ತುಂಬಾ ಪರಿಣಾಮಕಾರಿಯಾಗಿ ತೆಗೆಯುವುದು.

ತಯಾರಿಸುವುದು ಹೇಗೆ?

ತಾಜಾ ಅಲೋವೆರಾ ಎಲೆ ತೆಗೆದುಕೊಂಡು ಅದರ ಲೋಳೆ ತೆಗೆಯಿರಿ. ಈ ಲೋಳೆಯನ್ನು ನಿಮ್ಮ ಮುಖದ ಮೇಲಿರುವ ಕಲೆಗಳ ಮೇಲೆ ಹಚ್ಚಿಕೊಂಡು ವೃತ್ತಾಕಾರದಲ್ಲಿ ಬೆರಳಿನಿಂದ ಮಸಾಜ್ ಮಾಡಿಕೊಳ್ಳಿ. 15 ನಿಮಿಷ ಕಾಲ ಹಾಗೆ ಬಿಡಿ. ಇದರ ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದನ್ನು ನೀವು ಪ್ರತಿನಿತ್ಯ ಬಳಸಬಹುದು.ಅಲೋವೆರಾ ಲೋಳೆಯ ಇನ್ನಷ್ಟು ಪ್ರಯೋಜನಗಳು

*ಎರಡು ದೊಡ್ಡಚಮಚದಷ್ಟು ಸಮಪ್ರಮಾಣದಲ್ಲಿ ಲೋಳೆಸರ ಮತ್ತು ಮೊಸರನ್ನು ಬೆರೆಸಿ ಈ ಲೇಪನವನ್ನು ಮುಖ, ಕುತ್ತಿಗೆ ಕೈಗಳಿಗೆ ಹಚ್ಚಿ. ಇದರಿಂದ ಒಣಗಿದ ಭಾಗ ಕೆಂಪಗಾಗಿದ್ದರೆ ತಕ್ಷಣ ಉರಿ ಕಡಿಮೆಯಾಗುತ್ತದೆ ಹಾಗೂ ಪದರವೇಳುವುದು ಕಡಿಮೆಯಾಗುತ್ತದೆ. ಈ ವಿಧಾನವನ್ನು ಪ್ರತಿದಿನ ಒಂದು ಹೊತ್ತಿನಲ್ಲಿ ನಿಯಮಿತವಾಗಿ ಹಚ್ಚುತ್ತಾ ಬನ್ನಿ. ಬೆಳಗ್ಗಿನ ಸಮಯ ಉತ್ತಮ. ಈ ಮುಖಲೇಪದ ಇನ್ನೊಂದು ಉಪಯೋಗವೆಂದರೆ ಚರ್ಮವನ್ನು ತಣಿಸುವುದು. ಇದರಿಂದ ಚಿಕ್ಕ ಚಿಕ್ಕ ಬೊಕ್ಕೆ, ಬೆವರುಸಾಲೆ ಮೊದಲಾದವು ಏಳುವ ಸಂಭವ ಕಡಿಮೆಯಾಗುತ್ತದೆ

*ಒಂದು ಬೌಲ್‌ನಲ್ಲಿ ಅರ್ಧ ಚಮಚ ಅಲೋವೆರಾ ಜೆಲ್ ಹಾಕಿ ಇದಕ್ಕೆ ಅರ್ಧ ಕಪ್ ಈರುಳ್ಳಿ ರಸವನ್ನು ಬೆರೆಸಿಕೊಂಡು ಮಿಶ್ರ ಮಾಡಿಕೊಳ್ಳಿ ಕೊನೆಗೆ ಒಂದು ಚಮಚ ಓಟ್ಸ್ ಅನ್ನು ಬೆರೆಸಿಕೊಂಡು ಮಿಶ್ರ ಮಾಡಿ ಈಗ ಮಾಸ್ಕ್ ಹಚ್ಚಿಕೊಳ್ಳಲು ಸಿದ್ಧವಾಗಿದೆ. ಇದನ್ನು ತ್ವಚೆಗೆ ಹಚ್ಚಿಕೊಳ್ಳಿ.

ಲಿಂಬೆರಸ

ಲಿಂಬೆರಸ

ಕಲೆಗಳನ್ನು ನಿವಾರಿಸುವಲ್ಲಿ ನೈಸರ್ಗಿಕ ಬ್ಲೀಚಿಂಗ್ ಗುಣ ಹೊಂದಿರುವ ಲಿಂಬೆರಸವು ತುಂಬಾ ಪರಿಣಾಮಕಾರಿ. ಕಿತ್ತೊಗೆಯುವ ಗುಣ ಹೊಂದಿರುವ ಲಿಂಬೆರಸವು ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಿ ಚರ್ಮಕ್ಕೆ ಕಾಂತಿ ನೀಡುವುದು.

ತಯಾರಿ ಹೇಗೆ?

ಲಿಂಬೆಯನ್ನು ತುಂಡು ಮಾಡಿಕೊಂಡು ಅದರ ಕೆಲವು ಹನಿ ರಸವನ್ನು ಪಿಂಗಾಣಿಗೆ ಹಾಕಿ. ಇದಕ್ಕೆ ಕೆಲವು ಹನಿ ಜೇನುತುಪ್ಪ ಬೆರೆಸಿಕೊಳ್ಳಿ ಮತ್ತು ಸರಿಯಾಗಿ ಮಿಶ್ರಣ ಮಾಡಿ. ಇದನ್ನು ಕಲೆಗಳು ಇರುವ ಜಾಗಕ್ಕೆ ಹಚ್ಚಿಕೊಂಡು, ಕೆಲವು ನಿಮಿಷ ಬಿಟ್ಟು ನೀರಿನಿಂದ ತೊಳೆಯಿರಿ.

ಲಿಂಬೆಯಲ್ಲಿ ಆಮ್ಲೀಯ ಗುಣಗಳು ಇರುವ ಕಾರಣ ಇದು ಚರ್ಮದಲ್ಲಿ ಕಿರಿಕಿರಿ ಉಂಟು ಮಾಡಬಹುದು. ಇದರಿಂದ ಮುಖಕ್ಕೆ ಹಚ್ಚಿಕೊಳ್ಳುವ ಮೊದಲು ದೇಹದ ಬೇರೆ ಭಾಗಕ್ಕೆ ಹಚ್ಚಿಕೊಂಡು ಅಲರ್ಜಿ ಆಗುತ್ತದೆಯಾ ಎಂದು ಪರೀಕ್ಷಿಸಿ. ಮುಖಕ್ಕೆ ಹಚ್ಚಿಕೊಳ್ಳುವ 24 ಗಂಟೆಗೆ ಮೊದಲು ಈ ಪರೀಕ್ಷೆ ಮಾಡಿಸಿಕೊಳ್ಳಿ.

*ಎರಡು ಚಿಕ್ಕಚಮಚ ಗಂಧದ ಪುಡಿ ಮತ್ತು ಒಂದು ಚಿಕ್ಕ ಚಮಚ ಲಿಂಬೆರಸ ಬೆರೆಸಿ. ಇದಕ್ಕೆ ಎರಡು ಚಮಚ ಲಿಂಬೆಸಿಪ್ಪೆಯ ಪುಡಿ ಸೇರಿಸಿ ಒಂದು ಚಮಚ ಹಸಿ ಹಾಲು ಬೆರೆಸಿ. ಇವೆಲ್ಲವನ್ನೂ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿಕೊಂಡು ಕೊಂಚ ಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

*ಒಂದು ಸೌತೆಕಾಯಿಯನ್ನು ಅರೆದು ಹಿಂಡಿ ರಸವನ್ನು ಸಂಗ್ರಹಿಸಿ. ಒಂದು ಚಿಕ್ಕಚಮದಷ್ಟು ಈ ರಸ ಮತ್ತು ಲಿಂಬೆಸಿಪ್ಪೆಯ ಪುಡಿಯನ್ನು ಬೆರೆಸಿ ಮಿಶ್ರಣ ತಯಾರಿಸಿ. ಈ ಲೇಪವನ್ನು ಮುಖಕ್ಕೆ ಹಚ್ಚಿ ಕೊಂಚ ಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ದಾಲ್ಚಿನ್ನಿ ಮತ್ತು ಜೇನುತುಪ್ಪ

ದಾಲ್ಚಿನ್ನಿ ಮತ್ತು ಜೇನುತುಪ್ಪ

ಜೇನುತುಪ್ಪ ಮತ್ತು ದಾಲ್ಚಿನ್ನಿಯಲ್ಲಿ ಚರ್ಮವನ್ನು ಬಿಳಿಯಾಗಿಸುವ ಗುಣವಿದೆ ಮತ್ತು ಇದು ಮುಖದಲ್ಲಿರುವ ಕಲೆಗಳ ನಿವಾರಣೆ ಮಾಡಿ ಕಾಂತಿ ನೀಡುವುದು.

ಬಳಸುವ ವಿಧಾನ

ಕೆಲವು ಹನಿ ಜೇನುತುಪ್ಪ ಮತ್ತು ದಾಲ್ಚಿನಿ ಹುಡಿಯನ್ನು ಅಂಗೈಗೆ ಹಾಕಿಕೊಳ್ಳಿ ಮತ್ತು ಅದನ್ನು ಭಾದಿತ ಜಾಗಕ್ಕೆ ಹಚ್ಚಿಕೊಳ್ಳಿ. ಮಲಗುವ ಮೊದಲು ಪ್ರತಿನಿತ್ಯ ಹೀಗೆ ಮಾಡಿ ಮತ್ತು ರಾತ್ರಿಯಿಡಿ ಹಾಗೆ ಇರಲಿ. ಮರುದಿನ ಬೆಳಗ್ಗೆ ನೀರಿನಿಂದ ತೊಳೆಯಿರಿ. ವಾರದಲ್ಲಿ ಒಂದು ದಿನ ನೀವು ಇದನ್ನು ಬಳಸಿದರೆ ವೇಗ ಮತ್ತು ಉತ್ತಮ ಫಲಿತಾಂಶ ಸಿಗುವುದು.

ಹಸಿ ಪಪ್ಪಾಯಿ

ಹಸಿ ಪಪ್ಪಾಯಿ

ಪಪ್ಪಾಯಿಯಲ್ಲಿರುವ ಕಿಣ್ವಗಳು ಚರ್ಮದ ಕಲೆಗಳ ನಿವಾರಣೆ ಮಾಡುವುದು ಮತ್ತು ಅದಕ್ಕೆ ಪುನರುಜ್ಜೀವನ ನೀಡುವುದು.

ತಯಾರಿ ಹೇಗೆ

ಹಸಿ ಪಪ್ಪಾಯಿಯನ್ನು ಸಣ್ಣ ತುಂಡುಗಳನ್ನಾಗಿ ಮಾಡಿ. ಇದನ್ನು ತುರಿದುಕೊಂಡು ಮುಖಕ್ಕೆ ಹಚ್ಚಿಕೊಳ್ಳಿ. ವೃತ್ತಾಕಾರದಲ್ಲಿ

ನಿಧಾನವಾಗಿ ಮಸಾಜ್ ಮಾಡಿ ಹಾಗೆ ಬಿಡಿ. ಇದಕ್ಕೆ ನೀವು ಕೆಲವು ಹನಿ ಜೇನುತುಪ್ಪ ಬೆರೆಸಿಕೊಳ್ಳಬಹುದು. 15 ನಿಮಿಷ ಮುಖದಲ್ಲಿ ಇದನ್ನು ಹಾಗೆ ಬಿಟ್ಟು ಬಳಿಕ ಸಾಮಾನ್ಯ ನೀರಿನಿಂದ ತೊಳೆಯಿರಿ. ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ ಒಂದು ಅಥವಾ ಎರಡು ಸಲ ಇದನ್ನು ನೀವು ಬಳಸಿ.

ಪಪ್ಪಾಯಿ ಹಣ್ಣಿನ ಇನ್ನಷ್ಟು ಪ್ರಯೋಜನಗಳು

*ಪಪ್ಪಾಯಿಯ ತಿರುಳಿಗೆ ಮೊಸರು, ನಿಂಬೆರಸ, ಜೇನುತುಪ್ಪ ಮತ್ತು ಮೊಟ್ಟೆಯ ಬಿಳಿ ಲೋಳೆಯನ್ನು ಹಾಕಿಕೊಳ್ಳಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಬಳಿಕ ಮುಖಕ್ಕೆ ಹಚ್ಚಿಕೊಳ್ಳಿ. ಮುಖದ ಮೇಲೆ ಹಚ್ಚಿಕೊಂಡು 15 ನಿಮಿಷ ಕಾಲ ಹಾಗೆ ಬಿಟ್ಟುಬಿಡಿ. ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದು ಚರ್ಮದ ಕಾಂತಿಯನ್ನು ಹೆಚ್ಚಿಸಿ ಕಲೆಗಳನ್ನು ನಿವಾರಿಸುವುದು.

*ಪಪ್ಪಾಯಿ ತಿರುಳಿಗೆ ಉಪ್ಪು, ಜೇನುತುಪ್ಪ ಮತ್ತು ಆಲಿವ್ಎ ಣ್ಣೆಯನ್ನು ಹಾಕಿಕೊಳ್ಳಿ. ಈಗ ಸ್ಕ್ರಬ್ ಮಾಡಿಕೊಳ್ಳಿ. ಚರ್ಮದ

ರಂಧ್ರಗಳು ತೆರೆದುಕೊಂಡಿದ್ದಲ್ಲಿ ಹಸಿ ಪಪ್ಪಾಯಿಯಿಂದ ಸ್ಕ್ರಬ್ ಮಾಡಿಕೊಳ್ಳಿ

English summary

Home Remedies To Treat Different Skin Spots

Have you ever wondered how your favourite stars and celebrities have that clear and spotless skin? Do you want to have one? Some factors that can affect our skin are stress, environmental factors like pollution, harmful UV rays of the sun, hormonal imbalance, etc. Cinnamon and honey, aloe vera gel and raw papaya are some ingredients that can help.
X
Desktop Bottom Promotion