For Quick Alerts
ALLOW NOTIFICATIONS  
For Daily Alerts

ಎಣ್ಣೆಯುಕ್ತ ತ್ವಚೆಗೆ ಮನೆ ಮದ್ದಿನ ಆರೈಕೆ

By Divya Pandith
|

ಎಣ್ಣೆ ತ್ವಚೆಯನ್ನು ಹೊಂದಿರುವವರು ಬಹು ಬೇಗ ಚರ್ಮದ ಸಮಸ್ಯೆಗಳಿಗೆ ಒಳಗಾಗುತ್ತಾರೆ. ಅಲ್ಲದೆ ಮೇಕಪ್‍ನ ಮೊರೆ ಹೋದರು ಬಹುಕಾಲ ಮೇಕಪ್ ಉಳಿದುಕೊಳ್ಳುವುದಿಲ್ಲ. ಇಂತಹ ಸಮಸ್ಯೆಗಳನ್ನು ಎದುರಿಸುತ್ತಿರುವವರು ಕೆಲವು ನೈಸರ್ಗಿಕ ಉತ್ಪನ್ನಗಳಿಂದ ಆರೈಕೆ ಪಡೆದುಕೊಂಡರೆ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಬಹುದು. ಆಯುರ್ವೇದದ ಆರೈಕೆಯ ವಿಧಾನದಲ್ಲಿ ನಿಂಬೆ ರಸವು ಅತ್ಯುತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ.

ನಿಂಬೆ ರಸದಲ್ಲಿ ಸಮೃದ್ಧವಾದ ಸಿಟ್ರಿಕ್ ಆಸಿಡ್ ಇರುತ್ತದೆ. ಇದು ಚರ್ಮದ ಮೇಲಿರುವ ಹೆಚ್ಚುವರಿ ತೈಲಗಳನ್ನು ಹೀರಿಕೊಳ್ಳುತ್ತದೆ. ಜೊತೆಗೆ ಚರ್ಮಕ್ಕೆ ಹಾನಿಯುಂಟುಮಾಡುವಂತಹ ಬ್ಯಾಕ್ಟೀರಿಯಾಗಳ ನಾಶಕ್ಕೆ ಸಹಕಾರ ನೀಡುತ್ತದೆ. ಅಲ್ಲದೆ ವಿವಿಧ ರೂಪಗಳಲ್ಲಿ ಚರ್ಮದ ಆರೋಗ್ಯವನ್ನು ಸುಧಾರಿಸುವುದು. ಸುಕ್ಕುಗಟ್ಟುವುದನ್ನು ತಡೆಯುವುದು, ನಿರ್ಜೀವ ಕೋಶಗಳನ್ನು ನಿರ್ಮೂಲನೆ ಗೊಳಿಸುವುದು ಮತ್ತು ಚರ್ಮದ ಮೇಲಿರುವ ಕಲೆಗಳನ್ನು ಸಹ ನಿವಾರಿಸುವ ಶಕ್ತಿಯನ್ನು ನಿಂಬೆ ರಸ ಪಡೆದುಕೊಂಡಿದೆ.

ಎಣ್ಣೆಯುಕ್ತ ತ್ವಚೆ ಹೊಂದಿದವರು ನಿಂಬು ರಸವನ್ನು ಆರೈಕೆಯ ಪ್ರಮುಖ ಘಟಕವನ್ನಾಗಿ ಸ್ವೀಕರಿಸಬಹುದು. ಇದರೊಂದಿಗೆ ಇನ್ನಿತರ ನೈಸರ್ಗಿಕ ಉತ್ಪನ್ನಗಳನ್ನು ಬಳಸಿಕೊಂಡರೆ ಪರಿಣಾಮಕಾರಿ ಆರೈಕೆಯನ್ನು ಪಡೆದುಕೊಳ್ಳಬಹುದು. ನಿಮ್ಮ ಅನುಕೂಲಕ್ಕಾಗಿಯೇ ಬೋಲ್ಡ್ ಸ್ಕೈ ಕೆಲವು ಆರೈಕೆ ವಿಧಾನಗಳನ್ನು ನಿಮಗೆ ಪರಿಚಯಿಸಿಕೊಡುತ್ತಿದೆ...

ನಿಂಬೆ ಸರ +ಮೊಟ್ಟೆಯ ಬಿಳಿಭಾಗ

ನಿಂಬೆ ಸರ +ಮೊಟ್ಟೆಯ ಬಿಳಿಭಾಗ

- 1 ಟೇಬಲ್ ಚಮಚ ನಿಂಬೆ ರಸಕ್ಕೆ ಮೊಟ್ಟೆಯ ಬಿಳಿಭಾಗವನ್ನು ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ, 15-20 ನಿಮಿಷಗಳಕಾಲ ಆರಲು ಬಿಡಿ.

- ನಂತರ ಬೆಚ್ಚಗಿನ ನೀರಿನಲ್ಲಿ ಶೇಷವನ್ನು ಸ್ವಚ್ಛಗೊಳಿಸಿ.

- ವಾರಕ್ಕೆ ಎರಡು ಬಾರಿ ಈ ಕ್ರಮವನ್ನು ಅನುಸರಿಸಿದರೆ ಎಣ್ಣೆಯುಕ್ತ ತ್ವಚೆಯನ್ನು ನಿಯಂತ್ರಿಸಬಹುದು.

ನಿಂಬೆ ರಸ + ಟೊಮ್ಯಾಟೋ ಪೇಸ್ಟ್

ನಿಂಬೆ ರಸ + ಟೊಮ್ಯಾಟೋ ಪೇಸ್ಟ್

- 2 ಟೀ ಚಮಚ ಟೊಮ್ಯಾಟೋ ಪೇಸ್ಟ್‍ಗೆ 1 ಟೀ ಚಮಚ ನಿಂಬೆ ರಸವನ್ನು ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ, 10 ನಿಮಿಷಗಳಕಾಲ ಆರಲು ಬಿಡಿ.

- ನಂತರ ಬೆಚ್ಚಗಿನ ನೀರಿನಲ್ಲಿ ಶೇಷವನ್ನು ಸ್ವಚ್ಛಗೊಳಿಸಿ.

- ನಿಯಮಿತವಾಗಿ ಈ ಕ್ರಮವನ್ನು ಅನುಸರಿಸಿದರೆ ಎಣ್ಣೆಯುಕ್ತ ತ್ವಚೆಯನ್ನು ನಿಯಂತ್ರಿಸಬಹುದು.

ನಿಂಬೆ ರಸ + ಅಲೋವೆರಾ

ನಿಂಬೆ ರಸ + ಅಲೋವೆರಾ

- ಒಂದು ಟೀ ಚಮಚ ನಿಂಬೆ ರಸ ಮತ್ತು ಒಂದು ಟೀ ಚಮಚ ಅಲೋವೆರಾ ಜೆಲ್ ಅನ್ನು ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ, 10 ನಿಮಿಷಗಳ ಕಾಲ ಆರಲು ಬಿಡಿ.

- ನಂತರ ಬೆಚ್ಚಗಿನ ನೀರಿನಲ್ಲಿ ಶೇಷವನ್ನು ಸ್ವಚ್ಛಗೊಳಿಸಿ.

- ವಾರಕ್ಕೆ ಎರಡು ಬಾರಿ ಈ ಕ್ರಮವನ್ನು ಅನುಸರಿಸಿದರೆ ಚರ್ಮಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ನಿವಾರಿಸಬಹುದು.

ನಿಂಬೆ ರಸ + ಗ್ರೀನ್ ಟೀ

ನಿಂಬೆ ರಸ + ಗ್ರೀನ್ ಟೀ

- 2 ಟೀ ಚಮಚ ನಿಂಬೆ ರಸಕ್ಕೆ 1 ಟೀ ಚಮಚ ಗ್ರೀನ್ ಟೀ ಸೇರಿಸಿ, ಮಿಶ್ರಗೊಳಿಸಿ.

- ಇಂದು ಹತ್ತಿಯ ಚಂಡಿನಲ್ಲಿ ಮಿಶ್ರಣವನ್ನು ಅದ್ದಿ ಮುಖಕ್ಕೆ ಅನ್ವಯಿಸಿ.

- ಸ್ವಲ್ಪ ಸಮಯದ ನಂತರ ಬೆಚ್ಚಗಿನ ನೀರಿನಲ್ಲಿ ಶೇಷವನ್ನು ಸ್ವಚ್ಛಗೊಳಿಸಿ.

- ವಾರಕ್ಕೆ ಒಮ್ಮೆ ಈ ಕ್ರಮವನ್ನು ಅನುಸರಿಸಿದರೆ ಎಣ್ಣೆ ತ್ವಚೆಯ ಸಮಸ್ಯೆಯನ್ನು ನಿವಾರಿಸಬಹುದು.

ನಿಂಬೆ ರಸ + ಸೌತೆಕಾಯಿ

ನಿಂಬೆ ರಸ + ಸೌತೆಕಾಯಿ

- 1 ಟೀ ಚಮಚ ನಿಂಬೆ ರಸಕ್ಕೆ 2 ಟೀ ಚಮಚ ಸೌತೆಕಾಯಿ ಪೇಸ್ಟ್‍ಅನ್ನು ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ, 15-20 ನಿಮಿಷಗಳಕಾಲ ಆರಲು ಬಿಡಿ.

- ನಂತರ ಬೆಚ್ಚಗಿನ ನೀರಿನಲ್ಲಿ ಶೇಷವನ್ನು ಸ್ವಚ್ಛಗೊಳಿಸಿ.

- ವಾರಕ್ಕೆ ಎರಡು ಅಥವಾ ಮೂರು ಬಾರಿ ಈ ಕ್ರಮವನ್ನು ಅನುಸರಿಸಿದರೆ ನಿರೀಕ್ಷಿತ ಪರಿಣಾಮವನ್ನು ಪಡೆದುಕೊಳ್ಳಬಹುದು.

ನಿಂಬೆ ರಸ + ಹಾಲಿನ ಪುಡಿ

ನಿಂಬೆ ರಸ + ಹಾಲಿನ ಪುಡಿ

- ಒಂದು ಬೌಲ್‍ನಲ್ಲಿ 1 ಟೀ ಚಮಚ ಹಾಲಿನ ಪುಡಿಗೆ 2 ಟೀ ಚಮಚ ನಿಂಬೆ ರಸವನ್ನು ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ನಿಧಾನವಾಗಿ ಮುಖಕ್ಕೆ ಅನ್ವಯಿಸಿ, 15-20 ನಿಮಿಷಗಳಕಾಲ ಆರಲು ಬಿಡಿ.

- ನಂತರ ಬೆಚ್ಚಗಿನ ನೀರಿನಲ್ಲಿ ಶೇಷವನ್ನು ಸ್ವಚ್ಛಗೊಳಿಸಿ.

- ವಾರಕ್ಕೆ ಒಮ್ಮೆ ಈ ಕ್ರಮವನ್ನು ಅನುಸರಿಸಿದರೆ ನಿರೀಕ್ಷಿತ ಪರಿಣಾಮವನ್ನು ಪಡೆದುಕೊಳ್ಳಬಹುದು.

ನಿಂಬೆ ರಸ + ಜೇನುತುಪ್ಪ

ನಿಂಬೆ ರಸ + ಜೇನುತುಪ್ಪ

- 1 ಟೀ ಚಮಚ ನಿಂಬೆ ರಸದೊಂದಿಗೆ 2 ಟೀ ಚಮಚ ಜೇನುತುಪ್ಪ ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ, 5 ನಿಮಿಷಗಳಕಾಲ ಆರಲು ಬಿಡಿ.

- ನಂತರ ಬೆಚ್ಚಗಿನ ನೀರಿನಲ್ಲಿ ಶೇಷವನ್ನು ಸ್ವಚ್ಛಗೊಳಿಸಿ.

- ವಾರಕ್ಕೆ ಒಮ್ಮೆ ಈ ಕ್ರಮವನ್ನು ಅನುಸರಿಸಿದರೆ ನಿರೀಕ್ಷಿತ ಪರಿಣಾಮವನ್ನು ಪಡೆದುಕೊಳ್ಳಬಹುದು.

ನಿಂಬೆ ರಸ + ಗುಲಾಬಿ ನೀರು

ನಿಂಬೆ ರಸ + ಗುಲಾಬಿ ನೀರು

- 2 ಟೇಬಲ್ ಚಮಚ ಗುಲಾಬಿ ನೀರಿನೊಂದಿಗೆ 1 ಟೇಬಲ್ ಚಮಚ ನಿಂಬೆ ರಸವನ್ನು ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ, ಸ್ವಲ್ಪ ಸಮಯ ಆರಲು ಬಿಡಿ.

- ನಂತರ ಬೆಚ್ಚಗಿನ ನೀರಿನಲ್ಲಿ ಶೇಷವನ್ನು ಸ್ವಚ್ಛಗೊಳಿಸಿ.

- ವಾರಕ್ಕೆ ಎರಡು ಬಾರಿ ಈ ಕ್ರಮವನ್ನು ಅನುಸರಿಸಿದರೆ ಎಣ್ಣೆ ಮುಕ್ತ ತ್ವಚೆಯನ್ನು ಪಡೆಯಬಹುದು.

English summary

Home Remedies for Oily Skin

There are various ways in which this ingredient can be used for dealing with oily skin type. Today at Boldsky, we've zeroed in on some of the most effective ways to use lemon juice for banishing oiliness from your skin. Try any of the following ways to be able to flaunt beautiful skin that does not look too oily or greasy. Read on to know about these ways here:
Story first published: Wednesday, January 3, 2018, 20:12 [IST]
X
Desktop Bottom Promotion