For Quick Alerts
ALLOW NOTIFICATIONS  
For Daily Alerts

ಮುಖದ ಮೇಲಿನ ಕಲೆಗಳ ನಿವಾರಣೆಗೆ ಸರಳ ಮನೆಮದ್ದುಗಳು

|

ಸೌಂದರ್ಯವಿದ್ದರೆ ಮಾತ್ರ ಎಲ್ಲರೂ ನಿಮ್ಮನ್ನು ಗಮನಿಸುವರು. ಸೌಂದರ್ಯವೆನ್ನುವುದು ದೇವರ ಕೊಡುಗೆಯಾದರೂ ಇಂದಿನ ದಿನಗಳಲ್ಲಿ ಕೃತಕವಾಗಿಯೂ ಸೌಂದರ್ಯ ಪಡೆಯಬಹುದು. ಇದಕ್ಕಾಗಿ ಹಲವಾರು ರೀತಿಯ ಕಾಸ್ಮೆಟಿಕ್ ಸರ್ಜರಿಗಳು ಲಭ್ಯವಿದೆ. ಇಷ್ಟು ಮಾತ್ರವಲ್ಲದೆ ಕೆಲವೊಂದು ಕ್ರೀಮ್ ಗಳಿಂದ ಕೂಡ ಸೌಂದರ್ಯ ಕೂಡ ಹೆಚ್ಚು ಮಾಡಿಕೊಳ್ಳಬಹುದು. ಇದರಿಂದ ಅಡ್ಡಪರಿಣಾಮ ಹೆಚ್ಚು. ವಾತಾವರಣದಲ್ಲಿ ಕಲ್ಮಷ ಹಾಗೂ ಇತರ ಸಮಸ್ಯೆಗಳಿಂದಾಗಿ ಮುಖದ ಮೇಲೆ ಮೊಡವೆ ಹಾಗೂ ಇನ್ನಿತರ ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಹಜ.

Home Remedies For Facial Scars

ಇದರಿಂದಾಗಿ ಸೌಂದರ್ಯವು ಮಾಸುವುದು. ಈ ಲೇಖನದಲ್ಲಿ ನೈಸರ್ಗಿಕವಾಗಿ ಮುಖದ ಮೇಲಿನ ಕಲೆಗಳನ್ನು ತೆಗೆದು ಮುಖದ ಸೌಂದರ್ಯವನ್ನು ವೃದ್ಧಿಸುವುದು ಹೇಗೆ ಎಂದು ತಿಳಿಸಿಕೊಡಲಿದ್ದೇವೆ. ಇದರಿಂದ ಮುಖದಲ್ಲಿರುವ ಯಾವುದೇ ಕಲೆಗಳು ದೂರವಾಗುವುದು. ಈ ನೈಸರ್ಗಿಕ ವಿಧಾನಗಳು ಯಾವುದು ಎಂದು ಈ ಮೂಲಕ ತಿಳಿಯಿರಿ.

ತೆಂಗಿನೆಣ್ಣೆ

ತೆಂಗಿನೆಣ್ಣೆ

ಇದರಲ್ಲಿ ಇರುವಂತಹ ಉರಿಯೂತ ಶಮನಕಾರಿ ಗುಣವು ಯಾವುದೇ ರೀತಿಯ ಕಲೆಗಳು ಮತ್ತು ಚರ್ಮದ ಉರಿಯೂತ ನಿವಾರಣೆ ಮಾಡುವುದು.

ಬೇಕಾಗುವ ಸಾಮಗ್ರಿಗಳು

  • 1 ಚಮಚ ತೆಂಗಿನೆಣ್ಣೆ
  • ಹೇಗೆ ತಯಾರಿಸುವುದು?

    ಕಡಿಮೆ ಬೆಂಕಿಯಲ್ಲಿ ತೆಂಗಿನೆಣ್ಣೆ ಬಿಸಿ ಮಾಡಿ. ಮುಖ ತೊಳೆದುಕೊಂಡು, ತೆಂಗಿನೆಣ್ಣೆ ಮುಖಕ್ಕೆ ಹಚ್ಚಿಕೊಳ್ಳಿ. ಬೆರಳುಗಳಿಂದ ಕೆಲವು ನಿಮಿಷಗಳ ಕಾಲ ವೃತ್ತಾಕಾರದಲ್ಲಿ ಮಸಾಜ್ ಮಾಡಿಕೊಳ್ಳಿ. ಇದರ ಬಳಿಕ ಮುಖ ತೊಳೆದುಕೊಳ್ಳಬೇಡಿ. ಎಣ್ಣೆ ಮುಖದಲ್ಲಿ ಹಾಗೆ ಇರಲಿ. ಪ್ರತಿನಿತ್ಯ ಇದನ್ನು ನೀವು ಮಾಡಿಕೊಳ್ಳಿ.

    Most Read: ಶೌಚಾಲಯದಲ್ಲಿ ನೀವು ಸಹಾ ಈ ತಪ್ಪುಗಳನ್ನು ಮಾಡುತ್ತಿದ್ದೀರಾ? ಹಾಗಾದರೆ ನಾವು ಎಚ್ಚರಿಸಿರಲಿಲ್ಲ ಎಂದು ಬಳಿಕ ಹೇಳದಿರಿ!

    ಅಲೋವೆರಾ ಲೋಳೆ

    ಅಲೋವೆರಾ ಲೋಳೆ

    ಅಲೋವೆರಾದಲ್ಲಿ ಇರುವಂತಹ ಚಿಕಿತ್ಸಕ ಗುಣವು ಚರ್ಮಕ್ಕೆ ಶಮನ ನೀಡುವುದು ಮತ್ತು ಚರ್ಮವು ನಯವಾಗುವುದು.

    ಬೇಕಾಗುವ ಸಾಮಗ್ರಿಗಳು

    • ಅಲೋವೆರಾ ಲೋಳೆ
    • ವಿಧಾನ

      ತಾಜಾ ಅಲೋವೆರಾ ಎಲೆ ತೆಗೆದುಕೊಳ್ಳಿ ಮತ್ತು ಇದರ ಎರಡು ಬದಿಯನ್ನು ಕತ್ತರಿಸಿಕೊಳ್ಳಿ. ಇದರ ಸಿಪ್ಪೆ ತೆಗೆದು ಅದರಿಂದ ಲೋಳೆ ಹೊರಗೆ ತೆಗೆಯಿರಿ. ಮುಖ ತೊಳೆದು ಟವೆಲ್ ನಿಂದ ಒರೆಸಿಕೊಳ್ಳಿ. ಅಲೋವೆರಾ ಲೋಳೆಯನ್ನು ಮುಖಕ್ಕೆ ಹಚ್ಚಿಕೊಳ್ಳಿ ಮತ್ತು ಒಣಗಲು ಬಿಡಿ. ಸಾಮಾನ್ಯ ನೀರಿನಿಂದ ತೊಳೆದುಕೊಳ್ಳಿ. ದಿನದಲ್ಲಿ 2-3 ಸಲ ಇದನ್ನು ಹಚ್ಚಿಕೊಳ್ಳಿ.

      ಆ್ಯಪಲ್ ಸೀಡರ್ ವಿನೇಗರ್

      ಆ್ಯಪಲ್ ಸೀಡರ್ ವಿನೇಗರ್

      ಸಂಕೋಚನ ಗುಣವನ್ನು ಹೊಂದಿರುವ ಆ್ಯಪಲ್ ಸೀಡರ್ ವಿನೇಗರ್ ಚರ್ಮವನ್ನು ಒಣಗಿಸದೆ ಚರ್ಮದಲ್ಲಿನ ಕಲೆಗಳನ್ನು ತೆಗೆಯುವುದು. ಸತ್ತ ಚರ್ಮದ ಕೋಶಗಳನ್ನು ತೆಗೆಯುವುದು ಮತ್ತು ಚರ್ಮದ ಕಿರಿಕಿರಿ ಮತ್ತು ಕೆಂಪಾಗುವುದನ್ನು ತಡೆಯುವುದು.

      Most Read: ಮನೆಯಲ್ಲೇ ಕಲ್ಲಂಗಡಿ ಫೇಶಿಯಲ್ ಮಾಡಿಕೊಂಡು ಬಳಸಿ

      ಬೇಕಾಗುವ ಸಾಮಗ್ರಿಗಳು

      • 1 ಚಮಚ ಆ್ಯಪಲ್ ಸೀಡರ್ ವಿನೇಗರ್
      • 1 ಚಮಚ ನೀರು
      • 1 ಹತ್ತಿ ಉಂಡೆ
      • ವಿಧಾನ

        ಆ್ಯಪಲ್ ಸೀಡರ್ ವಿನೇಗರ್ ನ್ನು ಅಷ್ಟೇ ಪ್ರಮಾಣದ ನೀರಿನೊಂದಿಗೆ ಬೆರೆಸಿಕೊಳ್ಳಿ. ಒಂದು ಹತ್ತಿ ಉಂಡೆ ತೆಗೆದುಕೊಂಡು ಅದನ್ನು ಆ್ಯಪಲ್ ಸೀಡರ್ ವಿನೇಗರ್ ನಲ್ಲಿ ಅದ್ದಿಕೊಳ್ಳಿ. ಇದನ್ನು ಸ್ವಚ್ಛಗೊಳಿಸಿದ ಮುಖಕ್ಕೆ ಹಚ್ಚಿಕೊಳ್ಳಿ. ಹತ್ತು ನಿಮಿಷ ಕಾಲ ಹಾಗೆ ಬಿಡಿ ಮತ್ತು ಬಳಿಕ ಸಾಮಾನ್ಯ ನೀರಿನಿಂದ ತೊಳೆಯಿರಿ.

        ಜೇನುತುಪ್ಪ

        ಜೇನುತುಪ್ಪ

        ಪ್ರಕೃತಿದತ್ತವಾಗಿ ಸಿಗುವಂತಹ ಜೇನುತುಪ್ಪವು ಚರ್ಮಕ್ಕೆ ತೇವಾಂಶ ನೀಡುವುದು ಮತ್ತು ಚರ್ಮವನ್ನು ಮೊಶ್ಚಿರೈಸ್ ಆಗಿಡುವುದು. ಇದರಲ್ಲಿ ಇರುವಂತಹ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಮುಖದ ಕಲೆಗಳನ್ನು ನಿವಾರಿಸುವುದು.

        ಬೇಕಾಗುವ ಸಾಮಗ್ರಿಗಳು

        • 1 ಚಮಚ ಜೇನುತುಪ್ಪ
        • ವಿಧಾನ

          ಮೊದಲು ತಣ್ಣೀರು ಬಳಸಿಕೊಂಡು ಮುಖ ತೊಳೆಯಿರಿ. ಇದರ ಬಳಿಕ ಬಿಸಿ ನೀರಿನಲ್ಲಿ ಟವೆಲ್ ಅದ್ದಿಕೊಂಡು ಅದನ್ನು ಮುಖದ ಮೇಲೆ ಹಾಕಿ. ಇದರಿಂದ ಚರ್ಮದಲ್ಲಿನ ರಂಧ್ರಗಳು ತೆರೆಯುವುದು. ಈಗ ಟವೆಲ್ ತೆಗೆಯಿರಿ ಮತ್ತು ಜೇನುತುಪ್ಪವನ್ನು ಮುಖಕ್ಕೆ ಹಚ್ಚಿಕೊಳ್ಳಿ. ಕೆಲವು ನಿಮಿಷ ಕಾಲ ಬೆರಳುಗಳಿಂದ ಮಸಾಜ್ ಮಾಡಿ ಮತ್ತು ಹತ್ತು ನಿಮಿಷ ಹಾಗೆ ಬಿಡಿ. 10 ನಿಮಿಷ ಬಿಟ್ಟು ಸಾಮಾನ್ಯ ನೀರಿನಿಂದ ತೊಳೆಯಿರಿ.

          ಲಿಂಬೆರಸ

          ಲಿಂಬೆರಸ

          ಲಿಂಬೆರಸದಲ್ಲಿ ವಿಟಮಿನ್ ಸಿ ಇದ್ದು, ಚರ್ಮದಲ್ಲಿ ಕಾಲಜನ್ ಉತ್ಪತ್ತಿಗೆ ನೆರವಾಗುವುದು ಮತ್ತು ಮೊಡವೆಗಳನ್ನು ಇದು ಮೃಧುವಾಗಿಸುವುದು.

          ಬೇಕಾಗುವ ಸಾಮಗ್ರಿಗಳು

          • 1 ಚಮಚ ಲಿಂಬೆರಸ
          • ಹತ್ತಿ ಉಂಡೆ
          • Most Read: ಮನೆಯಲ್ಲೇ ಮೊಟ್ಟೆ ಹಾಗೂ ಜೇನು ಬಳಸಿಕೊಂಡು ಮಾಡಿ 'ಹೇರ್ ಸ್ಪಾ'

            ವಿಧಾನ

            ಸ್ವಚ್ಛವಾಗಿರುವ ಪಿಂಗಾಣಿಯಲ್ಲಿ ಲಿಂಬೆರಸ ಹಾಕಿಕೊಳ್ಳಿ. ಇದರ ಬಳಿಕ ಹತ್ತಿ ಉಂಡೆ ಬಳಸಿಕೊಂಡು ಇದನ್ನು ಸಂಪೂರ್ಣ ಮುಖಕ್ಕೆ ಹಚ್ಚಿಕೊಳ್ಳಿ. 10-15 ನಿಮಿಷ ಕಾಲ ಹಾಗೆ ಬಿಡಿ ಮತ್ತು ಮಲಗುವ ಮೊದಲು ಹೀಗೆ ಮಾಡಿ. ರಾತ್ರಿಯಿಡಿ ಹಾಗೆ ಇರಲಿ. ಬೆಳಗ್ಗೆ ಎದ್ದು ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.

English summary

Home Remedies For Facial Scars

Everybody wishes to have clear and flawless skin. And by flawless skin, we mean skin without any scars or marks. Facial scars are very common. These are the results of acne, sunburns, wounds etc. You can easily treat these scars using ingredients like lemon, honey, aloe vera gel, coconut oil, etc.Home Remedies For Facial Scars
X
Desktop Bottom Promotion