For Quick Alerts
ALLOW NOTIFICATIONS  
For Daily Alerts

ತ್ವಚೆಯ ಸಾಮಾನ್ಯ ಸಮಸ್ಯೆಗಳಿಗೆ ಇಲ್ಲಿವೆ ನೈಸರ್ಗಿಕ ಮನೆಮದ್ದುಗಳು

|

ನಾಗರೀಕತೆ ಬೆಳೆಯುತ್ತಿದ್ದಂತೆಯೇ ಇದರ ಕೊಡುಗೆಗಳಾದ ನಗರೀಕರಣ, ಪ್ರದೂಷಣೆ, ಹೊಗೆ ಮೊದಲಾದವು ಆರೋಗ್ಯದ ಸಹಿತ ಸೌಂದರ್ಯವನ್ನೂ ಬಾಧಿಸುತ್ತಿದೆ. ಈ ಪ್ರದೂಷಿತ ಹವೆಯಲ್ಲಿ ತ್ವಚೆಯ ಆರೋಗ್ಯವನ್ನು ಕಾಪಾಡಿಕೊಳ್ಳುವುದೇ ಮುಖ್ಯ ಸವಾಲಾಗಿದೆ. ಜೊತೆಗೇ ಸೂರ್ಯನ ಪ್ರಖರ ಬೆಳಕು ತ್ವಚೆಯ ತೊಂದರೆಯನ್ನು ಇನ್ನಷ್ಟು ಉಲ್ಬಣಿಸುತ್ತಿವೆ.

ತ್ವಚೆಗೆ ಎದುರಾದ ಯಾವುದೇ ತೊಂದರೆಯ ಪರಿಹಾರಕ್ಕಾಗಿ ಚರ್ಮವೈದ್ಯರ ಸಲಹೆ ಪಡೆಯುವುದು ಒಳ್ಳೆಯದೇ ಹೌದು. ಆದರೆ ನಿಸರ್ಗದ ನೆರವು ಪಡೆಯುವುದು ಹೆಚ್ಚು ಪರಿಣಾಮಕಾರಿ. ಬನ್ನಿ, ತ್ವಚೆಗೆ ಎದುರಾಗುವ ಸಾಮಾನ್ಯ ತೊಂದರೆಗಳಿಗೆ ಯಾವ ಬಗೆಯ ನೈಸರ್ಗಿಕ ಆರೈಕೆಗಳನ್ನು ಪಡೆಯಬಹುದು ಎಂಬುದನ್ನು ನೋಡೋಣ:

ತ್ವಚೆಯಲ್ಲಿ ಗಾಢವಾದ ಕಲೆಗಳಿದ್ದರೆ

ತ್ವಚೆಯಲ್ಲಿ ಗಾಢವಾದ ಕಲೆಗಳಿದ್ದರೆ

ಇವು ತೊಲಗಿಸಲು ಕಷ್ಟಕರವಾದ ಕಲೆಗಳು ಎಂಬುದು ನಿಮಗೂ ಗೊತ್ತು. ಆದರೆ ಇದಕ್ಕೊಂದು ಸರಳ ಉಪಾಯವಿದೆ ಎಂದು ಅರಿತರೆ ನಿಮಗೆ ಹರ್ಷವಾಗಬಹುದು. ಇದಕ್ಕೆ ಮೊಸರನ್ನು ಉಪಯೋಗಿಸಿ. ಇದರಲ್ಲಿರುವ ಲ್ಯಾಕ್ಟಿಕ್ ಆಮ್ಲ ಸತ್ತ ಜೀವಕೋಶಗಳನ್ನು ನಿವಾರಿಸಲು ನೆರವಾಗುತ್ತದೆ. ಒಂದು ದೊಡ್ಡ ಚಮಚ ಗಟ್ಟಿಮೊಸರನ್ನು ಮುಖದ ಮೇಲೆ ದಪ್ಪನಾಗಿ ಹಚ್ಚಿಕೊಳ್ಳಿ ಮತ್ತು ಸುಮಾರು ಇಪ್ಪತ್ತು ನಿಮಿಷ ಹಾಗೇ ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಈ ವಿಧಾನವನ್ನು ಸತತವಾಗಿ ಹದಿನೈದು ದಿನ ಮುಂದುವರೆಸಿ.

ತ್ವಚೆ ಕಾಂತಿಯುಕ್ತವಾಗಿರಬೇಕೆಂದರೆ, ಹೀಗೆ ಮಾಡಿ

ತ್ವಚೆ ಕಾಂತಿಯುಕ್ತವಾಗಿರಬೇಕೆಂದರೆ, ಹೀಗೆ ಮಾಡಿ

ಸಾಮಾನ್ಯವಾಗಿ ಅಕ್ರೋಟನ್ನು ಒಡೆದು ತಿರುಳನ್ನು ತಿಂದ ಬಳಿಕ ಇದರ ಕವಚವನ್ನು ಎಸೆಯುತ್ತೇವೆ. ಆದರೆ ಇದು ತ್ವಚೆಯ ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿದೆ. ಒಂದು ತುಂಡು ಕವಚವನ್ನು ಕುಟ್ಟಿ ಪುಡಿಮಾಡಿ ಮಿಕ್ಸಿಯಲ್ಲಿ ಒಣದಾಗಿಯೇ ನುಣ್ಣಗೆ ಪುಡಿಮಾಡಿಕೊಳ್ಳಿ. ಇದಕ್ಕೆ ಸಮಪ್ರಮಾಣದಲ್ಲಿ ಪಪ್ಪಾಯಿ ಹಣ್ಣಿನ ತಿರುಳು ಮತ್ತು ಕೊಂಚ ಲಿಂಬೆರಸ ಸೇರಿಸಿ ಮಿಶ್ರಣ ಮಾಡಿ. ಈ ಲೇಪನದಿಂದ ಮುಖವನ್ನು ನಯವಾಗಿ ತಿಕ್ಕಿಕೊಳ್ಳುತ್ತಾ ಮಸಾಜ್ ಮಾಡಿಕೊಳ್ಳಿ. ಈ ಮೂಲಕ ತ್ವಚೆಗೆ ಅಂಟಿಕೊಂಡಿದ್ದ ಸತ್ತ ಜೀವಕೋಶಗಳು ನಿವಾರಣೆಯಾಗಿ ಕಳೆಗುಂದಿದ್ದ ತ್ವಚೆ ಕಾಂತಿಯುಕ್ತವಾಗುತ್ತದೆ. ಈ ಕವಚದಲ್ಲಿರುವ ಸತು, ಕಬ್ಬಿಣ ಮತ್ತು ಒಮೆಗಾ 3 ಕೊಬ್ಬಿನ ಆಮ್ಲಗಳು ಚರ್ಮದ ಸೆಳೆತವನ್ನು ಹೆಚ್ಚಿಸಿ ಕಾಂತಿಯನ್ನು ಹೆಚ್ಚಿಸುತ್ತವೆ. ಈ ಕಾರ್ಯಕ್ಕಾಗಿ ನಿತ್ಯವೂ ನಾಲ್ಕರಿಂದ ಆರು ಅಕ್ರೋಟುಗಳ ಅಗತ್ಯವಿದ್ದು ಇದರ ತಿರುಳು ನಿಮ್ಮ ಉಪಾಹಾರದ ಅವಶ್ಯಕತೆಯನ್ನು ಪೂರೈಸಿದರೆ ಕವಚ ನಿಮ್ಮ ಸೌಂದರ್ಯವನ್ನು ಕಾಪಾಡುತ್ತದೆ.

ಬಿಸಿಲಿಗೆ ಒಡ್ಡಿದ್ದ ಭಾಗ ಕಪ್ಪಗಾಗಿದ್ದರೆ

ಬಿಸಿಲಿಗೆ ಒಡ್ಡಿದ್ದ ಭಾಗ ಕಪ್ಪಗಾಗಿದ್ದರೆ

ಸಾಮಾನ್ಯವಾಗಿ ಬೇಸಿಗೆಯ ಪ್ರಖರ ಬಿಸಿಲಿಗೆ ಒಡ್ಡಿದ ತ್ವಚೆಯ ಯಾವುದೇ ಭಾಗ ಗಮನಾರ್ಹವಾಗಿ ಗಾಢವಾಗುತ್ತದೆ. ಈ ತೊಂದರೆಯನ್ನು ನಿವಾರಿಸಲು ಒಂದು ದೊಡ್ಡಚಮಚ ತಾಜಾ ಸೌತೆಕಾಯಿಯ ರಸ, ಒಂದು ದೊಡ್ಡ ಚಮಚ ಲಿಂಬೆರಸ ಮತ್ತು ಒಂದು ದೊಡ್ಡ ಚಮಚ ಗುಲಾಬಿ ನೀರನ್ನು ಬೆರೆಸಿ. ಈ ದ್ರಾವಣವನ್ನು ಹತ್ತಿಯುಂಡೆಯಿಂದ ಅದ್ದಿ ಬಿಸಿಲಿಗೆ ಒಡ್ಡಿದ್ದ ಭಾಗವನ್ನು ನಿಯಮಿತವಾಗಿ ಒರೆಸಿಕೊಳ್ಳುತ್ತಿದ್ದರೆ ಶೀಘ್ರವೇ ಸಹಜವರ್ಣ ಮರಳುತ್ತದೆ.

Most Read: ರಾತ್ರಿ ಮಲಗುವ ಮುನ್ನ, ಈ ಫೇಸ್ ಪ್ಯಾಕ್‌ಗಳನ್ನು ಮುಖಕ್ಕೆ ಹಚ್ಚಿದರೆ, ತ್ವಚೆ ಇನ್ನಷ್ಟು ಬೆಳ್ಳಗಾಗುವುದು

ಒಂದು ವೇಳೆ ಒಣಚರ್ಮ ನಿಮ್ಮದಾಗಿದ್ದರೆ

ಒಂದು ವೇಳೆ ಒಣಚರ್ಮ ನಿಮ್ಮದಾಗಿದ್ದರೆ

ಕೊಬ್ಬರಿ ಎಣ್ಣೆ ಅತ್ಯುತ್ತಮವಾದ ನೈಸರ್ಗಿಕ ತೇವಕಾರಕವಾಗಿದೆ. ಕೊಂಚ ಕೊಬ್ಬರಿ ಎಣ್ಣೆಯನ್ನು ಕೊಂಚವೇ ಬಿಸಿಮಾಡಿ ಈ ಎಣ್ಣೆಯಿಂದ ಕುತ್ತಿಗೆಯ ಭಾಗದಲ್ಲಿ ಕೆಳಗಿನಿಂದ ಮೇಲೆ ಬರುವಂತೆ ನೇವರಿಸಿಕೊಳ್ಳುತ್ತಾ ಮಸಾಜ್ ಮಾಡಿಕೊಳ್ಳಿ. ಮುಖದ ಮೇಲೆ ವೃತ್ತಾಕಾರದಲ್ಲಿ ಸುಮಾರು ಐದು ನಿಮಿಷ ಮಸಾಜ್ ಮಾಡಿ. ಒಂದು ವೇಳೆ ಮುಖದಲ್ಲಿ ಸತ್ತ ಜೀವಕೋಶಗಳಿದ್ದರೆ ಕೊಬ್ಬರಿ ಎಣ್ಣೆಗೆ ಕೊಂಚ ಸಕ್ಕರೆಯನ್ನು ಬೆರೆಸಿ ಮಸಾಜ್ ಮಾಡಿಕೊಳ್ಳಿ. ಈ ಕಾರ್ಯವನ್ನು ರಾತ್ರಿ ಮಲಗುವ ಮುನ್ನ ನಿರ್ವಹಿಸಿ ಪವಡಿಸಿ. ಬೆಳಿಗ್ಗೆದ್ದ ಬಳಿಕ ತೊಳೆದುಕೊಳ್ಳಿ. ಕೊಬ್ಬರಿ ಎಣ್ಣೆಯಲ್ಲಿರುವ ಫಿನಾಲಿಕ್ ಸಂಯುಕ್ತಗಳು ಚರ್ಮದ ಆಳಕ್ಕೆ ಇಳಿದು ಕೊಬ್ಬಿನಾಮ್ಲಗಳನ್ನು ಒದಗಿಸಿ ಆರೈಕೆ ನೀಡುವ ಮೂಲಕ ತ್ವಚೆ ಅತ್ಯುತ್ತಮ ತೇವವನ್ನು ಪಡೆಯುತ್ತದೆ ಹಾಗೂ ಒಣಚರ್ಮದ ತೊಂದರೆ ಇಲ್ಲವಾಗುತ್ತದೆ.

ಒಂದು ವೇಳೆ ನಿಮ್ಮದು ಎಣ್ಣೆಚರ್ಮವಾಗಿದ್ದರೆ

ಒಂದು ವೇಳೆ ನಿಮ್ಮದು ಎಣ್ಣೆಚರ್ಮವಾಗಿದ್ದರೆ

ಒಂದು ದೊಡ್ಡ ಚಮಚ ಲಿಂಬೆರಸಕ್ಕೆ ಎರಡು ದೊಡ್ಡ ಚಮಚ ನೀರು ಬೆರೆಸಿ ಈ ದ್ರಾವಣವನ್ನು ಹತ್ತಿಯುಂಡೆಯಿಂದ ಮುಖ, ಕುತ್ತಿಗೆಗೆ ಹಚ್ಚಿಕೊಂಡು ಸುಮಾರು ಏಳರಿಂದ ಹತ್ತು ನಿಮಿಷ ಹಾಗೇ ಒಣಗಲು ಬಿಡಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.

Most Read: ಎಣ್ಣೆಯಂಶವಿರುವ ತ್ವಚೆಯ ಸಮಸ್ಯೆಗೆ, 'ಬಾದಾಮಿಯ ಫೇಸ್ ಮಾಸ್ಕ್'

ಮೊಡವೆಗಳ ತೊಂದರೆ ಇದ್ದರೆ

ಮೊಡವೆಗಳ ತೊಂದರೆ ಇದ್ದರೆ

ಹದಿಹರೆಯದಲ್ಲಿ ಈ ತೊಂದರೆ ಸಾಮಾನ್ಯವಾಗಿ ಕಾಡುತ್ತದೆ. ಇದಕ್ಕಾಗಿ ಅರಿಶಿನ ಪುಡಿ ಮತ್ತು ಗುಲಾಬಿ ನೀರನ್ನು ಬೆರೆಸಿ ದಪ್ಪನೆಯಲೇಪನ ತಯಾರಿಸಿ. ಈ ಲೇಪನವನ್ನು ದಪ್ಪನಾಗಿ ಮೊಡವೆಯ ಮೇಲೆ ಹಚ್ಚಿಕೊಂಡು ಸುಮಾರು ಹದಿನೈದು ನಿಮಿಷದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಅರಿಶಿನದಲ್ಲಿರುವ ಪ್ರತಿಜೀವಕ ಗುಣ ಬ್ಯಾಕ್ಟೀರಿಯಾಗಳನ್ನು ನಿವಾರಿಸಿದರೆ ಗುಲಾಬಿನೀರಿನಲ್ಲಿರುವ ಶಮನಕಾರಿ ಗುಣ ಇಲ್ಲಿ ಹೆಚ್ಚು ತಂಪಾಗಿಸುತ್ತದೆ. ಆದರೆ ತೊಳೆದುಕೊಂಡ ಕನಿಷ್ಟ ಆರು ಘಂಟೆಗಳವರೆಗಾದರೂ ಈ ಭಾಗದ ಮೇಲೆ ಯಾವುದೇ ಮೇಕಪ್ ಅಥವಾ ಬೇರಾವುದೇ ಪ್ರಸಾದನವನ್ನು ಹಚ್ಚಬಾರದು.

English summary

Home remedies, for all types of common skin issues

with the rising pollution, taking care of your skin has become a task. Constant exposure to sun and pollution is one prime reason behind increasing skin problems.Going to the dermatologist is always an option but sometimes just going natural is the key. Here are some home remedies for some very common skin problems.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more