For Quick Alerts
ALLOW NOTIFICATIONS  
For Daily Alerts

ವಿನೆಗರ್ ಬಳಸಿಕೊಂಡು ತ್ವಚೆಯನ್ನು ಬಿಳಿಯಾಗಿಸುವುದು ಹೇಗೆ?

|

ಸುಂದರ ಹಾಗೂ ಬಿಳಿಯಾಗಿ ಕಾಣಬೇಕೆನ್ನುವುದು ಪ್ರತಿಯೊಬ್ಬ ಮಹಿಳೆಯ ಕನಸಾಗಿರುವುದು. ಆದರೆ ಈ ಕನಸು ನನಸು ಮಾಡಲು ಮಾರುಕಟ್ಟೆಯಲ್ಲಿ ಸಿಗುವಂತಹ ಹಲವಾರು ರೀತಿಯ ಕ್ರೀಮ್ ಹಾಗೂ ಲೋಷನ್ ಗಳನ್ನು ಬಳಸಿಕೊಳ್ಳುವರು. ಆದರೆ ಇದು ಕೆಲವೊಂದು ಸಲ ವ್ಯತಿರಿಕ್ತ ಪರಿಣಾಮ ಬೀರುವುದು ಇದೆ. ಇದರಿಂದ ತ್ವಚೆಯು ಮತ್ತಷ್ಟು ಕಪ್ಪಾಗಬಹುದು. ಇಷ್ಟು ಮಾತ್ರದಲ್ಲವೆ ಹೊರಗಿನ ಕಲುಷಿತ ವಾತಾವರಣ, ಬಿಸಿಲಿಗೆ ಮೈಯೊಡ್ಡುವುದು ಇತ್ಯಾದಿಗಳು ಕೂಡ ತ್ವಚೆಯ ಬಣ್ಣ ಕಪ್ಪಾಗಿಸುವುದು.

Vinegar For Skin Lightening

ಇಂತಹ ಸಂದರ್ಭದಲ್ಲಿ ತ್ವಚೆಗೆ ಯಾವುದೇ ರೀತಿಯ ಅಡ್ಡಪರಿಣಾಮಗಳನ್ನು ಬೀರದೆ ಇರುವಂತಹ ಕೆಲವೊಂದು ನೈಸರ್ಗಿಕವಾದ ವಿಧಾನಗಳನ್ನು ಬಳಸಿಕೊಂಡು ತ್ವಚೆಯನ್ನು ಬಿಳಿಯಾಗಿಸಬಹುದು. ಈ ಲೇಖನದಲ್ಲಿ ವಿನೆಗರ್ನಿಂದ ತ್ವಚೆಯನ್ನು ಬಿಳಿಯಾಗಿಸುವುದು ಹೇಗೆ ಎಂದು ತಿಳಿಯುವ. ಸಂಕೋಚನ ಗುಣ ಹೊಂದಿರುವಂತಹ ವಿನೆಗರ್ ತ್ವಚೆಯ ಪಿಎಚ್ ಮಟ್ಟವನ್ನು ಕಾಪಾಡಿಕೊಳ್ಳುವುದು. ಇದರಲ್ಲಿ ಇರುವಂತಹ ನೈಸರ್ಗಿಕದತ್ತವಾದ ಅಸಿಟಿಕ್ ಆಮ್ಲವು ಚರ್ಮದ ಸತ್ತ ಕೋಶಗಳನ್ನು ತೆಗೆಯುವುದು ಮತ್ತು ಚರ್ಮವನ್ನು ಬಿಳಿಯಾಗಿಸುವುದು. ಈ ಲೇಖನದಲ್ಲಿ ವಿನೆಗರ್ ಅನ್ನು ಬಳಸಿಕೊಂಡು ತ್ವಚೆ ಬಿಳಿಯಾಗಿಸುವುದು ಹೇಗೆ ಎಂದು ಮುಂದೆ ಓದುತ್ತಾ ತಿಳಿಯಿರಿ.

ವಿನೆಗರ್ ಮತ್ತು ಅಕ್ಕಿ ಹಿಟ್ಟು

ವಿನೆಗರ್ ಮತ್ತು ಅಕ್ಕಿ ಹಿಟ್ಟು

ಬಿಳಿ ವಿನೆಗರ್ ಮತ್ತು ಅಕ್ಕಿ ಹಿಟ್ಟು ಚರ್ಮದ ಸತ್ತ ಕೋಶಗಳನ್ನು ಕಿತ್ತುಹಾಕಿ ತ್ವಚೆಗೆ ಬಿಳಿ ಬಣ್ಣ ನೀಡುವುದು.

ಬೇಕಾಗುವ ಸಾಮಗ್ರಿಗಳು

  • 2 ಚಮಚ ಅಕ್ಕಿಹಿಟ್ಟು
  • 1 ಚಮಚ ವಿನೇಗರ್
  • Most Read: ಕೈಗಳ ಮೇಲೆ ಇರುವ ಕಪ್ಪು ಕಲೆಗಳನ್ನು ತೆಗೆಯುವುದು ಹೇಗೆ?

    ತಯಾರಿಸುವ ವಿಧಾನ

    ಒಂದು ಶುದ್ಧವಾಗಿರುವ ಪಿಂಗಾನಿಯಲ್ಲಿ ಅಕ್ಕಿಹಿಟ್ಟು ಮತ್ತು ವಿನೆಗರ್ಹಾಕಿಕೊಳ್ಳಿ. ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ದಪ್ಪಗಿನ ಪೇಸ್ಟ್ ಮಾಡಿ. ಇದನ್ನು ಶುದ್ಧಗೊಳಿಸಿದ ಮುಖಕ್ಕೆ ಹಚ್ಚಿಕೊಳ್ಳಿ ಮತ್ತು ಕೈಬೆರಳುಗಳನ್ನು ಬಳಸಿಕೊಂಡು ನಿಧಾನವಾಗಿ ವೃತ್ತಾಕಾರದಲ್ಲಿ ಸ್ಕ್ರಬ್ ಮಾಡಿಕೊಳ್ಳಿ. 10-15 ನಿಮಿಷ ಕಾಲ ಹಾಗೆ ಬಿಡಿ. ಬಳಿಕ ಸಾಮಾನ್ಯ ನೀರನ್ನು ಬಳಸಿಕೊಂಡು ಮುಖ ತೊಳೆಯಿರಿ.

    ವಿನೆಗರ್ ಮತ್ತು ಟೊಮೆಟೊ

    ವಿನೆಗರ್ ಮತ್ತು ಟೊಮೆಟೊ

    ಟೊಮೆಟೊದಲ್ಲಿ ಇರುವಂತಹ ಚರ್ಮ ಬಿಳಿಗೊಳಿಸುವ ಅಂಶವು ವಿನಗರ್ ನೊಂದಿಗೆ ಸೇರಿಕೊಂಡು ಬಳಸಿದಾಗ ತುಂಬಾ ಅದ್ಭುತವಾಗಿ ಕೆಲಸ ಮಾಡುವುದು.

    ಬೇಕಾಗುವ ಸಾಮಗ್ರಿಗಳು

    • ಟೊಮೆಟೊ ತಿರುಳು
    • ವಿನೇಗರ್
    • ವಿಧಾನ

      ಟೊಮೆಟೊವನ್ನು ಸಣ್ಣ ತುಂಡುಗಳನ್ನಾಗಿ ಮಾಡಿಕೊಳ್ಳಿ. ಈಗ ಮಿಕ್ಸಿಗೆ ಹಾಕಿಕೊಂಡು ಈ ಟೊಮೆಟೊವನ್ನು ರುಬ್ಬಿಕೊಳ್ಳಿ. ಈಗ ಸಮ ಪ್ರಮಾಣದಲ್ಲಿ ಟೊಮೆಟೊ ತಿರುಳು ಮತ್ತು ವಿನೆಗರ್ಹಾಕಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ ಮತ್ತು ಒಣಗಲು ಬಿಡಿ. ಇದರ ಬಳಿಕ ನೀವು ಸಾಮಾನ್ಯ ನೀರಿನಿಂದ ತೊಳೆಯಿರಿ.

      Most Read: ಹಲ್ಲಿನ ಕಾಂತಿ ಹೆಚ್ಚಿಸಲು ಅರಿಶಿನದ ಚಿಕಿತ್ಸೆ! ಇಲ್ಲಿದೆ ನೋಡಿ ಸ್ಟೆಪ್ ಬೈ ಸ್ಟೆಪ್ ಟಿಪ್ಸ್

      ವಿನೆಗರ್ ಮತ್ತು ಆಲೂಗಡ್ಡೆ ಜ್ಯೂಸ್

      ವಿನೆಗರ್ ಮತ್ತು ಆಲೂಗಡ್ಡೆ ಜ್ಯೂಸ್

      ಆಮ್ಲೀಯ ಗುಣ ಹೊಂದಿರುವಂತಹ ವಿನಗರ್ ನೊಂದಿಗೆ ಆಲೂಗಡ್ಡೆಯನ್ನು ಸೇರಿಸಿಕೊಂಡರೆ ಆಗ ಇದು ಚರ್ಮವನ್ನು ಬಿಳಿಗೊಳಿಸಲು ಅದ್ಭುತವಾಗಿ ಕೆಲಸ ಮಾಡುವುದು.

      ಬೇಕಾಗುವ ಸಾಮಗ್ರಿಗಳು

      • 1 ಚಮಚ ಆಲೂಗಡ್ಡೆ ರಸ
      • 1 ಚಮಚ ವಿನೇಗರ್
      • ವಿಧಾನ

        ಆಲೂಗಡ್ಡೆ ಸಿಪ್ಪೆ ತೆಗೆದು ಅದನ್ನು ತುರಿದುಕೊಳ್ಳಿ. ಇದರ ರಸ ತೆಗೆದುಕೊಳ್ಳಿ. ಒಂದು ಪಿಂಗಾಣಿಗೆ ಬಟಾಟೆ ರಸ ಮತ್ತು ವಿನೆಗರ್ ಹಾಕಿ, ಎರಡನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ ಮತ್ತು ಮುಖಕ್ಕೆ ಹಚ್ಚಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿಕೊಂಡ ಬಳಿಕ 15-20 ನಿಮಿಷ ಬಿಟ್ಟು ಸಾಮಾನ್ಯ ನೀರಿನಿಂದ ಮುಖ ತೊಳೆದುಕೊಳ್ಳಿ.

        ವಿನೆಗರ್ ಮತ್ತು ಮೊಟ್ಟೆ ಬಿಳಿ ಲೋಳೆಯ ಫೇಸ್ ಪ್ಯಾಕ್

        ವಿನೆಗರ್ ಮತ್ತು ಮೊಟ್ಟೆ ಬಿಳಿ ಲೋಳೆಯ ಫೇಸ್ ಪ್ಯಾಕ್

        ಬ್ಯಾಕ್ಟೀರಿಯಾ ವಿರೋಧಿ ಗುಣವನ್ನು ಹೊಂದಿರುವಂತಹ ವಿನೆಗರ್ ಹಾಗು ಮೊಟ್ಟೆಯ ಬಿಳಿ ಲೋಳೆ ಜತೆಗೆ ಸೇರಿಸಿದಾಗ ಅದ್ಭುತವಾಗಿ ಕೆಲಸ ಮಾಡುವುದು. ಇದು ತ್ವಚೆಯನ್ನು ಬಿಳಿ ಮಾಡುವುದು ಮಾತ್ರವಲ್ಲದೆ ಮೊಡವೆ, ಬೊಕ್ಕೆ ಇತ್ಯಾದಿಗಳನ್ನು ನಿವಾರಿಸುವುದು.

        ಬೇಕಾಗುವ ಸಾಮಗ್ರಿಗಳು

        • 1 ಚಮಚ ವಿನೇಗರ್
        • 1 ಮೊಟ್ಟೆ
        • ವಿಧಾನ

          ಒಂದು ಮೊಟ್ಟೆಯನ್ನು ಒಡೆದು ಬಿಳಿ ಭಾಗವನ್ನು ಪಿಂಗಾಣಿಗೆ ಹಾಕಿ. ಇದಕ್ಕೆ ವಿನೆಗರ್ ಮಿಶ್ರಣ ಮಾಡಿ ಮತ್ತು ಎರಡನ್ನು ಸರಿಯಾಗಿ ಕಲಸಿಕೊಳ್ಳಿ. ಮುಖವನ್ನು ಸರಿಯಾಗಿ ತೊಳೆಯಿರಿ ಮತ್ತು ಇದನ್ನು ಹಚ್ಚಿಕೊಳ್ಳಿ. 20-30 ನಿಮಿಷ ಕಾಲ ನೀವು ಹಾಗೆ ಮುಖದಲ್ಲಿ ಇದನ್ನು ಬಿಡಿ. 30 ನಿಮಿಷ ಬಿಟ್ಟ ಬಳಿಕ ಮುಖ ತೊಳೆದುಕೊಳ್ಳಿ.

English summary

Home made Remedies Using Vinegar For Skin Lightening

We all look for ways in which we can lighten the tone of our skin. And we experiment with almost every product that is available in the market but most of the time we fail to get the desired results. The astringent properties in vinegar maintain the pH balance of the skin. The natural acetic acid in vinegar helps in removing the dead skin cells.
X
Desktop Bottom Promotion