ಅಕ್ಕಿ ನೀರಿನಿಂದ ಮೊಡವೆ ನಿವಾರಿಸಬಹುದು ಎನ್ನುವುದು ನಿಮಗೆ ಗೊತ್ತಾ?

By: Divya pandit Pandit
Subscribe to Boldsky

ಮೊಡವೆ ಎನ್ನುವುದು ಸಾಮಾನ್ಯವಾಗಿ ವಯಸ್ಸಿಗೆ ಬಂದವರನ್ನು ಕಾಡುತ್ತದೆ. ಮುಖದ ಮೇಲೆ ಕಾಣಿಸಿಕೊಳ್ಳುವ ಈ ಮೊಡವೆಗಳು ಸ್ತ್ರೀಯರಿಗೆ ಹೆಚ್ಚು ಇರಿಸು ಮುರಿಸು ಉಂಟಾಗುವಂತೆ ಮಾಡುತ್ತದೆ. ಮೊಡವೆಯಿಂದ ತ್ವಚೆಯ ಮೇಲೆ ಕಲೆ, ರಂಧ್ರ ಹಾಗೂ ಸೋಂಕನ್ನು ಉಂಟು ಮಾಡುತ್ತವೆ. ಚರ್ಮದ ಮೇಲೆ ಉಂಟಾಗುವ ರಂಧ್ರಗಳಲ್ಲಿ ಬ್ಯಾಕ್ಟೀರಿಯಾಗಳ ಶೇಖರಣೆ ಉಂಟಾಗುವ ಸಾಧ್ಯತೆಗಳಿರುತ್ತವೆ. ಹಾರ್ಮೋನ್ ವ್ಯತ್ಯಾಸಗಳಿಂದ, ಧೂಳು, ಅತಿಯಾದ ಎಣ್ಣೆ ಪದಾರ್ಥಗಳ ಸೇವನೆ ಸೇರಿದಂತೆ ಇನ್ನಿತರ ಕಾರಣಗಳಿಂದ ಮೊಡವೆಗಳು ಕಾಣಿಸಿಕೊಳ್ಳುತ್ತವೆ.

ಮೊಡವೆಗಳ ನಿವಾರಣೆಗೆ ಸಹಾಯವಾಗಲು ಇಂದು ಮಾರುಕಟ್ಟೆಯಲ್ಲಿ ಅನೇಕ ಔಷಧಿ ಹಾಗೂ ಸೌಂದರ್ಯ ವರ್ಧಕ ಉತ್ಪನ್ನಗಳಿರುವುದು ಕಾಣಬಹುದು. ಅಂತಹ ಉತ್ಪನ್ನಗಳು ಹಾನಿಕಾರಕ ರಾಸಾಯನಿಕ ಉತ್ಪನ್ನಗಳಿಂದ ಕೂಡಿರುತ್ತವೆ. ಇವುಗಳ ಬಳಕೆಯನ್ನು ಪದೇ ಪದೇ ಮುಂದುವರಿಸುವುದರಿಂದ ಅಥವಾ ಅನ್ವಯಿಸುವುದರಿಂದ ಚರ್ಮದ ಮೇಲೆ ಕೆಟ್ಟ ಪರಿಣಾಮ ಬೀರುವುದು. ಇವು ತಾತ್ಕಾಲಿಕವಾಗಿ ಗುಣಮುಖವಾಗಿಸಬಹುದು. ಆದರೆ ದೀರ್ಘಾವಧಿಗೆ ಅಷ್ಟು ಉತ್ತಮವಾದುದ್ದಲ್ಲ.

ತ್ವಚೆಯ ಕಾಂತಿ ಹೆಚ್ಚಬೇಕೇ? ಅಕ್ಕಿನೆನೆಸಿದ ನೀರನ್ನು ಬಳಸಿ

ಮನೆಯ ಆರೈಕೆಯಲ್ಲಿಯೇ ಬಹುಬೇಗ ಮೊಡವೆಯನ್ನು ನಿವಾರಿಸಬಹುದಾದ ಆರೈಕೆ ವಿಧಾನ ಎಂದರೆ ಅಕ್ಕಿ ನೀರಿನ ಥೆರಪಿ. ಔಷಧೀಯ ಗುಣವನ್ನು ಒಳಗೊಂಡಿರುವ ಅಕ್ಕಿ ನೀರಿನಿಂದ ತ್ವಚೆಯ ಸಮಸ್ಯೆಗಳನ್ನು ಹಾಗೂ ಮೊಡವೆಯನ್ನು ಪರಿಣಾಮಕಾರಿ ರೀತಿಯಲ್ಲಿ ನಿವಾರಿಸಬಹುದು. ನಿಮಗೂ ನಿಮ್ಮ ಮುಖದ ಮೇಲಿರುವ ಮೊಡವೆಯನ್ನು ಸುಲಭವಾಗಿ ನಿವಾರಿಸಬೇಕು ಎಂದುಕೊಂಡಿದ್ದರೆ ಈ ಮುಂದಿರುವ ವಿವರಣೆಯನ್ನು ಪರಿಶೀಲಿಸಿ... 

ಅಕ್ಕಿ ನೀರಿನೊಂದಿಗೆ ಟ್ರೀ ಟ್ರೀ ಎಣ್ಣೆ ಮತ್ತು ಆಲಿವ್ ಎಣ್ಣೆ

ಅಕ್ಕಿ ನೀರಿನೊಂದಿಗೆ ಟ್ರೀ ಟ್ರೀ ಎಣ್ಣೆ ಮತ್ತು ಆಲಿವ್ ಎಣ್ಣೆ

ಒಂದು ಬೌಲ್‍ನಲ್ಲಿ 2 ಟೀ ಚಮಚ ಅಕ್ಕಿ ನೀರು, 1/2 ಟೀ ಚಮಚ ಆಲಿವ್ ಎಣ್ಣೆ ಮತ್ತು 4-5 ಹನಿ ಟ್ರೀ ಟ್ರೀ ಎಣ್ಣೆಯನ್ನು ಸೇರಿಸಿ,

ಎಲ್ಲವೂ ಚೆನ್ನಾಗಿ ಮಿಶ್ರಗೊಳ್ಳುವ ವರೆಗೂ ತಿರುವಿ.

ಮಿಶ್ರಣವನ್ನು ಪೀಡಿತ ಪ್ರದೇಶಕ್ಕೆ ಹಾಗೂ ಮುಖಕ್ಕೆ ಅನ್ವಯಿಸಿ. 10 ನಿಮಿಷಗಳ ಕಾಲ ಆರಲು ಬಿಡಿ.

ಬೆಚ್ಚಗಿನ ನೀರಿನಲ್ಲಿ ಸ್ವಚ್ಛಗೊಳಿಸಿದ ಬಳಿಕ ತಿಳಿಯಾಗಿ ಟೋನರ್‍ಅನ್ನು ಅನ್ವಯಿಸಿ.

ಈ ಮೂರು ಘಟಕಗಳನ್ನು ಬೆರೆಸಿ ಅನ್ವಯಿಸುವುದರಿಂದ ಮೊಡವೆಗಳನ್ನು ಬಹಳ ಸುಲಭವಾಗಿ ನಿಯಂತ್ರಿಸಬಹುದು ಮತ್ತು ತ್ವಚೆಯ ಮೇಲಿರುವ ರಂಧ್ರಗಳ ನಿವಾರಣೆಗೆ ಸಹಾಯವಾಗುವುದು.

ಅಕ್ಕಿ ನೀರು ಮತ್ತು ನಿಂಬೆ ರಸ

ಅಕ್ಕಿ ನೀರು ಮತ್ತು ನಿಂಬೆ ರಸ

2 ಟೇಬಲ್ ಚಮಚ ಅಕ್ಕಿ ನೀರಿಗೆ ಒಂದು ಟೀ ಚಮಚ ನಿಂಬೆ ರಸವನ್ನು ಸೇರಿಸಿ, ಮಿಶ್ರಗೊಳಿಸಿ.

ಮಿಶ್ರಣವನ್ನು ಪೀಡಿತ ಪ್ರದೇಶಕ್ಕೆ ಹಾಗೂ ಮುಖಕ್ಕೆ ಅನ್ವಯಿಸಿ.

5 ನಿಮಿಷಗಳ ಬಳಿಕ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

ತ್ವಚೆ ಒಣಗಿದ ನಂತರ ತೆಳುವಾಗಿ ಟೋನರ್ ಅನ್ವಯಿಸಿ.

ಈ ಸಂಯುಕ್ತಗಳ ಮಿಶ್ರಣವು ಮೊಡವೆಯ ಆರೈಕೆಯೊಂದಿಗೆ ತ್ವಚೆಯನ್ನು ಪೋಷಿಸುತ್ತವೆ.

ಅಕ್ಕಿ ನೀರು, ದಾಲ್ಚಿನ್ನಿ ಮತ್ತು ಜೇನುತುಪ್ಪ

ಅಕ್ಕಿ ನೀರು, ದಾಲ್ಚಿನ್ನಿ ಮತ್ತು ಜೇನುತುಪ್ಪ

2 ಟೀ ಚಮಚ ಅಕ್ಕಿ ನೀರಿಗೆ ಚಿಟಕಿ ದಾಲ್ಚಿನ್ನಿ ಪುಡಿ ಮತ್ತು 1/2 ಟೀ ಚಮಚ ಜೇನುತುಪ್ಪವನ್ನು ಸೇರಿಸಿ ಮಿಶ್ರಗೊಳಿಸಿ.

ಮಿಶ್ರಣವನ್ನು ಪೀಡಿತ ಪ್ರದೇಶಕ್ಕೆ ಹಾಗೂ ಮುಖಕ್ಕೆ ಅನ್ವಯಿಸಿ.

10 ನಿಮಿಷದ ಬಳಿಕ ಕ್ಲೆನ್ಸರ್ ಮತ್ತು ಬೆಚ್ಚಗಿನ ನೀರಿನೊಂದಿಗೆ ಸ್ವಚ್ಛಗೊಳಿಸಿ.

ಈ ಉತ್ಪನ್ನವು ಸೋಂಕು ನಿವಾರಕ ಹಾಗೂ ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುತ್ತವೆ.

ಅಕ್ಕಿ ನೀರು ಮತ್ತು ಗ್ರೀನ್ ಟೀ

ಅಕ್ಕಿ ನೀರು ಮತ್ತು ಗ್ರೀನ್ ಟೀ

1 ಟೀ ಚಮಚ ಅಕ್ಕಿ ನೀರು ಮತ್ತು 1/2 ಟೀಚಮಚ ಗ್ರೀನ್ ಟೀ ಸೇರಿಸಿ, ಮಿಶ್ರಗೊಳಿಸಿ.

ಹತ್ತಿ ಚಂಡಿನಲ್ಲಿ ಮಿಶ್ರಣವನ್ನು ಪೀಡಿತ ಪ್ರದೇಶಕ್ಕೆ ಹಾಗೂ ಮುಖಕ್ಕೆ ಅನ್ವಯಿಸಿ.

15 ನಿಮಿಷದ ಬಳಿಕ, ಮೃದುವಾದ ನೀರಿನಲ್ಲಿ ಸ್ವಚ್ಛಗೊಳಿಸಿ.

ಗ್ರೀನ್ ಟೀ ಶಿಲೀಂಧ್ರ ನಿರೋಧಕ ಗುಣವನ್ನು ಒಳಗೊಂಡಿರುವುದರಿಂದ ಅಕ್ಕಿ ನೀರಿನೊಂದಿಗೆ ಬೆರೆಸಿ, ಅನ್ವಯಿಸುವುದರಿಂದ ಮೊಡವೆ ನಿವಾರಣೆ ಹೊಂದುವುದರ ಜೊತೆಗೆ ಮತ್ತೆ ಮರುಕಳಿಸದಂತೆ ನೋಡಿಕೊಳ್ಳುತ್ತದೆ.

ಅಕ್ಕಿ ನೀರು ಮತ್ತು ಅರಿಶಿನ ಪುಡಿ

ಅಕ್ಕಿ ನೀರು ಮತ್ತು ಅರಿಶಿನ ಪುಡಿ

2 ಟೀ ಚಮಚ ಅಕ್ಕಿ ನೀರಿಗೆ ಚಿಟಕಿ ಅರಿಶಿನ ಪುಡಿ ಸೇರಿಸಿ, ಮಿಶ್ರಗೊಳಿಸಿ.

ಮಿಶ್ರಣವನ್ನು ಪೀಡಿತ ಪ್ರದೇಶಕ್ಕೆ ಹಾಗೂ ಮುಖಕ್ಕೆ ಅನ್ವಯಿಸಿ.

ಸ್ವಲ್ಪ ಸಮಯದ ಬಳಿಕ ಮೃದುವಾದ ನೀರಿನಲ್ಲಿ ಸ್ವಚ್ಛಗೊಳಿಸಿ.

ಇವೆರಡರ ಸಂಯೋಜನೆಯು ಮೊಡವೆಗಳ ನಿವಾರಣೆ, ಕಲ್ಮಶಗಳನ್ನು ಹೋಗಲಾಡಿಸುವುದು

ಅಕ್ಕಿ ನೀರು ಮತ್ತು ಅಲೋವೆರಾ

ಅಕ್ಕಿ ನೀರು ಮತ್ತು ಅಲೋವೆರಾ

1 ಟೀ ಚಮಚ ಅಕ್ಕಿ ನೀರಿಗೆ 2 ಟೀ ಚಮಚಲೋವೆರಾ ಸೇರಿಸಿ, ಮಿಶ್ರಗೊಳಿಸಿ.

ಮಿಶ್ರಣವನ್ನು ಪೀಡಿತ ಪ್ರದೇಶಕ್ಕೆ ಹಾಗೂ ಮುಖಕ್ಕೆ ಅನ್ವಯಿಸಿ.

15 ನಿಮಿಷದ ಬಳಿಕ, ಬೆಚ್ಚಗಿನ ನೀರಿನಲ್ಲಿ ಸ್ವಚ್ಛಗೊಳಿಸಿ.

ಅಲೋವೆರಾ ಆಂಟಿಬಯೋಟಿಕ್ ಗುಣ ಹೊಂದಿರುವುದರಿಂದ ಅಕ್ಕಿ ನೀರಿನೊಂದಿಗೆ ಸೇರಿಸಿದರೆ ಮೊಡವೆ ನಿವಾರಣೆ ಹಾಗೂ ಉತ್ತಮ ಆಕರ್ಷಕ ತ್ವಚೆಗೆ ಅನುಕೂಲವಾಗುವುದು.

ಅಕ್ಕಿ ನೀರು ಮತ್ತು ಆಪಲ್ ಸೈಡರ್ ವಿನೆಗರ್

ಅಕ್ಕಿ ನೀರು ಮತ್ತು ಆಪಲ್ ಸೈಡರ್ ವಿನೆಗರ್

2 ಟೀ ಚಮಚ ಅಕ್ಕಿ ನೀರಿಗೆ 4-5 ಹನಿ ಆಪಲ್ ಸೈಡರ್ ವಿನೆಗರ್ ಸೇರಿಸಿ, ಮಿಶ್ರಗೊಳಿಸಿ.

ಹತ್ತಿ ಚಂಡಿನಲ್ಲಿ ಮಿಶ್ರಣವನ್ನು ಪೀಡಿತ ಪ್ರದೇಶಕ್ಕೆ ಹಾಗೂ ಮುಖಕ್ಕೆ ಅನ್ವಯಿಸಿ.

10 ನಿಮಿಷದ ಬಳಿಕ, ಬೆಚ್ಚಗಿನ ನೀರಿನಲ್ಲಿ ಸ್ವಚ್ಛಗೊಳಿಸಿ.

ಆಪಲ್ ವಿನೆಗರ್ ಮತ್ತು ಅಕ್ಕಿ ನೀರಿನ ಸಂಯೋಜನೆಯಿಂದ ತ್ವಚೆಯ ಮೇಲಾಗುವ ಕಿರಿಕಿರಿ, ಮೊಡವೆ ನಿವಾರಣೆ ಹಾಗೂ ಕಾಂತಿಯುತ ತ್ವಚೆ ಪಡೆಯಲು ಸಹಾಯವಾಗುವುದು.

ಅಕ್ಕಿ ನೀರು ಮತ್ತು ಅಗಸೆ ಬೀಜ

ಅಕ್ಕಿ ನೀರು ಮತ್ತು ಅಗಸೆ ಬೀಜ

ಒಂದು ಮುಷ್ಟಿ ಅಗಸೆ ಬೀಜವನ್ನು ರಾತ್ರಿ ನೆನೆಯಿಡಿ.

ನೆನೆದ ಅಗಸೆ ಬೀಜವನ್ನು ತೊಳೆದು ರುಬ್ಬಿಕೊಳ್ಳಿ.

ಅಗಸೆ ಬೀಜದ ಪೇಸ್ಟ್‍ಗೆ 1 ಟೇಬಲ್ ಚಮಚ ಅಕ್ಕಿ ನೀರನ್ನು ಸೇರಿಸಿ, ಮಿಶ್ರಗೊಳಿಸಿ.

ಮಿಶ್ರಣವನ್ನು ಪೀಡಿತ ಪ್ರದೇಶಕ್ಕೆ ಹಾಗೂ ಮುಖಕ್ಕೆ ಅನ್ವಯಿಸಿ.

10-15 ನಿಮಿಷ ಆರಲು ಬಿಡಿ. ನಂತರ ಬೆಚ್ಚಗಿನ ನೀರಿನಲ್ಲಿ ಸ್ವಚ್ಛಗೊಳಿಸಿ. ತೆಳುವಾಗಿ ಟೋನರ್ ಅನ್ವಯಿಸಿ.

English summary

Here's How You Can Use Rice Water For Acne Reduction

Acne is the most common skin condition that can pop up at any age. Millions of women across the globe are plagued with this unsightly and annoying condition. While there are a variety of factors that can trigger an acne breakout, the most common ones are clogged pores and infection-causing bacteria. There are tons of commercial acne-combating products available in the beauty stores. However, there are very few that actually live up to the hype.
Story first published: Friday, February 2, 2018, 7:01 [IST]
Subscribe Newsletter