For Quick Alerts
ALLOW NOTIFICATIONS  
For Daily Alerts

ವಯಸ್ಸಾಗುವ ಲಕ್ಷಣ ತಡೆಯುವ ಹೆಸರುಕಾಳಿನ ಹಿಟ್ಟಿನ ಫೇಸ್ ಮಾಸ್ಕ್

By Hemanth
|

ಭೂಮಿ ಮೇಲೆ ಯಾರೂ ಚಿರಂಜೀವಿಗಳಲ್ಲ, ಇದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ಆದರೂ ವಯಸ್ಸಾಗುವಂತಹ ಕೆಲವು ಲಕ್ಷಣಗಳನ್ನು ತಡೆಯಲು ನಾವು ಇನ್ನಿಲ್ಲದಂತೆ ಪ್ರಯತ್ನಿಸುತ್ತೇವೆ. ನಮಗೆ ವಯಸ್ಸಾಗಿದೆ ಎಂದು ಬೇರೆಯವರಿಗೆ ತಿಳಿಯುವುದು ಬೇಡ ಎನ್ನುವುದೇ ಇದರ ಹಿಂದಿನ ಉದ್ದೇಶ. ಕೆಲವರಲ್ಲಿ ಅಕಾಲಿಕವಾಗಿ ವಯಸ್ಸಾಗುವ ಲಕ್ಷಣಗಳು ಕಾಣಿಸಿಕೊಳ್ಳುವುದು. ಬಿಸಿಲಿಗೆ ಅತಿಯಾಗಿ ಮೈಯೊಡ್ಡುವುದು, ಅತಿಯಾಗಿ ಮೇಕಪ್ ಬಳಕೆ, ಜೀವನಶೈಲಿ, ಅತಿಯಾಗಿ ಧೂಮಪಾನ ಮತ್ತು ಮದ್ಯಪಾನ ಇತ್ಯಾದಿ ಇದಕ್ಕೆ ಕಾರಣವಾಗಿರಬಹುದು. ಆದರೆ ಬೋಲ್ಡ್ ಸ್ಕೈ ಓದುತ್ತಿರುವ ತನಕ ನೀವು ಇದರ ಬಗ್ಗೆ ಚಿಂತೆ ಮಾಡಬೇಕಿಲ್ಲ. ಯಾಕೆಂದರೆ ಇಲ್ಲಿ ಎಲ್ಲದಕ್ಕೂ ಪರಿಹಾರವಿದೆ. ನೆರಿಗೆ ಹಾಗೂ ಚರ್ಮದ ಸುಕ್ಕನ್ನು ಹೋಗಲಾಡಿಸಲು ಹೆಸರುಕಾಳಿನ ಫೇಸ್ ಪ್ಯಾಕ್ ತಯಾರಿಸುವ ಬಗ್ಗೆ ಇಲ್ಲಿ ನಿಮಗೆ ತಿಳಿಸಿಕೊಡಲಾಗಿದೆ.

ಈ ಫೇಸ್ ಪ್ಯಾಕ್ ಕೇವಲ ನೆರಿಗೆ ನಿವಾರಣೆ ಮಾಡುವುದು ಮಾತ್ರವಲ್ಲದೆ ಚರ್ಮದ ಇತರ ಸಮಸ್ಯೆಗಳಾದ ಕಪ್ಪು ಕಲೆಗಳು, ಬೊಕ್ಕೆ, ಮೊಡವೆ ಇತ್ಯಾದಿ ನಿವಾರಿಸುವುದು. ಈ ಫೇಸ್ ಪ್ಯಾಕ್ ಗೆ ಲಿಂಬೆ ಹಾಗೂ ಜೇನುತುಪ್ಪ ಬೆರೆಸುವ ಕಾರಣ ಪರಿಣಾಮ ಹೆಚ್ಚಾಗಿರಲಿದೆ.

homemade remedies for anti-ageing

ಬೇಕಾಗುವ ಸಾಮಗ್ರಿಗಳು

  • ಹೆಸರು ಕಾಳಿನ ಹಿಟ್ಟು
  • ಮೊಟ್ಟೆ ಬಿಳಿಲೋಳೆ
  • ಜೇನುತುಪ್ಪ
  • ಲಿಂಬೆರಸ

ತಯಾರಿಸುವು ಹೇಗೆ?

1. ಮೊಟ್ಟೆಯಿಂದ ಅದರ ಬಿಳಿಭಾಗವನ್ನು ಪ್ರತ್ಯೇಕಿಸಿ ಮತ್ತು ಒಂದು ಪಿಂಗಾಣಿಗೆ ಹಾಕಿ.
2. ಲಿಂಬೆಯನ್ನು ತುಂಡು ಮಾಡಿಕೊಂಡು ಕೆಲವು ಹನಿರಸವನ್ನು ಮೊಟ್ಟೆಯ ಬಿಳಿಭಾಗಕ್ಕೆ ಹಾಕಿ.
3. ಇದನ್ನು ಸರಿಯಾಗಿ ಕಲಸಿಕೊಂಡು ಬಿಳಿ ನೊರೆ ಬರುವಂತೆ ಮಾಡಿ. ಲಿಂಬೆ ಹಾಕುವ ಕಾರಣ ಮೊಟ್ಟೆಯ ವಾಸನೆ ಬರದು.
4. 1 ಚಮಚ ಜೇನುತುಪ್ಪ ಮತ್ತು ಹೆಸರುಕಾಳು ಹಿಟ್ಟು ಹಾಕಿ ಮಿಶ್ರಣ ಮಾಡಿ.
5. ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿ. ಗಡ್ಡೆಗಳು ರಚನೆಯಾಗದಂತೆ ನೋಡಿ.
6. ಬಿಸಿ ನೀರಿನಿಂದ ಮುಖ ತೊಳೆದರೆ ಚರ್ಮದ ರಂಧ್ರವು ತೆರೆಯುವುದು.
7. ಒಂದು ಪ್ರಮಾಣದ ಪೇಸ್ಟ್ ನ್ನು ತೆಗೆದುಕೊಂಡು ಮುಖಕ್ಕೆ ಹಚ್ಚಿಕೊಳ್ಳಿ. ಕಣ್ಣಿನ ಭಾಗವನ್ನು ಬಿಟ್ಟು ವೃತ್ತಾಕಾರ ಮತ್ತು ಮೇಲ್ಮುಖವಾಗಿ ಹಚ್ಚಿಕೊಳ್ಳಿ.
8. 15-20 ನಿಮಿಷ ಕಾಲ ಮುಖದಲ್ಲಿ ಇದು ಹಾಗೆ ಇರಲಿ.
9. ನೀವು ಈ ಫೇಸ್ ಪ್ಯಾಕ್ ಹಚ್ಚಿಕೊಂಡ ಬಳಿಕ ಮಾತನಾಡಲು ಹೋಗಬೇಡಿ. ಯಾಕೆಂದರ ಇದು ಚರ್ಮಕ್ಕೆ ಅಂಟಿಕೊಂಡಿರುವ ಕಾರಣ ನೆರಿಗೆ ಬೀಳಬಹುದು.
10. 20 ನಿಮಿಷ ಬಿಟ್ಟು ಇದು ಒಣಗಿದೆಯಾ ಎಂದು ಪರೀಕ್ಷಿಸಿ. ಒಣಗಿದ್ದರೆ ಬಿಸಿ ನೀರಿನಿಂದ ಇದನ್ನು ಸ್ಕ್ರಬ್ ಮಾಡಿಕೊಳ್ಳಿ.
11. ಮುಖ ಒಣಗಿದ ಬಳಿಕ ನಿಮ್ಮ ಚರ್ಮಕ್ಕೆ ಹೊಂದಿಕೊಳ್ಳುವ ಮೊಶ್ಚಿರೈಸರ್ ಹಚ್ಚಿಕೊಳ್ಳಿ.

ಹೆಸರುಕಾಳಿನ ಹಿಟ್ಟಿನ ಲಾಭಗಳು

ಹೆಸರುಕಾಳಿನ ಹಿಟ್ಟಿನಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ ಮತ್ತು ಇದು ಚರ್ಮದ ರಂಧ್ರವನ್ನು ಆಳವಾಗಿ ಶುದ್ಧೀಕರಿಸಿ, ತ್ವಚೆಗೆ ಪೋಷಣೆ ನೀಡುವುದು. ಇದರಲ್ಲಿರುವ ವಯಸ್ಸಾಗುವ ಲಕ್ಷಣಗಳನ್ನು ತಡೆಯುವ ಗುಣಗಳು ಚರ್ಮಕ್ಕೆ ಬಿಗಿತ್ವ ನೀಡುವುದು ಮತ್ತು ಚರ್ಮವು ಸುಂದರ ಹಾಗೂ ಯೌವನಯುತವಾಗಿ ಕಾಣುವಂತೆ ಮಾಡುವುದು. ಚರ್ಮಕ್ಕೆ ಕಾಂತಿ ನೀಡಲು ಇದನ್ನು ನೀವು ಸೋಪ್ ಬದಲಿಗೆ ಬಳಸಬಹುದು.

ಮೊಟ್ಟೆಯ ಬಿಳಿಲೋಳೆಯ ಲಾಭಗಳು

ಮೊಟ್ಟೆಯ ಬಿಳಿ ಲೋಳೆಯಲ್ಲಿ ಪ್ರೋಟೀನ್ ಗಳಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಈ ಪ್ರೋಟೀನ್ ಗಳು ಚರ್ಮದ ಸ್ಥಿತಿಸ್ಥಾಪಕತ್ವ ಕಾಪಾಡುವುದು. ಮೊಟ್ಟೆಯ ಬಿಳಿ ಲೋಳೆಯಲ್ಲಿ ಇರುವಂತಹ ವಿಟಮಿನ್ ಎ ಮತ್ತು ಕಾಲಜನ್ ನೆರಿಗೆ ಮತ್ತು ಚರ್ಮದ ಸುಕ್ಕನ್ನು ಪರಿಣಾಮಕಾರಿಯಾಗಿ ನಿವಾರಿಸುವುದು. ಇದು ಚರ್ಮದಲ್ಲಿ ಮೇಧೋಗ್ರಂಥಿ ಸ್ರಾವ ಕಡಿಮೆ ಮಾಡುವುದು ಮತ್ತು ಚರ್ಮದಲ್ಲಿ ಎಣ್ಣೆಯಂಶ ಕಡಿಮೆ ಮಾಡುವುದು.

ಜೇನುತುಪ್ಪದ ಲಾಭಗಳು

ಜೇನುತುಪ್ಪವು ನೈಸರ್ಗಿಕ ಬ್ಲೀಚಿಂಗ್ ಆಗಿ ಕೆಲಸ ಮಾಡುವುದು. ಇದರಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಮತ್ತು ವಯಸ್ಸಾಗುವ ಲಕ್ಷಣಗಳನ್ನು ತಡೆಯುವ ಗುಣಗಳು ವಯಸ್ಸಾಗುವುದನ್ನು ನಿಧಾನಗೊಳಿಸುವುದು. ಜೇನುತುಪ್ಪದಲ್ಲಿ ಇರುವಂತಹ ಸೂಕ್ಷ್ಮಾಣು ವಿರೋಧಿ ಗುಣಗಳು ಚರ್ಮವನ್ನು ಬಿಸಿಲಿನ ಹಾನಿಕಾರಕ ಯುವಿ ಕಿರಣಗಳಿಂದ ರಕ್ಷಿಸುವುದು.

ಲಿಂಬೆಯ ಲಾಭಗಳು

ಲಿಂಬೆಯಲ್ಲಿರುವಂತಹ ವಿಟಮಿನ್ ಸಿ ಚರ್ಮದ ಹಲವಾರು ಸಮಸ್ಯೆ ನಿವಾರಣೆ ಮಾಡುವುದು. ಇದು ಚರ್ಮವನ್ನು ಕಿತ್ತುಹಾಕುವುದು. ಇದು ಚರ್ಮದ ಸತ್ತ ಕೋಶ ತೆಗೆದು, ಚರ್ಮವು ಕಾಂತಿ, ಆರೋಗ್ಯ ಮತ್ತು ಯೌವನ ಪಡೆಯಲು ನೆರವಾಗುವುದು. ಇದರ ಹೊರತಾಗಿ ಇದು ಮೊಡವೆ, ಬೊಕ್ಕೆ ಇತ್ಯಾದಿ ಸಮಸ್ಯೆಯನ್ನು ಪರಿಹರಿಸುವುದು.

English summary

Green Gram Flour Face Pack For Anti-ageing

Many of you might have this question in mind - can you actually slow down the early signs of ageing? And if yes, how? Early signs of ageing are influenced by a number of factors like overexposure to the sun, over usage of make-up, lifestyle, excessive smoking and drinking, etc. But there's nothing to worry. We have the solution to all your problems. Here is a DIY green gram flour face pack to treat wrinkles and fine lines at home.
X
Desktop Bottom Promotion