ಬ್ಯೂಟಿ ಟಿಪ್ಸ್: ಸುಲಭವಾಗಿ ತ್ವಚೆಯ ಮೇಲಿನ ಸಣ್ಣ ರಂಧ್ರಗಳನ್ನು ಶುದ್ಧೀಕರಿಸಿ

Posted By: Hemanth
Subscribe to Boldsky

ತ್ವಚೆಯಲ್ಲಿ ಹಲವಾರು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಇದಕ್ಕೆ ಕಾರಣವೇನೆಂದು ನಮಗೆ ತಿಳಿದೇ ಇರುವುದಿಲ್ಲ. ಚರ್ಮದಲ್ಲಿನ ರಂಧ್ರಗಳು ಸತ್ತ ಚರ್ಮದ ಕೋಶ, ಧೂಳು ಮತ್ತು ಕಲ್ಮಶದಿಂದ ತುಂಬಿದಾಗ ಮೊಡವೆ, ಬೊಕ್ಕೆ, ನಿಸ್ತೇಜ ಚರ್ಮ ಮತ್ತು ಇತರ ಹಲವಾರು ಸಮಸ್ಯೆಗಳು ಕಾಣಿಸುವುದು. ಇದರಿಂದ ಚರ್ಮದ ರಂಧ್ರಗಳನ್ನು ಶುದ್ಧೀಕರಿಸುವುದು ಅತೀ ಅಗತ್ಯ. ಚರ್ಮದ ರಂಧ್ರಗಳನ್ನು ತುಂಬಾ ಸುಲಭ ಹಾಗೂ ಪರಿಣಾಮಕಾರಿಯಾಗಿ ತೆರೆಯಲು ಕೆಲವೊಂದು ವಿಧಾನಗಳ ಬಗ್ಗೆ ಬೋಲ್ಡ್ ಸ್ಕೈ ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದೆ. ಇದರಿಂದ ನೀವು ಸುಂದರ ತ್ವಚೆ ಪಡೆಯಬಹುದು.

ಇದು ಪರೀಕ್ಷಿಸಿದ ಮತ್ತು ಪರಿಣಾಮಕಾರಿ ವಿಧಾನಗಳು

ಇದು ಚರ್ಮದ ರಂಧ್ರಗಳಣ್ನು ಸುಲಭವಾಗಿ ಶುದ್ಧೀಕರಿಸುವುದು. ಇದರಿಂದ ಚರ್ಮದ ಆರೋಗ್ಯಕ್ಕೆ ನೆರವಾಗುವುದು, ಮಾತ್ರವಲ್ಲದೆ ಮೊಡವೆ, ನಿಸ್ತೇಜ ಚರ್ಮದ ಸಮಸ್ಯೆ ದೂರವಿಡುವುದು. ಚರ್ಮದ ರಂಧ್ರದಲ್ಲಿ ಕುಳಿತುಕೊಂಡಿರುವ ಧೂಳು ಮತ್ತು ವಿಷಕಾರಿ ಅಂಶ ಹೊರಹಾಕಲು ಕೆಳಗೆ ಕೊಟ್ಟಿರುವ ಯಾವುದಾದರೂ ಒಂದನ್ನು ಪ್ರಯತ್ನಿಸಿದರೂ ನಿಮಗೆ ಫಲಿತಾಂಶ ಸಿಗುವುದು. ಅದು ಯಾವುದೆಂದು ನೀವೇ ಓದಿ.....

ಮುಖಕ್ಕೆ ಹಬೆಯಾಡಿಸುವುದು

ಮುಖದ ಚರ್ಮದ ರಂಧ್ರಗಳನ್ನು ತೆರೆಯಲು ಇದು ಒಳ್ಳೆಯ ವಿಧಾನ. ಮುಖಕ್ಕೆ ಹಬೆಯಾಡಿಸುವ ಮೂಲಕ ರಂಧ್ರದಲ್ಲಿ ಜಮೆಯಾಗಿರುವ ಕಲ್ಮಶ ಹೊರಹಾಕಬಹುದು. ಇದರಿಂದ ಶುದ್ಧ ಮತ್ತು ಬಿಳಿ ಚರ್ಮವು ನಿಮ್ಮದಾಗುವುದು. ವಾರದಲ್ಲಿ ಎರಡು ಸಲ ಮುಖಕ್ಕೆ ಹಬೆಯಾಡಿಸಿದರೆ ಆಗ ಒಳ್ಳೆಯ ಫಲಿತಾಂಶ ಪಡೆಯಬಹುದು. ಇದು ರಂಧ್ರಗಳನ್ನು ಶುದ್ಧೀಕರಿಸುವುದು ಮಾತ್ರವಲ್ಲದೆ, ಕೆಟ್ಟದಾಗಿ ಕಾಣಿಸುವಂತಹ ಮೊಡವೆಗಳನ್ನು ದೂರವಿಡುವುದು.

Pores on face

ಮೊಡವೆ ಸ್ಟ್ರಿಪ್

ಇಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ನಿಮಗೆ ಬೇಕಾಗಿರುವ ಹಲವಾರು ರೀತಿಯ ಮೊಡವೆ ಸ್ಟ್ರಿಪ್ ಗಳು ಸಿಗುವುದು. ಒಂದನ್ನು ಖರೀದಿಸಿಕೊಂಡು ಅದನ್ನು ಬಾಧಿತ ಜಾಗಕ್ಕೆ ಹಚ್ಚಿಕೊಳ್ಳಿ. ಇಂತಹ ಸ್ಟ್ರಿಪ್ ಖರೀದಿಸುವ ಮೊದಲು ಅದರ ಬಗ್ಗೆ ಸರಿಯಾಗಿ ಓದಿಕೊಳ್ಳಿ. ಇದು ನಿಮ್ಮ ಚರ್ಮಕ್ಕೆ ಹೊಂದಿಕೊಳ್ಳುತ್ತದೆಯಾ ಮತ್ತು ಯಾವುದೇ ಅಡ್ಡಪರಿಣಾಮಗಳು ಇಲ್ಲವೇ ಎಂದು ತಿಳಿಯಿರಿ.

ಅಡುಗೆ ಸೋಡಾದ ಪೇಸ್ಟ್

ಚರ್ಮದ ರಂಧ್ರಗಳನ್ನು ಶುದ್ಧೀಕರಿಸಲು ಇದು ತುಂಬಾ ಪರಿಣಾಮಕಾರಿಯಾಗಿದೆ. ಇದು ರಂಧ್ರಗಳ ಒಳಗಡೆ ಸಾಗಿ ಅಲ್ಲಿರುವ ಕಲ್ಮಶವನ್ನು ಹೊರಹಾಕುವುದು. ಒಂದು ಚಮಚ ಅಡುಗೆ ಸೋಡಾವನ್ನು ನೀರಿನೊಂದಿಗೆ ಮಿಶ್ರಣ ಮಾಡಿ ಪೇಸ್ಟ್ ಮಾಡಿ.

ಇದನ್ನು ಮುಖಕ್ಕೆ ಸರಿಯಾಗಿ ಹಚ್ಚಿಕೊಳ್ಳಿ ಮತ್ತು 5-10 ನಿಮಿಷ ಕಾಲ ಹಾಗೆ ಇರಲಿ.

ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.

ಮಾರುಕಟ್ಟೆಯಲ್ಲಿ ಸಿಗುವ ಸ್ಕ್ರಬ್

ಸತ್ತ ಚರ್ಮದ ಕೋಶಗಳನ್ನು ಕಿತ್ತುಹಾಕುವುದು ತುಂಬಾ ಪರಿಣಾಮಕಾರಿ ವಿಧಾನ ಮತ್ತು ಇದರಿಂದ ರಂಧ್ರಗಳು ಪರಿಣಾಮಕಾರಿ ಮತ್ತು ವೇಗವಾಗಿತೆರೆಯುವುದು. ನೀವು ಮಾರುಕಟ್ಟೆಗೆ ಹೋಗಿ ಅಲ್ಲಿ ನೋಡಿದರೆ ಹಲವಾರು ಬಗೆಯ ಹಾಗೂ ವಿವಿಧ ರೀತಿಯ ಸಾಮಗ್ರಿಗಳಿಂದ ಮಾಡಿರುವಂತಹ ಸ್ಕ್ರಬ್ ಸಿಗುವುದು. ಇದು ಕೆಲವೇ ನಿಮಿಷಗಳಲ್ಲಿ ರಂಧ್ರವನ್ನು ಶುದ್ಧೀಕರಿಸುವುದು. ನಿಮ್ಮ ಚರ್ಮಕ್ಕೆ ಹೊಂದಿಕೊಳ್ಳುವ ಯಾವುದೇ ರೀತಿಯ ಸ್ಕ್ರಬ್ ನ್ನು ಆಯ್ಕೆ ಮಾಡಿಕೊಳ್ಳಿ.

ಇದ್ದಿಲು ಮಾಸ್ಕ್

ರಂಧ್ರಗಳಲ್ಲಿ ತುಂಬಿಕೊಂಡಿರುವ ಕಲ್ಮಷ ಹೊರತೆಗೆಯಲು ಇದ್ದಿಲು ಮಾಸ್ಕ್ ತುಂಬಾ ಒಳ್ಳೆಯದು. ಇದು ರಂಧ್ರದಲ್ಲಿ ತುಂಬಿಕೊಂಡಿರುವ ಎಲ್ಲಾ ರೀತಿಯ ಕಲ್ಮಶವನ್ನು ಹೊರಹಾಕುವುದು. ಇದರಿಂದ ಚರ್ಮವು ತುಂಬಾ ಬಿಳಿ ಹಾಗೂ ಶುದ್ಧವಾಗಿ ಕಾಣೂವುದು. ನೀವು ಮನೆಯಲ್ಲೇ ಇದನ್ನು ತಯಾರಿಸಬಹುದು ಅಥವಾ ಮಾರುಕಟ್ಟೆಯಿಂದ ಖರೀದಿಸಬಹುದು. ಕೆಲವು ನಿಮಿಷಗಳಲ್ಲೇ ಇದು ರಂಧ್ರಗಳನ್ನು ಶುದ್ಧೀಕರಿಸುವುದು.

ಸಕ್ಕರೆ ಸ್ಕ್ರಬ್

ಸಕ್ಕರೆಯಲ್ಲಿ ಕಿತ್ತುಹಾಕುವಂತಹ ಗುಣಗಳು ಇರುವ ಕಾರಣದಿಂದ ಇದು ಚರ್ಮದ ಆರೈಕೆಯಲ್ಲಿ ತುಂಬಾ ಪರಿಣಾಮಕಾಗಿ ಸಾಮಗ್ರಿ. ಇದು ಚರ್ಮದಲ್ಲಿ ಆಳವಾಗಿ ಒಳಹೊಕ್ಕು ರಂಧ್ರಗಳಲ್ಲಿ ಇರುವಂತಹ ಕಲ್ಮಶವನ್ನು ಹೊರಹಾಕುವುದು.

ಒಂದು ಚಮಚ ಸಕ್ಕರೆ ಮತ್ತು ಸ್ವಲ್ಪ ಲಿಂಬೆರಸ ಮಿಶ್ರಣ ಮಾಡಿಕೊಳ್ಳಿ. ಇದನ್ನು ಮುಖಕ್ಕೆ ಸ್ಕ್ರಬ್ ಮಾಡಿ. ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.

ಲಿಂಬೆಯ ಚಿಕಿತ್ಸೆ

ತುಂಬಿರುವ ರಂಧ್ರಗಳ ಚಿಕಿತ್ಸೆಗೆ ಲಿಂಬೆಯು ಅದ್ಭುತವಾದ ಮದ್ದು. ಇದರಲ್ಲಿ ಇರುವಂತಹ ಆಮ್ಲೀಯ ಗುಣಗಳು ರಂಧ್ರದಲ್ಲಿ ಇರುವಂತಹ ಕಲ್ಮಶ ಮತ್ತು ವಿಷವನ್ನು ಹೊರಹಾಕುವುದು ಹಾಗೂ ಚರ್ಮದ ಪಿಎಚ್ ಮಟ್ಟವನ್ನು ಸಮತೋಲನದಲ್ಲಿಡುವುದು. ನಿಮ್ಮ ಫೇಸ್ ಮಾಸ್ಕ್ ಗೆ ಸ್ವಲ್ಪ ಲಿಂಬೆರಸ ಹಾಕಿಕೊಳ್ಳಿ ಅಥವಾ ಜೇನುತುಪ್ಪದ ಜತೆಗೆ ಹಾಕಿಕೊಂಡು ಚರ್ಮಕ್ಕೆ ಸ್ಕ್ರಬ್ ಮಾಡಿಕೊಳ್ಳಿ.

ಅಕ್ಕಿ ಹುಡಿಯ ಸ್ಕ್ರಬ್

ಚರ್ಮದ ರಂಧ್ರಗಳನ್ನು ಶುದ್ಧೀಕರಿಸಲು ಅಕ್ಕಿ ಹುಡಿಯ ಸ್ಕ್ರಬ್ ಅನ್ನು ಬಳಸಲಾಗುತ್ತದೆ. ಇದನ್ನು ಸುಲಭವಾಗಿ ಮನೆಯಲ್ಲೇ ತಯಾರಿಸಬಹುದು. ಇದು ಚರ್ಮದಲ್ಲಿ ಇರುವಂತಹ ಕಲ್ಮಶ ಮತ್ತು ವಿಷಕಾರಿ ಅಂಶಗಳನ್ನು ತೆಗೆದುಹಾಕುವುದು. 

1/2 ಚಮಚ ಅಕ್ಕಿ ಹುಡಿಯೊಂದಿಗೆ ಒಂದು ಚಮಚ ಹಾಲು ಹಾಕಿಕೊಂಡು ಪೇಸ್ಟ್ ಮಾಡಿ, ಇದನ್ನು ಮುಖಕ್ಕೆ ಹಚ್ಚಿ ಸ್ಕ್ರಬ್ ಮಾಡಿ. 

ಇದರ ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆದರೆ ಆಗ ಶುದ್ಧ ಹಾಗೂ ಸುಂದರ ತ್ವಚೆ ನಿಮ್ಮದಾಗುವುದು.

English summary

Get Rid Of Pores Easily With These Simple Hacks

These tried-and-tested methods can get the gunk out of your skin and within minutes reveal a clean and clear skin. These methods can also boost your skin's health and keep harrowing skin conditions like acne and dullness at bay.