For Quick Alerts
ALLOW NOTIFICATIONS  
For Daily Alerts

ಮೊಡವೆ ಕಲೆಗಳನ್ನು ನಿವಾರಿಸಲು 'ಗ್ರೀನ್ ಟೀ' ಬಳಸಿ ನೋಡಿ!

|

ಮುಖದ ಮೇಲಿನ ಮೊಡವೆಗಳು ಸೌಂದರ್ಯ ಕೆಡಿಸಿ, ಕಲೆಗಳು ಹಾಗೆ ಉಳಿಯುವಂತೆ ಮಾಡುವುದು. ಕೆಲವೊಮ್ಮೆ ಮೊಡವೆ ಹಾಗೂ ಇದರ ಕಲೆಗಳು ತುಂಬಾ ಹಠಮಾರಿಯಂತೆ ವರ್ತಿಸುವುದು. ಇದರಿಂದ ಅದನ್ನು ತೆಗೆಯಲು ತುಂಬಾ ಶ್ರಮ ಪಡಬೇಕಾಗುತ್ತದೆ. ಕೆಲವು ಮಹಿಳೆಯರು ಮೊಡವೆ ನಿವಾರಣೆ ಮಾಡಲು ಕೆಲವೊಂದು ಕ್ರೀಮ್ ಗಳನ್ನು ಬಳಸಿಕೊಂಡರೆ, ಇನ್ನು ಕೆಲವರು ಮೇಕಪ್ ಬಳಸಿಕೊಂಡು ಇದನ್ನು ಅಡಗಿಸಿಡಲು ಬಯಸುವರು. ಮೇಕಪ್ ಬಳಸಿ ಇದನ್ನು ತಾತ್ಕಾಲಿಕವಾಗಿ ತೆಗೆಯಬಹುದು. ಆದರೆ ಇದಕ್ಕೆ ಯಾವುದೇ ರೀತಿಯ ಶಾಶ್ವತ ಪರಿಹಾರವಿಲ್ಲವೇ ಎಂದು ಕೇಳಬಹುದು.

ಖಂಡಿತವಾಗಿಯೂ ಈ ಕಲೆಗಳ ನಿವಾರಣೆ ಮಾಡಲು ಕೆಲವೊಂದು ಮನೆಮದ್ದುಗಳು ತುಂಬಾ ನೆರವಾಗುವುದು. ಈ ಮೊಡವೆಯ ಕಲೆಗಳನ್ನು ಮನೆಮದ್ದುಗಳನ್ನು ಬಳಸಿಕೊಂಡು ನಿವಾರಿಸಬಹುದು. ಇದರಿಂದ ನೀವು ಶಾಶ್ವತ ಪರಿಹಾರ ಪಡೆಯಬಹುದು. ಇದಕ್ಕಾಗಿ ನೀವು ದುಬಾರಿ ಖರ್ಚು ಮಾಡಬೇಕಾಗಿಲ್ಲ ಮತ್ತು ಯಾವುದೇ ಅಡ್ಡಪರಿಣಾಮಗಳು ಇಲ್ಲ.

Green Tea

ಮನೆಮದ್ದುಗಳಲ್ಲಿ ಹಲವಾರು ಇವೆ. ಈ ಲೇಖನದಲ್ಲಿ ಗ್ರೀನ್ ಟೀ ಬಳಸಿಕೊಂಡು ಮೊಡವೆ ಕಲೆಗಳ ನಿವಾರಣೆ ಮಾಡುವುದು ಹೇಗೆ ಎಂದು ನಿಮಗೆ ತಿಳಿಸಿಕೊಡಲಿದ್ದೇವೆ. ಗ್ರೀನ್ ಟೀಯಲ್ಲಿ ಹೆಚ್ಚಿನ ಮಟ್ಟ ಆ್ಯಂಟಿಆಕ್ಸಿಡೆಂಟ್ ಗಳಿವೆ. ಇದು ಮೊಡವೆ ಹಾಗೂ ಅದರ ಕಲೆಗಳ ನಿವಾರಣೆ ಮಾಡಲು ಒಳ್ಳೆಯ ಔಷಧಿ. ಇದರಲ್ಲಿ ಉರಿಯೂತ ಶಮನಕಾರಿ ಮತ್ತು ಬ್ಯಾಕ್ಟೀರಿಯಾ ವಿರೋಧಿಗಳಿದ್ದು, ಇದು ಬ್ಯಾಕ್ಟೀರಿಯಾ ನಿವಾರಣೆ ಮಾಡುವುದು. ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್ ಕಲೆಗಳು ಹಾಗು ಗಾಯಗಳನ್ನು ಶಮನಗೊಳಿಸುವುದು. ಚರ್ಮದಲ್ಲಿನ ದೊಡ್ಡ ರಂಧ್ರಗಳನ್ನು ತೆರೆಯುವುದು. ಗ್ರೀನ್ ಟೀ ಬಳಸಿಕೊಂಡು ಮೊಡವೆ ಹಾಗೂ ಅದರ ಕಲೆ ನಿವಾರಿಸುವುದು ಹೇಗೆ ಎಂದು ಮುಂದೆ ಓದುತ್ತಾ ತಿಳಿಯಿರಿ. ಗ್ರೀನ್ ಟೀ ಬಳಸಿಕೊಂಡು ಮೊಡವೆ ಕಲೆ ನಿವಾರಣೆ ಹೇಗೆ?

ಗ್ರೀನ್ ಟೀ ಮತ್ತು ಕ್ಯಾರೆಟ್

ಗ್ರೀನ್ ಟೀ ಮತ್ತು ಕ್ಯಾರೆಟ್

ಬೇಕಾಗುವ ಸಾಮಗ್ರಿಗಳು

*2 ಚಮಚ ಗ್ರೀನ್ ಟೀ

*1 ಚಮಚ ಬೇಯಿಸಿ, ಹಿಚುಕಿದ ಕ್ಯಾರೆಟ್

Most Read: ಕೂದಲಿನ ಸೌಂದರ್ಯ ಹೆಚ್ಚಿಸಲು ಪಪ್ಪಾಯ ಹಣ್ಣಿನ ಹೇರ್ ಮಾಸ್ಕ್ ಬಳಸಿ

ತಯಾರಿಸುವುದು ಹೇಗೆ?

ತಯಾರಿಸುವುದು ಹೇಗೆ?

*ಕೆಲವು ತುಂಡು ಕ್ಯಾರೆಟ್ ಗಳನ್ನು ಬೇಯಿಸಿ ಮತ್ತು ಅದನ್ನು ತಂಪಾಗಲು ಬಿಡಿ.

*ಸ್ವಲ್ಪ ಗ್ರೀನ್ ಟೀ ಮಾಡಿ ಮತ್ತು ಅದಕ್ಕೆ ಕ್ಯಾರೆಟ್ ಹಾಕಿ.

*ಬಾಧಿತ ಜಾಗಕ್ಕೆ ಇದನ್ನು ಹಚ್ಚಿಕೊಳ್ಳಿ ಮತ್ತು ಕೆಲವು ನಿಮಿಷ ಕಾಲ ಹಾಗೆ ಬಿಡಿ.

*ತದನಂತರ ಶುದ್ಧ ನೀರಿನಿಂದ ತೊಳೆಯಿರಿ.

*ಫಲಿತಾಂಶಕ್ಕಾಗಿ ದಿನದಲ್ಲಿ ಒಂದು ಸಲ ಇದನ್ನು ಬಳಸಿ.

ಗ್ರೀನ್ ಟೀ ಮತ್ತು ಜೇನುತುಪ್ಪ

ಗ್ರೀನ್ ಟೀ ಮತ್ತು ಜೇನುತುಪ್ಪ

ಬೇಕಾಗುವ ಸಾಮಗ್ರಿಗಳು

*1 ಚಮಚ ಗ್ರೀನ್ ಟೀ

*1 ಚಮಚ ಜೇನುತುಪ್ಪ

ಬಳಸುವ ವಿಧಾನ

ಬಳಸುವ ವಿಧಾನ

*ಒಂದು ಚಮಚ ಜೇನುತುಪ್ಪ ಮತ್ತು ಗ್ರೀನ್ ಟೀಯನ್ನು ಸಣ್ಣ ಗಾಜಿನ ಪಿಂಗಾಣಿಯಲ್ಲಿ ಮಿಶ್ರಣ ಮಾಡಿ.

*ಈ ಮಿಶ್ರಣಕ್ಕೆ ಹತ್ತಿ ಉಂಡೆ ಅದ್ದಿಕೊಳ್ಳಿ ಮತ್ತು ಬಾಧಿತ ಜಾಗಕ್ಕೆ ಮಸಾಜ್ ಮಾಡಿಕೊಳ್ಳಿ.

*10-15 ನಿಮಿಷ ಕಾಲ ಹಾಗೆ ಬಿಡಿ ಮತ್ತು ಬೆಚ್ಚಗಿನ ನೀರಿನಿಂದ ತೊಳೆಯಿರಿ ಮತ್ತು ಇದು ಒಣಗಲು ಬಿಡಿ.

*ದಿನದಲ್ಲಿ ಎರಡು ಸಲ ಒಂದು ತಿಂಗಳ ಕಾಲ ಹಚ್ಚಿಕೊಳ್ಳಿ.

Most Read: ಮುಖದ ಕಾಂತಿ ಹೆಚ್ಚಿಸಲು ಹಾಗೂ ಇತರ ಸೌಂದರ್ಯ ಸಮಸ್ಯೆಗಳಿಗೆ 'ತುಳಸಿ ಎಲೆಗಳ' ಫೇಸ್ ಪ್ಯಾಕ್

ಗ್ರೀನ್ ಟೀ ಮತ್ತು ಲಿಂಬೆರಸ

ಗ್ರೀನ್ ಟೀ ಮತ್ತು ಲಿಂಬೆರಸ

ಬೇಕಾಗುವ ಸಾಮಗ್ರಿಗಳು

*2 ಚಮಚ ಗ್ರೀನ್ ಟೀ

*ಕೆಲವು ಹನಿ ಲಿಂಬೆರಸ

ಬಳಸುವ ವಿಧಾನ

ಬಳಸುವ ವಿಧಾನ

*ಒಂದು ಪಿಂಗಾಣಿಯಲ್ಲಿ ಗ್ರೀನ್ ಟೀ ಹಾಕಿ.

*ಇದಕ್ಕೆ ಲಿಂಬೆರಸ ಮತ್ತು ಗ್ರೀನ್ ಟೀ ಹಾಕಿ ಮಿಶ್ರಣ ಮಾಡಿಕೊಳ್ಳಿ.

*ಇದನ್ನು ಹತ್ತಿ ಉಂಡೆ ಬಳಸಿಕೊಂಡು ಬಾಧಿತ ಜಾಗಕ್ಕೆ ಹಚ್ಚಿಕೊಳ್ಳಿ.

*15-20 ನಿಮಿಷ ಕಾಲ ಹಾಗೆ ಬಿಡಿ ಮತ್ತು ಬಳಿಕ ತೊಳೆಯಿರಿ. ಉತ್ತಮ ಫಲಿತಾಂಶಕ್ಕಾಗಿ ದಿನದಲ್ಲಿ ಮೂರು ಸಲ ಬಳಸಿ.

ಗ್ರೀನ್ ಟೀ ಮತ್ತು ಟೊಮೆಟೋ

ಗ್ರೀನ್ ಟೀ ಮತ್ತು ಟೊಮೆಟೋ

ಬೇಕಾಗುವ ಸಾಮಗ್ರಿಗಳು

*2 ಚಮಚ ಗ್ರೀನ್ ಟೀ

*2 ಚಮಚ ಟೊಮೆಟೋ ರಸ

Most Read: ಮನೆಯಲ್ಲಿಯೇ ಮಾಡಿ ನೋಡಿ- ಹುಣಸೆ ಹಣ್ಣಿನ ಫೇಸ್ ಪ್ಯಾಕ್

ತಯಾರಿಸುವ ವಿಧಾನ

ತಯಾರಿಸುವ ವಿಧಾನ

*ಒಂದು ಸಣ್ಣ ಪಿಂಗಾಣಿಯಲ್ಲಿ ಟೊಮೆಟೋ ರಸ ಮತ್ತು ಗ್ರೀನ್ ಟೀ ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿ. *ಇದನ್ನು ಬಾಧಿತ ಜಾಗಕ್ಕೆ ಹಚ್ಚಿಕೊಳ್ಳಿ ಮತ್ತು 2-3 ನಿಮಿಷ ಕಾಲ ಹಾಗೆ ಮಸಾಜ್ ಮಾಡಿಕೊಳ್ಳಿ.

*10 ನಿಮಿಷ ಕಾಲ ಹಾಗೆ ಬಿಡಿ. ಬಿಸಿ ನೀರಿನಿಂದ ಮುಖ ತೊಳೆಯಿರಿ ಮತ್ತು ಒಣಗಲು ಬಿಡಿ.

*ದಿನದಲ್ಲಿ ಎರಡು ಸಲ ಬಳಸಿದರೆ ಉತ್ತಮ ಫಲಿತಾಂಶ ಪಡೆಯಬಹುದು.

*ಮೊಡವೆ ನಿವಾರಣೆ ಮಾಡಲು ಗ್ರೀನ್ ಟೀ ಯಾವ ರೀತಿಯಿಂದ ನೆರವಾಗುತ್ತದೆ ಎಂದು ನಿಮಗೆ ತಿಳಿದಿದೆ ತಾನೇ? *ಹಾಗಾದರೆ ಇನ್ನೇಕೇ ತಡ. ತಕ್ಷಣ ನೀವು ಗ್ರೀನ್ ಟೀ ಬಳಸಿಕೊಂಡು ಇದರ ಲಾಭ ಪಡೆಯಿರಿ.

English summary

Get Rid Of Acne Scars Using Green Tea

Loaded with antioxidants, green tea is one of the most popular treatments for getting rid of acne and acne scars. It contains anti-inflammatory and antimicrobial properties that kill acne-causing bacteria. The antioxidants present in green tea help to heal scars and marks left by acne. It also helps in unclogging large pores on your skin.
X
Desktop Bottom Promotion