For Quick Alerts
ALLOW NOTIFICATIONS  
For Daily Alerts

ಬಿಳಿ ತ್ವಚೆ ಪಡೆಯಲು ಕೆಲವು ನೈಸರ್ಗಿಕ ಫೇಸ್ ಮಾಸ್ಕ್‌ಗಳು

By Hemanth
|

ಪ್ರತಿಯೊಬ್ಬರಿಗೂ ತನ್ನ ಮೈಕಾಂತಿ ಬಿಳಿಯಾಗಿರಬೇಕೆಂಬ ಆಸೆ. ಹಿಂದಿನಿಂದಲೂ ದೇಹದ ವರ್ಣದ ಬಗ್ಗೆ ಅದಮ್ಯ ಪ್ರೀತಿ ಕಂಡುಬರುತ್ತಲಿದೆ. ಇದನ್ನೇ ಬಳಸಿಕೊಂಡು ಕಂಪೆನಿಗಳು ತ್ವಚೆಯ ವರ್ಣ ಬಿಳಿಯಾಗಿಸುವಂತಹ ಹಲವಾರು ರೀತಿಯ ಲೋಷನ್, ಕ್ರೀಮ್ ಮತ್ತು ಇತರ ಕೆಲವೊಂದು ಕಾಸ್ಮೆಟಿಕ್ ಗಳನ್ನು ಮಾರುಕಟ್ಟೆಗೆ ತರುತ್ತಲೇ ಇದೆ. ಇಂತಹ ಉತ್ಪನ್ನಗಳಿಂದ ಪಡೆಯುವಂತಹ ಬಿಳಿ ತ್ವಚೆಯು ಕೇವಲ ತಾತ್ಕಾಲಿಕ.

ಇದು ದಿನಗಳೆದಂತೆ ನಿಮ್ಮ ತ್ವಚೆಯ ಬಣ್ಣ ಮತ್ತೆ ಹಿಂದಿನಂತೆ ಆಗುವಂತೆ ಮಾಡುವುದು. ಆದರೆ ಕೆಲವೊಂದು ನೈಸರ್ಗಿಕ ಸಾಮಗ್ರಿಗಳಿಂದ ಮೈಕಾಂತಿಯನ್ನು ಬಿಳಿಯಾಗಿಸಬಹುದು. ಇದರಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳು ಕೂಡ ಇಲ್ಲ. ಕಾಂತಿಯುತ ತ್ವಚೆ ಪಡೆಯಲು ಕೆಲವೊಂದು ನೈಸರ್ಗಿಕ ಸಾಮಗ್ರಿಗಳ ಬಗ್ಗೆ ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಾಗುವುದು. ಇಲ್ಲಿ ಕೊಟ್ಟಿರುವ ಹತ್ತು ತ್ವಚೆಯನ್ನು ಬಿಳಿಯಾಗಿಸುವ ಸಾಮಗ್ರಿಗಳಲ್ಲಿ ನೀವು ಒಂದು ಬಳಸಿಕೊಂಡು ಕಾಂತಿಯು ತ್ವಚೆ ಪಡೆಯಬಹುದು. ಈ ಮನೆಮದ್ದನ್ನು ಬಳಸುವ ಮೊದಲು ನೀವು ಮುಖವನ್ನು ಸರಿಯಾಗಿ ತೊಳೆದುಕೊಂಡು ಕೊಳೆ ಹಾಗೂ ಕಲ್ಮಷವನ್ನು ಒರೆಸಿಕೊಳ್ಳಿ.

face glowing

ಕಡಲೆಹಿಟ್ಟು+ಅರಶಿನ+ಹಾಲಿನಕೆನೆ+ರೋಸ್ ವಾಟರ್
ಎರಡು ಚಮಚ ಕಡಲೆ ಹಿಟ್ಟು , ಒಂದು ಚಿಟಿಕೆ ಅರಶಿನ ಹುಡಿ, ಒಂದು ಚಮಚ ಹಾಲಿನ ತಾಜಾ ಕೆನೆ ಮತ್ತು ಕೆಲವು ಹನಿ ರೋಸ್ ವಾಟರ್ ಹಾಕಿಕೊಂಡು ದಪ್ಪಗಿನ ಪೇಸ್ಟ್ ಮಾಡಿ. ನಿಮ್ಮ ಚರ್ಮವು ತುಂಬಾ ಒಣಗಿದ್ದರೆ ಇದಕ್ಕೆ ಕೆಲವು ಹನಿ ತೆಂಗಿನೆಣ್ಣೆ ಹಾಕಿಕೊಳ್ಳಿ. ಎಣ್ಣೆಯಂಶವಿರುವ ಚರ್ಮದವರು ಹಾಲಿನ ಕೆನೆ ಅಥವಾ ತೆಂಗಿನೆಣ್ಣೆ ಹಾಕಬೇಡಿ. ಕಣ್ಣಿನ ಭಾಗ ಬಿಟ್ಟು ಮುಖ ಪೂರ್ತಿಯಾಗಿ ಇದನ್ನು ಹಚ್ಚಿಕೊಳ್ಳಿ. ಇದು ಸಂಪೂರ್ಣವಾಗಿ ಒಣಗಲಿ ಮತ್ತು ಬಿಸಿ ನೀರಿನಿಂದ ತೊಳೆಯಿರಿ.

ಲಾಭಗಳು
ಕಡಲೆಹಿಟ್ಟು ಹೆಚ್ಚುವರಿ ಎಣ್ಣೆಯು ಜಮೆಯಾಗದಂತೆ ನೋಡಿಕೊಳ್ಳುವುದು ಮಾತ್ರವಲ್ಲದೆ ಪಿಎಚ್ ಮಟ್ಟ ಕಾಪಾಡುವುದು. ಇದು ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಿ, ಹೊಸ ಕೋಶಗಳು ಬೆಳೆಯಲು ನೆರವಾಗುವುದು. ಅರಶಿನವು ಮೊಡವೆ, ಬೊಕ್ಕೆ, ಕಪ್ಪು ಕಲೆ ಮತ್ತು ಗಾಯದ ಕಲೆಗಳಿಗೆ ಒಳ್ಳೆಯ ಪರಿಹಾರ. ಅರಿಶಿನದಲ್ಲಿ ಇರುವಂತಹ ಕುರ್ಕ್ಯುಮಿನ್ ಎನ್ನುವ ಅಂಶವು ಮೆಲಿನಿನ್ ಉತ್ಪತ್ತಿಯನ್ನು ಹೆಚ್ಚಿಸುವುದು. ಹಾಲಿನ ಕೆನೆಯು ಕ್ಲೆನ್ಸರ್ ಆಗಿ ಕೆಲಸ ಮಾಡಿ ಚರ್ಮಕ್ಕೆ ಮಾಯಿಶ್ಚಿರೈಸರ್ ನೀಡುವುದು.

ಲಿಂಬೆ+ಜೇನುತುಪ್ಪ
ಎರಡು ಚಮಚ ಲಿಂಬೆರಸ ಮತ್ತು ಒಂದು ಚಮಚ ಜೇನುತುಪ್ಪ ಹಾಕಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಕಣ್ಣಿನ ಭಾಗ ಬಿಟ್ಟು ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ. 15 ನಿಮಿಷ ಹಾಗೆ ಬಿಟ್ಟು ಬಳಿಕ ಹಗುರಬೆಚ್ಚಗಿನ ನೀರಿನಿಂದ ತೊಳೆಯಿರಿ. ವಾರದಲ್ಲಿ ಎರಡು ಸಲ ಇದನ್ನು ಅನುಸರಿಸಿ. ಲಿಂಬೆಯಲ್ಲಿ ಇರುವಂತಹ ವಿಟಮಿನ್ ಸಿ ಚರ್ಮವನ್ನು ಬಿಳಿಯಾಗಿಸುವುದು ಮತ್ತು ಕಪ್ಪು ಕಲೆ ತೆಗೆದು, ಕಾಂತಿ ನೀಡುವುದು. ಆ್ಯಂಟಿಆಕ್ಸಿಡೆಂಟ್ ನಿಂದ ಸಮೃದ್ಧವಾಗಿರುವಂತಹ ಈ ಫೇಸ್ ಪ್ಯಾಕ್ ಚರ್ಮದ ರಂಧ್ರಗಳನ್ನು ತುಂಬಿ, ಮೊಡವೆಗಳು ಉಂಟು ಮಾಡುವಂತಹ ಬ್ಯಾಕ್ಟೀರಿಯಾ ದೂರ ಮಾಡುವುದು. ಲಿಂಬೆ ಮತ್ತು ಜೇನುತುಪ್ಪದಲ್ಲಿ ಬ್ಲೀಚಿಂಗ್ ಗುಣಗಳು ಇವೆ. ಇದು ಮೆಲನಿನ್ ಉತ್ಪತ್ತಿ ಮಾಡಿ, ತ್ವಚೆ ಬಿಳಿಯಾಗಿಸುವುದು.

ಸೌತೆ ಕಾಯಿ
ಸೌತೆಕಾಯಿ ಜ್ಯೂಸ್ ನ ಫೇಸ್ ಪ್ಯಾಕ್ ಮಾಡಿಕೊಳ್ಳಿ. ಇದಕ್ಕೆ ಕೆಲವು ಹನಿ ಲಿಂಬೆ ರಸ ಹಾಕಿ. ಇದನ್ನು ಹತ್ತಿ ಉಂಡೆ ಬಳಸಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ. ಕಪ್ಪಾಗಿರುವ ಭಾಗಕ್ಕೆ ಸರಿಯಾಗಿ ಹಚ್ಚಿಕೊಳ್ಳಿ. ಇದನ್ನು ಒಣಗಲು ಬಿಡಿ ಮತ್ತು ಬಳಿಕ ತೊಳೆಯಿರಿ.

ಲಾಭಗಳು
ನೀವು ಬಿಸಿಲಿನಲ್ಲಿ ಕೆಲಸ ಮಾಡುವವರಾದರೆ ಇದು ಒಳ್ಳೆಯ ಪರಿಹಾರ. ಸೌತೆಕಾಯಿ ಜ್ಯೂಸ್ ಬಿಸಿಲಿನಿಂದ ಆಗಿರುವ ಕಲೆ, ಕಪ್ಪುಕಲೆ ಮತ್ತು ಮೊಡವೆ ನಿವಾರಣೆ ಮಾಡುವುದು. ಲಿಂಬೆರಸವು ಚರ್ಮವನ್ನು ಬಿಳಿಗೊಳಿಸಲು ಪ್ರಮುಖ ಸಾಮಗ್ರಿ.

ಪಪ್ಪಾಯಿ+ಲಿಂಬೆರಸ +ಹಾಲು
ಒಂದು ತುಂಡು ಪಪ್ಪಾಯಿ, ಒಂದು ಚಮಚ ಲಿಂಬೆರಸ ಮತ್ತು ಒಂದು ಚಮಚ ಹಾಲನ್ನು ಸೇರಿಸಿಕೊಂಡು ಪೇಸ್ಟ್ ಮಾಡಿ. ಇದನ್ನು ಕಣ್ಣಿನ ಭಾಗ ಬಿಟ್ಟು ಮುಖ ಪೂರ್ತಿಯಾಗಿ ಹಚ್ಚಿಕೊಳ್ಳಿ. ಸುಮಾರು 20 ನಿಮಿಷ ಕಾಲ ಹಾಗೆ ಬಿಡಿ. ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.

ಲಾಭಗಳು
ಲಿಂಬೆರಸವು ಚರ್ಮಕ್ಕೆ ಕಾಂತಿ ನೀಡುವ ಪ್ರಮುಖ ಸಾಮಗ್ರಿ. ಇದನ್ನು ಪಪ್ಪಾಯಿ ಜತೆಗೆ ಮಿಶ್ರಣ ಮಾಡುವುದರಿಂದ ಇದರ ಫಲಿತಾಂಶ ದುಪ್ಪಟ್ಟಾಗುವುದು. ಲಿಂಬೆ ಮತ್ತು ಪಪ್ಪಾಯಿಯಲ್ಲಿ ಕೆಲವೊಂದು ಬ್ಲೀಚಿಂಗ್ ಗುಣಗಳೇ ಇದಕ್ಕೆ ಕಾರಣ. ಲಿಂಬೆಯು ಎಣ್ಣೆಯಂಶವಿರುವ ಚರ್ಮಕ್ಕೆ ತುಂಬಾ ಒಳ್ಳೆಯದು. ಒಣ ಚರ್ಮವಿದ್ದರೆ ಆಗ ನೀವು ಹಾಲನ್ನು ಮಿಶ್ರಣ ಮಾಡಿಕೊಳ್ಳಿ. ಹಾಲು ಕೂಡ ಒಳ್ಳೆಯ ಕ್ಲೆನ್ಸರ್.

ಮುಲ್ತಾನಿ ಮಿಟ್ಟಿ+ಸೌತೆಕಾಯಿ+ರೋಶ್ ವಾಟರ್
ಎರಡು ಚಮಚ ಮುಲ್ತಾನಿ ಮಿಟ್ಟಿ, 5ರಿಂದ 6 ಸೌತೆಕಾಯಿ ತುಂಡುಗಳು ಮತ್ತು ಎರಡು ಚಮಚ ರೋಸ್ ವಾಟರ್ ಹಾಕಿ ರುಬ್ಬಿಕೊಂಡು ಪೇಸ್ಟ್ ಮಾಡಿ. ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ ಮತ್ತು 15 ನಿಮಿಷ ಕಾಲ ಹಾಗೆ ಬಿಡಿ. ಉಗುರುಬೆಚ್ಚಗಿನ ನೀರಿನಿಂದ ತೊಳೆದು ಒರೆಸಿಕೊಳ್ಳಿ.

ಲಾಭಗಳು
ಮುಲ್ತಾನಿ ಮಿಟ್ಟಿ ಮತ್ತು ಸೌತೆಕಾಯಿ ರಸವು ಚರ್ಮದ ಕಾಂತಿ ವೃದ್ಧಿಸುವುದು. ರೋಸ್ ವಾಟರ್ ಚರ್ಮಕ್ಕೆ ಗುಲಾಬಿ ಬಣ್ಣ ನೀಡುವುದು. ಖನಿಜಾಂಶಗಳು ಹೆಚ್ಚಾಗಿರುವಂತಹ ಮುಲ್ತಾನಿ ಮಿಟ್ಟಿಯು ಶುದ್ಧೀಕರಿಸಿ, ಎಣ್ಣೆ ಹೀರಿಕೊಳ್ಳುವ ಮತ್ತು ಬ್ಲೀಚಿಂಗ್ ಗುಣಗಳನ್ನು ಹೊಂದಿದೆ. ಇದು ಚರ್ಮಕ್ಕೆ ಮಾಯಿಶ್ಚರೈಸರ್ ನೀಡುವುದು.

ಸೌತೆಕಾಯಿ+ ಪಪ್ಪಾಯಿ+ಅವಕಾಡೋ
ಎಲ್ಲಾ ಹಣ್ಣುಗಳು ಚರ್ಮಕ್ಕೆ ತುಂಬಾ ಒಳ್ಳೆಯದು. ಅದರಲ್ಲೂ ಸಿಟ್ರಸ್ ಹಣ್ಣುಗಳು ತುಂಬಾ ಲಾಭಕಾರಿ. ಇದರಲ್ಲಿರುವ ವಿಟಮಿನ್ ಸಿ ಅಂಶವು ಚರ್ಮಕ್ಕೆ ಒಳ್ಳೆಯದು. ಸೌತೆಕಾಯಿ, ಪಪ್ಪಾಯಿ ಮತ್ತು ಅವಕಾಡೋ ಮಿಶ್ರಣ ಮಾಡಿಕೊಂಡು ಚರ್ಮದ ಕಾಂತಿ ಹೆಚ್ಚಿಸಬಹುದು. ಈ ಎಲ್ಲಾ ಹಣ್ಣುಗಳ ತಿರುಳು ತೆಗೆದು ಅದನ್ನು ಜತೆಯಾಗಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. 20 ನಿಮಿಷ ಕಾಲ ಹಾಗೆ ಬಿಡಿ. ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.

ಲಾಭಗಳು
ಸೌತೆಕಾಯಿ, ಅವಕಾಡೋ ಮತ್ತು ಪಪ್ಪಾಯಿ ಚರ್ಮಕ್ಕೆ ಒಳ್ಳೆಯ ಕಾಂತಿ ನೀಡುವುದು. ಸೌತೆಕಾಯಿ ಮತ್ತು ಪಪ್ಪಾಯಿಯ ಲಾಭಗಳನ್ನು ಈಗಾಗಲೇ ಹೇಳಲಾಗಿದೆ. ಅವಕಾಡೋದಲ್ಲಿ ಆರೋಗ್ಯಕಾರಿ ಕೊಬ್ಬಿನಾಂಶವಿದೆ. ಇದು ಚರ್ಮಕ್ಕೆ ಮೊಶ್ಚಿರೈಸರ್ ನೀಡುವುದು. ಇದರಿಂದ ಉರಿಯೂತ ಕಡಿಮೆಯಾಗುವುದು ಮತ್ತು ಕಾಂತಿಯುತ ತ್ವಚೆ ನಿಮ್ಮದಾಗುವುದು.

ಶ್ರೀಗಂಧ ಮತ್ತು ರೋಸ್ ವಾಟರ್
ಸಾವಯವ ಶ್ರೀಗಂಧದ ಹುಡಿ ಬಳಸಿ. ಯಾಕೆಂದರೆ ಕೆಲವೊಂದಕ್ಕೆ ರಾಸಾಯನಿಕ ಬೆರೆಸಿರುವರು. ಶ್ರೀಗಂಧದ ತುಂಡನ್ನು ಕಲ್ಲಿಗೆ ಉಜ್ಜಿಕೊಂಡು ಅದರ ಪೇಸ್ಟ್ ಪಡೆಯಿರಿ. ಎರಡು ಚಮಚ ಶ್ರೀಗಂಧದ ಹುಡಿ ಮತ್ತು ಎರಡು ಚಮಚ ರೋಸ್ ವಾಟರ್ ಹಾಕಿಕೊಳ್ಳಿ. ಇದರ ಪೇಸ್ಟ್ ಮಾಡಿಕೊಂಡು ಸರಿಯಾಗಿ ಮುಖಕ್ಕೆ ಹಚ್ಚಿಕೊಳ್ಳಿ. ಇದು ಒಣಗುವ ತನಕ ಹಾಗೆ ಬಿಡಿ. ಉಗುರುಬೆಚ್ಚಗಿನ ನೀರಿನಿಂದ ತೊಳೆದ ಬಳಿಕ ಒರೆಸಿಕೊಳ್ಳಿ.

ಲಾಭಗಳು
ಶ್ರೀಗಂಧವು ಹಿಂದಿನಿಂದಲೂ ತ್ವಚೆಯ ಆರೈಕೆಗೆ ಬಳಸಲಾಗುತ್ತಾ ಇದೆ. ಹಿಂದಿನ ಕಾಲದಲ್ಲಿ ಮಹಿಳೆಯರು ಶ್ರೀಗಂಧವನ್ನು ಹಚ್ಚಿಕೊಂಡು ಆರೋಗ್ಯಕಾರಿ ತ್ವಚೆ ಪಡೆಯುತ್ತಲಿದ್ದರು. ಶ್ರೀಗಂಧವು ಕಲೆ ನಿವಾರಿಸಿ, ವಯಸ್ಸಾಗುವ ಲಕ್ಷಣ ತಡೆಯುವುದು. ಇದು ಕಾಂತಿಯುತ ತ್ವಚೆಗೆ ತುಂಬಾ ಒಳ್ಳೆಯದು.

ಟೊಮೆಟೋ
ಸಮಯದ ಅಭಾವದಿಂದ ಮುಖದಲ್ಲಿನ ಕಪ್ಪು ಕಲೆಗಳ ನಿವಾರಣೆ ಮಾಡುವುದು ಹೇಗೆ ಎನ್ನುವ ಪ್ರಶ್ನೆ ನಿಮ್ಮನ್ನು ಕಾಡುತ್ತಲಿರಬಹುದು. ಆದರೆ ಹಣ್ಣಾದ ಟೊಮೆಟೋ ಬಳಸಿಕೊಂಡು ಕಾಂತಿಯುತ ತ್ವಚೆ ಪಡೆಯಬಹುದು. ಒಂದು ಹಣ್ಣಾದ ಟೊಮೆಟೋ ತೆಗೆದುಕೊಳ್ಳಿ, ಇದನ್ನು ಸರಿಯಾಗಿ ತೊಳೆಯಿರಿ ಮತ್ತು ಇದರ ರಸ ತೆಗೆಯಿರಿ. ಇದನ್ನು ಮುಖಕ್ಕೆ ಹಚ್ಚಿಕೊಂಡು 20 ನಿಮಿಷ ಕಾಲ ಹಾಗೆ ಬಿಡಿ ಮತ್ತು ಉಗುರು ಬೆಚ್ಚಗಿನ ನೀಡಿನಿಂದ ತೊಳೆಯಿರಿ. ಇದನ್ನು ಪ್ರತಿನಿತ್ಯ ಬಳಸಿದರೆ ಒಳ್ಳೆಯ ಫಲಿತಾಂಶ ಸಿಗುವುದು.

ಲಾಭಗಳು
ಟೊಮೆಟೋದಲ್ಲಿರುವಂತಹ ವಿಟಮಿನ್ ಗಳು ಹಾಗೂ ಖನಿಜಾಂಶಗಳು ಚರ್ಮಕ್ಕೆ ಶಮನ ನೀಡುವುದು ಮತ್ತು ತೇವಾಂಶದಿಂದ ಇರುವಂತೆ ಮಾಡುವುದು. ಇದು ವಯಸ್ಸಾಗುವ ಲಕ್ಷಣಗಳನ್ನು ತಡೆಯುವುದು ಮತ್ತು ಕೋಶಗಳು ಆರೋಗ್ಯಕಾರಿಯಾಗಿ ಉತ್ಪತ್ತಿಯಾಗಲು ನೆರವಾಗುವುದು. ಟೊಮೆಟೋದಲ್ಲಿರುವ ಗುಣಗಳು ಚರ್ಮದ ಬಣ್ಣ ಬಿಳಿಯಾಗಿಸುವುದು. ಟೊಮೆಟೋದಲ್ಲಿರುವ ಲೈಕೊಪೆನೆ ಎನ್ನುವ ಅಂಶವು ಹಾನಿಕಾರಕ ಯುವಿ ಕಿರಣಗಳಿಂದ ನಿಮ್ಮನ್ನು ರಕ್ಷಿಸುವುದು.

ಕಿತ್ತಳೆ ಸಿಪ್ಪೆ ಮತ್ತು ಹಾಲು
ಕಿತ್ತಳೆ ಸಿಪ್ಪೆ ತೆಗೆದು ಅದನ್ನು ಒಣಗಿಸಿ ಹುಡಿ ಮಾಡಿಕೊಳ್ಳಿ. ಕಿತ್ತಳೆ ರಸ ತೆಗೆಯಿರಿ. ಒಂದು ಸಣ್ಣ ಪಿಂಗಾಣಿಯಲ್ಲಿ ಎರಡು ಚಮಚ ಕಿತ್ತಳೆ ಹುಡಿ, ಒಂದು ಚಮಚ ಹಸಿ ಹಾಲು ಮತ್ತು ಎರಡು ಚಮಚ ಕಿತ್ತಳೆ ರಸ ಹಾಕಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಮುಖಕ್ಕೆ ಪೂರ್ತಿಯಾಗಿ ಹಚ್ಚಿಕೊಳ್ಳಿ. 20 ನಿಮಿಷ ಕಾಲ ಹಾಗೆ ಇರಲಿ. ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದು ಮುಖದ ಚರ್ಮಕ್ಕೆ ಒಳ್ಳೆಯ ರೀತಿ ಕೆಲಸ ಮಾಡುವುದು.

ಲಾಭಗಳು
ಎಲ್ಲಾ ಸಿಟ್ರಸ್ ಹಣ್ಣುಗಳಲ್ಲಿ ಬ್ಲೀಚಿಂಗ್ ಗುಣಗಳು ಇವೆ. ಮತ್ತು ಇದು ಚರ್ಮವನ್ನು ಬಿಳಿಯಾಗಿಸುವುದು. ಕಿತ್ತಳೆ ಹಣ್ಣಿನ ಸಿಪ್ಪೆಯಲ್ಲಿ ಆ್ಯಂಟಿಆಕ್ಸಿಡೆಂಟ್ ಸಮೃದ್ಧವಾಗಿದೆ ಮತ್ತು ದಿನನಿತ್ಯ ಇದನ್ನು ಬಳಸುವುದರಿಂದ ಶುದ್ಧ, ಕಾಂತಿಯುತ ಚರ್ಮ ಪಡೆಯಬಹುದು. ಕಿತ್ತಳೆ ಸಿಪ್ಪೆಯಲ್ಲಿ ಸೂಕ್ಷ್ಮಾಣುವಿರೋಧಿ ಗುಣಗಳು ಇವೆ ಮತ್ತು ಮೊಡವೆ ಹಾಗೂ ಎಣ್ಣೆಯುಕ್ತ ಚರ್ಮಕ್ಕೆ ಇದು ತುಂಬಾ ಸಹಕಾರಿ. ಇದು ಕಪ್ಪು ಕಲೆಗಳು ಮತ್ತು ಮೊಡವೆ ನಿವಾರಿಸುವುದು.

ಅಲೋವೆರಾ ಮತ್ತು ತಣ್ಣಗಿನ ಹಾಲು
ಮಾರುಕಟ್ಟೆಯಲ್ಲಿ ಸಿಗುವ ಅಲೋವೆರಾ ಜೆಲ್ ಅಥವಾ ತಾಜಾ ಅಲೋವೆರಾ ಗಿಡದಿಂದ ಲೋಳೆ ತೆಗೆಯಬಹುದು. ಎರಡು ಚಮಚ ಅಲೋವೆರಾ ಲೋಳೆ, ಒಂದು ಚಮಚ ಹಾಲು ಹಾಕಿಕೊಂಡು ಪೇಸ್ಟ್ ಮಾಡಿ. ಇದನ್ನು ಫ್ರಿಡ್ಜ್ ನಲ್ಲಿಡಿ ಮತ್ತು ಮುಖಕ್ಕೆ ಕ್ರೀಮ್ ಆಗಿ ಬಳಸಿಕೊಳ್ಳಿ. ಐದು ನಿಮಿಷ ಕಾಲ ಹಾಗೆ ಬಿಡಿ ಮತ್ತು ತಣ್ಣಗಿನ ನೀರಿನಲ್ಲಿ ಹತ್ತಿ ಉಂಡೆ ಅದ್ದಿಕೊಂಡು ಹಾಕಿ ಅದರಿಂದ ಮುಖ ಒರೆಸಿಕೊಳ್ಳಿ. ದಿನದಲ್ಲಿ ಒಂದು ಸಲ ಹೀಗೆ ಮಾಡಿ.

ಲಾಭಗಳು
ಅಲೋವೆರಾ ಜೆಲ್ ನಲ್ಲಿ ಶೇ. 96ರಷ್ಟು ನೀರಿನಾಂಶವಿದೆ ಮತ್ತು ಇದು ತ್ವಚೆಗೆ ತೇವಾಂಶ ಒದಗಿಸುವುದು. ಇದರಲ್ಲಿ ಇರುವ ಪೋಷಕಾಂಶಗಳು, ಕಿಣ್ವಗಳು, ಸಾಲಿಸಿಲಿಕ್ ಆಮ್ಲ ಮತ್ತು ಸಪೋನಿನ್ ಗಳು, ಖನಿಜಾಂಶಗಳಾದ ಮೆಗ್ನಿಶಿಯಂ, ಸತು ಇತ್ಯಾದಿ ಸೂರ್ಯನ ಬಿಸಿಲು ಮತ್ತು ಕಲುಷಿತ ವಾತಾವರಣದಿಂದ ಕಾಪಾಡುವುದು. ಇದು ಮೆಲನಿನ್ ಉತ್ಪತ್ತಿ ಹೆಚ್ಚಿಸುವುದು ಮತ್ತು ಚರ್ಮದ ಬಣ್ಣ ಬಿಳಿಯಾಗಿಸುವುದು. ಇಷ್ಟೆಲ್ಲಾ ಮನೆಮದ್ದುಗಳು ಇರುವಾಗ ನೀವು ಚರ್ಮ ಬಿಳಿಯಾಗಿಸಲು ಬೇರೆ ಯಾವುದೇ ರೀತಿಯ ಕ್ರೀಮ್ ಗಳನ್ನು ಬಳಸಬೇಕೆಂದಿಲ್ಲ.

English summary

Get Instant Fairness With These Top 10 Hacks

The market today is flooded with lotions, creams, and other cosmetics that promise an instant fairness. But, the fairness so obtained may seem only temporary, and will vanish once you stop using the cream or product. However, we have plenty of natural options for instant fairness available right in our kitchen counters. Moreover, you can never run out of stock with these and are safe enough to be used even by people with sensitive skin.
X
Desktop Bottom Promotion