ಸುಂದರವಾಗಿ ಕಾಣಬೇಕೆ? ಹಾಗಾದರೆ ಈ ಸರಳ ಟಿಪ್ಸ್ ಅನುಸರಿಸಿ

Posted By: Divya pandith
Subscribe to Boldsky

ಹೊಳೆಯುವ ತ್ವಚೆ, ಆಕರ್ಷಣೆಯ ಬಣ್ಣ ಹಾಗೂ ಕೋಮಲತೆಯನ್ನು ಹೊಂದುವುದು ಯಾರಿಗೆ ಇಷ್ಟ ಇರುವುದಿಲ್ಲ ಹೇಳಿ? ಹೌದು, ಸಾಮಾನ್ಯವಾಗಿ ಎಲ್ಲರೂ ತಮ್ಮ ಚರ್ಮವು ಹೆಚ್ಚು ಆರೋಗ್ಯ ಹಾಗೂ ಆಕರ್ಷಣೆಯಿಂದ ಕೂಡಿರಬೇಕು ಎಂದೇ ಬಯಸುತ್ತಾರೆ. ಆದರೆ ದೈನಂದಿನ ಗಡಿಬಿಡಿಯ ಜೀವನ. ಅನುಚಿತ ಆರೈಕೆ, ಕಲುಷಿತ ಆಹಾರ ಮತ್ತು ಮಾಲಿನ್ಯಗಳಿಂದ ಅನೇಕ ಬಗೆಯ ಚರ್ಮ ಸಮಸ್ಯೆಯನ್ನು ಅನುಭವಿಸುತ್ತಾರೆ.

ಇದರೊಟ್ಟಿಗೆ ಬಹುಬೇಗ ಸಮಸ್ಯೆಯಿಂದ ಹೊರ ಬರಲು ಬಗೆ ಬಗೆಯ ಸೌಂದರ್ಯ ವರ್ಧಕ ಉತ್ಪನ್ನಗಳನ್ನು ಬಳಸುತ್ತೇವೆ. ಆದರೆ ಇದರ ಅಡ್ಡ ಪರಿಣಾಮದಿಂದ ಇನ್ನಿತರ ಸಮಸ್ಯೆಗಳನ್ನು ನಾವು ಎದುರಿಸುವ ಸಾಧ್ಯತೆಗಳೇ ಹೆಚ್ಚಿರುತ್ತವೆ. ನಿಮ್ಮ ಸಮಸ್ಯೆಗಳಿಗೆ ಬಲು ಸುಲಭವಾಗಿ ಹಾಗೂ ಸರಳ ವಿಧಾನಗಳ ಮೂಲಕ ಆರೈಕೆಯನ್ನು ಪಡೆಯಬಹುದು. ಈ ಆರೈಕೆಯ ಪದ್ಧತಿಯ ವಿಧಿ-ವಿಧಾನಗಳನ್ನು ಬೋಲ್ಡ್ ಸ್ಕೈ ಈ ಮುಂದೆ ಸೂಕ್ತ ವಿವರಣೆಯ ಮೂಲಕ ವಿವರಿಸಿದೆ.

skincare tips in kannada

ಹಬೆಯನ್ನು ತೆಗೆದುಕೊಳ್ಳುವುದು

ಚರ್ಮಕ್ಕೆ ಹಬೆಯನ್ನು ನೀಡುವುದರ ಮೂಲಕ ನೈಸರ್ಗಿಕವಾಗಿಯೇ ಸ್ವಚ್ಛಗೊಳಿಸಬಹುದು. ಉಗಿಯಲ್ಲಿ ಇರುವ ಉಷ್ಣಾಂಶವು ಚರ್ಮದಲ್ಲಿರುವ ರಂಧ್ರಗಳನ್ನು ತೆರೆಯಲು ಸಹಾಯಮಾಡುತ್ತದೆ. ಅಲ್ಲದೆ ಸತ್ತ ಜೀವಕೋಶಗಳನ್ನು ತೆಗೆದುಹಾಕಲು ಸಹಾಯ ಮಾಡುವುದು.

- 6-8 ಕಪ್ ನೀರನ್ನು ಚೆನ್ನಾಗಿ ಕುದಿಸಿ, ಒಂದು ಪಾತ್ರೆಗೆ ವರ್ಗಾಯಿಸಿ.

- 5 ನಿಮಿಷದ ಬಳಿಕ ಒಂದು ಟವೆಲ್ ಹೊದಿಕೆಯೊಂದಿಗೆ ಹಬೆಯನ್ನು ತೆಗೆದುಕೊಳ್ಳಿ.

- ತುಂಬಾ ಬಿಸಿಯಾಗಿದ್ದರೆ ತ್ವಚೆಯು ಸುಡುವುದು ಅಥವಾ ನಿಮ್ಮ ಉಸಿರಾಟಕ್ಕೆ ತೊಂದರೆಯಾಗಬಹುದು.

- ಟವೆಲ್ ಹೊದಿಕೆಯ ಅಡಿಯಲ್ಲಿ 10 ನಿಮಿಷಗಳ ಕಾಲ ಹಬೆಯನ್ನು ತೆಗೆದುಕೊಳ್ಳಿ.

ಟೋನರ್ ಬಳಸಿ

ಟೋನರ್‌ಗಳು ನಿಮ್ಮ ಚರ್ಮಕ್ಕೆ ತೇವಾಂಶವನ್ನು ಪುನರ್ಭರ್ತಿ ಮಾಡುವಲ್ಲಿ ಬಹಳ ಉಪಯುಕ್ತವಾಗಿರುತ್ತದೆ. ಚರ್ಮದ ಮೇಲಿರುವ ರಂಧ್ರಗಳು ಸಣ್ಣದಾಗಿಯೇ ಉಳಿದುಕೊಂಡಿರುತ್ತದೆ. ಮುಖವನ್ನು ತೊಳೆದ ನಂತರ ಟೋನರ್ ಅನ್ವಯಿಸಿಕೊಳ್ಳುವುದು ಸೂಕ್ತ. ಮನೆಯಲ್ಲಿಯೇ ತಯಾರಿಸುವ ಟೋನರ್‍ಗಳನ್ನು ಬಳಸಬಹುದು.

ಅಲೋವೆರಾ

- ಒಂದು ಅಲೋವೆರಾ ಎಲೆಯನ್ನು ಕತ್ತರಿಸಿ ರಸವನ್ನು ಹಿಂಡಿಕೊಳ್ಳಿ.

- ಒಂದು ಕಪ್ ನೀರಿಗೆ 2 ಟೇಬಲ್ ಚಮಚ ಅಲೋವೆರಾ ಜೆಲ್ ಬೆರೆಸಿ.

- ಬಳಿಕ ಒಂದು ಹತ್ತಿಯ ಉಂಡೆಯಿಂದ ಮುಖಕ್ಕೆ ಅನ್ವಯಿಸಿ.

- ಈ ಕ್ರಮವನ್ನು ಗಣನೀಯವಾಗಿ ಅನ್ವಯಿಸುವುದರಿಂದ ಚರ್ಮದ ಮೇಲಿರುವ ದದ್ದು ಮತ್ತು ಸುಟ್ಟ ಕಲೆಯು ನಿವಾರಣೆ ಹೊಂದುವುದು.

ನಿಂಬೆ ರಸ

- ಒಂದು ಟೇಬಲ್ ಚಮಚ ನಿಂಬೆ ರಸಕ್ಕೆ ಒಂದು ಕಪ್ ನೀರನ್ನು ಸೇರಿಸಿ.

- ಮಿಶ್ರಣವನ್ನು ಒಂದು ಹತ್ತಿಯ ಉಂಡೆಯಿಂದ ಮುಖಕ್ಕೆ ಅನ್ವಯಿಸಿ.

- ಸ್ವಲ್ಪ ಸಮಯದ ಬಳಿಕ ಸ್ವಚ್ಛಗೊಳಿಸಿ.

- ಈ ವಿಧಾನವು ಸೂರ್ಯನ ಕಿರಣದಿಂದ ಸುಟ್ಟ ಕಲೆಯನ್ನು ನಿವಾರಿಸುತ್ತದೆ. ಜೊತೆಗೆ ಎಣ್ಣೆ ತ್ವಚೆಯನ್ನು ನಿಯಂತ್ರಿಸುವುದು.

ಎಕ್ಸ್ಫೋಲಿಯಾಟ್

ತ್ವಚೆಯನ್ನು ಪ್ರಕಾಶಮಾನಗೊಳಿಸಲು ಸರಳವಾದ ವಿಧಾನ ಎಂದರೆ ಚರ್ಮವನ್ನು ಸೂಕ್ತ ರೀತಿಯಲ್ಲಿ ಎಕ್ಸ್ಫೋಲಿಯಾಟ್ ಮಾಡುವುದು. ಇದರಿಂದ ಸತ್ತ ಚರ್ಮ ಕೋಶಗಳು ಹಾಗೂ ಕಲೆಗಳು ಮಾಯವಾಗುತ್ತವೆ. ಈ ವಿಧಾನದ ಸರಳ ವಿಧಾನಗಳು ಈ ಕೆಳಗಿನಂತಿವೆ.

ಸಕ್ಕರೆಯ ಮಸಾಜ್

-ಒಂದು ಚಮಚ ಹರಳಾಗಿರುವ ಸಕ್ಕರೆ

- 1-2 ಹನಿ ನಿಂಬೆ ರಸ ಅಥವಾ ಕಿತ್ತಳೆ ರಸ.

ವಿಧಾನ:

- ಎಲ್ಲಾ ಸಲಕರಣೆಯನ್ನು ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ, ಮೃದುವಾಗಿ ಮಸಾಜ್ ಮಾಡಿ.

- ಸ್ವಲ್ಪ ಸಮಯದ ಬಳಿಕ ತಣ್ಣೀರಿನಿಂದ ಅಥವಾ ಸ್ವಚ್ಛವಾದ ಟವೆಲ್ ನಿಂದ ಶುಚಿಗೊಳಿಸಿ.

- ಬಳಿಕ ಅಗತ್ಯವಿದ್ದರೆ ಮಾಯ್ಚುರೈಸ್ ರೂಪದಲ್ಲಿ ತೆಳುವಾಗಿ ಎಣ್ಣೆಯನ್ನು ಸವರಿಕೊಳ್ಳಿ.

skincare tips in kannada

ಜೇನುತುಪ್ಪ ಮತ್ತು ಕಿತ್ತಳೆ ಮಸಾಜ್

- 2 ಟೇಬಲ್ ಚಮಚ ಕಿತ್ತಳೆ ಸಿಪ್ಪೆಯ ಪುಡಿ.

- 1 ಟೇಬಲ್ ಚಮಚ ಓಟ್ಸ್ ಪುಡಿ.

- 2-3 ಟೇಬಲ್ ಚಮಚ ಜೇನುತುಪ್ಪ.

ವಿಧಾನ:

- ಎಲ್ಲಾ ಸಾಮಾಗ್ರಿಗಳನ್ನು ಒಂದು ಬೌಲ್‍ನಲ್ಲಿ ಮಿಶ್ರಗೊಳಿಸಿ.

- ದಪ್ಪವಾದ ಪೇಸ್ಟ್ ರೀತಿಯ ಸ್ಥಿರತೆಯನ್ನು ಹೊಂದಿರಬೇಕು.

- ಮುಖಕ್ಕೆ ಹಾಗೂ ಕತ್ತಿಗೆ ಅನ್ವಯಿಸಿ, ವೃತ್ತಾಕಾರದ ಚಲನೆಯಲ್ಲಿ ಮೃದುವಾಗಿ ಮಸಾಜ್ ಮಾಡಿ.

- ಸ್ವಲ್ಪ ಸಮಯದ ವರೆಗೆ ಆರಲು ಬಿಡಿ.

- ಬಳಿಕ ಸ್ವಚ್ಛಗೊಳಿಸಿ.

ಫೇಸ್ ಪ್ಯಾಕ್

ಇದೀಗ ವಿವಿಧ ಬಗೆಯ ಸೌಂದರ್ಯ ವರ್ಧಕ ಮುಖವಾಡಗಳನ್ನು ಆಯ್ಕೆ ಮಾಡಬಹುದು. ಈ ಮುಖವಾಡಗಳು ವಿಕಿರಣ ಹಾಗೂ ಇನ್ನಿತರ ಸಮಸ್ಯೆಗಳಿಂದ ಚರ್ಮವನ್ನು ರಕ್ಷಿಸುತ್ತದೆ.

ಹಾಲಿನ ಫೇಸ್ ಪ್ಯಾಕ್

- 1/4 ಕಪ್ ಹಾಲಿನ ಪುಡಿಗೆ ಸ್ವಲ್ಪ ನೀರನ್ನು ಸೇರಿಸಿ, ದಪ್ಪವಾದ ಪೇಸ್ಟ್ ಅನ್ನು ತಯಾರಿಸಿಕೊಳ್ಳಿ.

- ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ.

- ಸ್ವಲ್ಪ ಸಮಯದ ಬಳಿಕ ಬೆಚ್ಚಗಿನ ನೀರಿನಿಂದ ಸ್ವಚ್ಛಗೊಳಿಸಿ.

- ಈ ಕ್ರಮದಿಂದ ಚರ್ಮವು ಮುನರುಜ್ಜೀವನ ಪಡೆದುಕೊಳ್ಳುವುದು.

ವ್ಯಾಯಾಮ

ಸೂಕ್ತ ರೀತಿಯ ವ್ಯಾಯಾಮವು ರಕ್ತದ ಹರಿವಿಗೆ ಸಹಕರಿಸುತ್ತದೆ. ಇದು ಚರ್ಮಕ್ಕೆ ಒಂದು ನೈಸರ್ಗಿಕ ಬೆಳಕನ್ನು ನೀಡುತ್ತದೆ. ನಿತ್ಯವು 15-20 ನಿಮಿಷಗಳ ಕಾಲ ವ್ಯಾಯಾಮ ಮಾಡುತ್ತೀರಿ ಎಂದಾದರೆ ಚರ್ಮದ ಮೇಲೆ ಅದ್ಭುತ ಪರಿಣಾಮ ಉಂಟಾಗುವುದು. ಚರ್ಮವು ಆರೋಗ್ಯದಿಂದ ಕೂಡಿರುತ್ತದೆ.

ತೇವಗೊಳಿಸುವುದು:

ಚರ್ಮವು ತೇವಾಮಶದಿಂದ ಕೂಡಿದ್ದರೆ ಸದಾ ಆರೋಗ್ಯದಿಂದ ಇರುತ್ತದೆ. ಗಣನೀಯವಾಗಿ ತ್ವಚೆಯನ್ನು ಮಾಯ್ಚುರೈಸ್‍ನಿಂದ ಆರೈಕೆ ಮಾಡಿದರೆ ಚರ್ಮವು ಸದಾ ಆಕರ್ಷಕ ಹಾಗೂ ಆರೋಗ್ಯದಿಂದ ಕೂಡಿರುತ್ತದೆ. ಉದಾಹರಣೆಗೆ: ನೀವು ಎಣ್ಣೆಯುಕ್ತ ಚರ್ಮವನ್ನು ಹೊಂದಿದ್ದರೆ ಎಣ್ಣೆ ಆಧಾರಿತ ಮಾಯಿಶ್ಚರೈಸ್ ಬಳಸಿದರೆ ಚರ್ಮವು ಮೃದುವಾಗಿ ಇರುತ್ತದೆ. ಹಾಗಾಗಿ ಮಾಯಿಶ್ಚರೈಸ್ ಆಯ್ಕೆ ಮಾಡುವಾಗ ಸೂಕ್ತ ರೀತಿಯಲ್ಲಿ ನಿಮ್ಮ ಬುದ್ಧಿಯನ್ನು ಉಪಯೋಗಿಸಬೇಕು.

English summary

get-glowing-skin-with-these-tips

We all face several skin-related issues in our everyday life. This can be regarding dry skin, tan, acne or pimple scars and the list goes on. These are very common issues among us. Some tips like exercise, moisturizing, steaming, etc., can help you to get that glowing skin.Skin Care Tips For Glowing Skin
Story first published: Thursday, April 5, 2018, 8:00 [IST]