ಸರಳ ಬ್ಯೂಟಿ ಟಿಪ್ಸ್: ಬಾಳೆಹಣ್ಣಿನಿಂದ ತಯಾರಿಸಿರುವ ಫೇಸ್‍ಪ್ಯಾಕ್

Posted By: Divya pandit Pandit
Subscribe to Boldsky

ಬಾಳೆ ಹಣ್ಣು ನಮ್ಮ ದೇಹಕ್ಕೆ ಅಗತ್ಯವಿರುವ ಎಲ್ಲಾ ಖನಿಜಗಳು ಮತ್ತು ಜೀವಸತ್ವಗಳನ್ನು ಹೊಂದಿರುತ್ತದೆ. ಜೀರ್ಣಕ್ರಿಯೆಯನ್ನು ಸುಗಮ ಗೊಳಿಸುವ ಈ ಹಣ್ಣು ವಿಟಮಿನ್ ಎ ಅನ್ನು ಸಮೃದ್ಧವಾಗಿ ಪಡೆದುಕೊಂಡಿದೆ. ನಿಯಮಿತವಾದ ಇದರ ಸೇವನೆಯಿಂದ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು. ಕೇವಲ ಸೇವನೆಗಷ್ಟೇ ಸೀಮಿತವಾಗಿರದ ಬಾಳೆ ಹಣ್ಣನ್ನು ಸೌಂದರ್ಯ ವರ್ಧಕ ಉತ್ಪನ್ನ ಅಥವಾ ಆರೈಕೆಯ ಸಾಧನವನ್ನಾಗಿಯೂ ಬಳಸಬಹುದು.

ಬಾಳೆ ಹಣ್ಣಿನಿಂದ ಚರ್ಮವನ್ನು ಚಿಕಿತ್ಸೆಗೆ ಒಳಪಡಿಸಬಹುದು. ಇದರಲ್ಲಿರುವ ವಿಟಮಿನ್ ಎ ಚರ್ಮವನ್ನು ಪುನಃಶ್ಚೇತನಗೊಳಿಸುತ್ತದೆ. ಇದರ ಲೇಪವನ್ನು ತ್ವಚೆಗೆ ಅನ್ವಯಿಸುವುದರಿಂದ ಚರ್ಮದಲ್ಲಿ ಕಾಲಜನ್ ಅನ್ನು ಹೆಚ್ಚಿಸಿ ಚರ್ಮದ ಸ್ಥಿತಿಸ್ಥಾಪಕತ್ವವನ್ನು ಉಳಿಸುತ್ತದೆ. ಇಷ್ಟೇ ಅಲ್ಲದೆ ಸೂರ್ಯನ ಕಿರಣದಿಂದ ಉಂಟಾದ ಸುಟ್ಟಕಲೆ, ಸುಕ್ಕು ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ಸುಲಭವಾಗಿ ನಿವಾರಿಸುತ್ತದೆ. ಬಾಳೆಹಣ್ಣಿನ ಜೊತೆ ಇನ್ನಷ್ಟು ನೈಸರ್ಗಿಕ ಉತ್ಪನ್ನಗಳನ್ನು ಬೆರೆಸಿ ಹೇಗೆ ಉತ್ತಮ ಆರೈಕೆ ಮಾಡಬಹುದು ಎನ್ನುವ ಸೂಕ್ತ ವಿವರಣೆಯನ್ನು ಈ ಮುಂದೆ ವಿವರಿಸಲಾಗಿದೆ.

Banana

ಹೊಳೆಯುವ ತ್ವಚೆಗೆ

ಬಾಳೆ ಹಣ್ಣಿನಲ್ಲಿರುವ ಜೀವಸತ್ವಗಳು ಚರ್ಮವನ್ನು ಪುನಃಶ್ಚೇತನಗೊಳಿಸುತ್ತದೆ. ಮತ್ತು ಚರ್ಮವನ್ನು ಹೊಳೆಯುವಂತೆ ಮಾಡುವುದು. ಚರ್ಮವನ್ನು ಒತ್ತಡದಿಂದ ಮುಕ್ತಗೊಳಿಸುವುದು. ಚರ್ಮವನ್ನು ತಾಜಾತನದಿಂದ ಕೂಡಿರುವಂತೆ ಮಾಡುವುದು. ಮನೆಯ ಪರಿಹಾರಗಳಿಂದಲೇ ಚರ್ಮವನ್ನು ಹೆಚ್ಚು ಹೊಳೆಯುವಂತೆ ಮಾಡಬಹುದು.

ಸಾಮಾಗ್ರಿಗಳು:

ಬಾಳೆಹಣ್ಣು -1

ನೀರು -1 ಕಪ್

ಬಳಸುವ ವಿಧಾನ:

- ಬಾಳೆಹಣ್ಣನ್ನು ಸಣ್ಣದಾಗಿ ಹೆಚ್ಚಿಕೊಂಡು ಹಿಸುಕಿಕೊಳ್ಳಿ.

- ಬಳಿಕ ಮುಖಕ್ಕೆ ಅನ್ವಯಿಸಿ.

- 15 ನಿಮಿಷದ ಬಳಿಕ ತಂಪಾದ ನೀರಿನಿಂದ ಸ್ವಚ್ಛಗೊಳಿಸಿ.

- ನೀವು ಈ ಕ್ರಮವನ್ನು ಅನ್ವಯಿಸುವುದಕ್ಕಿಂತ ಮೊದಲು ಹೊಂದಿದ್ದ ತ್ವಚೆಯ ವ್ಯತ್ಯಾಸವನ್ನು ಪರಿಶೀಲಿಸಬಹುದು.

Banana

ಬಿಳುಪಾದ ತ್ವಚೆಗೆ:

ನೈಸರ್ಗಿಕವಾಗಿ ಕಾಡುವ ಕಪ್ಪು ಕಲೆ, ಮಂಕಾದ ಚರ್ಮಗಳನ್ನು ನಿವಾರಿಸಿ, ಹೊಳೆಯುವ ತ್ವಚೆಯನ್ನು ಪಡೆಯಲು ಈ ಕ್ರಮವನ್ನು ವಾರದಲ್ಲಿ ಒಮ್ಮೆ ಬಳಸಬಹುದು.

ಸಾಮಾಗ್ರಿಗಳು:

ಬಾಳೆಹಣ್ಣು

ಒಂದು ಟೀಚಮಚ ಜೇನುತುಪ್ಪ.

ಬಳಸುವ ವಿಧಾನ:

- ಹೆಚ್ಚು ಹಣ್ಣಾದ ಬಾಳೆಹಣ್ಣನ್ನು ಬ್ಲೆಂಡರ್ ಅಲ್ಲಿ ಹಾಕಿ ಪೇಸ್ಟ್ ಮಾಡಿಕೊಳ್ಳಿ.

- ಬಾಳೆಹಣ್ಣಿನ ಪೇಸ್ಟ್‍ಗೆ ಒಂದು ಟೀ ಚಮಚ ಜೇನುತುಪ್ಪ ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ, 15 ನಿಮಿಷಗಳ ಕಾಲ ಆರಲು ಬಿಡಿ.

- ಬಳಿಕ ಉತ್ಸಾಹ ಇಲ್ಲದ ನೀರಿನಲ್ಲಿ ಸ್ವಚ್ಛಗೊಳಿಸಿ.

Glowing skin

ಮೊಡವೆಗಳ ಚಿಕಿತ್ಸೆಗೆ:

ನಿಮಗೆ ಮೊಡವೆಯ ಸಮಸ್ಯೆ ಇದ್ದರೆ ಬಾಳೆಹಣ್ಣಿನ ಪ್ಯಾಕ್ ಮೊಡವೆ ಹಾಗೂ ಚರ್ಮದ ಕಲೆಯನ್ನು ನಿವಾರಿಸುತ್ತದೆ. ವಾರದಲ್ಲಿ ಎರಡು ಬಾರಿ ಈ ಕ್ರಮವನ್ನು ಅನ್ವಯಿಸಿ.

ಸಾಮಾಗ್ರಿಗಳು:

ಬಾಳೆಹಣ್ಣು-1

ಒಂದು ಟೀಚಮಚ ಜೇನುತುಪ್ಪ.

ಒಂದು ಟೀಚಮಚ ನಿಂಬೆರಸ

ಬಳಸುವ ವಿಧಾನ:

-ಬಾಳೆಹಣ್ಣನ್ನು ಕಿವುಚಿ ಪೇಸ್ಟ್ ಮಾಡಿ.

-ಬಾಳೆಹಣ್ಣಿನ ಪೇಸ್ಟ್, ಒಂದು ಟೀಚಮಚ ಜೇನುತುಪ್ಪ ಮತ್ತು ಒಂದು ಟೀಚಮಚ ನಿಂಬೆರಸ ಸೇರಿಸಿ, ಮಿಶ್ರಗೊಳಿಸಿ.

-ಮಿಶ್ರಣವನ್ನು ಮುಖಕ್ಕೆ ಹಾಗೂ ಪೀಡಿತ ಪ್ರದೇಶಕ್ಕೆ ಅನ್ವಯಿಸಿ.

-20 ನಿಮಿಷದ ಬಳಿಕ ತಣ್ಣನೆಯ ನೀರಿನಲ್ಲಿ ಸ್ವಚ್ಛಗೊಳಿಸಿ.

ಒಣ ತ್ವಚೆಗೆ:

ಬಾಳೆಹಣ್ಣು ತ್ವಚೆಯನ್ನು ಆದ್ರವಾಗಿರಿಸುತ್ತದೆ. ನಿಯಮಿತವಾಗಿ ಬಳಸುವುದರಿಂದ ಮೃದು ಮತ್ತು ಆರೋಗ್ಯವಾಗಿರುವಂತೆ ಮಾಡುವುದು.

ಸಾಮಾಗ್ರಿಗಳು:

1/2 ಬಾಳೆಹಣ್ಣು

ಒಂದು ಟೀಚಮಚ ಓಟ್‍ಮೀಲ್.

ಒಂದು ಟೀಚಮಚ ಜೇನುತುಪ್ಪ.

ಒಂದು ಟೀಚಮಚ ಮೊಟ್ಟೆಯ ಹಳದಿ ಲೋಳೆ.

banana

ಬಳಸುವ ವಿಧಾನ:

- ಬಾಳೆಹಣ್ಣನ್ನು ಕಿವುಚಿ ಪೇಸ್ಟ್ ಮಾಡಿಕೊಳ್ಳಿ.

- ಓಟ್ ಮೀಲ್‍ಅನ್ನು ರುಬ್ಬಿ ಪುಡಿಮಾಡಿ.

- ಒಂದು ಬೌಲ್‍ಅಲ್ಲಿ ಬಾಳೆಹಣ್ಣಿನ ಪೇಸ್ಟ್, ಓಟ್ ಮೀಲ್ ಪುಡಿ, ಜೇನುತುಪ್ಪ ಮತ್ತು ಮೊಟ್ಟೆಯ ಹಳದಿ ಲೋಳೆಯನ್ನು ಸೇರಿಸಿ, ಮಿಶ್ರಗೊಳಿಸಿ.

lime and honey

- ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ, 15 ನಿಮಿಷಗಳ ಕಾಲ ಆರಲು ಬಿಡಿ.

- ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ ಎರಡು ಬಾರಿ ಪುನರಾವರ್ತಿಸಿ

English summary

Get A Glowing Skin With These Banana-based Face Packs

All of us would love to consume banana or add this in our day-to-day food we eat. But do you know how a banana can help you in getting a beautiful skin if used externally? Vitamin A contained in banana works best for the skin. Let’s know how to use a banana for protecting our skin and getting a healthier skin.