For Quick Alerts
ALLOW NOTIFICATIONS  
For Daily Alerts

ಸಿಂಪಲ್ ಬ್ಯೂಟಿ ಟಿಪ್ಸ್: ಬರೀ ಒಂದೇ ವಾರದಲ್ಲಿ ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಿ!

By Hemanth
|

ಎಲ್ಲಿ ಹೋದರೂ ನಿಮಗೆ ಕಾಣಸಿಗುವುದು ಧೂಳು, ಹೊಗೆ ಹಾಗೂ ಇನ್ನಿತರ ಕಲ್ಮಶ. ಇಂತಹ ವಾತಾವರಣದಲ್ಲಿ ನಮ್ಮ ದೇಹ ಹಾಗೂ ದೇಹದ ಹೊರಗೆ ರಕ್ಷಣಾ ಕವಚದಂತಿರುವ ಚರ್ಮದ ಆರೋಗ್ಯ ಕಾಪಾಡುವುದು ತುಂಬಾ ಕಠಿಣವಾಗಿರುವುದು. ಕಲುಷಿತ ವಾತಾವರಣದಿಂದಾಗಿಯೇ ಮುಖದ ಮೇಲೆ ಮೊಡವೆ, ಕಲೆಗಳು ಹಾಗೂ ಚರ್ಮ ಒಣಗುವಂತಹ ಸಮಸ್ಯೆ ಬರುವುದು. ಕೆಲವರಿಗೆ ಇದು ಅನುವಂಶೀಯವಾಗಿ ಬಂದರೆ, ಇನ್ನು ಕೆಲವರಿಗೆ ಹಾರ್ಮೋನು ಬದಲಾವಣೆಯಿಂದಲೂ ಬರುವುದು. ಇಂತಹ ಸಮಯದಲ್ಲಿ ಮಾರುಕಟ್ಟೆಯಲ್ಲಿ ಸಿಗುವಂತಹ ಕೆಲವು ಕ್ರೀಮ್‌ಗಳನ್ನು ತಂದು ಹಚ್ಚಿಕೊಳ್ಳುತ್ತೇವೆ.

ಆದರೆ ಇದರ ದುಷ್ಪರಿಣಾಮಗಳ ಬಗ್ಗೆ ನಾವು ಯೋಚಿಸುವುದೇ ಇಲ್ಲ. ಕೆಲವೊಂದು ಸಲ ನಮ್ಮ ಬೇಜವಾಬ್ದಾರಿಯು ಚರ್ಮದ ಆರೋಗ್ಯ ಕೆಡಲು ಕಾರಣವಾಗುವುದು. ಇದರಿಂದ ನಿಯಮಿತವಾಗಿ ಕೆಲವು ಕ್ರಮಗಳನ್ನು ಬಳಸಿಕೊಂಡರೆ ಚರ್ಮದ ಆರೈಕೆಗೆ ತುಂಬಾ ಒಳ್ಳೆಯದು. ಸುಂದರ ಹಾಗೂ ಕಾಂತಿಯುತ ತ್ವಚೆಗೆ ಈ ಲೇಖನದಲ್ಲಿ ಕೆಲವೊಂದು ವಿಧಾನಗಳನ್ನು ನೀಡಲಾಗಿದೆ.

Flawless Skin

ವ್ಯಾಯಾಮ
ದೇಹದಲ್ಲಿ ಸರಿಯಾಗಿ ರಕ್ತಸಂಚಾರವಾಗಿ ನೈಸರ್ಗಿಕ ಕಾಂತಿ ಬರುವುದು ತುಂಬಾ ಮುಖ್ಯ. ಕೇವಲ 20 ನಿಮಿಷಗಳ ವ್ಯಾಯಾಮದಿಂದ ನಿಮ್ಮ ತ್ವಚೆಗೆ ಅದ್ಭುತವನ್ನು ಉಂಟು ಮಾಡುವುದು. ನೀವು ಹೊರಗಡೆ ಜಾಗಿಂಗ್ ಗೆ ಹೋಗುವಾಗ ಅದರಿಂದ ಚರ್ಮವು ಆರೋಗ್ಯಕಾರಿಯಾಗುವುದು ಮಾತ್ರವಲ್ಲದೆ, ಮನಸ್ಸು ಹಾಗೂ ದೇಹವನ್ನು ಉಲ್ಲಾಸಿತವಾಗಿಡುವುದು.

ಮಾಯಿಶ್ಚರೈಸ್
ನಿಮ್ಮ ಚರ್ಮಕ್ಕೆ ಅನುಗುಣವಾಗಿ ಯಾವಾಗಲೂ ಮೊಶ್ಚಿರೈಸರ್ ಬಳಸಿಕೊಳ್ಳಿ. ಇದರಿಂದ ಚರ್ಮವು ಯಾವಾಗಲೂ ತೇವಾಂಶದಿಂದ ಹಾಗೂ ಕಾಂತಿಯಿಂದ ಇರುವುದು. ಚರ್ಮದ ಎಲ್ಲಾ ಸುಸ್ತನ್ನು ತೆಗೆಯುವುದರಿಂದ ಚರ್ಮವು ಹೊಳೆಯುವುದು. ನಿಮ್ಮ ಚರ್ಮದ ಪ್ರಕಾರಕ್ಕೆ ಅನುಗುಣವಾಗಿ ಮೊಶ್ಚಿರೈಸರ್ ಬಳಸಿಕೊಳ್ಳಿ. ನಿಮ್ಮ ಚರ್ಮವು ಹೆಚ್ಚಿನ ಎಣ್ಣೆಯಂಶದಿಂದ ಕೂಡಿದ್ದರೆ ಆಗ ನೀವು ಎಣ್ಣೆಯಿರುವಂತಹ ಮಾಯಿಶ್ಚರೈಸ್ ಬಳಸಬೇಡಿ. ನೀವು ಬೇಕಾದ ಹಾಗೆ ಇದನ್ನು ಬಳಸಿಕೊಳ್ಳಿ.

ಹಬೆಯಾಡಿಸುವುದು (ಸ್ಟೀಮ್)
ಸ್ಟೀಮಿಂಗ್ ಮಾಡುವುದರಿಂದ ಚರ್ಮವು ನೈಸರ್ಗಿಕವಾಗಿ ಶುದ್ಧವಾಗುವುದು. ಸ್ಟೀಮಿಂಗ್ ನಿಂದ ಚರ್ಮದ ರಂಧ್ರಗಳು ತೆರೆಯುವುದು. 6-8 ಕಪ್ ನೀರನ್ನು ಕುದಿಸಿಕೊಂಡು ಒಂದು ಪಾತ್ರೆಗೆ ಹಾಕಿ. ಇದು ಐದು ನಿಮಿಷ ಕಾಲ ತಣ್ಣಗಾಗಲಿ. ತಲೆಗೆ ಒಂದು ಟವೆಲ್ ಹಾಕಿಕೊಂಡು ಮುಖ ಮುಚ್ಚಿಕೊಂಡು ಪಾತ್ರೆಯ ಕಡೆಗೆ ಬಗ್ಗಿ. 10 ನಿಮಿಷ ಕಾಲ ಹೀಗೆ ಮಾಡಿ. ನೀರು ತಣ್ಣಗಾಗುವ ತನಕ ಹೀಗೆ ಮಾಡಿ. ಇದರ ಬಳಿಕ ಬೇಡ.

ಟೋನರ್ ಬಳಸಿ
ಟೋನರ್ ನಿಂದಾಗಿ ರಂಧ್ರಗಳು ಸಣ್ಣದಾಗುವುದು ಮತ್ತು ಚರ್ಮವು ಪುನಶ್ಚೇತನ ಪಡೆದುಕೊಳ್ಳುವುದು. ಮುಖವನ್ನು ತೊಳೆದುಕೊಂಡ ಬಳಿಕ ಟೋನರ್ ಬಳಸಿದರೆ ಆಗ ಚರ್ಮವು ಕಾಂತಿಯುತವಾಗುವುದು. ಮನೆಯಲ್ಲೇ ತಯಾರಿಸಿದ ಟೋನರ್ ಬಳಸಬಹುದು.

ಅಲೋವೆರಾ ಟೋನರ್ ತಯಾರಿ ವಿಧಾನ
1. ಒಂದು ಅಲೋವೆರಾ ಎಲೆ ತೆಗೆದುಕೊಂಡು ಅದರ ಲೋಳೆ ಹೊರತೆಗೆಯಿರಿ. ಎರಡು ಚಮಚ ಲೋಳೆಗೆ ಒಂದು ಕಪ್ ತಣ್ಣೀರು ಹಾಕಿ.
2. ಹತ್ತಿ ಉಂಡೆ ಬಳಸಿಕೊಂಡು ಅದನ್ನು ಮುಖಕ್ಕೆ ಹಚ್ಚಿಕೊಳ್ಳಿ. ಇದರಿಂದ ಬಿಸಿಲಿನಿಂದ ಸುಟ್ಟು ಗಾಯಗಳು ನಿವಾರಣೆಯಾಗುವುದು.
3. ಈ ಅಲೋವೆರಾ ಟೋನರ್ ನ್ನು ನೀವು ಪ್ರತಿನಿತ್ಯ ಬಳಸಬಹುದು.

ಲಿಂಬೆ ರಸದ ಟೋನರ್
ವಿಧಾನ
1. ಒಂದು ಚಮಚ ಲಿಂಬೆರಸವನ್ನು ನೀರಿಗೆ ಹಾಕಿಕೊಳ್ಳಿ.
2. ಹತ್ತಿ ಉಂಡೆ ಬಳಸಿಕೊಂಡು ಅದನ್ನು ಮುಖಕ್ಕೆ ಹಚ್ಚಿ.
3. ಲಿಂಬೆಯ ಸಿಪ್ಪೆಯನ್ನು ಮುಖಕ್ಕೆ ಉಜ್ಜಿಕೊಳ್ಳಬಹುದು. ಇದರಿಂದ ಕಲೆಗಳು ನಿವಾರಣೆಯಾಗುವುದು.

ಸತ್ತ ಚರ್ಮ ಕಿತ್ತುಹಾಕುವುದು
ಚರ್ಮಕ್ಕೆ ಕಾಂತಿ ನೀಡುವ ಸುಲಭ ವಿಧಾನವೆಂದರೆ ಸತ್ತ ಚರ್ಮ ಕಿತ್ತುಹಾಕುವುದು. ಸತ್ತ ಚರ್ಮಗಳನ್ನು ತೆಗೆದರೆ ಆಗ ಚರ್ಮವು ಹೊಳೆಯುವುದ ಮತ್ತು ನಿಯಮಿತವಾಗಿ ಹೀಗೆ ಮಾಡಿದರೆ ನೀವು ಯೌವನಯುತವಾಗಿ ಕಾಣುವಿರಿ.

ಸಕ್ಕರೆ ಸ್ಕ್ರಬ್
ಬೇಕಾಗುವ ಸಾಮಗ್ರಿಗಳು
1 ಚಮಚ ಸಕ್ಕರೆ
1-2 ಹನಿ ಲಿಂಬೆ ಅಥವಾ ಕಿತ್ತಳೆ ರಸ
ವಿಧಾನ
ಎಲ್ಲವನ್ನು ಒಂದು ಸಣ್ಣ ಪಿಂಗಾಣಿಯಲ್ಲಿ ಹಾಕಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿಕೊಂಡು ಬೆರಳುಗಳಿಂದ ನಿಧಾನವಾಗಿ ಸ್ಕ್ರಬ್ ಮಾಡಿ.
2. ಕಣ್ಣುಗಳ ಬಗ್ಗೆ ಎಚ್ಚರ ವಹಿಸಿ. ತಣ್ಣೀರಿನಿಂದ ತೊಳೆದುಕೊಂಡು ಶುದ್ಧ ಟವೆಲ್ ನಿಂದ ಒರೆಸಿಕೊಳ್ಳಿ.
3. ಲಿಂಬೆ ಮತ್ತು ಕಿತ್ತಳೆ ರಸವು ಚರ್ಮವನ್ನು ಒಣಗಿಸುವ ಕಾರಣ ನೀವು ಮೊಶ್ಚಿರೈಸರ್ ಹಚ್ಚಿಕೊಳ್ಳಿ.

ಜೇನು ಮತ್ತು ಕಿತ್ತಳೆ ಸ್ಕ್ರಬ್
ಬೇಕಾಗುವ ಸಾಮಗ್ರಿಗಳು
2 ಚಮ ಕಿತ್ತಳೆ ಸಿಪ್ಪೆಯ ಹುಡಿ
1 ಚಮಚ ಓಟ್ಸ್
2-3 ಚಮಚ ಜೇನುತುಪ್ಪ
ವಿಧಾನ
1.ಕಿತ್ತಳೆ ಹಣ್ಣಿನ ಸಿಪ್ಪೆಯ ಹುಡಿ ಮತ್ತು ಓಟ್ಸ್ ನ್ನು ಸಮ ಪ್ರಮಾಣದಲ್ಲಿ ಹಾಕಿಕೊಳ್ಳಿ. ಇದಕ್ಕೆ ಒಂದು ಚಮಚ ಜೇನುತುಪ್ಪ ಹಾಕಿ.
2.ಇದನ್ನು ದಪ್ಪಗಿನ ಪೇಸ್ಟ್ ಮಾಡಿಕೊಳ್ಳಿ.
3.ಮುಖ ತೊಳೆದ ಬಳಿಕ ಇದನ್ನು ಹಚ್ಚಿಕೊಳ್ಳಿ ಮತ್ತು ಕೆಲವು ನಿಮಿಷ ಕಾಲ ವೃತ್ತಾಕಾರದಲ್ಲಿ ನಿಧಾನವಾಗಿ ಮಸಾಜ್ ಮಾಡಿ. ಕೆಲವು ನಿಮಿಷ ಹಾಗೆ ಬಿಟ್ಟು ಬಳಿಕ ತೊಳೆಯಿರಿ.
4.ಮುಖ ಒರೆಸಿಕೊಳ್ಳಿ ಮತ್ತು ಒಣಗಲಿ. ಬಳಿಕ ಮಾಯಿಶ್ಚರೈಸರ್ ಹಚ್ಚಿ.
ಪರಿಣಾಮಕಾರಿ ಫೇಸ್ ಮಾಸ್ಕ್
ಕಾಂತಿಯುತ ಹಾಗೂ ಸುಂದರ ತ್ವಚೆ ಪಡೆಯಲು ನೀವು ವಾರದಲ್ಲಿ ಒಂದು ಸಲವಾದರೂ ಫೇಸ್ ಮಾಸ್ಕ್ ಬಳಸಿಕೊಳ್ಳಬೇಕು.

ಹಾಲಿನ ಮಾಸ್ಕ್
ಬೇಕಾಗುವ ಸಾಮಗ್ರಿಗಳು
¼ ಕಪ್ ಹಾಲಿನ ಹುಡಿ
ನೀರು
ವಿಧಾನ
1. ¼ ಕಪ್ ಹಾಲಿನ ಹುಡಿ ಮತ್ತು ನೀರನ್ನು ಮಿಶ್ರಣ ಮಾಡಿಕೊಂಡು ದಪ್ಪಗಿನ ಪೇಸ್ಟ್ ಮಾಡಿ.
2. ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ. ಇದು ಸಂಪೂರ್ಣವಾಗಿ ಒಣಗಲಿ. ಇದರ ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದರ ಬಳಿಕ ಮುಖವು ತಾಜಾ ಹಾಗೂ ಪುನಶ್ಚೇತನಗೊಳ್ಳುವುದು.

ಸಾಸಿವೆ ಎಣ್ಣೆ
ಹಿಂದಿನ ಕಾಲದಿಂದಲೂ ಭಾರತೀಯರು ಹೆಚ್ಚಾಗಿ ಸ್ನಾನಕ್ಕೆ ಮೊದಲು ಸಾಸಿವೆ ಎಣ್ಣೆಯನ್ನು ಮೈಗೆ ಹಚ್ಚಿಕೊಂಡು ಮಸಾಜ್ ಮಾಡಿಕೊಳ್ಳುತ್ತಾ ಇದ್ದರು. ಕಲೆಗಳನ್ನು ನಿವಾರಿಸಲು ಸಾಸಿವೆ ಎಣ್ಣೆಯನ್ನು ಕಡಲೆ ಹಿಟ್ಟು, ಮೊಸರು ಮತ್ತು ಲಿಂಬೆರಸದೊಂದಿಗೆ ಸೇರಿಸಿಕೊಂಡು ದೇಹದ ಪ್ಯಾಕ್ ಆಗಿ ಬಳಸಿಕೊಳ್ಳಬಹುದು.

ಹಾಲು, ಲಿಂಬೆ ರಸ ಮತ್ತು ಜೇನುತುಪ್ಪ
ಈ ಎಲ್ಲವೂ ನಿಮ್ಮ ಮುಖದ ಮೇಲೆ ಅದ್ಭುತವಾಗಿ ಕೆಲಸ ಮಾಡಲಿದೆ ಮತ್ತು ಕಾಂತಿಯನ್ನು ಹೆಚ್ಚಿಸಲಿದೆ. ಒಂದು ಚಮಚ ಹಾಲು ಮತ್ತು ಒಂದು ಚಮಚ ಲಿಂಬೆರಸವನ್ನು ಬೆರೆಸಿಕೊಳ್ಳಿ. ಇದಕ್ಕೆ ಒಂದು ಚಮಚ ಜೇನುತುಪ್ಪವನ್ನು ಬೆರೆಸಿಕೊಳ್ಳಿ. ಇದು ಮಾಯಿಶ್ಚರೈಸರ್ ನಂತೆ ಕೆಲಸ ಮಾಡುತ್ತದೆ. ಇದನ್ನು ನಿಯಮಿತವಾಗಿ ಬಳಸುವುದರಿಂದ ಕಾಂತಿಯುತ ತ್ವಚೆಯು ನಿಮ್ಮದಾಗುವುದರಲ್ಲಿ ಸಂಶಯವಿಲ್ಲ.

ಓಟ್ಸ್ ಮತ್ತು ಮೊಸರು
ಓಟ್ಸ್ ಮತ್ತು ಮೊಸರಿನ ಮಿಶ್ರಣವು ಮುಖದ ಬಣ್ಣವನ್ನು ಬಿಳಿ ಮಾಡಲು ಅತ್ಯಂತ ಸುಲಭ ನೈಸರ್ಗಿಕ ವಿಧಾನವಾಗಿದೆ. ಇದು ಕಪ್ಪುಕಲೆ, ಮೊಡವೆಯಿಂದ ಆದ ಕಲೆ ಮತ್ತು ಇತರ ಕಲೆಗಳನ್ನು ತುಂಬಾ ವೇಗವಾಗಿ ತೆಗೆದುಹಾಕುವುದು. ಓಟ್ ಮೀಲ್ ನ್ನು ರಾತ್ರಿ ವೇಳೆ ನೆನೆಸಲು ಹಾಕಿ. ಬೆಳಿಗ್ಗೆ ಅದನ್ನು ರುಬ್ಬಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಅದಕ್ಕೆ ಮೊಸರು ಸೇರಿಸಿ. ಪ್ರತೀ ದಿನ ನೀವು ಇದನ್ನು ಹಚ್ಚಿಕೊಳ್ಳುವುದರಿಂದ ಪರಿಣಾಮಕಾರಿ ಫಲಿತಾಂಶವನ್ನು ಪಡೆಯಬಹುದು.

ಆಲೂಗಡ್ಡೆ
ಆಲೂಗಡ್ಡೆಯನ್ನು ಕೇವಲ ಅಡುಗೆಯಲ್ಲಿ ಮಾತ್ರ ಬಳಸುವುದಲ್ಲ. ಇದರಲ್ಲಿ ಇರುವಂತಹ ಬ್ಲೀಚಿಂಗ್ ಅಂಶವು ಮುಖದ ಬಣ್ಣವನ್ನು ಹೆಚ್ಚು ಮಾಡಿ ಕಾಂತಿ ನೀಡುವುದು. ಒಂದು ಆಲೂಗಡ್ಡೆ ತೆಗೆದುಕೊಂಡು ಅದನ್ನು ಹುಡಿ ಮಾಡಿ ಇದರ ರಸ ಅಥವಾ ತಿರುಳನ್ನು ಮುಖದ ಮೇಲೆ ಹಚ್ಚಿಕೊಳ್ಳಿ. ಪರಿಣಾಮಕಾರಿ ಫಲಿತಾಂಶ ಬೇಕೆಂದರೆ ನಿಯಮಿತವಾಗಿ ಬಳಸಿ.

ಬಾಳೆಹಣ್ಣು ಮತ್ತು ಬಾದಾಮಿ ಎಣ್ಣೆ
ಹಲವಾರು ಪೋಷಕಾಂಶಗಳಿಂದ ಸಮೃದ್ಧವಾಗಿರುವ ಬಾಳೆಹಣ್ಣು ಮತ್ತು ಬಾದಾಮಿ ಎಣ್ಣೆಯು ಮುಖದ ಬಣ್ಣ ಹಾಗೂ ಕಾಂತಿಯನ್ನು ಹೆಚ್ಚಿಸುವುದು. ಹಣ್ಣಾಗಿರುವ ಬಾಳೆಹಣ್ಣನ್ನು ತೆಗೆದುಕೊಂಡು ಅದನ್ನು ಸರಿಯಾಗಿ ಕಿವುಚಿ. ಇದು ತುಂಬಾ ನಯವಾದ ಬಳಿಕ ಅದಕ್ಕೆ ಒಂದು ಚಮಚ ಬಾದಾಮಿ ಎಣ್ಣೆ ಹಾಕಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ. 20 ನಿಮಿಷ ಬಿಟ್ಟು ತೊಳೆಯಿರಿ.

ಕಡಲೆಹಿಟ್ಟು ಮತ್ತು ಅರಿಶಿನ
ಕಡಲೆ ಹಿಟ್ಟು ಮತ್ತು ಅರಿಶಿನವು ನಮ್ಮ ಅಡುಗೆ ಮನೆಗಳಲ್ಲಿ ತುಂಬಾ ಸುಲಭವಾಗಿ ಸಿಗುವಂತದ್ದಾಗಿದೆ. ಒಂದು ಚಮಚ ಕಡಲೆ ಹಿಟ್ಟು ಮತ್ತು ಒಂದು ಚಮಚ ಅರಿಶಿನವನ್ನು ಹಾಲು ಅಥವಾ ನೀರಿನೊಂದಿಗೆ ಸರಿಯಾಗಿ ಬೆರೆಸಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ. 15 ನಿಮಿಷ ಬಿಟ್ಟು ಮುಖ ತೊಳೆಯಿರಿ.

ಪಪ್ಪಾಯಿ ಮತ್ತು ಜೇನುತುಪ್ಪ
ಪಪ್ಪಾಯಿಯಲ್ಲಿ ಹಲವಾರು ರೀತಿಯ ಆರೋಗ್ಯ ಗುಣಗಳು ಇವೆ. ಅದೇ ಪಪ್ಪಾಯಿಯಲ್ಲಿರುವ ಕೆಲವೊಂದು ಕಿಣ್ವಗಳು ಚರ್ಮದ ಮರುನಿರ್ಮಾಣಕ್ಕೆ ನೆರವಾಗುವುದು. ಪಪ್ಪಾಯಿಯು ನೈಸರ್ಗಿಕ ಸನ್ ಸ್ಕ್ರೀನ್ ಮತ್ತು ಸೂರ್ಯನ ಕಿರಣಗಳಿಂದ ತ್ವಚೆಯನ್ನು ರಕ್ಷಿಸುವುದು. ಅರ್ಧ ಕಪ್ ಪಪ್ಪಾಯಿ ತಿರುಳನ್ನು ಸರಿಯಾಗಿ ಕಿವುಚಿಕೊಂಡು ಅದಕ್ಕೆ ಒಂದು ಚಮಚ ಜೇನುತುಪ್ಪನ್ನು ಹಾಕಿಕೊಳ್ಳಿ. ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿಕೊಂಡು 20 ನಿಮಿಷ ಕಾಲ ಹಾಗೆ ಬಿಡಿ. ನೀರಿನಿಂದ ತೊಳೆದ ಬಳಿಕ ಮುಖದಲ್ಲಿ ಕಾಂತಿಯನ್ನು ಕಾಣಬಹುದು.

ಟೊಮೆಟೊ ಮತ್ತು ಮೊಸರು
ಮುಖದ ಬಣ್ಣವನ್ನು ಬಿಳಿಯಾಗಿಸಬೇಕಾದರೆ ತಾಜಾ ಟೊಮೆಟೊ ಜತೆಗೆ ಮೊಸರನ್ನು ಸೇರಿಸಿಕೊಳ್ಳಿ. ಟೊಮೆಟೊ ಮತ್ತು ಮೊಸರಿನಲ್ಲಿ ಬ್ಲೀಚಿಂಗ್ ಗುಣಗಳು ಇವೆ ಮತ್ತು ಇದು ಪರಿಣಾಮಕಾರಿಯಾಗಿ ಮುಖದ ಬಣ್ಣವನ್ನು ಬಿಳಿಯಾಗಿಸುವುದು. ಒಳ್ಳೆಯ ಫಲಿತಾಂಶ ಬೇಕೆಂದರೆ ಎರಡು ದಿನಕ್ಕೊಮ್ಮೆ ಇದನ್ನು ಬಳಸಿಕೊಳ್ಳಿ.

English summary

Get A Flawless Skin At Home With These Tips

We usually treat them by buying and trying several products from the market. However, we are not aware that this can also be caused by our carelessness and some mistakes that we unconsciously make, which can lead to the damage of our skin. Taking proper care and following a regular skin care routine can help you with this. So, get beautiful and glowing skin with these tips.
X
Desktop Bottom Promotion