For Quick Alerts
ALLOW NOTIFICATIONS  
For Daily Alerts

ಬ್ಯೂಟಿ ಟಿಪ್ಸ್: ಮೀನಿನೆಣ್ಣೆ ತ್ವಚೆ ಮತ್ತು ಕೂದಲಿಗೆ ಬಹಳ ಒಳ್ಳೆಯದು

By Hemanth
|

ಸೌಂದರ್ಯವೆಂದರೆ ಎದ್ದು ಕಾಣಬೇಕಾಗಿರುವುದು ತ್ವಚೆ ಹಾಗೂ ಕೂದಲು. ಇವೆರಡರ ಆರೈಕೆ ಮಾಡಿದರೆ ಆಗ ನಮ್ಮ ಸಂಪೂರ್ಣ ದೇಹದ ಸೌಂದರ್ಯವು ಎದ್ದು ಕಾಣುವುದು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಚರ್ಮ ಹಾಗೂ ಕೂದಲಿನ ಆರೈಕೆಗೆ ವಿವಿಧ ರೀತಿಯ ಎಣ್ಣೆಗಳನ್ನು ಬಳಸುವುದನ್ನು ನಾವು ನೋಡಿದ್ದೇವೆ. ಚರ್ಮ ಹಾಗೂ ಕೂದಲಿಗೆ ಹೆಚ್ಚಾಗಿ ಬಳಸುವಂತಹದ್ದು ತೆಂಗಿನೆಣ್ಣೆ, ಬಾದಾಮಿ ಎಣ್ಣೆ, ಜೊಜೊಬಾ ಎಣ್ಣೆ, ಆಲಿವ್ ತೈಲ ಮತ್ತು ಆರ್ಗನ್ ತೈಲ ಇತ್ಯಾದಿಗಳು. ಇವುಗಳು ಚರ್ಮ ಹಾಗೂ ಕೂದಲಿಗೆ ನೀಡುವಂತಹ ಲಾಭಗಳ ಬಗ್ಗೆ ಈಗಾಗಲೇ ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಟ್ಟಿದೆ. ಆದರೆ ಮೀನಿನ ಎಣ್ಣೆಯಿಂದ ಚರ್ಮ ಹಾಗೂ ಕೂದಲಿಗೆ ತುಂಬಾ ಲಾಭವಿದೆ ಎಂದು ನಿಮಗೆ ತಿಳಿದಿದೆಯಾ?

Fish Oil & Its Benefits For Skin And Hair

ಇಲ್ಲ ತಾನೇ? ಹಾಗಾದರೆ ಈ ಲೇಖನದಲ್ಲಿ ಅದನ್ನು ವಿಸ್ತಾರವಾಗಿ ನಿಮಗೆ ತಿಳಿಸಿಕೊಡಲಿದ್ದೇವೆ. ಮೀನಿನ ಎಣ್ಣೆಯನ್ನು ಚರ್ಮ ಮತ್ತು ಕೂದಲಿನ ಉತ್ಪನ್ನಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಮೀನಿನ ಎಣ್ಣೆಯು ಮಾರುಕಟ್ಟೆಯಲ್ಲಿ ಕ್ಯಾಪ್ಸೂಲ್ಸ್ ಅಥವಾ ಸಪ್ಲಿಮೆಂಟ್ ರೂಪದಲ್ಲಿ ಲಭ್ಯವಿದೆ. ಮೀನು ಸೇವನೆ ಮಾಡುವ ಮೂಲಕ ಕೂಡ ನೀವು ಒಮೆಗಾ-3 ಕೊಬ್ಬಿನಾಮ್ಲವನ್ನು ಹೆಚ್ಚಿಸಿಕೊಳ್ಳಬಹುದು. ಆದರೆ ಮೀನಿನೆಣ್ಣೆಯು ಚರ್ಮ ಮತ್ತು ಕೂದಲಿಗೆ ಹೇಗೆ ಬಳಸಿಕೊಳ್ಳುವುದು ಹೇಗೆ ಎಂದು ತಿಳಿಯಿರಿ. ಚರ್ಮ ಮತ್ತು ಕೂದಲಿಗೆ ಮೀನಿನೆಣ್ಣೆ ಬಳಸುವ ಮೊದಲು ಕೆಲವೊಂದು ಪ್ರಾಮುಖ್ಯ ವಿಚಾರಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಮೀನಿನೆಣ್ಣೆ ಎಂದರೇನು ಮತ್ತು ಇದನ್ನು ನಿಮ್ಮ ಸೌಂದರ್ಯವರ್ಧಕದಲ್ಲಿ ಯಾಕೆ ಅಳವಡಿಸಿಕೊಳ್ಳಬೇಕು ಎಂದು ತಿಳಿಯಿರಿ.

ಮೀನಿನೆಣ್ಣೆ ಲಾಭಗಳು

ಮೀನಿನೆಣ್ಣೆ ಲಾಭಗಳು

ಹೆಸರೇ ಸೂಚಿಸುವಂತೆ ಮೀನಿನೆಣ್ಣೆಯನ್ನು ಮೀನಿನಿಂದ ಮಾಡಲ್ಪಟ್ಟಿರುವುದು ಮತ್ತು ಇದರಲ್ಲಿ ಒಮೆಗಾ-3 ಕೊಬ್ಬಿನಾಮ್ಲವು ಸಮೃದ್ಧವಾಗಿದೆ. ಮೀನಿನೆಣ್ಣೆಯು ಚರ್ಮ ಹಾಗೂ ಕೂದಲಿಗೆ ತುಂಬಾ ಲಾಭಕಾರಿ. ಇದರಿಂದ ಹಲವಾರು ರೀತಿಯ ಲಾಭಗಳು ಕೂಡ ಇದೆ. ಇತ್ತೀಚೆಗೆ ಇದು ಮಾತ್ರೆಗಳ ರೂಪದಲ್ಲಿ ಲಭ್ಯವಾಗತೊಡಗಿದ ಬಳಿಕ (cod liver oil capsules)ಜನಸಾಮಾನ್ಯರಿಗೂ ಆರೋಗ್ಯವೃದ್ಧಿಯ ಈ ಅದ್ಭುತ ಎಣ್ಣೆ ಸುಲಭವಾಗಿ ದೊರಕುವಂತಾಗಿದೆ. ಈ ಎಣ್ಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಒಮೆಗಾ 3 ಕೊಬ್ಬಿನ ತೈಲ ಹಾಗೂ ವಿಟಮಿನ್ ಎ ಮತ್ತು ಡಿ ಇರುವ ಕಾರಣ ಇದರ ಸೇವನೆಯಿಂದ ಖಿನ್ನತೆ, ಹೊಟ್ಟೆಯಲ್ಲಿ ಉರಿ, ಸಂಧಿವಾತ, atherosclerosis ಅಥವಾ ಹೃದಯಸ್ತಂಭನದ ಸಾಧ್ಯತೆಯ ತೊಂದರೆ, ಕ್ಷಯ ಮೊದಲಾದ ತೊಂದರೆಗಳನ್ನು ನಿವಾರಿಸುವ ಜೊತೆಗೇ ಗಾಯಗಳನ್ನು ಬೇಗನೇ ಮಾಗುವಂತೆ ಸಹಾ ಮಾಡುತ್ತದೆ. ಆದರೆ ಇತ್ತೀಚಿನ ಸಂಶೋಧನೆಯ ಪ್ರಕಾರ ಈ ಎಣ್ಣೆ ತೂಕ ಕಳೆದುಕೊಳ್ಳಲೂ ನೆರವಾಗುತ್ತದೆ. ಅಲ್ಲದೆ ಕಿಡ್ನಿ, ಹೃದಯ ಮತ್ತು ರಕ್ತಕ್ಕೆ ಸಂಬಂಧಿಸಿದ ಹಲವಾರು ರೀತಿಯ ಕಾಯಿಲೆಗಳಿಗೆ ಮೀನಿನೆಣ್ಣೆಯು ತುಂಬಾ ಪರಿಣಾಮಕಾರಿ ಎಂದು ಸಾಬೀತಾಗಿದೆ. ಮೀನಿನೆಣ್ಣೆಯ ಕೆಲವು ಪ್ರಮುಖ ಲಾಭಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.

* ಇದರಲ್ಲಿರುವ ಉರಿಯೂತ ಶಮನಕಾರಿ ಗುಣವು ಚರ್ಮಕ್ಕೆ ಶಮನ ನೀಡುವುದು.

* ಇದು ಚರ್ಮವನ್ನು ಮೊಶ್ಚಿರೈಸ್ ಮಾಡುವುದು. ಒಮೆಗಾ-3 ಕಡಿಮೆಯಿದ್ದರೆ ಆಗ ಚರ್ಮವು ಒಣಗುವುದು. ಇದರಿಂದ ಒಮೆಗಾ-3 ಅಧಿಕವಾಗಿರುವ ಮೀನಿನೆಣ್ಣೆ ಬಳಸಿದರೆ ಇದು ಚರ್ಮ ಒಣಗುವುದನ್ನು ತಡೆದು, ಮರಳಿ ಮೊಶ್ಚಿರೈಸ್ ಮಾಡುವುದು.

* ಮೀನಿನೆಣ್ಣೆಯು ಮೊಡವೆ ನಿವಾರಣೆ ಮಾಡುವುದು.

* ಕೂದಲಿಗೆ ಸಂಬಂಧಪಟ್ಟಂತೆ ಮೀನಿನೆಣ್ಣೆಯು ತಲೆಬುರುಡೆಗೆ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುವುದು. ಇದು ಮೊಶ್ಚಿರೈಸ್ ಮತ್ತು ಪೋಷಣೆ ನೀಡುವುದು.

* ಆರೋಗ್ಯಕರ ಕೂದಲಿಗೆ ಇದು ನೆರವಾಗುವುದು

* ಕೂದಲು ಉದುರುವಿಕೆ ತಪ್ಪಿಸುವುದು ಮತ್ತು ಕೂದಲಿನ ಬೆಳವಣಿಗೆಗೆ ನೆರವಾಗುವುದು.

ಮೀನಿನೆಣ್ಣೆ ಆರೋಗ್ಯ ವೃದ್ಧಿಸುವ ಅದ್ಭುತ ಎಣ್ಣೆ

ಚರ್ಮಕ್ಕೆ ಮೀನಿನೆಣ್ಣೆ ಬಳಕೆ ಹೇಗೆ?

ಚರ್ಮಕ್ಕೆ ಮೀನಿನೆಣ್ಣೆ ಬಳಕೆ ಹೇಗೆ?

ಮೀನಿನೆಣ್ಣೆಯು ಚರ್ಮವು ತುಂಬಾ ನಯ ಮತ್ತು ಯೌವನಯುವಾಗಿ ಕಾಣುವಂತೆ ಮಾಡುವುದು. ಇದು ಹೇಗೆಂದು ತಿಳಿದಿದೆಯಾ? ಇಲ್ಲಿ ಕೊಟ್ಟಿರುವ ಸರಳ ಸಲಹೆಗಳನ್ನು ಪಾಲಿಸಿ. ಇದನ್ನು ನೀವು ಮನೆಯಲ್ಲೇ ಪ್ರಯೋಗಿಸಿ, ಫಲಿತಾಂಶ ಪಡೆಯಬಹುದು.

ಬೇಕಾಗುವ ಸಾಮಗ್ರಿಗಳು

  • ಮೀನಿನೆಣ್ಣೆಯ 5 ಕ್ಯಾಪ್ಸೂಲ್ಸ್ ಗಳು.
  • ತಯಾರಿಸುವ ವಿಧಾನ

    * ಕ್ಯಾಪ್ಸೂಲ್ಸ್ ನಿಂದ ಎಣ್ಣೆಯನ್ನು ಸಂಪೂರ್ಣವಾಗಿ ಹೊರ ತೆಗೆಯಿರಿ.

    * ಹೀಗೆ ಮಾಡಿದ ಬಳಿಕ ಹತ್ತಿ ಉಂಡೆಯನ್ನು ಅದರಲ್ಲಿ ಅದ್ದಿಕೊಂಡು, ಅದನ್ನು ಮುಖಕ್ಕೆ ಹಚ್ಚಿಕೊಳ್ಳಿ.

    * 5-10 ನಿಮಿಷ ಕಾಲ ಹತ್ತಿ ಉಂಡೆಯನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳುತ್ತಿರಿ.

    * 20 ನಿಮಿಷ ಕಾಲ ಇದು ಒಣಗಲು ಬಿಡಿ.

    * ಬಿಸಿ ನೀರಿನಿಂದ ಮುಖ ತೊಳೆಯಿರಿ.

    ಕೂದಲಿಗೆ ಮೀನಿನೆಣ್ಣೆ ಬಳಸುವುದು ಹೇಗೆ?

    ಕೂದಲಿಗೆ ಮೀನಿನೆಣ್ಣೆ ಬಳಸುವುದು ಹೇಗೆ?

    ಚರ್ಮಕ್ಕೆ ಮಾತ್ರವಲ್ಲದೆ, ಕೂದಲಿಗೂ ಮೀನಿನೆಣ್ಣೆಯು ತುಂಬಾ ಅದ್ಭುತವಾಗಿ ಕೆಲಸ ಮಾಡುವುದು. ಇದು ಹೇಗೆ ಎಂದು ಹಂತಹಂತವಾಗಿ ತಿಳಿಯಿರಿ. ಸುಂದರ, ಬಲಿಷ್ಠ ಮತ್ತು ಕಾಂತಿಯುತ ಕೂದಲಿಗೆ ಇದು ನೆರವಾಗುವುದು.

    ಬೇಕಾಗುವ ಸಾಮಗ್ರಿಗಳು

    • 2 ಚಮಚ ಆಲಿವ್ ತೈಲ
    • 2 ಚಮಚ ಮೀನಿನೆಣ್ಣೆ
    • ತಯಾರಿಸುವ ವಿಧಾನ

      ತಯಾರಿಸುವ ವಿಧಾನ

      * ಒಂದು ಪಿಂಗಾಣಿ ತೆಗೆದುಕೊಂಡು ಅದಕ್ಕೆ ಆಲಿವ್ ತೈಲ ಹಾಕಿ.

      * ಇದಕ್ಕೆ ಮೀನಿನೆಣ್ಣೆ ಹಾಕಿಕೊಂಡು ಮಿಶ್ರಣ ಮಾಡಿ.

      * ಹತ್ತಿ ಉಂಡೆಯನ್ನು ಇದರಲ್ಲಿ ಅದ್ದಿಕೊಳ್ಳಿ ಮತ್ತು ಇದು ಸರಿಯಾಗಿ ಒದ್ದೆಯಾಗಲಿ.

      * ಬಾಚಣಿಗೆ ಬಳಸಿಕೊಂಡು ಕೂದಲನ್ನು ವಿಂಗಡಿಸಿ.

      * ಒದ್ದೆ ಹತ್ತಿ ಉಂಡೆ ತೆಗೆದುಕೊಂಡು ಅದನ್ನು ನಿಧಾನವಾಗಿ ತಲೆಬುರುಡೆಗೆ ಮಸಾಜ್ ಮಾಡಿ. ಸಂಪೂರ್ಣ ತಲೆಬುರುಡೆಗೆ ಇದು ಹರಡಲಿ.

      * 2-3 ಗಂಟೆಗಳ ಕಾಲ ಹಾಗೆ ಬಿಡಿ.

      * ಶಾಂಪೂ ಬಳಸಿಕೊಂಡು ತೊಳೆಯಿರಿ.

      * ನೀವು ಕೂದಲಿಗೆ ಶಾಂಪೂ ಬಳಸುವ ಸಮಯದಲ್ಲಿ ಇದನ್ನು ಬಳಸಿಕೊಳ್ಳಿ.

      ಮೀನಿನೆಣ್ಣೆಯು ತುಂಬಾ ಪರಿಣಾಮಕಾರಿ ಮತ್ತು ಇದನ್ನು ನೀವು ಪ್ರಯತ್ನಿಸಿ. ನೀವು ಇಂದೇ ಇದನ್ನು ಪ್ರಯತ್ನಿಸಿ ನೋಡಿ. ಸೌಂದರ್ಯವರ್ಧಕವಾಗಿ ಇದನ್ನು ಬಳಸಿಕೊಂಡರೆ ಪರಿಣಾಮಕಾರಿ ಫಲಿತಾಂಶ ನಿಮ್ಮದಾಗುವುದು.

      ಸಂಧಿವಾತಕ್ಕೆ ಮೀನಿನೆಣ್ಣೆ ಹೇಗೆ ಸಹಕಾರಿ?

English summary

Fish Oil & Its Benefits For Skin And Hair

Fish oil is derived from fish that are rich in omega-3 fatty acids. Fish oil, as it is known, is beneficial for health as well as skin. You can make your own home-made hair oil, hair mask or a face pack using fish oil. Fish oil is easily available in the market in the form of capsules or supplements.
X
Desktop Bottom Promotion