For Quick Alerts
ALLOW NOTIFICATIONS  
For Daily Alerts

ತ್ವಜೆಗೆ ಸಂಬಂಧಪಟ್ಟ ಎಲ್ಲಾ ರೀತಿಯ ಸಮಸ್ಯೆಗೆ ಮನೆಯಲ್ಲೇ ಇದೆ ನೈಸರ್ಗಿಕ ಪರಿಹಾರ

By Sujith Kamath
|

ಸಾಮಾನ್ಯವಾಗಿ ಮಹಿಳೆಯರಿಗೆ, ತಮ್ಮ ಸೌಂದರ್ಯದ ಬಗ್ಗೆ ಕಾಳಜಿ ಹೆಚ್ಚಿರುತ್ತದೆ. ತಮ್ಮ ಮುಖದ ಸೌಂದರ್ಯವನ್ನು ವೃದ್ಧಿಸಿಕೊಳ್ಳಲು, ಬಳಸದ ಉತ್ಪನ್ನಗಳೇ ಇರುವುದಿಲ್ಲ. ಅದರಲ್ಲಿಯೂ, ಈಗಿನ ಕಾಲದಲ್ಲಿ ಹಲವು ರಾಸಾಯನಿಕ ಅಂಶವುಳ್ಳ, ತ್ವಚೆಯನ್ನು ಹಾಳುಮಾಡುವ ಕ್ರೀಮ್ ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಜನರು ಅದಕ್ಕೆ ಆಕರ್ಷಿತರಾಗಿ, ಅಂಗೈಯಲ್ಲಿ ಬೆಣ್ಣೆ ಹಿಡ್ಕೊಂಡು, ತುಪ್ಪಗೋಸ್ಕರ ಊರೆಲ್ಲಾ ಹುಡುಕಾಡಿದ ಹಾಗೆ ಆಯಿತು ಎಂಬ ಗಾದೆಯಂತೆ ಮಾಡಿಕೊಳ್ಳುತ್ತಿದ್ದಾರೆ. ಸೌಂದರ್ಯವನ್ನು ತಾತ್ಕಾಲಿಕವಾಗಿ ಹೆಚ್ಚಿಸುವ ಸ್ಪಾ ಮತ್ತು ಬ್ಯೂಟಿ ಸಲೂನ್ ಗಳು, ಮನುಷ್ಯನ ಮೃದುವಾದ ತ್ವಚೆಯ ಮೇಲೆ ಹಾನಿಯುಂಟು ಮಾಡುತ್ತಿವೆ. ಅದನ್ನು ಬಳಸುತ್ತಿರುವ ಎಲ್ಲಾ ಜನರಿಗೂ ಗೊತ್ತಿರುತ್ತದೆ.

ಸಾವಿರಾರು ರೂಪಾಯಿಗಳನ್ನು ಸುರಿದು, ತಾತ್ಕಾಲಿಕವಾಗಿ ಸೌಂದರ್ಯವನ್ನು ಹೆಚ್ಚಸಿಕೊಳ್ಳುವ ಬದಲು, ಮನೆಯಲ್ಲಿಯೇ ನೈಸರ್ಗಿಕವಾಗಿ ಮದ್ದುಗಳನ್ನು ತಯಾರಿಸಿ, ನಿಮ್ಮ ಸೌಂದರ್ಯವನ್ನು ಶಾಶ್ವತವಾಗಿ ಹೆಚ್ಚಿಸಿಕೊಳ್ಳಬಹುದು. ಹಣಕ್ಕಾಗಿ ಇರುವ, ಸ್ಪಾ ಮತ್ತು ಬ್ಯೂಟಿ ಸಲೂನ್ ಗಳಿಗೆ ಹೋಗುವ ಬದಲು, ಇಲ್ಲಿ ತಿಳಿಸಿರುವ ಹಾಗೆ, ಮನೆಯಲ್ಲೇ ಮಾಡಿಕೊಳ್ಳಬಹುದಾದಂತಹ ಮತ್ತು ಆರೋಗ್ಯಕರ ವಿಧಾನವನ್ನು ಚಾಚೂ ತಪ್ಪದೆ ಪಾಲಿಸಿ, ನಂತರ ಕೆಲವೇ ದಿನಗಳಲ್ಲಿ ಅದರ ಫಲಿತಾಂಶ, ನಿಮಗೆ ಮನದಟ್ಟಾಗುತ್ತದೆ. ಇದುವರೆಗೂ ಹಲವು ಜಾಗಗಳನ್ನು ಸುತ್ತಿ, ವ್ಯಾಕ್ಸಿಂಗ್ ಕಿಟ್ ಗಳು, ರೇಜರ್ ಗಳು, ಹಲವು ಆಧುನಿಕಾ ಉಪಕರಣಗಳನ್ನು ಬಳಸಿ ಬೇಸತ್ತಿರುವುದು ಸಾಕು. ಇನ್ನು ಮುಂದೆ ಇದಕ್ಕೆಲ್ಲ ಪೂರ್ಣ ವಿರಾಮವಿಟ್ಟು, ನಾವು ತಿಳಿಸುವ ಮನೆಮದ್ದುಗಳನ್ನು ಬಳಸಿ, ನಿಮ್ಮ ಮುಖದಲ್ಲಿರುವ ಅನಾವಶ್ಯಕ ಕೂದಲುಗಳನ್ನು ತೆಗೆದು, ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ. ಹಾಗೆಯೇ, ಎಲ್ಲಾ ಚರ್ಮಕ್ಕೆ ಸಂಬಂಧ ಪಡುವ ಖಾಯಿಲೆಗಳಿಂದ ಮುಕ್ತರಾಗಿ ಎಂಬುದು, ಈ ಬರಹದ ಮೂಲ ಉದ್ದೇಶ.

ಮುಖ್ಯವಾಗಿ ನೀವೇ ಮನೆಯಲ್ಲಿ ನೈಸರ್ಗಿಕ ಕವಚ ಗಳನ್ನು ಮಾಡಿ, ರಾಸಾಯನಿಕದಿಂದ ನಿಮ್ಮನ್ನು ಮುಕ್ತರಾಗಿಸಿಕೊಳ್ಳಿ. ಸಾಮಾನ್ಯವಾಗಿ ಮನೆಯಲ್ಲೇ ಸಿಗುವ ನಿಂಬೆಹಣ್ಣು ಮತ್ತು ಜೇನುತುಪ್ಪ, ಗೋಧಿ, ಪರಂಗಿಹಣ್ಣು, ಕಡಲೆಹಿಟ್ಟು ಇವುಗಳಿಂದ, ಮುಖಕ್ಕಾಗಿ ಆರೋಗ್ಯಕರ ಕವಚಗಳನ್ನು ಮಾಡಿಕೊಂಡು, ನಿಮ್ಮ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು.

ಮನೆಮದ್ದುಗಳ ಬಗ್ಗೆ ತಿಳಿದುಕೊಳ್ಳುವ ಮೊದಲು, ರಾಸಾಯನಿಕ ಅಥವಾ ಸಲೂನ್ ಚಿಕಿತ್ಸೆಗಳಿಂದ ಆಗುವ ಪರಿಣಾಮಗಳನ್ನು ನಿಮ್ಮ ಮುಂದೆ ಇಡಲು ಇಚ್ಛಿಸುತ್ತೇನೆ.

1.ಮುಖದ ದದ್ದುಗಳು (Rashes)

1.ಮುಖದ ದದ್ದುಗಳು (Rashes)

ನಮ್ಮ ತ್ವಚೆ ಬಹಳ ಕೋಮಲವಾದುದ್ದು. ಆದರಿಂದ, ಯಾವಾಗಲಾದರೂ ನಿಮ್ಮ ಮುಖವನ್ನು ವ್ಯಾಕ್ಸಿಂಗ್ ಅಥವಾ ಫೇಶಿಯಲ್ ಮಾಡಿಸಿಕೊಂಡರೆ, ಮಾಡಿಸಿಕೊಂಡ ಕೆಲವೇ ದಿನದಲ್ಲಿ ಮುಖದಲ್ಲಿ ದದ್ದುಗಳು ಬರಲು ಶುರುವಾಗುತ್ತದೆ.

2.ಹೆಚ್ಚುವ ಕೂದಲು

2.ಹೆಚ್ಚುವ ಕೂದಲು

ಎಲ್ಲರೂ, ಸಲೂನ್ ಚಿಕಿತ್ಸೆಗಳಿಂದ ಮುಖದಲ್ಲಿರುವ ಕೂದಲು ಕಡಿಮೆಯಾಗುತ್ತದೆ ಎಂದು ತಿಳಿದುಕೊಂಡಿರುತ್ತಾರೆ. ಆದರೆ ಅದು ಸುಳ್ಳು. ಫೇಶಿಯಲ್ ಮಾಡಿಸಿಕೊಂಡ ಕೆಲವು ದಿನಗಳವರೆಗೆ ಕಾಣಿಸಿಕೊಳ್ಳುವುದಿಲ್ಲ. ನಂತರ ನಿಧಾನವಾಗಿ, ಮೊದಲಿಗಿಂತ ಹೆಚ್ಚಾಗಿಯೇ ಬೆಳೆಯಲು ಪ್ರಾರಂಭವಾಗುತ್ತದೆ.

3.ಮೊಡವೆಗಳು

3.ಮೊಡವೆಗಳು

ವ್ಯಾಕ್ಸಿಂಗ್ ಮತ್ತು ಫೇಶಿಯಲ್ ನಿಂದ, ನಿಧಾನವಾಗಿ ಮೊಡವೆಗಳು ಬರಲು ಪ್ರಾರಂಭವಾಗುತ್ತವೆ. ಆ ರಾಸಾಯನಿಕ ಅಂಶಗಳ ಕಾರಣದಿಂದ ಮೊಡವೆಗಳು ಬರುವುದು ಖಂಡಿತ.

4.ಸುಟ್ಟ ಚರ್ಮಗಳು

4.ಸುಟ್ಟ ಚರ್ಮಗಳು

ನೀವು ಮುಖಕ್ಕೆ ಬ್ಲೀಚ್ ಮಾಡಿಸಿದಾಗ, ಅದರಲ್ಲಿರುವ ಆಸಿಡ್ ಅಂಶವು ನಿಧಾನವಾಗಿ ನಿಮ್ಮ ಮುಖವನ್ನು ಕಂದು ಬಣ್ಣಕ್ಕೆ ತಿರುಗಿಸುತ್ತದೆ. ಪುನಃ ಬ್ಲೀಚ್ ಮಾಡಿಸಿಕೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ. ಆದರಿಂದ ಇದು ತಾತ್ಕಾಲಿಕ.

5.ತ್ವಚೆಯಲ್ಲಿ ಬಿರುಕು

5.ತ್ವಚೆಯಲ್ಲಿ ಬಿರುಕು

ಮುಖದಲ್ಲಿರುವ ಅನಾವಶ್ಯಕ ಕೂದಲನ್ನು ತೆಗೆಯುವ ಭರದಲ್ಲಿ, ಸೆಲೂನ್ ಚಿಕಿತ್ಸೆಗಳಿಂದ ತ್ವಚೆಯಲ್ಲಿ ಬಿರುಕು ಮೂಡುತ್ತದೆ. ಕೆಲವೊಮ್ಮೆ ಅದರಿಂದ ರಕ್ತವು ಬರುವ ಸಾಧ್ಯತೆಗಳಿವೆ.

ಇಷ್ಟೆಲ್ಲ ಅಡ್ಡ ಪರಿಣಾಮದಿಂದ ಚರ್ಮವನ್ನು ಹಾಳುಮಾಡುವ ಜೊತೆಗೆ, ಸಾವಿರಾರು ರೂಪಾಯಿಯಷ್ಟು ಹಣವನ್ನು ಸುರಿಯಬೇಕಾಗುತ್ತದೆ. ಅಷ್ಟು ಹಣವನ್ನು ಸುರಿದರೂ, ಅದು ಕೇವಲ ತಾತ್ಕಾಲಿಕ ಪರಿಹಾರವಷ್ಟೇ. ನಾವು ನಿಮಗೊಂದು ಶಾಶ್ವತ ಪರಿಹಾರದ ಜೊತೆಗೆ, ಆರೋಗ್ಯವಾಗಿ ತ್ವಚೆಯ ಹೊಳಪನ್ನೂ ಹೆಚ್ಚಿಸುವ ಮಾರ್ಗವನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಇದಕ್ಕೆ ಬೇಕಾಗಿರುವುದು ಕೆಲವು ನೈಸರ್ಗಿಕ ಪದಾರ್ಥಗಳು. ಇದು ನಿಮ್ಮ ಮನೆಯಲ್ಲೇ ತಹಾರಿಸಬಹುದು ಮತ್ತು ಇದಕ್ಕೆ ತಗುಲುವ ವೆಚ್ಚವೂ ಕಡಿಮೆ.

ಈ ಕೆಳಗಿರುವ ಹಲವು ಉಪಾಯಗಳು, ನಿಮ್ಮ ತ್ವಚೆಯನ್ನು ಕಂಗೊಳಿಸುವಂತೆ ಮಾಡಲು ಸಹಾಯ ಮಾಡುತ್ತದೆ. ಇಲ್ಲಿ ತಿಳಿಸುವ ವಿಧಾನವನ್ನು ಪಾಲಿಸಿದರೆ, ಆರೋಗ್ಯಕರ ಬದಲಾವಣೆ ಖಂಡಿತ.

1.ನಿಂಬೆಹಣ್ಣು ಮತ್ತು ಜೇನುತುಪ್ಪ.

1.ನಿಂಬೆಹಣ್ಣು ಮತ್ತು ಜೇನುತುಪ್ಪ.

ನಿಮಗೆ ತಿಳಿದಿರುವ ಹಾಗೆ, ನಿಂಬೆಹಣ್ಣಿನಲ್ಲಿ ಸಿಟ್ರಸ್ ಅಂಶವಿರುವುದರಿಂದ, ನೈಸರ್ಗಿಕವಾಗಿ ನಿಮ್ಮ ತ್ವಚೆಯ ಮೇಲೆ ಆರೋಗ್ಯಕರ ಪರಿಣಾಮವನ್ನು ಬೀರುತ್ತದೆ. ಹಾಗೆಯೇ ಜೇನುತುಪ್ಪ ಯಾವುದೇ ತರಹದ ಖಾಯಿಲೆಗಳಿಗೂ ರಾಮಬಾಣ ಎಂಬುದು ನಿಮಗೆ ತಿಳಿದಿರುತ್ತದೆ. ಆದರಿಂದ, ಈ ವಿಧಾನವನ್ನು ಬಳಸಿ ನಿಮ್ಮ ಮುಖಕ್ಕೆ ಕವಚದ ಹಾಗೆ ಮಾಡಿಕೊಂಡರೆ, ಅದರ ಅಸಾಧಾರಣ ಫಲಿತಾಂಶವನ್ನು ನೀವೇ ಕಾಣಬಹುದು.

ಹಂತ 1: ಒಂದು ನಿಂಬೆಹಣ್ಣನ್ನು ತೆಗೆದುಕೊಂಡು, ಅದರಲ್ಲಿರುವ ಸಂಪೂರ್ಣ ರಸವನ್ನು ಒಂದು ಲೋಟಕ್ಕೆ ಹಿಂಡಿಕೊಳ್ಳಿ.

ಹಂತ 2: ನಾಲ್ಕು ಚಮಚ ಜೇನುತುಪ್ಪವನ್ನು, ನಿಂಬೆಹಣ್ಣಿನ ರಸವಿರುವ ಲೋಟಕ್ಕೆ ಹಾಕಿರಿ. ನಂತರ ಕೆಲವು ಸಮಯದವರೆಗೆ ಚನ್ನಾಗಿ ಬೆರೆಸಿರಿ.

ಹಂತ 3: ಈಗ ನಿಮ್ಮ ಮುಖವನ್ನು ತಣ್ಣೀರಿನಲ್ಲಿ ಶುಚಿಗೊಳಿಸಿ. ನಿಮ್ಮ ಮುಖ ಒಣಗಿದ ನಂತರ, ಮೇಣದಂತಿರುವ ರಸವನ್ನು ನಿಮ್ಮ ಮುಖಕ್ಕೆ ಸರಿಯಾಗಿ ಹಚ್ಚಿಕೊಳ್ಳಿ. ಅದನ್ನು ಕೆಲವು ಸಮಯದವರೆಗೆ, ಒಣಗಲು ಬಿಡಿ.

ಹಂತ 4: ನಿಮ್ಮ ಮುಖ ಸಂಪೂರ್ಣವಾಗಿ 15 - 20 ನಿಮಿಷ ಒಣಗಿದ ನಂತರ, ಹತ್ತಿಯ ಉಂಡೆ ಅಥವಾ ಬಟ್ಟೆಯನ್ನು ಹದವಾದ ನೀರಿನಲ್ಲಿ ಒದ್ದೆ ಮಾಡಿ, ನಿಮ್ಮ ಮುಖವನ್ನು ಸರಿಯಾಗಿ ಶುಚಿಗೊಳಿಸಿಕೊಳ್ಳಿ.

ಈ ಮೇಲೆ ತಿಳಿಸಿರುವ ವಿಧಾನವನ್ನು ಹಂತ, ಹಂತವಾಗಿ 3 - 4 ಬಾರಿ ಮಾಡಿ ನೋಡಿ. ನಿಮ್ಮ ಮುಖದಲ್ಲಿರುವ ಅನಾವಶ್ಯಕ ಕೂದಲುಗಳನ್ನು ತೆಗೆದಿರುತ್ತದೆ. ಹಾಗೆಯೇ ಸೂರ್ಯನ ಶಾಖಕ್ಕೆ ಕಪ್ಪಾಗಿರುವ ಕಲೆಗಳನ್ನು ತೆಗೆದಿರುತ್ತದೆ.

2.ಕಾಡು ಅರಿಶಿಣ.

2.ಕಾಡು ಅರಿಶಿಣ.

ಇದರಿಂದ ಮುಖಕ್ಕೆ ಕವಚಮಾಡಿಕೊಂಡರೆ, ಬಹಳ ಆಶ್ಚರ್ಯಕರ ಫಲಿತಾಂಶವನ್ನು ನೀಡುತ್ತದೆ. ಏಕೆಂದರೆ, ಇದನ್ನು ನಮ್ಮ ಪೂರ್ವಜರು ಮತ್ತು ಹಳೆ ಕಾಲ ಜನರೂ ಬಳಸಿ, ಇದರ ಉಪಯೋಗವನ್ನು ಕಂಡಿದ್ದರು. ಕಾಡು ಅರಿಶಿಣದಲ್ಲಿ ಚರ್ಮದಲ್ಲಿರುವ ಆಕ್ಸೈಡ್ ಅಂಶವನ್ನು ಹೋಗಲಾಡಿಸುವ ಗುಣವಿರುತ್ತದೆ. ಅದು ಚರ್ಮದಲ್ಲಿ ಹುದುಗಿರುವ ಮತ್ತು ನಮ್ಮ ಕಣ್ಣಿಗೂ ಕಾಣದಂತಹ, ಕಿಟಾಣುಗಳನ್ನು ತೆಗೆದುಹಾಕುತ್ತದೆ.

ಹಂತ 1: ಮೊದಲು ಎರಡು ಚಮಚ ಕಾಡು ಅರಿಶಿಣ ಮತ್ತು ಎರಡು ಚಮಚ ತಣ್ಣಗಿರುವ ಹಾಲನ್ನು ಸಿದ್ಧಮಾಡಿಕೊಳ್ಳಿ.

ಹಂತ 2: ಇವೆರಡನ್ನು ಒಂದು ಬೌಲ್ ನೊಳಗೆ ಹಾಕಿ, ಸರಿಯಾಗಿ ಬೆರೆಸಿರಿ.

ಹಂತ 3: ಬೌಲ್ ನಲ್ಲಿ ಮೇಣದ ಹಾಗೆ ಕಳಸಿಕೊಂಡು, ಮುಖಕ್ಕೆ ದಟ್ಟವಾಗಿ ಹಚ್ಚಿಕೊಳ್ಳಿ. ನಂತರ 15 - 20 ನಿಮಿಷ ಅದನ್ನು ಒಣಗಲು ಬಿಡಿ.

ಹಂತ 4: ನಂತರ ತಣ್ಣೀರಿನಿಂದ, ಶುಚಿಯಾಗಿ ಮುಖವನ್ನು ತೊಳೆದುಕೊಳ್ಳಿ.

ಈ ವಿಧಾನದಿಂದ, ನಿಮ್ಮ ಮುಖದಲ್ಲಿರುವ ಅನಾವಶ್ಯಕ ಕೂದಲನ್ನು ತೆಗೆದು, ಮುಖದ ತ್ವಚೆಯನ್ನು ಕಂಗೊಳಿಸುವಂತೆ, ಮಾಡುತ್ತದೆ. ಈ ವಿಧಾನದ ಕೊನೆಯಲ್ಲಿ, ದಟ್ಟವಾದ ಅರಿಶಿಣದ ಮೇಣದಿಂದ, ನಿಮ್ಮ ಮುಖದ ಮೇಲೆ ಹಳದಿ ಕಲೆ ಮಾಸದೆ ಉಳಿಯಬಹುದು. ಆದ್ದರಿಂದ, ಈ ಕೆಲಸವನ್ನು ವಾರದ ಕೊನೆಯಲ್ಲಿ ಅಥವಾ ನೀವು ಮನೆಯಲ್ಲಿ ಇರುವ ದಿನದಂದು ಮಾಡಿಕೊಳ್ಳುವುದು ಉತ್ತಮ.

3.ಗೋಧಿಯ ಕಣಗಳು. (Oats meal)

3.ಗೋಧಿಯ ಕಣಗಳು. (Oats meal)

Oats ಕಣಗಳು ಧಾನ್ಯಗಳ ಅಂಶವನ್ನು ಹೊಂದಿರುತ್ತದೆ. ಇದು ನಿಮ್ಮ ಮುಖದ ತ್ವಚೆಗೆ, ಕಾಂತಿಯನ್ನು ನೀಡುವಲ್ಲಿ ಬಹಳ ಸಹಕಾರಿಯಾಗಲಿದೆ.

ಹಂತ 1: ಮೊದಲು ಎರಡು ಚಮಚ oats ಕಣಗಳು, ಎರಡು ಚಮಚ ಜೇನುತುಪ್ಪ ಮತ್ತು ಎರಡು ಚಮಚ ನಿಂಬೆಹಣ್ಣಿನ ರಸ ತೆಗೆದುಕೊಳ್ಳಿ.

ಹಂತ 2: ಮೇಲೆ ತಿಳಿಸಿದ ಎಲ್ಲಾ ಪದಾರ್ಥವನ್ನು ಸರಿಯಾಗಿ ಬೌಲ್ ನಲ್ಲಿ ಹಾಕಿ ಬೆರೆಸಿರಿ.

ಹಂತ 3: ಕಲಸಿಕೊಂಡ ಪದಾರ್ಥ ಮೇಣದ ರೂಪಕ್ಕೆ ಬಂದಾಗ, ದಟ್ಟವಾಗಿ ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ. ನಂತರ, 15 - 20 ನಿಮಷಗಳ ಕಾಲ, ಅದನ್ನು ಒಣಗಲು ಬಿಡಿ.

ಹಂತ 4: ಅದು ಸಂಪೂರ್ಣವಾಗಿ ಒಣಗಿದ ನಂತರ, ತಣ್ಣೀರಿನಿಂದ ನಿಮ್ಮ ಮುಖವನ್ನು ಶುಚಿಗೊಳಿಸಿಕೊಳ್ಳಿ.

ಈ ವಿಧಾನವನ್ನು ವಾರದಲ್ಲಿ, ಎರಡು ಅಥವಾ ಮೂರು ಬಾರಿ ಮಾಡಿಕೊಳ್ಳಿ. ಇದರಿಂದ ಆಗುವ ಬದಲಾವಣೆ, ಸ್ವತಃ ನಿಮಗೆ ಆಶ್ಚರ್ಯವನ್ನು ಉಂಟುಮಾಡಬಹುದು. ಮುಖದ ಕಾಂತಿಯು ಹೆಚ್ಚಿರುತ್ತದೆ.

4.ಕಡಲೆಹಿಟ್ಟು.

4.ಕಡಲೆಹಿಟ್ಟು.

ಕಡಲೆಹಿಟ್ಟುನಿಂದ ಸಾಮಾನ್ಯವಾಗಿ ಎಲ್ಲರೂ ಮುಖಕ್ಕೆ ಆರೈಕೆ ಮಾಡಿಕೊಳ್ಳುತ್ತಾರೆ. ಇದು ಕೇವಲ ಅನಾವಶ್ಯಕ ಕೂದಲನ್ನು ತೆಗೆಯುವುದು ಮಾತ್ರವಲ್ಲ, ಮುಖದ ಚರ್ಮದಲ್ಲಿ ಸತ್ತ ಜೀವಕಣಗಳನ್ನು ತೆಗೆದು ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ.

ಹಂತ 1: ಮೊದಲು ಎರಡು ಚಮಚ ಕಡಲೆ ಹಿಟ್ಟು, ಒಂದು ಚಮಚ ತಣ್ಣಗಿರುವ ಹಾಲು ಮತ್ತು ಒಂದು ಚಮಚ ಅರಿಶಿಣ ತೆಗೆದುಕೊಳ್ಳಿ.

ಹಂತ 2: ಈ ಎಲ್ಲಾ ಪದಾರ್ಥವನ್ನು ಒಂದು ಬೌಲ್ ನಲ್ಲಿ ಹಾಕಿ, ಮೇಣದ ರೀತಿಯಲ್ಲಿ ಕಲಸಿಕೊಳ್ಳಿ.

ಹಂತ 3: ಅದನ್ನು ನಿಮ್ಮ ಮುಖಕ್ಕೆ, ದಟ್ಟವಾಗಿ ಹಚ್ಚಿಕೊಳ್ಳಿ. ನಂತರ 20 ನಿಮಿಷಗಳವರೆಗೆ, ಅದನ್ನು ಒಣಗಲು ಬಿಡಿ.

ಹಂತ 4: ಅದು ಸಂಪೂರ್ಣವಾಗಿ ಒಣಗಿದ ನಂತರ, ಹದವಾದ ನೀರಿನಲ್ಲಿ ಅದ್ದಿದ ಯಾವುದಾದರೂ ಮೃದುವಾದ ಬಟ್ಟೆ ಅಥವಾ ಹತ್ತಿಯಿಂದ ನಿಮ್ಮ ಮುಖವನ್ನು ಶುಚಿಗೊಳಿಸಿಕೊಳ್ಳಿ.

ಈ ವಿಧಾನವನ್ನು ವಾರದಲ್ಲಿ, ಎರಡು ಅಥವಾ ಮೂರು ಬಾರಿ ಮಾಡಿಕೊಳ್ಳಿ.

5.ಪರಂಗಿ ಹಣ್ಣು.

5.ಪರಂಗಿ ಹಣ್ಣು.

ಪರಂಗಿ ಹಣ್ಣು ನೈಸರ್ಗಿಕ ಬ್ಲೀಚ್ ಆಗಿ ಕಾರ್ಯನಿರ್ವಹಿಸುತ್ತದೆ. ಯಾವುದೇ ಅಡ್ಡ ಪರಿಣಾಮಗಳಿಲ್ಲದೆ, ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ.

ಹಂತ 1: ಪರಂಗಿ ಹಣ್ಣನ್ನು ಕತ್ತರಿಸಿ, ಸರಿಯಾಗಿ ಜೆಜ್ಜಿಕೊಳ್ಳಿ. ಜೆಜ್ಜಿಕೊಂಡ ಪರಂಗಿ ಹಣ್ಣಿನ ಎರಡು ಚಮಚ ಮತ್ತು ಎರಡು ಚಮಚ ತಣ್ಣಗಿರುವ ಹಾಲು.

ಹಂತ 2: ಈ ಪದಾರ್ಥವನ್ನು ಸರಿಯಾಗಿ ಬೆರೆಸಿ, ಮೇಣದ ರೂಪಕ್ಕೆ ತಯಾರಿಸಿ.

ಹಂತ 3: ಇದನ್ನು ನಿಮ್ಮ ಮುಖಕ್ಕೆ ಹಚ್ಚಿಕೊಂಡು, ಕನಿಷ್ಠ 20 - 22 ನಿಮಿಷಗಳ ವರೆಗೆ, ಅದನ್ನು ಒಣಗಲು ಬಿಡಿ.

ಹಂತ 4: ನಿಮ್ಮ ಕೈಯನ್ನು ಬಳಸಿ, ಮುಖದ ಮೇಲೆ ನಿಧಾನವಾಗಿ ಒರೆಸಿಕೊಳ್ಳಿ. ಕಪ್ಪಾಗಿರುವ ಚರ್ಮದ ಮೇಲೆ ಸರಿಯಾಗಿ ಹರಡಿಕೊಳ್ಳಿ.

ಹಂತ 5: ಹದವಾದ ನೀರಿನಲ್ಲಿ ಅದ್ದಿದ ಬಟ್ಟೆಯಿಂದ ಅಥವಾ ಹತ್ತಿಯಿಂದ, ನಿಮ್ಮ ಮುಖವನ್ನು ಶುಚಿಗೊಳಿಸಿಕೊಳ್ಳಿ.

ಈ ವಿಧಾನದಿಂದ ಬಹಳ ಒಳ್ಳೆಯ ಬದಲಾವಣೆಯನ್ನು ಕಾಣಬಹುದು.

6.ಕಾಫೀ ಮತ್ತು ಅಡುಗೆ ಸೋಡ

6.ಕಾಫೀ ಮತ್ತು ಅಡುಗೆ ಸೋಡ

ಕಾಫಿ ಪುಡಿಯಲ್ಲಿ ನಮ್ಮ ಚರ್ಮವನ್ನು ಹೊಳಪಿಸುವ ಅಂಶವಿದೆ. ಅದನ್ನು ನಾವು ಅಡುಗೆ ಸೋಡದೊಂದಿಗೆ ಬೆರೆಸಿಕೊಂಡರೆ, ಮುಖದಲ್ಲಿರುವ ಅನಾವಶ್ಯಕ ಕೂದಲನ್ನು ತೆಗೆಹಾಕುತ್ತದೆ.

ಹಂತ 1: ಮೊದಲು ಒಂದು ಚಮಚ ಅಡುಗೆ ಸೋಡ, ಒಂದು ಚಮಚ ಕಾಫಿ ಪುಡಿ ಮತ್ತು ಸ್ವಲ್ಪ ನೀರು.

ಹಂತ 2: ಈ ಮೂರನ್ನು ಸರಿಯಾಗಿ ಬೆರೆಸಿ, ಮೇಣದ ರೂಪಕ್ಕೆ ತಯಾರಿಸಿಕೊಳ್ಳಿ.

ಹಂತ 3: ಇದನ್ನು ನಿಮ್ಮ ಮುಖಕ್ಕೆ ದಟ್ಟವಾಗಿ ಹಚ್ಚಿಕೊಂಡು, 5 - 7 ನಿಮಿಷದ ವರೆಗೆ ಒಣಗಲು ಬಿಡಿ.

ಹಂತ 4: ಹದವಾದ ನೀರಿನಲ್ಲಿ ಅದ್ದಿದ ಹತ್ತಿ ಅಥವಾ ಬಟ್ಟೆಯಿಂದ ಸರಿಯಾಗಿ ಶುಚಿಗೊಳಿಸಿಕೊಳ್ಳಿ.

ಇದನ್ನು 3 - 4 ಬಾರಿ ಮಾಡಿಕೊಂಡರೆ, ನಿಮ್ಮ ಮುಖದಲ್ಲಿರುವ ಅನಾವಶ್ಯಕ ಕೂದಲುಗಳನ್ನು ಶಾಶ್ವತವಾಗಿ ತೆಗೆದುಬಿಡುತ್ತದೆ.

7.ಕೆಂಪು ಮಸೂರಗಳು.(Red lentils)

7.ಕೆಂಪು ಮಸೂರಗಳು.(Red lentils)

ಮಸೂರಗಳಿಗೆ, ಮುಖವನ್ನು ಕಾಂತಿಗೊಳಿಸುವ ಮತ್ತು ಮುಖದಲ್ಲಿರುವ ಅನಾವಶ್ಯಕ ಕೂದಲುಗಳನ್ನು ತೆಗೆಯುವ ಶಕ್ತಿ ಇದೆ. ಅದಕ್ಕೆ ಸ್ವಲ್ಪ ಹಾಲನ್ನು ಬೆರೆಸಿ ತಯಾರಿಸಿಕೊಂಡರೆ, ನಿಮ್ಮ ಚರ್ಮ ಮೃದುವಾಗುತ್ತದೆ.

ಹಂತ 1: ಅರ್ಧ ಕಪ್ಪಿನಷ್ಟು, ಕೆಂಪು ಮಸೂರಗಳನ್ನು ಹಚ್ಚಲು ಸಿಗುವಂತೆ ಪುಡಿಮಾಡಿಕೊಳ್ಳಿ.

ಹಂತ 2: ಎರಡು ಚಮಚ ತಣ್ಣಗಿರುವ ಹಾಲನ್ನು ಅಥವಾ ಜೇನುತುಪ್ಪವನ್ನು ಅದಕ್ಕೆ ಬೆರೆಸಿಕೊಳ್ಳಿ. ಅದನ್ನು ಮೇಣದ ರೀತಿಯಲ್ಲಿ ಕಲಸಿ, 15 ನಿಮಿಷ ಪಕ್ಕಕ್ಕಿಡಿ.

ಹಂತ 3: ಉಳಿದ ಕೆಂಪು ಮಸೂರೆಗಳ ಪುಡಿಯನ್ನು, ಗಾಳಿ ಆಡದ ಜಾರ್ ನಲ್ಲಿ ಇಡಿ.

ಹಂತ 4: ತಯಾರಿಸಿರುವ ಮೇಣವನ್ನು ಮುಖಕ್ಕೆ ದಟ್ಟವಾಗಿ ಹಚ್ಚಿಕೊಳ್ಳಿ. ನಂತರ 15 - 20 ನಿಮಿಷದ ವರೆಗೆ, ಒಣಗಲು ಬಿಡಿ.

ಹಂತ 5: ಈಗ ಮುಖದ ತುಂಬಾ ಹಚ್ಚಿಕೊಂಡಿರುವುದನ್ನು, ಕೈಯಲ್ಲಿ ಸರಿಯಾಗಿ ತಿಕ್ಕಿಕ್ಕೊಂಡು, ನೀರಿನಿಂದ ನಿಮ್ಮ ಮುಖವನ್ನು ಶುಚಿಮಾಡಿಕೊಳ್ಳಿ.

ಮುಖದಲ್ಲಿರುವ ಅನಾವಶ್ಯಕ ಕೂದಲುಗಳನ್ನು ತೆಗೆದುಹಾಕಲು ಇದು ಬಹಳ ಸಹಕಾರಿಯಾಗಲಿದೆ.

8.ಕಿತ್ತಳೆ ಸಿಪ್ಪೆ.

8.ಕಿತ್ತಳೆ ಸಿಪ್ಪೆ.

ಕಿತ್ತಾಳೆಯಲ್ಲಿಯೂ ಕೂಡ, ಸಿಟ್ರಸ್ ಅಂಶವಿರುವುದರಿಂದ ಮುಖದ ಕಾಳಜಿಗೆ ಇದು ಫಲಕಾರಿಯಾಗಲಿದೆ. ಮುಖದ ಕೂದಲನ್ನು ತೆಗೆಯುವ ಗುಣವಿದೆ.

ಹಂತ 1: ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ತೆಗೆದು, ಸೂರ್ಯನ ಬಿಸಿಲಿಗೆ ಎರಡು ದಿನಗಳ, ಕಾಲ ಚೆನ್ನಾಗಿ ಒಣಗಿಸಿ.

ಹಂತ 2: ಸೂರ್ಯನ ಶಾಖಕ್ಕೆ ಒಣಗಿ ಗಟ್ಟಿಯಾಗಿರುತ್ತದೆ. ಅದನ್ನು ನಿಮ್ಮ ಮಿಕ್ಸಿ ಅಥವಾ ಯಾವುದಾದರೂ ಉಪಕರಣದ ಸಹಾಯದಿಂದ, ಸರಿಯಾಗಿ ಪುಡಿಮಾಡಿಕೊಳ್ಳಿ.

ಹಂತ 3: ಈಗ ಕಿತ್ತಳೆ ಪುಡಿ ಹಚ್ಚಿಕೊಳ್ಳಲು ತಯಾರಾಗಿದೆ.

ಹಂತ 4: ಮೊದಲು ಎರಡು ಚಮಚ ಕಿತ್ತಳೆ ಪುಡಿಯನ್ನು ತೆಗೆದುಕೊಳ್ಳಿ. ಅದಕ್ಕೆ ಗಂಧದ ಮರದ ಪುಡಿ, ಆಲುಗೆಡ್ಡೆಯ ರಸ, ಗುಲಾಬಿ ನೀರು ಮತ್ತು ಸ್ವಲ್ಪ ನೀರು. ಇವೆಲ್ಲಾ ಬೆರೆಸಿ, ಮೇಣದ ಹಾಗೆ ತಯಾರಿಸಿಕೊಳ್ಳಿ.

ಹಂತ 5: ನಿಮ್ಮ ಮುಖವನ್ನು ಸರಿಯಾಗಿ ಹಚ್ಚಿಕೊಂಡು, 15 - 20 ನಿಮಿಷ ಒಣಗಲು ಬಿಡಿ.

ಹಂತ 6: ಹದವಾದ ನೀರಿನಲ್ಲಿ ಅದ್ದಿದ ಹತ್ತಿ ಅಥವಾ ಬಟ್ಟೆಯಿಂದ ಚನ್ನಾಗಿ ಶುಚಿಗೊಳಿಸಿಕೊಳ್ಳಿ.

ಹಂತ 7: ನಂತರ ಟೋನರ್ ಅಥವಾ ಮೊಯಿಶ್ಚರೈಸರ್(moisturiser) ಅನ್ನು ಹಚ್ಚಿಕೊಳ್ಳಿ.

ಸಲಹೆ: ಈ ಮೇಲೆ ತಿಳಿಸಿರುವ ಎಲ್ಲಾ ವಿಧಾನವನ್ನು ಮಾಡಿಕೊಂಡ ನಂತರ, ಮುಖದ ಕವಚ ತೆಗೆದು, ಟೋನರ್ ಅಥವಾ ಮೊಯಿಶ್ಚರೈಸರನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ. ಆ ಕವಚವನ್ನು ತೆಗೆದ ನಂತರ ಯಾವುದೇ, ಫೇಸ್ ವಾಷ್ ಗಳಿಂದ ಮುಖವನ್ನು ತೊಳೆದುಕೊಳ್ಳಬೇಡಿ.

ಇದಿಷ್ಟು ಮನೆಯಲ್ಲಿಯೇ ತಯಾರಿಸಲು ಆಗುವಂತಹ ಮತ್ತು ನೈಸರ್ಗಿಕವಾಗಿ ಮುಖಕ್ಕೆ ಆರೈಕೆ ಮಾಡಿಕೊಳ್ಳುವ ಸಲಹೆಗಳು. ಸೌಂದರ್ಯವನ್ನು ಯಾವಾಗಲೂ ನೈಸರ್ಗಿಕವಾಗಿ ಆರೈಕೆ ಮಾಡಬೇಕೆ ಹೊರತು, ಅದರ ಮೇಲೆ ರಾಸಾಯನಿಕವನ್ನು ಪ್ರಯೋಗಿಸಬಾರದು. ಏಕೆಂದರೆ, ಚರ್ಮ ತನ್ನ ಕೋಮಲ ತನವನ್ನು ಕಳೆದುಕೊಳ್ಳುತ್ತದೆ. ಈ ಮೇಲಿನ ಎಲ್ಲಾ ಪದಾರ್ಥಗಳು, ನಿಮ್ಮ ಮುಖದ ಕಾಂತಿಯನ್ನು ಹೆಚ್ಚಿಸುವಲ್ಲಿಯೂ ಸಹಾಯ ಮಾಡುತ್ತದೆ ಇನ್ನು ಮುಂದೆ ಯಾದರೂ, ಸಲೂನ್ ಚಿಕಿತ್ಸೆಗಳಿಗೆ ಹಣವನ್ನು ಪೋಲು ಮಾಡುವ ಬದಲು, ನಿಮ್ಮ ಮನೆಯಲ್ಲಿಯೇ ತಯಾರಿಸಿ, ಶಾಶ್ವತ ಫಲಿತಾಂಶವನ್ನು ನಿಮ್ಮದಾಗಿಸಿಕೊಳ್ಳಿ.

Read more about: skin care tips
English summary

EFFECTIVE FACE MASKS FOR WHITENING FACIAL HAIR NATURALLY AT HOME

Not most people are aware of the fact that facial waxing, bleaching, laser treatment, etc., might affect your skin drastically leading to health risks. In such cases, homemade masks work wonders for your skin. Lemon-honey mask, oatmeal mask, papaya mask, chickpea flour mask, etc., are some hacks you must definitely try.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more