For Quick Alerts
ALLOW NOTIFICATIONS  
For Daily Alerts

ನೀವೇ ಮನೆಯಲ್ಲಿ ಮಾಡಿ ನೋಡಿ: ಕಾಂತಿಯುತ ತ್ವಚೆಗಾಗಿ ಸರಳ ಫೇಸ್ ಮಾಸ್ಕ್‌ಗಳು

|

ನೈಸರ್ಗಿಕವಾಗಿ ಕಾಂತಿಯುತ ಹಾಗೂ ತಾರುಣ್ಯಪೂರ್ಣ ತ್ವಚೆಯನ್ನು ಹೊಂದುವುದು ಬಹುತೇಕ ಎಲ್ಲರಿಗೂ ಇಷ್ಟದ ಸಂಗತಿಯಾಗಿದೆ. ಹಾಗಾದರೆ ಯಾವ ನೈಸರ್ಗಿಕ ವಿಧಾನಗಳಿಂದ ಕಾಂತಿಯುತ ತ್ವಚೆಯನ್ನು ಪಡೆದುಕೊಳ್ಳಬಹುದು ಎಂಬ ಕುತೂಹಲ ನಿಮ್ಮಲ್ಲಿದ್ದರೆ ಈ ಅಂಕಣ ಓದಿ... ನೈಸರ್ಗಿಕ ವಸ್ತುಗಳನ್ನು ಬಳಸಿ ಸುಂದರವಾದ ತ್ವಚೆಯನ್ನು ನಿಮ್ಮದಾಗಿಸಿಕೊಳ್ಳಬಹುದು. ಇದು ಆಶ್ಚರ್ಯವೆನಿಸಿದರೂ ಸತ್ಯ. ದುಬಾರಿ ಖರ್ಚಿಲ್ಲದೆ ಮನೆಯಲ್ಲಿಯೇ ಸುಲಭವಾಗಿ ನೈಸರ್ಗಿಕ ವಿಧಾನಗಳಲ್ಲಿ ಫೇಸ್ ಪ್ಯಾಕ್ ತಯಾರಿಸಿ ಬಳಸಬಹುದು.

ಇಂದಿನ ವೇಗದ ಹಾಗೂ ಒತ್ತಡದ ಜೀವನದಲ್ಲಿ ಚರ್ಮದ ಆರೈಕೆಯ ಬಗ್ಗೆ ಸಮಯ ನೀಡಲು ಬಹುತೇಕರಿಗೆ ಸಾಧ್ಯವಾಗುತ್ತಿಲ್ಲ. ಆದರೆ ಮನೆಯಲ್ಲಿಯೇ ಜಾಸ್ತಿ ಖರ್ಚಿಲ್ಲದೆ ಸುಲಭ ವಿಧಾನಗಳಿಂದ ತ್ವಚೆಯ ಸಂಪೂರ್ಣ ಆರೈಕೆ ಮಾಡಬಹುದು. ಆ ಮೂಲಕ ಕಾಂತಿಯುತ ತ್ವಚೆಯನ್ನು ನಿಮ್ಮದಾಗಿಸಿಕೊಳ್ಳಬಹುದು. ಸುಂದರ, ಕಾಂತಿಯುತ ತ್ವಚೆಗಾಗಿ ಸುಲಭ ಫೇಸ್ ಮಾಸ್ಕ್ ವಿಧಾನಗಳು:

ಪಪ್ಪಾಯಿ ಹಾಗೂ ನಿಂಬೆ ರಸದ ಫೇಸ್ ಮಾಸ್ಕ್

ಪಪ್ಪಾಯಿ ಹಾಗೂ ನಿಂಬೆ ರಸದ ಫೇಸ್ ಮಾಸ್ಕ್

ಪಪ್ಪಾಯಿ ಹಣ್ಣಿನಲ್ಲಿರುವ ಆಂಟಿ ಹೈಡ್ರಾಕ್ಸಿ ಆಸಿಡ್ ನಿರ್ಜೀವ ಚರ್ಮಕೋಶಗಳನ್ನು ತೆಗೆದು ಹಾಕಿ ಚರ್ಮದ ರಂಧ್ರಗಳನ್ನು ತೆರೆಯಲು ಸಹಕಾರಿಯಾಗಿದೆ. ನಿಂಬೆ ರಸ ಚರ್ಮದ ಮೊಡವೆ ಹಾಗೂ ಕಲೆಗಳನ್ನು ನಿವಾರಿಸಿ ಚರ್ಮಕ್ಕೆ ಕಾಂತಿ ನೀಡುವ ಗುಣ ಹೊಂದಿದೆ.

Most Read: ಡಾರ್ಕ್ ಸರ್ಕಲ್ ನಿವಾರಣೆಗೆ, ಬರೀ ಒಂದು ಹಿಡಿ ಪುದೀನಾ ಎಲೆಗಳು ಸಾಕು!

ಬಳಸುವ ವಿಧಾನ

ಬಳಸುವ ವಿಧಾನ

ಹಣ್ಣಾದ ಪಪ್ಪಾಯಿಯೊಂದರ ಅರ್ಧ ಭಾಗ ತೆಗೆದುಕೊಂಡು ಅದನ್ನು ಸಣ್ಣದಾಗಿ ಕತ್ತರಿಸಿಕೊಳ್ಳಿ. ಇದನ್ನು ಮಿಕ್ಸಿಗೆ ಹಾಕಿ ಗಟ್ಟಿ ಹಾಗೂ ನುಣುಪಾದ ಪೇಸ್ಟ್ ತಯಾರಿಸಿ. ಇದಕ್ಕೆ ಕೆಲ ಹನಿ ನಿಂಬೆ ರಸ ಸೇರಿಸಿ ಸರಿಯಾಗಿ ಮಿಕ್ಸ್ ಮಾಡಿ. ಈ ಪೇಸ್ಟ್ ಅನ್ನು ಮುಖ ಹಾಗೂ ಕತ್ತಿನ ಭಾಗಕ್ಕೆ ಹಚ್ಚಿಕೊಂಡು ಸುಮಾರು ೨೦ ನಿಮಿಷದವರೆಗೆ ಹಾಗೆಯೇ ಬಿಡಿ. ನಂತರ ತಣ್ಣೀರಿನಲ್ಲಿ ಮುಖ ತೊಳೆದುಕೊಳ್ಳಿ. ಕನಿಷ್ಠ ವಾರಕ್ಕೊಮ್ಮೆ ಈ ವಿಧಾನ ಅನುಸರಿಸುವುದು ಒಳ್ಳೆಯದು.

ಗ್ರೀನ್ ಟೀ ಹಾಗೂ ಜೇನಿನ ಫೇಸ್ ಮಾಸ್ಕ್

ಗ್ರೀನ್ ಟೀ ಹಾಗೂ ಜೇನಿನ ಫೇಸ್ ಮಾಸ್ಕ್

ಚರ್ಮದ ಆರೈಕೆಗಾಗಿ ನೀವು ಬಳಸಿ ಬಿಟ್ಟ ಗ್ರೀನ್ ಟೀ ಬ್ಯಾಗ್‌ಗಳನ್ನು ಸಹ ಉಪಯೋಗಿಸಬಹುದು. ಗ್ರೀನ್ ಟೀ ಚರ್ಮದ ಮೇಲಿನ ಕೊಳೆಯನ್ನು ನಿವಾರಿಸುವ ಗುಣ ಹೊಂದಿದೆ. ಇನ್ನು ಜೇನು ತುಪ್ಪ ಚರ್ಮಕ್ಕೆ ಹಿತವನ್ನುಂಟು ಮಾಡುತ್ತದೆ.

Most Read: ಒಣ ತ್ವಚೆ ಸಮಸ್ಯೆಯೇ? ಹಾಗಾದರೆ ದಾಸವಾಳದ ಮಾಯಿಶ್ಚರೈಸರ್‌ ಪ್ರಯತ್ನಿಸಿ

ಬಳಸುವ ವಿಧಾನ

ಬಳಸುವ ವಿಧಾನ

ಬಳಸಿದ ಗ್ರೀನ್ ಟೀ ಬ್ಯಾಗ್ ಒಂದನ್ನು ಕಟ್ ಮಾಡಿ ಅದರೊಳಗಿಂದ ಚಹಾ ಎಲೆಗಳನ್ನು ಹೊರತೆಗೆದಿಟ್ಟುಕೊಳ್ಳಿ. ಇದನ್ನು ಸ್ವಚ್ಛ ಬಟ್ಟಲಿಗೆ ಹಾಕಿ ಅದರಲ್ಲಿ 1 ರಿಂದ 2 ಟೇಬಲ್ ಸ್ಪೂನ್ ಜೇನು ತುಪ್ಪ ಹಾಕಿ ಸರಿಯಾಗಿ ಮಿಕ್ಸ್ ಮಾಡಿ. ಸ್ವಚ್ಛವಾಗಿ ಮುಖ ತೊಳೆದುಕೊಂಡ ನಂತರ ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಳ್ಳಿ. 5 ರಿಂದ 10 ನಿಮಿಷಗಳ ನಂತರ ಇದನ್ನು ಸಾದಾ ನೀರಿನಿಂದ ತೊಳೆದುಕೊಳ್ಳಿ. ವಾರಕ್ಕೆರಡು ಬಾರಿ ಈ ವಿಧಾನವನ್ನು ಅನುಸರಿಸಬಹುದು.

ಬಾದಾಮಿ ಹಾಗೂ ಜೇನು ತುಪ್ಪದ ಮಾಸ್ಕ್

ಬಾದಾಮಿ ಹಾಗೂ ಜೇನು ತುಪ್ಪದ ಮಾಸ್ಕ್

ಬಾದಾಮಿ ಬೀಜಗಳಲ್ಲಿನ ಆಂಟಿ ಆಕ್ಸಿಡೆಂಟ್, ವಿಟಮಿನ್-ಇ ಹಾಗೂ ಫ್ಯಾಟ್‌ಗಳು ಚರ್ಮಕ್ಕೆ ಹೊಳಪು ನೀಡುತ್ತವೆ. ಇದನ್ನು ಚರ್ಮದ ಮೇಲೆ ಲೇಪಿಸುವುದರಿಂದ ಇದು ನಿರ್ಜೀವ ಜೀವಕೋಶಗಳನ್ನು ತೆಗೆದು ಹಾಕಿ, ಚರ್ಮವನ್ನು ಆಳವಾಗಿ ಸ್ವಚ್ಛಗೊಳಿಸುತ್ತದೆ.

Most Read: ಲಿಂಬೆ ಬಳಸಿ ಕಪ್ಪು ತುಟಿಗಳ ಸಮಸ್ಯೆ ನೈಸರ್ಗಿಕವಾಗಿ ಬಗೆಹರಿಸಿ

ಬಳಸುವ ವಿಧಾನ

ಬಳಸುವ ವಿಧಾನ

10ರಿಂದ 15 ಬಾದಾಮಿ ಬೀಜಗಳನ್ನು ಕೆಲ ಗಂಟೆಗಳವರೆಗೆ ನೀರಲ್ಲಿ ನೆನೆಸಿಡಿ. ನಂತರ ಇದನ್ನು ಅರೆದು ನುಣ್ಣನೆಯ ಪೇಸ್ಟ್ ತಯಾರಿಸಿ. ಇದಕ್ಕೆ 2 ಟೇಬಲ್ ಸ್ಪೂನ್ ಜೇನು ತುಪ್ಪ ಸೇರಿಸಿ ಸರಿಯಾಗಿ ಮಿಕ್ಸ್ ಮಾಡಿ. ಪೇಸ್ಟ್ ಅನ್ನು ಮುಖದ ಮೇಲೆ ಹಚ್ಚಿಕೊಂಡು ವೃತ್ತಾಕಾರವಾಗಿ ಮೆತ್ತಗೆ ಮಸಾಜ್ ಮಾಡಿ. 20 ನಿಮಿಷಗಳ ನಂತರ ತೊಳೆದುಕೊಳ್ಳಿ.

ಅಲೋವೆರಾ ಹಾಗೂ ಗ್ರೀನ್ ಟೀ ಮಾಸ್ಕ್

ಅಲೋವೆರಾ ಹಾಗೂ ಗ್ರೀನ್ ಟೀ ಮಾಸ್ಕ್

ಆರೋಗ್ಯಕರ ತ್ವಚೆಗೆ ಬೇಕಾಗುವಂಥ ಎಲ್ಲ ವಿಟಮಿನ್ ಹಾಗೂ ಮಿನರಲ್ ಗಳು ಅಲೊ ವೆರಾದಲ್ಲಿವೆ. ಇದು ಚರ್ಮದ ಮೇಲಿನ ಕಪ್ಪು ಕಲೆಗಳನ್ನು ನಿವಾರಿಸಲು ಸಹಕಾರಿಯಾಗಿದೆ.

ಬಳಸುವ ವಿಧಾನ

ಬಳಸುವ ವಿಧಾನ

2 ರಿಂದ 4 ಟೇಬಲ್ ಸ್ಪೂನ್‌ಗಳಷ್ಟು ಅಲೊವೆರಾವನ್ನು ಬ್ಲೆಂಡರ್‌ಗೆ ಹಾಕಿ. ಇದಕ್ಕೆ 1 ಟೇಬಲ್ ಸ್ಪೂನ್ ಗ್ರೀನ್ ಟೀ ಸೇರಿಸಿ ಚೆನ್ನಾಗಿ ಬ್ಲೆಂಡ್ ಮಾಡಿ ನುಣುಪಾದ ಪೇಸ್ಟ್ ತಯಾರಿಸಿ. ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ 15 ರಿಂದ 20 ನಿಮಿಷ ಇರಲು ಬಿಟ್ಟು ನಂತರ ತೊಳೆದುಕೊಳ್ಳಿ. ಆಗಾಗ ಈ ವಿಧಾನವನ್ನು ಅನುಸರಿಸಿ ಕಾಂತಿಯುತ ಚರ್ಮವನ್ನು ನಿಮ್ಮದಾಗಿಸಿಕೊಳ್ಳಬಹುದು.

English summary

Face Masks For Glowing Skin That You Can Make At Home

Are you looking for ways to get a glowing and flawless skin naturally? Often our skin loses the glow when we fail to take care of it due to our busy schedules. But pampering your skin can be made easy and cost effective with the natural home remedies mentioned here. You can use ingredients like honey, papaya, etc. for glowing skin.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more