For Quick Alerts
ALLOW NOTIFICATIONS  
For Daily Alerts

ಬ್ಯೂಟಿ ಟಿಪ್ಸ್: ಕೂದಲು ಹಾಗೂ ಮುಖದ ಸೌಂದರ್ಯ ಹೆಚ್ಚಿಸುತ್ತೆ 'ಮೂಲಂಗಿ'

|

ಮೂಲಂಗಿಯಲ್ಲಿ ಹಲವಾರು ರೀತಿಯ ಆರೋಗ್ಯ ಗುಣಗಳು ಇದ್ದರೂ ಸಹಿತ ಇದರ ವಾಸನೆಯಿಂದಾಗಿ ಹೆಚ್ಚಿನವರಿಗೆ ಇಷ್ಟವಾಗದು. ಇದರ ಲಾಭಗಳನ್ನು ತಿದುಕೊಂಡಿರುವಂತಹವರು ತಮ್ಮ ಆಹಾರ ಕ್ರಮದಲ್ಲಿ ಬಳಸಿಕೊಳ್ಳುವರು. ಆದರೆ ಮೂಲಂಗಿಯು ಕೇವಲ ದೇಹದ ಆರೋಗ್ಯಕ್ಕೆ ಮಾತ್ರವಲ್ಲದೆ ಇದರಿಂದ ಕೂದಲು ಹಾಗೂ ತ್ವಚೆಯ ಆರೈಕೆ ಮಾಡಬಹುದು ಎಂದು ನಿಮಗೆ ತಿಳಿದಿದೆಯಾ? ಇದು ಹೇಗೆ ಎಂದು ನೀವು ಅಚ್ಚರಿಪಡಬಹುದು. ಮೂಲಂಗಿಯಿಂದಲೂ ನಿಮ್ಮ ಸೌಂದರ್ಯವನ್ನು ವೃದ್ಧಿಸಬಹುದು.

ಮೂಲಂಗಿಯು ವಿಟಮಿನ್ ಗಳಿಂದ ಸಮೃದ್ಧವಾಗಿದೆ. ಇದು ಹಲವಾರು ರೀತಿಯ ತ್ವಚೆಯ ಸಮಸ್ಯೆ ನಿವಾರಣೆ ಮಾಡುವುದು. ಮೂಲಂಗಿಯಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಮತ್ತು ಸೂಕ್ಷ್ಮಾಣುವಿರೋಧಿ, ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ. ದೇಹವನ್ನು ನಿರ್ವಿಷಗೊಳಿಸಲು ಇದು ಪ್ರಮುಖ ಪಾತ್ರ ವಹಿಸುವುದು. ಇಷ್ಟು ಮಾತ್ರವಲ್ಲದೆ ಮೂಲಂಗಿಯಲ್ಲಿ ಇರುವಂತಹ ಹಲವಾರು ಗುಣಗಳು ಮತ್ತು ಲಾಭಗಳನ್ನು ಇಲ್ಲಿ ನೀಡಲಾಗಿದೆ ಮುಂದೆ ಓದಿ..

1. ಚರ್ಮಕ್ಕೆ ತೇವಾಂಶ

1. ಚರ್ಮಕ್ಕೆ ತೇವಾಂಶ

ಮೂಲಂಗಿಯಲ್ಲಿ ಹೆಚ್ಚಿನ ಮಟ್ಟದ ನೀರಿನಾಂಶವಿರುವ ಕಾರಣದಿಂದಾಗಿ ಇದು ಚರ್ಮಕ್ಕೆ ತೇವಾಂಶ ನೀಡುವುದು. ಒಣ ಹಾಗೂ ಚರ್ಮ ಎದ್ದುಬರುವ ಸಮಸ್ಯೆಯನ್ನು ದೂರಮಾಡಿ, ದೇಹವನ್ನು ತೇವಾಂಶದಿಂದ ಇಡುವುದು. ನಿಮ್ಮ ದೇಹವನ್ನು ತೇವಾಂಶದಿಂದ ಇಡಲು ಪ್ರತಿನಿತ್ಯ ಮೂಲಂಗಿ ಜ್ಯೂಸ್ ಕುಡಿಯಿರಿ.

2.ಚರ್ಮದ ಕಾಯಿಲೆ ನಿವಾರಣೆ

2.ಚರ್ಮದ ಕಾಯಿಲೆ ನಿವಾರಣೆ

ಈ ಮೊದಲು ಹೇಳಿರುವಂತಹ ಮೂಲಂಗಿಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ಸೂಕ್ಷ್ಮಾಣು ವಿರೋಧಿ ಗುಣಗಳು ಇವೆ. ವಿಟಮಿನ್ ಸಿ ಕೂಡ ಇದರಲ್ಲಿರುವ ಕಾರಣದಿಂದಾಗಿ ಮೊಡವೆ ಹಾಗೂ ಬೊಕ್ಕೆಗಳಂತಹ ಚರ್ಮದ ಸಮಸ್ಯೆಗಳನ್ನು ನಿವಾರಿಸುವುದು. ಪ್ರತಿನಿತ್ಯ ಮೂಲಂಗಿ ರಸವನ್ನು ಬಾಧಿತ ಜಾಗಕ್ಕೆ ಹಚ್ಚಿಕೊಳ್ಳಿ.

Most Read: ಶನಿ ದೇವನ ನಿಧಾನ ಗತಿಯ ಚಲನೆಯ ಹಿಂದಿರುವ ಅಸಲಿ ಕಹಾನಿ...

3. ಶುದ್ಧ ತ್ವಚೆ

3. ಶುದ್ಧ ತ್ವಚೆ

ಮೂಲಂಗಿಯು ಶುದ್ಧ ತ್ವಚೆ ನೀಡುವುದು. ಇದರಲ್ಲಿ ಇರುವಂತಹ ಉನ್ನತ ಮಟ್ಟದ ನಾರಿನಾಂಶವು ದೇಹ ಮತ್ತು ಚರ್ಮದ ವಿಷಕಾರಿ ಅಂಶಗಳನ್ನು ತೆಗೆದುಹಾಕುವುದು. ಇದರಿಂದ ಶುದ್ಧ ಚರ್ಮವು ನಿಮ್ಮದಾಗುವುದು. ಪ್ರತಿಯೊಬ್ಬರಿಗೂ ಕಾಂತಿಯುತ ಚರ್ಮ ಬೇಕಾಗುವುದು. ಇದಕ್ಕಾಗಿ ನಿಮ್ಮ ಆಹಾರ ಕ್ರಮದಲ್ಲಿ ನೀವು ಮೂಲಂಗಿ ಜ್ಯೂಸ್ ನ್ನು ಸೇರಿಸಿಕೊಳ್ಳಿ.

4. ಕ್ಲೆನ್ಸರ್ ಆಗಿ ಕೆಲಸ ಮಾಡುವುದು

4. ಕ್ಲೆನ್ಸರ್ ಆಗಿ ಕೆಲಸ ಮಾಡುವುದು

ಮೂಲಂಗಿಯು ನೈಸರ್ಗಿಕ ಕ್ಲೆನ್ಸರ್ ಆಗಿದೆ. ನೀವು ನೇರವಾಗಿ ಹಸಿ ಮೂಲಂಗಿಯನ್ನು ಚರ್ಮಕ್ಕೆ ಹಚ್ಚಿಕೊಳ್ಳಬಹುದು. ನೀವು ಮೂಲಂಗಿ ಜ್ಯೂಸ್ ಕುಡಿಯಬಹುದು. ಇತರ ಕೆಲವೊಂದು ಸಾಮಗ್ರಿಗಳೊಂದಿಗೆ ಬೆರೆಸಿಕೊಂಡು ನೀವು ಇದನ್ನು ಫೇಸ್ ಮಾಸ್ಕ್ ಆಗಿ ಬಳಸಬಹುದು. ಸರಳವಾಗಿ ನೀವು ಹಸಿಯಾಗಿಯೇ ಇದನ್ನು ಹಚ್ಚಿಕೊಳ್ಳಿ. ಮೂಲಂಗಿ ತುರಿದುಕೊಂಡು ಅದನ್ನು ಚರ್ಮಕ್ಕೆ ಹಚ್ಚಿಕೊಂಡರೆ ಫಲಿತಾಂಶ ಸಿಗುವುದು.

5. ಕಾಂತಿಯುತ ಚರ್ಮ

5. ಕಾಂತಿಯುತ ಚರ್ಮ

ನೀವು ಮನೆಯಲ್ಲೇ ಮೂಲಂಗಿಯೊಂದಿಗೆ ಜೇನುತುಪ್ಪ, ತಾಜಾ ಮೊಸರು ಮತ್ತು ಕೆಲವು ಹನಿ ಬೆರ್ಗಮಾಟ್ ಎಣ್ಣೆ ಹಾಕಿಕೊಂಡು ಫೇಸ್ ಮಾಸ್ಕ್ ತಯಾರಿಸಿಕೊಳ್ಳಿ. ಇದರಿಂದ ನಿಮಗೆ ನಯವಾದ ಮತ್ತು ಕಾಂತಿಯುತ ಚರ್ಮವು ಸಿಗುವುದು. ನೀವು ಮುಂಬರುವ ದಿನಗಳಲ್ಲಿ ಖಂಡಿತವಾಗಿಯೂ ಇದನ್ನು ಬಳಸಿ ನೋಡಿ.

6. ಮಚ್ಚೆಗಳು ಮತ್ತು ಕಲೆಗಳ ನಿವಾರಣೆ

6. ಮಚ್ಚೆಗಳು ಮತ್ತು ಕಲೆಗಳ ನಿವಾರಣೆ

ಮೂಲಂಗಿಯು ಮಚ್ಚೆಗಳು ಮತ್ತು ಕಲೆಗಳ ನಿವಾರಣೆ ಮಾಡುವಲ್ಲಿ ತುಂಬಾ ಮಹತ್ವದ ಪಾತ್ರ ವಹಿಸುವುದು. ಬಾಧಿತ ಜಾಗಕ್ಕೆ ಪ್ರತಿನಿತ್ಯ ಮೂಲಂಗಿ ರಸವನ್ನು ಹಚ್ಚಿಕೊಂಡು ಕೆಲವು ನಿಮಿಷ ಕಾಲ ಹಾಗೆ ಬಿಡಿ ಮತ್ತು ಇದರ ಬಳಿಕ ನೀವು ಫಲಿತಾಂಶ ನೋಡಬಹುದು.

7. ಕೂದಲು ಉದುರುವಿಕೆ ತಡೆಗಟ್ಟುವುದು

7. ಕೂದಲು ಉದುರುವಿಕೆ ತಡೆಗಟ್ಟುವುದು

ತ್ವಚೆಗೆ ಹಲವಾರು ರೀತಿಯ ಲಾಭಗಳನ್ನು ನೀಡುವಂತಹ ಮೂಲಂಗಿಯು ಕೂದಲಿನ ಆರೈಕೆಯಲ್ಲೂ ಪ್ರಮುಖ ಪಾತ್ರ ವಹಿಸುವುದು. ಇದರಲ್ಲಿ ಪ್ರಮುಖವಾಗಿ ಕೂದಲು ಉದುರುವಿಕೆ ತಡೆಯುವುದು. ಹಲವಾರು ಕಾರಣಗಳಿಂದಾಗಿ ಕೂದಲು ಉದುರುವಿಕೆ ಇಂದಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಆದರೆ ಮೂಲಂಗಿಯು ಇದರ ನಿವಾರಣೆ ಮಾಡುವುದು. ಕಪ್ಪು ಮೂಲಂಗಿಯಿಂದ ತೆಗೆದಿರುವ ರಸದಿಂದ ಕೂದಲಿನ ಬೆಳವಣಿಗೆಯು ಉತ್ತೇಜಿಸುವುದು. ಇದು ಕೂದಲಿನ ಬುಡವನ್ನು ಬಲಪಡಿಸಿ, ಕೂದಲಿನ ಬೆಳವಣಿಗೆಗೆ ನೆರವಾಗುವುದು.

Most Read: ಶನಿ ದೇವನ ನಿಧಾನ ಗತಿಯ ಚಲನೆಯ ಹಿಂದಿರುವ ಅಸಲಿ ಕಹಾನಿ...

8. ಕಾಂತಿ ಹಾಗೂ ರೇಷ್ಮೆಯಂತಹ ಕೂದಲಿಗೆ

8. ಕಾಂತಿ ಹಾಗೂ ರೇಷ್ಮೆಯಂತಹ ಕೂದಲಿಗೆ

ಮೂಲಂಗಿಯನ್ನು ನಿಯಮಿತವಾಗಿ ಬಳಸಿಕೊಂಡರೆ ಅದು ತುಂಬಾ ಪರಿಣಾಮಕಾರಿ ಎಂದು ಸಾಬೀತಾಗಿದೆ. ಇದರಿಂದ ಕಾಂತಿಯುತ ಹಾಗೂ ರೇಷ್ಮೆಯಂತ ಕೂದಲು ಪಡೆಬಹುದು. ಮೂಲಂಗಿಯು ಕೂದಲಿಗೆ ಕಾಂತಿ ನೀಡುವುದು. ಇದರಲ್ಲಿ ಇರುವಂತಹ ಕಬ್ಬಿನಾಂಶವು ಕೂದಲಿನ ಆರೋಗ್ಯ ಕಾಪಾಡುವುದು. ಮೂಲಂಗಿ ರಸವನ್ನು ಕೂದಲಿಗೆ ಹೆಚ್ಚಿಕೊಂಡು ಒಂದು ಗಂಟೆಗಳ ಕಾಲ ಹಾಗೆ ಬಿಡಿ. ಬಳಿಕ ಶಾಂಪೂ ಹಾಕಿ ತೊಳೆಯಿರಿ.

9. ತಲೆಹೊಟ್ಟು ನಿವಾರಣೆ

9. ತಲೆಹೊಟ್ಟು ನಿವಾರಣೆ

ಮೂಲಂಗಿಯು ತಲೆಹೊಟ್ಟನ್ನು ಸಂಪೂರ್ಣವಾಗಿ ನಿವಾರಣೆ ಮಾಡುವುದು. ತಲೆಬುರುಡೆ ಮತ್ತು ಕೂದಲಿಗೆ ಮೂಲಂಗಿ ರಸ ಉಜ್ಜಿಕೊಳ್ಳಿ ಮತ್ತು ಒಂದು ಗಂಟೆ ಬಿಟ್ಟು ತೊಳೆಯಿರಿ.

10. ಕೂದಲ ಬುಡ ಬಲಪಡಿಸುವುದು ಮತ್ತು ತಲೆಬುರುಡೆಗೆ ಪೋಷಣೆ

10. ಕೂದಲ ಬುಡ ಬಲಪಡಿಸುವುದು ಮತ್ತು ತಲೆಬುರುಡೆಗೆ ಪೋಷಣೆ

ಮೂಲಂಗಿಯಲ್ಲಿ ಹೆಚ್ಚಿನ ಮಟ್ಟದ ನೀರಿನಾಂಶವಿದೆ ಎಂದು ನಿಮಗೆ ತಿಳಿದಿದೆ. ಇದು ದೇಹವನ್ನು ತೇವಾಂಶದಿಂದ ಇಡುವುದು ಮಾತ್ರವಲ್ಲದೆ ಕೂದಲಿನ ಬುಡವನ್ನು ಬಲಗೊಳಿಸಿ, ತಲೆಬುರುಡೆಗೆ ಪೋಷಣೆ ನೀಡುವುದು. ಇದು ಕೂದಲಿನ ವಿನ್ಯಾಸ ಮತ್ತು ಆರೋಗ್ಯವನ್ನು ಸಂಪೂರ್ಣವಾಗಿ ಸುಧಾರಣೆ ಮಾಡುವುದು. ಮೂಲಂಗಿ ಸೇವನೆ ಅಥವಾ ಅದರ ಜ್ಯೂಸ್ ಸೇವನೆ ಮಾಡುವುದು ಆರೋಗ್ಯ, ಚರ್ಮ ಮತ್ತು ಕೂದಲಿಗೆ ತುಂಬಾ ಲಾಭಕಾರಿ. ನಿಮ್ಮ ಆಹಾರ ಕ್ರಮದಲ್ಲಿ ಮೂಲಂಗಿ ಬಳಸಿಕೊಂಡು, ಇದರ ಲಾಭ ಪಡೆಯಿರಿ.

English summary

Fabulous Beauty Benefits Of Radish You Probably Didn't Know!

Wondering what exactly is radish known for in the beauty world? Well, a lot of things actually. Like it is rich in vitamins that help in curing a number of skin conditions. Radish is also rich in antioxidants and possesses antimicrobial and antibacterial properties. It also helps in detoxifying your body. And that's not all! Apart from these, radish also contains a lot of other qualities and benefits, some of which are listed below:
X
Desktop Bottom Promotion