ನಿಂಬೆ ರಸದ ಫೇಸ್ ಮಾಸ್ಕ್ ಹಾಕಿ ಆಕರ್ಷಕ ತ್ವಚೆಯ ಪವಾಡ ನೋಡಿ!

Posted By: Divya pandit Pandit
Subscribe to Boldsky

ಚರ್ಮದ ಆರೋಗ್ಯವನ್ನು ಕಾಪಾಡಲು ಅತ್ಯುತ್ತಮ ನೈಸರ್ಗಿಕ ಉತ್ಪನ್ನ ನಿಂಬೆ ರಸ. ವಿಟಮಿನ್ ಸಿ ಮತ್ತು ರೋಗ ನಿರೋಧಕ ಗುಣಗಳನ್ನು ಹೊಂದಿರುವ ಈ ಘಟಕ ದೈಹಿಕ ಆಗೂ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲಾ ಬಗೆಯ ಸಮಸ್ಯೆಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ನೈಸರ್ಗಿಕವಾಗಿ ಬ್ಲೀಚಿಂಗ್ ಏಜೆಂಟ್ ಆಗಿ, ಚರ್ಮದ ಟೋನರ್, ಪಿಗ್ಮೆಂಟೇಶನ್, ಟ್ಯಾನಿಂಗ್ ಮುಂತಾದ ಸಮಸ್ಯೆಯನ್ನು ಎದುರಿಸಲು ಸಹಕರಿಸುತ್ತದೆ. ಅಲ್ಲದೆ ಕೆಲವು ಆಹಾರ ಪದಾರ್ಥಗಳ ರುಚಿಯನ್ನು ಹೆಚ್ಚಿಸಲು ಸಹ ನಿಂಬೆ ರಸವನ್ನು ಬಳಸುತ್ತಾರೆ. ಆಂತರಿಕ ಆರೋಗ್ಯದ ಜೊತೆಗೆ ಬಾಹ್ಯ ಆರೋಗ್ಯವನ್ನು ಕಾಪಾಡುವ ಸಾಮರ್ಥ್ಯ ಒಂದು ಚಿಕ್ಕ ನಿಂಬೆ ಹಣ್ಣಿನಲ್ಲಿದೆ.

ಚರ್ಮದ ಟೋನ್ ಸುಧಾರಿಸಲು ಮತ್ತು ನೈಸರ್ಗಿಕ ಉತ್ಪನ್ನಗಳ ಮಿಶ್ರಣದಿಂದ ನಿಂಬೆಯ ಶಕ್ತಿಯನ್ನು ದ್ವಿಗುಣಗೊಳಿಸುವುದು. ಇವುಗಳನ್ನು ತ್ವಚೆಯ ಮೇಲೆ ಲೇಪನ ಮಾಡುವುದರಿಂದ ಆಕರ್ಷಕ ಕಾಂತಿ ಹಾಗೂ ಆರೋಗ್ಯಯುತ ತ್ವಚೆಯನ್ನು ಪಡೆಯಬಹುದು. ರಾಸಾಯನಿಕ ವಸ್ತುಗಳಿಂದ ಕೂಡಿರುವ ಮುಖವಾಡವನ್ನು ಬಳಸುವ ಬದಲು ನೈಸರ್ಗಿಕ ಉತ್ಪನ್ನಗಳಿಂದಲೇ ಚರ್ಮದ ಆರೋಗ್ಯವನ್ನು ಸುಧಾರಿಸಬೇಕು ಎನ್ನುವ ಆಸೆಯಿದ್ದರೆ ಮುಂದಿರುವ ವಿವರಣೆಯನ್ನು ಪರಿಶೀಲಿಸಿ.... 

ಫೇಸ್ ಮಾಸ್ಕ್ #1

ಫೇಸ್ ಮಾಸ್ಕ್ #1

ಬೇಕಾಗುವ ಸಲಕರಣೆ:

- ಅಲೋವೆರಾ ಜೆಲ್ 1 ಟೀ ಚಮಚ

- ಒಂದು ಮೊಟ್ಟೆಯ ಬಿಳಿ ಭಾಗ

- ಚಿಟಕಿ ಅರಿಶಿನ

- ನಿಂಬೆ ರಸ 1 ಟೀ ಚಮಚ.

ವಿಧಾನ:

- ಒಂದು ಬೌಲ್‍ ನಲ್ಲಿ ಎಲ್ಲಾ ಸಲಕರಣೆಯನ್ನು ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ, 10 ನಿಮಿಷಗಳ ಕಾಲ ಆರಲು ಬಿಡಿ.

- ನಂತರ ಮೃದುವಾದ ನೀರಿನಲ್ಲಿ ತೊಳೆದು, ತೆಳುವಾಗಿ ಮಾಯಿಶ್ಚರೈಸ್ ಕ್ರೀಮ್ ಅನ್ವಯಿಸಿ.

ಫೇಸ್ ಮಾಸ್ಕ್ #2

ಫೇಸ್ ಮಾಸ್ಕ್ #2

ಬೇಕಾಗುವ ಸಲಕರಣೆ

- ನಿಂಬೆ ರಸ 2 ಟೀ ಚಮಚ

- 1 ಟೇಬಲ್ ಚಮಚ ಜೇನುತುಪ್ಪ

ವಿಧಾನ:

- ಒಂದು ಬೌಲ್‍ನಲ್ಲಿ ಎಲ್ಲಾ ಸಲಕರಣೆಯನ್ನು ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ, 10-15 ನಿಮಿಷಗಳ ಕಾಲ ಆರಲು ಬಿಡಿ.

- ನಂತರ ಬೆಚ್ಚಗಿನ ನೀರಿನಲ್ಲಿ ಸ್ವಚ್ಛಗೊಳಿಸಿ.

ಫೇಸ್ ಮಾಸ್ಕ್ #3

ಫೇಸ್ ಮಾಸ್ಕ್ #3

ಬೇಕಾಗುವ ಸಲಕರಣೆ

- 1 ಟೀ ಚಮಚ ಕಡ್ಲೆ ಹಿಟ್ಟು

- 1/2 ಟೀ ಚಮಚ ಕಿತ್ತಳೆ ಸಿಪ್ಪೆಯ ಪುಡಿ

- 1 ಟೇಬಲ್ ಚಮಚ ನಿಂಬೆ ರಸ

ವಿಧಾನ:

- ಒಂದು ಬೌಲ್ ನಲ್ಲಿ ಎಲ್ಲಾ ಸಲಕರಣೆಯನ್ನು ಸೇರಿಸಿ, ಮಿಶ್ರಗೊಳಿಸಿ

- ಮಿಶ್ರಣವನ್ನು ತೇವದಿಂದ ಕೂಡಿದ ಮುಖಕ್ಕೆ ಅನ್ವಯಿಸಿ, 10-15 ನಿಮಿಷಗಳ ಕಾಲ ಆರಲು ಬಿಡಿ

- ನಂತರ ಮೃದುವಾದ ನೀರಿನಲ್ಲಿ ತೊಳೆದು, ತೆಳುವಾಗಿ ಮಾಯಿಶ್ಚರೈಸ್ ಕ್ರೀಮ್ ಅನ್ವಯಿಸಿ

ಫೇಸ್ ಮಾಸ್ಕ್ #4

ಫೇಸ್ ಮಾಸ್ಕ್ #4

ಬೇಕಾಗುವ ಸಲಕರಣೆ

- 1 ಟೀಚಮಚ ನಿಂಬೆ ರಸ

- 1 ಟೀಚಮಚ ಅಕ್ಕಿ ಹಿಟ್ಟು

- 1/2 ಟೀಚಮಚ ಗುಲಾಬಿ ನೀರು.

ವಿಧಾನ:

- ಒಂದು ಬೌಲ್ ನಲ್ಲಿ ಎಲ್ಲಾ ಸಕಲರಣೆಯನ್ನು ಸೇರಿಸಿ, ಮಿಶ್ರಗೊಳಿಸಿ

- ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ, ಮೃದುವಾಗಿ ಮಸಾಜ್ ಮಾಡಿ

- 10-15 ನಿಮಿಷಗಳ ಕಾಲ ಆರಲು ಬಿಡಿ. ಬೆಚ್ಚಗಿನ ನೀರಿನಲ್ಲಿ ಸ್ವಚ್ಛಗೊಳಿಸಿ.

ಫೇಸ್ ಮಾಸ್ಕ್ #5

ಫೇಸ್ ಮಾಸ್ಕ್ #5

ಬೇಕಾಗುವ ಸಲಕರಣೆ

- 1 ಟೀಚಮಚ ನಿಂಬೆ ರಸ

- 1/2 ಟೀ ಚಮಚ ಆಲಿವ್ ಎಣ್ಣೆ

- 2 ಟೀಚಮಚ ಸೌತೆಕಾಯಿ ರಸ

ವಿಧಾನ:

- ಒಂದು ಬೌಲ್‍ ನಲ್ಲಿ ಎಲ್ಲಾ ಸಲರಣೆಯನ್ನು ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ, 10-15 ನಿಮಿಷಗಳ ಕಾಲ ಆರಲು ಬಿಡಿ.

- ಶುಷ್ಕ ನೀರಿನಲ್ಲಿ ಸ್ವಚ್ಛಗೊಳಿಸಿ.

ಫೇಸ್ ಮಾಸ್ಕ್ #6

ಫೇಸ್ ಮಾಸ್ಕ್ #6

ಬೇಕಾಗುವ ಸಲಕರಣೆ:

- 1 ಟೀಚಮಚ ನಿಂಬೆ ರಸ.

- 2 ಟೀಚಮಚ ಪಪ್ಪಾಯ ತಿರುಳು

ವಿಧಾನ:

- ಒಂದು ಬೌಲ್‍ಅಲ್ಲಿ ನಿಂಬೆ ರಸ ಮತ್ತು ಪಪ್ಪಾಯ ತಿರುಳನ್ನು ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ, 10 ನಿಮಿಷಗಳ ಕಾಲ ಆರಲು ಬಿಡಿ.

- ಶುಷ್ಕ ನೀರಿನಲ್ಲಿ ಸ್ವಚ್ಛಗೊಳಿಸಿ. ತೆಳುವಾಗಿ ಮಾಯಿಶ್ಚರೈಸರ್ ಕ್ರೀಮ್ ಅನ್ವಯಿಸಿ.

ಫೇಸ್ ಮಾಸ್ಕ್ #7

ಫೇಸ್ ಮಾಸ್ಕ್ #7

ಬೇಕಾಗುವ ಸಲಕರಣೆ:

- ಓಟ್‍ಮೀಲ್ 1/2 ಟೀಚಮಚ

- ನಿಂಬೆ ರಸ 1/2 ಟೀ ಚಮಚ

- 1 ವಿಟಮಿನ್ ಇ ಮಾತ್ರೆ

ವಿಧಾನ:

- ಒಂದು ಬೌಲ್‍ ನಲ್ಲಿ ಎಲ್ಲಾ ಸಲಕರಣೆಯನ್ನು ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ, 10-15 ನಿಮಿಷಗಳ ಕಾಲ ಆರಲು ಬಿಡಿ.

- ಶುಷ್ಕ ನೀರಿನಲ್ಲಿ ಸ್ವಚ್ಛಗೊಳಿಸಿ.

English summary

Even Out Your Skin Tone With These Lemon Juice Face Masks

Do you often use makeup items to achieve an even skin tone? If so, then do read on, as today at Boldsky, we're letting you know about the ultimate remedy that can help you even out your skin tone in a natural way. The remedy we're talking about here is the versatile lemon juice. Here, we've curated a list of lemon juice face masks that can help your skin achieve an even complexion. Easy to make, inexpensive and highly potent, these masks can help you bid adieu to makeup items like concealers, skin whitening creams, etc.