For Quick Alerts
ALLOW NOTIFICATIONS  
For Daily Alerts

ಒಣ ತ್ವಚೆ ಸಮಸ್ಯೆಯನ್ನು ಹೋಗಲಾಡಿಸುವ ಪ್ರಮುಖ ಎಣ್ಣೆಗಳು

By Jaya Subramanya
|

ಚಳಿಗಾಲದಲ್ಲಿ ಒಣ ತ್ವಚೆ ಎಂಬುದು ಕಟ್ಟಿಟ್ಟ ಬುತ್ತಿಯಾಗಿರುತ್ತದೆ. ನೀವು ತ್ವಚೆಯನ್ನು ಕಾಪಾಡಿಕೊಳ್ಳಲು ಹರಸಾಹಸ ಪಟ್ಟರೂ ತ್ವಚೆಯಲ್ಲಿ ಬಿಳಿ ಕಲೆಗಳು, ಬಿರುಕುಗಳು, ಇದರಿಂದ ಉಂಟಾಗುವ ಉರಿತ ಸರ್ವೇ ಸಾಮಾನ್ಯವಾಗಿರುತ್ತದೆ. ಈ ಸಮಯದಲ್ಲಿ ನಿಮ್ಮ ತ್ವಚೆ ತುಂಬಾ ಬಿರುಸಾಗಿರುತ್ತದೆ ಮತ್ತು ಸೋಪನ್ನು ಹಚ್ಚುವುದರಿಂದ ಕಲೆಗಳು ಹಾಗೆಯೇ ಇದ್ದು ಚರ್ಮಕ್ಕೆ ಇನ್ನಷ್ಟು ತೊಂದರೆಯನ್ನುಂಟು ಮಾಡುವುದು ಖಂಡಿತ.

ಈ ಸಮಯದಲ್ಲಿ ತ್ವಚೆಯನ್ನು ಆದಷ್ಟು ಮಾಯಿಶ್ಚರೈಸ್ ಮಾಡುವುದು ಅಗತ್ಯವಾಗಿರುತ್ತದೆ. ಇದಕ್ಕಾಗಿ ತ್ವಚೆಗೆ ಸೂಕ್ತ ಹೊಂದುವ ಎಣ್ಣೆಯನ್ನು ಬಳಸಿಕೊಂಡು ತ್ವಚೆಯ ಬಿರುಕಿನ ಸಮಸ್ಯೆಯನ್ನು ನಿಮಗೆ ನಿವಾರಿಸಿಕೊಳ್ಳಬಹುದಾಗಿದೆ. ಈ ಎಣ್ಣೆಗಳು ಗಡುಸಾದ ತ್ವಚೆಯನ್ನು ನಯವಾಗಿಸಿ, ಸೂಕ್ತ ಪೋಷಣೆಯನ್ನು ಒದಗಿಸುತ್ತವೆ. ಇಂದಿನ ಲೇಖನದಲ್ಲಿ ಕೂಡ ತ್ವಚೆಗೆ ನಯತ್ವವವನ್ನು ಉಂಟುಮಾಡುವ ಪ್ರಮುಖ ಎಣ್ಣೆಗಳ ಬಗ್ಗೆ ವಿವರಗಳನ್ನು ತಿಳಿಸುತ್ತಿದ್ದು ಇವುಗಳ ಬಳಕೆಯಿಂದ ನಿಮಗೆ ಉಪಯೋಗವಾಗುವುದು ಖಂಡಿತ.

ಫ್ರಾಂಕಿನ್‌ಸೆನ್ಸ್ ಆಯಿಲ್

ಫ್ರಾಂಕಿನ್‌ಸೆನ್ಸ್ ಆಯಿಲ್

ಇಂದು ಲಭ್ಯವಿರುವ ಹಲವಾರು ಅವಶ್ಯಕ ತೈಲಗಳಲ್ಲಿ ಫ್ರಾಂಕಿಂನ್ಸೆನ್ ತೈಲವೂ ಒಂದಾಗಿದ್ದು ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ. ಇವುಗಳಲ್ಲಿರುವ ಗುಣಪಡಿಸುವ, ಸಂಕೋಚಕ, ಚಿಕಿತ್ಸಕ, ಜೀರ್ಣಕಾರಿ, ಅನಿಯಂತ್ರಿತ ಜೀವಕೋಶಗಳ ಬೆಳವಣಿಗೆ ತಡೆಯುವ, ಸೋಂಕುನಿವಾರಕ, ಶಾಂತಗೊಳಿಸುವ, ಕಫವನ್ನು ಸಡಿಲಗೊಳಿಸುವ, ನಿದ್ರಾಜನಕ, ಹುರಿಗಟ್ಟಿಸುವ ಹಾಗೂ ಗಾಯಗಳನ್ನು ಶೀಘ್ರವಾಗಿ ಮಾಗಿಸುವ ಗುಣಗಳು ಇದನ್ನೊಂದು ಅದ್ಭುತ ಔಷಧಿಯನ್ನಾಗಿಸಿವೆ. ಈ ಅವಶ್ಯಕ ತೈಲ ವಿಶ್ವದಾದ್ಯಂತ ಹಲವಾರು ವರ್ಷಗಳಿಂದ ಬಳಕೆಯಲ್ಲಿದೆ. ಮಧ್ಯಪ್ರಾಚ್ಯ ದೇಶಗಳಲ್ಲಿ ಈ ತೈಲವನ್ನು ಸುಗಂಧದ್ರವ್ಯ ಮತ್ತು ಗಾಯಗಳಿಗೆ ಸವರಲು ಬಳಸಲಾಗುತ್ತಿತ್ತು. ಈಜಿಪ್ಟ್ ನ ಮಹಿಳೆಯರು ಈ ಎಣ್ಣೆಯನ್ನು ಸುಟ್ಟು ಇದರ ಭಸ್ಮವನ್ನು ನುಣ್ಣಗಾಗಿಸಿ ಕಣ್ಣುಗಳಿಗೆ ಕಾಡಿಗೆಯ ರೂಪದಲ್ಲಿ ಹಚ್ಚಿಕೊಳ್ಳುತ್ತಿದ್ದರೆಂದು ಇತಿಹಾಸದಲ್ಲಿ ವಿವರಿಸಲಾಗಿದೆ. ಅಲ್ಲದೇ ಸೋಪು, ಲೋಷನ್, ಶವರ್ ಜೆಲ್ ಮೊದಲಾದ ಸುಗಂಧರಹಿತ ಪ್ರಸಾಧನಗಳಲ್ಲಿ ಸುಗಂಧ ಸೇರಿಸಲೂ ಬಳಸಲಾಗುತ್ತದೆ. ಇದು ತ್ವಚೆಗೆ ಹೈಡ್ರೇಶನ್ ಅನ್ನು ಒದಗಿಸುವುದರ ಜೊತೆಗೆ, ಇದು ನೆರಿಗೆ ಮತ್ತು ಗೆರೆಗಳನ್ನು ನಿವಾರಿಸುತ್ತದೆ. ತ್ವಚೆಯನ್ನು ತಾಜಾಗೊಳಿಸಲು ಇದು ಸಹಾಯಕ.

Most Read: ಎಣ್ಣೆಯುಕ್ತ ತ್ವಚೆಯ ಸಮಸ್ಯೆ ಇದ್ದರೆ, ಅಡುಗೆಮನೆಯ ಅರಿಶಿನ ಪ್ರಯತ್ನಿಸಿ!

ಯ್ಲಾಂಗ್ ಯ್ಲಾಂಗ್ ಆಯಿಲ್ (Ylang Ylang Oil)

ಯ್ಲಾಂಗ್ ಯ್ಲಾಂಗ್ ಆಯಿಲ್ (Ylang Ylang Oil)

ಮೊಡವೆಯನ್ನು ಹೋಗಲಾಡಿಸುವಲ್ಲಿ ಈ ಎಣ್ಣೆ ಸಹಕಾರಿಯಾದುದು. ತ್ವಚೆಗಳ ಕೋಶಗಳನ್ನು ರಿಪೇರಿ ಮಾಡಿ ಒಣ ತ್ವಚೆಯನ್ನು ಹೋಗಲಾಡಿಸುತ್ತದೆ.

ಗೆರೇನಿಯಮ್ ಎಣ್ಣೆ

ಗೆರೇನಿಯಮ್ ಎಣ್ಣೆ

ಮಾಯಿಶ್ಚರೈಸರ್‌ಗಳೊಂದಿಗೆ ಇದು ಅತ್ಯುತ್ತಮವಾಗಿದೆ. ಸ್ವಭಾವದಲ್ಲಿ ಎಣ್ಣೆಯುಕ್ತವಾಗಿರುವುದರಿಂದ ಒಣ ತ್ವಚೆಗೆ ಇದು ಸೂಕ್ತ ಪೋಷಣೆಯನ್ನು ಮಾಡಿ ಸಮಸ್ಯೆಯನ್ನು ನಿವಾರಿಸುತ್ತದೆ.

ಲ್ಯಾವೆಂಡರ್ ಎಣ್ಣೆ

ಲ್ಯಾವೆಂಡರ್ ಎಣ್ಣೆ

ನೈಸರ್ಗಿಕವಾದ ಸುವಾಸನೆಯನ್ನು ಪಡೆದುಕೊಂಡಿರುವ ಈ ಎಣ್ಣೆ ಒಣ ತ್ವಚೆಯ ಸಮಸ್ಯೆಯನ್ನು ಚಿಟಿಕೆಯಲ್ಲಿ ನಿವಾರಿಸುತ್ತದೆ.

ರೋಸ್‌ಹಿಪ್ ಎಣ್ಣೆ

ರೋಸ್‌ಹಿಪ್ ಎಣ್ಣೆ

ನಿಮ್ಮ ತ್ವಚೆ ವಯಸ್ಸಾದಂತೆ ಕಾಣುತ್ತಿದೆ ಎಂದಾದಲ್ಲಿ, ನಿಮ್ಮ ತ್ವಚೆಯ ಕಾಳಜಿಯಲ್ಲಿ ಇದು ಸಹಕಾರಿಯಾದುದು. ರಾತ್ರಿ ವೇಳೆಯಲ್ಲಿ ಈ ಎಣ್ಣೆಯನ್ನು ಬಳಸಿಕೊಂಡು ಮುಖಕ್ಕೆ ಮಸಾಜ್ ಮಾಡಿಕೊಳ್ಳಿ.

ನೆರೋಲಿ ಎಣ್ಣೆ

ನೆರೋಲಿ ಎಣ್ಣೆ

ಮಾಯವಾಗಿರುವ ಮಾಯಿಶ್ಚರೈಸಿಂಗ್ ಅಂಶವನ್ನು ಈ ಎಣ್ಣೆ ಮರುಕಳಿಸುವಂತೆ ಮಾಡುತ್ತದೆ. ಇದರಲ್ಲಿ ವಿಟಮಿನ್‌ಗಳು ಮತ್ತು ಮಿನರಲ್‌ಗಳು ಇದ್ದು ಒಣ ತ್ವಚೆಗೆ ಮಾಯಿಶ್ಚರೈಸ್ ಅನ್ನು ಒದಗಿಸುತ್ತದೆ.

Most Read: ಮುಖದ ಕಾಂತಿ ಹೆಚ್ಚಿಸಲು ಹಾಗೂ ಇತರ ಸೌಂದರ್ಯ ಸಮಸ್ಯೆಗಳಿಗೆ 'ತುಳಸಿ ಎಲೆಗಳ' ಫೇಸ್ ಪ್ಯಾಕ್

ಜ್ಯುನಿಪರ್ ಎಣ್ಣೆ

ಜ್ಯುನಿಪರ್ ಎಣ್ಣೆ

ಒಣ ತ್ವಚೆಯಿಂದಾಗಿ ಮುಖದಲ್ಲಿ ಬಿರುಕು ಬಿಡುತ್ತಿದೆ ಎಂದಾದಲ್ಲಿ, ಒಣತ್ವವನ್ನು ಉಪಚರಿಸುವಲ್ಲಿ ಈ ಎಣ್ಣೆ ಸೂಕ್ತವಾದುದಾಗಿದೆ.

ಕ್ಯಾಮೊಮೈಲ್ ಎಣ್ಣೆ

ಕ್ಯಾಮೊಮೈಲ್ ಎಣ್ಣೆ

ಈ ಎಣ್ಣೆ ನಿಮ್ಮ ತ್ವಚೆಗೆ ಅತ್ಯದ್ಭುತವನ್ನು ಉಂಟುಮಾಡಲಿದೆ. ಒಣತ್ವಚೆಗೆ ಇದು ಉತ್ತಮ ಉಪಚಾರವನ್ನು ನೀಡುತ್ತದೆ ಮತ್ತು ತ್ವಚೆಯ ಬಿರುಕಿನ ಸಮಸ್ಯೆಯನ್ನು ಹೋಗಲಾಡಿಸುತ್ತದೆ.

English summary

Essential Oils That Work Wonders In Soothing Dry Skin

The winters usually spell havoc for our skin, especially if you have dry skin. But it does not mean that you give up hope, as these top essential oils, which we have listed below, are all miracle workers for dry skin.
Story first published: Thursday, November 15, 2018, 15:31 [IST]
X
Desktop Bottom Promotion