ಮುಖದ ಸೌಂದರ್ಯ ಹೆಚ್ಚಿಸಬೇಕೇ? ಈ ಬ್ಯೂಟಿ ಟಿಪ್ಸ್ ಅನುಸರಿಸಿ ಸಾಕು!

Posted By: Hemanth Amin
Subscribe to Boldsky

ಸೌಂದರ್ಯ ಸಾಧನಗಳನ್ನು ತಯಾರಿಸುವಂತಹ ಕಂಪೆನಿಗಳು ದಿನಕ್ಕೊಂದು ಹುಟ್ಟಿಕೊಳ್ಳುತ್ತದೆ. ಇದರ ಹಿಂದೆ ಇರುವ ಲಾಭವನ್ನು ನೋಡಿಕೊಂಡು ಈ ರೀತಿ ಹೊಸ ಹೊಸ ಕಂಪೆನಿಗಳು ಮಾರುಕಟ್ಟೆಗೆ ಬರುತ್ತಿವೆ. ಮಾರುಕಟ್ಟೆಗೆ ಹೋದರೆ ಅಲ್ಲಿ ನಿಮಗೆ ನೂರಾರು ರೀತಿಯ ಸೌಂದರ್ಯ ಸಾಧನಗಳು ಸಿಗಬಹುದು. ಇದನ್ನು ಬಳಸಿಕೊಂಡರೆ ಅದರಿಂದ ನಿಮ್ಮ ಚರ್ಮವು ಕೆಲವು ದಿನಗಳ ಕಾಲ ಕಾಂತಿಯುತವಾಗಿ ಕಾಣಬಹುದು.

ಈ ಬ್ಯೂಟಿ ಟಿಪ್ಸ್ ಅನುಸರಿಸಿ-ಇನ್ನಷ್ಟು ಸುಂದರವಾಗಿ ಕಾಣುವಿರಿ!

ಆದರೆ ಮತ್ತೆ ಅದು ಯಥಾಸ್ಥಿತಿಗೆ ಬರಬಹುದು. ಇದರಿಂದ ಅಡ್ಡಪರಿಣಾಮಗಳು ಕೂಡ ಇದ್ದೇ ಇರುತ್ತದೆ. ಇದರ ಬದಲಿಗೆ ಕೆಲವೊಂದು ನೈಸರ್ಗಿಕವಾದ ಸೌಂದರ್ಯವರ್ಧಕಗಳನ್ನು ಬಳಸಿಕೊಂಡರೆ ಅದರಿಂದ ಹೆಚ್ಚಿನ ಲಾಭವಾಗಬಹುದು. ಖರ್ಚು ಕೂಡ ಕಡಿಮೆ. ಬೋಲ್ಡ್ ಸ್ಕೈ ಈ ಲೇಖನದಲ್ಲಿ ಅಡುಗೆ ಮನೆಯಲ್ಲೇ ಸಿಗುವಂತಹ ಕೆಲವು ಸಾಮಗ್ರಿಗಳನ್ನು ಬಳಸಿಕೊಂಡು ತಯಾರಿಸಬಹುದಾದ ಸೌಂದರ್ಯ ವರ್ಧಕಗಳ ಬಗ್ಗೆ ನಿಮಗೆ ತಿಳಿಸಿಕೊಡಲಿದೆ. ಇದು ತುಂಬಾ ಸುರಕ್ಷಿತ ಹಾಗೂ ಯಾವುದೇ ಅಡ್ಡಪರಿಣಾಮವಾಗದು. ವಿವಿಧ ರೀತಿಯ ಚರ್ಮದ ಸಮಸ್ಯೆಗೆ ಇದನ್ನು ಹೇಗೆ ಬಳಸಿಕೊಳ್ಳಬಹುದು ಎಂದು ಓದಿಕೊಳ್ಳಿ.... 

ಮೊಟ್ಟೆಯ ಬಿಳಿ ಲೋಳೆ(ದೊಡ್ಡ ರಂಧ್ರಗಳ ಚಿಕಿತ್ಸೆ)

ಮೊಟ್ಟೆಯ ಬಿಳಿ ಲೋಳೆ(ದೊಡ್ಡ ರಂಧ್ರಗಳ ಚಿಕಿತ್ಸೆ)

ಚರ್ಮಕ್ಕೆ ಲಾಭವನ್ನು ಉಂಟುಮಾಡುವ ಪ್ರೋಟೀನ್ ಒಳಗೊಂಡಿರುವ ಮೊಟ್ಟೆಯ ಬಿಳಿಭಾಗವು ಚರ್ಮ ಶುಚಿಗೊಳಿಸುವುದು ಮತ್ತು ದೊಡ್ಡ ರಂಧ್ರಗಳನ್ನು ಮುಚ್ಚಿಹಾಕುವುದು.

ಬಳಸುವುದು ಹೇಗೆ?

ಸ್ವಲ್ಪ ಒದ್ದೆಯಾಗಿರುವ ಮುಖದ ಚರ್ಮದ ಮೇಲೆ ಮೊಟ್ಟೆಯ ಬಿಳಿ ಲೋಳೆ ಹಚ್ಚಿಕೊಳ್ಳಿ. ಇದು ಹಾಗೆ ಒಣಗಲಿ. ಒಣಗಿದ ಬಳಿಕ ತಣ್ಣೀರಿನಿಂದ ತೊಳೆಯಿರಿ. ವಾರದಲ್ಲಿ ಒಂದು ಸಲ ಇದನ್ನು ಬಳಸಿಕೊಂಡರೆ ಹೆಚ್ಚು ಪರಿಣಾಮಕಾರಿ.

ಸೌತೆಕಾಯಿ(ಕಪ್ಪು ವೃತ್ತಗಳ ನಿವಾರಣೆಗೆ)

ಸೌತೆಕಾಯಿ(ಕಪ್ಪು ವೃತ್ತಗಳ ನಿವಾರಣೆಗೆ)

ಸೌತೆಕಾಯಿಯಲ್ಲಿ ಇರುವಂತಹ ಪ್ರಬಲ ಆ್ಯಂಟಿಆಕ್ಸಿಡೆಂಟ್ ಗಳು ಕಣ್ಣಿನ ಕೆಳಗಡೆ ಇರುವಂತಹ ಕಪ್ಪು ವೃತ್ತಗಳನ್ನು ತುಂಬಾ ಪರಿಣಾಮಕಾರಿಯಾಗಿ ತೆಗೆದುಹಾಕುವುದು.

ಬಳಸುವುದು ಹೇಗೆ?

*ಸೌತೆಕಾಯಿಯ ಎರಡು ತೆಳುವಾದ ತುಂಡು ಮಾಡಿಕೊಳ್ಳಿ ಮತ್ತು ಇದನ್ನು ಕಣ್ಣಿನ ಮೇಲೆ ಇಟ್ಟುಕೊಳ್ಳಿ. 20-25 ನಿಮಿಷ ಬಳಿಕ ಇದನ್ನು ತೆಗೆಯಿರಿ.

*ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.

*ದಿನದಲ್ಲಿ 2-3 ಸಲ ಇದನ್ನು ಬಳಸಿದರೆ ಖಂಡಿತವಾಗಿಯೂ ನಿಮಗೆ ಒಳ್ಳೆಯ ಫಲಿತಾಂಶ ಸಿಗುವುದು.

ಆಲೂಗಡ್ಡೆ (ಚರ್ಮ ಕಪ್ಪಗಾಗುವುದನ್ನು ತಡೆಯಲು)

ಆಲೂಗಡ್ಡೆ (ಚರ್ಮ ಕಪ್ಪಗಾಗುವುದನ್ನು ತಡೆಯಲು)

ಆಲೂಗಡ್ಡೆಯಲ್ಲಿ ಇರುವಂತಹ ಬ್ಲೀಚಿಂಗ್ ಗುಣಗಳು ಚರ್ಮವು ಕಪ್ಪಗೆ ಆಗುವುದಕ್ಕೆ ತುಂಬಾ ಪರಿಣಾಮಕಾರಿ ಔಷಧಿಯಾಗಿದೆ.

ಬಳಸುವುದು ಹೇಗೆ?

ಆಲೂಗಡ್ಡೆ ಜ್ಯೂಸ್ ತೆಗೆಯಿರಿ ಮತ್ತು ಇದರಿಂದ ಚರ್ಮ ತೊಳೆಯಿರಿ. ಇದರ ಬಳಿಕ ಉಗುರುಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ಪರಿಣಾಮಕಾರಿಯಾಗಲು ವಾರದಲ್ಲಿ ಎರಡು ಸಲ ಇದನ್ನು ಬಳಸಿ.

ಅಡುಗೆ ಸೋಡಾ

ಅಡುಗೆ ಸೋಡಾ

ಸತ್ತ ಚರ್ಮದ ಕೋಶ ತೆಗೆದುಹಾಕಲು ಅಡುಗೆ ಸೋಡಾವು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುವುದು. ಚರ್ಮದ ರಂಧ್ರಗಳಲ್ಲಿ ಜಮೆಯಾಗಿರುವಂತಹ ಸತ್ತ ಚರ್ಮದ ಕೋಶಗಳನ್ನು ಇದು ಪರಿಣಾಮಕಾರಿಯಾಗಿ ತೆಗೆಯುವುದು.

ಬಳಸುವುದು ಹೇಗೆ?

*ಅರ್ಧ ಚಮಚ ಅಡುಗೆ ಸೋಡಾಕ್ಕೆ ಎರಡು ಚಮಚ ನೀರು ಹಾಕಿ. ಈ ಪೇಸ್ಟ್ ನ್ನು ಚರ್ಮಕ್ಕೆ ಹಚ್ಚಿಕೊಳ್ಳಿ ಮತ್ತು 2-3 ನಿಮಿಷ ಕಾಲ ಮಸಾಜ್ ಮಾಡಿ ಬಳಿಕ ಹದ ಬೆಚ್ಚಗಿನ ನೀರಿನಿಂದ ತೊಳೆಯಿರಿ.

*ವಾರದಲ್ಲಿ ಒಂದು ಸಲ ಇದನ್ನು ಬಳಸಿದರೆ ಚರ್ಮದ ರಂಧ್ರಗಳಲ್ಲಿ ಜಮೆಯಾಗುವಂತಹ ಸತ್ತ ಚರ್ಮದ ಕೋಶಗಳನ್ನು ಇದು ತೆಗೆದುಹಾಕುವುದು.

ಬಿಸಿಲಿನಿಂದ ಆದ ಕಲೆಗೆ ಟೊಮೆಟೋ

ಬಿಸಿಲಿನಿಂದ ಆದ ಕಲೆಗೆ ಟೊಮೆಟೋ

ಟೊಮೆಟೋದಲ್ಲಿ ಇರುವಂತಹ ಶಮನಕಾರಿ ಗುಣಗಳು ಬಿಸಿಲಿನಿಂದ ಆಗಿರುವಂತಹ ಕಲೆಗಳನ್ನು ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಇದು ಮಾರುಕಟ್ಟೆಯಲ್ಲಿ ಸಿಗುವ ಉತ್ಪನ್ನಕ್ಕಿಂದ ತುಂಬಾ ಒಳ್ಳೆಯದು.

ಬಳಸುವುದು ಹೇಗೆ?

*ತಾಜಾ ಟೊಮೆಟೋದ ತಿರುಳನ್ನು ತೆಗೆಯಿರಿ ಮತ್ತು ಇದನ್ನು ಬಾಧಿತ ಪ್ರದೇಶಕ್ಕೆ ಹಚ್ಚಿಕೊಳ್ಳೀ.

*15-20 ನಿಮಿಷ ಕಾಲ ಇದು ಹಾಗೆ ಇರಲಿ.

*ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ. ವಾರದಲ್ಲಿ 2-3 ಸಲ ಬಳಸಿದರೆ ಪರಿಣಾಮಕಾರಿ ಫಲಿತಾಂಶ ಸಿಗುವುದು.

ಪಪ್ಪಾಯಿ ಮತ್ತು ಮೊಸರು

ಪಪ್ಪಾಯಿ ಮತ್ತು ಮೊಸರು

ಒಂದು ಚಿಕ್ಕ ತುಂಡು ಪಪ್ಪಾಯಿಯನ್ನು ತುರಿದು ಒಂದು ಕಪ್ ಮೊಸರಿಗೆ ಸೇರಿಸಿ ಮಿಕ್ಸಿಯಲ್ಲಿ ಅತಿ ನಯವಾಗದಷ್ಟು ಗೊಟಾಯಿಸಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚುವ ಮೊದಲು ಮುಖಕ್ಕೆ ತೆಳುವಾಗಿ ಕೊಬ್ಬರಿ ಎಣ್ಣೆಯನ್ನು ಹಚ್ಚಿಕೊಳ್ಳಿ. ಇದರಿಂದ ಪಪ್ಪಾಯಿಯಲ್ಲಿರುವ ಆಮ್ಲೀಯ ಅಂಶ ಚರ್ಮವನ್ನು ಸುಡದಂತೆ ರಕ್ಷಿಸುತ್ತದೆ.

ಪಪ್ಪಾಯಿ ಹಣ್ಣಿನಿಂದ ನಿಮ್ಮ ಸೌಂದರ್ಯವನ್ನು ವರ್ಧಿಸಿಕೊಳ್ಳಿ

ಬಾಳೆಹಣ್ಣಿನ ಫೇಸ್ ಪ್ಯಾಕ್

ಬಾಳೆಹಣ್ಣಿನ ಫೇಸ್ ಪ್ಯಾಕ್

ಬಾಳೆಹಣ್ಣೊ೦ದನ್ನು ತೆಗೆದುಕೊ೦ಡು, ಅದನ್ನು ಜಜ್ಜಿ, ಸ್ವಲ್ಪ ಜೇನುತುಪ್ಪ ಹಾಗೂ ಒ೦ದು ಟೀ ಚಮಚದಷ್ಟು ಆಲಿವ್ ತೈಲದೊಡನೆ ಅದನ್ನು ಬೆರೆಸಿರಿ. ಈ ಪ್ಯಾಕ್ ಅನ್ನು ನಿಮ್ಮ ಮುಖದ ಮೇಲೆ ಹಚ್ಚಿಕೊ೦ಡು ಅದನ್ನು ಹದಿನೈದು ನಿಮಿಷಗಳವರೆಗೆ ಹಾಗೆಯೇ ಇರಗೊಡಿರಿ. ಮುಖದ ತ್ವಚೆಯ ಮೇಲಿರಬಹುದಾದ ನೆರಿಗೆಗಳು ಹಾಗೂ ಢಾಳಾಗಿರುವ ವೃದ್ಧಾಪ್ಯ ರೇಖೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಇದೊ೦ದು ಅತ್ಯುತ್ತಮವಾದ, ಮನೆಯಲ್ಲಿಯೇ ತಯಾರಿಸಿದ ಫೇಸ್ ಪ್ಯಾಕ್ ಆಗಿದ್ದು, ಇದು ನಿಮ್ಮ ತ್ವಚೆಯನ್ನು ನವನಾವೀನ್ಯದಿ೦ದಿರಿಸುತ್ತದೆ ಹಾಗೂ ತ್ವಚೆಯು ಕಾ೦ತಿಯಿ೦ದ ಹೊಳೆಯುವ೦ತೆ ಮಾಡುತ್ತದೆ.

ತುಳಸಿ ಎಲೆಗಳಿಂದ ಸೌಂದರ್ಯ

ತುಳಸಿ ಎಲೆಗಳಿಂದ ಸೌಂದರ್ಯ

ಆರೋಗ್ಯಕ್ಕಾಗಿ ಪವಿತ್ರವೆನ್ನಲಾಗಿರುವ ತುಳಸಿ ಎಲೆಗಳನ್ನು ಬಳಸುವುದನ್ನು ನಾವು ನೋಡಿದ್ದೇವೆ. ಈಗ ಸೌಂದರ್ಯಕ್ಕಾಗಿಯೂ ಇದನ್ನು ಬಳಸಬಹುದು. ತುಳಸಿ ಎಲೆಗಳನ್ನು ಬಳಸಿಕೊಂಡು ತ್ವಚೆಯ ಕಾಂತಿಯನ್ನು ವೃದ್ಧಿಸಬಹುದಾಗಿದೆ.

ಬೇಕಾಗುವ ಸಾಮಗ್ರಿಗಳು:

*10-15 ತುಳಸಿ ಎಲೆಗಳು

*ಒಂದು ಕಪ್ ನೀರು

ಮಾಡುವ ವಿಧಾನ ಐದು

ನಿಮಿಷಗಳ ಕಾಲ ತುಳಸಿ ಎಲೆಗಳನ್ನು ನೀರಿನಲ್ಲಿ ಕುದಿಸಿಕೊಳ್ಳಿ. ಬಳಿಕ ನೀರು ಮತ್ತು ಎಲೆಗಳನ್ನು ಬೇರ್ಪಡಿಸಿ. ನೀರು ಸ್ವಲ್ಪ ತಣ್ಣಗಾದ ಬಳಿಕ ಹತ್ತಿ ಉಂಡೆಗಳನ್ನು ನೀರಿನಲ್ಲಿ ಅದ್ದಿಕೊಂಡು ಮುಖವನ್ನು ಒರೆಸಿಕೊಳ್ಳಿ. ತುಳಸಿ ಎಲೆಗಳು ತಕ್ಷಣಕ್ಕೆ ನಿಮಗೆ ಫಲಿತಾಂಶ ನೀಡುವುದು.

ಹೆಸರು ಕಾಳು ಮತ್ತು ಅರಿಶಿನ

ಹೆಸರು ಕಾಳು ಮತ್ತು ಅರಿಶಿನ

- 2 ಟೇಬಲ್ ಚಮಚ ಹೆಸರುಕಾಳು ಹಿಟ್ಟಿಗೆ ಒಂದು ಚಿಟಕಿ ಅರಿಶಿನವನ್ನು ಸೇರಿಸಿ, ಮಿಶ್ರಗೊಳಿಸಿ.

- ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ,

20 ನಿಮಿಷಗಳ ಕಾಲ ಬಿಡಿ.

- ಬಳಿಕ ತಣ್ಣೀರಿನಲ್ಲಿ ತೊಳೆಯಿರಿ.

- ಹೀಗೆ ಮಾಡುವುದರಿಂದ ತ್ವಚೆಯು ತಾಜಾತನದಿಂದ ಕೂಡಿರುವುದು.

ಬೇವು ಮತ್ತು ಜೇನುತುಪ್ಪ

ಬೇವು ಮತ್ತು ಜೇನುತುಪ್ಪ

- 1 ಟೀ ಚಮಚ ಜೇನುತುಪ್ಪ, ಚಿಟಕಿ ಅರಿಶಿನ, ಕೆಲವು ಹನಿ ಗುಲಾಬಿ ನೀರು ಮತ್ತು 1 ಟೀ ಚಮಚ ಬೇವಿನ ಪುಡಿಯನ್ನು ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖ ಹಾಗೂ ಕತ್ತಿನ ಭಾಗಕ್ಕೆ ಅನ್ವಯಿಸಿ.

- 10 ನಿಮಿಷಗಳ ಬಳಿಕ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

- ಚರ್ಮವು ಕಲೆ ರಹಿತವಾಗಿ ಕಂಗೊಳಿಸುವುದು.

ಎಳ್ಳು ಮತ್ತು ಅರಿಶಿನ

ಎಳ್ಳು ಮತ್ತು ಅರಿಶಿನ

- ಎಳ್ಳನ್ನು 12 ಗಂಟೆಗಳ ಕಾಲ ನೆನೆಸಿ, ರುಬಬಿಕೊಳ್ಳಿ.

- ಎಳ್ಳಿನ ಪೇಸ್ಟ್‍ಗೆ ಕೆಲವು ಹನಿ ಆಪಲ್ ಸೈಡರ್ ವಿನೆಗರ್ ಮತ್ತು ಚಿಟಕಿ ಅರಿಶಿನ ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖ ಹಾಗೂ ಕತ್ತಿನ ಭಾಗಕ್ಕೆ ಅನ್ವಯಿಸಿ.

- 15 ನಿಮಿಷಗಳ ಬಳಿಕ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

- ಚರ್ಮವು ಆಕರ್ಷಣೆಯಿಂದ ಕಂಗೊಳಿಸುವುದು.

ಅಕ್ಕಿ ನೀರಿನೊಂದಿಗೆ ಮುಖ ತೊಳೆಯಿರಿ

ಅಕ್ಕಿ ನೀರಿನೊಂದಿಗೆ ಮುಖ ತೊಳೆಯಿರಿ

ತ್ವಚೆಯ ಮೇಲಿನ ಕಲೆಗಳನ್ನು ಅಕ್ಕಿಯ ನೀರಿನೊ೦ದಿಗೆ ತಿಳಿಗೊಳಿಸಿಕೊಳ್ಳಿರಿ. ನಿಮ್ಮ ಮುಖವನ್ನು ಅಕ್ಕಿನೀರಿನಿ೦ದ ತೊಳೆದುಕೊಳ್ಳುವುದಕ್ಕೆ ಮೊದಲು ಅದಕ್ಕೆ ಚಿಟಿಕೆಯಷ್ಟು ಅರಿಶಿನವನ್ನು ಸೇರಿಸಿಕೊಳ್ಳಿರಿ. ಇದರಿ೦ದ ಅಕ್ಕಿ ನೀರಿನಿ೦ದಾಗಬಹುದಾದ ಪ್ರಯೋಜನವು ಮತ್ತಷ್ಟು ಹೆಚ್ಚಾಗುತ್ತದೆ. ಅಕ್ಕಿ ನೀರನ್ನು ಒ೦ದು ಫೇಸ್ ವಾಶ್ ನ ರೂಪದಲ್ಲಿ ನಿಯಮಿತವಾಗಿ ಬಳಸಿದ್ದೇ ಆದಲ್ಲಿ, ಅದು ಮೊಡವೆಗಳ ನಿವಾರಣೆಗೆ ನೆರವಾಗುತ್ತದೆ. ಆದರೂ ಸಹ, ಅಕ್ಕಿ ನೀರಿನ ನಿಯಮಿತ ಬಳಕೆಯು ನಿಮ್ಮ ತ್ವಚೆಯನ್ನು ಮಾತ್ರ ಶುಷ್ಕಗೊಳಿಸಿಬಿಡುತ್ತದೆ.

ಕೊತ್ತಂಬರಿ ಸೊಪ್ಪು

ಕೊತ್ತಂಬರಿ ಸೊಪ್ಪು

ನಾಲ್ಕು ಟೇಬಲ್ ಚಮಚ ಓಟ್‌ಮೀಲ್, 2 ಟೇಬಲ್ ಚಮಚ ಹಾಲು, 2 ಟೀ ಚಮಚ ಸೌತೆಕಾಯಿ ರಸವನ್ನುಚೆನ್ನಾಗಿ ಬೆರೆಸಿಕೊಂಡು, ಇದಕ್ಕೆ ಜಜ್ಜಿರುವ ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಸಹ ಹಾಕಿ ಚೆನ್ನಾಗಿ ಪೇಸ್ಟ್ ರೀತಿಯಲ್ಲಿ ಮಿಶ್ರಣ ಮಾಡಿ, ಮುಖದ ಮೇಲೆ ಲೇಪಿಸಿಕೊಳ್ಳಿ ಹಾಗೂ 15 ನಿಮಿಷಗಳವರೆಗೆ ಅದನ್ನು ಹಾಗೆಯೇ ಬಿಡಿ. ನಂತರ ತಣ್ಣೀರಿನಲ್ಲಿ ಮುಖವನ್ನು ತೊಳೆಯಿರಿ.

ಹಸಿ ಬೀಟ್‌ರೂಟಿನ ರಸ ಪ್ರಯತ್ನಿಸಿ ನೋಡಿ

ಹಸಿ ಬೀಟ್‌ರೂಟಿನ ರಸ ಪ್ರಯತ್ನಿಸಿ ನೋಡಿ

ಹಸಿ ಬೀಟ್‌ರೂಟಿನ ಅರ್ಧ ಭಾಗವನ್ನು ತುರಿದು ಕೊಂಚ ನೀರಿನೊಂದಿಗೆ ಮಿಕ್ಸಿಯಲ್ಲಿ ಕಡೆದು ರಸ ಹಿಂಡಿ ತೆಗೆಯಿರಿ. ಈ ರಸವನ್ನು ನೇರವಾಗಿ ಮುಖದ ಚರ್ಮದ ಮೇಲೆ ಹಚ್ಚಿ ಒಣಗಲು ಬಿಡಿ. ಹದಿನೈದು ನಿಮಿಷದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ವಾರಕ್ಕೆರಡು ಅಥವಾ ಮೂರು ಬಾರಿ ಪುನರಾವರ್ತಿಸುವ ಮೂಲಕ ಚರ್ಮದ ಕಾಂತಿ ಹೆಚ್ಚುತ್ತದೆ.

English summary

effective-kitchen-ingredients-for-different-skin-problems

Using pricey commercial beauty products for treating unappealing skin care problems can not only burn a hole in your wallet but also take a toll on your skin's health. For treating skin-related problems like acne, blackheads, large pores, dark circles, etc., a majority of us end up using over-the-counter products. Instead of buying such products, you can just check inside your kitchen cabinet and you'll be able to find remedies that can help you get rid of unappealing problems without causing any damage to the skin.