For Quick Alerts
ALLOW NOTIFICATIONS  
For Daily Alerts

  ಕಾಂತಿಯುತ, ಸುಂದರ ತ್ವಚೆಗಾಗಿ ಹೀಗೆ ಮಾಡಿ…

  By Hemanth
  |

  ಭೂಮಿ ಮೇಲಿರುವ ಪ್ರತಿಯೊಬ್ಬರಿಗೂ ತಾನು ಸುಂದರವಾಗಿ ಕಾಣಬೇಕೆಂದಿರುತ್ತದೆ. ಅದು ಮಹಿಳೆ ಅಥವಾ ಪುರುಷ ಎನ್ನುವ ಭೇದಭಾವವಿಲ್ಲದೆ. ಮಹಿಳೆಯರಿಗೆ ತಾನು ನಾಲ್ಕು ಮಂದಿಯ ಎದ್ದು ಕಾಣುತ್ತಿರಬೇಕೆಂಬ ಹಂಬಲ ಹೆಚ್ಚು. ಇದರಿಂದಾಗಿಯೇ ಅವರು ಹಲವಾರು ರೀತಿಯ ಸೌಂದರ್ಯವರ್ಧಕಗಳನ್ನು ಬಳಸಿಕೊಳ್ಳುವರು. ಈ ಲೇಖನದಲ್ಲಿ ನೀವು ಸುಂದರ ತ್ವಚೆ ಪಡೆಯುವುದು ಹೇಗೆ ಎನ್ನುವ ಬಗ್ಗೆ ತಿಳಿದುಕೊಳ್ಳಿ. ವಾತಾವರಣದಲ್ಲಿನ ಕಲ್ಮಶ, ಹವಾಮಾನ ಬದಲಾವಣೆ, ಜೀವನಶೈಲಿ ಬದಲಾಣಿ,

  ಅತಿಯಾಗಿ ಮದ್ಯಪಾನ ಅಥವಾ ಧೂಮಪಾನ ಮಾಡುವುದು ಇತ್ಯಾದಿಗಳು ಮುಖದಲ್ಲಿ ಕಪ್ಪುಕಲೆ, ಮೊಡವೆ, ಒಣಚರ್ಮ ಇತ್ಯಾದಿಗಳನ್ನು ಉಂಟು ಮಾಡುವುದು. ಆದರೆ ನಿಯಮಿತವಾಗಿ ಕೆಲವೊಂದು ಮನೆಮದ್ದಿನ ಬಳಕೆಯಿಂದ ಇದನ್ನು ನಿವಾರಿಸಬಹುದು. ಇವುಗಳಿಗೆ ತಾತ್ಕಾಲಿಕ ಮತ್ತು ಶಾಶ್ವತ ಪರಿಹಾರವಿದೆ.

   Glowing face

  ಮೇಕಪ್ ನಿಂದ ನೀವು ಮುಖದಲ್ಲಿನ ಕಲೆಗಳು ಮೊಡವೆಗಳ ಕಲೆಗಳನ್ನು ಮುಚ್ಚಿಕೊಳ್ಳಬಹುದು. ಆದರೆ ಇದು ತಾತ್ಕಾಲಿಕ. ಮೇಕಪ್ ಸಾಧನಗಳಿಗೆ ಅತಿಯಾಗಿ ಹಣ ಖರ್ಚು ಮಾಡಿದರೆ ನಿಮಗೆ ಸಿಗುವುದು ತಾತ್ಕಾಲಿಕ ಪರಿಹಾರ. ಇದರ ಬದಲಿಗೆ ನೀವು ಮನೆಮದ್ದನ್ನು ಬಳಸಿಕೊಂಡು ಶಾಶ್ವತ ಪರಿಹಾರ ಪಡೆಯಬಹುದು. ಇದರಿಂದ ಯಾವುದೇ ರೀತಿಯ ಸಮಸ್ಯೆಯೂ ಆಗದು. ಕಾಂತಿಯುತ, ಸುಂದರ ತ್ವಚೆ ಪಡೆಯುವುದು ಹೇಗೆ ಎಂದು ನೀವು ತಿಳಿಯಿರಿ.

  ತೆಂಗಿನೆಣ್ಣೆ

  ತೆಂಗಿನೆಣ್ಣೆಯಲ್ಲಿ ಸೂಕ್ಷ್ಮಾಣು ವಿರೋಧಿ ಗುಣಗಳು ಇವೆ. ಚರ್ಮವು ಸ್ವಚ್ಛವಾಗಿರಲು ಇದು ನೆರವಾಗುವುದು. ಇಷ್ಟು ಮಾತ್ರವಲ್ಲದೆ ಇದು ಚರ್ಮಕ್ಕೆ ಮೊಶ್ಚಿರೈಸ್ ಮಾಡುವುದು.

  ಬೇಕಾಗುವ ಸಾಮಗ್ರಿಗಳು

  ತೆಂಗಿನೆಣ್ಣೆ

  ಹತ್ತಿ ಉಂಡೆ

  ಬಳಸುವ ವಿಧಾನ

  *ಶುದ್ಧ ತೆಂಗಿನೆಣ್ಣೆ ತೆಗೆದುಕೊಂಡು ಅದನ್ನು ಸ್ವಲ್ಪ ಬಿಸಿ ಮಾಡಿ.

  *ಸ್ವಲ್ಪ ಬಿಸಿಯಾಗಿರುವ ತೆಂಗಿನೆಣ್ಣೆಯನ್ನು ಬೆರಳಿನ ನೆರವಿನಿಂದ ಮುಖಕ್ಕೆ ಹಚ್ಚಿಕೊಳ್ಳಿ ಮತ್ತು ಕೆಲವು ನಿಮಿಷ ಕಾಲ ಮಸಾಜ್ ಮಾಡಿ.

  * 10-15 ನಿಮಿಷ ಕಾಲ ಹಾಗೆ ಬಿಡಿ. ಹತ್ತಿ ಉಂಡೆ ನೆರವಿನಿಂದ ಹೆಚ್ಚುವರಿ ಎಣ್ಣೆ ತೆಗೆಯಿರಿ.

  * ಚರ್ಮವು ಶುದ್ಧವಾಗಿರಲು ನೀವು ದಿನದಲ್ಲಿ ಎರಡು ಸಲ ಇದನ್ನು ಬಳಸಿಕೊಳ್ಳಿ.

  ಗ್ರೀನ್ ಟೀ

  ಗ್ರೀನ್ ಟೀಯಲ್ಲಿ ಆ್ಯಂಟಿಆಕ್ಸಿಡೆಂಟ್ ಗಳಿರುವ ಕಾರಣದಿಂದಾಗಿ ಇದು ಚರ್ಮವನ್ನು ನಿರ್ವಿಷಗೊಳಿಸುವುದು. ಇದರಿಂದ ಚರ್ಮವು ತುಂಬಾ ಶುದ್ಧ ಮತ್ತು ಆರೋಗ್ಯವಾಗಿರುವುದು.

  ಬೇಕಾಗಿರುವ ಸಾಮಗ್ರಿಗಳು

  1 ಟೀ ಬ್ಯಾಗ್ ಗ್ರೀನ್ ಟೀ

  1 ಕಪ್ ನೀರು

  ಒಂದು ಹತ್ತಿ ಉಂಡೆ

  glowing skin

  ಬಳಸುವ ವಿಧಾನ

  *ಒಂದು ಕಪ್ ನೀರಿಗೆ ಗ್ರೀನ್ ಟೀ ಹಾಕಿ

  *ಈ ಮಿಶ್ರಣವು ಕೋಣೆಯ ತಾಪಮಾನಕ್ಕೆ ಬರಲಿ.

  *ಹತ್ತಿ ಉಂಡೆಯನ್ನು ಈ ಮಿಶ್ರಣದಲ್ಲಿ ಅದ್ದಿಕೊಂಡು ಸಂಪೂರ್ಣ ಮುಖಕ್ಕೆ ಹಚ್ಚಿಕೊಳ್ಳಿ.

  *15-20 ನಿಮಿಷ ಕಾಲ ಹಾಗೆ ಬಿಡಿ ಮತ್ತು ತಣ್ಣೀರಿನಿಂದ ತೊಳೆಯಿರಿ.

  * ದಿನದಲ್ಲಿ ಒಂದು ಸಲ ಇದನ್ನು ನೀವು ಪುನರಾವರ್ತಿಸಿ.

  * ಗ್ರೀನ್ ಟೀ ಲಿಂಬೆರಸ ಮತ್ತು ಜೇನುತುಪ್ಪ ಬೆರೆಸಿಕೊಂಡು ಕುಡಿದರೆ ಅದು ಕೂಡ ಚರ್ಮಕ್ಕೆ ಒಳ್ಳೆಯದು.

  ಲಿಂಬೆ

  ಮುಖದಲ್ಲಿನ ಕಲೆ ಮತ್ತು ಮೊಡವೆಗಳಿಂದ ಆಗಿರುವ ಕಪ್ಪ ಕಲೆ ನಿವಾರಣೆ ಮಾಡುವಲ್ಲಿ ಲಿಂಬೆಯು ತುಂಬಾ ಪರಿಣಾಮಕಾರಿಯಾಗಿರಲಿದೆ.

  ಬೇಕಾಗುವ ಸಾಮಗ್ರಿ

  ಲಿಂಬೆ

  ಬಳಸುವ ವಿಧಾನ

  *ಲಿಂಬೆಯನ್ನು ಎರಡು ತುಂಡುಗಳನ್ನಾಗಿ ಮಾಡಿ.

  *ಇದರ ಒಂದು ಭಾಗ ತೆಗೆದುಕೊಂಡು ಮುಖಕ್ಕೆ ನೇರವಾಗಿ ಉಜ್ಜಿಕೊಳ್ಳಿ.

  *ಕೆಲವು ನಿಮಿಷ ಕಾಲ ಹೀಗೆ ಮಾಡಿ.

  *ತಣ್ಣೀರಿನಿಂದ ತೊಳೆದು ಬಟ್ಟೆಯಿಂದ ಒರೆಸಿಕೊಳ್ಳಿ.

  *ಇದರ ಬಳಿಕ ಹಗುರ ಮೊಶ್ಚಿರೈಸರ್ ಹಚ್ಚಿಕೊಳ್ಳಿ.

  ಜೇನುತುಪ್ಪ

  ಜೇನುತುಪ್ಪದಲ್ಲಿ ಇರುವಂತಹ ವಿಟಮಿನ್ ಗಳು ಮತ್ತು ಖನಿಜಾಂಶಗಳು ಚರ್ಮಕ್ಕೆ ಮೊಶ್ಚಿರೈಸ್ ನೀಡಲು ನೆರವಾಗುವುದು. ಜೇನುತುಪ್ಪದಲ್ಲಿ ಫ್ಲಾವನಾಯ್ಡ್ ಗಳಿವೆ ಮತ್ತು ಇದು ತ್ವಚೆಗೆ ಕಾಂತಿ ನೀಡುವುದು.

  ಬೇಕಾಗುವ ಸಾಮಗ್ರಿಗಳು

  1 ಚಮಚ ಜೇನುತುಪ್ಪ

  ಬಳಸುವ ವಿಧಾನ

  *ಮುಖ ತೊಳೆದುಕೊಂಡ ಬಳಿಕ ಜೇನುತುಪ್ಪವನ್ನು ಮುಖಕ್ಕೆ ಹಚ್ಚಿಕೊಳ್ಳಿ.

  *ವೃತ್ತಾಕಾರದಲ್ಲಿ ಮುಖಕ್ಕೆ ನಿಧಾನವಾಗಿ ಮಸಾಜ್ ಮಾಡಿ.

  *15 ನಿಮಿಷ ಕಾಲ ಹಾಗೆ ಬಿಡಿ ಮತ್ತು ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.

  * ಉತ್ತಮ ಫಲಿತಾಂಶಕ್ಕಾಗಿ ನೀವು ಪ್ರತಿನಿತ್ಯ ಇದನ್ನು ಬಳಸಿಕೊಳ್ಳಿ.

  ಶ್ರೀಗಂಧದ ಪುಡಿ ಮತ್ತು ಬಾದಾಮಿ ಎಣ್ಣೆ

  *ಒಂದು ಟೀ ಚಮಚ ಶ್ರೀಗಂಧದ ಪುಡಿಗೆ 1 ಟೀ ಚಮಚ ಬಾದಾಮಿ ಎಣ್ಣೆಯನ್ನು ಸೇರಿಸಿ, ಮಿಶ್ರಗೊಳಿಸಿ.

  *ಮಿಶ್ರಣವನ್ನು ಮುಖ ಮತ್ತು ಕತ್ತಿನ ಭಾಗದವರೆಗೆ ಅನ್ವಯಿಸಿ.

  *10 ನಿಮಿಷಗಳ ಕಾಲ ಆರಲು ಬಿಡಿ. ಬಳಿಕ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

  *ವಾರಕ್ಕೆ 3-4 ಬಾರಿ ಈ ಕ್ರಮವನ್ನು ಅನುಸರಿಸಿದರೆ ಚರ್ಮದ ಆರೋಗ್ಯವನ್ನು ಕಾಪಾಡಬಹುದು ಮತ್ತು ಮೊಡವೆಯಿಂದ ಮುಕ್ತಿ ಹೊಂದಬಹುದು.

  ಹಸಿ ಬೀಟ್‌ರೂಟಿನ ರಸ

  ಹಸಿ ಬೀಟ್‌ರೂಟಿನ ಅರ್ಧ ಭಾಗವನ್ನು ತುರಿದು ಕೊಂಚ ನೀರಿನೊಂದಿಗೆ ಮಿಕ್ಸಿಯಲ್ಲಿ ಕಡೆದು ರಸ ಹಿಂಡಿ ತೆಗೆಯಿರಿ. ಈ ರಸವನ್ನು ನೇರವಾಗಿ ಮುಖದ ಚರ್ಮದ ಮೇಲೆ ಹಚ್ಚಿ ಒಣಗಲು ಬಿಡಿ. ಹದಿನೈದು ನಿಮಿಷದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ವಾರಕ್ಕೆರಡು ಅಥವಾ ಮೂರು ಬಾರಿ ಪುನರಾವರ್ತಿಸುವ ಮೂಲಕ ಚರ್ಮದ ಕಾಂತಿ ಹೆಚ್ಚುತ್ತದೆ. 

  ಬಾದಾಮಿ

  ಕೆಲವು ಬಾದಾಮಿಗಳನ್ನು ರಾತ್ರಿಯಿಡೀ ನೆನೆಸಿಡಿ. ಮರುದಿನ ಇದನ್ನು ಕೊಂಚ ಹಸಿ ಹಾಲಿನೊಂದಿಗೆ ನಯವಾಗಿ ಅರೆದು ಚರ್ಮಕ್ಕೆ ಹಚ್ಚಿಕೊಳ್ಳಿ. ಕೊಂಚ ಸಮಯದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಇದು ಚರ್ಮದ ಕಲೆಗಳನ್ನು ತೊಲಗಿಸಲು ಮತ್ತು ಕಪ್ಪಾದ ಭಾಗಗಳನ್ನು ಸಹಜವರ್ಣಕ್ಕೆ ತರಲು ನೆರವಾಗುತ್ತದೆ. ನಿಯಮಿತವಾಗಿ ಉಪಯೋಗಿಸಿದರೆ ಚರ್ಮದ ಕಾಂತಿ ಹೆಚ್ಚುತ್ತದೆ. 

  coriander leaves

  ಕೊತ್ತಂಬರಿ ಸೊಪ್ಪು

  ತಾಜಾ ಕೊತ್ತಂಬರಿ ಸೊಪ್ಪಿನಲ್ಲಿ ವಿಟಮಿನ್ ಸಿ, ವಿಟಮಿನ್ ಎ, ಆಂಟಿ ಆಕ್ಸಿಡೆಂಟ್‍ಗಳು ಮತ್ತು ರಂಜಕದಂತಹ ಖನಿಜಗಳು ಯಥೇಚ್ಛವಾಗಿರುವುದರಿಂದ ತ್ವಚೆಯ ಕಾಂತಿಯನ್ನು ವೃದ್ಧಿಸುವಲ್ಲಿ ಇದು ಪ್ರಮುಖ ಪಾತ್ರವಹಿಸುತ್ತದೆ. ಹಾಗಾಗಿ ನೀವು ಮಾಡಬೇಕಾದದು ಇಷ್ಟೇ 4 ಟೇಬಲ್ ಚಮಚ ಓಟ್‌ಮೀಲ್, 2 ಟೇಬಲ್ ಚಮಚ ಹಾಲು, 2 ಟೀ ಚಮಚ ಸೌತೆಕಾಯಿ ರಸವನ್ನುಚೆನ್ನಾಗಿ ಬೆರೆಸಿಕೊಂಡು, ಇದಕ್ಕೆ ಜಜ್ಜಿರುವ ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಸಹ ಹಾಕಿ ಚೆನ್ನಾಗಿ ಪೇಸ್ಟ್ ರೀತಿಯಲ್ಲಿ ಮಿಶ್ರಣ ಮಾಡಿ, ಮುಖದ ಮೇಲೆ ಲೇಪಿಸಿಕೊಳ್ಳಿ ಹಾಗೂ 15 ನಿಮಿಷಗಳವರೆಗೆ ಅದನ್ನು ಹಾಗೆಯೇ ಬಿಡಿ. ನಂತರ ತಣ್ಣೀರಿನಲ್ಲಿ ಮುಖವನ್ನು ತೊಳೆಯಿರಿ. 

  ಅಕ್ಕಿ ನೀರಿನೊಂದಿಗೆ ಮುಖ ತೊಳೆಯಿರಿ

  ತ್ವಚೆಯ ಮೇಲಿನ ಕಲೆಗಳನ್ನು ಅಕ್ಕಿಯ ನೀರಿನೊ೦ದಿಗೆ ತಿಳಿಗೊಳಿಸಿಕೊಳ್ಳಿರಿ. ನಿಮ್ಮ ಮುಖವನ್ನು ಅಕ್ಕಿನೀರಿನಿ೦ದ ತೊಳೆದುಕೊಳ್ಳುವುದಕ್ಕೆ ಮೊದಲು ಅದಕ್ಕೆ ಚಿಟಿಕೆಯಷ್ಟು ಅರಿಶಿನವನ್ನು ಸೇರಿಸಿಕೊಳ್ಳಿರಿ. ಇದರಿ೦ದ ಅಕ್ಕಿ ನೀರಿನಿ೦ದಾಗಬಹುದಾದ ಪ್ರಯೋಜನವು ಮತ್ತಷ್ಟು ಹೆಚ್ಚಾಗುತ್ತದೆ. ಅಕ್ಕಿ ನೀರನ್ನು ಒ೦ದು ಫೇಸ್ ವಾಶ್ ನ ರೂಪದಲ್ಲಿ ನಿಯಮಿತವಾಗಿ ಬಳಸಿದ್ದೇ ಆದಲ್ಲಿ, ಅದು ಮೊಡವೆಗಳ ನಿವಾರಣೆಗೆ ನೆರವಾಗುತ್ತದೆ. ಆದರೂ ಸಹ, ಅಕ್ಕಿ ನೀರಿನ ನಿಯಮಿತ ಬಳಕೆಯು ನಿಮ್ಮ ತ್ವಚೆಯನ್ನು ಮಾತ್ರ ಶುಷ್ಕಗೊಳಿಸಿಬಿಡುತ್ತದೆ. 

  ಅರಿಶಿನದ ಫೇಸ್ ಪ್ಯಾಕ್

  ಅರಿಶಿನವನ್ನು ಮೊಟ್ಟೆಯ ಬಿಳಿ ಭಾಗದ ಜೊತೆಗೆ ಬೆರೆಸಿ ಪೇಸ್ಟ್ ಮಾಡಿಕೊಳ್ಳಿ. ಇದನ್ನು ಫೇಸ್ ಮಾಸ್ಕ್ ರೀತಿಯಲ್ಲಿ ಮುಖಕ್ಕೆ ಲೇಪಿಸಿ, ಒಣಗಲು ಬಿಡಿ. 15 ನಿಮಿಷದ ನಂತರ ಇದನ್ನು ತೊಳೆಯಿರಿ. ಒಂದು ವೇಳೆ ನಿಮಗೆ ಕಚ್ಛಾ ಮೊಟ್ಟೆಯ ವಾಸನೆ ಹಿಡಿಸದ ಪಕ್ಷದಲ್ಲಿ, ಇದಕ್ಕೆ ಒಂದೆರಡು ಹನಿ ಲಿಂಬೆರಸವನ್ನು ಬೆರೆಸಿಕೊಳ್ಳಬಹುದು. ಇದರಿಂದ ಮತ್ತಷ್ಟು ಒಳ್ಳೆಯ ಫಲಿತಾಂಶ ಪಡೆಯಬಹುದು. 

  neem paste

  ಬೇವಿನ ಎಲೆ ಮತ್ತು ಆಲೋವೆರಾ

  *ಒಂದು ಮುಷ್ಟಿ ಬೇವಿನ ಎಲೆಯನ್ನು ಮಿಕ್ಸಿ/ಬ್ಲೆಂಡರ್‍ಅಲ್ಲಿ ರುಬ್ಬಿಕೊಳ್ಳಿ. 1/2 ಟೀ ಚಮಚ ಬೇವಿನ ಪುಡಿಗೆ 2 ಟೀ ಚಮಚ ಅಲೋವೆರಾ ಜೆಲ್ ಸೇರಿಸಿ, ಮಿಶ್ರಗೊಳಿಸಿ.

  *ಮಿಶ್ರಣವನ್ನು ಪೀಡಿತ ಪ್ರದೇಶ ಮತ್ತು ಮುಖದ ಭಾಗಕ್ಕೆ ಅನ್ವಯಿಸಿ.

  *5 ನಿಮಿಷಗಳ ಕಾಲ ಆರಲು ಬಿಡಿ. ಬಳಿಕ ಮೃದುವಾದ ನೀರಿನಲ್ಲಿ ತೊಳೆಯಿರಿ.

  *ವಾರದಲ್ಲಿ 3-4 ಬಾರಿ ಅನ್ವಯಿಸುವುದರಿಂದ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಬಹುದು. 

  ಆಲಿವ್ ಎಣ್ಣೆ ಮತ್ತು ನಿಂಬೆ ರಸ

  *1 ಟೀ ಚಮಚ ಆಲಿವ್ ಎಣ್ಣೆಗೆ 1 ಟೀ ಚಮಚ ನಿಂಬೆ ರಸವನ್ನು ಸೇರಿಸಿ, ಮಿಶ್ರಗೊಳಿಸಿ.

  *ಮಿಶ್ರಣವನ್ನು ಪೀಡಿತ ಪ್ರದೇಶ ಮತ್ತು ಮುಖದ ಭಾಗಕ್ಕೆ ಅನ್ವಯಿಸಿ.

  *10 ನಿಮಿಷಗಳ ಕಾಲ ಆರಲು ಬಿಡಿ. ಬಳಿಕ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

  *ವಾರದಲ್ಲಿ 3-4 ಬಾರಿ ಅನ್ವಯಿಸುವುದರಿಂದ ಮೊಡವೆಯಿಂದ ಮುಕ್ತಿ ಕಾಣಬಹುದು. 

  English summary

  Effective Home Remedies For Clear And Spotless Skin

  Makeup can be considered as a temporary solution for hiding all your black spots, blemishes, acne scars, etc. But who wants temporary solutions, isn't it? Also, spending too much on makeup products doesn't seem to be reasonable at all. So, why to go for such solutions that can even be harmful for your skin when you have easy, affordable and natural solutions at home? Let us see how to get beautiful, flawless and clear skin sitting back at home using some common ingredients found in our kitchen.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more