For Quick Alerts
ALLOW NOTIFICATIONS  
For Daily Alerts

ಒಣ ತ್ವಚೆ ಸಮಸ್ಯೆಯೇ? ಹಾಗಾದರೆ ದಾಸವಾಳದ ಮಾಯಿಶ್ಚರೈಸರ್‌ ಪ್ರಯತ್ನಿಸಿ

|

ಇನ್ನೇನು ಚಳಿಗಾಲ ಬಂದೇ ಬಿಟ್ಟಿತು ಹೆಚ್ಚಿನವರಿಗೆ ಈ ಸಮಯದಲ್ಲಿ ಕಾಡುವ ಸಮಸ್ಯೆಯಾಗಿದೆ ಒಣ ತ್ವಚೆಯದ್ದು. ಸಾಮಾನ್ಯ ತ್ವಚೆಯನ್ನು ಹೊಂದಿರುವವರೂ ಕೂಡ ಡ್ರೈ ಸ್ಕಿನ್ ಸಮಸ್ಯೆಯಿಂದ ಬಳಲುತ್ತಾರೆ. ಒಣ ತ್ವಚೆ ಇರುವವರು ಅದಷ್ಟು ಮುಂದಾಲೋಚನೆಯನ್ನು ಮಾಡಿಕೊಂಡು ಸೂಕ್ತ ಕಾಳಜಿಯನ್ನು ವಹಿಸಿಕೊಂಡು ನಿಮ್ಮ ತ್ವಚೆಯ ಕಾಳಜಿಯನ್ನು ಮಾಡಬೇಕು.

ನಿಮ್ಮ ತ್ವಚೆಯನ್ನು ಸಾಕಷ್ಟು ಮೃದುವಾಗಿರಿಸಲು ಮಾಯಿಶ್ಚರೈಸಿಂಗ್ ಕ್ರೀಮ್‌ನ ಬಳಕೆಯನ್ನು ನೀವು ಮಾಡಬೇಕು. ಇದು ತ್ವಚೆಯನ್ನು ಮೃದುವಾಗಿರಿಸುತ್ತದೆ. ಹೊರಗೆ ಓಡಾಡುವ ಸಮಯದಲ್ಲಿ ಮಾಯಿಶ್ಚರೈಸರ್ ಹಚ್ಚಿಕೊಳ್ಳುವುದನ್ನು ಮರೆಯಬೇಡಿ. ಆದಷ್ಟು ಮನೆಯಲ್ಲೇ ಈ ಮಾಯಿಶ್ಚರೈಸರ್ ಅನ್ನು ತಯಾರಿಸಿಕೊಳ್ಳಿ. ನೀವು ಮನೆಯಲ್ಲೇ ಮಾಯಿಶ್ಚರೈಸರ್ ಅನ್ನು ತಯಾರಿಸಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಸುವ ಮೊದಲು ಒಣ ತ್ವಚೆ ಎಂದರೇನು ಎಂಬುದನ್ನು ತಿಳಿಸಲು ಬಯಸುತ್ತೇವೆ

Dry Skin? Try This Amazing Hibiscus Moisturiser

ಒಣ ತ್ವಚೆಗೆ ಕಾರಣವೇನು

ಒಣ ತ್ವಚೆಯು ಹಲವಾರು ಅಂಶಗಳಿಂದ ಉಂಟಾಗಬಹುದು ಅದನ್ನು ಕೆಳಗೆ ನೀಡಿದ್ದೇವೆ:

ಮಾಯಿಶ್ಚರೈಸರ್‌ನ ಕೊರತೆ

ನಿಮ್ಮ ತ್ವಚೆಯಲ್ಲಿ ಮಾಯಿಶ್ಚರೈಸರ್ ಕೊರತೆಯಿಂದ ಒಣ ತ್ವಚೆ ಉಂಟಾಗುತ್ತದೆ. ತ್ವಚೆಗೆ ಯಾವುದೇ ರಕ್ಷಣೆ ಇಲ್ಲದ ಸಂದರ್ಭದಲ್ಲಿ ಮತ್ತು ಅದನ್ನು ನಿಸ್ತೇಜವಾಗಿ ಬಿಡುವುದರಿಂದ ಮುಖದಲ್ಲಿ ಒಣ ತ್ವಚೆ ಸಮಸ್ಯೆ ಉಂಟಾಗುತ್ತದೆ. ಇದಕ್ಕಾಗಿ ಮಾಯಿಶ್ಚರೈಸಿಂಗ್ ಕ್ರೀಮ್ ಅನ್ನು ಬಳಸಿ ಇದರಿಂದ ನಿಮ್ಮ ತ್ವಚೆ ಸುರಕ್ಷಿತವಾಗಿರುತ್ತದೆ.

Most Read: ಲಿಂಬೆ ಬಳಸಿ ಕಪ್ಪು ತುಟಿಗಳ ಸಮಸ್ಯೆ ನೈಸರ್ಗಿಕವಾಗಿ ಬಗೆಹರಿಸಿ

ತ್ವಚೆಯ ಸೂಕ್ತ ಆರೈಕೆ ಮಾಡದೇ ಇರುವುದು

ನಮ್ಮಲ್ಲಿ ಹೆಚ್ಚಿನವರು ತ್ವಚೆಯ ಆರೈಕೆಯನ್ನು ಮಾಡುತ್ತೇವೆ ಆದರೆ ತಪ್ಪಾದ ವಿಧಾನದಲ್ಲಿ. ಹೆಚ್ಚು ದೀರ್ಘ ಸಮಯ ಬಿಸಿ ನೀರಿನ ಬಳಕೆಯನ್ನು ಮಾಡುವುದರಿಂದ ತ್ವಚೆಯು ಹಾನಿಗೆ ಒಳಗಾಗಬಹುದು. ಅಂತೆಯೇ ಸನ್‌ಸ್ಕ್ರೀನ್ ಲೋಶನ್ ಬಳಸದೆಯೇ ಮನೆಯಿಂದ ಹೊರಗೆ ಹೋಗುವುದರಿಂದ ಕೂಡ ನಮ್ಮ ತ್ವಚೆ ಹಾಳಾಗುತ್ತದೆ.

ಡಿಹೈಡ್ರೇಶನ್

ನಮ್ಮ ದೇಹದಲ್ಲಿ ಸಾಕಷ್ಟು ನೀರಿನ ಕೊರತೆಯಿಂದ ಕೂಡ ಒಣ ತ್ವಚೆ ಉಂಟಾಗುತ್ತದೆ.

ಜೆನೆಟಿಕ್ಸ್

ನಿಮ್ಮ ಒಣ ತ್ವಚೆಗೆ ಕಾರಣವಾಗಿರುವ ಇನ್ನೊಂದು ಅಂಶವೆಂದರೆ ಜೆನಿಟಿಕ್ ಅಂಶವಾಗಿದೆ. ಇಚಿತೊಸಿಸ್ ವಲ್ಗಾರಿಸಿ ಎಂಬ ಅಂಶ ಇದಾಗಿದ್ದು ಇದರಿಂದ ಒಣ ತ್ವಚೆ ಉಂಟಾಗುತ್ತದೆ. ನಿಮ್ಮ ಮೈಯಲ್ಲಿ ತುರಿಕೆ ಕೂಡ ಉಂಟಾಗುತ್ತದೆ.

ನಿಮ್ಮ ಒಣ ತ್ವಚೆಗೆ ದಾಸವಾಳ

ನಿಮ್ಮ ಒಣ ತ್ವಚೆಯನ್ನು ಉಪಚರಿಸುವಲ್ಲಿ ದಾಸವಾಳ ಅತ್ಯುತ್ತಮವಾದುದು. ಇದು ನಿಮ್ಮ ತ್ವಚೆಯನ್ನು ಮೃದುವಾಗಿಸುತ್ತದೆ ಮತ್ತು ಅರೋಗ್ಯಕರವಾಗಿಸುತ್ತದೆ. ದಾಸವಾಳವನ್ನು ಹೆಚ್ಚು ಸಮಯ ಬಳಸುವುದರಿಂದ ಇದು ನಿಮ್ಮ ಒಣ ತ್ವಚೆಯನ್ನು ಉತ್ತಮವಾಗಿಸುತ್ತದೆ.

ದಾಸವಾಳವು ವಯಸ್ಸಾಗುವುದನ್ನು ತಡೆಯುವ ಅಂಶಗಳನ್ನು ಒಳಗೊಂಡಿದ್ದು ಇದು ತ್ವಚೆಯನ್ನು ಬಿಗಿಯಾಗಿಸುತ್ತದೆ. ಹೆಚ್ಚಿನ ಮಾಯಿಶ್ಚರೈಸಿಂಗ್ ಮತ್ತು ಕ್ರೀಮ್‌ಗಳಲ್ಲಿ ದಾಸವಾಳವನ್ನು ಬಳಸಲಾಗುತ್ತದೆ. ನಿಮ್ಮ ತ್ವಚೆಯನ್ನು ಪುರುಜ್ಜೀವನಗೊಳಿಸುತ್ತದೆ, ನಿಮಗೆ ಯವ್ವೌನದಿಂದ ನಳ ನಳಿಸಿದ ತ್ವಚೆಯನ್ನು ಒದಗಿಸುತ್ತದೆ.

Most Read: ಬ್ಯೂಟಿ ಟಿಪ್ಸ್: ಚರ್ಮದ ಸೌಂದರ್ಯ ಹೆಚ್ಚಿಸಲು ಆಲಿವ್ ಎಣ್ಣೆ ಬಳಸಿ

ಒಣ ತ್ವಚೆಗಾಗಿ ದಾಸವಾಳದ ಮಾಯಿಶ್ಚರೈಸಿಂಗ್ ಮಾಡುವುದು ಹೇಗೆ?

ಸಾಮಾಗ್ರಿಗಳು

*2 ಚಮಚ ದಾಸವಾಳದ ಚಹಾ
*1 ಕಪ್ ತೆಂಗಿನೆಣ್ಣೆ
*2 ಚಮಚ ಬಾದಾಮಿ ಎಣ್ಣೆ
*1 ವಿಟಮಿನ್ ಇ ಕ್ಯಾಪ್ಸುಲ್/ 1 ಚಮಚ ವಿಟಮಿನ್ ಇ ಪೌಡರ್
*4-5 ಹನಿ ರೋಸ್‌ವಾಟರ್
*1 ಚಮಚ ಜೇನು

ಮಾಡುವುದು ಹೇಗೆ

*ದಾಸವಾಳ ಎಲೆಗಳನ್ನು ಚೆನ್ನಾಗಿ ಒಣಗಿಸಿ ಹುಡಿ ಮಾಡಿಕೊಳ್ಳಿ
*ತೆಂಗಿನೆಣ್ಣೆಯನ್ನು ಬಿಸಿ ಮಾಡಿ ಮತ್ತು ಬಿಸಿಯನ್ನು ತಾಳಿಕೊಳ್ಳುವ ಗ್ಲಾಸ್ ಬೌಲ್‌ನಲ್ಲಿ ಇದನ್ನು ಹಾಕಿ ಮತ್ತು ಇದಕ್ಕೆ ದಾಸವಾಳ ಚಹಾ ಸೇರಿಸಿ. ಚೆನ್ನಾಗಿ ತಿರುಗಿಸಿ.
*ನಂತರ ಜೇನು ಮತ್ತು ಬಾದಾಮಿ ಎಣ್ಣೆಯನ್ನು ಈ ಮಿಶ್ರಣಕ್ಕೆ ಸೇರಿಸಿ ಮತ್ತು ಚೆನ್ನಾಗಿ ತಿರುಗಿಸಿಕೊಳ್ಳಿ
*ಕೊನೆಯದಾಗಿ ವಿಟಮಿನ್ ಇ ಕ್ಯಾಪ್ಸುಲ್ ಅನ್ನು ತೆರೆಯಿರಿ ಮತ್ತು ಅದರಲ್ಲಿರುವ ಸಾಮಾಗ್ರಿಗಳನ್ನು ಇದಕ್ಕೆ ಸೇರಿಸಿ. ಚಮಚದ ಸಹಾಯದಿಂದ ಎಲ್ಲಾ ಸಾಮಾಗ್ರಿಗಳನ್ನು ಕರಗಿಸಿಕೊಳ್ಳಿ.
*ಬಟ್ಟೆಯ ಸಹಾಯದಿಂದ ದ್ರಾವಣವನ್ನು ಶೋಧಿಸಿ ಮತ್ತು ಅದನ್ನು ಚಹಾದಿಂದ ಬೇರ್ಪಡಿಸಿ.
*ಇದನ್ನು ತಣ್ಣಗಾಗಲು ಬಿಡಿ
*ಇದು ಒಮ್ಮೆ ತಣ್ಣಗಾದ ನಂತರ, 2 ನಿಮಿಷದ ಕಾಲ ಮಿಕ್ಸರ್‌ನಲ್ಲಿ ತಿರುಗಿಸಿ.
*ಮುಂದೆ ಬಳಸಲು ಅದನ್ನು ಗಾಳಿಯಾಡದ ಡಬ್ಬದಲ್ಲಿ ಸಂಗ್ರಹಿಸಿ.
*ಉತ್ತಮ ಫಲಿತಾಂಶಕ್ಕಾಗಿ ಇದನ್ನು ನೀವು ನಿತ್ಯವೂ ಬಳಸಬಹುದು.

English summary

Dry Skin? Try This Amazing Hibiscus Moisturiser

Hibiscus is a preferred choice when it comes to dry skin. It has the tendency to soften your skin and make it smooth and healthy. Prolonged use of hibiscus on skin makes it soft and smooth, while keeping dull and dry skin at bay. Hibiscus also possess anti-ageing properties that help to tighten and uplift your skin.
X
Desktop Bottom Promotion