For Quick Alerts
ALLOW NOTIFICATIONS  
For Daily Alerts

  ಶುಷ್ಕ ತ್ವಚೆಗೆ ಪರಿಹಾರ ನೀಡುವ ಸುಲಭ ಉಪಾಯಗಳು

  By Sushma Charhra
  |

  ಶುಷ್ಕ ಅಥವಾ ಸಿಪ್ಪೆ ಸುಲಿದಂತ ಚರ್ಮದ ಸಮಸ್ಯೆಯನ್ನು ಹೆಚ್ಚಾಗಿ ಚಳಿಗಾಲದಲ್ಲಿ ಗಮನಿಸಬಹುದು. ಇದು ಮುಖ ಅಥವಾ ದೇಹದ ಇನ್ನಿತರ ಯಾವುದೇ ಭಾಗದಲ್ಲಿ ಬೇಕಿದ್ದರೂ ಕಾಣಿಸಿಕೊಳ್ಳಬಹುದು. ಇದಕ್ಕೆ ಕಾರಣವಾಗಿರುವ ಅಂಶದ ಆಧಾರದ ಮೇಲೆ ಒಣ ತ್ವಚೆಯು ನೋಡುವ ವಿವಿಧ ರೀತಿಯಲ್ಲಿ ಇರಬಹುದು . ಕೇವಲ ಸಿಪ್ಪೆ ಸುಲಿದಂತೆ ಇಲ್ಲವೇ ನೋವು, ಕೆಂಪುಕೆಂಪಾಗಿ ಚರ್ಮ ಒಣಗಿರುವುದು ಇತ್ಯಾದಿ. ಆದ್ರೆ ಇದು ಕೇವಲ ಚಳಿಗಾಲದಲ್ಲಿ ಮಾತ್ರ ಕಾಣಿಸಿಕೊಳ್ಳಬೇಕು ಅಂತೇನೂ ಇಲ್ಲ.. ಡ್ರೈ ಸ್ಕಿನ್ ಸಮಸ್ಯೆ ಬೇರೆಬೇರೆ ಕಾರಣಗಳಿಂದ ಯಾವ ಕಾಲದಲ್ಲಿ ಬೇಕಾದರೂ ಬಂದು ಬಿಡಬಹುದು.

  ನೀವು ಬಳಸುವ ಕಾಸ್ಮೆಟಿಕ್ಸ್ ಗಳು ಮತ್ತು ಸೋಪು ಕೂಡ ಕೆಲವೊಮ್ಮೆ ಡ್ರೈ ಸ್ಕಿನ್ ಗೆ ಕಾರಣವಾಗುತ್ತೆ. ವಯಸ್ಸಾದಂತೆ ಕೂಡ ಚರ್ಮ ಡ್ರೈ ಆಗುವ ಸಾಧ್ಯತೆಗಳಿರುತ್ತೆ. ಯಾಕೆಂದರೆ ಮೇದಸ್ಸಿನ ಗ್ರಂಥಿಗಳು ವಯಸ್ಸಾದಂತೆ ಜಡಗೊಳ್ಳುತ್ತವೆ. ವಾತಾವರಣದಲ್ಲಿನ ಬದಲಾವಣೆ, ಕೆಲವೊಂದು ಔಷಧಗಳ ಸೇವನೆ, ಮೇಕಪ್ ಮತ್ತು ಕಾಸ್ಮೆಟಿಕ್ಸ್ ಗಳು,ಚರ್ಮಕ್ಕೆ ಸಂಬಂಧಿಸಿದ ಕೆಲವು ಕಾಯಿಲೆಗಳು ಕೂಡ ಚರ್ಮದ ಶುಷ್ಕತೆಗೆ ಕಾರಣವಾಗಿರುವ ಸಾಧ್ಯತೆಗಳು ಇರುತ್ತೆ.

  ಕೆಲವರಿಗೆ ಇದು ಭಾರೀ ದೊಡ್ಡ ಮಟ್ಟದ ನೋವಿನ ಸಮಸ್ಯೆಯಾಗಿದ್ದರೆ ಇನ್ನೂ ಕೆಲವರಿಗೆ ಮನೆಯಲ್ಲೇ ಸ್ವಲ್ಪ ಆಸಕ್ತಿಯಿಂದ ಜೋಪಾನ ಮಾಡಿದರೆ ನಿವಾರಣೆಯಾಗುವಂತಿರುತ್ತೆ. ಒಂದು ವೇಳೆ ನಿಮ್ಮ ಸಮಸ್ಯೆ ದೊಡ್ಡ ಮಟ್ಟದಲ್ಲಿದ್ದರೆ ಕೂಡಲೇ ವೈದ್ಯರ ಸಲಹೆ ಪಡೆಯುವುದು ಒಳಿತು. ಇಲ್ಲದಿದ್ದರೆ ಕೆಲವು ನೈಸರ್ಗಿಕ ಸಲಹೆ ಮತ್ತು ಸೂಚನೆಗಳು ನಿಮ್ಮ ಸಮಸ್ಯೆಗೆ ಪರಿಹಾರವನ್ನು ಒದಗಿಸಿ ನಿಮ್ಮ ಒಣ ತ್ವಚೆಯನ್ನು ನಿವಾರಿಸಲಿದೆ. ಅನುಸರಿಸಬೇಕಾದ ಸಲಹೆಗಳು

  Dry Skin

  •ಶವರ್ ನ ಕೆಳಗೆ ತುಂಬಾ ಹೊತ್ತು ನಿಂತಿರುವುದು ಒಳ್ಳೆಯದಲ್ಲ

  ಅತಿಯಾಗಿ ಸ್ನಾನ ಮಾಡುವುದು ಅರ್ಥಾತ್ ನೀರಿಗೆ ಹೆಚ್ಚು ಹೊತ್ತು ನಿಮ್ಮ ಮೈಯನ್ನು ಒಡ್ಡುವುದರಿಂದ, ನಿಮ್ಮ ದೇಹದಲ್ಲಿರುವ ಎಣ್ಣೆಯ ಅಂಶ ಹೊರಟು ಹೋಗುತ್ತೆ. ಇದು ನಿಮ್ಮ ಚರ್ಮವನ್ನು ಒಣಗಿದಂತೆ ಇಲ್ಲವೇ ಸಿಪ್ಪೆ ಸುಲಿದಂತೆ ಮಾಡುವ ಸಾಧ್ಯತೆಗಳಿವೆ. ಹಾಗಾಗಿ ಹೆಚ್ಚು ಸಮಯ ಶವರ್ ನಲ್ಲಿ ಸ್ನಾನ ಮಾಡುತ್ತಾ ಇರುವುದು ಯಾರಿಗೂ ಹಿತವಲ್ಲ.ಯಾಕೆಂದರೆ ಚರ್ಮವು ಅದರ ಎಣ್ಣೆಯ ಅಂಶವನ್ನು ಕಳೆದುಕೊಂಡು ಬಿಡುತ್ತೆ. ಅತೀ ಹೆಚ್ಚು ಅಂದರೆ 10 ರಿಂದ 15 ನಿಮಿಷ ನಿಲ್ಲಬಹುದಷ್ಟೇ..

  •ಎಕ್ಸ್-ಫಾಯಿಲೇಷನ್ ಅಥವಾ ಮುಖದ ಸ್ವಚ್ಛತೆ

  ಚರ್ಮವನ್ನು ಹೈಡ್ರೇಟ್ ಆಗಿಡಲು ಮತ್ತು ಮಾಯ್ಚಿರೈಸ್ ಆಗಿಡಲು ಎಕ್ಸ್ ಫಾಯಿಲೇಷನ್ ಬಹಳ ಮುಖ್ಯ. ಸರಿಯಾದ ಎಕ್ಸ ಫಾಯಿಲೇಷನ್ ಚರ್ಮವು ಡ್ರೈ ಆಗುವುದನ್ನು ತಡೆಯುತ್ತೆ. ಸ್ಕ್ರಬ್ ಬಳಸಿ ಆದಷ್ಟು ಮುಖವನ್ನು ವಾರಕ್ಕೆ ಎರಡರಿಂದ ಮೂರು ಬಾರಿ ಸ್ವಚ್ಛಗೊಳಿಸುವುದನ್ನು ಮರೆಯಬೇಡಿ. ಇದು ನಿಮ್ಮ ಚರ್ಮದ ಡೆಡ್ ಸೆಲ್ ಗಳನ್ನು ರಿಮೂವ್ ಮಾಡಿ ಹೊಸ ಚರ್ಮ ಬರಲು ನೆರವಾಗುತ್ತೆ. ಮತ್ತು ಪದೇ ಪದೇ ಚರ್ಮ ಡ್ಯಾಮೇಜ್ ಆಗುವುದನ್ನು ತಪ್ಪಿಸುತ್ತೆ.

  •ಚೆನ್ನಾಗಿ ನೀರು ಕುಡಿಯಿರಿ

  ಚರ್ಮದ ಶುಷ್ಕತೆ ನಿವಾರಿಸಿಕೊಳ್ಳಲು ಅಥವಾ ಶುಷ್ಕವಾಗದಂತೆ ತಡೆಯಲು ಚರ್ಮವನ್ನು ಹೊರಗಿನಿಂದ ಮಾಯ್ಚಿರೈಸ್ ಆಗಿಟ್ಟುಕೊಂಡರೆ ಸಾಕಾಗುವುದಿಲ್ಲ. ನಿಮ್ಮ ದೇಹವನ್ನು ಹೈಡ್ರೇಟ್ ಆಗಿಟ್ಟುಕೊಳ್ಳುವ ಮುಖಾಂತರ ಡ್ರೈ ಸ್ಕಿನ್ ಆಗುವುದನ್ನು ತಪ್ಪಿಸಿಕೊಳ್ಳಬಹುದು. ಇದಾಗುವುದು ಕೇವಲ ನೀವು ಚೆನ್ನಾಗಿ ನೀರು ಕುಡಿದು ನಿಮ್ಮ ದೇಹವನ್ನು ಹೈಡ್ರೇಟ್ ಆಗಿಟ್ಟುಕೊಂಡಾಗ ಮಾತ್ರ. ಹಾಗಾಗಿ ನಿಮ್ಮ ದೇಹದ ತೂಕಕ್ಕೆ ಅನುಸಾರವಾಗಿ ನೀವು ಚೆನ್ನಾಗಿ ನೀರು ಕುಡಿಯುತ್ತಿರುವುದನ್ನು ಮರೆಯಬೇಡಿ. ಆ ಮೂಲಕ ನಿಮ್ಮ ಚರ್ಮದ ಆರೋಗ್ಯವೂ ಚೆನ್ನಾಗಿರಲಿದೆ.

  •ಹದವಾಗಿ ಬೆಚ್ಚಗಿರುವ ನೀರನ್ನೇ ಬಳಸಿ

  ಅತಿಯಾದ ಬಿಸಿನೀರಿನಿಂದ ಮುಖ ತೊಳೆಯುವುದನ್ನು ಮಾಡಬೇಡಿ. ಯಾಕಂದರೆ ಇದು ನಿಮ್ಮದೇಹದ ಚರ್ಮಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಎಣ್ಣೆಯ ಅಂಶವನ್ನು ಹೊರಹಾಕಿ ಬಿಡುತ್ತೆ. ಚರ್ಮಕ್ಕೆ ಸ್ವಲ್ಪ ಪ್ರಮಾಣದ ಎಣ್ಣೆ ಅಂಶದ ಅಗತ್ಯವೂ ಇರುತ್ತೆ. ಇದರ ಬದಲಾಗಿ ಹದವಾಗಿ ಬೆಚ್ಚಗಿರುವ ನೀರಿನಲ್ಲಿ ಮುಖ ತೊಳೆಯಿರಿ. ಇದು ಚರ್ಮದ ಮಾಯ್ಚಿರೈಸೇಷನ್ ಕಾಪಾಡುತ್ತೆ ಮತ್ತು ಶುಷ್ಕ ತ್ವಚೆಯಾಗದಂತೆ ಕಾಪಾಡುತ್ತೆ.

  •ಶುಷ್ಕ ತ್ವಚೆಯನ್ನು ಗೀರಿಕೊಳ್ಳಬೇಡಿ

  ನಿಮ್ಮ ಚರ್ಮದ ಡ್ರೈ ಭಾಗವನ್ನು ಗೀರಿಕೊಳ್ಳಬೇಡಿ. ಇದು ನಿಮ್ಮ ಚರ್ಮವನ್ನು ಮತ್ತಷ್ಟು ಹಾನಿಗೊಳಿಸಬಹುದು ಮತ್ತು ರಕ್ತ ಸೋರಿಕೆಯಾಗಿ ಚರ್ಮವು ಘಾಸಿಗೊಳಗಾಗುವ ಸಾಧ್ಯತೆ ಇರುತ್ತೆ. ಒಂದು ವೇಳೆ ನಿಮ್ಮ ಶುಷ್ಕ ತ್ವಚೆ ನಿಮಗೆ ತುರಿಕೆಯನ್ನುಂಟು ಮಾಡುತ್ತಿದ್ದರೆ ಐಸ್ ಕ್ಯೂಬ್ ನ್ನು ಅದರ ಮೇಲಿಟ್ಟು ಸ್ವಲ್ಪ ಆರಾಮಗೊಳಿಸಿ. ಇದು ನಿಮ್ಮ ಚರ್ಮದ ತುರಿಕೆ ಮತ್ತು ಚರ್ಮ ಕೆಂಪಗಾಗಿರುವುದನ್ನು ತಡೆಯಲು ಸಹಕಾರಿಯಾಗಿದೆ.

  •ನಿಮ್ಮ ಸನ್ ಸ್ಕ್ರೀನ್ ನ್ನು ಸರಿಯಾಗಿ ಆಯ್ಕೆ ಮಾಡಿಕೊಳ್ಳಿ

  ಶುಷ್ಕ ತ್ವಚೆಯವರು ಯಾವಾಗಲೂ ಇಟ್ಟುಕೊಂಡಿರಬೇಕಾದ ಪ್ರೊಡಕ್ಟ್ ಎಂದರೆ ಅದು ಸನ್ ಸ್ಕ್ರೀನ್. ಆದರೆ ನೀವು ನಿಮ್ಮ ಸನ್ ಸ್ಕ್ರೀನ್ ಆಯ್ಕೆ ಮಾಡಿಕೊಳ್ಳುವಾಗ ಎಚ್ಚರಿಕೆಯಿಂದಿರಿ. ಯಾವಾಗಲೂ ಅಲವೀರಾ ಇಲ್ಲವೇ ಆಲಿವ್ ಆಯಿಲ್ ಇರುವಂತ ಸನ್ ಸ್ಕ್ರೀನ್ ಗಳನ್ನೇ ಆಯ್ಕೆ ಮಾಡಿಕೊಳ್ಳಿ. ಇದು ನಿಮ್ಮ ಚರ್ಮವು ಹೈಡ್ರೇಟ್ಆ ಗಿರುವಂತೆ ನೋಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತದೆ.

  •ತೇವಗೊಳಿಸುವ ಸಾಧನವನ್ನು ಬಳಕೆ ಮಾಡಿ

  ಒಂದು ವೇಳೆ ಚಳಿಗಾಲವಾಗಿದ್ದರೆ ತೇವಗೊಳಿಸುವ ಸಾಧನವನ್ನು ಬಳಕೆ ಮಾಡಿ. ಚಳಿಗಾಲದಲ್ಲಿ ಹೆಚ್ಚಾಗಿ ಎಲ್ಲರಿಗೂ ಚರ್ಮ ಡ್ರೈ ಆದಂತ ಅನುಭವವಾಗುತ್ತೆ. ಹಾಗಾಗಿ ಹ್ಯೂಮಿಡಿಫೈಯರ್ ಅಥವ ತೇವಗೊಳಿಸುವ ಸಾಧನವನ್ನು ಮನೆಯಲ್ಲಿ ಬಳಕೆ ಮಾಡಿ, ಆ ಮೂಲಕ ನಿಮ್ಮ ಚರ್ಮವನ್ನು ಹೈಡ್ರೇಟ್ ಆಗಿಟ್ಟುಕೊಳ್ಳಿ. ಪ್ರತಿ ದಿನ ರಾತ್ರಿ ಮಲಗುವ ಮುನ್ನ ನೀವಿದನ್ನು ಮಾಡುವುದು ಚರ್ಮದ ಹಿತದೃಷ್ಟಿಯಿಂದ ಬಹಳ ಒಳ್ಳೆಯದು ಕೆಲವು ಮನೆಮದ್ದುಗಳು 

  •ಪೆಟ್ರೋಲಿಯಂ ಜೆಲ್ಲಿ

  ಡ್ರೈ ಸ್ಕಿನ್ ಅಥವಾ ಸಿಪ್ಪೆ ಸುಲಿಯುವಂತ ಚರ್ಮದ ಸಮಸ್ಯೆಗೆ ತುಂಬಾ ಸುಲಭ ಮತ್ತು ಸರಳ ವಿಧಾನವೆಂದರೆ ಅದು ಪೆಟ್ರೋಲಿಯಂ ಜೆಲ್ಲಿ ಬಳಕೆ ಮಾಡುವುದು. ನಿಮ್ಮ ಚರ್ಮದಲ್ಲಿ ಎಲ್ಲೆಲ್ಲಿ ಸಮಸ್ಯೆ ಇದಿಯೋ ಅಲ್ಲೆಲ್ಲ ಪೆಟ್ರೋಲಿಯಂ ಜೆಲ್ಲಿಯನ್ನು ಹಚ್ಚಿ. ನಿಧಾನವಾಗಿ ಮಸಾಜ್ ಮಾಡಿ ಮತ್ತು ಸ್ವಲ್ಪ ಸಮಯ ಹಾಗೆಯೇ ಬಿಡಿ. ಇದನ್ನು ನೀವು ಪ್ರತಿ ದಿನ ರಾತ್ರಿ ಮಲಗುವ ಮುನ್ನ ಮಾಡಿದರೆ ಒಳ್ಳೆಯದು ಮತ್ತು ಬೆಳಿಗ್ಗೆ ಎದ್ದ ಕೂಡಲೇ ಮಾಡುವುದು ಉತ್ತಮ ಆಯ್ಕೆ. ಪೆಟ್ರೋಲಿಯಂ ಜೆಲ್ಲಿ ನೈಸರ್ಗಿಕವಾಗಿ ದೊರೆಯುವ ಬೆಸ್ಟ್ ಮಾಯ್ಚರೈಸರ್ ಆಗಿದೆ.

  •ಬಾದಾಮಿ ಎಣ್ಣೆ

  ಬಾದಾಮಿ ಎಣ್ಣೆಯಲ್ಲಿ ಹಲವು ಸೌಂದರ್ಯ ವರ್ಧಕ ಲಾಭಗಳಿವೆ, ಅದು ಚರ್ಮಕ್ಕೂ ಇರಬಹುದು ಮತ್ತು ಕೂದಲಿಗೂ ಇರಬಹುದು. ಕೆಲವು ಹನಿ ಬಾದಾಮಿ ಎಣ್ಣೆಯನ್ನು ನಿಮ್ಮ ಶುಷ್ಕ ತ್ವಚೆಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. ಇದನ್ನು ನೀವು ಅಲವೀರಾ ಜೊತೆ ಬಳಕೆ ಮಾಡಿದರೆ ಇನ್ನೂ ಉತ್ತಮವಾದ ಮತ್ತು ವೇಗವಾದ ಫಲಿತಾಂಶವನ್ನುಪಡೆಯ ಬಹುದು. ಒಂದು ಸ್ಪೂನ್ ಅಲವೀರಾ ಮತ್ತು ಒಂದು ಸ್ಪೂನ್ ಬಾದಾಮಿ ಎಣ್ಣೆ ಮಿಶ್ರಣ ಮಾಡಿ ನಿಮ್ಮ ತ್ವಚೆಗೆ ಅಪ್ಲೈ ಮಾಡಿ ನೋಡಿ.

  •ಐಸ್ ಹಚ್ಚಿಕೊಳ್ಳಿ

  ಒಂದು ವೇಳೆ ನಿಮ್ಮ ಚರ್ಮದಲ್ಲಿ ಉರಿತವಿದ್ದು ಅದು ಕೆಂಪು ಬಣ್ಣಕ್ಕೆ ತಿರುಗಿ ನಿಮಗೆ ತುರಿಕೆ ಕಾಣಿಸಿಕೊಂಡಿದ್ದರೆ ಅದನ್ನು ಕೂಡಲೇ ನಿಗ್ರಹಿಸಲು ಐಸ್ ಕ್ಯೂಬ್ ಬಳಸಿ. ಹೌದು ನಿಮಗೆ ತೊಂದರೆ ನೀಡುತ್ತಿರುವ ಚರ್ಮದ ಭಾಗಕ್ಕೆ ಐಸ್ ಕ್ಯೂಬ್ ಹಚ್ಚಿ ಮಸಾಜ್ ಮಾಡಿ.ಒಂದು ಟವೆಲ್ ನಲ್ಲಿ ಇಲ್ಲವೇ ಕಾಟನ್ ಬಟ್ಟೆಯಲ್ಲಿ ಐಸ್ ನ್ನು ಸುತ್ತಿಕೊಂಡು ಅದನ್ನು ಚರ್ಮದ ಮೇಲೆ ಇಟ್ಟುತೆಗೆದು ಮಾಡಿ. ಆದರೆ ನೇರವಾಗಿ ಐಸ್ ಕ್ಯೂಬ್ ಗಳನ್ನು ಚರ್ಮದ ಮೇಲೆ ಇಡಬೇಡಿ. ಯಾಕೆಂದರೆ ಇದು ಇನ್ನೂ ಹೆಚ್ಚಿನ ಸಮಸ್ಯೆ ತಂದೊಡ್ಡುವ ಸಾಧ್ಯತೆಗಳಿರುತ್ತೆ. ಇದನ್ನು ನೀವು ದಿನಕ್ಕೆ ಎರಡು ಬಾರಿ ಮಾಡಿ ಪ್ರಯತ್ನಿಸಿ ನೋಡಬಹುದು.

  •ಕೊಬ್ಬರಿ ಎಣ್ಣೆ

  ಕೊಬ್ಬರಿ ಎಣ್ಣೆ ಹೆಚ್ಚು ಫ್ಯಾಟಿ ಆಸಿಡ್ ಗಳನ್ನು ಹೊಂದಿದೆ. ಇದೊಂದು ಅತ್ಯುತ್ತಮ ಮಾಯ್ಚಿರೈಸರ್ ಆಗಿದ್ದು, ಬೇಗನೆ ಹೀರಿಹೋಗುವ ಸಾಮರ್ಥ್ಯ ಹೊಂದಿದೆ. ಇದು ಸ್ಕಿನ್ ಟೋನಿಗೆ ರಿಲ್ಯಾಕ್ಸ್ ನೀಡಿ, ಚರ್ಮ ಕೆಂಪಗಾಗಿದ್ದರೆ, ಉರಿ ಇದ್ದರೆ ಅದನ್ನುಕೂಡಲೇ ನಿವಾರಿಸುತ್ತೆ. ಇದು ಚರ್ಮವನ್ನು ಮೃದುಗೊಳಿಸುತ್ತೆ ಮತ್ತು ಹೊಳಪು ಬರುವಂತೆ ಮಾಡುತ್ತೆ. ಪ್ರತಿ ದಿನ ನಿಮ್ಮ ಚರ್ಮಕ್ಕೆ ಸ್ವಲ್ಪ ಕೊಬ್ಬರಿ ಎಣ್ಣೆ ಹಚ್ಚಿ , ಅದು ಮಾಡುವ ಮ್ಯಾಜಿಕ್ ನ್ನು ನೀವೇ ಗಮನಿಸಿ.

  English summary

  Do You Have A Dry Skin? Here Are Some Remedies To Follow

  Dry or flaky skin is normally seen mostly during the winter season. It can appear either on the face or different parts of the body. Depending on the cause, dry skin can seem to be flaky, scaly, peeling or even sore. But it is not necessary that it can appear only during the winters. Dry skin can also be the result of many other factors. For some, this can be chronic and for some, this can be easily treated if you put in some effort in taking care of your skin. If it is chronic, it's better to seek medical help, otherwise some natural home remedies and tips will help you in treating flaky or dry skin easily.
  Story first published: Sunday, June 3, 2018, 10:01 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more