For Quick Alerts
ALLOW NOTIFICATIONS  
For Daily Alerts

ಮುಖದ ಸೌಂದರ್ಯ ಹೆಚ್ಚಿಸಲು ಅರಿಶಿನದ ಫೇಸ್ ಮಾಸ್ಕ್

By Hemanth
|

ಬಾಲಿವುಡ್ ನಟನಟಿಯರನ್ನು ಬಳಸಿಕೊಂಡು ಕೆಲವು ಕಂಪೆನಿಗಳು ಮುಖದ ಕಲೆ ನಿವಾರಣೆ ಮಾಡುವಂತಹ ಕ್ರೀಮ್ ಗಳ ಜಾಹೀರಾತನ್ನು ಪ್ರಸಾರ ಮಾಡುವುದನ್ನು ನಾವು ನೋಡಿರುತ್ತೇವೆ. ಇದರಿಂದ ಮುಖದ ಮೇಲೆ ಕಲೆಗಳು ಎಷ್ಟರ ಮಟ್ಟಿಗೆ ಹೋಗುತ್ತದೆಯೋ ಗೊತ್ತಿಲ್ಲ. ಆದರೆ ಆ ಕ್ರೀಮ್ ಗೆ ಬಳಸಿರುವಂತಹ ಕೆಲವೊಂದು ರಾಸಾಯನಿಕಗಳು ನಿಮ್ಮ ತ್ವಚೆ ಮೇಲೆ ನಿಧಾನವಾಗಿ ಅಡ್ಡಪರಿಣಾಮಗಳನ್ನು ಬೀರಲು ಆರಂಭಿಸುವುದು. ಇದರಿಂದ ಕೆಲವು ತಿಂಗಳುಗಳ ಬಳಿಕ ಮತ್ತೆ ಮುಖದ ಮೇಲೆ ಮೊಡವೆ, ಕಲೆಗಳು ಮೂಡುವುದು. ಹೊರಗಿನ ಧೂಳು, ಕಲ್ಮಶ ಇವುಗಳು ಮುಖದ ಮೇಲೆ ಬಂದು ನಿಂತು ಚರ್ಮದ ರಂಧ್ರಗಳನ್ನು ತುಂಬಿ, ಮೊಡವೆಗಳು, ಬೊಕ್ಕೆಗಳು ಇತ್ಯಾದಿ ಮೂಡಿ, ಬಳಿಕ ಅದು ಕಲೆ ಉಂಟು ಮಾಡುವುದು.

ಇದರ ನಿವಾರಣೆ ಮಾಡಿಕೊಳ್ಳಲು ನೈಸರ್ಗಿಕವಾಗಿ ಸಿಗುವಂತಹ ಸಾಮಗ್ರಿಗಳನ್ನು ಬಳಸಿಕೊಂಡು ಮನೆಮದ್ದನ್ನು ತಯಾರಿಸಿಕೊಂಡರೆ ಅದರಿಂದ ಯಾವುದೇ ಅಡ್ಡಪರಿಣಾಮಗಳು ಇರಲ್ಲ ಮತ್ತು ಇದು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುವುದು. ನಮ್ಮ ಅಡುಗೆಮನೆಯಲ್ಲಿ ಯಾವಾಗಲೂ ಬಳಸುವಂತಹ ಅರಿಶಿನ ಕೂಡ ಇದರಲ್ಲಿ ಇಂದಾಗಿದೆ. ಅರಿಶಿನವನ್ನು ಶತಮಾನಗಳಿಂದಲೂ ವಿವಿಧ ರೀತಿಯ ಸಮಸ್ಯೆಗಳಿಗೆ ಬಳಸಿಕೊಂಡು ಬರಲಾಗುತ್ತಾ ಇದೆ. ಅರಿಶಿನಲ್ಲಿ ಬ್ಯಾಕ್ಟೀರಿಯಾ ವಿರೋಧಿ, ನಂಜುನಿರೋಧಕ, ಉರಿಯೂತ ಶಮನಕಾರಿ ಗುಣಗಳು ಇದ್ದು, ಮುಖದ ಮೇಲಿನ ಕಲೆಗಳು, ಮೊಡವೆಗಳು ಇತ್ಯಾದಿಗಳನ್ನು ನಿವಾರಣೆ ಮಾಡುವುದು ಮತ್ತು ನೈಸರ್ಗಿಕವಾಗಿ ತ್ವಚೆಯನ್ನು ಬಿಳಿಯಾಗಿಸುವುದು. ಅನಾದಿ ಕಾಲದಿಂದಲೂ ಭಾರತದಲ್ಲಿ ಸೌಂದರ್ಯದ ವೃದ್ಧಿಗಾಗಿ ಹೊಳೆಯುವ ತ್ವಚೆಗಾಗಿ ಅರಿಶಿನವನ್ನು ಬಳಸುತ್ತಿದ್ದಾರೆ.

turmeric face packs to get fair at home

ಮುಖದ ಮೊಡವೆ, ಕಪ್ಪು ಕಲೆಗಳನ್ನು ಹೋಗಲಾಡಿಸಲು, ಸೂರ್ಯನ ಶಾಖದ ಹಾನಿಯಿಂದ ತಪ್ಪಿಸಲು, ವಯಸ್ಸಾಗುವಿಕೆಯನ್ನು ತಡೆಯಲು ಹೀಗೆ ಹತ್ತು ಹಲವು ಪ್ರಯೋಜನಗಳ ಸರಮಾಲೆಯನ್ನೇ ಅರಿಶಿನ ನಮಗೆ ಒದಗಿಸುತ್ತದೆ. ಬನ್ನಿ ಕಲೆರಹಿತ ಚರ್ಮಕ್ಕೆ ಅರಿಶಿನ ಬಳಸುವುದು ಹೇಗೆ ಎಂದು ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಇದನ್ನು ಓದುತ್ತಾ ಸಾಗಿ...

ಸೂಚನೆ: ಕೆಲವರಿಗೆ ಅರಿಶಿನದ ಅಲರ್ಜಿ ಇರಬಹುದು. ಇದರಿಂದ ಮೊದಲು ಇದನ್ನು ದೇಹದ ಬೇರೆ ಭಾಗಕ್ಕೆ ಸ್ವಲ್ಪ ಹಚ್ಚಿಕೊಂಡು ಪರೀಕ್ಷಿಸಿ.

ಬೇಕಾಗುವ ಸಾಮಗ್ರಿಗಳು

  • 3 ಚಮಚ ಅರಿಶಿನ ಹುಡಿ
  • 1 ಚಮಚ ಮೊಸರ
  • 1 ಚಮಚ ಜೇನುತುಪ್ಪ
  • 1 ಚಮಚ ತೆಂಗಿನೆಣ್ಣೆ

ತಯಾರಿಸುವ ವಿಧಾನ

1. ತಾಜಾ, ಏನೂ ಬೆರೆಸದ ಮೊಸರನ್ನು ಒಂದು ಸಣ್ಣ ಪಾತ್ರೆಗೆ ಹಾಕಿ.
2. ಇದಕ್ಕೆ ಜೇನುತುಪ್ಪ ಹಾಕಿ.
3. ಪಾತ್ರೆಗೆ ಸ್ವಲ್ಪ ತೆಂಗಿನೆಣ್ಣೆ ಹಾಕಿ. ತೆಂಗಿನೆಣ್ಣೆ ಗಟ್ಟಿಯಾಗಿದ್ದರೆ ಕರಿಸಿಕೊಳ್ಳಿ.
4. ಅಂತಿಮವಾಗಿ ಇದಕ್ಕೆ ಅರಿಶಿನ ಹಾಕಿ.
5. ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿ ಗುಳ್ಳೆಗಳು ಬರದಂತೆ ಮಾಡಿ.
6. ಮಿಶ್ರಣ ಮಾಡಿಕೊಂಡು ನಯವಾದ ಪೇಸ್ಟ್ ಮಾಡಿ.
7. ಪೇಸ್ಟ್ ದಪ್ಪಗಿದ್ದರೆ ಮೊಸರು ಹೆಚ್ಚು ಬೆರೆಸಿ.

ಹಚ್ಚಿಕೊಳ್ಳುವ ವಿಧಾನ

1. ಮೊದಲಿಗೆ ಮುಖ ಹಾಗೂ ಕುತ್ತಿಗೆಯನ್ನು ಸರಿಯಾಗಿ ತೊಳೆಯಿರಿ.
2. ಒಂದು ಬ್ರಷ್ ತೆಗೆದುಕೊಂಡು ಈ ಪೇಸ್ಟ್ ನ್ನು ಮುಖ ಹಾಗೂ ಕುತ್ತಿಗೆಗೆ ಸರಿಯಾಗಿ ಹಚ್ಚಿಕೊಳ್ಳಿ. ಕೈಯಿಂದ ಹಚ್ಚಿಕೊಂಡು ಹಳದಿ ಬಣ್ಣ ಕೈಗೆ ಅಂಟಿಕೊಳ್ಳುವುದು.
3. 15-20 ನಿಮಿಷ ಕಾಲ ಇದನ್ನು ಹಾಗೆ ಒಣಗಲು ಬಿಡಿ.
4. ವೃತ್ತಾಕಾರದಲ್ಲಿ ಮಸಾಜ್ ಮಾಡಿಕೊಂಡು ಬಳಿಕ ನಿಧಾನವಾಗಿ ತೆಗೆಯಿರಿ.
5. ಟವೆಲ್ ನಿಂದ ಒರೆಸಿಕೊಂಡು ಸ್ವಲ್ಪ ಮೊಶ್ಚಿರೈಸರ್ ಹಚ್ಚಿಕೊಳ್ಳಿ.

ಅರಿಶಿನದ ಲಾಭಗಳು

ನಮ್ಮ ಅಜ್ಜಿ, ಮುತ್ತಜ್ಜಿಯರು ಕೂಡ ಅರಶಿನವನ್ನು ಚರ್ಮದ ಆರೈಕೆಯಲ್ಲಿ ಬಳಸುತ್ತಿದ್ದರು. ಅರಿಶಿನದಲ್ಲಿರುವಂತಹ ಆ್ಯಂಟಿಆಕ್ಸಿಡೆಂಟ್ ಮೊಡವೆ, ಕಪ್ಪು ವೃತ್ತಗಳು ಮತ್ತು ನೆರಿಗೆಗಳನ್ನು ನಿವಾರಣೆ ಮಾಡುವುದು. ಇದರಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಮತ್ತು ನಂಜುನಿರೋಧಕ ಗುಣಗಳು ಚರ್ಮದಲ್ಲಿನ ಉರಿಯೂತ ಕಡಿಮೆ ಮಾಡುವುದು. ಈ ಕಾರಣದಿಂದಾಗಿ ಅರಶಿನವನ್ನು ತ್ವಚೆಯ ವಿವಿಧ ರೀತಿಯ ಆರೈಕೆಯಲ್ಲಿ ಬಳಸಲಾಗುತ್ತದೆ.

ಜೇನುತುಪ್ಪದ ಲಾಭಗಳು

ಜೇನುತುಪ್ಪದಲ್ಲಿ ಕೂಡ ಅರಿಶಿನದಂತೆ ಉರಿಯೂತ ಶಮನಕಾರಿ ಗುಣಗಳು ಇದೆ. ಚರ್ಮದ ಉರಿಯೂತ ಮತ್ತು ಕೆಂಪಾಗುವುದನ್ನು ಇದು ನಿವಾರಿಸುವುದು. ಮೊಡವೆ ಹಾಗೂ ಬೊಕ್ಕೆಗಳ ಕಲೆಗಳ ನಿವಾರಣೆ ಮಾಡಿ ಸುಂದರ ಹಾಗೂ ನಯವಾದ ಚರ್ಮ ಪಡೆಯಲು ನೆರವಾಗುವುದು. ಜೇನುತುಪ್ಪವು ನೈಸರ್ಗಿಕ ಮೊಶ್ಚಿರೈಸರ್ ಆಗಿರುವ ಕಾರಣದಿಂದ ಚರ್ಮಕ್ಕೆ ತೇವಾಂಶ ನೀಡುವುದು.

ಮೊಸರಿನ ಲಾಭಗಳು

ಮೊಸರಿನಲ್ಲಿ ಇರುವಂತಹ ಲ್ಯಾಕ್ಟಿಕ್ ಆಮ್ಲವು ಸತ್ತ ಚರ್ಮದ ಕೋಶಗಳನ್ನು ತೆಗೆಯುವುದು ಮತ್ತು ಚರ್ಮವನ್ನು ಬಿಳಿಯಾಗಿಸುವುದು. ಇದು ಚರ್ಮದಲ್ಲಿನ ಕಪ್ಪು ಕಲೆಗಳು ಮತ್ತು ಬೊಕ್ಕೆಗಳ ನಿವಾರಿಸುವುದು. ಚರ್ಮದಲ್ಲಿ ಪಿಎಚ್ ಮಟ್ಟ ಕಾಪಾಡಲು ಇದು ನೆರವಾಗುವುದು.

ತೆಂಗಿನೆಣ್ಣೆ ಲಾಭಗಳು

ತೆಂಗಿನೆಣ್ಣೆಯಲ್ಲಿ ಕೂಡ ಆ್ಯಂಟಿಆಕ್ಸಿಡೆಂಟ್ ಗಳು ಇವೆ. ಚರ್ಮವನ್ನು ಬಿಗಿಗೊಳಿಸಿ, ನೆರಿಗೆ ಬರದಂತೆ ತಡೆದು, ಚರ್ಮವನ್ನು ಯೌವನಯುತವಾಗಿ ಮಾಡುವುದು. ಇದು ಚರ್ಮಕ್ಕೆ ತೇವಾಂಶ ನೀಡಿ, ಮೊಶ್ಚಿರೈಸ್ ಮಾಡುವುದು.

ತ್ವಚೆಯ ಆರೋಗ್ಯಕ್ಕೆ ಅರಿಶಿನದ ಇನ್ನಷ್ಟು ಪ್ರಯೋಜನಗಳು ಇಲ್ಲಿದೆ ನೋಡಿ

ಕಡ್ಲೆ ಹಿಟ್ಟು ಮತ್ತು ಅರಿಶಿನ

ಒಂದು ಚಮಚ ಕಡ್ಲೆ ಹಿಟ್ಟು, 1 ಚಮಚ ಮೊಸರು, ಎರಡು ಚಿಟಿಕೆ ಅರಿಶಿನ ಪುಡಿ. ಈ ಮೂರನ್ನು ಚೆನ್ನಾಗಿ ಬೆರೆಸಿ ಪೇಸ್ಟ್ ತಯಾರಿಸಬೇಕು. ಅಗತ್ಯ ಬಿದ್ದರೆ ಸ್ವಲ್ಪ ನೀರನ್ನು ಸೇರಿಸಬಹುದು. ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಂಡು ಒಣಗಲು ಬಿಡಬೇಕು. ನಂತರ ಸ್ವಚ್ಛಗೊಳಿಸಿ. ತ್ವಚೆಯ ಮೇಲೆ ಎಣ್ಣೆ ಉಗುಳುವುದನ್ನು ಕಡ್ಲೆ ಹಿಟ್ಟು ನಿವಾರಿಸಿದರೆ, ಮೊಸರು ತ್ವಚೆಯ ಮೇಲೆ ತೇವಾಂಶ ಇರುವಂತೆ ಮಾಡುತ್ತದೆ. ಅರಿಶಿನ ಬ್ಯಾಕ್ಟೀರಿಯಾಗಳನ್ನು ನಿಯಂತ್ರಿಸುತ್ತದೆ.

ಒಂದು ವೇಳೆ ಮುಖದಲ್ಲಿ ಮೊಡವೆಯ ಸಮಸ್ಯೆಯಿದ್ದರೆ, ಕಡ್ಲೇ ಹಿಟ್ಟು, ಮೊಸರು, ಅರಿಶಿನವನ್ನು ಸಮಪ್ರಮಾಣದಲ್ಲಿ ಸೇರಿಸಿ, ಮಿಶ್ರಗೊಳಿಸಿ. ಈ ಮಿಶ್ರಣವನ್ನು ಮುಖಕ್ಕೆ ದಪ್ಪವಾಗಿ ಅನ್ವಯಿಸಿ, ಮಸಾಜ್ ಮಾಡಿ. ನಂತರ 20 ನಿಮಿಷಗಳ ಕಾಲ ಮುಖದ ಮೇಲೆ ಆರಲು ಬಿಡಿ. ಬಳಿಕ ಇನ್ನೊಮ್ಮೆ ಮೃದುವಾಗಿ ಮಸಾಜ್ ಮಾಡಿ ತಣ್ಣೀರಿನಿಂದ ಸ್ವಚ್ಛಗೊಳಿಸಿ. - ನೀವು ಬಿಳುಪಾದ ಚರ್ಮವನ್ನು ಹೊಂದಿದ್ದರೆ ಸ್ವಲ್ಪ ಹಳದಿ ಬಣ್ಣಕ್ಕೆ ತಿರುಗಿರುವಂತೆ ಕಾಣುವುದು. - ಗಣನೀಯವಾಗಿ ಇದನ್ನು ಬಳಸುವುದರಿಂದ ಉತ್ತಮ ಫಲಿತಾಂಶವನ್ನು ಪಡೆಯಬಹುದು.

English summary

DIY Turmeric Face Pack For Spotless Skin

All of us face skin-related issues ranging from like pimples, scars, acne to blemishes and dark spots.Though these issues are very common, it may end up bothering you.Though there are a wide array of skin care products specially designed to get rid of these, the chemicals used in them might damage your skin even more. Not to mention, their high prices. So it is better to use natural ingredients right from your kitchen rather than using these products that might be harmful in the long run. One such ingredient that can be used is turmeric. Turmeric has been used since ages by our ancestors for various skin related issues.
X
Desktop Bottom Promotion