For Quick Alerts
ALLOW NOTIFICATIONS  
For Daily Alerts

ಬ್ಯೂಟಿ ಟಿಪ್ಸ್: - ಮನೆಯಲ್ಲೇ ಮಾಡಿಕೊಳ್ಳಿ ಹಣ್ಣಿನ ಫೇಶಿಯಲ್!

By Hemanth
|

ಮುಖದ ಸೌಂದರ್ಯಕ್ಕಾಗಿ ಪ್ರತಿಯೊಬ್ಬರು ಬ್ಯೂಟಿ ಪಾರ್ಲರ್ ಗೆ ಹೋಗಿ ಫೇಶಿಯಲ್ ಮಾಡಿಕೊಳ್ಳುವರು. ಹೀಗೆ ಫೇಶಿಯಲ್ ಮಾಡಿಕೊಳ್ಳಲು ಹೆಚ್ಚಿನ ಸಮಯ ಹಾಗೂ ಹಣ ವ್ಯಯಿಸಬೇಕು. ಇದಕ್ಕಾಗಿ ಮನೆಯಲ್ಲೇ ಕೆಲವೊಂದು ಫೇಶಿಯಲ್ ಮಾಡಿಕೊಂಡರೆ ಅದರಿಂದ ಯಾವುದೇ ಅಡ್ಡಪರಿಣಾಮಗಳು ಕೂಡ ಇರಲ್ಲ. ತ್ವಚೆಯು ಆರೋಗ್ಯವಾಗಿರಲು ನೀವು ತಿಂಗಳಿಗೆ ಒಂದು ಸಲವಾದರೂ ಫೇಶಿಯಲ್ ಮಾಡಿಕೊಳ್ಳಬೇಕು. ಯಾಕೆಂದರೆ ಮುಖದ ಮೇಲಿನ ಚರ್ಮವು ಕಲ್ಮಶ, ರಾಸಾಯನಿಕ ಇತ್ಯಾದಿಗಳ ದಾಳಿಗೆ ಒಳಗಾಗುವುದು.
ಇದರಿಂದ ನಿಯಮಿತವಾಗಿ ಚರ್ಮವನ್ನು ಪುನಶ್ಚೇತಗೊಳಿಸುತ್ತಿರಬೇಕು.

ನಿಮಗೆ ಸೆಲೂನ್, ಬ್ಯೂಟಿಪಾರ್ಲರ್ ಗೆ ಹೋಗಲು ಮನಸ್ಸು ಇಲ್ಲದೆ ಇದ್ದರೆ ಆಗ ಣೀವು ರೆಡಿಮೇಡ್ ಫೇಶಿಯಲ್ ಬಳಸಬಹುದು ಮತ್ತು ಅದನ್ನು ಪ್ರಯತ್ನಿಸಿ ನೋಡಬಹುದು. ಆದರೆ ನೈಸರ್ಗಿಕವಾಗಿ ತಯಾರಿಸುವಂತಹ ಫೇಶಿಯಲ್ ತುಂಬಾ ಪರಿಣಾಮಕಾರಿ. ಇಂದು ಈ ಲೇಖನದಲ್ಲಿ ಹಣ್ಣುಗಳನ್ನು ಬಳಸಿಕೊಂಡು ತಯಾರಿಸುವ ಫೇಶಿಯಲ್ ಬಗ್ಗೆ ಮತ್ತು ಹಂತಹಂತವಾಗಿ ಇದನ್ನು ಬಳಸುವ ರೀತಿಯನ್ನು ನಿಮಗೆ ತಿಳಿಸಿಕೊಡಲಿದ್ದೇವೆ. ಇದನ್ನು ನೀವು ಪ್ರಯತ್ನಿಸಿ ನೋಡಿ...

homemade fruit facial

ಮೊದಲ ಹಂತ

ಮುಖವನ್ನು ಸ್ವಚ್ಛಮಾಡಿಕೊಳ್ಳುವುದು ಫೇಶಿಯಲ್ ನ ಮೊದಲ ಹಂತವಾಗಿದೆ. ಮುಖವನ್ನು ಸ್ವಚ್ಛಗೊಳಿಸುವುದರಿಂದ ಚರ್ಮದ ರಂಧ್ರದಲ್ಲಿರುವ ಅತಿಯಾದ ಕೊಳೆ ಮತ್ತು ಧೂಳು ದೂರವಾಗುವುದು ಮತ್ತು ಫೇಶಿಯಲ್ ಗೆ ಮುಖವನ್ನು ಸಜ್ಜುಗೊಳಿಸುವುದು. ಹಸಿ ಹಾಲನ್ನು ಬಳಸಿಕೊಂಡು ಮುಖ ಶುಚಿಗೊಳಿಸಿ. ಹಾಲು ನೈಸರ್ಗಿಕ ಕ್ಲೆನ್ಸರ್ ಆಗಿದೆ ಮತ್ತು ಇದು ಚರ್ಮಕ್ಕೆ ತಕ್ಷಣ ಕಾಂತಿ ನೀಡುವುದು.

ಬೇಕಾಗುವ ಸಾಮಗ್ರಿಗಳು

  • 1 ಚಮಚ ಹಸಿ ಹಾಲು
  • ಹತ್ತಿ ಉಂಡೆ

ವಿಧಾನ
ಹತ್ತಿ ಉಂಡೆಯನ್ನು ಹಸಿ ಹಾಲಿನಲ್ಲಿ ಅದ್ದಿಕೊಂಡು ಅದನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ. ಇನ್ನೊಂದು ಹತ್ತಿ ಉಂಡೆ ಬಳಸಿಕೊಂಡು ಇದನ್ನು ಒರೆಸಿಕೊಳ್ಳಿ. ಇದರ ಬಳಿಕ ಉಗುರುಬೆಚ್ಚಗಿನ ನೀರು ಬಳಸಿಕೊಂಡು ಮುಖ ತೊಳೆಯಿರಿ. ಈಗ ನಿಮ್ಮ ಚರ್ಮವು ಮುಂದಿನ ಹಂತಕ್ಕೆ ತಯಾರಾಗಿದೆ.

ಎರಡನೇ ಹಂತ

ಸತ್ತ ಚರ್ಮವನ್ನು ಕಿತ್ತು ಹಾಕುವುದು ಫೇಶಿಯಲ್ ಗಿಂತ ಮೊದಲು ನೀವು ಮಾಡಬೇಕಾದ ಮುಖ್ಯ ಕೆಲಸ. ಚರ್ಮವನ್ನು ನಿಸ್ತೇಜ ಹಾಗೂ ಅನಾರೋಗ್ಯಗೊಳಿಸುವ ಸತ್ತ ಚರ್ಮದ ಕೋಶಗಳನ್ನು ತೆಗೆಯುವುದು ಅತೀ ಅಗತ್ಯ. ಸತ್ತ ಚರ್ಮದ ಕೋಶಗಳನ್ನು ತೆಗೆಯುವುದರೊಂದಿಗೆ ಚರ್ಮವು ನಯ ಹಾಗೂ ಕಾಂತಿಯುತವಾಗುವುದು. ನೈಸರ್ಗಿಕವಾಗಿ ಇದನ್ನು ಮಾಡುವ ವಿಧಾನ.

  • 1 ಚಮಚ ಓಟ್ ಮೀಲ್
  • 1 ಚಮಚ ಲಿಂಬೆ ಸಿಪ್ಪೆ ಹುಡಿ
  • ಕೆಲವು ಹನಿ ರೋಸ್ ವಾಟರ್

ವಿಧಾನ
ಮೊದಲು ಓಟ್ ಮೀಲ್ ನ್ನು ನುಣ್ಣಗೆ ಹುಡಿ ಮಾಡಿಕೊಳ್ಳಿ. ಇದಕ್ಕೆ ಒಂದು ಚಮಚ ಲಿಂಬೆ ಸಿಪ್ಪೆ ಹುಡಿ ಮತ್ತು ರೋಸ್ ವಾರ್ ಹಾಕಿ. ಎಲ್ಲವನ್ನು ಸರಿಯಾಗಿ ಕಲಸಿಕೊಳ್ಳಿ. ಇದನ್ನು ವೃತ್ತಾಕಾರದಲ್ಲಿ ಮುಖದ ಮೇಲೆ ಸ್ಕ್ರಬ್ ಮಾಡಿ. 2-3 ನಿಮಿಷ ಹೀಗೆ ಮಾಡಿ ಮತ್ತು ಇದರ ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ ಮತ್ತು ಒರೆಸಿಕೊಳ್ಳಿ.

ಮೂರನೇ ಹಂತ

ಬ್ಲೀಚಿಂಗ್ ನಿಂದ ಚರ್ಮದ ಬಣ್ಣವು ಬಿಳಿಯಾಗುವುದು. ಆದರೆ ಇದು ಅನಿವಾರ್ಯವಲ್ಲ. ಜೇನುತುಪ್ಪ ಮತ್ತು ಲಿಂಬೆ ಬಳಸಿಕೊಂಡು ಇದನ್ನು ಮಾಡಬಹುದು. ಇದು ನೈಸರ್ಗಿಕವಾಗಿ ಚರ್ಮವನ್ನು ಬಿಳಿಯಾಗಿಸುವುದು.

ಬೇಕಾಗುವ ಸಾಮಗ್ರಿಗಳು

  • 1 ಚಮಚ ಜೇನುತುಪ್ಪ
  • ಕೆಲವು ಹನಿ ಲಿಂಬೆರಸ

ವಿಧಾನ
ಜೇನುತುಪ್ಪ ಮತ್ತು ಲಿಂಬೆಯನ್ನು ಪಿಂಗಾಣಿಗೆ ಹಾಕಿ ಮಿಶ್ರಣ ಮಾಡಿ. ಇದನ್ನು ನಿಮ್ಮ ಮುಖದ ಮೇಲೆ ಹಚ್ಚಿಕೊಂಡು ಸುಮಾರು 10 ನಿಮಿಷ ಕಾಲ ಹಾಗೆ ಬಿಡಿ ಮತ್ತು ಬಳಿಕ ಸಾಮಾನ್ಯ ನೀರಿನಿಂದ ತೊಳೆದು ಒರೆಸಿಕೊಳ್ಳಿ.

ನಾಲ್ಕನೇ ಹಂತ

ಫೇಶಿಯಲ್ ನಲ್ಲಿ ಸ್ಟೀಮಿಂಗ್ ಅತೀ ಪ್ರಮುಖ ಹಂತ. ಹಿಂದಿನ ಮೂರು ಹಂತದಲ್ಲಿ ಚರ್ಮದಲ್ಲಿರುವ ಕೊಳೆಯನ್ನು ತೆಗೆಯಲು ಸಾಧ್ಯವಾಗದೆ ಇದ್ದರೆ ಸ್ಟೀಮಿಂಗ್ ಇದನ್ನು ತೆಗೆಯುವುದು ಮತ್ತು ಚರ್ಮದ ರಂಧ್ರಗಳು ತೆರೆಯಲು ನೆರವಾಗುವುದು. ಸ್ವಲ್ಪ ನೀರನ್ನು ಒಂದು ಪಾತ್ರೆಯಲ್ಲಿ ಬಿಸಿ ಮಾಡಿಕೊಳ್ಳಿ. ಅದರಿಂದ ಬರುವ ಆವಿಗೆ ಮುಖ ಒಡ್ಡಿಕೊಳ್ಳಿ ಮತ್ತು ತಲೆಗೆ ಟವೆಲ್ ಹಾಕಿ. ಇದನ್ನು ಐದು ನಿಮಿಷ ಕಾಲ ಮಾಡಿ. ಹೀಗೆ ಫೇಶಿಯಲ್ ಹಾಕಲು ಮುಖ ತಯಾರಾಗಿದೆ.

ಐದನೇ ಹಂತ

ಹಣ್ಣಿನ ಫೇಶಿಯಲ್ ಪ್ರಮುಖ ಭಾಗವಾಗಿದೆ.ಇದನ್ನು ಹೇಗೆ ತಯಾರಿಸುವುದು ಮತ್ತು ಬಳಸುವುದು ಹೇಗೆ ಎಂದು ತಿಳಿಯಿರಿ.

ಜೇನುತುಪ್ಪ ಮತ್ತು ಪಪ್ಪಾಯಿ ಫೇಸ್ ಪ್ಯಾಕ್

  • ½ ಪಪ್ಪಾಯಿ
  • 1 ಚಮಚ ಜೇನುತುಪ್ಪ

ವಿಧಾನ
ಹಣ್ಣಾಗಿರುವ ಪಪ್ಪಾಯಿಯನ್ನು ಸಣ್ಣ ತುಂಡುಗಳನ್ನಾಗಿ ಕತ್ತರಿಸಿಕೊಳ್ಳಿ. ಇದನ್ನು ಮೆತ್ತಗಿನ ಪೇಸ್ಟ್ ಮಾಡಿಕೊಳ್ಳಿ ಮತ್ತು ಇದಕ್ಕೆ ಜೇನುತುಪ್ಪ ಹಾಕಿಕೊಂಡು ಮಿಶ್ರಣ ಮಾಡಿ. ಇದನ್ನು ಪದರದಂತೆ ಮುಖಕ್ಕೆ ಹಚ್ಚಿಕೊಳ್ಳಿ ಮತ್ತು 20 ನಿಮಿಷ ಕಾಲ ಹಾಗೆ ಬಿಡಿ. ಇದರ ಬಳಿಕ ಸಾಮಾನ್ಯ ನೀರಿನಿಂದ ತೊಳೆಯಿರಿ.

ಬಾಳೆಹಣ್ಣು ಹಾಗೂ ಜೇನು

ಬಾಳೆಹಣ್ಣಿನಲ್ಲಿ ಹಲವಾರು ಆರೋಗ್ಯಕಾರಿ ಪ್ರಯೋಜನಗಳು ಅಡಗಿರುತ್ತವೆ. ಬಾಳೆಹಣ್ಣನ್ನು ರುಬ್ಬಿಕೊಂಡು, ಅದನ್ನು ಒಂದು ಟೀ ಸ್ಪೂನ್ ಜೇನು ತುಪ್ಪ ಮತ್ತು ಲಿಂಬೆ ರಸದ ಜೊತೆಗೆ ಬೆರೆಸಿಕೊಳ್ಳಿ. ಇದನ್ನು ಮುಖಕ್ಕೆ ಲೇಪಿಸಿಕೊಂಡು 20 ನಿಮಿಷ ಬಿಟ್ಟು, ನಂತರ ಮುಖ ತೊಳೆಯಿರಿ. ಇದರಿಂದ ಮೊಡವೆಗಳ ಸಮಸ್ಯೆ ದೂರಾಗುತ್ತದೆ.

ಪಪ್ಪಾಯಿ-ಲಿಂಬೆರಸ-ಚಮಚ ಜೇನುತುಪ್ಪ
*1 ಚಮಚ ದಪ್ಪ ಮೊಸರು
*3-5 ಹನಿ ಲಿಂಬೆರಸ
*2 ಚಮಚ ಪಪ್ಪಾಯಿ ತಿರುಳು
*1 ಚಮಚ ಮುಲ್ತಾನಿ ಮಿಟ್ಟಿ
*1 ಚಮಚ ಜೇನುತುಪ್ಪ

ಪಪ್ಪಾಯಿ ತಿರುಳು ಮತ್ತು ಮೊಸರನ್ನು ಜತೆ ಸೇರಿಸಿಕೊಂಡು ಮಿಶ್ರಣ ಮಾಡಿಕೊಳ್ಳಿ. ಇದಕ್ಕೆ ಜೇನುತುಪ್ಪ, ಲಿಂಬೆರಸ ಮತ್ತು ಮುಲ್ತಾನಿ ಮಿಟ್ಟಿ ಸೇರಿಸಿಕೊಳ್ಳಿ. ಇದನ್ನು ಮಿಶ್ರಣ ಮಾಡಿ ಮೃಧುವಾದ ಪೇಸ್ಟ್ ಮಾಡಿಕೊಳ್ಳಿ. ಒಣ ಚರ್ಮವಿರುವ ಜಾಗಕ್ಕೆ ಬ್ರಷ್ ಅಥವಾ ಕೈಯಿಂದ ಪಪ್ಪಾಯಿ ಫೇಸ್ ಪ್ಯಾಕ್ ಹಚ್ಚಿಕೊಳ್ಳಿ. ಒಣಚರ್ಮವು ಈ ಫೇಸ್ ಪ್ಯಾಕ್ ನ್ನು ಹೀರಿಕೊಳ್ಳಲು ಬಿಡಿ. ಸ್ವಲ್ಪ ಸಮಯ ಬಿಟ್ಟು ಒಣಗಿದ ಬಳಿಕ ತಣ್ಣೀರಿನಿಂದ ತೊಳೆಯಿರಿ.

ಕುತ್ತಿಗೆಯ ಭಾಗದ ನೆರಿಗೆಗಳ ನಿವಾರಣೆಗೆ ಹಲಸಿನ ಹಣ್ಣು ಅರ್ಧ ಹಲಸಿನ ಹಣ್ಣಿನ ತಿರುಳು, 1 ಬಾಳೆಹಣ್ಣು, 1 ಗ್ರಾಂ ಕಡಲೆಹಿಟ್ಟು, ಹಾಲು ಇವಿಷ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. ಕುತ್ತಿಗೆಯ ಭಾಗಕ್ಕೂ ಅಪ್ಲೈ ಮಾಡಿ. ಈ ಮಿಶ್ರಣ ಬೇಗನೇ ಡ್ರೈ ಆಗಲ್ಲ. ಹಾಗಾಗಿ ಮುಖದಲ್ಲಿ ಪೂರ್ತಿ ಒಣಗುವವರೆಗೆ ಹಾಗೆಯೇ ಇಡಿ. ಸುಮಾರು ಅರ್ಧ ಗಂಟೆಯ ನಂತ್ರ ವಾಶ್ ಮಾಡಿ..ಪರಿಣಾಮವನ್ನು ನೀವೇ ಗಮನಿಸಿಕೊಳ್ಳಬಹುದು. ವಾರಕ್ಕೆ ಎರಡು ಬಾರಿ ನೀವಿದನ್ನು ಮಾಡಿಕೊಳ್ಳೋದು ಉತ್ತಮ.

English summary

DIY Step-by-step Fruit Facial At Home

Facials must be done at least once in a month for your skin to look healthy and supple. Since our facial skin is prone to several factors like pollution,chemicals, etc., it is important to keep it rejuvenated on a regular basis. You can do a simple fruit facial at home that are available in your kitchen.
X
Desktop Bottom Promotion