For Quick Alerts
ALLOW NOTIFICATIONS  
For Daily Alerts

ನೈಸರ್ಗಿಕ ಬ್ಯೂಟಿ ಟಿಪ್ಸ್: ಸೌಂದರ್ಯ ಹೆಚ್ಚಿಸುವ ಹಾಗಲಕಾಯಿ ಫೇಸ್ ಮಾಸ್ಕ್!

By Lekhaka
|

ಹಾಗಲಕಾಯಿ ಹೆಸರು ಕೇಳಿದರೆ ಸಾಕು ದೂರ ಹೋಗುವವರು ಸಾವಿರಾರು ಮಂದಿ. ಇದರಲ್ಲಿನ ಕೆಲವೊಂದು ಪೋಷಕಾಂಶಗಳನ್ನು ಗುರುತಿಸಿಕೊಂಡು ಅದನ್ನು ತಮ್ಮ ಆಹಾರದಲ್ಲಿ ಅಳವಡಿಸಿ ಕೊಂಡಿರುವವರು ಇದ್ದಾರೆ. ಹಾಗಲಕಾಯಿಯ ಕಹಿಯಿಂದಾಗಿ ಹೆಚ್ಚಿನವರು ಅದನ್ನು ತಿನ್ನಲು ಇಷ್ಟಪಡುವುದಿಲ್ಲ. ಆದರೆ ಇದರಲ್ಲಿ ಹಲವಾರು ರೀತಿಯ ವಿಟಮಿನ್ ಗಳು ಹಾಗೂ ಖನಿಜಾಂಶಗಳು ಇವೆ. ಹಾಗಲಕಾಯಿ ಜ್ಯೂಸ್ ಕುಡಿಯುವ ಬದಲು ಅದನ್ನು ಫೇಸ್ ಪ್ಯಾಕ್ ಆಗಿ ಮಾಡಿಕೊಂಡರೆ ಹೇಗೆ?

ಹೌದು, ಹಾಗಲಕಾಯಿಯನ್ನು ಕೂಡ ಫೇಸ್ ಪ್ಯಾಕ್ ಆಗಿ ಬಳಸಬಹುದು. ಇದು ತುಂಬಾ ಪರಿಣಾಮಕಾರಿ ಮತ್ತು ಕಾಂತಿಯುತ ಹಾಗೂ ಆರೋಗ್ಯಕರ ತ್ವಚೆ ನೀಡುವುದು. ಹಾಗಲಕಾಯಿಯಲ್ಲಿ ವಿಟಮಿನ್ ಸಿ, ಕಬ್ಬಿಣ, ಬೆಟಾ ಕ್ಯಾರೋಟಿನ್, ಪೊಟಾಶಿಯಂ, ಮೆಗ್ನಿಶಿಯಂ, ಕ್ಯಾಲ್ಸಿಯಂ ಇತ್ಯಾದಿಗಳಿವೆ. ಇದು ದೇಹ ಹಾಗೂ ಚರ್ಮಕ್ಕೆ ಒಳ್ಳೆಯದು. ಇದು ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುವುದು ಮತ್ತು ಕೊಲೆಸ್ಟ್ರಾಲ್ ಕಡಿಮೆ ಮಾಡುವುದು.

ಮುಳ್ಳುಮುಳ್ಳಾದ ಹಾಗಲಕಾಯಿ ಜ್ಯೂಸ್‌ನ ಜಬರ್ದಸ್ತ್ ಪವರ್

ಯಕೃತ್ ಅನ್ನು ಶುದ್ಧೀಕರಿಸಿ ಪ್ರತಿರೋಧಕ ಶಕ್ತಿ ಹೆಚ್ಚಿಸಿ, ತೂಕ ಕಳೆದುಕೊಳ್ಳಲು ಸಹಕಾರಿ. ಸೂಕ್ಷ್ಮಾಣು ವಿರೋಧಿ ಹಾಗೂ ಉರಿಯೂತ ಶಮನಕಾರಿ ಗುಣ ಹೊಂದಿರುವ ಹಾಗಲಕಾಯಿ ಮೊಡವೆ, ನೆರಿಗೆಯನ್ನು ಕಡಿಮೆ ಮಾಡುವುದು. ಹಾಗಲಕಾಯಿ ಬಳಸಿಕೊಂಡು ಮಾಡಬಹುದಾದ 7 ಫೇಸ್ ಪ್ಯಾಕ್ ಗಳ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ. ಇದನ್ನು ಓದಿ ಬಳಸಿ...

ಹಾಗಲಕಾಯಿ, ನಿಂಬೆರಸ ಮತ್ತು ಟೊಮೆಟೋ ಮಾಸ್ಕ್

ಹಾಗಲಕಾಯಿ, ನಿಂಬೆರಸ ಮತ್ತು ಟೊಮೆಟೋ ಮಾಸ್ಕ್

ಟೊಮೆಟೋ ಅದ್ಭುತವಾಗಿ ಸಂಕೋಚನ ಉಂಟು ಮಾಡುವುದು. ಇದು ರಂಧ್ರಗಳನ್ನು ತೆರೆಯಲು ನೆರವಾಗುವುದು. ಇದರಿಂದ ಮೊಡವೆ, ದದ್ದು ಮತ್ತು ಕಲೆಗಳು ನಿವಾರಣೆಯಾಗಿ ನಿಸ್ತೇಜ ಚರ್ಮಕ್ಕೂ ಕಾಂತಿ ಸಿಗುವುದು. ಲಿಂಬೆರಸದಲ್ಲಿ ನೈಸರ್ಗಿಕವಾದ ಬ್ಲೀಚಿಂಗ್ ಗುಣಗಳು ಇವೆ. ಇದು ಚರ್ಮ ಬಿಳಿಯಾಗುವುದು. ಲಿಂಬೆಯಲ್ಲಿ ಇರುವಂತಹ ಆಮ್ಲೀಯ ಗುಣವು ಸತ್ತ ಚರ್ಮದ ಕೋಶವನ್ನು ತೆಗೆದು ಅತಿಯಾಗಿ ಎಣ್ಣೆ ಉತ್ತತ್ತಿಯಾಗದಂತೆ ತಡೆಯುವುದು.

ಬಳಸುವ ವಿಧಾನ

*ಒಂದು ಜ್ಯೂಸ್‌ರ್ ಗೆ ಒಂದು ಟೊಮೆಟೋ ಹಾಕಿ. ಟೊಮೆಟೋ ಬೀಜಗಳನ್ನು ತೆಗೆಯಿರಿ ಮತ್ತು ಅದರ ರಸ ತೆಗೆದಿಡಿ.

*ಹಾಗಲಕಾಯಿ ಹಾಕಿ ಅದರ ರಸ ತೆಗೆಯಿರಿ

*ಒಂದು ಪಿಂಗಾಣಿಗೆ ಎರಡನ್ನು ಹಾಕಿ ಮಿಶ್ರಣ ಮಾಡಿ ಮತ್ತು ಲಿಂಬೆರಸ ಬೆರೆಸಿ.

*ಸರಿಯಾಗಿ ಮಿಶ್ರಣ ಮಾಡಿಕೊಂಡ ಬಳಿಕ ಅದನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ.

*ರಾತ್ರಿಯಿಡಿ ಹಾಗೆ ಬಿಡಿ.

*ಬೆಳಗ್ಗೆ ಎದ್ದು ಉಗುರುಬೆಚ್ಚಗಿನ ನೀರಿನಿಂದ ಮುಖ ಹಾಗೂ ಕುತ್ತಿಗೆ ತೊಳೆಯಿರಿ.

* ಪ್ರತಿನಿತ್ಯ ಬಳಸಿದರೆ ಫಲಿತಾಂಶ ಸಿಗುವುದು.

ಹಾಗಲಕಾಯಿ, ಮೊಟ್ಟೆಲೋಳೆ ಮತ್ತು ಮೊಸರಿನ ಮಾಸ್ಕ್

ಹಾಗಲಕಾಯಿ, ಮೊಟ್ಟೆಲೋಳೆ ಮತ್ತು ಮೊಸರಿನ ಮಾಸ್ಕ್

ಮೊಟ್ಟೆಯ ಲೋಳೆಯಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಚರ್ಮಕ್ಕೆ ತೇವಾಂಶ, ಪೋಷಣೆ ಮತ್ತು ಮಾಯಿಶ್ಚರೈಸ್ ನೀಡುವುದು. ಇದರಿಂದ ಚರ್ಮ ಮೃಧು ಹಾಗೂ ಸುಂದರವಾಗುವುದು.

ಮೊಸರಿನಲ್ಲಿ ಲ್ಯಾಕ್ಟಿಕ್ ಆಮ್ಲವಿದೆ. ಇದು ಸತ್ತ ಚರ್ಮವನ್ನು ತೆಗೆಯುವುದು ಮತ್ತು ಚರ್ಮದ ರಂಧ್ರವನ್ನು ಬಿಗಿಗೊಳಿಸುವುದು. ಇದು ಒಳ್ಳೆಯ ಮಾಯಿಶ್ಚರೈಸರ್ ಆಗಿ ಕೆಲಸ ಮಾಡುವುದು.

ಬಳಸುವುದು ಹೇಗೆ?

* ಒಂದು ಹಾಗಲಕಾಯಿಯನ್ನು ಜ್ಯೂಸರ್‌ಗೆ ಹಾಕಿ ಅದರ ರಸ ತೆಗೆಯಿರಿ.

*ಒಂದು ಸಣ್ಣ ಪಿಂಗಾಣಿಯಲ್ಲಿ ಸಮಪ್ರಮಾಣದ ಹಾಗಲಕಾಯಿ ರಸ, ಮೊಸರು ಮತ್ತು ಮೊಟ್ಟೆಯ ಲೋಳೆ ಹಾಕಿ.

*ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.

*ಇದನ್ನು ಮುಖ ಹಾಗು ಕುತ್ತಿಗೆಗೆ ಹಚ್ಚಿಕೊಳ್ಳಿ

* 20-25 ನಿಮಿಷ ಕಾಲ ಹಾಗೆ ಬಿಡಿ.

*ವೃತ್ತಾಕಾರದಲ್ಲಿ ಮಸಾಜ್ ಮಾಡುವ ಮೂಲಕ ಮಾಸ್ಕ್ ನ್ನು ಮುಖ ಹಾಗೂ ಕುತ್ತಿಗೆಯಿಂದ ತೆಗೆಯಿರಿ.

*ಬಿಸಿ ನೀರಿನಿಂದ ತೊಳೆಯಿರಿ.

* ಪ್ರತಿನಿತ್ಯ ಇದನ್ನು ಬಳಸಿ.

*ವಯಸ್ಸಾಗುವ ಲಕ್ಷಣ ತಡೆಯಲು ಇದು ಸಹಕಾರಿ.

ಹಾಗಲಕಾಯಿ ಮತ್ತು ಕಿತ್ತಳೆ ಸ್ಕ್ರಬ್

ಹಾಗಲಕಾಯಿ ಮತ್ತು ಕಿತ್ತಳೆ ಸ್ಕ್ರಬ್

ಕಿತ್ತಳೆ ಸಿಪ್ಪೆಯಲ್ಲಿ ಹಲವಾರು ರೀತಿಯ ಗುಣಗಳು ಇವೆ. ಇದು ಮೊಡವೆ, ಅತಿಯಾದ ಎಣ್ಣೆ, ಧೂಳು, ಕಪ್ಪು ಕಲೆ, ಬ್ಯಾಕ್ಟೀರಿಯಾ ಇತ್ಯಾದಿ ನಿವಾರಣೆ ಮಾಡುವುದು.

ಬಳಸುವುದು ಹೇಗೆ?

*ಎರಡರಿಂದ ಮೂರು ದಿನಗಳ ಕಾಲ ಸೂರ್ಯನ ಬಿಸಿಲಿನಲ್ಲಿ ಕಿತ್ತಳೆ ಸಿಪ್ಪೆಯನ್ನು ಒಣಗಿಸಿ.

*ಹಾಗಲಕಾಯಿಯಿಂದ ಬೀಜಗಳನ್ನು ತೆಗೆಯಿರಿ.

*ಬ್ಲೆಂಡರ್ ಗೆ ಒಣಗಿದ ಕಿತ್ತಳೆ ಸಿಪ್ಪೆ ಮತ್ತು ಹಾಗಲಕಾಯಿ ಬೀಜಗಳನ್ನು ಹಾಕಿ ಮಿಶ್ರಣ ಮಾಡಿ.

* ಈ ಸ್ಕ್ರಬ್ ನ್ನು ವೃತ್ತಾಕಾರದಲ್ಲಿ ಮುಖಕ್ಕೆ ಹಚ್ಚಿಕೊಳ್ಳಿ. ಹತ್ತು ನಿಮಿಷ ಕಾಲ ಮಸಾಜ್ ಮಾಡಿ.

* ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.

ಸೂಚನೆ: ಹಾಗಲಕಾಯಿ ಬೇಯಿಸಿ ಅದರ ನೀರಿನಿಂದ ಮುಖ ತೊಳೆಯಬಹುದು.

ಹಾಗಲಕಾಯಿ ಮತ್ತು ಸೌತೆಕಾಯಿ ಮಾಸ್ಕ್

ಹಾಗಲಕಾಯಿ ಮತ್ತು ಸೌತೆಕಾಯಿ ಮಾಸ್ಕ್

ಸೌತೆಕಾಯಿಯಲ್ಲಿ ನೀರಿನಾಂಶ ಸಮೃದ್ಧವಾಗಿದೆ ಮತ್ತು ಇದರಿಂದ ತ್ವಚೆಯಲ್ಲಿ ತೇವಾಂಶ ಉಳಿದುಕೊಳ್ಳುವುದು, ಚರ್ಮದ ಕಿರಿಕಿರಿ ನಿವಾರಣೆ ಮತ್ತು ಊತವಿದ್ದರೆ ನಿವಾರಣೆಯಾಗುವುದು.

ಬಳಸುವುದು ಹೇಗೆ?

*ಒಂದು ಮಿಕ್ಸರ್ ಗೆ ಸೌತೆಕಾಯಿ ಮತ್ತು ಹಾಗಲಕಾಯಿಯನ್ನು ಹಾಕಿಕೊಂಡು ರುಬ್ಬಿಕೊಳ್ಳಿ.

*ನುಣ್ಣನೆಯ ಪೇಸ್ಟ್ ಮಾಡಿಕೊಳ್ಳಿ.

*ಇದನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿ.

*10-15 ನಿಮಿಷ ಕಾಲ ಇದನ್ನು ಮುಖ ಹಾಗೂ ಕುತ್ತಿಗೆಯಲ್ಲಿ ಹಾಗೆ ಬಿಡಿ.

* ತಣ್ಣೀರಿನಿಂದ ಮುಖ ತೊಳೆಯಿರಿ.

*ಪ್ರತಿನಿತ್ಯ ಇದನ್ನು ಬಳಸಿದರೆ ಕಾಂತಿಯುತ ತ್ವಚೆ ಪಡೆಯಬಹುದು.

ಹಾಗಲಕಾಯಿ, ಅರಿಶಿನ ಮತ್ತು ಬೇವಿನ ಎಲೆಗಳ ಮಾಸ್ಕ್

ಹಾಗಲಕಾಯಿ, ಅರಿಶಿನ ಮತ್ತು ಬೇವಿನ ಎಲೆಗಳ ಮಾಸ್ಕ್

ಅರಿಶಿನದಲ್ಲಿ ಉರಿಯೂತ ಶಮನಕಾರಿ ಗುಣಗಳು ಇವೆ. ಇದು ಕಲೆ ನಿವಾರಣೆ ಮಾಡಿ ಗಾಯವನ್ನು ಒಣಗಿಸುವುದು. ಇದರಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಗುಣವು ಚರ್ಮದ ಕೋಶಗಳಿಗೆ ಹಾನಿಯಾಗದಂತೆ ತಡೆಯುವುದು. ಬೇವಿನ ಎಲೆಗಳಲ್ಲಿ ಮೊಡವೆ, ಕಪ್ಪುಕಲೆ ಮತ್ತು ತುರಿಕೆ ನಿವಾರಣೆ ಮಾಡುವ ಗುಣಗಳು ಇವೆ.

ಬಳಸುವ ವಿಧಾನ

* ಒಂದು ಬ್ಲೆಂಡರ್ ಗೆ ಒಂದು ಹಾಗಲಕಾಯಿ, ಸ್ವಲ್ಪ ಬೇವಿನ ಎಲೆಗಳು ಮತ್ತು ಒಂದು ಚಮಚ ಅರಶಿನ ಹಾಕಿ.

* ಇದನ್ನು ಸರಿಯಾಗಿ ರುಬ್ಬಿಕೊಂಡು ದಪ್ಪಗಿನ ಪೇಸ್ಟ್ ಮಾಡಿ.

* ಈ ಪೇಸ್ಟ್ ಅನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ.

*ಇದನ್ನು 10-15 ನಿಮಿಷ ಕಾಲ ಹಾಗೆ ಬಿಡಿ.

*ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.

*ಮೊಡವೆ ನಿವಾರಣೆಗೆ ಪ್ರತಿನಿತ್ಯ ಈ ವಿಧಾನವನ್ನು ಅನುಸರಿಸಿಕೊಂಡು ಹೋಗಿ.

ಹಾಗಲಕಾಯಿ, ತುಳಸಿ, ಹಾಲು ಮತ್ತು ಬೇವಿನ ಎಲೆ ಫೇಸ್ ಪ್ಯಾಕ್

ಹಾಗಲಕಾಯಿ, ತುಳಸಿ, ಹಾಲು ಮತ್ತು ಬೇವಿನ ಎಲೆ ಫೇಸ್ ಪ್ಯಾಕ್

ತುಳಸಿಯಲ್ಲಿ ಯುರ್ಸೊಲಿಕ್ ಆಮ್ಲವಿದೆ. ಇದು ಚರ್ಮಕ್ಕೆ ಕಾಂತಿ ನೀಡಿ, ಸತ್ತ ಚರ್ಮದ ಕೋಶ ತೆಗೆಯುವುದು ಮತ್ತು ಅತಿಯಾದ ಎಣ್ಣೆಯಂಶವನ್ನು ಚರ್ಮದಿಂದ ಹೀರಿಕೊಳ್ಳುವುದು.

ಹಾಲಿನಲ್ಲಿ ಇರುವಂತಹ ಲ್ಯಾಕ್ಟಿಕ್ ಆಮ್ಲವು ಚರ್ಮದಲ್ಲಿ ಇರುವ ಕಪ್ಪು ಕಲೆ ನಿವಾರಿಸುವುದು. ಇದು ಚರ್ಮಕ್ಕೆ ತೇವಾಂಶ ನೀಡಿ ಮೊಡವೆ ಹಾಗೂ ಸುಟ್ಟ ಚರ್ಮದ ಕಲೆಗಳನ್ನು ನಿವಾರಿಸುವುದು.

ಬಳಸುವ ವಿಧಾನ

*ಒಂದು ಮಿಕ್ಸಿಗೆ ಒಂದು ಹಾಗಲಕಾಯಿ, ಒಂದು ಹಿಡಿ ಬೇವಿನ ಎಲೆಗಳು ಮತ್ತು ತುಳಸಿ ಎಲೆಗಳನ್ನು ಹಾಕಿ.

*ಇದು ದಪ್ಪಗಿನ ಪೇಸ್ಟ್ ಆಗುವ ತನಕ ತಿರುಗಿಸಿ.

*ಇದಕ್ಕೆ ಒಂದು ಚಮಚ ಹಾಲು ಹಾಕಿ ಮತ್ತು ಮುಖಕ್ಕೆ ಹಚ್ಚಿಕೊಳ್ಳಿ.

*10-15 ನಿಮಿಷ ಕಾಲ ಇದನ್ನು ಮುಖದಲ್ಲಿ ಹಾಗೆ ಬಿಡಿ.

*ಉಗುರುಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.

*ಸ್ವಚ್ಛ ಹಾಗೂ ಕಾಂತಿಯುತ ತ್ವಚೆಗೆ ಪ್ರತಿನಿತ್ಯ ಇದನ್ನು ಬಳಸಿ.

ಹಾಗಲಕಾಯಿ, ಅಲೋವೆರಾ ಮತ್ತು ಜೇನುತುಪ್ಪ

ಹಾಗಲಕಾಯಿ, ಅಲೋವೆರಾ ಮತ್ತು ಜೇನುತುಪ್ಪ

ಬಿಸಿಲಿನಿಂದ ಆದ ಕಲೆಗಳು, ಚರ್ಮದ ಕಿರಿಕಿರಿ ಮತ್ತು ಗಾಯ ಇತ್ಯಾದಿಗಳಿಗೆ ಅಲೋವೆರಾ ತುಂಬಾ ಪರಿಣಾಮಕಾರಿ. ಇದು ಚರ್ಮಕ್ಕೆ ಒಳ್ಳೆಯ ಮೊಶ್ಚಿರೈಸರ್ ಆಗಿಯೂ ಕೆಲಸ ಮಾಡುವುದು. ಇದರಲ್ಲಿ ಬೆಟಾ ಕ್ಯಾರೋಟಿನ್, ವಿಟಮಿನ್ ಸಿ ಮತ್ತು ಇ ಇದೆ. ಜೇನುತುಪ್ಪದಲ್ಲಿ ಆ್ಯಂಟಿಆಕ್ಸಿಡೆಂಟ್, ನಂಜುನಿರೋಧಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ. ಇದು ಚರ್ಮದಲ್ಲಿನ ಕೊಳೆ ಹಾಗೂ ಕಪ್ಪುಕಲೆಗಳನ್ನು ನಿವಾರಣೆ ಮಾಡುವುದು. ಇದು ಚರ್ಮವನ್ನು ತೇವಾಂಶದಿಂದ ಇಡುವುದು ಮತ್ತು ವಯಸ್ಸಾಗುವ ಲಕ್ಷಣ ಕಾಣಿಸದಂತೆ ಮಾಡುವುದು.

ಬಳಸುವ ವಿಧಾನ

*ಬೀಜ ತೆಗೆದ ಹಾಗಲಕಾಯಿಯ ಮೂರು ಅಥವಾ ನಾಲ್ಕು ತುಂಡು ಮಾಡಿ.

*ಅಲೋವೆರಾ ಮರದ ಸಿಪ್ಪೆ ತೆಗೆಯಿರಿ.

*ಎಲ್ಲವನ್ನು ಮಿಕ್ಸಿಗೆ ಹಾಕಿ ಮತ್ತು ಒಂದು ಚಮಚ ಜೇನುತುಪ್ಪ ಕೂಡ ಹಾಕಿ.

*ಈ ಮಿಶ್ರಣವು ತುಂಬಾ ದಪ್ಪವಾಗಿರಲಿ.

*ಈಗ ಇದನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ.

*10-15 ನಿಮಿಷ ಕಾಳ ಮುಖ ಹಾಗೂ ಕುತ್ತಿಗೆಯಲ್ಲಿ ಇದು ಇರಲಿ.

* ಬಿಸಿ ನೀರಿನಿಂದ ತೊಳೆಯಿರಿ.

*ನಯ ಹಾಗೂ ಕಾಂತಿಯುತ ತ್ವಚೆಗೆ ದಿನನಿತ್ಯ ಇದನ್ನು ಬಳಸಿ.

English summary

DIY Bitter Gourd Face Packs For Healthy And Glowing Skin

Bitter gourd/bitter melon/bitter squash is commonly known as 'karela' in Indian household and it is packed with many vitamins and minerals that are excellent for our skin and health. Bitter gourd is actually a fruit and not a vegetable, and because of its bitter taste, most of us do not like it. But instead of drinking its juice, we can mix it with different ingredients and make a face pack and apply it on our skin. This way, we can get a healthy and glowing skin.
X
Desktop Bottom Promotion