For Quick Alerts
ALLOW NOTIFICATIONS  
For Daily Alerts

ಬ್ಯೂಟಿ ಟಿಪ್ಸ್: ಕಡಲೆಹಿಟ್ಟು ಮತ್ತು ಬಾಳೆಹಣ್ಣಿನ ಫೇಸ್ ಪ್ಯಾಕ್

By Hemanth
|

ಭಾರತೀಯರ ಪ್ರತಿಯೊಂದು ಅಡುಗೆ ಕೋಣೆಯಲ್ಲಿ ಸಿಗುವಂತಹ ವಸ್ತುವೆಂದರೆ ಅದು ಕಡಲೆಹಿಟ್ಟು, ಇದರಿಂದ ಹಲವಾರು ರೀತಿಯ ಆಹಾರಗಳನ್ನು ತಯಾರಿಸುವುದು ಮಾತ್ರವಲ್ಲದೆ ಸೌಂದರ್ಯವರ್ಧಕವಾಗಿಯೂ ಬಳಸಿಕೊಳ್ಳಬಹುಉ. ಹೌದು, ಕಡಲೆಹಿಟ್ಟಿನಿಂದ ಮುಖದ ಮೇಲಿರುವ ಮೊಡವೆಗಳು ಹಾಗೂ ಕಲೆಗಳನ್ನು ಕಡಿಮೆ ಮಾಡಬಹುದು, ನೆರಿಗೆ ನಿವಾರಿಸಬಹುದು, ಒಣ ಹಾಗೂ ನಿಸ್ತೇಜ ಚರ್ಮಕ್ಕೆ ಇದು ತುಂಬಾ ಸಹಕಾರಿಯಾಗಿರುವುದು. ಚರ್ಮವನ್ನು ಶುದ್ಧೀಕರಿಸಿ ಪಿಎಚ್ ಮಟ್ಟವನ್ನು ಕಾಪಾಡಿಕೊಳ್ಳುವುದು. ನಿಮಗೆ ಕಾಂತಿಯುತ ಹಾಗೂ ಮೃದುವಾದ ಚರ್ಮವು ಬೇಕಿದ್ದರೆ ಆಗ ನೀವು ಕಡಲೆಹಿಟ್ಟು ಮತ್ತು ಬಾಳೆಹಣ್ಣಿನ ಪ್ಯಾಕ್ ಮಾಡಿಕೊಳ್ಳಿ. ಬಾಳೆಹಣ್ಣಿನಲ್ಲಿ ಆ್ಯಂಟಿಆಕ್ಸಿಡೆಂಟ್, ಪೈಥೋಕೆಮಿಕಲ್ ಇದ್ದು, ಚರ್ಮವನ್ನು ಮಾಯಿಶ್ಚರೈಸ್ ಆಗಿ ಇಡುವುದು.

ಇದು ಚರ್ಮಕ್ಕೆ ಪೋಷಣೆ ನೀಡಿ, ಗಡಸು ಮತ್ತು ವಯಸ್ಸಾಗುವ ಲಕ್ಷಣ ತೋರಿಸುವ ಚರ್ಮಕ್ಕೆ ಪೋಷಣೆ ನೀಡುವುದು. ಎಲ್ಲಾ ವಿಧದ ಚರ್ಮಗಳಿಗೆ ಬಾಳೆಹಣ್ಣು ತುಂಬಾ ಒಳ್ಳೆಯದು. ನಿಮಗೆ ಕಾಂತಿಯು ಮತ್ತು ಸುಂದರ ತ್ವಚೆಯು ಬೇಕಿದ್ದರೆ ಆಗ ನೀವು ಮನೆಯಲ್ಲಿ ತಯಾರಿಸಿದ ಕಡಲೆಹಿಟ್ಟು ಮತ್ತು ಬಾಳೆಹಣ್ಣಿನ ಫೇಸ್ ಪ್ಯಾಕ್ ಬಳಸಿಕೊಳ್ಳಿ.

Pack For Soft Skin in kannada

ಕಡಲೆಹಿಟ್ಟು ಮತ್ತು ಬಾಳೆಹಣ್ಣಿನ ಫೇಸ್ ಪ್ಯಾಕ್

ಬಾಳೆಹಣ್ಣಿನಲ್ಲಿ ಇರುವಂತಹ ಕೆಲವೊಂದು ಪ್ರಮುಖ ಪೋಷಕಾಂಶಗಳು ಮತ್ತು ವಿಟಮಿನ್ ಗಳು ಚರ್ಮಕ್ಕೆ ಆಳವಾಗಿ ಪೋಷಣೆ ನೀಡುವುದು ಮತ್ತು ಮಾಯಿಶ್ಚರೈಸ್ ಆಗಿರುವುದು. ನೆರಿಗೆ ನಿವಾರಣೆಗೆ ಬಾಳೆಹಣ್ಣು ಅತ್ಯುತ್ತಮ ಮತ್ತು ಇದು ಚರ್ಮದಲ್ಲಿನ ಉರಿಯೂತ ಮತ್ತು ಗಾಯಗಳ ನಿವಾರಣೆ ಮಾಡುವುದು.

ಬೇಕಾಗುವ ಸಾಮಗ್ರಿಗಳು

  • 3-4 ತುಂಡು ಹಣ್ಣಾಗಿರುವ ಬಾಳೆಹಣ್ಣು
  • 2 ಚಮಚ ಕಡಲೆಹಿಟ್ಟು
  • ಕೆಲವು ಹನಿ ರೋಸ್ ವಾಟರ್ ಅಥವಾ ಹಸಿ ಹಾಲು

ವಿಧಾನ
*ಒಂದು ಪಿಂಗಾಣಿಯಲ್ಲಿ ಬಾಳೆಹಣ್ಣನ್ನು ಸರಿಯಾಗಿ ಹಿಚುಕಿಕೊಳ್ಳಿ ಮತ್ತು ಇದಕ್ಕೆ ಎರಡು ಚಮಚ ಕಡಲೆಹಿಟ್ಟು ಹಾಕಿ.
*ಇದಕ್ಕೆ ಕೆಲವು ಹನಿ ರೋಸ್ ವಾಟರ್ ಅಥವಾ ಹಸಿ ಹಾಲು ಹಾಕಿ ಸರಿಯಾಗಿ ಮಿಶ್ರಣ ಮಾಡಿ.
* ಈ ಪೇಸ್ಟ್ ನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿ 15-20 ನಿಮಿಷ ಕಾಲ ಹಾಗೆ ಬಿಡಿ.

*ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.
* ವಾರದಲ್ಲಿ ಎರಡು ಸಲ ಇದನ್ನು ಬಳಸಿದರೆ ಮೃದು ಹಾಗೂ ಬಿಳಿ ತ್ವಚೆ ಪಡೆಯಬಹುದು.
* ಇದು ಒಣ ಚರ್ಮಕ್ಕೆ ಹೇಳಿ ಮಾಡಿಸಿದ ಫೇಸ್ ಪ್ಯಾಕ್

ಬಾಳೆಹಣ್ಣು ಮತ್ತು ಕಡಲೆಹಿಟ್ಟಿನಿಂದ ಚರ್ಮಕ್ಕೆ ಆಗುವ ಲಾಭಗಳ ಬಗ್ಗೆ ತಿಳಿದುಕೊಳ್ಳುವ.

ಚರ್ಮಕ್ಕೆ ಬಾಳೆಹಣ್ಣಿನ ಲಾಭಗಳು

ಈ ಹಣ್ಣಿನಲ್ಲಿ ಇರುವಂತಹ ಹಲವಾರು ರೀತಿಯ ಪೋಷಕಾಂಶಗಳು ಮತ್ತು ವಿಟಮಿನ್ ಗಳು ಚರ್ಮಕ್ಕೆ ಅದ್ಭುತವನ್ನುಂಟು ಮಾಡುವುದು.

ವಿಟಮಿನ್ ಸಿ ಲಾಭಗಳು

• ಬಿಸಿನಿಲಿನಿಂದ ಆಗಿರುವ ಕಲೆ ನಿವಾರಣೆ ಮತ್ತು ಕಂದು ಕಲೆಗಳ ಕಡಿಮೆ ಮಾಡುವುದು.
• ಚರ್ಮದಲ್ಲಿ ಉರಿಯೂತ ಮತ್ತು ಕಿರಿಕಿರಿ ಕಡಿಮೆ ಮಾಡುವುದು.
• ಕಾಲಜನ್ ಉತ್ಪತ್ತಿ ಹೆಚ್ಚಿಸುವುದು ಮತ್ತು ಇದರಿಂದ ಚರ್ಮವು ಬಿಳಿಯಾಗುವುದು.
• ಸೂರ್ಯನಿಂದ ಬರುವಂತಹ ಹಾನಿಕಾರಕ ಯುವಿ ಕಿರಣಗಳಿಂದ ರಕ್ಷಣೆ ನೀಡುವುದು.

ಇದು ಅದ್ಭುತವಾದ ಮಾಯಿಶ್ಚರೈಸರ್

ಬಾಳೆಹಣ್ಣಿನಲ್ಲಿ ಉತ್ತಮ ಮಾಯಿಶ್ಚರೈಸರ್ ಮತ್ತು ಪೊಟಾಶಿಯಂ ಇದೆ. ಇದು ತೇವಾಂಶ ನೀಡಲು ಮತ್ತು ಒಣ ಹಾಗೂ ಗಡಸು ಚರ್ಮಕ್ಕೆ ಮೊಶ್ಚಿರೈಸ್ ನೀಡಿ ಚರ್ಮವನ್ನು ಮೃಧುವಾಗಿಸುವುದು.

ಹೊಳೆಯುವ ತ್ವಚೆಗೆ

ಬಾಳೆ ಹಣ್ಣಿನಲ್ಲಿರುವ ಜೀವಸತ್ವಗಳು ಚರ್ಮವನ್ನು ಪುನಃಶ್ಚೇತನಗೊಳಿಸುತ್ತದೆ. ಮತ್ತು ಚರ್ಮವನ್ನು ಹೊಳೆಯುವಂತೆ ಮಾಡುವುದು. ಚರ್ಮವನ್ನು ಒತ್ತಡದಿಂದ ಮುಕ್ತಗೊಳಿಸುವುದು. ಚರ್ಮವನ್ನು ತಾಜಾತನದಿಂದ ಕೂಡಿರುವಂತೆ ಮಾಡುವುದು. ಮನೆಯ ಪರಿಹಾರಗಳಿಂದಲೇ ಚರ್ಮವನ್ನು ಹೆಚ್ಚು ಹೊಳೆಯುವಂತೆ ಮಾಡಬಹುದು.

ಸಾಮಾಗ್ರಿಗಳು: ಬಾಳೆಹಣ್ಣು -1 ನೀರು -1 ಕಪ್ ಬಳಸುವ ವಿಧಾನ: - ಬಾಳೆಹಣ್ಣನ್ನು ಸಣ್ಣದಾಗಿ ಹೆಚ್ಚಿಕೊಂಡು ಹಿಸುಕಿಕೊಳ್ಳಿ. - ಬಳಿಕ ಮುಖಕ್ಕೆ ಅನ್ವಯಿಸಿ. - 15 ನಿಮಿಷದ ಬಳಿಕ ತಂಪಾದ ನೀರಿನಿಂದ ಸ್ವಚ್ಛಗೊಳಿಸಿ. - ನೀವು ಈ ಕ್ರಮವನ್ನು ಅನ್ವಯಿಸುವುದಕ್ಕಿಂತ ಮೊದಲು ಹೊಂದಿದ್ದ ತ್ವಚೆಯ ವ್ಯತ್ಯಾಸವನ್ನು ಪರಿಶೀಲಿಸಬಹುದು.

ಬಿಳುಪಾದ ತ್ವಚೆಗೆ

ನೈಸರ್ಗಿಕವಾಗಿ ಕಾಡುವ ಕಪ್ಪು ಕಲೆ, ಮಂಕಾದ ಚರ್ಮಗಳನ್ನು ನಿವಾರಿಸಿ, ಹೊಳೆಯುವ ತ್ವಚೆಯನ್ನು ಪಡೆಯಲು ಈ ಕ್ರಮವನ್ನು ವಾರದಲ್ಲಿ ಒಮ್ಮೆ ಬಳಸಬಹುದು. ಸಾಮಾಗ್ರಿಗಳು: ಬಾಳೆಹಣ್ಣು ಒಂದು ಟೀಚಮಚ ಜೇನುತುಪ್ಪ.

ಬಳಸುವ ವಿಧಾನ: - ಹೆಚ್ಚು ಹಣ್ಣಾದ ಬಾಳೆಹಣ್ಣನ್ನು ಬ್ಲೆಂಡರ್ ಅಲ್ಲಿ ಹಾಕಿ ಪೇಸ್ಟ್ ಮಾಡಿಕೊಳ್ಳಿ. - ಬಾಳೆಹಣ್ಣಿನ ಪೇಸ್ಟ್‍ಗೆ ಒಂದು ಟೀ ಚಮಚ ಜೇನುತುಪ್ಪ ಸೇರಿಸಿ, ಮಿಶ್ರಗೊಳಿಸಿ. - ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ, 15 ನಿಮಿಷಗಳ ಕಾಲ ಆರಲು ಬಿಡಿ. - ಬಳಿಕ ಉತ್ಸಾಹ ಇಲ್ಲದ ನೀರಿನಲ್ಲಿ ಸ್ವಚ್ಛಗೊಳಿಸಿ.

ಮೊಡವೆಗಳ ಚಿಕಿತ್ಸೆಗೆ

ನಿಮಗೆ ಮೊಡವೆಯ ಸಮಸ್ಯೆ ಇದ್ದರೆ ಬಾಳೆಹಣ್ಣಿನ ಪ್ಯಾಕ್ ಮೊಡವೆ ಹಾಗೂ ಚರ್ಮದ ಕಲೆಯನ್ನು ನಿವಾರಿಸುತ್ತದೆ. ವಾರದಲ್ಲಿ ಎರಡು ಬಾರಿ ಈ ಕ್ರಮವನ್ನು ಅನ್ವಯಿಸಿ.

ಸಾಮಾಗ್ರಿಗಳು: ಬಾಳೆಹಣ್ಣು-1 ಒಂದು ಟೀಚಮಚ ಜೇನುತುಪ್ಪ. ಒಂದು ಟೀಚಮಚ ನಿಂಬೆರಸ
ಬಳಸುವ ವಿಧಾನ: -ಬಾಳೆಹಣ್ಣನ್ನು ಕಿವುಚಿ ಪೇಸ್ಟ್ ಮಾಡಿ. -ಬಾಳೆಹಣ್ಣಿನ ಪೇಸ್ಟ್, ಒಂದು ಟೀಚಮಚ ಜೇನುತುಪ್ಪ ಮತ್ತು ಒಂದು ಟೀಚಮಚ ನಿಂಬೆರಸ ಸೇರಿಸಿ, ಮಿಶ್ರಗೊಳಿಸಿ. -ಮಿಶ್ರಣವನ್ನು ಮುಖಕ್ಕೆ ಹಾಗೂ ಪೀಡಿತ ಪ್ರದೇಶಕ್ಕೆ ಅನ್ವಯಿಸಿ. -20 ನಿಮಿಷದ ಬಳಿಕ ತಣ್ಣನೆಯ ನೀರಿನಲ್ಲಿ ಸ್ವಚ್ಛಗೊಳಿಸಿ.

ಒಣ ತ್ವಚೆಗೆ

ಬಾಳೆಹಣ್ಣು ತ್ವಚೆಯನ್ನು ಆದ್ರವಾಗಿರಿಸುತ್ತದೆ. ನಿಯಮಿತವಾಗಿ ಬಳಸುವುದರಿಂದ ಮೃದು ಮತ್ತು ಆರೋಗ್ಯವಾಗಿರುವಂತೆ ಮಾಡುವುದು.

ಸಾಮಾಗ್ರಿಗಳು: 1/2 ಬಾಳೆಹಣ್ಣು ಒಂದು ಟೀಚಮಚ ಓಟ್‍ಮೀಲ್. ಒಂದು ಟೀಚಮಚ ಜೇನುತುಪ್ಪ. ಒಂದು ಟೀಚಮಚ ಮೊಟ್ಟೆಯ ಹಳದಿ ಲೋಳೆ.

ಬಳಸುವ ವಿಧಾನ: - ಬಾಳೆಹಣ್ಣನ್ನು ಕಿವುಚಿ ಪೇಸ್ಟ್ ಮಾಡಿಕೊಳ್ಳಿ. - ಓಟ್ ಮೀಲ್‍ಅನ್ನು ರುಬ್ಬಿ ಪುಡಿಮಾಡಿ. - ಒಂದು ಬೌಲ್‍ಅಲ್ಲಿ ಬಾಳೆಹಣ್ಣಿನ ಪೇಸ್ಟ್, ಓಟ್ ಮೀಲ್ ಪುಡಿ, ಜೇನುತುಪ್ಪ ಮತ್ತು ಮೊಟ್ಟೆಯ ಹಳದಿ ಲೋಳೆಯನ್ನು ಸೇರಿಸಿ, ಮಿಶ್ರಗೊಳಿಸಿ. - ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ, 15 ನಿಮಿಷಗಳ ಕಾಲ ಆರಲು ಬಿಡಿ. - ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ ಎರಡು ಬಾರಿ ಪುನರಾವರ್ತಿಸಿ

ಕಡಲೆ ಹಿಟ್ಟಿನ ಪ್ರಯೋಜನಗಳು

ಅಡುಗೆ ಮನೆಗೆ ಹೋದರೆ ಅಲ್ಲಿ ನಿಮ್ಮ ಸೌಂದರ್ಯ ವರ್ಧಿಸುವ ಹಲವಾರು ಸಾಮಗ್ರಿಗಳು ಸಿಗುವುದು ಖಚಿತ. ಯಾಕೆಂದರೆ ಮಾರುಕಟ್ಟೆಯ ಕ್ರೀಮ್‌ಗಿಂತ ಈ ಮನೆಮದ್ದುಗಳು ತುಂಬಾ ಪರಿಣಾಮಕಾರಿ. ಇದು ನೈಸರ್ಗಿಕವಾಗಿ ನಿಮಗೆ ಸೌಂದರ್ಯ ಕೊಡುವುದು. ಇದರಲ್ಲಿ ಒಂದು ಕಡಲೆಹಿಟ್ಟು. ಕಡಲೆಹಿಟ್ಟನ್ನು ಚರ್ಮದ ಸೌಂದರ್ಯಕ್ಕಾಗಿ ಬಳಸಿಕೊಳ್ಳಲಾಗುತ್ತದೆ.ಇದು ಹಿಂದಿನಿಂದಲೂ ಮಹಿಳೆಯರಿಗೆ ತುಂಬಾ ಅಚ್ಚುಮೆಚ್ಚಿನ ಸೌಂದರ್ಯವರ್ಧಕ ಸಾಮಗ್ರಿಯಾಗಿದೆ. ಇದು ಚರ್ಮಕ್ಕೆ ಕಾಂತಿ ನೀಡುವುದು ಮಾತ್ರವಲ್ಲದೆ ಮೊಡವೆ ಹಾಗೂ ಕಲೆಗಳನ್ನು ನಿವಾರಿಸುವುದು. ಕಡಲೆಹಿಟ್ಟನ್ನು ಇತರ ಕೆಲವು ಸಾಮಗ್ರಿಗಳೊಂದಿಗೆ ಸೇರಿಸಿಕೊಂಡು ಬಳಸಿದಾಗ ಅದರಿಂದ ಹಲವಾರು ರೀತಿಯ ಸೌಂದರ್ಯ ಲಾಭಗಳು ನಮಗೆ ಸಿಗುವುದು ಖಚಿತ.

ಮುಖದ ಕೂದಲು ತೆಗೆಯಲು ಕಡಲೆಹಿಟ್ಟು

ಒಂದು ಚಮಚ ಕಡಲೆಹಿಟ್ಟು, ಜೋಳದ ಗಂಜಿ ಮತ್ತು ಸಕ್ಕರೆಯನ್ನು ಒಂದು ಪಿಂಗಾಣಿಗೆ ಹಾಕಿಕೊಂಡು ಮಿಶ್ರಣ ಮಾಡಿ. ಇದಕ್ಕೆ ಒಂದು ಮೊಟ್ಟೆ ಹಾಕಿ ಪೇಸ್ಟ್ ಮಾಡಬೇಕು. ಇದನ್ನು ತೆಳುವಾಗಿ ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ. ಒಣಗಿದ ಬಳಿಕ ಮತ್ತೊಂದು ಪದರ ಹಚ್ಚಿ. ಇದು ಸಂಪೂರ್ಣವಾಗಿ ಒಣಗಲಿ ಮತ್ತು ಇದನ್ನು ಉಜ್ಜಿಕೊಳ್ಳಿ ಹಾಗೂ ತಣ್ಣೀರಿನಿಂದ ತೊಳೆಯಿರಿ. ಮುಖದ ಮೇಲಿನ ಅನಗತ್ಯ ಕೂದಲು ಹೋಗುವ ತನಕ ವಾರದಲ್ಲಿ ಎರಡು ಸಲ ಇದನ್ನು ಪ್ರಯೋಗಿಸಿ.

ನೆರಿಗೆಮುಕ್ತ ಚರ್ಮಕ್ಕೆ ಕಡಲೆಹಿಟ್ಟಿನ ಪ್ಯಾಕ್

ಒಂದು ಪಿಂಗಾಣಿಯಲ್ಲಿ ಒಂದು ಚಮಚ ಕಡಲೆಹಿಟ್ಟು, ಒಂದು ಮೊಟ್ಟೆಯ ಬಿಳಿ ಲೋಳೆ ಮತ್ತು ಒಂದು ಚಮಚ ಮುಲ್ತಾನಿ ಮಿಟ್ಟಿ ಹಾಕಿಕೊಂಡು ದಪ್ಪಗಿನ ಪೇಸ್ಟ್ ಮಾಡಿಕೊಳ್ಳಿ. ಇದನ್ನು ಮುಖ ಹಾಗೂ ಕುತ್ತಿಗೆ ಹಚ್ಚಿಕೊಳ್ಳಿ ಮತ್ತು ನೆರಿಗೆ ಹೆಚ್ಚು ಕಾಣಿಸುವ ಕಣ್ಣಿನ ಕೆಳಭಾಗದಲ್ಲಿ ಮಸಾಜ್ ಮಾಡಿ. ಇದನ್ನು 30 ನಿಮಿಷ ಅಥವಾ ಸಂಪೂರ್ಣ ಒಣಗುವ ತನಕ ಮುಖದಲ್ಲಿಡಿ. ಬಳಿಕ ನೀರಿನಿಂದ ತೊಳೆಯಿರಿ. ಇದು ಕಡಲೆಹಿಟ್ಟಿನ ಒಳ್ಳೆಯ ಫೇಸ್ ಪ್ಯಾಕ್.

ಚರ್ಮ ಬಿಳಿಯಾಗಲು ಕಡಲೆಹಿಟ್ಟು

ನಾಲ್ಕು ತುಂಡು ಪಪ್ಪಾಯಿಯನ್ನು ರುಬ್ಬಿಕೊಳ್ಳಿ. ಇದಕ್ಕೆ ಎರಡು ಚಮಚ ಕಿತ್ತಳೆ ಜ್ಯೂಸ್ ಮತ್ತು ಒಂದು ಚಮಚ ಕಡಲೆಹಿಟ್ಟು ಹಾಕಿ ಮಿಶ್ರಣ ಮಾಡಿ. ಎಲ್ಲವನ್ನು ಸರಿಯಾಗಿ ಕಲಸಿಕೊಂಡು ದಪ್ಪಗಿನ ಪೇಸ್ಟ್ ಮಾಡಿ. ಇದನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಂಡು 20 ನಿಮಿಷ ಕಾಲ ಹಾಗೆ ಬಿಡಿ. ಒದ್ದೆ ಹತ್ತಿ ಉಂಡೆಯಿಂದ ಇದನ್ನು ತೆಗೆಯಿರಿ. ಹತ್ತಿ ಉಂಡೆಯಿಂದ ಮೇಲ್ಮುಖವಾಗಿ ತೆಗೆಯಿರಿ. ತಣ್ಣೀರಿನಿಂದ ಮುಖ ತೊಳೆಯಿರಿ.

ಕಾಂತಿಯುತ ಚರ್ಮಕ್ಕಾಗಿ

ಒಂದು ಚಮಚ ಕಡಲೆಹಿಟ್ಟು, ಒಂದು ಚಮಚ ಹಾಲಿನ ಕೆನೆ ಮತ್ತು ಒಂದು ಚಮಚ ಲಿಂಬೆರಸ ಹಾಕಿಕೊಂಡು ಪೇಸ್ಟ್ ಮಾಡಿ. ಮುಖವನ್ನು ರೋಸ್ ವಾಟರ್ ಹಾಕಿ ತೊಳೆಯಿರಿ. ಬಳಿಕ ಪೇಸ್ಟ್ ಹಚ್ಚಿಕೊಳ್ಳಿ. ಇದನ್ನು 15 ನಿಮಿಷ ಕಾಲ ಹಾಗೆ ಬಿಟ್ಟು ಬಳಿಕ ತೊಳೆಯಿರಿ. ಕಾಂತಿಯುತ ಚರ್ಮವನ್ನು ನಿಮ್ಮದಾಗಿಸಿಕೊಳ್ಳಲು ಇದು ಅತ್ಯುತ್ತಮವಾದ ಕಡಲೆಹಿಟ್ಟಿನ ಪ್ಯಾಕ್.

ಕಪ್ಪು ಕಲೆ ಮತ್ತು ಮೊಡವೆ ನಿವಾರಣೆಗೆ

ಹಣ್ಣು ಟೊಮೆಟೋವನ್ನು ಜಜ್ಜಿಕೊಂಡು ಅದಕ್ಕೆ ಒಂದು ಚಮಚ ಕಡಲೆಹಿಟ್ಟು ಮತ್ತು ಎರಡು ಚಮಚ ಅಲೋವೆರಾ ಲೋಳೆ ಹಾಕಿ ದಪ್ಪಗಿನ ಪೇಸ್ಟ್ ಮಾಡಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿಕೊಂಡು 30 ನಿಮಿಷ ಕಾಲ ಹಾಗೆ ಬಿಡಿ. ಇದು ಮೊಡವೆ, ಕಲೆ ನಿವಾರಣೆಗೆ ಅದ್ಭುತವಾದ ಫೇಸ್ ಪ್ಯಾಕ್.

ಮೊಡವೆ

ಮೊಡವೆ ನಿವಾರಿಸುವಲ್ಲಿ ಕಡಲೆಹಿಟ್ಟು ತುಂಬಾ ಪರಿಣಾಮಕಾರಿಯಾಗಲಿದೆ. ಒಂದು ಚಮಚ ಕಡಲೆಹಿಟ್ಟು, ಗಂಧದ ಹುಡಿ ಮತ್ತು ಹಾಲನ್ನು ಬೆರೆಸಿಕೊಳ್ಳಿ. ಇದಕ್ಕೆ ನೀರು ಸೇರಿಸಿ ಪೇಸ್ಟ್ ಮಾಡಿಕೊಳ್ಳಿ. ಇದನ್ನು ನಿಯಮಿತವಾಗಿ ಮುಖಕ್ಕೆ ಹಚ್ಚಿಕೊಳ್ಳಿ. ಒಂದು ಹಿಡಿಯಷ್ಟು ಅರಿಶಿನವನ್ನು ಇದಕ್ಕೆ ಸೇರಿಸಿಕೊಳ್ಳಬಹುದು. ಒಳ್ಳೆಯ ಫಲಿತಾಂಶ ಪಡೆಯಲು ನಿಯಮಿತವಾಗಿ ಇದನ್ನು ಬಳಸಿಕೊಳ್ಳಿ.

English summary

DIY Besan And Banana Face Pack For Soft Skin

If you want a soft and glowing skin, then try using besan along with one of the most humble fruit "Banana." Banana face mask helps to keep the skin smooth and soft. Bananas are rich in antioxidants, phytochemicals, and moisture that are great for the skin. It provides deep nourishment to the skin and smoothens rough and ageing skin. Bananas are great for all skin types. So, if you are looking to get a soft skin, then homemade banana and besan face pack is the best ingredient for your skin.
X
Desktop Bottom Promotion