For Quick Alerts
ALLOW NOTIFICATIONS  
For Daily Alerts

ಸುಂದರವಾಗಿ ಕಾಣಬೇಕೇ? 'ಬೀಟ್‌ರೂಟ್' ಫೇಸ್ ಪ್ಯಾಕ್ ಪ್ರಯತ್ನಿಸಿ

|

ಕತ್ತರಿಸಿದಾಗ ಒಸರುವ ಕೆಂಪು ಬಣ್ಣವನ್ನು ಇಷ್ಟಪಡದೇ ಹೆಚ್ಚಿನವರು ಬೀಟ್ರೂಟ್ ಪದಾರ್ಥಗಳನ್ನು ತಿನ್ನುವುದಕ್ಕೇ ಹೋಗುವುದಿಲ್ಲ. ಆದರೆ ಬೀಟ್ರೂಟ್ ಜ್ಯೂಸ್ ಅನ್ನು ಕುಡಿಯುವ ಮೂಲಕ ಹಲವಾರು ಪ್ರಯೋಜನಗಳನ್ನು ಪಡೆಯಬಹುದು. ವಿಶೇಷವಾಗಿ ಕರುಳುಗಳಲ್ಲಿನ ಕಲ್ಮಶಗಳನ್ನು ಹೊರಹಾಕುವುದು, ಜೀರ್ಣಕ್ರಿಯೆಯನ್ನು ಹೆಚ್ಚಿಸುವುದು ಇತ್ಯಾದಿ

ಆದರೆ ಈ ರಸಕ್ಕೆ ಮುಖದ ಸೌಂದರ್ಯವನ್ನೂ ಹೆಚ್ಚಿಸುವ ಗುಣವಿದೆ ಎಂದು ಹೆಚ್ಚಿನವರಿಗೆ ಗೊತ್ತಿಲ್ಲ. ಮುಖದ ಸೂಕ್ಷರಂಧ್ರಗಳನ್ನು ಕಿರಿದಾಗಿಸುವುದು, ಚರ್ಮಕ್ಕೆ ಆರ್ದ್ರತೆಯನ್ನು ನೀಡುವ ಮೂಲಕ ಕಾಂತಿಯನ್ನು ಹೆಚ್ಚಿಸುವುದು ಮೊದಲಾದವುಗಳ ಮೂಲಕ ಮುಖದ ಸೂಕ್ಷ್ಮ ಚರ್ಮಕ್ಕೆ ಹೆಚ್ಚಿನ ಆರೈಕೆಯನ್ನು ನೀಡುತ್ತದೆ.

ಬೀಟ್ರೂಟ್‌ನಲ್ಲಿ ಬ್ಯಾಕ್ಟೀರಿಯಾ ನಿವಾರಕ ಗುಣವಿದ್ದು ವಿಶೇಷವಾಗಿ ಉರಿಯೂತವನ್ನು ನಿವಾರಿಸುವ ಕ್ಷಮತೆ ಹೊಂದಿದೆ. ವಿಶೇಷವಾಗಿ ಮುಖದ ಚರ್ಮದ ಅಡಿಯಲ್ಲಿ ಬೀಡು ಬಿಟ್ಟಿರುವ ಬ್ಯಾಕ್ಟೀರಿಯಾಗಳನ್ನು ಒದ್ದು ಹೊರಹಾಕಿ ಇವು ಹಾನಿಗೊಳಿಸಿದ್ದ ಚರ್ಮಕ್ಕೆ ಹೊಸ ಕಳೆಯನ್ನು ನೀಡುತ್ತದೆ. ಅಷ್ಟೇ ಅಲ್ಲ, ಇದರಲ್ಲಿರುವ ವಿಟಮಿನ್ ಸಿ ದೇಹದಲ್ಲಿರುವ ಕ್ಯಾನ್ಸರ್ ಕಾರಕ ಫ್ರೀ ರ್‍ಯಾಡಿಕಲ್ ಎಂಬ ಕಣಗಳನ್ನು ನಿಷ್ಟೇಷ್ಟಿತಗೊಳಿಸುವ ಮೂಲಕ ಚರ್ಮಕ್ಕೆ ಹಾನಿಯಾಗುವುದನ್ನು ತಪ್ಪಿಸುತ್ತದೆ ಹಾಗೂ ಸತ್ತ ಜೀವಕೋಶಗಳನ್ನು ನಿವಾರಿಸುತ್ತದೆ. ಅಲ್ಲದೇ ಹಳೆಯ ಮೊಡವೆಗಳ ಕಲೆಯನ್ನು ತಿಳಿಗೊಳಿಸಿ ಸಹಜವರ್ಣ ಪಡೆಯಲು ನೆರವಾಗುತ್ತದೆ.

ಬೀಟ್‌ರೂಟ್‌- ಬಣ್ಣ ಕೆಂಪಾಗಿರಬಹುದು, ಆದರೆ ಪವರ್ ಜಬರ್ದಸ್ತ್!

ಒಂದು ವೇಳೆ ಮೇಕಪ್ ಇಲ್ಲದೆಯೇ ನಿಮ್ಮ ಚರ್ಮ ಕೋಮಲವಾಗಿ ಗುಲಾಬಿ ಬಣ್ಣದಿಂದ ಕಂಗೊಳಿಸಬೇಕು ಎಂದಿದ್ದರೆ ಕೆಳಗೆ ನೀಡಿರುವ ಮುಖಲೇಪಗಳಲ್ಲಿ ನಿಮಗೆ ಸೂಕ್ತವೆನಿಸಿದ್ದನ್ನು ಆಯ್ದುಕೊಂಡು ನಿಯಮಿತವಾಗಿ ಅನುಸರಿಸುತ್ತಾ ಬಂದರೆ ಅದ್ಭುತ ಪರಿಣಾಮಗಳನ್ನು ಪಡೆಯಬಹುದು. ಆದರೆ ಇದರ ಪೂರ್ಣ ಪರಿಣಾಮ ಪಡೆಯಲು ನಿತ್ಯವೂ ಕೊಂಚ ಬೀಟ್ರೂಟ್ ರಸವನ್ನು ಸೇವಿಸುವುದೂ ಅಗತ್ಯ....

ತಕ್ಷಣದ ಕಾಂತಿಯುತವಾದ ತ್ವಚೆಗೆ

ತಕ್ಷಣದ ಕಾಂತಿಯುತವಾದ ತ್ವಚೆಗೆ

*2 ಟೇಬಲ್ ಚಮಚ ಬೀಟ್‍ರೂಟ್ ರಸಕ್ಕೆ ಒಂದು ಟೀಚಮಚ ಜೇನುತುಪ್ಪವನ್ನು ಸೇರಿಸಿ, ಮಿಶ್ರಗೊಳಿಸಿ.

*ಮಿಶ್ರಣವನ್ನು ಒಂದು ಕಾಟನ್ ಬಾಲ್‍ನಿಂದ ಮುಖಕ್ಕೆ ಅನ್ವಯಿಸಿ.

*15-20 ನಿಮಿಷದ ಬಳಿಕ ಶುದ್ಧವಾದ ಒದ್ದೆ ಟವೆಲ್‍ನಿಂದ ಸ್ವಚ್ಛಗೊಳಿಸಿ.

ಬಿಳಿಯ ತ್ವಚೆಗೆ

ಬಿಳಿಯ ತ್ವಚೆಗೆ

*1 ಟೇಬಲ್ ಚಮಚ ಕಡ್ಲೇ ಹಿಟ್ಟು, 1 ಟೇಬಲ್ ಚಮಚ ಬೀಟ್ರೂಟ್ ರಸ ಮತ್ತು 1 ಟೇಬಲ್ ಚಮಚ ಮೊಸರನ್ನು ಸೇರಿಸಿ, ಮಿಶ್ರಗೊಳಿಸಿ.

*ಮಿಶ್ರಣಕ್ಕೆ ಗುಲಾಬಿ ಎಸಳನ್ನು ಸೇರಿಸಿ, ಮುಖ ಹಾಗೂ ಕತ್ತಿನ ಭಾಗಕ್ಕೆ ಅನ್ವಯಿಸಿ.

*30 ನಿಮಿಷಗಳ ಕಾಲ ಆರಲು ಬಿಡಿ. ನಂತರ ಸೌಮ್ಯವಾದ ನೀರಿನಿಂದ ಸ್ವಚ್ಛಗೊಳಿಸಿ.

ಬ್ಲೆಮಿಷ್ ಮಾಸ್ಕ್

ಬ್ಲೆಮಿಷ್ ಮಾಸ್ಕ್

*1 ಟೇಬಲ್ ಚಮಚ ಜೇಡಿ ಮಣ್ಣಿಗೆ ಬೀಟ್ರೂಟ್ ರಸವನ್ನು ಸೇರಿಸಿ, ಮಿಶ್ರಗೊಳಿಸಿ.

*ಮಿಶ್ರಣವನ್ನು ಮುಖ ಹಾಗೂ ಕತ್ತಿನ ಭಾಗಕ್ಕೆ ಅನ್ವಯಿಸಿ.

*ಮುಖವಾಡವು ಸಂಪೂರ್ಣವಾಗಿ ಒಣಗಿದ ನಂತರ ಸೌಮ್ಯವಾದ ನೀರಿನಿಂದ ಸ್ವಚ್ಛಗೊಳಿಸಿ.

ಕಪ್ಪು ವರ್ತುಲ ನಿವಾರಣೆಗೆ

ಕಪ್ಪು ವರ್ತುಲ ನಿವಾರಣೆಗೆ

*1 ಟೀಚಮಚ ಬೀಟ್ರೂಟ್ ರಸಕ್ಕೆ ಕೆಲವು ಹನಿ ಬಾದಾಮಿ ಎಣ್ಣೆಯನ್ನು ಸೆರಿಸಿ, ಮಿಶ್ರಗೊಳಿಸಿ.

*ಮಿಶ್ರಣವನ್ನು ಕಣ್ಣಿನ ಕೆಳಭಾಗ ಹಾಗೂ ಪೀಡಿತ ಪ್ರದೇಶಗಳಿಗೆ ಅನ್ವಯಿಸಿ, ಮೃದುವಾಗಿ ಮಸಾಜ್ ಮಾಡಿ.

*30 ನಿಮಿಷಗಳ ಬಳಿಕ ಒದ್ದೆಯಾದ ಟವೆಲ್‍ನಿಂದ ಸ್ವಚ್ಛಗೊಳಿಸಿ.

ತುಟಿಗಳ ಆಕರ್ಷಣೆಗೆ

ತುಟಿಗಳ ಆಕರ್ಷಣೆಗೆ

*ಒಂದು ಟೇಬಲ್ ಚಮಚ ಬೀಟ್ರೂಟ್ ರಸವನ್ನು ಫ್ರಿಜ್‍ನಲ್ಲಿ 30 ನಿಮಿಷಗಳ ಕಾಲ ಇಟ್ಟು ತಂಪಾಗಿಸಿ.

*ಮಲಗುವ ಮುನ್ನ ಈ ತಂಪಾದ ರಸವನ್ನು ತುಟಿಗೆ ಅನ್ವಯಿಸಿ, ರಾತ್ರಿ ಹಾಗೆ ತುಟಿಯ ಮೇಲೆ ಇರಿಸಿ ಮಲಗಿ.

*ಮುಂಜಾನೆ ಒದ್ದೆ ಟವೆಲ್‍ನಿಂದ ಸ್ವಚ್ಛಗೊಳಿಸಿ.

*ನಿತ್ಯವೂ ಈ ಕ್ರಮವನ್ನು ಅನ್ವಯಿಸುವುದರಿಂದ ಉತ್ತಮ ಫಲಿತಾಂಶವನ್ನು ಪಡೆಯಬಹುದು.

ಒಣಗಿದ ತ್ವಚೆಗೆ

ಒಣಗಿದ ತ್ವಚೆಗೆ

*1 ಟೀಚಮಚ ಹಾಲಿಗೆ 1 ಟೀಚಮಚ ಬೀಟ್ರೂಟ್ ರಸ ಮತ್ತು ಕೆಲವು ಹನಿ ಬಾದಾಮಿ ಎಣ್ಣೆಯನ್ನು ಸೇರಿಸಿ, ಮಿಶ್ರಗೊಳಿಸಿ.

*ಮಿಶ್ರಣವನ್ನು ಮುಖ ಹಾಗೂ ಕತ್ತಿಗೆ ಅನ್ವಯಿಸಿ, 5 ನಿಮಿಷ ಮಸಾಜ್ ಮಾಡಿ.

*10 ನಿಮಿಷಗಳ ಬಳಿಕ ಮುಖವನ್ನು ಸ್ವಚ್ಛಗೊಳಿಸಿ.

ಎಣ್ಣೆಯುಕ್ತ ತ್ವಚೆಗೆ

ಎಣ್ಣೆಯುಕ್ತ ತ್ವಚೆಗೆ

*ಅರ್ಧ ಬೀಟ್ರೂಟ್‍ಅನ್ನು ಚಿಕ್ಕದಾಹಿ ಹೆಚ್ಚಿಕೊಂಡು, ಬೇಯಿಸಿಕೊಳ್ಳಿ. ಬಳಿಕ ಮೃದುವಾದ ಪೇಸ್ಟ್ ನಂತೆ ಮಾಡಿ.

* ಬೀಟ್ರೂಟ್ ಪೇಸ್ಟ್‍ಗೆ 1 ಟೇಬಲ್ ಚಮಚ ಮುಲ್ತಾನಿ ಮಣ್ಣನ್ನು ಸೆರಿಸಿ, ಮಿಶ್ರಗೊಳಿಸಿ.

*ಮಿಶ್ರಣವನ್ನು ಮುಖ ಹಾಗೂ ಕತ್ತಿಗೆ ಅನ್ವಯಿಸಿ.

*ಸಂಪೂರ್ಣವಾಗಿ ಒಣಗಿದ ನಂತರ ಸೌಮ್ಯವಾದ ನೀರಿನಿಂದ ಸ್ವಚ್ಛಗೊಳಿಸಿ.

ಕಾಂತಿಯುತ ತ್ವಚೆಗೆ

ಕಾಂತಿಯುತ ತ್ವಚೆಗೆ

*ಒಂದು ಭಾಗ ಬೀಟ್ರೂಟ್ ರಸಕ್ಕೆ ಒಂದು ಭಾಗ ಕಿತ್ತಳೆ ರಸವನ್ನು ಸೆರಿಸಿ, ಮಿಶ್ರಗೊಳಿಸಿ.

*ಮಿಶ್ರಣವನ್ನು ಒಂದು ಕಾಟನ್ ಬಾಲ್‍ನಿಂದ ಮುಖಕ್ಕೆ ಅನ್ವಯಿಸಿ.

*15-20 ನಿಮಿಷದ ಬಳಿಕ ಶುದ್ಧವಾದ ನೀರಿನಿಂದ ಸ್ವಚ್ಛಗೊಳಿಸಿ.

ಡಿ-ಟ್ಯಾನಿಂಗ್ ಫೇಸ್ ಪ್ಯಾಕ್

ಡಿ-ಟ್ಯಾನಿಂಗ್ ಫೇಸ್ ಪ್ಯಾಕ್

*1 ಟೇಬಲ್ ಚಮಚ ಬೀಟ್ರೂಟ್ ರಸಕ್ಕೆ 1 ಟೇಬಲ್ ಚಮಚ ಹುಳಿಯಾದ ಕೆನೆಯನ್ನು ಸೇರಿಸಿ, ಮಿಶ್ರಗೊಳಿಸಿ.

*ಮಿಶ್ರಣವನ್ನು ಮುಖ ಹಾಗೂ ಕತ್ತಿಗೆ ಅನ್ವಯಿಸಿ.

*30 ನಿಮಿಷಗಳ ಕಾಲ ಆರಲು ಬಿಡಿ. ನಂತರ ಸ್ವಚ್ಛವಾದ ನೀರಿನಿಂದ ತೊಳೆಯಿರಿ.

*ವಾರಕ್ಕೆ 2 ಬಾರಿ ಈ ಕ್ರಮವನ್ನು ಅನ್ವಯಿಸುವುದರಿಂದ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಬಹುದು.

ಟೋನರ್ ಆಗಿ

ಟೋನರ್ ಆಗಿ

*1 ಟೇಬಲ್ ಚಮಚ ಬೀಟ್ರೂಟ್ ರಸ, 1 ಟೇಬಲ್ ಚಮಚ ಎಲೆಕೋಸಿನ ರಸ ಮತ್ತು 1 ಟೇಬಲ್ ಚಮಚ ಗುಲಾಬಿ ನೀರನ್ನು ಸೇರಿಸಿ, ಮಿಶ್ರಗೊಳಿಸಿ.

*ಮಿಶ್ರಣವನ್ನು ಐಸ್ ಟ್ರೇಯಲ್ಲಿ ಹಾಕಿ ಫ್ರಿಜ್‍ನಲ್ಲಿ ಘನೀಕರಿಸಿ.

*ಐಸ್ ಕ್ಯೂಬ್ ಆದ ಮಿಶ್ರಣವನ್ನು ತೆಗೆದುಕೊಂಡು ಮುಖ ಹಾಗೂ ಕತ್ತಿನ ಭಾಗಕ್ಕೆ ಮಸಾಜ್ ಮಾಡಿ.

*ತ್ವಚೆಯು ಸ್ವಚ್ಛ ಹಾಗೂ ತಾಜಾತನದಿಂದ ಕೂಡಿರುವಂತೆ ಕಂಗೊಳಿಸುವುದು.

English summary

DIY Beetroot Face Mask Recipes For That Rosy Glow!

Mix 1 tablespoon of multani mitti to the paste and mix until you get a smooth consistency. Apply a thin coat to your face and neck. Let it sit till completely dry and then rinse the beetroot mask for oily skin with plain water. Mix 1 part beetroot juice and 1 part orange juice together.
X
Desktop Bottom Promotion