Latest Updates
-
ವಿಶ್ವ ಸಿಂಹ ದಿನ: ಸಿಂಹದಂತೆ ಗರ್ಜಿಸುವ ಶಕ್ತಿ ಪಡೆಯಲು 10 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ಸೂರ್ಯಗ್ರಹಣದ ಗೊಂದಲ: ಹಿರಿಯರ ನಂಬಿಕೆಗಳ ನಡುವೆ ಯುವ ದಂಪತಿಗಳು ಶಾಂತಿ ಕಾಪಾಡುವುದು ಹೇಗೆ? -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ನಿಮ್ಮ ಬಾಲ್ಕನಿಯಲ್ಲಿಯೇ ಸೃಷ್ಟಿಸಿ ಹಸಿರು ಸ್ವರ್ಗ! -
ಕೇರಳದ ಉಚಿತ ಓಣಂ ಕಿಟ್: ದಿನಸಿ ಪದಾರ್ಥಗಳು ಹಾಳಾಗದಂತೆ ಇಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಆಗಸ್ಟ್ ಕ್ರಾಂತಿ ದಿನ: ಸೋಶಿಯಲ್ ಮೀಡಿಯಾದಲ್ಲಿ ದೇಶಭಕ್ತಿ ಮೆರೆಯಲು ಇಲ್ಲಿದೆ ಬೆಸ್ಟ್ ಐಡಿಯಾಸ್! -
ಮಳೆಗಾಲದ ಓಟದ ನಂತರ ಕಾಲು ನೋವೇ? ಕೀಲುಗಳ ರಕ್ಷಣೆಗೆ ಈ 12 ನಿಮಿಷದ ಸರಳ ವ್ಯಾಯಾಮಗಳು -
ಶ್ರಾವಣ ಶಿವರಾತ್ರಿ 2026: ಮಳೆಗಾಲದಲ್ಲಿ ಜಾಗರಣೆ ಮಾಡುವಾಗ ಈ ಮುನ್ನೆಚ್ಚರಿಕೆ ಮರೆಯದಿರಿ, ಪೂಜೆ ಸುಗಮವಾಗಲಿ! -
ಬೆಂಗಳೂರಿನ ಹೈ-ಎಂಡ್ ಹೋಟೆಲ್ಗಳಲ್ಲಿ ಕೊಳೆತ ಆಹಾರ: ನೀವು ತಿನ್ನುವ ಊಟ ನಿಜಕ್ಕೂ ಸುರಕ್ಷಿತವೇ? -
2026ರ ಫ್ರೀಡಂ ಸೇಲ್: ಆನ್ಲೈನ್ ಶಾಪಿಂಗ್ನಲ್ಲಿ ಹಣ ಉಳಿಸಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದಲ್ಲಿ ಟಾಟಾ ಮುಂಬೈ ಮ್ಯಾರಥಾನ್ 2027 ತಯಾರಿ: ಸುರಕ್ಷಿತವಾಗಿ ಓಡಲು 14 ನಿಮಿಷಗಳ ಬೆಸ್ಟ್ ವರ್ಕೌಟ್ ಟಿಪ್ಸ್
ವಯಸ್ಸಾಗುವ ಲಕ್ಷಣಗಳನ್ನು ತಡೆಯಲು ಸರಳ ಮನೆಮದ್ದು-ಪ್ರಯತ್ನಿಸಿ ನೋಡಿ
ವಯಸ್ಸಾಗುತ್ತಾ ಹೋದಂತೆ ಚರ್ಮದಲ್ಲಿ ನೆರಿಗೆ, ಚರ್ಮ ಜೋತು ಬೀಳುವುದು ಇತ್ಯಾದಿಗಳು ಸಾಮಾನ್ಯವಾಗಿರುವುದು. ಕೆಲವರಲ್ಲಿ ಇದು ಅಕಾಲಿಕವಾಗಿಯೂ ಕಾಣಿಸಿಕೊಳ್ಳಬಹುದು. ನೆರಿಗೆ ಇತ್ಯಾದಿ ಸಮಸ್ಯೆಗಳಿಂದ ಸೌಂದರ್ಯವು ಕೆಡುವುದು ಮಾತ್ರವಲ್ಲದೆ, ನೀವು ತುಂಬಾ ವಯಸ್ಸಾದವಂತೆ ಕಾಣುವಿರಿ. ಇಂತಹ ಸಂದರ್ಭದಲ್ಲಿ ಓಡಿ ಹೋಗಿ ಮೆಡಿಕಲ್ ನಿಂದ ಕ್ರೀಮ್ ತಂದು ಹಚ್ಚಿಕೊಳ್ಳಬಹುದು.
ಆದರೆ ಇದರಲ್ಲಿ ಹಾನಿಕಾರಕವಾಗಿರುವಂತಹ ರಾಸಾಯನಿಕಗಳು ಕೂಡ ಇರುವುದರಿಂದ ಇದು ಚರ್ಮಕ್ಕೆ ಸಮಸ್ಯೆಯನ್ನು ಉಂಟು ಮಾಡಬಹುದು. ಹಣ ವ್ಯಯಿಸಿದರೂ ವಯಸ್ಸಾಗುವ ಲಕ್ಷಣಗಳನ್ನು ತಡೆಯಲು ಸಾಧ್ಯವಾಗದೆ ಇರುವಾಗ ಮುಖ್ಯವಾಗಿ ಕೆಲವೊಂದು ಮನೆಮದ್ದುಗಳನ್ನು ಬಳಸಿಕೊಳ್ಳುವುದು. ಈ ಲೇಖನದಲ್ಲಿ ನೀವು ಮನೆಮದ್ದನ್ನು ಯಾವ ರೀತಿ ಬಳಸಿಕೊಳ್ಳಬಹುದು ಎಂದು ತಿಳಿಯುವ.

ಬೇಕಾಗುವ ಸಾಮಗ್ರಿಗಳು
*20 ಮಿ.ಲೀ. ತೆಂಗಿನೆಣ್ಣೆ
*5 ಮಿ.ಲೀ. ವಿಟಮಿನ್ ಇ ತೈಲ
*30 ಮಿ.ಲೀ. ಜೇನಿನ ಮೇಣ
*ಕೆಲವು ಹನಿ ಸಾರಭೂತ ತೈಲ

ತಯಾರಿಸುವುದು ಹೇಗೆ
*ವಯಸ್ಸಾಗುವ ಲಕ್ಷಣ ತಡೆಯುವ ಕ್ರೀಮ್ ಮಾಡಲು ಮೊದಲ ಹಂತವಾಗಿ ತೆಂಗಿನೆಣ್ಣೆ ಮತ್ತು ಜೇನಿನ ಮೇಣವನ್ನು ಮಿಶ್ರಣ ಮಾಡಿಕೊಂಡು ಎರಡು ಸಲ ಕುದಿಸಿ.
*ಮರದ ಸೌಟು ಬಳಸಿಕೊಂಡು ಇದನ್ನು ಮಿಶ್ರಣ ಮಾಡಿಕೊಳ್ಳಿ.
*ಈಗ ಬಿಸಿಯಿಂದ ತೆಗೆದು, ತಕ್ಷಣ ವಿಟಮಿನ್ ಇ ತೈಲ ಮತ್ತು ನಿಮ್ಮ ಆಯ್ಕೆಯ ಯಾವುದೇ ಸಾರಭೂತ ತೈಲ ಹಾಕಿಕೊಳ್ಳಿ.
*ಈ ಮಿಶ್ರಣವು ತಣ್ಣಗಾಗಲಿ ಮತ್ತು ಗಾಜಿನ ಡಬ್ಬದಲ್ಲಿ ಹಾಕಿಡಿ.
*ಇದನ್ನು ನೀವು ಹೆಚ್ಚಿನ ಬಳಕೆಗೆ ಫ್ರಿಡ್ಜ್ ನಲ್ಲೂ ಇಡಬಹುದು.
*ಈ ಕ್ರೀಮ್ ತೆಳುವಾಗಿ ಬೇಕಿದ್ದರೆ ಆಗ ನೀವು ಇದಕ್ಕೆ ಸ್ವಲ್ಪ ತೆಂಗಿನೆಣ್ಣೆ ಹೆಚ್ಚು ಹಾಕಿ ಮತ್ತು ಬಳಸಿ.

ಹಚ್ಚಿಕೊಳ್ಳುವುದು ಹೇಗೆ?
ಈ ಮಿಶ್ರಣವನ್ನು ಪಡೆಯಿರಿ ಮತ್ತು ಅದನ್ನು ನಿಮ್ಮ ಚರ್ಮದ ಮೇಲೆ ವೃತ್ತಾಕಾರದಲ್ಲಿ ಕೆಲವು ನಿಮಿಷ ಕಾಲ ಮಸಾಜ್ ಮಾಡಿಕೊಳ್ಳಿ. ಪ್ರತಿನಿತ್ಯ ಮಲಗುವ ಮೊದಲು ನೀವು ಇದನ್ನು ಹಚ್ಚಿಕೊಂಡ ಬಳಿಕ ರಾತ್ರಿಯಿಡಿ ಹಾಗೆ ಬಿಡಿ. ನಿಯಮಿತವಾಗಿ ಬಳಕೆ ಮಾಡಿದರೆ ಅದರಿಂದ ಒಳ್ಳೆಯ ಫಲಿತಾಂಶ ಪಡೆಯಬಹುದು.

ತೆಂಗಿನೆಣ್ಣೆ
ಕಾಸ್ಮೆಟಿಕ್ ಉತ್ಪನ್ನಗಳಲ್ಲಿ ಬಳಸುವಂತಹ ಹಲವಾರು ರೀತಿಯ ಗುಣಗಳು ತೆಂಗಿನೆಣ್ಣೆಯಲ್ಲಿ ಇದೆ. ಇದು ಚರ್ಮಕ್ಕೆ ತೇವಾಂಶ ನೀಡುವುದು, ಚರ್ಮವನ್ನು ಮೊಶ್ಚಿರೈಸ್ ಮತ್ತು ನಯವಾಗಿಡುವುದು. ಇದರ ಚರ್ಮದಲ್ಲಿ ತಾಜಾ ಸುವಾಸನೆ ಉಂಟು ಮಾಡುವುದು. ಇದರಲ್ಲಿ ಇರುವಂತಹ ಶಿಲೀಂಧ್ರ ವಿರೋಧಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ತೆಂಗಿನೆಣ್ಣೆಯು ಚರ್ಮವನ್ನು ಎಲ್ಲಾ ರೀತಿಯ ಸೋಂಕಿನಿಂದ ರಕ್ಷಿಸುವುದು.

ಜೇನಿನ ಮೇಣ
ಕ್ರೀಮ್ ನಲ್ಲಿ ಬಳಸುವ ಮತ್ತೊಂದು ಸಾಮಗ್ರಿಯೇ ಜೇನಿನ ಮೇಣ. ಇದು ಚರ್ಮದಲ್ಲಿರುವ ಯಾವುದೇ ರೀತಿಯ ಕೊಳೆ ಮತ್ತು ಕಲ್ಮಷವನ್ನು ತೆಗೆದುಹಾಕಿ ಚರ್ಮವು ಆರೋಗ್ಯಕರ ಹಾಗೂ ಶುದ್ಧವಾಗಿರುವಂತೆ ಮಾಡುವುದು. ಜೇನಿನ ಮೇಣವು ಕ್ರೀಮ್ ನ್ನು ದಪ್ಪ ಮಾಡುವುದು. ತೆಂಗಿನೆಣ್ಣೆಯು ಕೋಣೆಯ ತಾಪಮಾನದಲ್ಲಿ ದ್ರವ ರೂಪಕ್ಕೆ ಬರುವ ಕಾರಣದಿಂದ ಜೇಣಿನ ಮೇಣವನ್ನು ಇದಕ್ಕೆ ಹಾಕಲಾಗುತ್ತದೆ.

ವಿಟಮಿನ್ ಇ ತೈಲ
ವಿಟಮಿನ್ ಇ ತೈಲವನ್ನು ಸಾಮಾನ್ಯವಾಗಿ ಕ್ಯಾಪ್ಸೂಲ್ ಗಳ ರೂಪದಲ್ಲಿ ತೆಗೆದುಕೊಳ್ಳಲಾಗುತ್ತದೆ. ಇದನ್ನು ಹಚ್ಚಿಕೊಳ್ಳುವುದರಿಂದ ಚರ್ಮಕ್ಕೂ ಲಾಭವಿದೆ ಎಂದು ನಿಮಗೆ ತಿಳಿದಿದೆಯಾ? ವಿಟಮಿನ್ ಇ ತೈಲದಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಗುಣವು ಫ್ರೀ ರ್ಯಾಡಿಕಲ್ ವಿರುದ್ಧ ರಕ್ಷಣೆ ನೀಡುವುದು ಮತ್ತು ಚರ್ಮವು ಪುನಶ್ಚೇತನ ಪಡೆಯಲು ನೆರವಾಗುವುದು. ವಿಟಮಿನ್ ಇ ತೈಲವನ್ನು ನೇರವಾಗಿ ಅಥವಾ ಕ್ಯಾಪ್ಸೂಲ್ ಗಳಿಂದ ತೆಗೆದು ಬಳಸಬಹುದು. ಎರಡು ಬದಿಯಿಂದಲೂ ಇದು ತುಂಬಾ ಪರಿಣಾಮಕಾರಿ.



Click it and Unblock the Notifications