For Quick Alerts
ALLOW NOTIFICATIONS  
For Daily Alerts

ಬರೀ ಏಳೇ ದಿನಗಳಲ್ಲಿ ಬೆಳ್ಳಗಾಗುವಿರಿ! ಇಲ್ಲಿದೆ ನೋಡಿ ಸರಳ ಮನೆಮದ್ದುಗಳು

By Deepu
|

ಬೇಸಿಗೆಯ ದಿನಗಳು ಪ್ರಾರಂಭವಾಗಿವೆ. ಈ ಸಮಯದಲ್ಲಿ ಪ್ರಖರ ಬಿಸಿಲು, ಸೆಖೆ, ಧೂಳಿನಿಂದ ತ್ವಚೆಯನ್ನು ಕಾಪಾಡಲು ಕೆಲವು ನೈಸರ್ಗಿಕ ಪ್ರಸಾದನಗಳನ್ನು ಬಳಸುವುದು ಅಗತ್ಯವಾಗಿದ್ದು ಇಂತಹ ಒಂದು ಮುಖ್ಯ ವಿಧಾನವನ್ನು ಇಂದು ವಿವರಿಸಲಾಗಿದೆ. ಮಾರುಕಟ್ಟೆಯಲ್ಲಿ ಬಿಸಿಲಿನ ಝಳದಿಂದ ಪಾರಾಗಲು ನೂರಾರು ರಾಸಾಯನಿಕ ಆಧಾರಿತ ದುಬಾರಿ ಪ್ರಸಾಧನಗಳಿವೆ ಆದರೆ ಇವು ಒಳ್ಳೆಯದು ಮಾಡುವುದಕ್ಕಿಂತ ಅಡ್ಡಪರಿಣಾಮಗಳ ಮೂಲಕ ದೀರ್ಘಕಾಲದಲ್ಲಿ ಕೆಡುಕು ಮಾಡುವುದೇ ಹೆಚ್ಚು.

ವಿಶೇಷವಾಗಿ ಮುಖಚ ಕೋಮಲ ತ್ವಚೆಗೆ ಇವು ಹೆಚ್ಚಿನ ಕೆಡುಕನ್ನುಂಟುಮಾಡಬಹುದು. ಆದ್ದರಿಂದ ನಮ್ಮ ಅಡುಗೆಮನೆಯಲ್ಲಿ ಸುಲಭವಾಗಿ ಲಭಿಸುವ ನೈಸರ್ಗಿಕ ಸಾಮಾಗ್ರಿಗಳೇ ತ್ವಚೆಗೆ ಸುರಕ್ಷಿತವಾಗಿದ್ದು ಯಾವುದೇ ಅಡ್ಡಪರಿಣಾಮಗಳಿರುವುದಿಲ್ಲ. ಆದಾಗ್ಯೂ ಮನೆಯಲ್ಲೇ ಬಳಸಬಹುದಾದ ಕೆಲವೊಂದು ಸೌಂದರ್ಯ ಉತ್ಪನ್ನಗಳನ್ನು ಬಳಸಿಕೊಂಡು ನಿಮ್ಮ ಮುಖದ ಅಂದವನ್ನು ಎದ್ದುಗಾಣಿಸಬಹುದು ಹಾಗೂ ತಿಳಿಯಾದ ತ್ವಚೆಯನ್ನು ನಳನಳಿಸುವಂತೆ ಮಾಡಬಹುದು. ಬಿಸಿಲು ಇಲ್ಲವೇ ಹೆಚ್ಚಿನ ರಾಸಾಯನಿಕ ಬಳಕೆಯಿಂದ ನಿಮ್ಮ ತ್ವಚೆಯು ಕಳೆಗುಂದಬಹುದು. ಮನೆಯಲ್ಲೇ ಕೆಲವೊಂದು ಉತ್ಪನ್ನಗಳನ್ನು ಬಳಸಿಕೊಂಡು ಮುಖದ ಕಾಂತಿಯನ್ನು ಪುನರುಜ್ಜೀವನಗೊಳಿಸಬಹುದು. ಬನ್ನಿ ಆ ಸಲಹೆಗಳೇನು ಎಂಬುದನ್ನು ನಾವು ಇಂದಿನ ಲೇಖನದಲ್ಲಿ ಅರಿತುಕೊಳ್ಳೋಣ....

ಅಕ್ಕಿ ಹಿಟ್ಟು ಮತ್ತು ಹಾಲಿನ ಫೇಸ್ ಪ್ಯಾಕ್

ಅಕ್ಕಿ ಹಿಟ್ಟು ಮತ್ತು ಹಾಲಿನ ಫೇಸ್ ಪ್ಯಾಕ್

ಅಕ್ಕಿ ಹಿಟ್ಟು ಉತ್ಕರ್ಷಣ ನಿರೋಧ ಲಕ್ಷಣಗಳನ್ನು ಒಳಗೊಂಡಿದ್ದು ಇದು ತ್ವಚೆಯನ್ನು ಬಿಳಿಯಾಗಿಸುತ್ತದೆ ಮತ್ತು ತ್ವಚೆಯನ್ನು ಮೃದುವಾಗಿಸುತ್ತದೆ ಅಕ್ಕಿ ಹಿಟ್ಟಿನೊಂದಿಗೆ ನೀವು ಹಾಲನ್ನು ಬಳಸಿಕೊಂಡು ಮುಖದ ಕಾಂತಿಯನ್ನು ಇನ್ನಷ್ಟು ದುಪ್ಪಟ್ಟುಗೊಳಿಸಬಹುದು.

ಸಾಮಾಗ್ರಿಗಳು

3 ಚಮಚ ಅಕ್ಕಿಹುಡಿ

2-3 ಚಮಚ ಹಾಲು

ವಿಧಾನ

1. ಒಂದು ಪಾತ್ರೆಯಲ್ಲಿ ಅಕ್ಕಿ ಹಿಟ್ಟು ಮತ್ತು ಹಾಲನ್ನು ತೆಗೆದುಕೊಳ್ಳಿ ಇದನ್ನು ನುಣ್ಣಗಿನ ಪೇಸ್ಟ್ ಅನ್ನಾಗಿ ಮಾಡಿಕೊಳ್ಳಿ. ಇದಕ್ಕೆ ಬೇಕಾದಷ್ಟು ಹಾಲು ಸೇರಿಸಿಕೊಳ್ಳಿ

2. ನಿಮ್ಮ ಮುಖಕ್ಕೆ ಈ ಪ್ಯಾಕ್ ಅನ್ನು ಹಚ್ಚಿಕೊಳ್ಳಿ

3. 20-30 ನಿಮಿಷ ಹಾಗೆಯೇ ಬಿಡಿ

4. ನಂತರ ತಣ್ಣಗಿನ ನೀರಿನಿಂದ ಮುಖವನ್ನು ತೊಳೆದುಕೊಳ್ಳಿ.

ಉತ್ತಮ ಫಲಿತಾಂಶಕ್ಕಾಗಿ ಈ ಫೇಸ್ ಪ್ಯಾಕ್ ಅನ್ನು ವಾರಕ್ಕೆ ಮೂರು ಬಾರಿ ಬಳಸಿ.

ಆಲೂಗಡ್ಡೆ ಜ್ಯೂಸ್

ಆಲೂಗಡ್ಡೆ ಜ್ಯೂಸ್

ಆಲೂಗಡ್ಡೆಯು ಉತ್ಕರ್ಷಣ ನಿರೋಧಿ ಅಂಶಗಳನ್ನು ಒಳಗೊಂಡಿದ್ದು ನಿಮ್ಮ ಮೃತಕೋಶಗಳನ್ನು ಪುನರುಜ್ಜೀವನಗೊಳಿಸುವಲ್ಲಿ ಇದು ನೆರವಾಗಲಿದೆ. ಮೃದುವಾದ ಬ್ಲೀಚಿಂಗ್ ಸಾಮಾಗ್ರಿಯನ್ನು ಆಲೂಗಡ್ಡೆ ಹೊಂದಿದೆ.

ಸಾಮಾಗ್ರಿ:

ಆಲೂಗಡ್ಡೆ

ವಿಧಾನ

1. ಆಲೂಗಡ್ಡೆಯನ್ನು ಸಣ್ಣ ತುಂಡುಗಳನ್ನಾಗಿ ಮಾಡಿಕೊಳ್ಳಿ

2. ಆಲೂಗಡ್ಡೆಯನ್ನು ತುರಿದು ಅದರ ರಸವನ್ನು ಸಂಗ್ರಹಿಸಿ

3. ಹತ್ತಿಯ ಉಂಡೆಯನ್ನು ಈ ದ್ರಾವಣದಲ್ಲಿ ಅದ್ದಿಕೊಂಡು ನಿಮ್ಮ ಮುಖಕ್ಕೆ ಹಚ್ಚಿ

4. 15-20 ನಿಮಿಷ ಹಾಗೆಯೇ ಬಿಡಿ

5. ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ.

ಮುಖವನ್ನು ತೊಳೆದ ನಂತರ ಮಾಯಿಶ್ಚರೈಸರ್ ಅನ್ನು ಹಚ್ಚಿಕೊಳ್ಳಿ ಈ ಪ್ರಕ್ರಿಯೆಯನ್ನು ವಾರಕ್ಕೆ ಮೂರು ಬಾರಿ ಮಾಡಿ.

ಬೇಕಿಂಗ್ ಸೋಡಾ ಸ್ಕ್ರಬ್

ಬೇಕಿಂಗ್ ಸೋಡಾ ಸ್ಕ್ರಬ್

ಮೃತಕೋಶಗಳನ್ನು ಹೋಗಾಡಿಸುವಲ್ಲಿ, ಬ್ಯಾಕ್ಟಿರಿಯಾವನ್ನು ಕೊಲ್ಲಲು ಮತ್ತು ನಿಮ್ಮ ತ್ವಚೆಯನ್ನು ಪ್ರಖರಗೊಳಿಸುವಲ್ಲಿ ಬೇಕಿಂಗ್ ಸೋಡಾ ಎತ್ತಿದ ಕೈಯಾಗಿದೆ.

ಸಾಮಾಗ್ರಿಗಳು

2 ಚಮಚ ಬೇಕಿಂಗ್ ಸೋಡಾ

ನೀರು

ವಿಧಾನ

1. ಒಂದು ಪಾತ್ರೆಯಲ್ಲಿ ಬೇಕಿಂಗ್ ಸೋಡಾವನ್ನು ನೀರಿನಲ್ಲಿ ಮಿಶ್ರ ಮಾಡಿಕೊಳ್ಳಿ

2. ನಿಮ್ಮ ಮುಖ ಮತ್ತು ಕತ್ತಿನ ಭಾಗಕ್ಕೆ ಇದನ್ನು ವೃತ್ತಾಕಾರವಾಗಿ ಹಚ್ಚಿ ಮಸಾಜ್ ಮಾಡಿ

3. ನಂತರ ತಣ್ಣೀರಿನಿಂದ ನಿಮ್ಮ ಮುಖವನ್ನು ತೊಳೆದುಕೊಳ್ಳಿ.

ಎರಡು ವಾರಕ್ಕೆ ಒಮ್ಮೆ ಈ ಪ್ರಕ್ರಿಯೆಯನ್ನು ಮಾಡಿ. ಆದಾಗ್ಯೂ ಮೊಡವೆ ಮತ್ತು ಸೂಕ್ಷ್ಮ ತ್ವಚೆಯನ್ನು ಹೊಂದಿರುವವರಿಗೆ ಈ ಸ್ಕ್ರಬ್ ಒಳ್ಳೆಯದಲ್ಲ.

ಓಟ್‌ಮೀಲ್ ಫೇಸ್ ಪ್ಯಾಕ್

ಓಟ್‌ಮೀಲ್ ಫೇಸ್ ಪ್ಯಾಕ್

ಓಟ್‌ಮೀಲ್ ಉತ್ಕರ್ಷಣ ನಿರೋಧಿ ಅಂಶಗಳನ್ನು ಒಳಗೊಂಡಿರುವುದರಿಂದ ಇದು ಮೃತಕೋಶಗಳನ್ನು ನಿವಾರಿಸುತ್ತದೆ. ನಿಮ್ಮ ತ್ವಚೆಯನ್ನು ಪ್ರಖರ ಮತ್ತು ಮೃದುಗೊಳಿಸುವ ಸಾಮಾಗ್ರಿಗಳನ್ನು ಓಟ್‌ಮೀಲ್ ಹೊಂದಿದೆ.

ಸಾಮಾಗ್ರಿಗಳು

3 ಚಮಚ ಓಟ್ಸ್

2-3 ಚಮಚ ರೋಸ್ ವಾಟರ್

ವಿಧಾನ

ಮೊದಲಿಗೆ ಓಟ್‌ಮೀಲ್ ಅನ್ನು ಪೌಡರ್‌ನಂತೆ ಮಾಡಿಕೊಳ್ಳಿ

ಅದಕ್ಕೆ ರೋಸ್ ವಾಟರ್ ಹಾಕಿ ಪೇಸ್ಟ್ ತಯಾರಿಸಿ

ನಿಮ್ಮ ಮುಖ ಮತ್ತು ಕತ್ತಿಗೆ ಈ ಪೇಸ್ಟ್ ಹಚ್ಚಿಕೊಳ್ಳಿ

15 ನಿಮಿಷ ಹಾಗೆಯೇ ಬಿಡಿ ನಂತರ ತಣ್ಣೀರಿನಿಂದ ಮುಖ ತೊಳೆದುಕೊಳ್ಳಿ

ಉತ್ತಮ ಫಲಿತಾಂಶಕ್ಕಾಗಿ ವಾರಕ್ಕೆ ಎರಡು ಬಾರಿ ಇದನ್ನು ಅನುಸರಿಸಿ

ಮೊಸರಿನ ಫೇಸ್ ಪ್ಯಾಕ್

ಮೊಸರಿನ ಫೇಸ್ ಪ್ಯಾಕ್

ನಿಮ್ಮ ತ್ವಚೆಯಲ್ಲಿರುವ ಕೊಳಕನ್ನು ದೂರಮಾಡಲು ಯೋಗರ್ಟ್ ಸಹಕಾರಿಯಾಗಿದೆ. ಅಂತೆಯೇ ತ್ವಚೆಯನ್ನು ಶುಭ್ರ ಮತ್ತು ನಾಜೂಕಿನದ್ದಾಗಿ ಇದು ಮಾಡುತ್ತದೆ.

ಸಾಮಾಗ್ರಿಗಳು

2 ಚಮಚ ಮೊಸರು

1 ಚಮಚ ಜೇನು

ವಿಧಾನ

1. 2 ಚಮಚ ಮೊಸರು ಅನ್ನು 1 ಚಮಚ ಜೇನಿನೊಂದಿಗೆ ಬೆರೆಸಿಕೊಳ್ಳಿ

2. ನಿಮ್ಮ ಸಂಪೂರ್ಣ ಮುಖ ಮತ್ತು ಕತ್ತಿಗೆ ಈ ಪೇಸ್ಟ್ ಹಚ್ಚಿ

3. 20 ನಿಮಿಷ ಈ ಮಿಶ್ರಣವನ್ನು ಹಾಗೆಯೇ ಬಿಡಿ

4. ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ.

ಬಾಳೆ ಹಣ್ಣಿನ ಫೇಸ್ ಪ್ಯಾಕ್

ಬಾಳೆ ಹಣ್ಣಿನ ಫೇಸ್ ಪ್ಯಾಕ್

ಬಾಳೆ ಹಣ್ಣಿನಲ್ಲಿರುವ ಜೀವಸತ್ವಗಳು ಚರ್ಮವನ್ನು ಪುನಃಶ್ಚೇತನಗೊಳಿಸುತ್ತದೆ. ಮತ್ತು ಚರ್ಮವನ್ನು ಹೊಳೆಯುವಂತೆ ಮಾಡುವುದು. ಚರ್ಮವನ್ನು ಒತ್ತಡದಿಂದ ಮುಕ್ತಗೊಳಿಸುವುದು. ಚರ್ಮವನ್ನು ತಾಜಾತನದಿಂದ ಕೂಡಿರುವಂತೆ ಮಾಡುವುದು. ಮನೆಯ ಪರಿಹಾರಗಳಿಂದಲೇ ಚರ್ಮವನ್ನು ಹೆಚ್ಚು ಹೊಳೆಯುವಂತೆ ಮಾಡಬಹುದು.

ಸಾಮಾಗ್ರಿಗಳು:

ಬಾಳೆಹಣ್ಣು -1

ನೀರು -1 ಕಪ್

ಬಳಸುವ ವಿಧಾನ:

- ಬಾಳೆಹಣ್ಣನ್ನು ಸಣ್ಣದಾಗಿ ಹೆಚ್ಚಿಕೊಂಡು ಹಿಸುಕಿಕೊಳ್ಳಿ.

- ಬಳಿಕ ಮುಖಕ್ಕೆ ಅನ್ವಯಿಸಿ.

- 15 ನಿಮಿಷದ ಬಳಿಕ ತಂಪಾದ ನೀರಿನಿಂದ ಸ್ವಚ್ಛಗೊಳಿಸಿ.

- ನೀವು ಈ ಕ್ರಮವನ್ನು ಅನ್ವಯಿಸುವುದಕ್ಕಿಂತ ಮೊದಲು ಹೊಂದಿದ್ದ ತ್ವಚೆಯ ವ್ಯತ್ಯಾಸವನ್ನು ಪರಿಶೀಲಿಸಬಹುದು.

ಪಪ್ಪಾಯಿ ಮತ್ತು ಮೊಸರು

ಪಪ್ಪಾಯಿ ಮತ್ತು ಮೊಸರು

ಒಂದು ಚಿಕ್ಕ ತುಂಡು ಪಪ್ಪಾಯಿಯನ್ನು ತುರಿದು ಒಂದು ಕಪ್ ಮೊಸರಿಗೆ ಸೇರಿಸಿ ಮಿಕ್ಸಿಯಲ್ಲಿ ಅತಿ ನಯವಾಗದಷ್ಟು ಗೊಟಾಯಿಸಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚುವ ಮೊದಲು ಮುಖಕ್ಕೆ ತೆಳುವಾಗಿ ಕೊಬ್ಬರಿ ಎಣ್ಣೆಯನ್ನು ಹಚ್ಚಿಕೊಳ್ಳಿ. ಇದರಿಂದ ಪಪ್ಪಾಯಿಯಲ್ಲಿರುವ ಆಮ್ಲೀಯ ಅಂಶ ಚರ್ಮವನ್ನು ಸುಡದಂತೆ ರಕ್ಷಿಸುತ್ತದೆ.

ಹುಣಸೆಹಣ್ಣಿನ್ನು ಫೇಸ್‍ ವಾಶ್ ಆಗಿ

ಹುಣಸೆಹಣ್ಣಿನ್ನು ಫೇಸ್‍ ವಾಶ್ ಆಗಿ

ಹುಣಸೆಹಣ್ಣಿನ ಫೇಸ್ ವಾಶ್ ತ್ವಚೆಗೆ ತುಂಬಾ ಒಳ್ಳೆಯದು. ಆದ್ದರಿಂದ ಮೊದಲು ಇದನ್ನು ಫೇಸ್ ವಾಶ್ ಆಗಿ ಬಳಸಿ ನೋಡಿ. ಇದಕ್ಕಾಗಿ ನೀವು ಹುಣಸೆಹಣ್ಣನ್ನು ಮೊದಲು ನೀರಿನಲ್ಲಿ ನೆನೆಸಿ, ನಂತರ ಆ ನೀರಿನಲ್ಲಿ ಮುಖವನ್ನು ತೊಳೆಯಿರಿ. ಅದಾದ ಮೇಲೆ ಚೆನ್ನಾಗಿ ನೀರಿನಿಂದ ಮುಖವನ್ನು ತೊಳೆದುಕೊಳ್ಳಿ.

ಚಂದನ ಮತ್ತು ಅರಿಶಿನ

ಚಂದನ ಮತ್ತು ಅರಿಶಿನ

ಚಂದನದ ಮುಖಲೇಪಗಳಲ್ಲಿಯೇ ಅತ್ಯಂತ ಜನಪ್ರಿಯ ಮತ್ತು ಫಲಪ್ರದವಾದ ಈ ಮಿಶ್ರಣ ಮದುಮಗಳಿಗೆಂದೇ ವಿಶೇಷವಾಗಿ ಭಾರತದೆಲ್ಲೆಡೆ ತಯಾರಾಗುತ್ತದೆ. ಹೆಚ್ಚೂ ಕಡಿಮೆ ಎಲ್ಲಾ ಬಗೆಯ ಚರ್ಮಕ್ಕೆ ಸೂಕ್ತವಾದ ಈ ಲೇಪನಕ್ಕಾಗಿ ಮೊದಲು ಸಮಪ್ರಮಾಣದಲ್ಲಿ ಅರಿಶಿನ ಮತ್ತು ಚಂದನದ ಪುಡಿಗಳನ್ನು ಬೆರೆಸಿ ಅಗತ್ಯಕ್ಕೆ ತಕ್ಕಷ್ಟು ಹಸಿ ಹಾಲು ಅಥವಾ ಮೊಸರನ್ನು ಬೆರೆಸಿ ಲೇಪನ ತಯಾರಿಸಿ. ಈಗ ತಾನೇ ತಣ್ಣೀರಿನಿಂದ ತೊಳೆದುಕೊಂಡ ಮುಖ, ಕುತ್ತಿಗೆ ಕೈಗಳಿಗೆ ಹಚ್ಚಿ ಕೊಂಚ ಹೊತ್ತು ಹಾಗೇ ಬಿಡಿ. ಬಳಿಕ ಮೊದಲು ತಣ್ಣೀರಿನಿಂದ, ಬಳಿಕ ಹಳದಿ ಬಣ್ಣವನ್ನು ನಿವಾರಿಸಲು ಕೊಂಚವೇ ಉಗುರುಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ. ಸೋಪು ಉಪಯೋಗಿಸಬೇಡಿ.

English summary

brighten-your-skin-within-7-days

In order to have that perfect skin, we tend to do chemical treatments or use various products. This in most cases will further lead to harming our skin more. However, it is better to look for solutions that are natural, which would benefit us in the long run. Here are five best easy and instant skin-whitening home remedies that you can try for that brighter, softer and perfect skin.
Story first published: Friday, April 13, 2018, 14:45 [IST]
X
Desktop Bottom Promotion