ಅರಿಶಿನದ ಲೇಪನ ಬಳಸಿದರೆ ಆಕರ್ಷಕ ತ್ವಚೆ ನಿಮ್ಮದಾಗುವುದು..

Posted By: Divya pandit Pandit
Subscribe to Boldsky

ಆಯುರ್ವೇದದ ಚಿಕಿತ್ಸೆಯಲ್ಲಿ ಅರಿಶಿನವು ಅತ್ಯುತ್ತಮ ಔಷಧೀಯ ಗುಣವನ್ನು ಒಳಗೊಂಡಿದೆ. ಚರ್ಮ ಸಮಸ್ಯೆ ಹಾಗೂ ಆಂತರಿಕ ಆರೋಗ್ಯ ಸಮಸ್ಯೆಗಳಿಗೂ ಇದು ದಿವ್ಯ ಔಷಧ. ಭಾರತೀಯ ಮಹಿಳೆಯರು ಇದನ್ನು ಸೌಂದರ್ಯವರ್ಧಕ ಉತ್ಪನ್ನವಾಗಿಯೂ ಹಾಗೂ ಶೃಂಗಾರದ ಪ್ರಮುಖ ವಸ್ತುವನ್ನಾಗಿಯೂ ಉಪಯೋಗಿಸುತ್ತಾರೆ. ಅನೇಕ ಚರ್ಮ ಸಂಬಂಧಿ ಸಮಸ್ಯೆಗಳನ್ನು ನಿವಾರಿಸುವಲ್ಲಿ ಅರಿಶಿನ ಪವಾಡವನ್ನೇ ಮಾಡುತ್ತದೆ ಎಂದರೆ ತಪ್ಪಾಗಲಾರದು. ಇದನ್ನು ಬಿದ್ದ ಗಾಯ, ಹುಣ್ಣು, ತುರಿಕೆ ಹಾಗೂ ನಂಜಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಗೆ ಔಷಧವನ್ನಾಗಿ ಬಳಸಬಹುದು.

ಮೊಡವೆ ಹಾಗೂ ಕಲೆಗಳ ನಿವಾರಣೆಗೆ, ಅನುಪಯುಕ್ತ ಕೂದಲಿನಿಂದ ಮುಕ್ತಿ ಹೊಂದಲು, ಚರ್ಮದ ಆರೋಗ್ಯ ಕಾಪಾಡಲು ಮತ್ತು ಆಕರ್ಷಕ ತ್ವಚೆಯನ್ನು ಪಡೆದುಕೊಳ್ಳಲು ಅರಿಶಿನ ಅತ್ಯುತ್ತಮ ರೀತಿಯಲ್ಲಿ ಸಹಾಯ ಮಾಡುತ್ತದೆ. ನಿತ್ಯದ ಒತ್ತಡದ ಬದುಕು, ಕೆಲಸದ ಗಡಿಬಿಡಿ, ಕಲುಷಿತ ವಾತಾವರಣ ಹಾಗೂ ವಾಹನಗಳ ಕಪ್ಪು ಧೂಳು ನಮ್ಮ ಚರ್ಮದ ಮೇಲೆ ಗಾಢವಾದ ಪರಿಣಾಮ ಬೀರುತ್ತವೆ. ಇದರ ಪರಿಣಾಮವಾಗಿ ತ್ವಚೆಯು ಮಂಕಾಗುವುದು ಮತ್ತು ಸೋಂಕುಗಳಿಂದ ಆರೋಗ್ಯವನ್ನು ಕಳೆದುಕೊಳ್ಳುತ್ತದೆ.

ನಿತ್ಯ ಈ ಬಗೆಯಲ್ಲಿ ಅನುಭವಿಸುವ ಅನಪೇಕ್ಷಿತ ಚರ್ಮದ ತೊಂದರೆಗಳಿಗೆ ಅರಿಶಿನ ಸೂಕ್ತ ಆರೈಕೆ ನೀಡುವುದು. ವಾರದಲ್ಲಿ ಒಮ್ಮೆ ಅರಿಶಿನ ಹಾಗೂ ಇನ್ನಿತರ ನೈಸರ್ಗಿಕ ಉತ್ಪನ್ನಗಳ ಮಿಶ್ರಣದಿಂದ ತ್ವಚೆಯ ಆರೈಕೆ ಮಾಡಿದರೆ ಹೊಳೆಯುವ ಹಾಗೂ ಆಕರ್ಷಕ ಮೈಬಣ್ಣವನ್ನು ಪಡೆಯಬಹುದು. ನೀವು ಇಂತಹ ಒಂದು ಆರೈಕೆಯ ವಿಧಾನವನ್ನೇ ಹುಡುಕುತ್ತಿದ್ದೀರಿ ಎಂದಾದರೆ ಈ ಮುಂದೆ ವಿವರಿಸಲಾದ ವಿವರಣೆಯನ್ನು ಪರಿಶೀಲಿಸಿ...

ಅರಿಶಿನ ಪುಡಿ, ಕಡ್ಲೆ ಹಿಟ್ಟು ಮತ್ತು ಗುಲಾಬಿ ನೀರು

ಅರಿಶಿನ ಪುಡಿ, ಕಡ್ಲೆ ಹಿಟ್ಟು ಮತ್ತು ಗುಲಾಬಿ ನೀರು

- ಒಂದು ಚಿಟಕಿ ಅರಿಶಿನ ಪುಡಿ, 1/2 ಟೀ ಚಮಚ ಕಡ್ಲೆ ಹಿಟ್ಟು ಮತ್ತು 1 ಟೇಬಲ್ ಚಮಚ ಗುಲಾಬಿ ನೀರನ್ನು ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ, 15 ನಿಮಿಷ ಆರಲು ಬಿಡಿ.

- ಶೇಷವನ್ನು ಸ್ವಚ್ಛಗೊಳಿಸಿದ ನಂತರ ತೆಳುವಾಗಿ ಟೋನರ್ ಅನ್ವಯಿಸಿ.

ಅರಿಶಿನ ಪುಡಿ, ಲ್ಯಾವೆಂಡರ್ ಎಸೆನ್ಸಿಯಲ್ ಎಣ್ಣೆ ಮತ್ತು ಮೊಸರು

ಅರಿಶಿನ ಪುಡಿ, ಲ್ಯಾವೆಂಡರ್ ಎಸೆನ್ಸಿಯಲ್ ಎಣ್ಣೆ ಮತ್ತು ಮೊಸರು

- ಒಂದು ಬೌಲ್‍ನಲ್ಲಿ ಒಂದು ಚಿಟಕಿ ಅರಿಶಿನ ಪುಡಿ, 2-3 ಹನಿ ಲ್ಯಾವೆಂಡರ್ ಎಸೆನ್ಸಿಯಲ್ ಎಣ್ಣೆ ಮತ್ತು 2 ಟೇಬಲ್ ಚಮಚ ಮೊಸರನ್ನು ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ, 10 ನಿಮಿಷ ಆರಲು ಬಿಡಿ.

- ಬಳಿಕ ಬೆಚ್ಚಗಿನ ನೀರಿನಲ್ಲಿ ಶೇಷವನ್ನು ತೊಳೆಯಿರಿ.

ಅರಿಶಿನ ಪುಡಿ ಮತ್ತು ಜೇನುತುಪ್ಪ

ಅರಿಶಿನ ಪುಡಿ ಮತ್ತು ಜೇನುತುಪ್ಪ

- ಒಂದು ಚಿಟಕಿ ಅರಿಶಿನ ಪುಡಿ ಮತ್ತು 1 ಟೇಬಲ್ ಚಮಚ ಜೇನುತುಪ್ಪವನ್ನು ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ, 10 ನಿಮಿಷ ಆರಲು ಬಿಡಿ.

- ಬಳಿಕ ಬೆಚ್ಚಗಿನ ನೀರಿನಲ್ಲಿ ಶೇಷವನ್ನು ತೊಳೆಯಿರಿ.

 ಅರಿಶಿನ ಪುಡಿ, ಆಲಿವ್ ಎಣ್ಣೆ ಮತ್ತು ಶ್ರೀಗಂಧದ ಪುಡಿ

ಅರಿಶಿನ ಪುಡಿ, ಆಲಿವ್ ಎಣ್ಣೆ ಮತ್ತು ಶ್ರೀಗಂಧದ ಪುಡಿ

- ಒಂದು ಚಿಟಕಿ ಅರಿಶಿನ ಪುಡಿ ಮತ್ತು 1 ಟೇಬಲ್ ಚಮಚ ಆಲಿವ್ ಎಣ್ಣೆ ಮತ್ತು 1/2 ಟೀಚಮಚ ಶ್ರೀಗಂಧದ ಪುಡಿಯನ್ನು ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ, 15 ನಿಮಿಷ ಆರಲು ಬಿಡಿ.

- ಬಳಿಕ ಬೆಚ್ಚಗಿನ ನೀರಿನಲ್ಲಿ ಶೇಷವನ್ನು ತೊಳೆಯಿರಿ.

ಅರಿಶಿನ ಪುಡಿ ಮತ್ತು ಹಾಲು

ಅರಿಶಿನ ಪುಡಿ ಮತ್ತು ಹಾಲು

- ಒಂದು ಚಿಟಕಿ ಅರಿಶಿನ ಪುಡಿ ಮತ್ತು 2 ಟೇಬಲ್ ಚಮಚ ಹಾಲನ್ನು ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ, 15-20 ನಿಮಿಷ ಆರಲು ಬಿಡಿ.

- ಬಳಿಕ ಬೆಚ್ಚಗಿನ ನೀರಿನಲ್ಲಿ ಶೇಷವನ್ನು ತೊಳೆದು, ತೆಳುವಾಗಿ ಮಾಯಿಶ್ಚರೈಸರ್ ಕ್ರೀಮ್‍ಅನ್ನು ಅನ್ವಯಿಸಿ.

ಅರಿಶಿನ ಪುಡಿ ಮತ್ತು ಬಾದಾಮಿ ಎಣ್ಣೆ

ಅರಿಶಿನ ಪುಡಿ ಮತ್ತು ಬಾದಾಮಿ ಎಣ್ಣೆ

- ಒಂದು ಚಿಟಕಿ ಅರಿಶಿನ ಪುಡಿ ಮತ್ತು 1 ಟೇಬಲ್ ಚಮಚ ಬಾದಾಮಿ ಎಣ್ಣೆಯನ್ನು ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ, 10 ನಿಮಿಷ ಆರಲು ಬಿಡಿ.

- ಬಳಿಕ ಬೆಚ್ಚಗಿನ ನೀರಿನಲ್ಲಿ ಶೇಷವನ್ನು ತೊಳೆಯಿರಿ.

ಅರಿಶಿನ ಪುಡಿ ಮತ್ತು ಮೊಟ್ಟೆಯ ಬಿಳಿ ಭಾಗ

ಅರಿಶಿನ ಪುಡಿ ಮತ್ತು ಮೊಟ್ಟೆಯ ಬಿಳಿ ಭಾಗ

- ಒಂದು ಚಿಟಕಿ ಅರಿಶಿನ ಪುಡಿ ಮತ್ತು 1 ಮೊಟ್ಟೆಯ ಬಿಳಿ ಭಾಗವನ್ನು ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ, 20 ನಿಮಿಷ ಆರಲು ಬಿಡಿ.

- ಬಳಿಕ ಬೆಚ್ಚಗಿನ ನೀರಿನಲ್ಲಿ ಶೇಷವನ್ನು ತೊಳೆಯಿರಿ.

ಅರಿಶಿನ ಪುಡಿ, ನಿಂಬೆ ರಸ ಮತ್ತು ಅಲೋವೆರಾ ಜೆಲ್

ಅರಿಶಿನ ಪುಡಿ, ನಿಂಬೆ ರಸ ಮತ್ತು ಅಲೋವೆರಾ ಜೆಲ್

- ಒಂದು ಚಿಟಕಿ ಅರಿಶಿನ ಪುಡಿ, 1 ಟೀಚಮಚ ನಿಂಬೆ ರಸ ಮತ್ತು 1 ಟೇಬಲ್ ಚಮಚ ಅಲೋವೆರಾ ಜೆಲ್ ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ, 10 ನಿಮಿಷ ಆರಲು ಬಿಡಿ.

- ಬಳಿಕ ಬೆಚ್ಚಗಿನ ನೀರಿನಲ್ಲಿ ಶೇಷವನ್ನು ತೊಳೆಯಿರಿ.

English summary

Brighten Tired Skin With These Effective Turmeric Face Packs

Indian women have always used turmeric for its numerous skin benefits. A treasure trove of powerful antioxidants, this natural ingredient is often hailed as a miracle-worker for various skin-related issues. Be it combating acne, brightening tired-looking skin or lightening the spots, turmeric powder can do it all. So today at Boldsky, we've curated a list of turmeric face packs that can up the glow factor of your skin like no other ingredient can. Try these turmeric face packs to brighten your skin's complexion in an instant. Read on to know more about these face packs here...
Story first published: Monday, February 5, 2018, 23:50 [IST]