For Quick Alerts
ALLOW NOTIFICATIONS  
For Daily Alerts

ಮುಖದ ಎಲ್ಲಾ ಸಮಸ್ಯೆಗೆ ಪರಿಹಾರ ನೀಡುವ ನೈಸರ್ಗಿಕ ಫೇಸ್ ಪ್ಯಾಕ್

By Prabha Bhat
|

ಫೇಸ್ ಮಾಸ್ಕುಗಳು ಮುಖದ ತ್ವಚೆಗೆ ಸಂಬಂಧಿಸಿದ ಎಲ್ಲಾ ಬಗೆಯ ಸಮಸ್ಯೆಗಳಿಗೂ ಸುಲಭ ಪರಿಹಾರವಾಗಿದೆ. ಅದರಲ್ಲಿಯೂ ಮನೆಯಲ್ಲಿಯೇ ಸುಲಭವಾಗಿ ತಯಾರಿಸುವ ಫೇಸ್ ಪ್ಯಾಕುಗಳು ರಾಸಾಯನಿಕಗಳಿಂದಲೂ ಮುಕ್ತವಾಗಿರುತ್ತವೆ. ಈ ಬಗೆಯಲ್ಲಿ ಮನೆಯಲ್ಲಿ ತಯಾರಿಸಿದ ಫೇಸ್ ಪ್ಯಾಕ್ ಗಳು ಬ್ಯೂಟಿ ಪಾರ್ಲರುಗಳಲ್ಲಿ ನೀಡುವಂತಹ ಹೊಳಪನ್ನೇ ನಿಮ್ಮ ಮುಖಕ್ಕೆ ನೀಡಿ ಕನಿಷ್ಠವೆಂದರೂ ಒಂದು ವಾರಗಳವರೆಗೆ ಪರಿಣಾಮಕಾರಿಯಾದ ಹೊಳಪನ್ನು ನೀಡುತ್ತದೆ ಮತ್ತು ತ್ವಚೆಯ ಮೇಲೆ ಯಾವುದೇ ಅಡ್ಡಪರಿಣಾಮಗಳನ್ನು ಬೀರುವುದಿಲ್ಲ ಎನ್ನಲಾಗುತ್ತದೆ.

ತ್ವಚೆಯ ಹೊಳಪನ್ನು ಹೆಚ್ಚಿಸುವಲ್ಲಿ, ತ್ವಚೆಯನ್ನು ತೇವಯುತವಾಗಿರಿಸುವಲ್ಲಿ ಮತ್ತು ನಿಮ್ಮ ಮುಖದ ತ್ವಚೆಯ ಅಂದವನ್ನು ಹೆಚ್ಚಿಸುವುದು ಫೇಸ್ ಪ್ಯಾಕ್ ಗಳ ಬಳಕೆಯ ಆದ್ಯ ಉದ್ದೇಶವಾಗಿದೆ. ಮನೆಯಲ್ಲಿಯೇ ದೊರೆಯುವ ಮೊಸರು, ಅರಿಶಿಣ, ಲೋಳೆಸರ, ಕೊಬ್ಬರಿ ಎಣ್ಣೆ ಅಥವ ದಾಲ್ಚಿನ್ನಿ ಇನ್ನಿತರ ವಸ್ತುಗಳಿಂದ ತಯಾರಿಸಿದ ಫೇಸ್ ಪ್ಯಾಕ್ ಗಳು ನಿಮ್ಮ ಮುಖದ ಅಂದವನ್ನು ಮತ್ತು ಹೊಳಪನ್ನು ಇಮ್ಮಡಿಗೊಳಿಸುವುದರಲ್ಲಿ ಯಾವುದೇ ಸಂಶಯವಿಲ್ಲ.

ಮುಖದ ತ್ವಚೆಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳಿಗೂ ಸುಲಭ ಪರಿಹಾರ ಒದಗಿಸುವುದು ಫೇಸ್ ಪ್ಯಾಕುಗಳು. ಇವುಗಳನ್ನು ಬಳಸುವುದರ ಮೂಲಕ ಚರ್ಮದ ಸಮಸ್ಯೆಗಳಿಂದ ನಮ್ಮ ಮುಖವನ್ನು ದೂರವಿರಿಸಿಕೊಳ್ಳಬಹುದು ಮತ್ತು ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲೂ ಬಹುದು. ಅಂಗಡಿಗಳಿಂದ ಕೊಂಡುತಂದು ಬಳಸುವ ಫೇಸ್ ಪ್ಯಾಕ್ ಗಳು ನಿಮ್ಮ ತ್ವಚೆಯ ಸಮಸ್ಯೆಗಳನ್ನು ಪರಿಹರಿಸುವುವು. ಆದರೆ ಅವುಗಳು ಕೂಡ ನಿಮಗೆ ದುಬಾರಿಯೆನಿಸುತ್ತವೆ.

ಆದ್ದರಿಂದ ಮನೆಯಲ್ಲಿಯೇ ಸುಲಲಿತವಾಗಿ ದೊರೆಯುವ ವಸ್ತುಗಳನ್ನು ಬಳಸಿಕೊಂಡು ಯಾವುದೇ ರಾಸಾಯನಿಕಗಳನ್ನು ಬಳಸದೆ ಆರೋಗ್ಯಕರವಾದ ಫೇಸ್ ಪ್ಯಾಕ್ ಗಳನ್ನು ತಯಾರಿಸಿ ಬಳಸುವುದು ಲಾಭದಾಯಕವೆನಿಸುತ್ತವೆ. ಇವುಗಳಲ್ಲಿ ಒಣ ತ್ವಚೆಗೆ ಫೇಸ್ ಮಾಸ್ಕುಗಳು, ಸೂಕ್ಷ್ಮ ತ್ವಚೆಗೆ ಫೇಸ್ ಪ್ಯಾಕ್ ಗಳು, ಮಾಲಿನ್ಯತೆಯಿಂದ ಕೂಡಿದ ವಾತಾವರಣಕ್ಕೆ ಹೊಂದುವ ಫೇಸ್ ಮಾಸ್ಕುಗಳು, ಚಳಿಗಾಲಕ್ಕೆ ಹೊಂದುವ ಫೇಸ್ ಮಾಸ್ಕ್ ಹೀಗೆ ಹಲವಾರು ಬಗೆಗಳಿದ್ದು ಕೆಲವಷ್ಟನ್ನು ಆಗಲೇ ಹೇಳಿದಂತೆ ಸ್ವತಃ ನೀವೇ ತಯಾರಿಸಿಕೊಳ್ಳಬಹುದಾಗಿದೆ.

ಇಂದಿನ ಅಂಕಣದಲ್ಲಿ ಕೇವಲ ಎರಡೇ ಎರಡು ವಸ್ತುಗಳನ್ನು ಬಳಸಿಕೊಂಡು ಫೇಸ್ ಪ್ಯಾಕನ್ನು ಹೇಗೆ ತಯಾರಿಸಿ ಬಳಸಬಹುದು ಮತ್ತು ಅವುಗಳ ಪ್ರಯೋಜನ ಮತ್ತು ತಯಾರಿಕಾ ವಿಧಾನಗಳನ್ನು ವಿವರಿಸಲಾಗಿದೆ. ಮಹಿಳೆಯರು ತಮ್ಮ ಅಡುಗೆ ಮನೆಯಲ್ಲಿ ದಿನನಿತ್ಯ ಬಳಸುವ ಸಾಮಗ್ರಿಗಳನ್ನೇ ಬಳಸಿಕೊಂಡು ವಿವಿಧ ಸಮಸ್ಯೆಗಳನ್ನು ಪರಿಹರಿಸಬಲ್ಲ ಪೇಸ್ ಪ್ಯಾಕ್ ಗಳನ್ನು ತಯಾರಿಸಿಕೊಳ್ಳಬಹುದಾದ ಬಗೆಯನ್ನು ತಿಳಿಸಲಾಗುತ್ತದೆ ಅಷ್ಟೇ ಅಲ್ಲದೆ ಈ ಕೆಳಗಿನ ಕೆಲವು ಫೇಸ್ ಪ್ಯಾಕ್ ಗಳು ನಿಮಗೆ ಪಾರ್ಲರ್ ಚಿಕಿತ್ಸೆಯ ಪರಿಣಾಮವನ್ನೇ ಕೊಡುವಷ್ಟು ಪರಿಣಾಮಕಾರಿಯಾಗಿರುತ್ತವೆ.

ಅಲ್ಲದೆ ಬ್ಯೂಸಿಯಾಗಿರುವ ಮಹಿಳೆಯರು ತಾಸುಗಟ್ಟಲೆ ಪಾರಲರುಗಳಲ್ಲಿ ಸಮಯವನ್ನು ವ್ಯಯಿಸದೆ ಮನೆಯಲ್ಲಿಯೇ ಫೇಸ್ ಪ್ಯಾಕುಗಳನ್ನು ತಯಾರಿಸಿ ಬಳಸುವುದರ ಮೂಲಕ ತಮ್ಮ ಅಮೂಲ್ಯವಾದ ಸಮಯವನ್ನೂ ಕೂಡ ಉಳಿಸಬಹುದಾಗಿದೆ. ಅಂತಹ ಕೆಲವು ಪರಿಣಾಮಕಾರಿಯಾದ ಮತ್ತು ಸುಲಭವಾಗಿ ತಯಾರಿಸಬಹುದಾದ ಫೇಸ್ ಪ್ಯಾಕ್ ಗಳು ಇಂತಿವೆ..

ಮೊಸರು ಮತ್ತು ಟೊಮ್ಯಾಟೋ ಮಾಸ್ಕ್

ಮೊಸರು ಮತ್ತು ಟೊಮ್ಯಾಟೋ ಮಾಸ್ಕ್

ಮೊಸರು ಮತ್ತು ಟೊಮ್ಯಾಟೋ ಈ ಎರಡೂ ಸಾಮಗ್ರಿಗಳೂ ಎಲ್ಲರ ಮನೆಯ ಫ್ರಿಜ್ಜಿನಲ್ಲಿರುವ ವಸ್ತುಗಳು. ಹಾಗಾಗಿ ಸುಲಭವಾಗಿ ಲಭ್ಯವಿರುವಂತವುಗಳು. ಎರಡು ಟೀ ಚಮಚ ಟೊಮ್ಯಾಟೋ ರಸಕ್ಕೆ ಮೂರು ಟೀ ಚಮಚ ಮೊಸರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ನಿಮ್ಮ ಮುಖದ ಎಲ್ಲಾ ಭಾಗಗಳಿಗೂ ಕೂಡ ಸಮವಾಗಿ ಲೇಪಿಸಿಕೊಳ್ಳಿ. ಈ ಬಗೆಯ ಮಾಸ್ಕ್ ನಿಮ್ಮ ಮುಖಕ್ಕೆ ಕಾಂತಿಯನ್ನು ಕೊಡುವಲ್ಲಿ ಬಹಳ ಪ್ರಯೋಜನಕಾರಿಯಾಗಿರುತ್ತದೆ. ಮೊಸರಿನಲ್ಲಿರುವ ಲ್ಯಾಕ್ಟಿಕ್ ಆಸಿಡ್ ಮತ್ತು ಟೊಮ್ಯಾಟೊದಲ್ಲಿರುವ ಸಿಟ್ರಿಕ್ ಆಸಿಡ್ ಎರಡೂ ಬಗೆಯ ಆಸಿಡುಗಳೂ ಕೂಡ ಮುಖದ ಕಾಂತಿಯನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಮೊಸರು ತ್ವಚೆಯನ್ನು ತಂಪುಗೊಳಿಸುತ್ತದೆ ಮತ್ತು ಆರ್ದ್ರತೆಯನ್ನು ಹೆಚ್ಚಿಸುತ್ತದೆ. ಈ ಮೂಲಕ ಕಳೆಗುಂದಿದ ತ್ವಚೆ, ಮಂದವಾದ ತ್ವಚೆಗಳಂತಹಾ ಸಮಸ್ಯೆಗಳನ್ನು ಗಣನೀಯ ಪ್ರಮಾಣದಲ್ಲಿ ಇಳಿಸುತ್ತದೆ.

ಜೇನು ತುಪ್ಪ ಮತ್ತು ಲಿಂಬು ಫೇಸ್ ಪ್ಯಾಕ್

ಜೇನು ತುಪ್ಪ ಮತ್ತು ಲಿಂಬು ಫೇಸ್ ಪ್ಯಾಕ್

ಈ ಮಾಸ್ಕ್ ಇತ್ತೀಚೆಗೆ ಹೆಚ್ಚು ಬಳಸಲ್ಪಡುತ್ತಿರುವ ಮತ್ತು ಬೇಸಿಗೆಗೆ ಉತ್ತಮವಾದ ಮಾಸ್ಕ್ ಆಗಿದೆ. ಬಿಸಿಲಿನಲ್ಲಿ ತಿರುಗಾಡಿಕೊಂಡು ಬಂದಿದ್ದರೆ ಮನೆಗೆ ಬಂದವರೇ ಈ ಮಾಸ್ಕನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿರಿ. ಇದನ್ನು ತಯಾರಿಸುವ ವಿಧಾನ ಬಹಳ ಸುಲಭ. ಎರಡು ಚಮಚ ಜೇನುತುಪ್ಪಕ್ಕೆ ಅರ್ಧ ಲಿಂಬೆಹಣ್ಣಿನ ರಸವನ್ನು ಹಿಂಡಿ ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ಅದನ್ನು ಇಡಿಯ ಮುಖಕ್ಕೆ ಚೆನ್ನಾಗಿ ಲೇಪಿಸಿಕೊಂಡು ಇಪ್ಪತ್ತು ನಿಮಿಷಗಳ ತನಕ ಹಾಗೆಯೇ ಬಿಡಿ. ಇದರಿಂದ ನಿಮ್ಮ ತ್ವಚೆ ನೈಸರ್ಗಿಕ ಬಣ್ಣವನ್ನು ಹೊಂದಲು ಸಾಧ್ಯ. ಯಾಕೆಂದರೆ ಸಿ-ವಿಟಾಮಿನಿನಿಂದ ಕೂಡಿದ ಲಿಂಬೆ ನೈಸರ್ಗಿಕವಾಗಿ ಬ್ಲೀಚಿಂಗ್ ಏಜೆಂಟಾಗಿ ಕೆಲಸ ಮಾಡುತ್ತದೆ. ಜೇನುತುಪ್ಪವು ನೈಸರ್ಗಿಕವಾದ ಹ್ಯೂಮಕ್ಟಂಟ್ ಆಗಿದ್ದು, ಚರ್ಮವನ್ನು ತೇವಗೊಳಿಸದಂತೆ ಸಹಾಯ ಮಾಡುತ್ತದೆ. ಮತ್ತು ಲಿಂಬೆಯ ರಸವು ಚರ್ಮಕ್ಕೆ ಚುಚ್ಚಿದ ಅನುಭವವಾಗವುದರಿಂದ ತಪ್ಪಿಸುತ್ತದೆ. ಏಕೆಂದರೆ ಲಿಂಬೆಯು ಚರ್ಮದ ಮೇಲೆ ಬಲವಾದ ಮಾಸ್ಕಾಗಿ ವರ್ತಿಸುತ್ತದೆ.

ಅರಿಶಿನ ಮತ್ತು ಅಲೋವೆರಾ ಮಾಸ್ಕ್

ಅರಿಶಿನ ಮತ್ತು ಅಲೋವೆರಾ ಮಾಸ್ಕ್

ಇದು ತುಂಬ ಸರಳವಾದ ಮಖದ ಮಾಸ್ಕ್ ಆಗಿರುತ್ತದೆ. ಇದು ದಿನ ಬಳಕೆಯ ವಸ್ತುವಾದ ಅರಶಿನ ಮತ್ತು ಅಲೋವೆರಾದ ಜೆಲ್ಲಿನಿಂದ ಮಾಡಿಕೊಳ್ಳುವಂತಹದು. ಎಣ್ಣೆಯ ತ್ವಚೆಯುಳ್ಳವರಿಗೆ ಇದು ತುಂಬಾ ಸೂಕ್ತವಾದುದು. ಇದನ್ನು ತಯಾರಿಸುವ ವಿಧಾನವೂ ತುಂಬಾ ಸರಳ ಕೂಡ. ಒಂದು ಚಮಚ ಅರಶಿನವನ್ನು ಎರಡು ಚಮಚ ಅಲೋವೆರಾ ಅಥವಾ ಲೋಳೆಸರ ಜೆಲ್ಲಿನೊಂದಿಗೆ ಚೆನ್ನಾಗಿ ಮಿಶ್ರಣ ಮಾಡಿದರೆ ಈ ಮಾಸ್ಕ್ ತಯಾರಾಗಿಬಿಡುತ್ತದೆ. ಅಲೋವೆರಾವನ್ನ ಮನೆಯ ಆವರಣದಲ್ಲಿಯೇ ಬೆಳೆಸಿಕೊಳ್ಳಬಹುದಾಗಿದೆ. ಅಲೋವೆರಾ ಜೆಲ್ ಎಣ್ಣೆಯುಕ್ತವಾದ ತ್ವಚೆಗೆ ಚರ್ಮದ ಒಂದು ಆರ್ಧ್ರಕ ಏಜೆಂಟಾಗಿ ಕೆಲಸ ಮಾಡುತ್ತದೆ. ಅಲ್ಲದೆ ಅರಶಿನವು ಚರ್ಮದ ವಿರುದ್ಧ ಕಾರ್ಯನಿರ್ವಹಿಸುವ ಸೂಕ್ಷ್ಮಾಣುಗಳನ್ನು ಕೊಲ್ಲುತ್ತದೆ. ಈ ಬ್ಯಾಕ್ಟೀರಿಯಾಗಳಿಂದ ಉಂಟಾಗಬಹುದಾದ ಮೊಡವೆ ಅಥವಾ ಇನ್ನಿತರ ಗುಳ್ಳೆಗಳು ಮುಖದ ಮೇಲೆ ಕಾಣಿಸಿಕೊಳ್ಳದಂತೆ ಮಾಡುತ್ತದೆ.

ಕಾಫಿ ಮತ್ತು ಜೇನುತುಪ್ಪದ ಮಾಸ್ಕ್

ಕಾಫಿ ಮತ್ತು ಜೇನುತುಪ್ಪದ ಮಾಸ್ಕ್

ಈ ಮಾಸ್ಕ್ ಮುಖ್ಯವಾಗಿ ಚರ್ಮವು ಸಡಿಲಿಗೊಳ್ಳುವುದರಿಂದ ಕಾಪಾಡುತ್ತದೆ. ಮತ್ತು ಚರ್ಮವು ಗಟ್ಟಿಯಾಗಿರುವಂತೆ ಅಥವಾ ಜೋತುಬೀಳದಂತೆ ಮಾಡಲು ಈ ಮಾಸ್ಕ್ ಬಳಕೆ ಸಮರ್ಪಕವಾದುದು. ಇದನ್ನು ತಯಾರಿಸಲು ಎರಡು ಚಮಚದಷ್ಟು ಕಾಫಿ ಹುಡಿ ಮತ್ತು ಎರಡು ಚಮಚದಷ್ಟು ಜೇನುತುಪ್ಪ ಬೇಕಾಗುತ್ತವೆ. ತುಂಬಾ ನಯವಾದ ಕಾಫಿ ಪುಡಿಯನ್ನು ಮಿಶ್ರಣಕ್ಕೆ ಬಳಸಬೇಕು. ನಯವಾಗಿರದ ಹರಳಿನಂತಹ ಕಾಫಿಪುಡಿಯ ಬಳಕೆಯಿಂದ ಚರ್ಮಕ್ಕೆ ತೊಂದರೆಯಾಗಬಹುದು ಆದ್ದರಿಂದ ಈ ಬಗ್ಗೆ ಹೆಚ್ಚಿನ ಗಮನವಿರಲಿ. ಕಾಫಿಯು ಮುಖದ ಚರ್ಮದ ಕಣಗಳು ಒತ್ತೊಟ್ಟಿಗೆ ಇರುವಂತೆಯೂ ದಟ್ಟವಾಗಿರುವಂತೆಯೂ ಮಾಡುತ್ತದೆ. ಇದರಿಂದ ಚರ್ಮ ಜೋತು ಬೀಳುವದಿಲ್ಲ. ಹಾಗಾಗಿ ಆಸ್ಪತ್ರಳಲ್ಲಿ ಸೆಲ್ಯುಲೈಟ್ ಚಿಕಿತ್ಸೆಯಲ್ಲಿ ಈ ಕಾಫಿಪುಡಿಯನ್ನು ಬಳಸಲಾಗುತ್ತದೆ. ಜೇನುತುಪ್ಪವು ಚರ್ಮವು ಸದಾ ತಾಜಾ ಆಗಿರುವಂತೆ ಮಾಡುತ್ತದೆ.

ಲಿಂಬೆ ಮತ್ತು ಮೊಸರಿನ ಮಾಸ್ಕ್

ಲಿಂಬೆ ಮತ್ತು ಮೊಸರಿನ ಮಾಸ್ಕ್

ಹೆಚ್ಚಿನ ಸ್ಕಿನ್ ಕೇರ್ ಉತ್ಪನ್ನಗಳು ಲೆಕ್ಟಿಕ್ ಎಸಿಡಿನಿಂದ ತಯಾರಿಸಲ್ಪಟ್ಟಿರುತ್ತವೆ. ಈ ಲೆಕ್ಟಿಕ್ ಎಸಿಡ್ ಹಾಲಿನ ಉತ್ಪನ್ನಗಳಲ್ಲಿ ನೈಸರ್ಗಿಕವಾಗಿಯೇ ಬಂದಿರುತ್ತದೆ. ಮೊಸರೂ ಕೂಡ ಲೆಕ್ಟಿಕ್ ಎಸಿಡ್ಡನ್ನು ಒಳಗೊಂಡಿರುವ ಅಂತಹದೇ ಒಂದು ಉತ್ಪನ್ನವಾಗಿದೆ. ಈ ಲೆಕ್ಟಿಕ್ ಎಸಿಡ್ ಚರ್ಮಕ್ಕೆ ಬೇಕಾದ ತುಂಬಾ ಕೋಮಲವಾದ ಪದರವನ್ನು ನಿರ್ಮಿಸುತ್ತದೆ. ಈ ಮಾಸ್ಕ್ ಮಂದವಾದ ತ್ವಚೆಯನ್ನು ಹೊಂದಿರುವವರಿಗೆ ಅಥವಾ ಹೊಳಪಿಲ್ಲದಂತಹಾ ತ್ವಚೆಯುಳ್ಳವರಿಗೆ ಹೆಚ್ಚು ಸೂಕ್ತವಾದುದು. ಈ ಮಾಸ್ಕ್ ನಿಮ್ಮ ಮುಖಕ್ಕೆ ತಕ್ಷಣದ ಹೊಳಪನ್ನು ನೀಡುತ್ತದೆ. ಒಂದು ಚಮಚ ಮೊಸರಿಗೆ ಅರ್ಧ ಲಿಂಬೆ ಹಣ್ಣಿನ ರಸವನ್ನು ಹಿಡಿ ಮಿಕ್ಸ್ ಮಾಡಿಕೊಳ್ಳಿ. ಲ್ಯಾಕ್ಟಿಕ್ ಆಸಿಡ್ ಮತ್ತು ಸಿಟ್ರಿಕ್ ಆಸಿಡ್ ಎರಡೂ ಬಗೆಯ ಆಸಿಡುಗಳೂ ನಿಮ್ಮ ಮುಖದ ತ್ವಚೆಗೆ ಹೊಳಪನ್ನು ನೀಡುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸತ್ತದೆ.ಈ ಮಿಶ್ರಣವನ್ನು ನಿಮ್ಮ ಮುಖಕ್ಕೆ ಲೇಪಿಸಿಕೊಂಡು ಕನಿಷ್ಟ ಹದಿನೈದು ನಿಮಿಷಗಳ ಕಾಲ ಹಾಗೆಯೇ ಬಿಡಿ ನಂತರ ತೊಳೆದುಕೊಳ್ಳಿ.ಇದರಿಂದ ಇದು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.

ದಾಲ್ಚಿನ್ನಿ ಮತ್ತು ಜೇನು ತುಪ್ಪ

ದಾಲ್ಚಿನ್ನಿ ಮತ್ತು ಜೇನು ತುಪ್ಪ

ದಾಲ್ಚಿನ್ನಿ ಆಂಟಿ ಆಕ್ಸಿಡೆಂಟ್ ಮತ್ತು ಆಂಟಿ ಬ್ಯಾಕ್ಟೀರಿಯಲ್ ಆಗಿಯೂ ಕಾರ್ಯನಿರ್ವಹಿಸುವುದರಿಂದ ಇವುಗಳು ಮೊಡವೆಗಳ ಸಮಸ್ಯೆಗಳಿರುವವರಿಗೆ ಹೆಚ್ಚು ಉಪಯುಕ್ತವಾಗುತ್ತವೆ. ಒಂದು ಚಿಕ್ಕ ಚಮಚ ದಾಲ್ಚಿನ್ನಿಗೆ ಒಂದು ಚಮಚ ಜೇನು ತುಪ್ಪವನ್ನು ಹಾಕಿ ಈ ಚೆನ್ನಾಗಿ ಕಲಸಿ. ಈ ಮಿಶ್ರಣವನ್ನು ನಯವಾಗಿ ಮುಖಕ್ಕೆ ಲೇಪಿಸಿಕೊಳ್ಳಿ. ಈ ಲೇಪನ ಮುಖಕ್ಕೆ ಲೇಪಿಸಿದಾಗ ಕಚಗುಳಿಯಂತಹ ಅನುಭವವಾಗುವುದು ಇದರ ಲಕ್ಷಣ. ಆದರೆ ಇದರಿಂದ ತ್ವಚೆಗೆ ತೊಂದರೆಯೇನೂ ಆಗದು. ಹತ್ತು ನಿಮಿಷಗಳ ಕಾಲ ಬಿಟ್ಟು ನಂತರ ತೊಳೆದುಕೊಳ್ಳಿ. ಒಮ್ಮೆ ತೊಳೆದ ತಕ್ಷಣ ತ್ವಚೆ ಹರಡಿದಂತೆ ಆಗಿರುತ್ತದೆ ಮತ್ತು ಸ್ವಲ್ಪ ಸಮಯದ ನಂತರ ಸರಿಯಾಗತ್ತದೆ. ಒಟ್ಟಾರೆಯಾಗಿ ತ್ವಚೆಯನ್ನು ಇದು ಸ್ವಚ್ಚಗೊಳಿಸುತ್ತದೆ.

ಅರಿಶಿನ ಮತ್ತು ತೆಂಗಿನೆಣ್ಣೆಯ ಮಾಸ್ಕ್

ಅರಿಶಿನ ಮತ್ತು ತೆಂಗಿನೆಣ್ಣೆಯ ಮಾಸ್ಕ್

ಈ ಮಾಸ್ಕ್ ಎಲ್ಲಾ ಬಗೆಗಳ ತ್ವಚೆಗೂ ಸಕ್ತವೆನಿಸುವಂತದ್ದು. ಆರೋಗ್ಯಕರವಾದ ಮತ್ತು ಹೊಳೆಯುವ ತ್ವಚೆಯನ್ನು ಇಚ್ಚಿಸುವವರು ಈ ಮಾಸ್ಕ್ ಅನ್ನು ಬಳಸಬಹುದು. ಒಂದು ಟಿ ಚಮಚ ತೆಂಗಿನೆಣ್ಣೆಗೆ ಕಾಲು ಕಪ್ ಅರಿಶಿಣವನ್ನ ಹಾಕಿ ಮಿಶ್ರಣ ಮಾಡಿಕೊಳ್ಳಿ. ನಂತರ ಮುಖಕ್ಕೆ ಲೇಪಿಸಿಕೊಳ್ಳಿ. ಈ ಮಿಶ್ರಣನ್ನು ಇನ್ನಷ್ಟು ಮೃದು ಮಾಡಿಕೊಳ್ಳಲು ಇದಕ್ಕೆ ನೀರನ್ನು ಅಥವಾ ಹಾಲನ್ನು ಬಳಸಿಕೊಳ್ಳಬಹುದು. ಮಾಸ್ಕ್ ಒಣಗಿದ ನಂತರ ಮುಖವನ್ನು ತಣ್ಣೀರಿನಲ್ಲಿ ತೊಳೆದುಕೊಳ್ಳಬೇಕು ಮತ್ತು ಅಗತ್ಯವಿದ್ದಲ್ಲಿ ಆರ್ದ್ರಕಾರಕಗಳನ್ನು ಲೇಪಿಸಿಕೊಳ್ಳಬಹದು. ಈ ಮೇಲಿನ ಮಾಸ್ಕುಗಳನ್ನು ಬಳಸಿಕೊಂಡು ನಿಮ್ಮ ಮುಖದ ಅಂದವನ್ನು ಹೆಚ್ಚಿಸಿಕೊಳ್ಳಬಹದು ಮತ್ತು ತ್ವಚೆಗೆ ಸಂಬಂಧಸಿದ ಸಮಸ್ಯೆಗಳಿಂದ ಕೂಡ ಪರಿಹಾರವನ್ನು ಕಂಡುಕೊಳ್ಳಬಹದು. ರಾಸಾಯನಿಕರಹಿತವಾದ ಈ ಮಾಸ್ಕುಗಳನ್ನು ಎಲ್ಲರೂ ಸ್ವತಃ ಮನೆಯಲ್ಲಿಯೇ ಬೇಕೆನಿಸಿದಾಗ ತಯಾರಿಸಿಕೊಂಡು ಬಳಸಬಹುದಾಗಿದೆ.

English summary

Best Two-ingredient Face Masks For All Skin Problems

Face masks are designed to restore glow, hydrate and pamper your skin within minutes. Face masks work wonders for your skin, if they are made of natural homemade ingredients such as yoghurt, honey, turmeric, aloe vera, cinnamon, or coconut oil.Face masks work wonders for your skin if they are made of natural homemade ingredients such as yoghurt
Story first published: Thursday, April 12, 2018, 19:25 [IST]
X
Desktop Bottom Promotion