For Quick Alerts
ALLOW NOTIFICATIONS  
For Daily Alerts

ಒಣ ತ್ವಚೆಯ ಸಮಸ್ಯೆಗೆ ಕಿತ್ತಳೆ ಹಣ್ಣಿನ ಸಿಪ್ಪೆಯ ಫೇಸ್ ಪ್ಯಾಕ್

|

ಚಳಿಗಾಲ ಬರುತ್ತಿರುವಂತೆ ಒಣ ಚರ್ಮದವರಿಗೆ ಸಮಸ್ಯೆಗಳು ಕಾಣಿಸಿಕೊಳ್ಳಲು ಆರಂಭವಾಗುವುದು. ಯಾಕೆಂದರೆ ಚಳಿಗಾಲದಲ್ಲಿ ಚರ್ಮ ಒಣಗುವುದು, ಒಡೆಯುವುದು ಸಾಮಾನ್ಯ. ಇದರಿಂದಾಗಿ ಚರ್ಮಕ್ಕೆ ಹೆಚ್ಚಿನ ಆರೈಕೆ ನೀಡಬೇಕು. ಹೀಗೆ ಮಾಡಿದರೆ ನಿಸ್ತೇಜ ಮತ್ತು ಕಳೆಗುಂದಿದ ಚರ್ಮದ ಸಮಸ್ಯೆ ನಿವಾರಣೆ ಮಾಡಬಹುದು. ಚಳಿಗಾಲದಲ್ಲಿ ಚರ್ಮಕ್ಕೆ ಮೊಶ್ಚಿರೈಸ್ ನೀಡುವುದು ಮಹತ್ವದ ಪಾತ್ರ ವಹಿಸುತ್ತದೆ. ಆದರೆ ಬೇರೆ ರೀತಿಯಿಂದಲೂ ಚರ್ಮದ ಆರೈಕೆಯನ್ನು ಮಾಡಿಕೊಳ್ಳಬಹುದು. ಈ ಲೇಖನದಲ್ಲಿ ಕಿತ್ತಳೆ ಹಣ್ಣನ್ನು ಬಳಸಿಕೊಂಡು ತಯಾರಿಸಬಹುದಾದ ಕೆಲವೊಂದು ಫೇಸ್ ಪ್ಯಾಕ್ ಗಳ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ. ಚಳಿಗಾಲದಲ್ಲಿ ಸಿಗುವಂತಹ ಕಿತ್ತಳೆ ಹಣ್ಣು ನಿಮಗೆ ಇತರ ಸಮಯದಲ್ಲಿ ಸಿಗುವಂತಹ ಕಿತ್ತಳೆ ಹಣ್ಣಿಗಿಂತ ತುಂಬಾ ಸಿಹಿಯಾಗಿರುವುದು.

Orange Face Packs

ನೀವು ಕಿತ್ತಳೆ ಹಣ್ಣನ್ನು ಸೇವಿಸುವ ಮೂಲಕವು ಕಾಂತಿಯುತ ಚರ್ಮವನ್ನು ಪಡೆಯಬಹುದು. ಯಾಕೆಂದರೆ ಕಿತ್ತಳೆ ಹಣ್ಣಿನಲ್ಲಿ ಇರುವಂತಹ ನಾರಿನಾಂಶವು ದೇಹದಲ್ಲಿ ಇರುವಂತಹ ವಿಷಕಾರಿ ಅಂಶಗಳನ್ನು ಹೊರಹಾಕುವುದು. ಇದನ್ನು ನೀವು ಹಚ್ಚಿಕೊಂಡರೆ ಆಗ ಚರ್ಮಕ್ಕೆ ಹೆಚ್ಚಿನ ಲಾಭ ಸಿಗುವುದು. ಚಳಿಗಾಲದಲ್ಲಿ ಕಿತ್ತಳೆ ಹಣ್ಣನ್ನು ಬಳಸಿಕೊಂಡು ತ್ವಚೆಯ ಆರೈಕೆ ಮಾಡುವುದು ಹೇಗೆ ಎಂದು ನೀವು ತಿಳಿಯಿರಿ.

ಕಿತ್ತಳೆ ಸಿಪ್ಪೆಯ ಫೇಸ್ ಪ್ಯಾಕ್

ಕಿತ್ತಳೆ ಸಿಪ್ಪೆಯ ಫೇಸ್ ಪ್ಯಾಕ್

ನೀವು ಕಿತ್ತಳೆ ಹಣ್ಣನ್ನು ತ್ವಚೆಗೆ ಬಳಸಿಕೊಳ್ಳಲು ಬಯಸಿದರೆ ಆಗ ಇದರ ಹಣ್ಣಿಗಿಂತ ಸಿಪ್ಪೆಯು ತುಂಬಾ ಪರಿಣಾಮಕಾರಿಯಾಗಿರುವುದು. ಕಿತ್ತಳೆ ಸಿಪ್ಪೆಯನ್ನು ಬಳಸಿಕೊಂಡರೆ ಅದರಿಂದ ಚರ್ಮದ ಸತ್ತ ಕೋಶಗಳನ್ನು ನಿವಾರಣೆ ಮಾಡಬಹುದು. ಯಾಕೆಂದರೆ ಕಿತ್ತಳೆಯಲ್ಲಿ ಹೆಚ್ಚಿನ ಮಟ್ಟದ ಕ್ಯಾಲ್ಸಿಯಂ ಇದೆ. 2-3 ದಿನಗಳ ಕಾಲ ಕಿತ್ತಳೆ ಸಿಪ್ಪೆಯನ್ನು ಬಿಸಿಲಿನಲ್ಲಿ ಒಣಗಿಸಲು ಹಾಕಿ. ಇದರ ಬಳಿಕ ಮಿಕ್ಸಿಗೆ ಹಾಕಿ ಹುಡಿ ಮಾಡಿ. ಇದಕ್ಕೆ ನೀವು ರೋಸ್ ವಾಟರ್ ಅಥವಾ ಸಾಮಾನ್ಯ ನೀರು ಹಾಕಿಕೊಂಡು ಫೇಸ್ ಪ್ಯಾಕ್ ತಯಾರಿಸಬಹುದು.

Most Read: ಕೂದಲು ಸೊಂಪಾಗಿ ಬೆಳೆಯಲು 'ಕಪ್ಪು ಬೀಜದ ಎಣ್ಣೆ' ಬಳಸಿ

ಕಿತ್ತಳೆ ಸಿಪ್ಪೆ, ಅರಶಿನ ಮತ್ತು ಜೇನುತುಪ್ಪದ ಪ್ಯಾಕ್

ಕಿತ್ತಳೆ ಸಿಪ್ಪೆ, ಅರಶಿನ ಮತ್ತು ಜೇನುತುಪ್ಪದ ಪ್ಯಾಕ್

ಈ ಪ್ಯಾಕ್ ಚರ್ಮಕ್ಕೆ ಮೊಶ್ಚಿರೈಸ್ ಮಾಡುವುದರ ಜತೆಗೆ ಚರ್ಮಕ್ಕೆ ಕಾಂತಿ ನೀಡುವುದು. ಒಂದು ಪಿಂಗಾಣಿಯಲ್ಲಿ ಒಂದು ಚಮಚ ಕಿತ್ತಳೆ ಸಿಪ್ಪೆ ಹುಡಿ, ಒಂದು ಚಮಚ ಜೇನುತುಪ್ಪ ಮತ್ತು ಒಂದು ಚಿಟಿಕೆ ಅರಶಿನ ಹಾಕಿ. ಎಲ್ಲವನ್ನು ಜತೆ ಸೇರಿಸಿಕೊಂಡು ಫೇಸ್ಟ್ ಮಾಡಿಕೊಳ್ಳಿ. ಮುಖ ತೊಳೆದ ಬಳಿಕ ಈ ಪ್ಯಾಕ್ ನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ. ಸುಮಾರು 10-15 ನಿಮಿಷ ಕಾಲ ಹಾಗೆ ಒಣಗಲಿ. ಬಳಿಕ ಸಾಮಾನ್ಯ ನೀರಿನಿಂದ ತೊಳೆಯಿರಿ. ಮೊಡವೆಗಳಿದ್ದರೆ ಈ ಫೇಸ್ ಪ್ಯಾಕ್ ಬಳಸಬೇಡಿ.

ಕಿತ್ತಳೆ ಮತ್ತು ಮೊಸರಿನ ಪ್ಯಾಕ್

ಕಿತ್ತಳೆ ಮತ್ತು ಮೊಸರಿನ ಪ್ಯಾಕ್

ಕಿತ್ತಳೆ ಹಣ್ಣಿನ ತಿರುಳನ್ನು ತ್ವಚೆಗೆ ಹಚ್ಚಿಕೊಂಡಾಗ ಮೃಧು ಹಾಗೂ ಸುಂದರ ತ್ವಚೆ ಸಿಗುವುದು, ಇದರಿಂದ ಚರ್ಮದ ಬಣ್ಣ ಕೂಡ ಸುಧಾರಣೆಯಾಗುವುದು. ಇದಕ್ಕಾಗಿ ನೀವು 1/2 ಕಪ್ ಕಿತ್ತಳೆ ತಿರುಳು ಮತ್ತು 2 ಚಮಚ ಮೊಸರು ಹಾಕಿಕೊಳ್ಳಿ. ಇದನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಂಡು 15-20 ನಿಮಿಷ ಕಾಲ ಹಾಗೆ ಬಿಡಿ. 20 ನಿಮಿಷ ಬಿಟ್ಟು ಸಾಮಾನ್ಯ ನೀರಿನಿಂದ ತೊಳೆಯಿರಿ. ಮುಖ ಒಣಗಲಿ ಮತ್ತು ಬಳಿಕ ಮೊಶ್ಚಿರೈಸರ್ ಹಚ್ಚಿಕೊಳ್ಳಿ.

Most Read: ಮನೆಯಲ್ಲೇ ಮೊಟ್ಟೆ ಹಾಗೂ ಜೇನು ಬಳಸಿಕೊಂಡು ಮಾಡಿ 'ಹೇರ್ ಸ್ಪಾ'

ಕಿತ್ತಳೆ ಸಿಪ್ಪೆ ಮತ್ತು ಲಿಂಬೆ ಪ್ಯಾಕ್

ಕಿತ್ತಳೆ ಸಿಪ್ಪೆ ಮತ್ತು ಲಿಂಬೆ ಪ್ಯಾಕ್

ಮೊಡವೆಗಳಿರುವ ಚರ್ಮಕ್ಕೆ ಈ ಫೇಸ್ ಪ್ಯಾಕ್ ತುಂಬಾ ಅದ್ಭುತವಾಗಿ ಕೆಲಸ ಮಾಡುವುದು. ಒಂದು ಸ್ವಚ್ಛವಾದ ಪಿಂಗಾಣಿ ತೆಗೆದುಕೊಳ್ಳಿ ಮತ್ತು ಇದಕ್ಕೆ ಎರಡು ಚಮಚ ಕಿತ್ತಳೆ ಸಿಪ್ಪೆ ಹುಡಿ, 1 ಚಮಚ ಮುಲ್ತಾನಿ ಮಿಟ್ಟಿ ಅಥವಾ ಶ್ರೀಗಂಧದ ಹುಡಿ ಮತ್ತು ಕೆಲವು ಹನಿ ಲಿಂಬೆರಸ ಹಾಕಿ. ಇದನ್ನು ಮುಖದ ಮೇಲೆ ಹಚ್ಚಿಕೊಳ್ಳಿ ಮತ್ತು ಸುಮಾರು 30 ನಿಮಿಷ ಕಾಲ ಹಾಗೆ ಬಿಡಿ. ಇದರ ಬಳಿಕ ಸಾಮಾನ್ಯ ನೀರಿನಿಂದ ತೊಳೆಯಿರಿ.

English summary

Best Orange Face Packs For Dry Skin

The winter season is here and so is the need to give a little extra pampering to your skin. This is the time when your skin becomes dry and flaky, thus making it look dull and lifeless. Orange when applied topically, has much more benefits on the skin. You can use orange with other ingredients like curd, honey, etc. to treat dry skin.
X
Desktop Bottom Promotion