ಮುಖದ ಆಕರ್ಷಣೆಯನ್ನು ಹೆಚ್ಚಿಸುವ 'ಫೇಶಿಯಲ್ ಮಸಾಜ್‌'

By: Divya pandit Pandit
Subscribe to Boldsky

ಕೆಲವರನ್ನು ನೋಡಿದಾಗ ವಯಸ್ಸು ಹೆಚ್ಚಾಗಿದ್ದರೂ ಅವರಿಗೆ ಅಷ್ಟು ವರ್ಷ ಆಗಿರಲಿಕ್ಕಿಲ್ಲ ಎಂದೇ ಅನಿಸುತ್ತದೆ. ಇನ್ನೂ ಕೆಲವರಿಗೆ ವಯಸ್ಸು ಕಡಿಮೆಯಾಗಿದ್ದರೂ ಹೆಚ್ಚು ವಯಸ್ಸಾದವರಂತೆ ತೋರುತ್ತಾರೆ. ಇದಕ್ಕೆ ಕಾರಣ ಅವರ ವಂಶಾವಳಿಯೊಂದೇ ಕಾರಣವಾಗಿರುವುದಿಲ್ಲ. ಬದಲಿಗೆ ಮುಖದ ತ್ವಚೆಯಲ್ಲಿ ಕಾಣುವ ಚಿಹ್ನೆಗಳು ಎನ್ನಬಹುದು. ಮುಖದ ಚರ್ಮವು ಸುಕ್ಕುಗಟ್ಟಿದಂತಾಗುವುದು, ಗೆರೆಗಳು ಕಾಣಿಸಿಕೊಳ್ಳುವುದು ಅಥವಾ ಮಂದವಾದ ಕಾಂತಿಯನ್ನು ಹೊಂದುವುದು ಸಹ ವಯಸ್ಸಾದವರಂತೆ ತೋರುತ್ತದೆ.

ಮುಖವು ಆಕರ್ಷಣೆಯಿಂದ ಕೂಡಿರಬೇಕು, ಸದಾ ಕಾಂತಿಯಿಂದ ಕಂಗೊಳಿಸಬೇಕು ಎಂದರೆ ಮುಖದ ಮಸಾಜ್ ಮಾಡುತ್ತಿರಬೇಕು. ಆಗ ಮುಖದ ಜರ್ಮವು ಹೆಚ್ಚು ಬಿಗಿತ ಹಾಗೂ ಆರೋಗ್ಯದಿಂದ ಕೂಡಿರುತ್ತದೆ. ಮುಖದ ಮಸಾಜ್ ಕೇವಲ ಇಂದಿನ ಅಥವಾ ನಿನ್ನೆಯ ಆರೈಕೆಯ ವಿಧಾನವಲ್ಲ. ಇದು ಪುರಾತನ ಕಾಲದಿಂದಲೂ ತಿಳಿದಿರುವ ಹಾಗೂ ಪ್ರಪಂಚದಾದ್ಯಂತ ಪ್ರಚಲಿತದಲ್ಲಿರುವ ಆರೈಕೆಯ ವಿಧಾನವಾಗಿದೆ. ಗಣನೀಯವಾಗಿ ಮುಖದ ಮಸಾಜ್ ಮಾಡುವುದರಿಂದ ಮುಖದ ಚರ್ಮವು ಹೆಚ್ಚು ಆರೋಗ್ಯದಿಂದ ಕೂಡಿರುತ್ತದೆ.

ಮುಖದ ಮೇಲೆ ಸೂಕ್ತವಾದ ಎಣ್ಣೆ ಅಥವಾ ಕ್ರೀಮ್‌ಗಳ ಬಳಕೆ ಮಾಡಿ ಮೃದುವಾಗಿ ಮಸಾಜ್ ಮಾಡುವುದರಿಂದ ರಕ್ತದ ಪರಿಚಲನೆಯು ಸುಗಮವಾಗುತ್ತದೆ. ಜೊತೆಗೆ ಚರ್ಮದಲ್ಲಿ ಇರುವ ಅನೇಕ ಸಮಸ್ಯೆಗಳು ನಿವಾರಣೆಯಾಗುತ್ತವೆ. ಈ ಕುರಿತು ನೀವು ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದುಕೊಂಡಿದ್ದರೆ ಈ ಮುಂದೆ ವಿವರಿಸಿರುವ ವಿವರಣೆಯನ್ನು ಅರಿಯಿರಿ...

ಚರ್ಮದಲ್ಲಿ ರಕ್ತ ಪರಿಚಲನೆ ಉತ್ತೇಜಿಸುತ್ತದೆ

ಚರ್ಮದಲ್ಲಿ ರಕ್ತ ಪರಿಚಲನೆ ಉತ್ತೇಜಿಸುತ್ತದೆ

ಮುಖದ ಮಸಾಜ್ ನಿಮ್ಮ ಚರ್ಮದಲ್ಲಿ ರಕ್ತ ಪರಿಚಲನೆಯು ಉತ್ತೇಜಿಸುತ್ತದೆ ಮತ್ತು ಒಟ್ಟಾರೆ ಆರೋಗ್ಯವನ್ನು ಹೆಚ್ಚಿಸುತ್ತದೆ. ಉತ್ತಮ ರಕ್ತ ಪರಿಚಲನೆ ಪರಿಣಾಮಕಾರಿಯಾಗಿ ಚರ್ಮ ಕೋಶಗಳನ್ನು ಪೋಷಿಸುವುದು ಮತ್ತು ಪುನರ್ ಯೌವನದಿಂದ ಕೂಡಿರುವಂತೆ ಮಾಡುತ್ತದೆ.

ವಯಸ್ಸಾದ ಚಿಹ್ನೆಗಳನ್ನು ವಿಳಂಬಗೊಳಿಸುತ್ತದೆ

ವಯಸ್ಸಾದ ಚಿಹ್ನೆಗಳನ್ನು ವಿಳಂಬಗೊಳಿಸುತ್ತದೆ

ಮುಖದ ಮರ್ದನ ಮಾಡುವುದರಿಂದ ಇನ್ನೊಂದು ಪ್ರಯೋಜನವೆಂದರೆ ನಮ್ಮ ವಯಸ್ಸಾದ ಮುಖದ ಚಿಹ್ನೆಯನ್ನು ಕಡಿಮೆಗೊಳಿಸುವುದು. ಇದು ರೇಖೆಗಳು ಮತ್ತು ಸುಕ್ಕುಗಳ ಚಿಹ್ನೆಗಳನ್ನು ವಿಳಂಬಗೊಳಿಸುತ್ತದೆ. ಕಣ್ಣುಗಳು ಮತ್ತು ಬಾಯಿ ಸುತ್ತ ಇರುವ ಸುಕ್ಕುಗಳನ್ನು ನಿವಾರಿಸುತ್ತದೆ.

ಕೊಲೊಜೆನ್ ಪ್ರೊಡಕ್ಷನ್ ಅನ್ನು ಹೆಚ್ಚಿಸುತ್ತದೆ

ಕೊಲೊಜೆನ್ ಪ್ರೊಡಕ್ಷನ್ ಅನ್ನು ಹೆಚ್ಚಿಸುತ್ತದೆ

ನಿಮ್ಮ ಚರ್ಮದಲ್ಲಿ ಕಾಲಜನ್ ನಷ್ಟವು ಹಲವಾರು ಅಹಿತಕರ ಮತ್ತು ಅನಪೇಕ್ಷಿತ ಚರ್ಮದ ಪರಿಸ್ಥಿತಿಗಳಿಗೆ ಕಾರಣವಾಗಬಹುದು. ಸಾಮಾನ್ಯ ಚರ್ಮದ ಮಸಾಜ್ ನಿಮ್ಮ ಚರ್ಮದಲ್ಲಿ ಕಾಲಜನ್ ಸ್ಥಗಿತವನ್ನು ತಡೆಯುವುದು. ಅಲ್ಲದೆ ಮುಖದ ಮೇಲಿರುವ ಕಲೆಗಳನ್ನು ನಿವಾರಿಸುವದು.

ಚರ್ಮದ ಸ್ಥಿತಿಸ್ಥಾಪಕತ್ವವನ್ನು ಸುಧಾರಿಸುತ್ತದೆ

ಚರ್ಮದ ಸ್ಥಿತಿಸ್ಥಾಪಕತ್ವವನ್ನು ಸುಧಾರಿಸುತ್ತದೆ

ಮುಖದ ಮಸಾಜ್ ಚರ್ಮದ ಸ್ಥಿತಿಸ್ಥಾಪಕತ್ವವನ್ನು ಸುಧಾರಿಸುವ ಒಂದು ಉತ್ತಮ ವಿಧಾನವಾಗಿದೆ. ಈ ಎಲ್ಲ ನೈಸರ್ಗಿಕ ವಿಧಾನವು ನಿಮ್ಮ ಚರ್ಮದ ಸ್ಥಿತಿಸ್ಥಾಪಕತ್ವವನ್ನು ಗಮನಾರ್ಹವಾಗಿ ಸುಧಾರಿಸಬಹುದು ಮತ್ತು ಅದನ್ನು ಇನ್ನಷ್ಟು ದೃಢಪಡಿಸುತ್ತದೆ. ಇದಲ್ಲದೆ ಅದು ಸ್ವತಂತ್ರ ರಾಡಿಕಲ್‌ಗಳನ್ನು ತಡೆಗಟ್ಟಬಹುದು. ನಿಮ್ಮ ಚರ್ಮವು ಅದರ ಅತ್ಯುತ್ತಮವಾದ ಗುಣವನ್ನು ಪಡೆದುಕೊಳ್ಳುತ್ತದೆ.

ಕಣ್ಣಿನ ಭಾಗದ ಕಪ್ಪು ಕಲೆ

ಕಣ್ಣಿನ ಭಾಗದ ಕಪ್ಪು ಕಲೆ

ಚರ್ಮದಲ್ಲಿ ರಕ್ತ ಪರಿಚಲನೆ ಸರಾಗವಾಗಿ ನಡೆಯದಿದ್ದರೆ ಕಣ್ಣಿನ ಸುತ್ತ ಹಾಗೂ ಕೆಳಭಾಗದಲ್ಲಿ ಕಪ್ಪು ಕಲೆಗಳು ಗೋಚರವಾಗುತ್ತವೆ. ಇದು ನೋಡುಗರಿಗೆ ಅಸಹ್ಯವನ್ನು ಹುಟ್ಟಿಸಬಹುದು. ನಿಯಮಿತವಾದ ಮಸಾಜ್ ಈ ಸಮಸ್ಯೆಯನ್ನು ನಿವಾರಿಸುವುದು..

ಚರ್ಮವನ್ನು ನಿರ್ವಿಷಗೊಳಿಸುತ್ತದೆ

ಚರ್ಮವನ್ನು ನಿರ್ವಿಷಗೊಳಿಸುತ್ತದೆ

ಪ್ರತಿದಿನವೂ ನಮ್ಮ ಚರ್ಮವು ಹಲವಾರು ಕಲ್ಮಶಗಳು ಮತ್ತು ಜೀವಾಣುಗಳಿಗೆ ಒಡ್ಡುತ್ತದೆ. ಅದು ರಂಧ್ರಗಳಲ್ಲಿ ಸಂಗ್ರಹವಾಗಬಹುದು ಮತ್ತು ಅಸಹ್ಯವಾದ ಬ್ರೇಕ್ ಔಟ್ ಗಳಿಗೆ ಕಾರಣವಾಗುತ್ತದೆ. ಅದಕ್ಕಾಗಿಯೇ ಕಾಲಕಾಲಕ್ಕೆ ಚರ್ಮವನ್ನು ಮರ್ದನ/ಮಸಾಜ್ ಮಾಡುವುದರಿಂದ ನಿರ್ವಿಷಗೊಳಿಸಬಹುದು..

ಮುಖ ಸ್ನಾಯುಗಳನ್ನು ಬಿಗಿಗೊಳಿಸುತ್ತದೆ

ಮುಖ ಸ್ನಾಯುಗಳನ್ನು ಬಿಗಿಗೊಳಿಸುತ್ತದೆ

ಮುಖದ ಸೌಂದರ್ಯ ಹೆಚ್ಚಲು ಬಿಗುವಾದ ತ್ವಚೆಯು ಪ್ರಮುಖವಾಗಿರುತ್ತದೆ. ನಿಯಮಿತವಾದ ಮುಖದ ಮಸಾಜ್ ಸ್ನಾಯುಗಳು ಹೆಚ್ಚು ಬಿಗಿತದಿಂದ ಕೂಡಿರುವಂತೆ ಮಾಡುತ್ತದೆ. ಚರ್ಮವು ಹೆಚ್ಚು ಬಿಗಿತದಿಂದ ಕೂಡಿರುವಂತೆ ಕಡು ಬಂದರೆ ಸುಕ್ಕುಗಳು ಹಾಗೂ ಅನಗತ್ಯ ರಂಧ್ರಗಳು ಮುಚ್ಚಿ ಹೋಗುವುದು.

ಮುಖದ ಕಾಂತಿ ಹೆಚ್ಚುವುದು

ಮುಖದ ಕಾಂತಿ ಹೆಚ್ಚುವುದು

ಮುಖದ ಮಸಾಜ್ ಮುಖದಲ್ಲೊಂದು ವಿಶೇಷಾದ ಕಾಂತಿಯನ್ನು ಹುಟ್ಟಿಸಬಹುದು. ಮಸಾಜ್ ಮೂಲಕ ತ್ವಚೆಯ ಅನೇಕ ಸಮಸ್ಯೆಗಳು ನಿವಾರಣೆಯಾಗುತ್ತವೆ. ಈ ಹಿನ್ನೆಲೆಯಲ್ಲಿಯೇ ವೈದ್ಯರು ಮಹಿಳೆಯರಿಗೆ ಮುಖದ ಮಸಾಜ್ ಬಗ್ಗೆ ಸಲಹೆ ನೀಡುತ್ತಾರೆ. ಸೂಕ್ತ ಎಣ್ಣೆ ಹಾಗೂ ಕ್ರೀಮ್‌ಗಳ ಸಹಾಯದಿಂದ ಮಸಾಜ್ ಪ್ರವೃತ್ತಿಯನ್ನು ಹೊಂದಬೇಕು. ಆಗ ಚರ್ಮವು ಪುನರ್ ಯೌವನ ಪಡೆದು, ಹೊಳಪನ್ನು ನೀಡುತ್ತದೆ.

English summary

benefits-of-facial-massage-you-should-know

There are a lot of people who visit beauty salons to get a facial massage. However, it is something that can be done at home as well. Easy and highly effective, this beauty technique is extremely safe and inexpensive. If you have still not tried it out, then today's post is ideal for you. As today at Boldsky, we've brought together a list of benefits of getting a facial massage done. Because of these benefits, this beauty technique has managed to gain popularity all over the world. Incorporate it into your skin care routine to reap the benefits.
Story first published: Thursday, February 1, 2018, 7:00 [IST]
Subscribe Newsletter