ಐದೇ ನಿಮಿಷದಲ್ಲಿ ಮುಖದ ಸೌಂದರ್ಯ ಹೆಚ್ಚಿಸುವ 'ಬೀಟ್‌ರೂಟ್' ಪ್ಯಾಕ್!

Posted By: Hemanth
Subscribe to Boldsky

ಭೂಮಿ ಅಡಿಯಲ್ಲಿ ಬೆಳೆಯುವಂತಹ ಕೆಲವೊಂದು ತರಕಾರಿಗಳಲ್ಲಿ ತನ್ನದೇ ಆಗಿರುವಂತಹ ಪೋಷಕಾಂಶಳಿರುವುದು. ಇದು ದೇಹಕ್ಕೆ ಕೂಡ ತುಂಬಾ ಪರಿಣಾಮಕಾರಿ. ಅದರಲ್ಲಿ ಬೀಟ್‌ರೂಟ್ ಕೂಡ ಒಂದು. ಇದರಲ್ಲಿ ಅಧಿಕ ಮಟ್ಟದ ಪೋಷಕಾಂಶಗಳು ಇವೆ. ದೇಹದ ಆರೋಗ್ಯಕ್ಕೆ ಇದು ತುಂಬಾ ಲಾಭಕಾರಿ. ಇದನ್ನು ಆಹಾರವಾಗಿ ಸೇವಿಸುವುದರ ಜತೆಗೆ ತ್ವಚೆಯ ಆರೈಕೆಯಲ್ಲಿ ಬಳಸಿಕೊಳ್ಳಲಾಗುತ್ತದೆ.

ಬೀಟ್‌ರೂಟ್ ಅನ್ನು ಹಿಂದಿನಿಂದಲೂ ತ್ವಚೆಯ ಆರೈಕೆಗೆ ಬಳಸಲಾಗುತ್ತಿದೆ. ಇದರಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಗಳು ಚರ್ಮಕ್ಕೆ ಹಲವಾರು ರೀತಿಯಿಂದ ಲಾಭಕಾರಿ. ಇದರಲ್ಲಿ ಇರುವಂತಹ ಪೋಷಕಾಂಶಗಳು ಚರ್ಮಕ್ಕೆ ಹಾನಿಯುಂಟು ಮಾಡುವ ಫ್ರೀರ್ಯಾಡಿಕಲ್ ನ್ನು ತಡೆಯುವುದು ಮತ್ತು ಚರ್ಮದ ಆರೋಗ್ಯ ಕಾಪಾಡುವುದು.

ಬೀಟ್‌ರೂಟ್ ಜ್ಯೂಸ್, ಎಂದಾಕ್ಷಣ ಮುಖಸಿಂಡರಿಸಬೇಡಿ...

ಬೀಟ್ ರೂಟ್ ಅನ್ನು ಚರ್ಮದ ಆರೈಕೆಗೆ ಬಳಸಿದರೆ ಅದರಿಂದ ನೂರಾರು ಲಾಭಗಳು ಸಿಗುವುದು. ಬೀಟ್ ರೂಟ್ ನ್ನು ಇನ್ನು ಕೆಲವೊಂದು ಸಾಮಗ್ರಿಗಳ ಜತೆಗೆ ಸೇರಿಸಿಕೊಂಡು ಚರ್ಮಕ್ಕೆ ಬಳಸಿಕೊಂಡರೆ ಅದು ಪರಿಣಾಮಕಾರಿ. ಬೀಟ್ ರೂಟ್ ಮತ್ತು ಇತರ ಕೆಲವೊಂದು ನೈಸರ್ಗಿಕ ಸಾಮಗ್ರಿಗಳ ಬಳಸಿ ಫೇಸ್ ಪ್ಯಾಕ್ ತಯಾರಿಸುವುದು ಹೇಗೆ ಎಂದು ತಿಳಿಯಿರಿ.... 

ಬೀಟ್ ರೂಟ್ ಮತ್ತು ಲಿಂಬೆರಸದ ಪ್ಯಾಕ್

ಬೀಟ್ ರೂಟ್ ಮತ್ತು ಲಿಂಬೆರಸದ ಪ್ಯಾಕ್

ತಯಾರಿಸುವ ವಿಧಾನ

* ತಾಜಾ ಬೀಟ್ ರೂಟ್ ನ ಒಂದು ಚಮಚ ರಸ ಮತ್ತು ಅದಕ್ಕೆ ಅರ್ಧ ಚಮಚ ಲಿಂಬೆರಸ ಹಾಕಿ ಬೆರೆಸಿ

* ಈ ಮಿಶ್ರಣದಲ್ಲಿ ಹತ್ತಿ ಉಂಡೆ ಅದ್ದಿಡಿ ಮತ್ತು ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ.

* ಉಗುರುಬೆಚ್ಚಗಿನ ನೀರಿನಿಂದ ತೊಳೆಯುವ ಮೊದಲು ಹತ್ತು ನಿಮಿಷ ಕಾಲ ಹಾಗೆ ಬಿಡಿ.

ಎಷ್ಟು ಸಲ?

ವಾರದಲ್ಲಿ ಎರಡು ಸಲ ಬಳಸಿದರೆ ಫಲಿತಾಂಶ ಪಡೆಯಬಹುದು.

ಬೀಟ್ ರೂಟ್ ಮತ್ತು ಅಲೋವೆರಾ ಲೋಳೆ ಫೇಸ್ ಪ್ಯಾಕ್

ಬೀಟ್ ರೂಟ್ ಮತ್ತು ಅಲೋವೆರಾ ಲೋಳೆ ಫೇಸ್ ಪ್ಯಾಕ್

ತಯಾರಿಸುವ ವಿಧಾನ

*ಒಂದು ತುಂಡು ಬೀಟ್ ರೂಟ್ ನ್ನು ತುರಿಯಿರಿ ಮತ್ತು ಇದಕ್ಕೆ ತಾಜಾ ಇರುವಂತಹ ಅಲೋವೆರಾ ಲೋಳೆ ಹಾಕಿ ಮಿಶ್ರಣ ಮಾಡಿ.

*ಇದನ್ನು ಸಂಪೂರ್ಣ ಮುಖಕ್ಕೆ ಹಚ್ಚಿಕೊಳ್ಳಿ.

* ಸಾಮಾನ್ಯ ನೀರಿನಿಂದ ತೊಳೆಯುವ ಮೊದಲು 10-15 ನಿಮಿಷ ಕಾಲ ಮುಖದಲ್ಲಿ ಹಾಗೆ ಇರಲಿ.

ಎಷ್ಟು ಸಲ?

ಮನೆಯಲ್ಲಿ ತಯಾರಿಸಿದ ಈ ಫೇಸ್ ಪ್ಯಾಕ್ ನ್ನು ವಾರದಲ್ಲಿ ಒಂದು ಸಲ ಬಳಸಿದರೆ ಚರ್ಮಕ್ಕೆ ಪೋಷಣೆ ಸಿಗುವುದು ಮತ್ತು ಬಣ್ಣವು ಸುಧಾರಣೆಯಾಗುವುದು.

 ಬೀಟ್ ರೂಟ್ ಮತ್ತು ಅಕ್ಕಿ ಹಿಟ್ಟಿನ ಪ್ಯಾಕ್

ಬೀಟ್ ರೂಟ್ ಮತ್ತು ಅಕ್ಕಿ ಹಿಟ್ಟಿನ ಪ್ಯಾಕ್

* ಎರಡು ಚಮಚ ಬೀಟ್ ರೂಸ್ ರಸ ಮತ್ತು 1/2 ಚಮಚ ಅಕ್ಕಿ ಹಿಟ್ಟು ಹಾಕಿ.

* ಇದನ್ನು ಮುಖ ಮತ್ತು ಕುತ್ತಿಗೆಗೆ ಸಂಪೂರ್ಣವಾಗಿ ಹಚ್ಚಿಕೊಳ್ಳಿ.

* ಮುಖದಲ್ಲಿ 15 ನಿಮಿಷ ಕಾಲ ಹಾಗೆ ಒಣಗಲು ಬಿಡಿ ಮತ್ತು ಬಳಿಕ ಲಘು ಕ್ಲೆನ್ಸರ್ ಮತ್ತು ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.

ಎಷ್ಟು ಸಲ?

ತಿಂಗಳಲ್ಲಿ 3-4 ಸಲ ಈ ಫೇಸ್ ಪ್ಯಾಕ್ ನ್ನು ಹಚ್ಚಿಕೊಂಡರೆ ಸುಂದರ ಹಾಗೂ ಯೌವನಯುತ ತ್ವಚೆ ನಿಮ್ಮದಾಗುವುದು.

ಬೀಟ್ ರೂಟ್ ಮತ್ತು ಜೇನುತುಪ್ಪದ ಪ್ಯಾಕ್

ಬೀಟ್ ರೂಟ್ ಮತ್ತು ಜೇನುತುಪ್ಪದ ಪ್ಯಾಕ್

ತಯಾರಿಸುವ ವಿಧಾನ

*ಒಂದು ಪಿಂಗಾಣಿ ತೆಗೆದುಕೊಳ್ಳಿ, ಅದಕ್ಕೆ ಎರಡು ಚಮಚ ಜೇನುತುಪ್ಪ ಮತ್ತು ಒಂದು ಚಮಚ ಬೀಟ್ ರೂಟ್ ಹಾಕಿ.

* ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ ಮತ್ತು ಪೇಸ್ಟ್ ಮಾಡಿ.

*ಈ ಪೇಸ್ಟ್ ನ್ನು ಮುಖಕ್ಕೆ ಹಚ್ಚಿಕೊಳ್ಳಿ ಮತ್ತು ಇದು 15 ನಿಮಿಷ ಕಾಲ ಹಾಗೆ ಇರಲಿ.

*ಇದರ ಬಳಿಕ ಫೇಸ್ ವಾಶ್ ಮತ್ತು ಉಗುರುಬೆಚ್ಚಗಿನ ನೀರು ಬಳಸಿ ತೊಳೆಯಿರಿ.

ಎಷ್ಟು ಸಲ?

ಸುಂದರ ಹಾಗೂ ನಯವಾದ ಚರ್ಮಕ್ಕೆ ವಾರದಲ್ಲಿ ಎರಡು ಸಲ ಇದನ್ನು ಬಳಸಿ.

ಬೀಟ್ ರೂಟ್ ಮತ್ತು ಶ್ರೀಗಂಧದ ಹುಡಿಯ ಫೇಸ್ ಪ್ಯಾಕ್

ಬೀಟ್ ರೂಟ್ ಮತ್ತು ಶ್ರೀಗಂಧದ ಹುಡಿಯ ಫೇಸ್ ಪ್ಯಾಕ್

ತಯಾರಿಸುವ ವಿಧಾನ

* ಎರಡು ಚಮಚ ಬೀಟ್ ರೂಟ್ ರಸಕ್ಕೆ ಒಂದು ಚಮಚ ಶ್ರೀಗಂಧದ ಹುಡಿ ಹಾಕಿ.

* ಈ ಮಿಶ್ರಣವನ್ನು ಮುಖಕ್ಕೆ ಸರಿಯಾಗಿ ಹಚ್ಚಿಕೊಳ್ಳಿ.

* ಉಗುರು ಬೆಚ್ಚಗಿನ ನೀರಿನಿಂದ ತೊಳೆಯುವ ಮೊದಲು 15 ನಿಮಿಷ ಹಾಗೆ ಬಿಡಿ.

ಎಷ್ಟು ಸಲ

ವಾರದಲ್ಲಿ ಒಂದು ಸಲ ಮನೆಯಲ್ಲೇ ತಯಾರಿಸಿದ ಈ ಫೇಸ್ ಪ್ಯಾಕ್ ಬಳಸಿದರೆ ಫಲಿತಾಂಶ ಸಿಗುವುದು.

ಬೀಟ್ ರೂಟ್ ಮತ್ತು ರೋಸ್ ವಾಟರ್ ಪ್ಯಾಕ್

ಬೀಟ್ ರೂಟ್ ಮತ್ತು ರೋಸ್ ವಾಟರ್ ಪ್ಯಾಕ್

ತಯಾರಿಸುವ ವಿಧಾನ

*ಬೀಟ್ ರೂಟ್ ನ ದಪ್ಪಗಿನ ತುಂಡನ್ನು ತುರಿಯಿರಿ ಮತ್ತು ಇದಕ್ಕೆ ಒಂದು ಚಮಚ ರೋಸ್ ವಾಟರ್ ಹಾಕಿ.

*ಇದನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ.

*ಹತ್ತು ನಿಮಿಷ ಬಿಟ್ಟು ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.

*ಉತ್ತಮ ಫಲಿತಾಂಶಕ್ಕಾಗಿ ಲಘು ಟೋನರ್ ಬಳಸಿ.

ಎಷ್ಟು ಸಲ?

ವಾರದಲ್ಲಿ ಒಂದು ಸಲ ಇದನ್ನು ಬಳಸುವುದರಿಂದ ನಿಮಗೆ ಬೇಕಾಗಿರುವ ಫಲಿತಾಂಶವು ಸಿಗುವುದು ಮತ್ತು ಮೊಡವೆ ನಿವಾರಿಸುವುದು.

 ಬೀಟ್ ರೂಟ್ ಮತ್ತು ಆಲಿವ್ ತೈಲ ಪ್ಯಾಕ್

ಬೀಟ್ ರೂಟ್ ಮತ್ತು ಆಲಿವ್ ತೈಲ ಪ್ಯಾಕ್

ತಯಾರಿಸುವ ವಿಧಾನ

* ಒಂದು ಚಮಚ ತುರಿದಿರುವ ಬೀಟ್ ರೂಟ್ ಮತ್ತು 1/2 ಚಮಚ ಆಲಿವ್ ತೈಲ ಬೆರೆಸಿಕೊಳ್ಳಿ.

* ಇದನ್ನು ನಿಮ್ಮ ಮುಖಕ್ಕೆ ಮೆತ್ತಗೆ ಹಚ್ಚಿ.

*20 ನಿಮಿಷ ಕಾಲ ಹಾಗೆ ಬಿಡಿ ಮತ್ತು ಬಳಿಕ ಲಘು ಕ್ಲೆನ್ಸರ್ ಮತ್ತು ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.

ಎಷ್ಟು ಬಾರಿ

ಬೀಟ್ ರೂಟ್ ಮತ್ತು ಆಲಿವ್ ತೈಲದ ಮಿಶ್ರಣವನ್ನು ವಾರದಲ್ಲಿ ಒಂದು ಸಲ ಬಳಸಿಕೊಂಡರೆ ಅದರಿಂದ ಚರ್ಮಕ್ಕೆ ಪೋಷಣೆ ಸಿಗುವುದು ಮತ್ತು ಬಣ್ಣವು ಬಿಳಿಯಾಗುವುದು.

English summary

Beetroot Face Packs That Can Nourish Your Skin In Minutes

Beetroot has antibacterial properties that soothe inflammation, kill infection-causing bacteria and revive dull skin. Not just that, beetroot happens to be a powerhouse of vitamin C, which neutralizes free radicals, lightens pigmentation, sloughs off dead skin cells, revealing clear skin underneath. With so many benefits in store, it would be fool hardy not to include beetroot in your skin care routine.