For Quick Alerts
ALLOW NOTIFICATIONS  
For Daily Alerts

ಪ್ರತಿದಿನ ಈ ಸಿಂಪಲ್ ಟಿಪ್ಸ್ ಅನುಸರಿಸಿ- ರಾಜಕುಮಾರಿಯಂತೆ ಕಾಣುವಿರಿ!

By Hemanth
|

ಬೆಳಗ್ಗೆ ಎದ್ದಾಗ ನಿಮ್ಮ ಚರ್ಮವು ಕಾಂತಿಯುತವಾಗಿ ಕಾಣಬೇಕು ಮತ್ತು ನೀವು ಹೋದ ಕಡೆಯೆಲ್ಲಾ ಎಲ್ಲರು ನಿಮ್ಮತ್ತಲೇ ದೃಷ್ಟಿ ಹರಿಸಬೇಕೆಂದು ನಿಮ್ಮ ಇಚ್ಛೆಯಾಗಿದ್ದರೆ ಈ ಲೇಖನವನ್ನು ನೀವು ಓದಲೇಬೇಕು. ಯಾಕೆಂದರೆ ಇದರಲ್ಲಿ ರಾತ್ರಿ ಮಲಗುವ ಮೊದಲು ನೀವು ಪಾಲಿಸಬೇಕಾದ ಕೆಲವೊಂದು ಸೌಂದರ್ಯದ ಸಲಹೆಗಳನ್ನು ಹೇಳಿಕೊಡಲಾಗಿದೆ. ಇದನ್ನು ಅನುಸರಿಸಿಕೊಂಡು ಹೋದರೆ ನೀವು ಬೆಳಗ್ಗೆ ಎದ್ದಾಗ ರಾಜಕುಮಾರಿಯಂತೆ ಕಾಣಿಸುವುದರಲ್ಲಿ ಸಂಶಯವೇ ಇಲ್ಲ. ಹಗಲಿನಲ್ಲಿ ನೀವು ತ್ವಚೆಗೆ ಮಾಡುವ ಆರೈಕೆಗಿಂತ ರಾತ್ರಿ ಮಲಗುವ ಮೊದಲು ಮಾಡುವಂತಹ ಆರೈಕೆಯು ತುಂಬಾ ಪರಿಣಾಮ ಬೀರುವುದು.

ಬೆಳಗ್ಗೆ ಎದ್ದಾಗ ನಿಮ್ಮ ಚರ್ಮವು ತುಂಬಾ ನಿಸ್ತೇಜ ಹಾಗೂ ಕೂದಲು ಎಲ್ಲಾ ಕಡೆಗೂ ಹರಡಿರುವಂತೆ ಇರುವುದು. ಇದಕ್ಕೆ ಪರಿಹಾರವೆಂದರೆ ರಾತ್ರಿ ಮಲಗುವ ಮೊದಲು ಪಾಲಿಸಬೇಕಾದ ಕೆಲವೊಂದು ಸಲಹೆಗಳು. ಇದರಿಂದ ಖಂಡಿತವಾಗಿಯೂ ನಿಮಗೆ ತುಂಬಾ ಲಾಭವಾಗಲಿದೆ. ರಾತ್ರಿ ವೇಳೆ ದೇಹದಲ್ಲಿ ಚರ್ಮದ ಪುನಶ್ಚೇತನ ನಡೆಯುವ ಕಾರಣ ಪರಿಣಾಮ ಹೆಚ್ಚಾಗಿರುವುದು. ಕೆಲವು ತೈಲ ಮತ್ತು ಮಾಸ್ಕ್ ನಿಮ್ಮ ಚರ್ಮವನ್ನು ಬೇಗನೆ ಸರಿಪಡಿಸಲು ನೆರವಾಗುವುದು. ಇದನ್ನು ಪಾಲಿಸಿದರೆ ಕೇವಲ 15 ದಿನಗಳಲ್ಲಿ ನಿಮ್ಮ ಚರ್ಮವು ಕಾಂತಿಯುತವಾಗಿ ಕಾಣುವುದರಲ್ಲಿ ಯಾವುದೇ ಸಂಶಯವಿಲ್ಲ. ಇದು ಹೇಗೆಂದು ನೀವು ತಿಳಿಯಿರಿ.....

ಕಣ್ಣ ಕೆಳಗಿನ ನೆರಿಗೆ ನಿವಾರಣೆ

ಕಣ್ಣ ಕೆಳಗಿನ ನೆರಿಗೆ ನಿವಾರಣೆ

ಕಣ್ಣ ಕೆಳಗಡೆ ಇರುವ ನೆರಿಗೆ ನಿವಾರಣೆ ಮಾಡಲು ಒಂದು ಮೊಟ್ಟೆಯ ಬಿಳಿ ಲೋಳೆ, ಒಂದು ಚಮಚ ಆಲಿವ್ ತೈಲ ಮತ್ತು ಕೆಲವು ಹನಿ ರೋಸ್ ವಾಟರ್ ಹಾಕಿಕೊಳ್ಳಿ. ಇದನ್ನು ಕಣ್ಣಿನ ಕೆಳಗಡೆ ಹಚ್ಚಿಕೊಳ್ಳಿ. ರಾತ್ರಿ ಮಲಗುವ ಮೊದಲು ಇದನ್ನು ಪ್ರತಿನಿತ್ಯ 15 ದಿನಗಳ ಕಾಲ ಹಚ್ಚಿದರೆ ಫಲಿತಾಂಶ ಖಚಿತ.

ನೇರ ಹಾಗೂ ರೇಷ್ಮೆಯಂತಹ ಕೂದಲಿಗೆ

ನೇರ ಹಾಗೂ ರೇಷ್ಮೆಯಂತಹ ಕೂದಲಿಗೆ

ಬೆಳಗ್ಗೆ ಎದ್ದಾಗ ಕೂದಲು ಎಲ್ಲಾ ಕಡೆಗೂ ಹರಡಿಕೊಂಡು, ಸುತ್ತಿಕೊಂಡು ಇರುವುದು. ಆದರೆ ಇದಕ್ಕೆ ನೀವು ಚಿಂತೆ ಮಾಡಬೇಕಾದ ಅಗತ್ಯವಿಲ್ಲ. ಯಾಕೆಂದರೆ ಮಲಗುವ ಮೊದಲು ಒಣ ಕೂದಲಿಗೆ ಕಂಡೀಷನರ್ ಬಳಸಿ. ರಾತ್ರಿಯಿಡಿ ಹಾಗೆ ಬಿಡಿ ಮತ್ತು ಬೆಳಗ್ಗೆ ತೊಳೆಯಿರಿ.

 ದಪ್ಪಗಿನ ಕಣ್ಣರೆಪ್ಪೆಗಳಿಗೆ

ದಪ್ಪಗಿನ ಕಣ್ಣರೆಪ್ಪೆಗಳಿಗೆ

ಕೇವಲ 15 ದಿನಗಳಲ್ಲಿ ನಿಮಗೆ ದಪ್ಪಗಿನ ಕಣ್ಣರೆಪ್ಪೆಗಳು ಬೇಕೆಂದರೆ, ಕಾಡಿಗೆ ಹಚ್ಚಿಕೊಳ್ಳುವಾಗ ಅದಕ್ಕೆ ಸ್ವಲ್ಪ ಆಲಿವ್ ಎಣ್ಣೆ ಹಾಕಿ. 15 ದಿನಗಳ ಕಾಲ ರಾತ್ರಿ ಮಲಗುವ ಮೊದಲು ಹೀಗೆ ಮಾಡಿ. ತೆಂಗಿನೆಣ್ಣೆ ಅಥವಾ ಹರಳೆಣ್ಣೆ ಬಳಸಬಹುದು.

 ನಯವಾದ ತುಟಿಗಳಿಗೆ

ನಯವಾದ ತುಟಿಗಳಿಗೆ

ಮಲಗುವ ಮೊದಲು ಸ್ವಲ್ಪ ಬಾದಾಮಿ ಎಣ್ಣೆ ಮತ್ತು ಉಪ್ಪಿನಿಂದ ತುಟಿಗಳಿಗೆ ಮಸಾಜ್ ಮಾಡಿ. ರಾತ್ರಿಯಿಡಿ ಹಾಗೆ ಇರಲಿ. ಬೆಳಗ್ಗೆ ಎದ್ದಾಗ ತುಟಿಗಳು ನಯವಾಗಿರುವುದು.

 ಬೆರಳಿನ ಮೃದುವಾದ ಹೊರಪೊರೆಗಳಿಗಾಗಿ

ಬೆರಳಿನ ಮೃದುವಾದ ಹೊರಪೊರೆಗಳಿಗಾಗಿ

ತೆಂಗಿನ ಎಣ್ಣೆ ಹಾಕಿಕೊಂಡು ಬೆರಳಿನ ಉಗುರುಗಳು ಮತ್ತು ಅದರ ಸುತ್ತಲಿನ ಪೊರೆಗಳಿಗೆ ಮಸಾಜ್ ಮಾಡಿ. ಇದನ್ನು ರಾತ್ರಿಯಿಡಿ ಹಾಗೆ ಬಿಡಿ. ಮರುದಿನ ಬೆಳಗ್ಗೆ ಸುಂದರ, ಮೃದು ಮತ್ತು ಆರೋಗ್ಯಕರ ಉಗುರುಗಳು ನಿಮ್ಮದಾಗುವುದು.

ಕಾಂತಿಯುತ ತ್ವಚೆಗಾಗಿ

ಕಾಂತಿಯುತ ತ್ವಚೆಗಾಗಿ

ನೀವು ಬೆಳಗ್ಗೆ ಎದ್ದಾಗ ಕಾಂತಿಯುತ ತ್ವಚೆಯು ನಿಮ್ಮದಾಗಬೇಕೆಂದರೆ ಆಗ ನೀವು ಮುಖವನ್ನು ರೋಸ್ ವಾಟರ್ ನಿಂದ ಸ್ವಚ್ಛಗೊಳಿಸಿ. ಬಳಿಕ ತೆಂಗಿನ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿಕೊಂಡು ಅದಕ್ಕೆ ಸ್ವಲ್ಪ ಹಾಲು ಹಾಕಿ ಮುಖಕ್ಕೆ ಹಚ್ಚಿ. ಇದು ಒಳಗಿನಿಂದ ಚರ್ಮಕ್ಕೆ ಪೋಷಣೆ ನೀಡುವುದು ಮತ್ತು ಚರ್ಮಕ್ಕೆ ವಯಸ್ಸಾಗುವುದನ್ನು ತಡೆಯುವುದು.

ನಯವಾದ ಕೈಗಳಿಗೆ

ನಯವಾದ ಕೈಗಳಿಗೆ

ರಾತ್ರಿ ಬೆಳಗಾಗುದರೊಳಗಡೆ ಕೈಗಳು ನಯವಾಗಿರಬೇಕೆಂದರೆ ನೀವು ರಾತ್ರಿ ಮಲಗುವ ಮೊದಲು ಗ್ಲಿಸರಿನ್ ಮತ್ತು ರೋಸ್ ವಾಟರ್ ಹಾಕಿಕೊಂಡು ಮಸಾಜ್ ಮಾಡಿ. ಒಂದು ಚಮಚ ಗ್ಲಿಸರಿನ್ ಮತ್ತು ಒಂದು ಚಮಚ ರೋಸ್ ವಾಟರ್ ಮಿಶ್ರಣ ಮಾಡಿ. ಇದನ್ನು ಮಲಗುವ ಮೊದಲು ಕೈಗಳಿಗೆ ಹಚ್ಚಿಕೊಳ್ಳಿ. ರಾತ್ರಿಯಿಡಿ ಹಾಗೆ ಬಿಡಿ ಮತ್ತು ಮರುದಿನ ಬೆಳಗ್ಗೆ ತೊಳೆಯಿರಿ. ರಾತ್ರಿ ನೀವು ಕೈಗಳಿಗೆ ಗ್ಲೌಸ್ ಹಾಕಿ ಮಲಗಿ.

English summary

Bedtime Secrets To Look Like A Princess In The Morning

It is possible to get a younger and glowing skin overnight, so that you will look like a princess in the morning. Surprised? These bedtime beauty tips are simple and can be done within no time at all. Since you are usually free before bedtime, you can use these beauty tips to get a glowing skin when you wake up the next morning. These beauty tips work overnight on your skin to give effective results the next morning.
X
Desktop Bottom Promotion