For Quick Alerts
ALLOW NOTIFICATIONS  
For Daily Alerts

'ಬೀಟ್‌ರೂಟ್' ಫೇಸ್‌ ಮಾಸ್ಕ್- ವಾರದೊಳಗೆ ಸುಂದರವಾಗಿ ಕಾಣುವಿರಿ!

By Divya Pandith
|

ಕೇವಲ ತನ್ನ ಬಣ್ಣದ ಕಾರಣ ಹೆಚ್ಚಿನವರ ಅವಗಣನೆಗೆ ಒಳಗಾಗಿರುವ ತರಕಾರಿ ಎಂದರೆ ಬೀಟ್‌ರೂಟ್. ಹೆಚ್ಚಿನವರು ಕೆಂಪು ಬಣ್ಣವನ್ನು ತಮ್ಮ ಊಟದಲ್ಲಿ ಇಷ್ಟಪಡದಿರುವುದೇ ಇದೇ ಕಾರಣಕ್ಕೆ...! ವಾಸ್ತವವಾಗಿ ಜೀವ ಉಳಿಸುವ ಔಷಧಿ ಕಹಿಯಿರುವಂತೆ ಬಣ್ಣದಲ್ಲಿ ಆಕರ್ಷಕವಲ್ಲದಿದ್ದರೂ ಪೋಷಕಾಂಶಗಳ ಆಗರವಾಗಿರುವ ಬೀಟ್‌ರೂಟ್ ಅನ್ನು ನಮ್ಮ ಆಹಾರದಲ್ಲಿ ನಿಯಮಿತವಾಗಿ ಸೇರಿಸುವ ಮೂಲಕ ಇದರ ಅದ್ಭುತ ಪ್ರಯೋಜನಗಳನ್ನು ಪಡೆಯಬಹುದು ಎಂಬುದು ಈಗಾಗಲೇ ಸಾಬೀತಾಗಿದೆ.

ಹಾಗೆಂದು ಅವು ಕೇವಲ ನಮ್ಮ ದೇಹಕ್ಕೆ ಪೋಷಕಾಂಶಗಳನ್ನು ಹೆಚ್ಚಿಸುವ ತರಕಾರಿಗಳಾಗಿ ಮಾತ್ರ ಪ್ರಯೋಜನಕ್ಕೆ ಬರುವುದಿಲ್ಲ.. ಬದಲಿಗೆ ಸೌಂದರ್ಯದ ವಿಷಯಕ್ಕೆ ಬಂದಾಗ ಕೂಡ ತಾನು ಎಂದೂ ಒಂದು ಹೆಜ್ಜೆ ಮುಂದು, ಎನ್ನುವ ರೀತಿಯಲ್ಲಿ ಕಾರ್ಯನಿರ್ವಹಿಸುವ ಬೀಟ್‌ರೂಟ್ ತ್ವಚೆಯ ಸೌಂದರ್ಯವನ್ನು ಹೆಚ್ಚಿಸುವ ಜೊತೆಗೆ, ಚರ್ಮದ ನೆರಿಗೆಗಳನ್ನು ನಿವಾರಿಸಲು ಅತ್ಯುತ್ತಮವಾದ ಪೋಷಣೆಯನ್ನು ನೀಡಿ ವೃದ್ಧಾಪ್ಯವನ್ನು ಮುಂದೂಡುತ್ತದೆ, ಅಲ್ಲದೆ ಊದಿಕೊಂಡ ಕಣ್ಣುಗಳನ್ನು ಸಹ ಗುಣಪಡಿಸುತ್ತದೆ.

ಇದಕ್ಕೆಲ್ಲಾ ಮುಖ್ಯ ಕಾರಣ ಇದರಲ್ಲಿರುವ ವಿಟಮಿನ್ ಸಿ, ಪೊಟ್ಯಾಶಿಯಂ, ಮ್ಯಾಂಗನೀಸ್, ಕಬ್ಬಿಣ, ಕರಗುವ ನಾರು ಮತ್ತು ಫೋಲೇಟ್‌ಗಳೆಂಬ ಪೋಷಕಾಂಶಗಳಿವೆ. ಸಾಮಾನ್ಯವಾಗಿ ತ್ವಚೆಯಲ್ಲಿ ಮೊಡವೆಗಳು ಮಾಗಿದ ಬಳಿಕ ಉಳಿಯುವ ಕಲೆಗಳು, ಗೀರುಗಳು ಮತ್ತು ಕಣ್ಣುಗಳ ಸುತ್ತಲ ಕಪ್ಪು ವರ್ತುಲಗಳನ್ನೂ ನಿವಾರಿಸಲು ನೆರವಾಗುತ್ತವೆ. ನೋಡಲು ಏನೂ ಚೆನ್ನಾಗಿಲ್ಲದೇ ಇದ್ದರೂ ಸೌಂದರ್ಯವನ್ನು ಚೆನ್ನಾಗಿಸುವ ಈ ಅದ್ಭುತ ತರಕಾರಿಯ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಿದ್ದೇವೆ ಮುಂದೆ ಓದಿ...

ಚರ್ಮದ ತಾಜಾತನ ಹಾಗೂ ಹೊಳಪಿಗೆ

ಚರ್ಮದ ತಾಜಾತನ ಹಾಗೂ ಹೊಳಪಿಗೆ

- ಒಂದು ಬೀಟ್ರೂಟ್, 1/2 ಕಪ್ ಕತ್ತರಿಸಿದ ಎಲೆಕೋಸು ಮತ್ತು 1/4 ಕಪ್ ನೀರನ್ನು ಸೇರಿಸಿ, ರುಬ್ಬಿ.

- ಪೇಸ್ಟ್ ಅನ್ನು ಐಸ್ ಟ್ರೇಯಲ್ಲಿ ಸೇರಿಸಿ ಗಟ್ಟಿಯಾಗಿಸಿ.

- ಗಟ್ಟಿಯಾದ ಐಸ್ ಕ್ಯೂಬ್‍ನಿಂದ ಮುಖದ ಮೇಲೆ ನಿಧಾನವಾಗಿ ಮಸಾಜ್ ಮಾಡಿ.

- ಈ ಕ್ರಿಯೆಯು ಎರಡು ಬಾರಿ ಫೇಶಿಯಲ್ ಮಾಡಿಸಿದಷ್ಟು ಉತ್ತಮ ಫಲಿತಾಂಶವನ್ನು ನೀಡುವುದು.

ಸುಕ್ಕುಗಳ ನಿವಾರಣೆಗೆ

ಸುಕ್ಕುಗಳ ನಿವಾರಣೆಗೆ

ಚರ್ಮದ ಮೇಲಿರುವ ವಿಷಕಾರಿ ಅಂಶವನ್ನು ತೆಗಯಲು ಅತ್ಯುತ್ತಮವಾದ ತರಕಾರಿ. ಅಲ್ಲದೆ ಇದು ಉತ್ಕರ್ಷಣ ನಿರೋಧಕ ಗುಣಗಳನ್ನು ಸಮೃದ್ಧವಾಗಿ ಪಡೆದುಕೊಂಡಿದೆ. ಇದು ತ್ವಚೆಯನ್ನು ತೇವ ಹಾಗೂ ತಾಜಾತನದಿಂದ ಕೂಡಿರುವಂತೆ ಮಾಡುತ್ತದೆ.

- ಬೀಟ್ರೂಟ್ ಪೇಸ್ಟ್ ಗೆ ಒಂದು ಚಮಚ ಆಲಿವ್ ಎಣ್ಣೆ, ಸ್ವಲ್ಪ ಬೆಳ್ಳುಳ್ಳಿ ಮತ್ತು ಸ್ವಲ್ಪ ಮೊಸರನ್ನು ಸೇರಿಸಿ.

- ಇನ್ನು ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ, ಮೃದುವಾಗಿ ಮಸಾಜ್ ಮಾಡಿ.

- ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

- ಹೀಗೆ ಮಾಡುವುದರಿಂದ ಚರ್ಮವು ಸುಕ್ಕುಗಟ್ಟಿರುವುದನ್ನು ನಿವಾರಿಸುತ್ತದೆ. ಜೊತೆಗೆ ಆಕರ್ಷಣೆಯಿಂದ ಕೂಡಿರುವಂತೆ ಮಾಡುವುದು.

ಕಣ್ಣಿನ ಸೌಂದರ್ಯಕ್ಕೆ

ಕಣ್ಣಿನ ಸೌಂದರ್ಯಕ್ಕೆ

- ಬೀಟ್ರೂಟ್ ಪೇಸ್ಟ್ ಅನ್ನು ಕಣ್ಣಿನ ಕೆಳಭಾಗಕ್ಕೆ ಅನ್ವಯಿಸಿ.

- ಹೀಗೆ ಮಾಡುವುದರಿಂದ ಕಣ್ಣಿನ ಕೆಳಭಾಗದಲ್ಲಿ ಕಾಣುವ ಕಪ್ಪು ಕಲೆ ಹಾಗೂ ಉಬ್ಬುವುದನ್ನು ನಿಯಂತ್ರಿಸುತ್ತದೆ.

- ಕಣ್ಣಿನ ಕಾಂತಿಯನ್ನು ಹೆಚ್ಚಿಸುವುದು.

ಲಿಪ್‌ಸ್ಟಿಕ್ ಮಾಡಿಕೊಳ್ಳಿ!

ಲಿಪ್‌ಸ್ಟಿಕ್ ಮಾಡಿಕೊಳ್ಳಿ!

ಕೆಲವೊಂದು ಬೀಟ್‌ರೂಟ್‌ಗಳನ್ನು ಪೇಸ್ಟ್ ಮಾಡಿಕೊಳ್ಳಿ. ಅದನ್ನು ನಿಮ್ಮ ತುಟಿಯ ಮೇಲೆ ಲೇಪಿಸಿ, ಐದು ನಿಮಿಷಗಳ ಕಾಲ ಬಿಡಿ. ನಂತರ ಇದನ್ನು ತೊಳೆಯಿರಿ. ಆಗ ನೋಡಿ ನಿಮ್ಮ ತುಟಿಗಳು ಕಡುಗೆಂಪು ಬಣ್ಣದಿಂದ ಹೊಳೆಯುತ್ತವೆ. ಈ ಬಣ್ಣದ ಲಿಪ್‍ಸ್ಟಿಕ್ ಈಗ ಟ್ರೆಂಡ್ ಆಗಿದೆ.

ತುಟಿಯ ಬಣ್ಣವನ್ನಾಗಿಸಿ

ತುಟಿಯ ಬಣ್ಣವನ್ನಾಗಿಸಿ

- ಬೀಟ್ರೂಟ್ ಅನ್ನು ನುಣುಪಾದ ಪೇಸ್ಟ್ ಮಾಡಿಕೊಳ್ಳಿ

- ಅದನ್ನು ತುಟಿಗೆ ಅನ್ವಯಿಸಿ 5 ನಿಮಿಷಗಳ ಕಾಲ ಬಿಡಿ.

- ತೊಳೆದ ನಂತರ ನಿಮ್ಮ ತುಟಿ ಆಕರ್ಷಕ ಮತ್ತು ಕೆಂಪು ಬಣ್ಣದಿಂದ ಕೂಡಿರುವಂತೆ ಕಾಣುವುದು.

ತುಟಿಯ ಬಣ್ಣವನ್ನಾಗಿಸಿ

ತುಟಿಯ ಬಣ್ಣವನ್ನಾಗಿಸಿ

- ತುರಿದ ಬೀಟ್ರೂಟ್‍ಅನ್ನು ಚರ್ಮದ ಮಾಯಿಶ್ಚರೈಸ್ ಕ್ರೀಮಿನೊಂದಿಗೆ ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖಕ್ಕೆ ಹಚ್ಚಿ, ಮೃದುವಾದ ಮಸಾಜ್ ಮಾಡಿ.

- ತದನಂತರ 5 ನಿಮಿಷದ ಬಳಿಕ ಮುಖವನ್ನು ತೊಳೆಯಿರಿ.

- ಇದರಿಂದ ಮುಖದ ಚರ್ಮವು ನೈಸರ್ಗಿಕ ಹೊಳಪನ್ನು ಪಡೆದುಕೊಳ್ಳುವುದು.

ಕೂದಲ ಬಣ್ಣವಾಗಿ

ಕೂದಲ ಬಣ್ಣವಾಗಿ

ನಿಮ್ಮ ಕೇಶರಾಶಿಯ ಬಣ್ಣವನ್ನು ಆಕರ್ಷಕ ಗೊಳಿಸಲು ಬೀಟ್ರೂಟ್ ಉತ್ತಮ ಪರಿಹಾರ.

- ಒಂದು ಬೀಟ್ರೂಟ್ ಪೇಸ್ಟ್ ಮಾಡಿಕೊಳ್ಳಿ.

- ನಂತರ ಪೇಸ್ಟ್ ಅನ್ನು ತಲೆಗೆ ಹಚ್ಚಿ, ಶವರ್ ಕ್ಯಾಪ್ ಧರಿಸಿ.

- 30 ನಿಮಿಷದ ಬಳಿಕ ಮೃದುವಾದ ನೀರಿನಿಂದ ಸ್ವಚ್ಛಗೊಳಿಸಿ.

- ಕೂದಲು ಹೊಳಪು ಹಾಗೂ ನೈಸರ್ಗಿಕ ಬಣ್ಣದಿಂದ ಕಂಗೊಳಿಸುವುದು.

ಬೀಟ್‌ರೂಟ್ ಮತ್ತು ಅರಿಶಿನ ಫೇಸ್ ಮಾಸ್ಕ್

ಬೀಟ್‌ರೂಟ್ ಮತ್ತು ಅರಿಶಿನ ಫೇಸ್ ಮಾಸ್ಕ್

ಬೀಟ್‌ರೂಟ್ ಮತ್ತು ಅರಿಶಿನದ ಫೇಸ್‌ ಮಾಸ್ಕ್ ನಿಮಗೆ ನೈಸರ್ಗಿಕ ಹೊಳಪನ್ನು ನೀಡಲು ಸಹಕಾರಿಯಾಗಿದೆ.

ಈ ಪೇಸ್ಟ್‌ಗೆ ಹಾಲನ್ನು ಸೇರಿಸಿಕೊಂಡು ಇದನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಬಹುದಾಗಿದೆ. ನಂತರ ತಣ್ಣೀರಿನಿಂದ ಮುಖವನ್ನು ತೊಳೆಯಿರಿ. ಇದರಿಂದ ನಿಮ್ಮ ಮುಖ ಹೊಳೆಯುವುದ ಖಂಡಿತ ಮತ್ತು ಆಕರ್ಷಕಕಾರಿಯಾಗಿ ಕಾಣುವುದು ನಿಜ.

ಬೀಟ್‌ರೂಟ್ ಮತ್ತು ಮುಲ್ತಾನಿ ಮಿಟ್ಟಿ

ಬೀಟ್‌ರೂಟ್ ಮತ್ತು ಮುಲ್ತಾನಿ ಮಿಟ್ಟಿ

-ಬೀಟ್‌ರೂಟ್‌ ಅನ್ನು ಅರೆದುಕೊಂಡು ಇದಕ್ಕೆ 2 ಚಮಚ ಮುಲ್ತಾನಿ ಮಿಟ್ಟಿಯನ್ನು ಸೇರಿಸಿ.

-ಒಂದು ಚಮಚ ಲಿಂಬೆ ರಸವನ್ನು ಬೆರೆಸಿ ಇದರಿಂದ ಹೊಳಪು ಬರುತ್ತದೆ.

ಎರಡೂ ಸಾಮಾಗ್ರಿಗಳನ್ನು ಮಿಶ್ರ ಮಾಡಿಕೊಂಡು ಇದನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ.

-15 ನಿಮಿಷಗಳ ಕಾಲ ಕಾಯಿರಿ ನಂತರ ತಣ್ಣೀರಿನಿಂದ ಮುಖವನ್ನು -ತೊಳೆದುಕೊಳ್ಳಿ.

- ಈ ಎರಡೂ ಮಿಶ್ರಣಗಳು ಮುಖದಲ್ಲಿರುವ ಮೊಡವೆಯನ್ನು ಹೋಗಲಾಡಿಸಿ -ತ್ವಚೆಯನ್ನು ಆಕರ್ಷಕವಾಗಿ ಮಾಡುತ್ತದೆ.

English summary

Beauty Tricks To Make Your Skin Younger With Beetroot

Do you know that you can use beets to enhance your beauty. Beet roots are rich sources of nutrients. They not only boost your beauty, but also make you healthy. Beets can do wonders with your skin and can remove all signs of skin dullness, ageing and puffy eyes.
X
Desktop Bottom Promotion