For Quick Alerts
ALLOW NOTIFICATIONS  
For Daily Alerts

ಹೌದು, ಇವುಗಳನ್ನು ತಪ್ಪದೆ ಮಾಡಿದರೆ, ಚಳಿಗಾಲದಲ್ಲಿ ಮುಖ ಅಂದವಾಗಿ ಕಾಣುವುದು!

By Deepu
|

ಚಳಿಗಾಲ ಬಂತು ಅಂದ್ರೆ ಮುಖದ ಕಾಂತಿ ಕಳೆಗುಂದುತ್ತೆ. ರಿಂಕಲ್ಸ್ ಆಗುತ್ತೆ. ಚಳಿಗೆ ಮುಖ ಬಿರುಕುಬಿಟ್ಟಂತಾಗಿ ಸೌಂದರ್ಯ ಹೇಳಹೆಸರಿಲ್ಲದಂತೆ ಹೊರಟು ಹೋಗುತ್ತೆ. ಅದಕ್ಕೆ ಸರಿಯಾಗಿ ಹಾಳಾದ ವಾತಾವರಣ ಬೇರೆ ಬೆಂಕಿಗೆ ತುಪ್ಪ ಸುರಿದಂತೆ ನಿಮ್ಮ ಸೌಂದರ್ಯದ ಶತ್ರುವಾಗುತ್ತೆ. ಇನ್ನು ಇದೆಲ್ಲವನ್ನು ಮೇಕಪ್ ಮಾಡಿ ಮರೆಮಾಚಿ ಬಿಡೋಣ ಅಂದ್ರೆ ಅದಕ್ಕೂ ಶನಿ ವಕ್ಕರಿಸಿದಂತಾಗಿರುತ್ತೆ.

ಮೇಕಪ್ ಕೂಡ ಹಾಳಾದ ತ್ವಚೆಯ ಮೇಲೆ ಸರಿಯಾಗಿ ಕೂರೋದಿಲ್ಲ. ಏನು ಮಾಡೋದು ಅಂತ ಚಿಂತೆ ಆವರಿಸಿ ಬಿಡೋದು ಹೆಚ್ಚಿನ ಮಹಿಳೆಯರ ಕಾಮನ್ ಪ್ರಾಬ್ಲಂ..ಅದಕ್ಕೊಂದು ಸಿಂಪಲ್ ಪರಿಹಾರಗಳಿವೆ. ಅದಕ್ಕಾಗಿ ನೀವು ಮಾಡ್ಬೇಕಾಗಿರೋದು ಕೆಲವೊಂದು ಟಿಪ್ಸ್ ಗಳಿವೆ ಮುಂದೆ ಓದಿ...

ಒಣತ್ವಚೆಯ ಸಮಸ್ಯೆ ಇದ್ದರೆ -ಬಾಳೆಹಣ್ಣು ಅವೊಕಾಡೊ ಮತ್ತು ಪಪ್ಪಾಯ ಪೇಸ್ಟ್

ಒಣತ್ವಚೆಯ ಸಮಸ್ಯೆ ಇದ್ದರೆ -ಬಾಳೆಹಣ್ಣು ಅವೊಕಾಡೊ ಮತ್ತು ಪಪ್ಪಾಯ ಪೇಸ್ಟ್

ಬಾಳೆಹಣ್ಣು ಪೊಟಾಶಿಯಂ ಅನ್ನು ಹೊಂದಿದ್ದು, ವಿಟಮಿನ್ ಇ, ವಿಟಮಿನ್ ಬಿ ಅಂಶಗಳನ್ನು ಒಳಗೊಂಡಿದೆ. ಇದು ಒಣ ತ್ವಚೆಗೆ ಉತ್ತಮ ಪರಿಹಾರವನ್ನು ನೀಡುತ್ತದೆ. ನೀರಿನ ಅಂಶ ಇದರಲ್ಲಿ ಅಧಿಕವಾಗಿದೆ ಇದು ತ್ವಚೆಯನ್ನು ಹೈಡ್ರೇಟ್ ಆಗಿರಿಸುತ್ತದೆ. ಅವೊಕಾಡೊದಲ್ಲಿ ಮಿನರಲ್ ಅಂಶಗಳಿವೆ. ಅಂದರೆ ಐರನ್, ಕ್ಯಾಲ್ಶಿಯಂ, ಪೊಟಾಶಿಯಂ, ಕಾಪರ್, ಮೆಗ್ನೇಶಿಯಂ ಮೂಲಗಳಿವೆ. ಇದು ತ್ವಚೆಗೆ ಅತ್ಯುತ್ತಮವಾಗಿದೆ. ಅಂತೆಯೇ ಇದು ತ್ವಚೆಗೆ ನೈಸರ್ಗಿಕ ಮಾಯಿಶ್ಚರೈಸರ್‌ನಂತೆ ಕಾರ್ಯನಿರ್ವಹಿಸುತ್ತದೆ.

ಮಾಡುವ ವಿಧಾನ

*ಅವೊಕಾಡೊ, ಪಪ್ಪಾಯ ಬಾಳೆಹಣ್ಣನ್ನು ಹೋಳುಗಳನ್ನಾಗಿ ಮಾಡಿಕೊಳ್ಳಿ

*ಇದನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊಂಡು ಪೇಸ್ಟ್ ತಯಾರಿಸಿ

*ನಿಮ್ಮ ಮುಖ ಮತ್ತು ಕತ್ತಿಗೆ ಈ ಪೇಸ್ಟ್ ಅನ್ನು ಹಚ್ಚಿಕೊಳ್ಳಿ

*ಹದಿನೈದು ನಿಮಿಷಗಳ ತರುವಾಯ ಈ ಪೇಸ್ಟ್ ಅನ್ನು ತೊಳೆದುಕೊಳ್ಳಿ

*ದಿನಕ್ಕೊಮ್ಮೆಯಾದರೂ ಇದನ್ನು ಹಚ್ಚಿಕೊಂಡು ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಿ

ತೆಂಗಿನ ಹಾಲು- ಪದೇ ಪದೇ ಒಣ ತ್ವಚೆ ಆಗುತ್ತಿದ್ದರೆ

ತೆಂಗಿನ ಹಾಲು- ಪದೇ ಪದೇ ಒಣ ತ್ವಚೆ ಆಗುತ್ತಿದ್ದರೆ

ತೆಂಗಿನ ಹಾಲು ವಿಟಮಿನ್ ಇ, ಸಿ, ಮತ್ತು ಐರನ್ ಅಂಶವನ್ನು ಒಳಗೊಂಡಿದೆ. ಇದು ತ್ವಚೆಗೆ ಅತ್ಯಂತ ಉತ್ತಮವಾದುದು. ಇದು ತ್ವಚೆಯಲ್ಲಿರುವ ಹಾನಿಕಾರಕ ಅಂಶಗಳನ್ನು ನಿವಾರಿಸಿ ತ್ವಚೆಗೆ ಸೂಕ್ತ ಪೋಷಣೆಯನ್ನು ನೀಡುತ್ತದೆ.

ಮಾಡುವ ವಿಧಾನ

ನಿಮ್ಮ ಮುಖಕ್ಕೆ ತೆಂಗಿನ ಹಾಲನ್ನು ಹಚ್ಚಿಕೊಂಡು ರಾತ್ರಿ ಪೂರ್ತಿ ಹಾಗೆಯೇ ಬಿಡಿ

ಮರುದಿನ ಬೆಳಗ್ಗೆ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ

ಪ್ರತಿದಿನ ಇದನ್ನು ಹಚ್ಚಿಕೊಂಡು ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಿ.

ತ್ವಚೆಯಲ್ಲಿ ತುರಿಕೆಯ ಸಮಸ್ಯೆ ಕಾಡುತ್ತಿದ್ದರೆ- ಸೌತೆಕಾಯಿ

ತ್ವಚೆಯಲ್ಲಿ ತುರಿಕೆಯ ಸಮಸ್ಯೆ ಕಾಡುತ್ತಿದ್ದರೆ- ಸೌತೆಕಾಯಿ

ಸೌತೆಕಾಯಿ ಸೌತೆಕಾಯಿಯಲ್ಲಿ ಹೆಚ್ಚಿನ ಮಟ್ಟದ ನೀರಿನಾಂಶ ಇರುವುದು ಮಾತ್ರವಲ್ಲದೆ ಇದರಲ್ಲಿ ಹಲವಾರು ರೀತಿಯ ಪೋಷಕಾಂಶ ಗುಣಗಳಿವೆ. ದೇಹಕ್ಕೆ ತೇವಾಂಶ ನೀಡುವ ಗುಣ ಮತ್ತು ಪ್ರಮುಖ ಪೋಷಕಾಂಶಗಳು ಇದರಲ್ಲಿದೆ. ಇದರಲ್ಲಿರುವ ತಂಪುಕಾರಿ ಮತ್ತು ಶಮನಕಾರಿ ಗುಣವು ತುರಿಕೆ, ಉರಿಯೂತ ಮತ್ತು ಊತ ಕಡಿಮೆ ಮಾಡುವುದು. ಬಳಸುವ ವಿಧಾನ ಒಂದು ಸೌತೆಕಾಯಿ ತೆಗೆದುಕೊಳ್ಳಿ. ಇದರ ಸಿಪ್ಪೆ ತೆಗೆದು ಪೇಸ್ಟ್ ಮಾಡಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿಕೊಂಡು 30 ನಿಮಿಷ ಕಾಲ ಹಾಗೆ ಬಿಡಿ. ನೀರಿನಿಂದ ತೊಳೆಯಿರಿ.

ಅರಿಶಿನ, ಜೇನು ಮತ್ತು ಆಲೀವ್ ಆಯಿಲ್

ಅರಿಶಿನ, ಜೇನು ಮತ್ತು ಆಲೀವ್ ಆಯಿಲ್

ಅರಿಶಿನವು ಕರ್‌ಕ್ಯೂಮಿನ್ ಅನ್ನು ಒಳಗೊಂಡಿದ್ದು ಇದು ತ್ವಚೆಯನ್ನು ಹೈಡ್ರೇಟ್ ಮಾಡುತ್ತದೆ ಮತ್ತು ತ್ವಚೆಯ ಕೋಶಗಳನ್ನು ಪುನರುಜ್ಜೀವನಗೊಳಿಸುತ್ತದೆ. ತ್ವಚೆಯ ಕೋಶಗಳನ್ನು ಇದು ಉತ್ತಮಗೊಳಿಸುತ್ತದೆ ಮತ್ತು ಹೊಳಪನ್ನು ನೀಡುತ್ತದೆ.

ಮಾಡುವ ವಿಧಾನ

*ಒಂದು ಬೌಲ್‌ನಲ್ಲಿ ಒಂದು ಚಮಚ ಅರಶಿನ, ಒಂದು ಚಮಚ ಜೇನು, ಒಂದು ಚಮಚ ಆಲೀವ್ ಆಯಿಲ್ ಅನ್ನು ತೆಗೆದುಕೊಳ್ಳಿ

*ಎಲ್ಲವನ್ನೂ ಮಿಶ್ರ ಮಾಡಿಕೊಂಡು ಪೇಸ್ಟ್ ತಯಾರಿಸಿ

*ನಿಮ್ಮ ಮುಖಕ್ಕೆ ಇದನ್ನು ಹಚ್ಚಿಕೊಂಡು ಹದಿನೈದರಿಂದ ಇಪ್ಪತ್ತು ನಿಮಿಷ ಹಾಗೆಯೇ ಬಿಡಿ

*ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ

*ವಾರದಲ್ಲಿ ಎರಡು ಬಾರಿ ಈ ಕ್ರಿಯೆಯನ್ನು ಅನುಸರಿಸಿ

ಬಟರ್ ಫ್ರೂಟ್ ( ಬೆಣ್ಣೆ ಹಣ್ಣಿನ) ಮಾಸ್ಕ್

ಬಟರ್ ಫ್ರೂಟ್ ( ಬೆಣ್ಣೆ ಹಣ್ಣಿನ) ಮಾಸ್ಕ್

ಅವಕಾಡೊ ಅಥವಾ ಬೆಣ್ಣೆ ಹಣ್ಣಿಗೆ 1/2 ಚಮಚ ಜೇನು ಮತ್ತು ವಿಟಮಿನ್ 'ಇ' ಎಣ್ಣೆ ಹಾಕಿ ಕಲಸಿ ಮುಖಕ್ಕೆ ಹಚ್ಚುವುದು ಚಳಿಗಾಲದಲ್ಲಿ ತ್ವಚೆಯ ಸಂರಕ್ಷಣೆಗೆ ತುಂಬಾ ಸೂಕ್ತವಾದ ಮಾಸ್ಕ್ ಆಗಿದೆ. ಈ ರೀತಿ ಮಾಡುವುದರಿಂದ ಮುಖದಲ್ಲಿ ತೇವಾಂಶ, ಖನಿಜಾಂಶಗಳು ಹೀಗೆ ಮುಖದ ಹೊಳಪಿಗೆ ಬೇಕಾದ ಅಗತ್ಯ ವಸ್ತಗಳು ದೊರೆಯುತ್ತದೆ.

ಮೊಟ್ಟೆ ಮಾಸ್ಕ್

ಮೊಟ್ಟೆ ಮಾಸ್ಕ್

ಮೊಟ್ಟೆಯ ಬಿಳಿಗೆ , ಕಿತ್ತಳೆ ಹಣ್ಣಿನ ಚಿಪ್ಪೆಯ ಪುಡಿಯನ್ನು ಬೆರೆಸಿ ಮುಖಕ್ಕೆ ಹಚ್ಚಿ 20 ನಿಮಿಷದ ಬಳಿಕ ತೊಳೆದರೆ ಮುಖದ ಕಾಂತಿ ಹೆಚ್ಚುವುದು. ವಾರಕ್ಕೆ 2-3 ಬಾರಿ ಈ ರೀತಿ ಮಾಡುವುದರಿಂದ ನಿಧಾನಕ್ಕೆ ಮೊಡವೆಗಳು ಸಹ ಮಾಯವಾಗುತ್ತದೆ.

ಓಟ್ಸ್ ಮಾಸ್ಕ್

ಓಟ್ಸ್ ಮಾಸ್ಕ್

ಓಟ್ಸ್ ಅನ್ನು ಹಾಲಿನಲ್ಲಿ ಹಾಲಿಗೆ ಅದಕ್ಕೆ ಬಾಳೆಹಣ್ಣು ಹಾಕಿ ಚೆನ್ನಾಗಿ ಕಲಸಿ ಕ್ರೀಮ್ ತರ ಮಾಡಿ ಮುಖಕ್ಕೆ ಹಚ್ಚಿದರೆ, ಓಟ್ಸ್ ಸ್ಕ್ರಬ್ಬರ್ ರೀತಿ ಕಾರ್ಯ ನಿರ್ವಹಿಸುತ್ತದೆ. ಹಾಲು ಮತ್ತು ಬಾಳೆಹಣ್ಣು ಮುಖಕ್ಕೆ ಹೊಳಪನ್ನು ನೀಡುತ್ತದೆ.

ತೆಂಗಿನ ಎಣ್ಣೆ

ತೆಂಗಿನ ಎಣ್ಣೆ

ಎಣ್ಣೆಯು ಚರ್ಮವನ್ನು ರಕ್ಷಿಸಲು ನೆರವಾಗುವುದು ಮತ್ತು ನೈಸರ್ಗಿಕ ಮಾಯಿಶ್ಚರೈಸರ್ ಅಗಿ ಕೆಲಸ ಮಾಡುವುದು. ಬಳಕೆ ಹೇಗೆ? ತೆಂಗಿನೆಣ್ಣೆ, ಬಾದಾಮಿ ಎಣ್ಣೆ ಅಥವಾ ಆಲಿವ್ ಎಣ್ಣೆಯನ್ನು ಚರ್ಮಕ್ಕೆ ಮಾಯಿಶ್ಚರೈಸ್ ಮಾಡಲು ಬಳಸಬಹುದು. ಸ್ನಾನದ ಬಳಿಕ ಸ್ವಲ್ಪ ತೆಂಗಿನ ಎಣ್ಣೆ ತೆಗೆದುಕೊಂಡು ಮಸಾಜ್ ಮಾಡಿ. ನಿಮ್ಮ ದೇಹಕ್ಕೆ ಬೇಕಾದಷ್ಟು ಎಣ್ಣೆ ಬಳಸಿ. ದೇಹಕ್ಕೆ ಹಚ್ಚಿಕೊಳ್ಳುವ ಮೊದಲು ಎಣ್ಣೆ ಬಿಸಿ ಮಾಡಬಹುದು.

ಹಾಲಿನ ಕೆನೆ

ಹಾಲಿನ ಕೆನೆ

ಹಾಲಿನ ಕೆನೆಯಲ್ಲಿ ಲ್ಯಾಕ್ಟಿಕ್ ಆಮ್ಲವಿದೆ. ಇದು ಚರ್ಮವನ್ನು ಬಿಳಿಗೊಳಿಸುವುದು. ಇದು ಚಳಿಗಾಲದಲ್ಲಿ ಚರ್ಮಕ್ಕೆ ತೇವಾಂಶ ನೀಡಿ ಚರ್ಮವು ತುಂಬಾ ನಯ ಹಾಗೂ ಕಾಂತಿಯಿಂದ ಹೊಳೆಯುವಂತೆ ಮಾಡುವುದು.

ಬಳಸುವ ವಿಧಾನ

ಒಂದು ಸಣ್ಣ ಪಾತ್ರೆಯಲ್ಲಿ ಒಂದು ಕಪ್ ಹಾಲಿನ ಕೆನೆ ಮತ್ತು ಹಿಚುಕಿದ ಬಾಳೆಹಣ್ಣು ಹಾಕಿ.

ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿಕೊಂಡು 30 ನಿಮಿಷ ಕಾಲ ಹಾಗೆ ಬಿಡಿ. ನೀರಿನಿಂದ ಮುಖ ತೊಳೆಯಿರಿ.

ಒಣ ಹಣ್ಣುಗಳು

ಒಣ ಹಣ್ಣುಗಳು

ಬಾದಾಮಿ, ಗೋಡಂಬಿ ಮತ್ತು ಒಣದ್ರಾಕ್ಷಿಯು ಚರ್ಮದಲ್ಲಿ ಮಾಯಿಶ್ಚರೈಸ್ ಉಂಟು ಮಾಡಿ ಒಣಚರ್ಮವನ್ನು ನಿವಾರಣೆ ಮಾಡುವುದರ ಜೊತೆಗೆ ಮುಖದ ಅಂದವನ್ನು ಹೆಚ್ಚಿಸುವುದು. ಇದನ್ನು ಆಹಾರ ಕ್ರಮದಲ್ಲಿ ಸೇರಿಸಿಕೊಂಡರೆ ಚರ್ಮದಲ್ಲಿನ ತೇವಾಂಶ ಚಳಿಗಾಲದಲ್ಲಿ ಹಾಗೆ ಉಳಿಯುವುದು. ಚಳಿಗಾಲದ ರದ್ದು ಬರದಂತೆ ತಡೆಯುವ ಮಾರ್ಗಗಳು ಬಿಸಿ ನೀರಿನ ಸ್ನಾನ ಮಾಡಬೇಡಿ ಮತ್ತು ಸುಗಂಧವಿರುವ ಸಾಬೂನು ಬಳಸಬೇಡಿ. ಹತ್ತಿ ಬಟ್ಟೆಗಳನ್ನು ಧರಿಸಿ. ಇದು ಚರ್ಮವು ಅತಿಯಾಗಿ ಬಿಸಿಯಾಗುವುದನ್ನು ತಡೆಯುವುದು ಮತ್ತು ಕಿರಿಕಿರಿ ತಪ್ಪಿಸುವುದು. ಚಳಿಗಾಲದಲ್ಲಿ ಹೊರಗಡೆ ಹೋಗುವಾಗ ಕೈಗೆ ಕೈಗವಚ ಧರಿಸಲು ಮೆರೆಯಬೇಡಿ. ಕೆಲವೊಂದು ಚಳಿಗಾಲದ ರದ್ದುಗಳು ಸಾಮಾನ್ಯವಾಗಿರುವುದು ಮತ್ತು ಮೇಲೆ ಹೇಳಿದಂತಹ ಮನೆಮದ್ದಿನಿಂದ ನಿವಾರಣೆ ಆಗಬಹುದು. ಗಂಭೀರವಾಗಿದ್ದರೆ ಆಗ ವೈದ್ಯರ ಸಲಹೆ ಪಡೆಯುವುದು ಅತೀ ಅಗತ್ಯವಾಗಿದೆ.

ಓಟ್ ಮೀಲ್ ಫೇಸ್ ಪ್ಯಾಕ್

ಓಟ್ ಮೀಲ್ ಫೇಸ್ ಪ್ಯಾಕ್

ಓಟ್ ಮೀಲ್ ಫೇಸ್ ಪ್ಯಾಕ್ ಸ್ಕರ್ಬರ್ ನ ಹಾಗೆ ವರ್ತಿಸುತ್ತದೆ. ಇದನ್ನು ಜೇನು ಮತ್ತು ಮೊಸರಿನೊಂದಿಗೆ ಬೆರೆಸಿ. ಕೆಲವು ಹನಿ ಗ್ಲಿಸರಿನ್ ಸೇರಿಸಿ ಇದನ್ನು ತಯಾರಿಸಿ. ಇದನ್ನು ಮುಖದ ಮೇಲೆ ಹಚ್ಚಿ 10 ನಿಮಿಷದ ನಂತರ ತೊಳೆಯಿರಿ.

ಹಾಲು ಮತ್ತು ಜೇನು

ಹಾಲು ಮತ್ತು ಜೇನು

ಇದೊಂದು ಸರಳವಾದ ಫೇಸ್ ಪ್ಯಾಕ್. ಇದು ಒಣ ಚರ್ಮಕ್ಕೆ ಉತ್ತಮವಾದ ಪರಿಹಾರ. ಹಾಲು ಮತ್ತು ಜೇನನ್ನು ಕಲಸಿ ಮುಖ ಮತ್ತು ಕುತ್ತಿಗೆಗೆ ಹಚ್ಚಿ 3-4 ನಿಮಿಷಗಳ ನಂತರ ತಣ್ಣಗಿನ ನೀರಿನಲ್ಲಿ ತೊಳೆಯಿರಿ.

ಎಲೆಕೋಸು ಮತ್ತು ಜೇನುತುಪ್ಪದ ಮಾಸ್ಕ್

ಎಲೆಕೋಸು ಮತ್ತು ಜೇನುತುಪ್ಪದ ಮಾಸ್ಕ್

ಎರಡು ಅಥವ ಮೂರು ಎಲೆಕೋಸಿನ ಎಲೆಗಳನ್ನು ಅರೆದು ಪೇಸ್ಟ್ ಮಾಡಿಕೊಳ್ಳಿ. ಇದಕ್ಕೆ ಮೊಸರು ಮತ್ತು ಜೇನುತುಪ್ಪವನ್ನು ಹಾಕಿ ಚೆನ್ನಾಗೆ ಮಿಶ್ರಣ ಮಾಡಿ. ನಿಮಗೆ ಒಣಚರ್ಮವಿದ್ದಲ್ಲಿ ಬಾದಾಮಿ ಎಣ್ಣೆ ಅಥವ ಆಲಿವ್ ಎಣ್ಣೆಯನ್ನು ಸೇರಿಸಿ. ಈ ಪೇಸ್ಟನ್ನು ನಿಮ್ಮ ಮುಖದ ಮೇಲೆ ಲೇಪಿಸಿ ಸುಮಾರು 15 - 20 ನಿಮಿಷಗಳ ಕಾಲ ಬಿಡಿ. ನಂತರ ಬೆಚ್ಚಗಿರುವ ನೀರಿನಿಂದ ಚೆನ್ನಾಗಿ ನೆನಸಿ ತೊಳೆದುಕೊಳ್ಳಿ.

English summary

Beauty Tips For Women In Winter

It is not an easy task to look glamorous during the winter days. Your skin gets cracked up and lips get chapped; overall you may look dull and lifeless. But, can you afford to stay at home while your friends are out partying and having fun? Therefore, you need to keep certain winter beauty tips in mind, before you face the outside world. You must remember that the chilly wind not only makes you shiver, but also snatches away the moisture content from your skin. So, the basic tip is to keep your skin moisturised at all times.
X
Desktop Bottom Promotion