For Quick Alerts
ALLOW NOTIFICATIONS  
For Daily Alerts

ಬ್ಯೂಟಿ ಟಿಪ್ಸ್: ಚರ್ಮದ ಸೌಂದರ್ಯ ಹೆಚ್ಚಿಸಲು ಆಲಿವ್ ಎಣ್ಣೆ ಬಳಸಿ

By Hemanth
|

ತ್ವಚೆಯು ಬಿಳಿಯಾಗಿರಬೇಕೆನ್ನುವುದು ಪ್ರತಿಯೊಬ್ಬರ ಕನಸು. ಕೆಲವೊಂದು ಭೌಗೋಳಿಕ ಹಾಗೂ ಹವಾಮಾನದಿಂದಾಗಿ ಚರ್ಮದ ಬಣ್ಣವು ಕಪ್ಪಾಗಿರುವುದು. ಆದರೆ ಬಿಳಿಯಾಗುವುದು ಹೇಗೆ ಎಂದು ಕೆಲವರು ಆಲೋಚನೆ ಮಾಡುವರು ಮತ್ತು ಮಾರುಕಟ್ಟೆಯಲ್ಲಿ ಸಿಗುವಂತಹ ಕೆಲವೊಂದು ಕ್ರೀಮ್ ಗಳನ್ನು ಬಳಸಿಕೊಂಡು ಬಿಳಿಯಾಗಲು ಪ್ರಯತ್ನಿಸುವರು. ಆದರೆ ಈ ಲೇಖನದಲ್ಲಿ ನಾವಿಂದು ಆಲಿವ್ ತೈಲವನ್ನು ಬಳಸಿಕೊಂಡು ಚರ್ಮವನ್ನು ಬಿಳಿಯಾಗಿಸುವುದು ಹೇಗೆ ಎಂದು ತಿಳಿಸಿಕೊಡಲಿದ್ದೇವೆ. ಆಲಿವ್ ತೈಲವನ್ನು ಹೆಚ್ಚಾಗಿ ಆಹಾರ ತಯಾರಿಸಲು ಬಳಸುವರು.

beauty tips: Olive Oil for Skin Lightening

ಆದರೆ ಇದನ್ನು ಸೌಂದರ್ಯವರ್ಧಕವಾಗಿಯೂ ಬಳಸಬಹುದು. ಚರ್ಮ ಹಾಗೂ ಕೂದಲಿನ ಆರೈಕೆ ಮಾಡಬಹುದು. ವರ್ಣದ್ರವ ಕುಗ್ಗುವುದನ್ನು ನಿವಾರಿಸಿಕೊಂಡು ಚರ್ಮ ಬಿಳಿಯಾಗಿಸುವುದು ಹೇಗೆ ಎಂದು ನಾವು ಹೇಳಿಕೊಡಲಿದ್ದೇವೆ. ಆಲಿವ್ ತೈಲದಲ್ಲಿ ಕೆಲವೊಂದು ಪ್ರಮುಖ ಪೋಷಕಾಂಶಗಳು ಹಾಗೂ ವಿಟಮಿನ್ ಗಳು ಇವೆ. ಸತ್ತ ಚರ್ಮವನ್ನು ಪುನಶ್ಚೇತನಗೊಳಿಸುವುದು ಮತ್ತು ಚರ್ಮದ ಬಣ್ಣ ಸುಧಾರಿಸುವುದು. ಆಲಿವ್ ತೈಲದಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಗಳು ಫ್ರೀ ರ್ಯಾಡಿಕಲ್ ವಿರುದ್ಧ ಹೋರಾಡುವುದು ಮತ್ತು ಚರ್ಮವನ್ನು ಪುನಶ್ಚೇತನಗೊಳಿಸುವುದು. ಆಲಿವ್ ತೈಲ ಬಳಸಿಕೊಂಡು ಚರ್ಮ ಬಳಿಯಾಗಿಸುವುದು ಹೇಗೆ ಎಂದು ತಿಳಿಯುವ....

ಆಲಿವ್ ತೈಲ ಮತ್ತು ಸೌತೆಕಾಯಿ

ಆಲಿವ್ ತೈಲ ಮತ್ತು ಸೌತೆಕಾಯಿ

ಸೌತೆಕಾಯಿಯಲ್ಲಿರುವಂತಹ ವಿಟಮಿನ್ ಗಳು ಚರ್ಮದ ಬಣ್ಣ ಸುಧಾರಿಸುವುದು ಮತ್ತು ಕಲೆಗಳನ್ನು ತೆಗೆಯುವುದು. ಒಂದು ಚಮಚ ಆಲಿವ್ ತೈಲ್, ಒಂದು ಚಮಚ ಹಾಲು ಮತ್ತು ಸೌತೆಕಾಯಿ. ಸೌತೆಕಾಯಿಯ ಸಿಪ್ಪೆ ತೆಗೆದು, ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿ. ಇದನ್ನು ರುಬ್ಬಿಕೊಂಡು ಪೇಸ್ಟ್ ಮಾಡಿ. ಇದಕ್ಕೆ ಹಾಲು ಮತ್ತು ಆಲಿವ್ ತೈಲ ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ಸ್ವಚ್ಛಗೊಳಿಸಿದ ಮುಖಕ್ಕೆ ಹಚ್ಚಿಕೊಳ್ಳಿ. 15 ನಿಮಿಷ ಹಾಲ ಹಾಗೆ ಬಿಡಿ. ಇದರ ಬಳಿಕ ಸಾಮಾನ್ಯ ನೀರಿನಿಂದ ತೊಳೆಯಿರಿ.

ಆಲಿವ್ ತೈಲ ಮತ್ತು ಗ್ಲಿಸರಿನ್

ಆಲಿವ್ ತೈಲ ಮತ್ತು ಗ್ಲಿಸರಿನ್

ಗ್ಲಿಸರಿನ್ ನಲ್ಲಿ ಇರುವಂತಹ ಶಮನಕಾರಿ ಗುಣಗಳು ಚರ್ಮದ ವರ್ಣದ್ರವ್ಯಕ್ಕೆ ನೆರವಾಗುವುದು. ಚರ್ಮದಲ್ಲಿರುವ ಯಾವುದೇ ರೀತಿಯ ಉರಿಯೂತವನ್ನು ಇದು ನಿವಾರಣೆ ಮಾಡುವುದು. ಇದಕ್ಕಾಗಿ ನಿಮಗೆ ½ ಚಮಚ ಆಲಿವ್ ತೈಲ ಮತ್ತು ½ ಚಮಚ ಗ್ಲಿಸರಿನ್ ಬೇಕಾಗಿದೆ. ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ. ಈ ಮಿಶ್ರಣಕ್ಕೆ ಕೆಲವು ಹನಿ ಲಿಂಬೆರಸ ಬೆರೆಸಿಕೊಳ್ಳಬಹುದು. ಈ ಮಾಸ್ಕ್ ನ್ನು ಮುಖಕ್ಕೆ ಹಚ್ಚಿಕೊಂಡು 20 ನಿಮಿಷ ಕಾಲ ಹಾಗೆ ಬಿಡಿ. ಬಳಿಕ ಸಾಮಾನ್ಯ ನೀರಿನಿಂದ ತೊಳೆಯಿರಿ.

ಆಲಿವ್ ತೈಲ ಮತ್ತು ಆ್ಯಪಲ್ ಸೀಡರ್ ವಿನೇಗರ್

ಆಲಿವ್ ತೈಲ ಮತ್ತು ಆ್ಯಪಲ್ ಸೀಡರ್ ವಿನೇಗರ್

ಆ್ಯಪಲ್ ಸೀಡರ್ ವಿನೇಗರ್ ನಲ್ಲಿ ಅಲ್ಪಾ ಹೈಡ್ರಾಕ್ಸ್ ಆಮ್ಲವಿದೆ. ಇದು ಸತ್ತ ಚರ್ಮದ ಕೋಶಗಳನ್ನು ನಿವಾರಣೆ ಮಾಡಲು ನೆರವಾಗುವುದು. ಆ್ಯಪಲ್ ಸೀಡರ್ ವಿನೇಗರ್ ಚರ್ಮ ಬಿಳಿಯಾಗಿಸುವುದು. ¼ ಕಪ್ ಆ್ಯಪಲ್ ಸೀಡರ್ ವಿನೇಗರ್ ಹಾಗೂ ಅಷ್ಟೇ ಪ್ರಮಾಣದ ನೀರನ್ನು ಬೆರೆಸಿಕೊಂಡು ಮಿಶ್ರಣ ಮಾಡಿ. ಇದರ ಬಳಿಕ ½ ಕಪ್ ಆಲಿವ್ ತೈಲ ಹಾಕಿ ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿ. ಈ ಲೋಷನ್ ನ್ನು ನೀವು ಮುಖಕ್ಕೆ ಹಚ್ಚಿಕೊಳ್ಳಿ ಮತ್ತು 20-30 ನಿಮಿಷ ಕಾಲ ಒಣಗಲು ಬಿಡಿ. ಇದರ ಬಳಿಕ ಸಾಮಾನ್ಯ ನೀರಿನಿಂದ ತೊಳೆಯಿರಿ. ಈ ಮಿಶ್ರಣವನ್ನು ಫ್ರಿಡ್ಜ್ ನಲ್ಲಿಟ್ಟುಕೊಂಡು ಬಳಸಬಹುದು.

ಆಲಿವ್ ತೈಲ ಮತ್ತು ಹರಳೆಣ್ಣೆ

ಆಲಿವ್ ತೈಲ ಮತ್ತು ಹರಳೆಣ್ಣೆ

ಹರಳೆಣ್ಣೆಯಲ್ಲಿ ಒಮೆಗಾ-3 ಕೊಬ್ಬಿನಾಮ್ಲವಿದೆ. ಇದು ಚರ್ಮದ ಸ್ಥಿತಿಸ್ಥಾಪಕತ್ವವನ್ನು ಸುಧಾರಣೆ ಮಾಡಿಕೊಂಡು, ಚರ್ಮದ ವರ್ಣದ್ರವ್ಯ ಸರಿಪಡಿಸಲು ನೆರವಾಗುವುದು.

ಒಂದು ಚಮಚ ಆಲಿವ್ ತೈಲ, ಒಂದು ಚಮಚ ಹರಳೆಣ್ಣೆ ಮಿಶ್ರಣ ಮಾಡಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ. ವೃತ್ತಾಕಾರದಲ್ಲಿ ಮುಖಕ್ಕೆ ಇದರಿಂದ ಮಸಾಜ್ ಮಾಡಿ. 5 ನಿಮಿಷ ಕಾಲ ಹಾಗೆ ಬಿಡಿ. ಬಳಿಕ ಸಾಮಾನ್ಯ ನೀರಿನಿಂದ ತೊಳೆಯಿರಿ.

English summary

Beauty Tips: How to Use Olive Oil for Skin Lightening?

Does olive oil help in skin lightening? This is one of the commonly asked question by most of you out there. Olive oil has the essential nutrients and Vitamins required for regenerating the dead skin cells and improving the skin tone. The antioxidants in olive oil helps in fighting free radicals and rejuvenating the skin.
X
Desktop Bottom Promotion