For Quick Alerts
ALLOW NOTIFICATIONS  
For Daily Alerts

ತ್ವಚೆಯ ಎಲ್ಲಾ ಸಮಸ್ಯೆಗಳಿಗೆ ಅಡುಗೆಮನೆಯಲ್ಲಿಯೇ ಇದೆ ಪರಿಹಾರ

|

ಚರ್ಮಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳಿಗೂ ಅತ್ಯುತ್ತಮವಾದ ಪರಿಹಾರ ನಮ್ಮ ಅಡುಗೆ ಮನೆಯಲ್ಲಿ ದೊರಕುವ ಸಾಮಾನ್ಯ ಪದಾರ್ಥಗಳಲ್ಲೇ ಇದೆ.ಈ ಪರಿಹಾರಗಳನ್ನು ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ನೀಡುತ್ತಾ ಬಂದಿದ್ದಾರೆ.ಇವುಗಳು ನಮಗೆ ಅದ್ಭುತವಾದ ಫಲಿತಾಂಶಗಳನ್ನು ಕೊಡುತ್ತಲೇ ಬಂದಿವೆ.

ಈಗಿನ ಕಾಲದ ಸೌಂದರ್ಯ ವರ್ಧಕಗಳು ಹಲವಾರು ರಾಸಾಯನಿಕ ಪದಾರ್ಥಗಳನ್ನು ಹೊಂದಿರುತ್ತವೆ.ಆದರೆ ಈ ನೈಸರ್ಗಿಕವಾದ ಹಳೆಯ ವಿಧಾನಗಳು ನಿಮ್ಮ ಚರ್ಮಕ್ಕೆ ಯಾವುದೇ ಹಾನಿಮಾಡದೆ ಅದನ್ನು ರಕ್ಷಣೆ ಮಾಡುತ್ತವೆ.ಆದ್ದರಿಂದ ನೀವು ಮನೆಯಲ್ಲೇ ಸಿಗುವ ಈ ಪರಿಹಾರಗಳನ್ನು ಒಮ್ಮೆ ಪ್ರಯತ್ನಿಸಿ ನೋಡಿ.ಇವುಗಳು ನಿಮ್ಮ ಆರೋಗ್ಯಕ್ಕೂ ಒಳ್ಳೆಯದು ಹಾಗೂ ನೀವು ಹೊರಗೆ ಹೆಚ್ಚೆಚ್ಚು ದುಡ್ಡು ಕೊಟ್ಟು ಕೊಂಡುಕೊಳ್ಳುವ ಸೌಂದರ್ಯ ವರ್ಧಕಗಳಿಗಿಂತ ಬಲು ಉತ್ತಮ. ಈ ಲೇಖನದಲ್ಲಿ ನಾವು ನಿಮಗೆ ಹಲವು ರೀತಿಯ ನೈಸರ್ಗಿಕ ಪರಿಹಾರಗಳ ಬಗ್ಗೆ ತಿಳಿಸಿಕೊಡುತ್ತೇವೆ.ಇವುಗಳನ್ನು ಎಲ್ಲಾ ರೀತಿಯ ಚರ್ಮಗಳಾದ ಸೂಕ್ಷ್ಮ ಚರ್ಮ,ಎಣ್ಣೆ ಚರ್ಮ,ಒಣ ಚರ್ಮಗಳಿಗೆ ಬಳಸಬಹುದು. ಈಗ ನಾವು ನಿಮ್ಮ ಚರ್ಮಕ್ಕೆ ಅನುಗುಣವಾಗಿ ಯಾವ ಯಾವ ಪದಾರ್ಥಗಳನ್ನು ಬಳಸಬಹುದು ಎಂಬುದರ ಬಗ್ಗೆ ತಿಳಿದುಕೊಳ್ಳೋಣ.

ಎಣ್ಣೆ ಚರ್ಮ

ಮೊಟ್ಟೆಯ ಬಿಳಿಯ ಭಾಗ ಮತ್ತು ಓಟ್ಸ್:

ಮೊಟ್ಟೆಯ ಬಿಳಿಯ ಭಾಗ ಮತ್ತು ಓಟ್ಸ್:

ಓಟ್ಸ್ ಮತ್ತು ಮೊಟ್ಟೆಯ ಬಿಳಿ ಭಾಗದ ಜೋಡಿಯು ನಿಮ್ಮ ಮುಖದ ಮೇಲಿನ ಹೆಚ್ಚಿನ ಎಣ್ಣೆಯ ಅಂಶವನ್ನು ತೆಗೆದು ನಿಮ್ಮ ಮುಖಕ್ಕೆ ಮೋಡಿಯನ್ನೇ ಮಾಡುತ್ತದೆ.

ಬೇಕಾಗಿರುವ ಪದಾರ್ಥಗಳು:

• ಒಂದು ಮೊಟ್ಟೆ

• ಎರಡು ಚಮಚ ಓಟ್ಸ್

ತಯಾರಿಸುವ ವಿಧಾನ:

ಮೊಟ್ಟೆಯಿಂದ ಅದರ ಒಳಗಿನ ಬಿಳಿ ಭಾಗವನ್ನು ತೆಗೆದು ಅದು ನಯವಾಗುವ ಹಾಗೆ ಪೇಸ್ಟ್ ಮಾಡಿ.ಓಟ್ಸ್ ಅನ್ನು ತೆಗೆದುಕೊಂಡು ಚೆನ್ನಾಗಿ ಪುಡಿ ಮಾಡಿರಿ.ನಂತರ ಇವೆರಡರನ್ನು ಚೆನ್ನಾಗಿ ಸೇರಿಸಿ ಒಳ್ಳೆಯ ಮಿಶ್ರಣವನ್ನು ಮಾಡಿ.ನಿಮ್ಮ ಮುಖವನ್ನು ಸ್ವಚ್ಛಗೊಳಿಸಿ ಇದನ್ನು ಮುಖಕ್ಕೆ ಲೇಪಿಸಿಕೊಳ್ಳಿರಿ.ಇದನ್ನು ಇಪ್ಪತ್ತು ನಿಮಿಷಗಳ ಕಾಲ ಒಣಗಲು ಬಿಡಿ ತದನಂತರ ನೀರಿನಿಂದ ತೊಳಿಯಿರಿ.ಉತ್ತಮ ಪರಿಣಾಮಕ್ಕಾಗಿ ವಾರಕ್ಕೆರಡು ಬಾರಿ ಇದನ್ನು ಉಪಯೋಗಿಸಿ.

ನಿಮ್ಮ ಅಡುಗೆಮನೆಯಲ್ಲಿದೆ ಕೂದಲಿನ ಸೌಂದರ್ಯವರ್ಧಕಗಳು!

ಹಾಲು ಮತ್ತು ನಿಂಬೆರಸ

ಹಾಲು ಮತ್ತು ನಿಂಬೆರಸ

ನಿಂಬೆಯರಸ ನಿಮ್ಮ ಚರ್ಮದಲ್ಲಿರುವ ಎಣ್ಣೆಯ ಅಂಶವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಹಾಗೂ ಹಾಲು ಚರ್ಮವನ್ನು ನಯವಾಗಿಯೂ ಹಾಗೂ ಆದ್ರತೆಯಿಂದ ಇರುವಂತೆ ನೋಡಿಕೊಳ್ಳುತ್ತದೆ.

ಬೇಕಾಗಿರುವ ಪದಾರ್ಥಗಳು:

• ಒಂದು ಚಮಚ ಹಸಿ ಹಾಲು

• ನಿಂಬೆಯ ರಸ

ತಯಾರಿಸುವ ವಿಧಾನ:

ಹಸಿಯಾದ ಹಾಲನ್ನು ಒಂದು ಬಟ್ಟಲಿಗೆ ಹಾಕಿರಿ.ಒಂದು ನಿಂಬೆ ಹಣ್ಣನ್ನು ಕತ್ತರಿಸಿ ಅದರ ರಸದ ಕೆಲವು ಹನಿಗಳನ್ನು ಹಾಲಿಗೆ ಹಾಕಿ ಚೆನ್ನಾಗಿ ಕೂಡಿಸಿರಿ.ಇದನ್ನು ನಿಮ್ಮ ಮುಖಕ್ಕೆ ಹಚ್ಚಿ ೫- ೧೦ ನಿಮಿಷಗಳ ಒಣಗಲು ಬಿಡಿ.ನಂತರ ನೀರಿನಿಂದ ತೊಳಿಯಿರಿ.

ಒಣಗಿದ ಚರ್ಮ

ಆಲಿವ್ ಎಣ್ಣೆ ಮತ್ತು ವಿಟಮಿನ್ ಈ ಎಣ್ಣೆ

ಆಲಿವ್ ಎಣ್ಣೆ ಮತ್ತು ವಿಟಮಿನ್ ಈ ಎಣ್ಣೆ

ಇವೆರಡೂ ನಿಮ್ಮ ಚರ್ಮದ ಆದ್ರತೆಯನ್ನು ಕಾಪಾಡುವುದರಲ್ಲಿ ಸಹಕಾರಿಯಾಗಿವೆ.

ಬೇಕಾಗಿರುವ ಪದಾರ್ಥಗಳು:

• 1 ವಿಟಮಿನ್ ಈ ಮಾತ್ರೆ

• 2 ಚಮಚ ಆಲಿವ್ ಎಣ್ಣೆ

ಮಾಡುವ ವಿಧಾನ :

ವಿಟಮಿನ್ ಈ ಮಾತ್ರೆಯಿಂದ ಎಣ್ಣೆಯನ್ನು ತೆಗೆದು ಅದನ್ನು ಆಲಿವ್ ಎಣ್ಣೆಯೊಂದಿಗೆ ಬೆರೆಸಿರಿ.ಒಂದು ಸ್ವಚ್ಛವಾದ ಹತ್ತಿಯ ಬಟ್ಟೆಯನ್ನು ಅದರಲ್ಲಿ ಅದ್ದಿ ಈ ಮಿಶ್ರಣವನ್ನು ನಿಮ್ಮ ಮುಖಕ್ಕೆ ಹಚ್ಚಿರಿ.೧೦ ನಿಮಿಷಗಳ ಕಾಲ ಒಣಗಲು ಬಿಟ್ಟು ನಿಮ್ಮ ಮುಖವನ್ನು ತೊಳೆದುಕೊಳ್ಳಿ.ಕೊನೆಯಲ್ಲಿ ಒಂದು ಟವೆಲ್ ತೆಗೆದುಕೊಂಡು ಮುಖದ ಮೇಲೆ ನಿಧಾನವಾಗಿ ಒತ್ತಿರಿ .

ಬಾಳೆಯ ಹಣ್ಣು ಮತ್ತು ಅವಕಾಡೋ

ಬಾಳೆಯ ಹಣ್ಣು ಮತ್ತು ಅವಕಾಡೋ

ಬಾಳೆಯ ಹಣ್ಣಿನಲ್ಲಿ ವಿಟಮಿನ್ ಈ ಮತ್ತು ವಿಟಮಿನ್ ಸಿ ಇರುತ್ತದೆ.ಇದು ನಿಮ್ಮ ಚರ್ಮವನ್ನು ನಯವಾಗಿರುವಂತೆಯೂ ಹಾಗು ಹೊಳೆಯುವಂತೆಯೂ ಮಾಡುತ್ತದೆ. ಅವಕಾಡೋದಲ್ಲಿ ಹೆಚ್ಚಿನ ನೀರಿನಾಂಶ ಇರುವುದರಿಂದ ಇದು ನಿಮ್ಮ ಚರ್ಮವನ್ನು ಆದ್ರತೆಯಿಂದ ಇರುವಂತೆ ನೋಡಿಕೊಳ್ಳುತ್ತದೆ ಹಾಗೂ ಒಣಗಿದ ಚರ್ಮವನ್ನು ನಯಗೊಳಿಸುತ್ತದೆ.

ಬೇಕಾಗಿರುವ ಪದಾರ್ಥಗಳು:

• 1/2 ಕಳೆತ ಬಾಳೆಹಣ್ಣು

• 1 ಕಳೆತ ಅವಕಾಡೋ

ಮಾಡುವ ವಿಧಾನ :

ಕಳೆತ ಬಾಳೆಹಣ್ಣು ಮತ್ತು ಅವಕ್ಯಾಡೊ ಎರಡನ್ನೂ ಚೆನ್ನಾಗಿ ಹಿಸುಕಿ ಒಳ್ಳೆಯ ಮಿಶ್ರಣವನ್ನು ತಯಾರಿಸಿ.ಇದನ್ನು ನಿಮ್ಮ ಮುಖಕ್ಕೆ ಹಚ್ಚಿ ಅದು ಒಣಗುವ ವರೆಗೂ ಹಾಗೆಯೆ ಬಿಡಿ.ನಂತರ ಬೆಚ್ಚಗಿನ ನೀರಿಂದ ನಿಮ್ಮ ಮುಖವನ್ನು ತೊಳೆಯಿರಿ.ನೀವು ವಾರಕ್ಕೊಮ್ಮೆಯಂತೆ ಇದನ್ನು ಕೆಲವು ವಾರಗಳವರೆಗೆ ಉಪಯೋಗಿಸಿರಿ.ಇದರಿಂದ ಒಳ್ಳೆಯ ಪರಿಣಾಮವನ್ನು ಖಂಡಿವಾಗಿಯೂ ಕಾಣುತ್ತೀರಾ.

ಸೂಕ್ಷ್ಮವಾದ ಚರ್ಮ:

ಶ್ರೀಗಂಧದ ಫೇಸ್ ಪ್ಯಾಕ್

ಶ್ರೀಗಂಧದ ಫೇಸ್ ಪ್ಯಾಕ್

ಸೂಕ್ಷ್ಮ ಚರ್ಮವನ್ನು ಹೊಂದಿರುವವರು ಹೆಚ್ಚಾಗಿಯೇ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಗುರಿಯಾಗುತ್ತಾರೆ.ಶ್ರೀಗಂಧದಿಂದ ತಯಾರಿಸಿದ ಫೇಸ್ ಪ್ಯಾಕ್ ನಿಮ್ಮ ಮುಖವನ್ನು ನಯಗೊಳಿಸುತ್ತದೆ ಹಾಗೂ ಯಾವುದೇ ರೀತಿಯ ಚರ್ಮ ಸಂಬಂಧಿತ ಸಮಸ್ಯೆಗಳನ್ನು ದೂರಗೊಳಿಸಲು ಸಹಾಯ ಮಾಡುತ್ತದೆ.

ಬೇಕಾಗಿರುವ ಪದಾರ್ಥಗಳು:

• 1 ಚಮಚ ಶ್ರೀಗಂಧದ ಪುಡಿ

• ರೋಸ್ ವಾಟರ್ ನ ಕೆಲವು ಹನಿಗಳು

• 1 ಚಮಚ ಕಡಲೆಹಿಟ್ಟು

• ಒಂದು ಚಿಟಿಕೆ ಅರಿಶಿನ

ತಯಾರಿಸುವ ವಿಧಾನ:

ಒಂದು ಸ್ವಚ್ಛವಾದ ಬಟ್ಟಲಿನಲ್ಲಿ ಶ್ರೀಗಂಧದ ಪುಡಿ,ರೋಸ್ ವಾಟರ್,ಕಡಲೆ ಹಿಟ್ಟು ಮತ್ತು ಅರಿಶಿನವನ್ನು ಹಾಕಿರಿ.ಇವೆಲ್ಲವನ್ನೂ ಒಟ್ಟಿಗೆ ಸೇರಿಸಿದ ಮಿಶ್ರಣವನ್ನು ನಯವಾದ ಪೇಸ್ಟ್ ನಂತೆ ತಯಾರಿಸಿ.ಇದನ್ನು ನಿಮ್ಮ ಮುಖಕ್ಕೆ ಲೇಪಿಸಿ 20 ನಿಮಿಷಗಳ ಕಾಲ ಹಾಗೆಯೆ ಬಿಡಿ. ಒಣಗಿದ ನಂತರ ಸಾಮಾನ್ಯದ ನೀರಿನಲ್ಲಿ ನಿಮ್ಮ ಮುಖವನ್ನು ಸ್ವಚ್ಛಗೊಳಿಸಿ.

ಪುದೀನಾ ಫೇಸ್ ಪ್ಯಾಕ್

ಪುದೀನಾ ಫೇಸ್ ಪ್ಯಾಕ್

ಪುದೀನಾ ನೈಸರ್ಗಿವಾದ ಗಿಡಮೂಲಿಕೆಯಾಗಿದ್ದು ಇದು ನಿಮ್ಮ ಚರ್ಮಕ್ಕೆ ಸಂಬಂಧಿಸಿದ ಸೋಂಕುಗಳನ್ನು ,ಚರ್ಮದ ಮೇಲಾಗುವ ಉರಿಯನ್ನು ಮತ್ತು ಚರ್ಮಕ್ಕೆ ಉಂಟಾಗುವ ಯಾವುದೇ ರೀತಿಯ ಕಿರಿಕಿರಿಯನ್ನು ದೂರ ಮಾಡಲು ಸಹಾಯ ಮಾಡುತ್ತದೆ.

ಬೇಕಾಗಿರುವ ಪದಾರ್ಥಗಳು:

• ಒಂದು ಹಿಡಿಯಷ್ಟು ಪುದೀನಾ ಎಲೆಗಳು

ತಯಾರಿಸುವ ವಿಧಾನ :

ಒಂದು ಹಿಡಿಯಷ್ಟು ಪುದೀನಾ ಎಲೆಗಳನ್ನು ತೆಗೆದುಕೊಂಡು ಅದನ್ನು ಬ್ಲೆಂಡರ್ ಗೆ ಹಾಕಿ. ಸ್ವಲ್ಪ ನೀರನ್ನು ಸೇರಿಸಿ ದಪ್ಪನಾದ ಪೇಸ್ಟ್ ಅನ್ನು ತಯಾರಿಸಿ.ಇದನ್ನು ನಿಮ್ಮ ಮುಖಕ್ಕೆ ಹಚ್ಚಿ 20 ನಿಮಿಷಗಳ ಕಾಲ ಒಣಗಲು ಬಿಡಿ.ತದನಂತರ ನೀರಿನಲ್ಲಿ ತೊಳೆಯಿರಿ.

ಅಡುಗೆ ಮನೆಯಲ್ಲಿಯೇ ಇದೆ, ಸೌಂದರ್ಯಕ್ಕೆ ಪರಿಹಾರ!

English summary

Beauty Tips From Your Kitchen For All Skin Types

The ultimate remedies for several skin-related issues are derived from simple ingredients available in our own kitchen. These remedies have been passed on from generation to generation and give amazing results. Some ingredients suitable for different skin types are banana, egg white, lemon, etc.So let us see what those ingredients are...
X
Desktop Bottom Promotion