For Quick Alerts
ALLOW NOTIFICATIONS  
For Daily Alerts

ಒಂದು ಚಮಚ ಕಾಫಿ ಪೌಡರ್‪‌ನಿಂದ ಕೂಡ ಮುಖದ ಸೌಂದರ್ಯ ಹೆಚ್ಚಿಸಬಹುದು

|

ಚಾ, ಕಾಫಿ ಕುಡಿಯದೆ ಇರುವಂತವರು ತುಂಬಾ ಕಡಿಮೆ. ಹೀಗೀಗ ಕೆಲವೊಂದು ಗಾಳಿಸುದ್ದಿಗಳಿಂದಾಗಿ ಕಾಫಿ ಸೇವನೆ ಮಾಡುವಂತಹ ಜನರಲ್ಲೂ ಭೀತಿ ಮೂಡಿಸಲಾಗುತ್ತಿದೆ. ಆದರೆ ಹಿತಮಿತವಾಗಿ ಕಾಫಿ ಸೇವಿಸಿದರೆ ಅದು ದೇಹಕ್ಕೆ ಒಳ್ಳೆಯದು. ಅದೇ ರೀತಿ ಕಾಫಿಯನ್ನು ಚರ್ಮದ ಆರೈಕೆಗೂ ಬಳಸಬಹುದು ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ. ಯಾಕೆಂದರೆ ಕಾಫಿಯಲ್ಲಿ ಇರುವಂತಹ ಕೆಫಿನ್ ಚರ್ಮದ ವಿನ್ಯಾಸ ಉತ್ತಮಪಡಿಸಿ, ಆರೋಗ್ಯವಾಗಿಡುವುದು. ಇದರಿಂದ ಚರ್ಮದಲ್ಲಿನ ಕಪ್ಪು ಕಲೆ, ಮೊಡವೆ, ಬಿಸಿಲಿನಿಂದ ಆಗಿರುವ ಕಲೆಗಳು ನಿವಾರಣೆಯಾಗುವುದು.

ಇದರಿಂದ ಚರ್ಮವು ಕಾಂತಿಯುತವಾಗಿ ಕಾಣುವುದು. ಕಾಫಿಯಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಗಳು ಚರ್ಮವನ್ನು ಬಿಗಿಗೊಳಿಸುವುದು ಮಾತ್ರವಲ್ಲದೆ ಫ್ರೀ ರ್ಯಾಡಿಕಲ್ ನಿಂದ ರಕ್ಷಿಸುವುದು. ಕಾಫಿಯು ಸತ್ತ ಚರ್ಮವನ್ನು ಕಿತ್ತೊಗೆಯಲು ನೆರವಾಗುವುದು. ಇದರಿಂದ ಚರ್ಮವು ಬಿಳಿಯಾಗುವುದು. ಇದು ಕಾಫಿಯಿಂದ ಸಿಗುವ ಹಲವಾರು ಲಾಭಗಳು. ಕಾಫಿಯಿಂದ ಮನೆಯಲ್ಲೇ ಚರ್ಮದ ಆರೈಕೆ ಮಾಡಿದರೆ ನಿಮ್ಮ ಹಣ ಹಾಗೂ ಸಮಯ ಎರಡೂ ಉಳಿತಾಯವಾಗಿ, ಕಾಂತಿಯುತ ತ್ವಚೆಯು ನಿಮ್ಮದಾಗುವುದು. ಕಾಫಿಯನ್ನು ತ್ವಚೆಗೆ ಬಳಸಿಕೊಳ್ಳುವುದು ಹೇಗೆ ಎಂದು ಈ ಲೇಖನದ ಮೂಲಕ ತಿಳಿಯಿರಿ....

ಒಣ ತ್ವಚೆಯ ಸಮಸ್ಯೆ ಇದ್ದರೆ...

ಒಣ ತ್ವಚೆಯ ಸಮಸ್ಯೆ ಇದ್ದರೆ...

ಒಣತ್ವಚೆಯಿದ್ದವರಿಗೆ ಕಾಫಿ ಸ್ಕ್ರಬ್ ತುಂಬಾ ಸಹಕಾರಿ. ಕಾಫಿ ಪುಡಿಯಲ್ಲಿ ಸುಕ್ಕಿನ ವಿರುದ್ಧ ಹೋರಾಡುವ ಗುಣವಿರುವುದರಿಂದ ತ್ವಚೆಗೆ ಅವಶ್ಯಕ. 3 ಚಮಚ ನುಣ್ಣನೆಯ ಕಾಫಿ ಪುಡಿಗೆ 1 ಚಮಚ ಹಾಲು ಸೇರಿಸಿ ಪೇಸ್ಟ್ ನಂತೆ ಮಾಡಿ ವೃತ್ತಾಕಾರವಾಗಿ ಮುಖಕ್ಕೆ ಮಸಾಜ್ ಮಾಡಿಕೊಂಡು ಒಣಗಿದ ನಂತರ ತಣ್ಣನೆ ನೀರಿನಿಂದ ತೊಳೆದುಕೊಂಡು ಮಾಯಿಶ್ಚರೈಸರ್ ಹಚ್ಚಿಕೊಂಡರೆ ಉತ್ತಮ ಫಲಿತಾಂಶ ಹೊಂದಬಹುದು.

ತಲೆಯ ಚರ್ಮವನ್ನು ಸ್ವಚ್ಛಗೊಳಿಸುವುದು

ತಲೆಯ ಚರ್ಮವನ್ನು ಸ್ವಚ್ಛಗೊಳಿಸುವುದು

ಪ್ರತಿ ಹದಿನೈದು ದಿನಕ್ಕೊಮ್ಮೆ ಹಳೆಯ ಕಾಫಿ ಬೀಜಗಳ ಪುಡಿಯನ್ನು ನೀರಿನಲ್ಲಿ ಮಿಶ್ರಣ ಮಾಡಿ ತಲೆಗೂದಲಿಗೆ ಹಚ್ಚಿಕೊಳ್ಳಿ. ಸುಮಾರು ಇಪ್ಪತ್ತು ನಿಮಿಷಗಳ ಬಳಿಕ ಸೌಮ್ಯ ಶಾಂಪೂ ಉಪಯೋಗಿಸಿ ತಲೆಯನ್ನು ತೊಳೆದುಕೊಳ್ಳಿ. ಇದರಿಂದ ತಲೆಬುರುಡೆಯ ಚರ್ಮದಲ್ಲಿರುವ ಕೊಳೆ, ಹೊಟ್ಟು ಮತ್ತು ಇತರ ಕಲ್ಮಶಗಳು ನಿವಾರಣೆಯಾಗುತ್ತವೆ.

ಕಣ್ಣಿನ ಕೆಳಭಾಗ ಉಬ್ಬಿಕೊಂಡಿದ್ದರೆ...

ಕಣ್ಣಿನ ಕೆಳಭಾಗ ಉಬ್ಬಿಕೊಂಡಿದ್ದರೆ...

ಕಣ್ಣುಗಳ ಕೆಳಭಾಗ ಉಬ್ಬಿಕೊಂಡಿದ್ದರೆ ಇದಕ್ಕೆ ಕೆಫೀನ್ ಉತ್ತಮ ಪರಿಹಾರ ನೀಡುತ್ತದೆ. ಕಣ್ಣಿಗೆ ಆರೈಕೆ ನೀಡುವ ಕ್ರೀಂ ನಲ್ಲಿರುವ ಘಟಕಗಳನ್ನು ಗಮನಿಸಿ. ಅದರಲ್ಲಿ ಒಂದು ವೇಳೆ ಕೆಫೀನ್ ಇದ್ದರೆ ಉಬ್ಬಿದ ಕಣ್ಣುಗಳ ಕೆಳಭಾಗ ಶೀಘ್ರವೇ ಕಡಿಮೆಯಾಗುತ್ತದೆ.

ಸತ್ತ ಜೀವಕೋಶಗಳನ್ನು ನಿವಾರಿಸಲು ನೆರವಾಗುತ್ತದೆ

ಸತ್ತ ಜೀವಕೋಶಗಳನ್ನು ನಿವಾರಿಸಲು ನೆರವಾಗುತ್ತದೆ

ಚರ್ಮದ ಹೊರಭಾಗದಲ್ಲಿ ಸಂಗ್ರಹವಾಗಿರುವ ಸತ್ತ ಜೀವಕೋಶಗಳನ್ನು ನಿವಾರಿಸುವುದು ಅಷ್ಟು ಸುಲಭವಲ್ಲ. ಸೋಪು ಹಾಕಿ ಎಷ್ಟು ಉಜ್ಜಿದರೂ ಬಾರದ ಈ ಜೀವಕೋಶಗಳು ಹಳೆಯ ಕಾಫಿಬೀಜದ ಪುಡಿಯನ್ನು ಉಜ್ಜಿಕೊಳ್ಳುವ ಮೂಲಕ ಈ ಜೀವಕೋಶಗಳು ಸುಲಭವಾಗಿ ಹೊರಬರುತ್ತವೆ. ಇದಕ್ಕಾಗಿ ಹಳೆಯ ಕಾಫಿಬೀಜಗಳನ್ನು ನುಣ್ಣಗೆ ಪುಡಿಮಾಡಿ ನೀರಿನಲ್ಲಿ ನೆನೆಸಿ. ಬಿಸಿನೀರಿನ ಸ್ನಾನದ ಬಳಿಕ ಕಾಫಿಯ ಲೇಪನವನ್ನು ಇಡಿಯ ದೇಹಕ್ಕೆ ಹಚ್ಚಿ ಸುಮಾರು ಹದಿನೈದು ನಿಮಿಷ ಒಣಗಲು ಬಿಡಿ. ನಂತರ ಮೈಯುಜ್ಜುವ ಬ್ರಶ್ ಉಪಯೋಗಿಸಿ ಉಜ್ಜಿಕೊಳ್ಳಿ. ಚರ್ಮದ ಕಾಂತಿ ಹೆಚ್ಚಿರುವುದನ್ನು ನೋಡಿ ದಂಗಾಗುತ್ತೀರಿ.

ಚರ್ಮದಲ್ಲಿ ಗುಳಿಬೀಳುವುದನ್ನು ತಪ್ಪಿಸುತ್ತದೆ

ಚರ್ಮದಲ್ಲಿ ಗುಳಿಬೀಳುವುದನ್ನು ತಪ್ಪಿಸುತ್ತದೆ

ಕೆನ್ನೆಯಲ್ಲಿ ಗುಳಿಬಿದ್ದರೆ ಸೌಂದರ್ಯ ಹೆಚ್ಚುತ್ತದೆ. ಆದರೆ ಇಂತಹ ಚಿಕ್ಕಚಿಕ್ಕ ಗುಳಿಗಳು ಸೊಂಟದ ಸುತ್ತಮುತ್ತಲ ಭಾಗಗಳಲ್ಲಿ ಬಿದ್ದರೆ ಅದು ಅನಾರೋಗ್ಯದ ಲಕ್ಷಣವಾಗಿದೆ. ಸೆಲ್ಯೂಲೈಟ್ (cellulite) ಎಂಬ ಈ ಸ್ಥಿತಿಗೆ ಉತ್ತಮ ಪರಿಹಾರವನ್ನು ಕಾಫಿ ಬೀಜ ಒದಗಿಸುತ್ತದೆ. ಇದಕ್ಕಾಗಿ ಹಳೆಯ ಕಾಫಿಬೀಜವನ್ನು ಕುಟ್ಟಿ ಪುಡಿ ಮಾಡಿ ಕೆಲವು ಹನಿ ಕೊಬ್ಬರಿ ಎಣ್ಣೆ ಸೇರಿಸಿ ಲೇಪನ ತಯಾರಿಸಿ.ಈ ಲೇಪನವನ್ನು ಗುಳಿಗಳಿರುವಲ್ಲೆಲ್ಲಾ ಲೇಪಿಸಿ. ಸುಮಾರು ಇಪ್ಪತ್ತು ನಿಮಿಷದ ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ವಾರಕ್ಕೊಂದು ಅಥವಾ ಎರಡು ಬಾರಿ ಈ ವಿಧಾನವನ್ನು ಅನುಸರಿಸುವುದರಿಂದ ಉತ್ತಮ ಪರಿಹಾರ ದೊರಕುತ್ತದೆ.

ಕೂದಲಿಗೆ ಕಾಫಿ ಬಳಕೆ

ಕೂದಲಿಗೆ ಕಾಫಿ ಬಳಕೆ

ಕೂದಲಿನ ಬುಡದ ಚರ್ಮಕ್ಕೆ ಬೇಕಾದ ಅನೇಕ ಅಂಶ ಕಾಫಿಯಲ್ಲಿದೆ. ಕಾಫಿ ಕೂದಲಿಗೂ ತುಂಬಾ ಒಳ್ಳೆಯದು. ಕಾಫಿ ನೈಸರ್ಗಿಕ ಕಂಡೀಶನರ್ ನಂತೆ ಕೆಲಸ ನಿರ್ವಹಿಸಿ ಕೂದಲುದುರುವಿಕೆ ತಡೆದು ಮೃದುವಾಗಿಸುತ್ತೆ. ಮೆಹಂದಿಯೊಂದಿಗೆ ಕಾಫಿ ಡಿಕಾಕ್ಷನ್ ಬೆರೆಸಿ ಹಚ್ಚಿಕೊಂಡು 2 ಗಂಟೆ ಬಿಟ್ಟರೆ ಕೂದಲಿಗೆ ಒಳ್ಳೆ ಕಲರ್ ನೊಂದಿಗೆ ಹೊಳಪೂ ಬರುತ್ತದೆ.

ಕಾಫಿ ಮೆನಿಕ್ಯೂರ್ ಮತ್ತು ಪೆಡಿಕ್ಯೂರ್

ಕಾಫಿ ಮೆನಿಕ್ಯೂರ್ ಮತ್ತು ಪೆಡಿಕ್ಯೂರ್

ಒಡೆದ ಹಿಮ್ಮಡಿ ಮತ್ತು ಕಪ್ಪಾದ ಮೊಣಕೈ ಮೊಣಕಾಲಿಗೂ ಕಾಫಿ ಮಸಾಜ್ ಉತ್ತಮ ಪರಿಹಾರ. ಇದರೊಂದಿಗೆ ಕೈ ಬೆರಳುಗಳ ಮಧ್ಯೆ, ಅಂಗಾಲುಗಳಿಗೆ ಕಾಫಿ ಪುಡಿ ಮಸಾಜ್ ಮಾಡಿದರೆ ಫಲಿತಾಂಶ ನಿಮಗೇ ಗೋಚರಿಸುತ್ತೆ.

ಕಾಫಿ ಪೌಡರ್ ನ ಫೇಶಿಯಲ್

ಕಾಫಿ ಪೌಡರ್ ನ ಫೇಶಿಯಲ್

ಫೇಶಿಯಲ್ ಮಾಡುವ ಮೊದಲು ತ್ವಚೆಯನ್ನು ಸ್ವಚ್ಛಗೊಳಿಸುವುದು ಮೊದಲ ಕ್ರಮ. ಇದರಿಂದ ಚರ್ಮದಲ್ಲಿನ ಕೊಳೆ, ಅತಿಯಾದ ಎಣ್ಣೆ ಮತ್ತು ಇತರ ಕಲ್ಮಶಗಳು ದೂರವಾಗುವುದು. ಇದರಿಂದ ಚರ್ಮ ಸ್ವಚ್ಛವಾಗುವುದು.

ಇದು ಮಾಡುವ ವಿಧಾನ

ಈ ಸರಳ ವಿಧಾನಕ್ಕೆ ಬೇಕಾಗಿರುವುದು ಕಾಫಿ ಹುಡಿ ಮತ್ತು ಅಲೋವೆರಾ ಲೋಳೆ. ಒಂದು ಚಮಚ ಹುಡಿ ಮಾಡಿದ ಕಾಫಿ ತೆಗೆದುಕೊಳ್ಳಿ ಮತ್ತು ಇದಕ್ಕೆ ಎರಡು

ಚಮಚ ಅಲೋವೆರಾ ಲೋಳೆ ಹಾಕಿ. ಇವೆರಡನ್ನು ಪಿಂಗಾಣಿಗೆ ಹಾಕಿ ಸರಿಯಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಂಡು ವೃತ್ತಾಕಾರದಲ್ಲಿ ಎರಡು

ನಿಮಿಷ ಕಾಲ ಮಸಾಜ್ ಮಾಡಿಕೊಳ್ಳಿ. ಎರಡು ನಿಮಿಷ ಬಳಿಕ ಸಾಮಾನ್ಯ ನೀರಿನಿಂದ ತೊಳೆಯಿರಿ. ಈಗ ನೀವು ಮೊದಲ ಹಂತ ದಾಟಿದ್ದೀರಿ.

ಕಾಫಿಯ ಸ್ಕ್ರಬ್

ಕಾಫಿಯ ಸ್ಕ್ರಬ್

ತ್ವಚೆಯನ್ನು ಸ್ವಚ್ಛಗೊಳಿಸಿದ ಬಳಿಕ ಇರುವ ಎರಡನೇ ಹಂತವೆಂದರೆ ಅದು ಸ್ಕ್ರಬ್ ಮಾಡುವುದು. ಇದರಿಂದ ಚರ್ಮದ ಸತ್ತ ಕೋಶಗಳು ಹೋಗಿ ತ್ವಚೆಗೆ ಕಾಂತಿ ಬರುವುದು ಮತ್ತು ಸತ್ತ ಚರ್ಮವನ್ನು ಕಿತ್ತೊಗೆಯುವುದು.

ಹೇಗೆ ಮಾಡುವುದು?

ಒಂದು ಪಿಂಗಾಣಿಗೆ ಒಂದು ಚಮಚ ಸಕ್ಕರೆ, ಒಂದು ಚಮಚ ಕಾಫಿ ಮತ್ತು ಎರಡು ಚಮಚ ತೆಂಗಿನೆಣ್ಣೆ ಹಾಕಿ ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ವೃತ್ತಾಕಾರದಲ್ಲಿ ಮುಖದ ಮೇಲೆ 5-6 ನಿಮಿಷ ಕಾಲ ಸ್ಕ್ರಬ್ ಮಾಡಿ. ಇದು ಚರ್ಮದಲ್ಲಿರುವ ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕುವುದು, ಚರ್ಮವು ಇದರಿಂದ ಕಾಂತಿ ಹಾಗೂ ನಯವಾಗುವುದು. ಐದು ನಿಮಿಷ ಬಳಿಕ ನೀರಿನಿಂದ ತೊಳೆಯಿರಿ.

ಕಾಫಿ ಪೌಡರ್‌ನ ಫೇಸ್ ಮಾಸ್ಕ್

ಕಾಫಿ ಪೌಡರ್‌ನ ಫೇಸ್ ಮಾಸ್ಕ್

ಫೇಸ್ ಮಾಸ್ಕ್

ಕಾಂತಿಯುತ ಹಾಗೂ ನಯವಾದ ತ್ವಚೆ ಪಡೆಯುವುದರಿಂದ ನೀವು ಒಂದು ಹೆಜ್ಜೆ ಹಿಂದಿದ್ದೀರಿ. ಫೇಶಿಯಲ್ ಮಾಡುವಾಗ ಫೇಸ್ ಮಾಸ್ಕ್ ತುಂಬಾ ಮಹತ್ವದ ಹಂತವಾಗಿದೆ. ಫೇಸ್ ಮಾಸ್ಕ್ ನಿಂದ ಚರ್ಮವು ತೇವಾಂಶ ಪಡೆದುಕೊಳ್ಳುವುದು ಮಾತ್ರವಲ್ಲದೆ ಸಂಪೂರ್ಣ ವಿನ್ಯಾಸ ಉತ್ತಮಪಡಿಸುವುದು. ಕಾಫಿಯಿಂದ ಮಾಡಬಹುದಾದ ಕೆಲವು ಫೇಸ್ ಮಾಸ್ಕ್ ಗಳು ಇಲ್ಲಿವೆ. ಕಾಫಿ ಮತ್ತು ಜೇನುತುಪ್ಪದ ಫೇಸ್ ಮಾಸ್ಕ್

ಮಾಡುವ ವಿಧಾನ

ಪಿಂಗಾಣಿಗೆ ಒಂದು ಚಮಚ ಕಾಫಿ ಹುಡಿ, ಒಂದು ಚಮಚ ಜೇನುತುಪ್ಪ ಹಾಕಿಕೊಂಡು ಅದನ್ನು ಸರಿಯಾಗಿ ಮಿಶ್ರಣ ಮಾಡಿ. ಈ ಮಾಸ್ಕ್ ನ್ನು ಮುಖಕ್ಕೆ ಹಚ್ಚಿಕೊಂಡು ವೃತ್ತಾಕಾರದಲ್ಲಿ ಮಸಾಜ್ ಮಾಡಿ. 15 ನಿಮಿಷ ಕಾಲ ಇದು ಹಾಗೆ ಒಣಗಲಿ ಮತ್ತು ಬಳಿಕ ತೊಳೆಯಿರಿ. ಜೇನುತುಪ್ಪದಲ್ಲಿ ಮಾಯಿಶ್ಚರೈಸ್ ನೀಡುವಂತಹ ಗುಣಗಳು ಇವೆ. ಇದನ್ನು ಕಾಫಿ ಜತೆ ಸೇರಿಸಿಕೊಂಡಾಗ ಅದು ತ್ವಚೆಗೆ ಮಾಯಿಶ್ಚರೈಸ್ ಮತ್ತು ಕಾಂತಿ ನೀಡುವುದು.

ಕಾಫಿ ಮತ್ತು ಲಿಂಬೆಯ ಫೇಸ್ ಮಾಸ್ಕ್

ಕಾಫಿ ಮತ್ತು ಲಿಂಬೆಯ ಫೇಸ್ ಮಾಸ್ಕ್

ಮಾಡುವ ವಿಧಾನ

ಒಂದು ಚಮಚ ಕಾಫಿ ಹುಡಿ ತೆಗೆದುಕೊಂಡು ಅದಕ್ಕೆ ಕೆಲವು ಹನಿ ಲಿಂಬೆರಸ ಹಿಡಿ ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟ್ ನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ. 30 ನಿಮಿಷ ಮುಖದಲ್ಲಿ ಹಾಗೆ ಬಿಟ್ಟ ಬಳಿಕ ತೊಳೆಯಿರಿ. ಲಿಂಬೆಯಲ್ಲಿ ವಿಟಮಿನ್ ಸಿ ಇದ್ದು, ಇದು ಮುಖದಲ್ಲಿರುವ ಹೆಚ್ಚುವರಿ ಕೊಳೆ ತೆಗೆದುಹಾಕಿ ಚರ್ಮವು ಸ್ವಚ್ಛ ಹಾಗೂ ಆರೋಗ್ಯವಾಗುವಂತೆ ಮಾಡುವುದು.

English summary

Beauty tips: coffee powder for skin whitening

Coffee is best known as an antioxidant that helps tighten the skin and protects the skin from free radicals. Coffee also helps in exfoliating the skin, thus making it look brighter. It is one solution for many skin problems. Now, it is more exciting when you can get flawless skin right at the comfort of your home, isn't it? Here is a complete DIY step-by-step coffee facial guide to get that brighter and healthier-looking skin.
X
Desktop Bottom Promotion