For Quick Alerts
ALLOW NOTIFICATIONS  
For Daily Alerts

ರೋಮನ್ ಮಹಿಳೆಯರ ಸೌಂದರ್ಯ ರಹಸ್ಯದ ಗುಟ್ಟು-ರಟ್ಟು!

|

ಪುರಾತನ ರೋಮ್ ನಲ್ಲಿ ಮಹಿಳೆಯರು ತಮ್ಮ ಚರ್ಮವನ್ನು ಸುಂದರಗೊಳಿಸಲು ವಿವಿಧ ರೀತಿಯ ವಿಶೇಷವಾದ ಸೌಂದರ್ಯ ವರ್ಧಕಗಳನ್ನು ಬಳಸುತ್ತಿದ್ದರು. ಇದರಿಂದ ಅವರು ತಮ್ಮ ಚರ್ಮದ ತಾರುಣ್ಯವನ್ನು ಕಾಪಾಡಿಕೊಂಡು ಅದು ದೋಷರಹಿತವಾಗಿ ಕಾಣುವಂತೆ ನೋಡಿಕೊಳ್ಳುತ್ತಿದ್ದರು. ಕುರಿ ರಕ್ತದಿಂದ ಹಿಡಿದು, ಕುಸ್ತಿಮಲ್ಲರ ಬೆವರು ಮತ್ತು ದಂತಗಳಿಂದ ತಯಾರಿಸಿದ ಕಾಡಿಗೆಯವರೆಗೆ ಅವರು ಉಪಯೋಗಿಸುವ ಸೌಂದರ್ಯದ ಗುಟ್ಟುಗಳಿಂದ ಅವರು ಪ್ರಸಿದ್ಧರಾಗಿದ್ದಾರೆ.

ಅವರು ನೈಸರ್ಗಿಕ ಪದಾರ್ಥಗಳನ್ನು ಬಳಸಿ ವಿವಿಧ ರೀತಿಯ ಕ್ರೀಮ್ ಮತ್ತು ಲೋಷನ್ಗಳನ್ನು ಕಂಡು ಹಿಡಿದಿದ್ದಾರೆ.ಆಗಿನ ಕಾಲದಲ್ಲಿ ಅಥವಾ ಈಗಿನ ದಿನಗಳಲ್ಲಿ ರೋಮನ್ ಮಹಿಳೆಯರು ತಮ್ಮ ಸುಂದರವಾದ ಚರ್ಮಕ್ಕಾಗಿ ವಿಶ್ವಾದ್ಯಂತ ಪ್ರಸಿದ್ಧರಾಗಿದ್ದಾರೆ ಎಂದು ನಾವು ಹೇಳುವ ಅವಶ್ಯಕತೆಯೇ ಇಲ್ಲ. ಈ ಗುಟ್ಟುಗಳಲ್ಲಿ ಕೆಲವು ಖಂಡಿತವಾಗಿಯೂ ಅನಪೇಕ್ಷಿತವೆಂದು ಅನಿಸುತ್ತದೆ. ಆದರೆ ಕೆಲವೊಂದನ್ನು ಖಂಡಿತವಾಗಿಯೂ ನೀವು ಪ್ರಯತ್ನಿಸಿ ನೋಡಬಹುದು. ಇಂದು ಬೋಲ್ಡ್ ಸ್ಕೈ ನಲ್ಲಿ,ರೋಮನ್ ಸುಂದರಿಯರ ಅತ್ಯುತ್ತಮ ಸೌಂದರ್ಯ ರಹಸ್ಯದ ಬಗ್ಗೆ ನಾವು ನಿಮಗೆ ತಿಳಿಸಿ ಕೊಡುತ್ತೇವೆ.

skin care tips

ಅಂದ ಹೆಚ್ಚಿಸಲು ಆರ್ಯುವೇದದಲ್ಲಿದೆ ಸಪ್ತ ಮಾರ್ಗ

ಯಾವುದೇ ರೀತಿಯ ಚರ್ಮರಕ್ಷಣೆಯ ಸೌಂದರ್ಯ ವರ್ಧಕಗಳನ್ನು ಹಾಗೂ ಇಂದು ನಾವು ಬಳಸುತ್ತಿರುವ ಅಲಂಕಾರಿಕ ವಸ್ತುಗಳನ್ನು ಅವರು ಹೊಂದಿರದಿದ್ದರೂ ಸಹ, ತಮ್ಮ ಚರ್ಮವು ಎಲ್ಲಾ ಸಮಯದಲ್ಲೂ ಸುಂದರವಾಗಿ ಕಾಣುವುದನ್ನು ಅವರು ಖಾತ್ರಿ ಪಡೆಸಿಕೊಳ್ಳುತಿದ್ದರು. ಇಲ್ಲಿ ನಾವು ರೋಮನ್ನರ ಕೆಲವೊಂದು ಅತ್ಯುತ್ತಮ ಸೌಂದರ್ಯದ ರಹಸ್ಯಗಳ ಬಗ್ಗೆ ತಿಳಿದುಕೊಳ್ಳೋಣ....

ಮೊನೊಬ್ರೊ ಫ್ಯಾಷನ್

ರೋಮನ್ ಮಹಿಳೆಯರು ಸೌಂದರ್ಯ ಸಮುದಾಯದಲ್ಲಿ ತಮ್ಮ ದಟ್ಟವಾದ ಮತ್ತು ಆಕರ್ಷಕ ಹುಬ್ಬುಗಳಿಗಾಗಿ ಪ್ರಸಿದ್ಧರಾಗಿದ್ದಾರೆ. ಆಗಿನ ಕಾಲದಲ್ಲಿ, ಮೊನೊಬ್ರೊ ಅನ್ನು ಫ್ಯಾಷನ್ ಎಂದು ರೋಮ್ ನಲ್ಲಿ ಪರಿಗಣಿಸಲಾಗುತ್ತಿತ್ತು. ಮಹಿಳೆಯರು ಇದ್ದಲನ್ನು ಬಳಸಿ ತಮ್ಮ ಎರಡು ಹುಬ್ಬುಗಳನ್ನು ಕೂಡಿಸಿ ಸುಂದರವಾದ ನೋಟವನ್ನು ಪಡೆಯುತ್ತ ಇದ್ದರು.

ಅವರು ಗೌರವರ್ಣವನ್ನು ಪ್ರೀತಿಸುತ್ತಾರೆ

ತುಂಬಾ ಹಳೆಯ ಕಾಲದಲ್ಲೇ ಹೆಚ್ಚಿನ ರೋಮನ್ ಮಹಿಳೆಯರು ಗೌರವ ವರ್ಣವನ್ನು ಪಡೆಯುವ ನಿಟ್ಟಿನಲ್ಲಿ ಬಹುದೂರ ಸಾಗಿದ್ದಾರೆ.ಆಗಿನ ದಿನಗಳಲ್ಲಿ, ಚರ್ಮದ ಹೊಳಪನ್ನು ಹೆಚ್ಚಿಸಲು ಅವರು ತಮ್ಮ ಚರ್ಮದ ಮೇಲೆ ಸೀಮೆಸುಣ್ಣವನ್ನು ಪುಡಿ ಮಾಡಲು ಬಳಸುತ್ತಿದ್ದರು.ಆದರೆ ಇತ್ತೀಚಿನ ದಿನಗಳಲ್ಲಿ ಆಲೂಗೆಡ್ಡೆ ಮತ್ತು ನಿಂಬೆಹಣ್ಣಿನಂತಹ ಇತರ ನೈಸರ್ಗಿಕ ಪರಿಹಾರಗಳನ್ನು ತಮ್ಮ ಚರ್ಮಕ್ಕೆ ಹೊಳಪನ್ನು ನೀಡಲು ಬಳಸುತ್ತಿದ್ದಾರೆ.

ರೋಮನ್ ಮಹಿಳೆಯರು ಕೆಂಪಾದ ಕೆನ್ನೆಯನ್ನು ಇಷ್ಟಪಡುತ್ತಾರೆ

ಗೌರವ ವರ್ಣವನ್ನು ಪ್ರೀತಿಸುವುದರ ಜೊತೆಗೆ ರೋಮನ್ ಮಹಿಳೆಯರು ನಸುಗೆಂಪು ಚರ್ಮವನ್ನು ಪಡೆಯಲು ಬಹಳವೇ ಇಷ್ಟಪಡುತ್ತಾರೆ. ತಮ್ಮ ಚರ್ಮದ ಮೇಲೆ ಕೆಂಪಾದ ಹೊಳಪನ್ನು ಪಡೆಯಲು ಅವರು ಈ ಸೌಂದರ್ಯ ಉತ್ಪನ್ನವನ್ನು ಬಳಸುತ್ತಿದ್ದರು.ಹಿಂದಿನ ಕಾಲದಲ್ಲಿ ಬೀಟ್ರೂಟ್, ಅನಾಟೋ ಬೀಜದ ಪುಡಿ ಮುಂತಾದ ನೈಸರ್ಗಿಕ ಪದಾರ್ಥಗಳೊಂದಿಗೆ ಮನೆಯಲ್ಲೆ ಅವರು ಬ್ಲಶ್ ಅನ್ನು ತಯಾರಿಸುತಿದ್ದರು.ಈ ಸಾಮಗ್ರಿಗಳು ನಿಮ್ಮ ಚರ್ಮಕ್ಕೆ ಹಾನಿಕಾರಕವಾಗದೇ ಅದನ್ನು ಅಲಂಕರಿಸುವ ಬಣ್ಣವನ್ನು ಹೊಂದಿರುತ್ತವೆ. ಮನೆಯಲ್ಲಿ ಬ್ಲಶ್ ಸಿದ್ಧಪಡಿಸುವುದು ತುಂಬಾ ಸುಲಭ.ನೀವು ಕೂಡ ಹಲವಾರು ವಿಧಾನಗಳನ್ನು ಉಪಯೋಗಿಸಬಹುದು. ಅದರಲ್ಲಿ ಸುಲಭವಾದ ಒಂದು ವಿಧಾನವೆಂದರೆ ಬೀಟ್ರೂಟ್ ಪುಡಿ ಮತ್ತು ಆರ್ರೊರೂಟ್ ಪುಡಿಯ ಮಿಶ್ರಣ. ಈ ಪುಡಿಯಿಂದ ನಸುಗೆಂಪಾದ ಕೆನ್ನೆಗಳನ್ನು ನೀವು ಪರಿಣಾಮಕಾರಿಯಾದ ರೀತಿಯಲ್ಲಿ ಪಡೆಯಬಹುದು.

ದೇಹದಲ್ಲಿನ ಕೂದಲುಗಳನ್ನು ಅವರು ಇಷ್ಟಪಡುವುದಿಲ್ಲ

ರೋಮನ್ ಮಹಿಳೆಯರ ಮತ್ತೊಂದು ಸೌಂದರ್ಯ ರಹಸ್ಯವೆಂದರೆ ಅವರು ದೇಹದ ಮೇಲಿನ ಕೂದಲುಗಳನ್ನು ಇಷ್ಟಪಡುವುದಿಲ್ಲ. ಪ್ಯುಮೈಸ್ ಕಲ್ಲು ಬಳಸಿ ಕೂದಲನ್ನು ಕೀಳುವುದರಿಂದ ಹಿಡಿದು ತಮ್ಮ ಕಾಲುಗಳು,ತೋಳುಗಳು ಮತ್ತು ಕಂಕುಳಿನಿಂದ ಕೂದಲನ್ನು ತೆಗೆಯಲು ಅವರು ಬೇರೆ ಬೇರೆ ತರಹದ ವಿಧಾನಗಳನ್ನು ಉಪಯೋಗಿಸುತ್ತಿದ್ದರು.ಆದರೆ ಈಗ ಶೇವಿಂಗ್,ವಾಕ್ಸಿಂಗ್ ನಂತಹ ವಿಧಾನಗಳನ್ನು ಪ್ಯುಮೈಸ್ ಸ್ಟೋನ್ ಬದಲು ಉಪಯೋಗಿಸುತ್ತಿದ್ದಾರೆ.

ರೋಮನ್ ಮಹಿಳೆಯರು ಮನೆಯಲ್ಲೇ ತಯಾರಿಸಿದ ಫೇಸ್ ಮಾಸ್ಕ್ಗಳನ್ನು ಇಷ್ಟಪಡುತ್ತಾರೆ

ಪ್ರಾಚೀನ ಕಾಲದಿಂದಲೂ, ರೋಮನ್ ಮಹಿಳೆಯರು ವಿವಿಧ ರೀತಿಯ ಮುಖದ ಮಾಸ್ಕ್ ಗಳನ್ನು ಅವರ ಸೌಂದರ್ಯವನ್ನು ಹೆಚ್ಚಿಸಲು ಹಾಗು ಚರ್ಮದ ಆರೋಗ್ಯವನ್ನು ಕಾಪಾಡಲು ಉಪಯೋಗಿಸುತ್ತಿದ್ದಾರೆ.ಅವರು ಸೊಂಪಿನ ಬೀಜಗಳು,ತುಳಸಿ ರಸ ಮತ್ತು ಹಲವು ಹೆಚ್ಚು ನೈಸರ್ಗಿಕ ಸಾಮಗ್ರಿಗಳನ್ನು ಉಪಯೋಗಿಸಿ ತಮ್ಮದೇ ಆದ ಫೇಸ್ ಮಾಸ್ಕ್ ಗಳನ್ನು ತಯಾರಿಸತ್ತಾರೆ.ಈ ಮಾಸ್ಕ್ ಗಳು ನಿಮ್ಮ ಚರ್ಮದ ನೈಸರ್ಗಿಕ ಸೌಂದರ್ಯ ಮತ್ತು ಯವ್ವನವನ್ನು ಕಾಪಾಡುತ್ತವೆ.

ನಿಮ್ಮ ಚರ್ಮದ ರಕ್ಷಣೆಗೆ ನೀವೂ ಸಹ ಮನೆಯಲ್ಲಿ ಅಂತಹ ಒಂದು ಫೇಸ್ ಮಾಸ್ಕ್ ಅನ್ನು ತಯಾರಿಸಬಹುದು.ಅದು ಹೇಗೆಂದರೆ ,ರಾತ್ರಿಯ ಹೊತ್ತು ನೀರಿನಲ್ಲಿ ಒಂದು ಹಿಡಿ ಸೊಂಪಿನ ಕಾಳನ್ನು ನೆನೆಸಿ.ಬೆಳಿಗ್ಗೆ ಆ ಬೀಜಗಳನ್ನು ಪುಡಿ ಮಾಡಿ ೧ ಚಮಚ ತುಳಸಿಯ ರಸದೊಂದಿಗೆ ಬೆರಸಿ.ಇದನ್ನು ನಿಮ್ಮ ಮುಖಕ್ಕೆ ಹಚ್ಚಿ ಒಣಗಲು ಬಿಡಿ .ಹತ್ತು ನಿಮಿಷದ ನಂತರ ನೀರಿನಲ್ಲಿ ತೊಳೆಯಿರಿ.ಇದು ನಿಮ್ಮ ಚರ್ಮದಿಂದ ಜಿಡ್ಡನ್ನು ಹೊರಹಾಕುತ್ತದೆ ಮತ್ತು ಮುಖದವನ್ನು ಸುಕ್ಕುಗಟ್ಟದಂತೆ ತಡೆಯುತ್ತದೆ

ಕತ್ತೆಯ ಹಾಲಿನಿಂದ ಸ್ನಾನ ಮಾಡುವುದು

ಹಲವಾರು ಸೌಂದರ್ಯದ ಪ್ರಯೋಜನಗಳಿಂದ ಶತಮಾನಗಳಿಂದಲೂ ಸಾಕಿದ ಕತ್ತೆಯ ಹಾಲನ್ನು ಬಳಸಲಾಗಿದೆ. ಕ್ಲಿಯೋಪಾತ್ರ ತನ್ನ ಚರ್ಮದ ಯೌವನ ಮತ್ತು ಸೌಂದರ್ಯವನ್ನು ಕಾಪಾಡಿಕೊಳ್ಳಲು ಕತ್ತೆ ಹಾಲಿನಲ್ಲಿ ಸ್ನಾನ ಮಾಡುತಿದ್ದಳು ಎಂದು ಹೇಳಲಾಗುತ್ತದೆ. ಈ ಹಾಲು ನಿಮ್ಮ ಚರ್ಮವನ್ನು ವಯಸ್ಸಾಗುವುದರಿಂದ ತಡೆಗಟ್ಟುತ್ತದೆ ಮತ್ತು ಚರ್ಮದ ಮೇಲೆ ಅದ್ಭುತಗಳನ್ನು ಮಾಡುವಂತಹ ಸಾಮರ್ಥ್ಯಗಳನ್ನು ಹೊಂದಿದೆ. ಈ ಎಲ್ಲ ಕಾರಣಗಳಿಂದ, ರೋಮನ್ನರು ಕತ್ತೆಯ ಹಾಲಿನಿಂದ ಸ್ನಾನ ಮಾಡಲು ಇಷ್ಟ ಪಡುತ್ತಾರೆ.

ಈ ಬ್ಯೂಟಿ ಟಿಪ್ಸ್ ಅನುಸರಿಸಿ-ಇನ್ನಷ್ಟು ಸುಂದರವಾಗಿ ಕಾಣುವಿರಿ!

ಕುರಿಯ ಕೊಬ್ಬು ಮತ್ತು ರಕ್ತದಿಂದ ಮಾಡಿದ ಉಗುರುಬಣ್ಣಗಳು

ಇದು ಪ್ರಾಚೀನ ಕಾಲದಲ್ಲಿ ಆಕರ್ಷಕ ಕೆಂಪು ಉಗುರುಗಳನ್ನು ಪಡೆಯಲು ರೋಮನ್ನರು ಬಳಸಿದ ಒಂದು ಸೌಂದರ್ಯ ಪ್ರವೃತ್ತಿಯಾಗಿದೆ. ಪ್ರಕಾಶಮಾನವಾದ ಕೆಂಪು ಉಗುರು ಬಣ್ಣಗಳನ್ನು ಪಡೆಯಲು ಅವರು ಕುರಿ ಕೊಬ್ಬು ಮತ್ತು ರಕ್ತವನ್ನು ಬಳಸುತಿದ್ದರು.ಈ ಬಣ್ಣಗಳು ದೀರ್ಘಕಾಲ ಉಳಿಯುತ್ತಾ ಇದ್ದವು.

ಈ ಎಲ್ಲ ಸೌಂದರ್ಯದ ರಹಸ್ಯಗಳು ರೋಮನ್ ಮಹಿಳೆಯರು ಎಲ್ಲಾ ಸಮಯದಲ್ಲೂ ಅತ್ಯಂತ ಸುಂದರವಾಗಿ ಕಾಣುವಂತೆ ಮಾಡುತ್ತಿದ್ದವು.ಯಾವುದೇ ಕಲೆಯಿಲ್ಲದ ,ಯವ್ವನದಿಂದ ಕೂಡಿದ ಚರ್ಮ,ಗೌರವ ವರ್ಣ,ಕೆಂಪು ಕೆನ್ನೆಗಳು ಮತ್ತು ಆಕರ್ಷಕ ಹುಬ್ಬುಗಳಿಂದ ರೋಮನ್ ಮಹಿಳೆಯರು ವಿಶ್ವದಾದ್ಯಂತ ಜನಪ್ರಿಯರಾಗಿದ್ದಾರೆ.

English summary

Beauty Secrets Of Romans You Probably Didn't Know

From using sheep blood, gladiator's sweat to using kohl made from ivory, Roman women were famous for their beauty secrets. They used natural ingredients to create different types of creams and lotions. And, it goes without saying that Roman women, be it in the old days or today, are famous worldwide for their beautiful skin.
X
Desktop Bottom Promotion