ಸಿಂಪಲ್ ಬ್ಯೂಟಿ ಟಿಪ್ಸ್: ಟೂತ್ ಪೇಸ್ಟ್ ಹಚ್ಚಿ-ಮುಖ ಬೆಳ್ಳಗಾಗುತ್ತದೆ!

Posted By: Hemanth
Subscribe to Boldsky

ಪ್ರತಿನಿತ್ಯ ನಾವು ಬಳಸುವಂತಹ ಸಾಮಗ್ರಿಗಳಲ್ಲಿ ಹಲ್ಲಿನ ಪೇಸ್ಟ್ ಕೂಡ ಒಂದು. ಹಲ್ಲಿನ ಪೇಸ್ಟ್ ಇಲ್ಲದೆ ಹಲ್ಲುಜ್ಜಲು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಹಲ್ಲುಜ್ಜುವ ಪೇಸ್ಟ್ ಕೇವಲ ಹಲ್ಲುಜ್ಜಲು ಮಾತ್ರವಲ್ಲದೆ ಹಲವಾರು ರೀತಿಯಿಂದ ಸೌಂದರ್ಯವರ್ಧಕವಾಗಿಯೂ ಬಳಸಬಹುದು.

ಹೌದು, ಇದು ಒಂದು ಕ್ಷಣ ನಿಮಗೆ ಅಚ್ಚರಿ ಮೂಡಿಸಿದರೂ ಹಲ್ಲುಜ್ಜುವ ಪೇಸ್ಟ್ ನಿಂದ ಕೆಲವೊಂದು ಲಾಭಗಳು ಇವೆ. ಇದನ್ನು ಚರ್ಮ, ಕೂದಲು ಮತ್ತು ತುಟಿ ಇತ್ಯಾದಿಗಳ ಆರೈಕೆಗೆ ಬಳಸಬಹುದು. ದುಬಾರಿ ಖರ್ಚು ಮಾಡಿ ಕ್ರೀಮ್ ಗಳನ್ನು ಬಳಸುವ ಬದಲು ಹಲ್ಲುಜ್ಜುವ ಪೇಸ್ಟ್ ಬಳಸಿದರೆ ಒಳ್ಳೆಯದು. ಆದರೆ ಈ ಪೇಸ್ಟ್ ಬಿಳಿಯ ಪೇಸ್ಟ್ ಆಗಿರಬೇಕೆಂಬುದನ್ನು ಗಮನದಲ್ಲಿಟ್ಟುಕೊಳ್ಳಿ. ಮಾರುಕಟ್ಟೆಯಲ್ಲಿ ವಿವಿಧ ಬಣ್ಣದ ಪೇಸ್ಟ್ಲ ಭ್ಯವಿರುವುದು. ಆದರೆ ಕೇವಲ ಬಿಳಿ ಪೇಸ್ಟ್ ಅನ್ನು ಸೌಂದರ್ಯವರ್ಧಕವಾಗಿ ಬಳಸಿ. ಹಲ್ಲುಜ್ಜುವ ಪೇಸ್ಟ್‌ನ ಐದು ಸೌಂದರ್ಯವರ್ಧಕ ಗುಣಗಳು ಇಲ್ಲಿವೆ.... 

 ಕಪ್ಪು ಕಲೆಗಳ ನಿವಾರಣೆ

ಕಪ್ಪು ಕಲೆಗಳ ನಿವಾರಣೆ

ಇದು ಕಪ್ಪು ಕಲೆಗಳು ಹಾಗೂ ವೃತ್ತಗಳನ್ನು ನಿವಾರಣೆ ಮಾಡುವುದು.

ಬೇಕಾಗುವ ಸಾಮಗ್ರಿಗಳು

1/2 ಚಮಚ ಹಲ್ಲುಜ್ಜುವ ಪೇಸ್ಟ್

1/2 ಚಮಚ ಟೊಮೆಟೋ ಪೇಸ್ಟ್

1 ಚಮಚ ಅಡುಗೆ ಸೋಡಾ

ತಯಾರಿಸುವ ವಿಧಾನ

ತಯಾರಿಸುವ ವಿಧಾನ

ಒಂದು ಪಿಂಗಾಣಿಯಲ್ಲಿ ಅರ್ಧ ಚಮಚ ಹಲ್ಲುಜ್ಜುವ ಪೇಸ್ಟ್ ಮತ್ತು ಅರ್ಧ ಚಮಚ ಟೊಮೆಟೋ ಪೇಸ್ಟ್ ಹಾಕಿ. ಅಂತಿಮವಾಗಿ ಒಂದು ಚಮಚ ಅಡುಗೆ ಸೋಡಾ ಹಾಕಿಕೊಳ್ಳಿ. ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿ. ಸರಿಯಾಗಿ ಮಿಶ್ರಣವಾದ ಬಳಿಕ ಇದನ್ನು ಭಾದಿತ ಜಾಗ ಅಥವಾ ಸಂಪೂರ್ಣ ಮುಖಕ್ಕೆ ಹಚ್ಚಿಕೊಳ್ಳಿ. 15-20 ನಿಮಿಷ ಕಾಲ ಹಾಗೆ ಬಿಡಿ. ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ. ವಾರದಲ್ಲಿ ಎರಡು ದಿನ ಒಂದು ತಿಂಗಳ ಕಾಲ ಹೀಗೆ ಮಾಡಿದರೆ ಫಲಿತಾಂಶ ಸಿಗುವುದು.

ಮೊಡವೆ ಮತ್ತು ಬೊಕ್ಕೆ ಒಂದೇ ರಾತ್ರಿಯಲ್ಲಿ ತೆಗೆದುಹಾಕುವುದು

ಮೊಡವೆ ಮತ್ತು ಬೊಕ್ಕೆ ಒಂದೇ ರಾತ್ರಿಯಲ್ಲಿ ತೆಗೆದುಹಾಕುವುದು

ಬೊಕ್ಕೆ ಮತ್ತು ಮೊಡವೆ ಸಮಸ್ಯೆಯು ಪ್ರತಿಯೊಬ್ಬರಿಗೂ ಬರುವುದು. ಆದರೆ ಹಲ್ಲುಜ್ಜುವ ಪೇಸ್ಟ್ ಮೂಲಕ ಇದನ್ನು ಒಂದೇ ರಾತ್ರಿಯಲ್ಲಿ ತೆಗೆದುಹಾಕಬಹುದು.

ಬೇಕಾಗುವ ಸಾಮಗ್ರಿಗಳು

2 ಚಮಚ ಹಲ್ಲುಜ್ಜು ಪೇಸ್ಟ್

2 ಚಮಚ ಅಲೋವೆರಾ ಲೋಳೆ

ತಯಾರಿಸುವ ವಿಧಾನ

ತಯಾರಿಸುವ ವಿಧಾನ

ಎರಡು ಚಮಚ ಅಲೋವೆರಾ ಲೋಳೆ ಮತ್ತು ಎರಡು ಚಮಚ ಹಲ್ಲುಜ್ಜುವ ಪೇಸ್ಟ್ ನ್ನು ಪಿಂಗಾಣಿಗೆ ಹಾಕಿಕೊಂಡು ಮಿಶ್ರಣ ಮಾಡಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಈ ದಪ್ಪಗಿನ ಪೇಸ್ಟ್ ನ್ನು ಹತ್ತಿ ಉಂಡೆಯಿಂದ ಮುಖಕ್ಕೆ ಹಚ್ಚಿಕೊಳ್ಳಿ. ಪ್ರತಿನಿತ್ಯ ರಾತ್ರಿ ಮಲಗಲು ಹೋಗುವ ಮೊದಲು ಇದನ್ನು ಹಚ್ಚಿಕೊಳ್ಳಿ. ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ. ಮೊಡವೆ ಮತ್ತು ಬೊಕ್ಕೆ ಹೋಗುವ ತನಕ ಇದನ್ನು ಬಳಸಿ.

ಕೂದಲು ತುಂಡಾಗುವುದಕ್ಕೆ

ಕೂದಲು ತುಂಡಾಗುವುದಕ್ಕೆ

ಕೂದಲಿನ ಆರೈಕೆಗೂ ಹಲ್ಲುಜ್ಜುವ ಪೇಸ್ಟ್ ಬಳಸಬಹುದು. ಇದು ಬುಡದಲ್ಲಿ ಕೂದಲು ತುಂಡಾಗುವುದನ್ನು ನಿಲ್ಲಿಸುವುದು. ಇದರಿಂದ ಕೂದಲು ನಯವಾಗುವುದು ಮತ್ತು ಯಾವುದೇ ಹಾನಿಯಾಗುವುದಿಲ್ಲ.

ಬೇಕಾಗುವ ಸಾಮಗ್ರಿಗಳು

1 ಚಮಚ ಹಲ್ಲುಜ್ಜುವ ಪೇಸ್ಟ್

1 ಹಿಚುಕಿದ ಬಾಳೆಹಣ್ಣು

ತಯಾರಿಸುವ ವಿಧಾನ

ತಯಾರಿಸುವ ವಿಧಾನ

ಒಂದು ಪಿಂಗಾಣಿಗೆ ಹಿಚುಕಿದ ಬಾಳೆಹಣ್ಣು ಹಾಕಿ. ಇದಕ್ಕೆ ಒಂದು ಚಮಚ ಹಲ್ಲುಜ್ಜುವ ಪೇಸ್ಟ್ ಹಾಕಿ ಸರಿಯಾಗಿ ಮಿಶ್ರಣ ಮಾಡಿ ದಪ್ಪಗಿನ ಪೇಸ್ಟ್ ಮಾಡಿ. ಈ ಮಿಶ್ರಣವನ್ನು ಕೂದಲಿನ ಬುಡ ಮತ್ತು ಸಂಪೂರ್ಣ ಕೂದಲಿಗೆ ಹಚ್ಚಿಕೊಳ್ಳಿ. 25 ನಿಮಿಷ ಕಾಲ ಹಾಗೆ ಬಿಡಿ ಮತ್ತು ಬಳಿಕ ಶಾಂಪೂ ಹಾಕಿ ತೊಳೆಯಿರಿ. ತಿಂಗಳಲ್ಲಿ ಒಂದು ಸಲ ಹೀಗೆ ಮಾಡಿ. ಮೊದಲ ಸಲ ಬಳಸಿದ ಬಳಿಕ ನಿಮಗೆ ಪರಿಣಾಮ ಕಂಡುಬರುವುದು.

ತುಟಿಗಳನ್ನು ಕಾಂತಿಯುತವಾಗಿಸುವುದು

ತುಟಿಗಳನ್ನು ಕಾಂತಿಯುತವಾಗಿಸುವುದು

ಹಲ್ಲುಜ್ಜುವ ಪೇಸ್ಟ್ ನ ಮತ್ತೊಂದು ಉಪಯೋಗವೆಂದರೆ ಇದು ತುಟಿಗಳನ್ನು ಕಾಂತಿಯುತ ಮತ್ತು ಗುಲಾಬಿ ಬಣ್ಣಕ್ಕೆ ತಿರುಗಿಸುವುದು. ಇದು ತುಟಿಯ ಕಪ್ಪು ಬಣ್ಣವನ್ನು ತೆಗೆದುಹಾಕುವುದು.

ಬೇಕಾಗುವ ಸಾಮಗ್ರಿಗಳು

1 ಚಮಚ ಜೇನುತುಪ್ಪ

1 ಚಮಚ ಹಲ್ಲುಜ್ಜುವ ಪೇಸ್ಟ್

ತಯಾರಿಸುವ ವಿಧಾನ

ತಯಾರಿಸುವ ವಿಧಾನ

ಒಂದು ಪಿಂಗಾಣಿಗೆ ಜೇನುತುಪ್ಪ ಮತ್ತು ಹಲ್ಲುಜ್ಜುವ ಪೇಸ್ಟ್ ಹಾಕಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಪೇಸ್ಟ್ ನಲ್ಲಿ ಗಾಳಿಬುಕ್ಕೆಗಳು ಬರದಂತೆ ನೋಡಿ. ಹಲ್ಲುಜ್ಜುವ ಬ್ರಷ್ ನಿಂದ ತುಟಿಗಳನ್ನು ಬ್ರಷ್ ಮಾಡಿ. ಇದರ ಬಳಿಕ ತುಟಿಗಳಿಗೆ ಈ ಪೇಸ್ಟ್ ಹಚ್ಚಿಕೊಳ್ಳಿ. ತಿಂಗಳಲ್ಲಿ ಒಂದು ಸಲ ಇದನ್ನು ಬಳಸಿದರೆ ಆ ಫಲಿತಾಂಶ ನಿಮ್ಮ ಕಣ್ಣ ಮುಂದೆ ಇರುವುದು. ಈ ಮನೆಮದ್ದು ತುಟಿಯ ಬಣ್ಣ ಗುಲಾಬಿಯಾಗಿಸಿ, ನಯವಾಗಿಡುವುದು.

ಅನಗತ್ಯ ಕೂದಲು ತೆಗೆಯುವುದು

ಅನಗತ್ಯ ಕೂದಲು ತೆಗೆಯುವುದು

ಮಹಿಳೆಯರ ಮುಖದಲ್ಲಿ ಬೇಡದ ಕೂದಲು ಬೆಳೆಯುವುದು ದೊಡ್ಡ ಸೌಂದರ್ಯ ಸಮಸ್ಯೆಯಾಗಿದೆ. ಇದನ್ನು ತೆಗೆಯಲು ಹಲವಾರು ರೀತಿಯ ರಾಸಾಯನಿಕಯುಕ್ತ ಕ್ರೀಮ್ ಗಳು ಲಭ್ಯವಿದೆ. ಆದರೆ ನೈಸರ್ಗಿಕವಾಗಿ ಇದರ ನಿವಾರಣೆ ಮಾಡಿದರೆ ಒಳ್ಳೆಯದು. ನಿಯಮಿತವಾದ ಬಳಕೆಯಿಂದ ಇದು ಮುಖದ ಮೇಲಿರುವ ಕೂದಲನ್ನು ಶಾಶ್ವತವಾಗಿ ತೆಗೆದುಹಾಕುವುದು.

ಬೇಕಾಗುವ ಸಾಮಗ್ರಿಗಳು

1 ಚಮಚ ಹಲ್ಲುಜ್ಜುವ ಪೇಸ್ಟ್

2 ಚಮಚ ಕಡಲೆಹಿಟ್ಟು

ಬಳಸುವ ವಿಧಾನ

ಬಳಸುವ ವಿಧಾನ

ಒಂದು ಪಿಂಗಾಣಿಯಲ್ಲಿ ಎಲ್ಲವನ್ನು ಜತೆಯಾಗಿ ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿ. ಬೆರಳುಗಳನ್ನು ಬಳಸಿಕೊಂಡು ಈ ಮಿಶ್ರಣವನ್ನು ದೇಹದ ಭಾಗಕ್ಕೆ ಹಚ್ಚಿಕೊಳ್ಳಿ. 20-25 ನಿಮಿಷ ಕಾಲ ಹಾಗೆ ಬಿಡಿ. 25 ನಿಮಿಷ ಬಿಟ್ಟ ಬಳಿಕ ಕೂದಲು ಬೆಳೆಯುವ ವಿರುದ್ಧ ದಿಕ್ಕಿನಲ್ಲಿ ಹತ್ತಿ ಉಂಡೆಯಿಂದ ಇದನ್ನು ಉಜ್ಜಿಕೊಳ್ಳಿ. ವೇಗವಾಗಿ ಫಲಿತಾಂಶ ಪಡೆಯಲು ವಾರದಲ್ಲಿ ಎರಡು ಸಲ ಇದನ್ನು ಬಳಸಿ.

ಕಪ್ಪುಕಲೆಗಳಿಗೆ ಟೊಮೇಟೊ ಮತ್ತು ಟೂಥ್ ಪೇಸ್ಟ್

ಕಪ್ಪುಕಲೆಗಳಿಗೆ ಟೊಮೇಟೊ ಮತ್ತು ಟೂಥ್ ಪೇಸ್ಟ್

ಹಳೆಯ ಕಪ್ಪು ಕಲೆಗಳಿಗೆ ಟೂಥ್ ಪೇಸ್ಟ್ ಮತ್ತು ಟೊಮೇಟೊ ಮಿಶ್ರಣವೂ ಉತ್ತಮವಾಗಿದೆ. ಸಮಪ್ರಮಾಣದಲ್ಲಿ ಇವೆರಡನ್ನೂ ಬೆರೆಸಿ ಮುಖವಿಡೀ ಆವರಿಸುವಂತೆ ಮಾಸ್ಕ್ ಮಾಡಿಕೊಳ್ಳಿ. ರಾತ್ರಿಯಿಡೀ ಒಣಗಲು ಬಿಟ್ಟು ಬೆಳಿಗ್ಗೆ ತಣ್ಣೀರಿನಿಂದ ತೊಳೆದುಕೊಳ್ಳಿ. (ಸೋಪು ಉಪಯೋಗಿಸಬೇಡಿ)

ಕಪ್ಪು ಚುಕ್ಕೆಗಳನ್ನೂ ನಿವಾರಿಸುತ್ತದೆ

ಕಪ್ಪು ಚುಕ್ಕೆಗಳನ್ನೂ ನಿವಾರಿಸುತ್ತದೆ

ಹದಿಹರೆಯದಿಂದ ವೃದ್ಧರವರೆಗೂ ಬ್ಲಾಕ್ ಹೆಡ್ ಅಥವಾ ಕಪ್ಪು ತಲೆ ಅಥವಾ ಕಪುಚುಕ್ಕೆಗಳು ಚಿಂತೆಯ ವಿಷಯವಾಗಿದೆ. ಇದಕ್ಕಾಗಿ ಅಕ್ರೋಟಿನ ತಿರುಳನ್ನು ನಯವಾಗಿ ಅರೆದು ಸಮಪ್ರಮಾಣದಲ್ಲಿ ಟೂಥ್ ಪೇಸ್ಟ್ ನೊಂದಿಗೆ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ಕಪ್ಪುತಲೆ ಇರುವಲ್ಲಿ ಹಚ್ಚಿ ನಯವಾಗಿ ಮಸಾಜ್ ಮಾಡಿ. ರಾತ್ರಿಯಿಡೀ ಒಣಗಲು ಬಿಟ್ಟು ಬೆಳಿಗ್ಗೆ ತಣ್ಣೀರಿನಿಂದ ತೊಳೆದುಕೊಳ್ಳಿ. (ಸೋಪು ಉಪಯೋಗಿಸಬೇಡಿ)

ಕಪ್ಪುಗೆರೆಗಳನ್ನೂ ನಿವಾರಿಸುತ್ತದೆ

ಕಪ್ಪುಗೆರೆಗಳನ್ನೂ ನಿವಾರಿಸುತ್ತದೆ

ಕೆಲವೊಮ್ಮೆ ಚರ್ಮದಲ್ಲಿ ಕಪ್ಪುಗೆರೆಗಳು ಎದ್ದು ಕಾಣುತ್ತವೆ. ಇದನ್ನು ಮರೆಯಾಗಿಸಲು ನೀರು ಮತ್ತು ಟೂಥ್ ಪೇಸ್ಟ್ ಸಮಪ್ರಮಾಣದಲ್ಲಿ ಬೆರೆಸಿ ಗೆರೆಗಳಿರುವಲ್ಲಿ ಹಚ್ಚಿ. ರಾತ್ರಿಯಿಡೀ ಒಣಗಲು ಬಿಟ್ಟು ಬೆಳಿಗ್ಗೆ ತಣ್ಣೀರಿನಿಂದ ತೊಳೆದುಕೊಳ್ಳಿ. (ಸೋಪು ಉಪಯೋಗಿಸಬೇಡಿ)

English summary

Beauty Hacks Of Toothpaste

Here are five ways to naturally use toothpaste for your complete beauty care. Before going to the remedies, keep in mind that the toothpaste to be used in all the remedies is supposed to be the white one. Although you find several types of toothpastes in the market these days, white toothpaste works the best for beauty purposes. So, let's have a look at the 5 cool beauty remedies or beauty hacks of toothpaste.