For Quick Alerts
ALLOW NOTIFICATIONS  
For Daily Alerts

ಮುಖದ ಸೌಂದರ್ಯ ಹೆಚ್ಚಿಸಲು- ಚೋಟುದ್ದ ನುಗ್ಗೆಕಾಯಿಯ ಫೇಸ್ ಮಾಸ್ಕ್ ಪ್ರಯತ್ನಿಸಿ

|

ನುಗ್ಗೆಕಾಯಿ ನಮ್ಮ ನೆಚ್ಚಿನ ಸಾಂಬಾರ್ ನಲ್ಲಿ ಅವಿಭಾಜ್ಯ ತರಕಾರಿಯಾಗಿ ಬಳಸಲ್ಪಡುತ್ತದೆ. ಇದರ ಆರೋಗ್ಯಕರ ಪ್ರಯೋಜನಗಳನ್ನು ಕಂಡ ನಮ್ಮ ಹಿರಿಯರು ನಿತ್ಯದ ಸಾರು, ಸಾಂಬಾರು ಹಾಗೂ ಉಪ್ಪಿನಕಾಯಿಗಳಲ್ಲಿ ನುಗ್ಗೆಕಾಯಿಯನ್ನು ಬಳಸುತ್ತಾ ಬಂದಿದ್ದಾರೆ. ನುಗ್ಗೇಮರವೂ ಒಂದು ತರಹದ ಕಲ್ಪವೃಕ್ಷವಿದ್ದಂತೆ, ಇದರ ಕಾಯಿ, ಎಲೆಗಳು, ಹೂವು ತೊಗಟೆ, ಬೇರು ಎಲ್ಲವೂ ಒಂದಲ್ಲಾ ಒಂದು ಔಷಧೀಯ ಗುಣವನ್ನು ಹೊಂದಿದೆ.

Drumsticks

ಆದರೆ ನುಗ್ಗೇಕಾಯಿಯನ್ನು ಎಂದಾದರೂ ಸೌಂದರ್ಯವರ್ಧಕದ ರೂಪದಲ್ಲಿ ಕಂಡಿದ್ದೀರೇನು? ಹೌದು, ನೀವು ಸರಿಯಾಗಿಯೇ ಓದಿದಿರಿ. ಇಂದು ಮಾರುಕಟ್ಟೆಯಲ್ಲಿ ಲಭಿಸುತ್ತಿರುವ ಹಲವು ಸೌಂದರ್ಯ ಪರಿಕರಗಳಲ್ಲಿ ಇದರ ಸೌಂದರ್ಯವರ್ಧಕ ಗುಣಗಳಿಂದಾಗಿಯೇ ನುಗ್ಗೇಕಾಯಿಯ ಅಂಶವನ್ನು ಸೇರಿಸಲಾಗುತ್ತಿದೆ. ಹಾಗಾಗಿ ನಿಮ್ಮ ಸೌಂದರ್ಯದ ಆರೈಕೆಯಲ್ಲಿ ನುಗ್ಗೇಕಾಯಿಯನ್ನು ಒಳಗೊಳಿಸುವುದು ಉತ್ತಮ ಆಯ್ಕೆಯಾಗಿದ್ದು ಇದನ್ನು ಮನೆಯಲ್ಲಿಯೇ ಸುಲಭ ಮುಖಲೇಪದ ರೂಪದಲ್ಲಿ ತಯಾರಿಸಿಕೊಳ್ಳಲು ಇಂದಿನ ಲೇಖನದಲ್ಲಿ ಅಮೂಲ್ಯ ಮಾಹಿತಿಯನ್ನು ಒದಗಿಸಲಾಗಿದೆ. ಬನ್ನಿ, ಈ ಮುಖಲೇಪದ ಪ್ರಯೋಜನಗಳನ್ನು ನೋಡೋಣ....

ಮೊಡವೆಗಳನ್ನು ಗುಣಪಡಿಸಲು ನೆರವಾಗುತ್ತದೆ

ಮೊಡವೆಗಳನ್ನು ಗುಣಪಡಿಸಲು ನೆರವಾಗುತ್ತದೆ

ಮೊಡವೆಗಳನ್ನು ಬುಡಸಹಿತ ಗುಣಪಡಿಸಲು ನುಗ್ಗೇಕಾಯಿಯಲ್ಲಿರುವ ಪೋಷಕಾಂಶಗಳು ನೆರವಾಗುತ್ತವೆ. ಇದಕ್ಕಾಗಿ ಕೊಂಚ ನುಗ್ಗೆಬೀಜದ ಎಣ್ಣೆಯನ್ನು ಮೊಡವೆಗಳ ಮೇಲೆ ನಿತ್ಯವೂ ನವಿರಾಗಿ ಹಚ್ಚಿಕೊಳ್ಳುವ ಮೂಲಕ ಮೊಡವೆಗಳು ಕಲೆಯಿಲ್ಲದೇ ನಿಧಾನವಾಗಿ ಮಾಯವಾಗುತ್ತವೆ. ಎಣ್ಣೆ ಲಭ್ಯವಿಲ್ಲದಿದ್ದರೆ ನುಗ್ಗೆಗಿಡದ ಎಲೆಗಳನ್ನು ನುಣ್ಣಗೆ ಅರೆದು ಇದರ ಲೇಪವನ್ನು ರಾತ್ರಿ ಮಲಗುವ ಮುನ್ನ ಮೊಡವೆಗಳ ಮೇಲೆ ಹಚ್ಚಿಕೊಳ್ಳಬಹುದು. ನುಗ್ಗೆಯಲ್ಲಿರುವ ಬ್ಯಾಕ್ಟೀರಿಯಾನಿವಾರಕ ಮತ್ತು ಉರಿಯೂತ ನಿವಾರಕ ಗುಣಗಳು ಬಹುತೇಕ ಎಲ್ಲಾ ಬಗೆಯ ಬ್ಯಾಕ್ಟೀರಿಯಾಗಳನ್ನು ಕೊಂದು ತ್ವಚೆಗೆ ಎದುರಾಗಿದ್ದ ಸೋಂಕುಗಳನ್ನು ಗುಣಪಡಿಸಲು ನೆರವಾಗುತ್ತದೆ.

ಚೋಟುದ್ದ ನುಗ್ಗೆಯಲ್ಲಿದೆ ಲೆಕ್ಕಕ್ಕೆ ಸಿಗದ ಆರೋಗ್ಯ ಗುಣಗಳು!

ತ್ವಚೆಯ ವರ್ಣ ಉತ್ತಮಗೊಳಿಸುತ್ತದೆ

ತ್ವಚೆಯ ವರ್ಣ ಉತ್ತಮಗೊಳಿಸುತ್ತದೆ

ನುಗ್ಗೆಯ ಸೇವನೆಯಿಂದ ಕ್ರಮೇಣವಾಗಿ ಚರ್ಮದಲ್ಲಿರುವ ಕಲೆಗಳು ಮಾಯವಾಗುತ್ತವೆ ಹಾಗೂ ತ್ವಚೆ ಕಳೆದುಕೊಂಡಿದ್ದ ಸಹಜವರ್ಣವನ್ನು ಪುನಃ ಪಡೆಯಲು ಸಾಧ್ಯವಾಗುತ್ತದೆ. ಇದಕ್ಕಾಗಿ ಕೊಂಚ ತಾಜಾ ನುಗ್ಗೆ ಎಲೆಗಳನ್ನು ಅರೆದು ನುಣ್ಣನೆಯ ಲೇಪ ತಯಾರಿಸಿ ಕಲೆಯ ಮೇಲೆ ದಪ್ಪನಾಗಿ ಹಾಗೂ ಬಿಸಿಲಿನಿಂದ ಗಾಢವಾಗಿದ್ದ ಭಾಗದ ಮೇಲೆ ತೆಳುವಾಗಿ ಲೇಪಿಸಿ. ಉತ್ತಮ ಪರಿಣಾಮಕ್ಕಾಗಿ ವಾರಕ್ಕೆ ಎರಡರಿಂದ ಮೂರು ಬಾರಿ ಈ ವಿಧಾನವನ್ನು ಅನುಸರಿಸುವ ಮೂಲಕ ಶೀಘ್ರವೇ ಉತ್ತಮ ಪರಿಣಾಮ ಪಡೆಯಬಹುದು.

ವೃದ್ಧಾಪ್ಯ ಆವರಿಸುವುದನ್ನು ತಡವಾಗಿಸುತ್ತದೆ

ವೃದ್ಧಾಪ್ಯ ಆವರಿಸುವುದನ್ನು ತಡವಾಗಿಸುತ್ತದೆ

ನುಗ್ಗೆಕಾಯಿಯ ಬಳಕೆಯಿಂದ ತಚೆಯ ಸೆಳೆತ ಹೆಚ್ಚುತ್ತದೆ ಹಾಗೂ ವೃದ್ಧಾಪ್ಯ ಆವರಿಸುವುದನ್ನು ತಡವಾಗಿಸಬಹುದು. ನಿಯಮಿತವಾಗಿ ಈ ವಿಧಾನವನ್ನು ಅನುಸರಿಸುತ್ತಾ ಬರುವ ಮೂಲಕ ತ್ವಚೆಯಲ್ಲಿ ಮೂಡಿದ್ದ ನೆರಿಗೆಗಳು ಮತ್ತು ಸೂಕ್ಷ್ಮಗೆರೆಗಳು ಇಲ್ಲವಾಗುತ್ತವೆ. ಅಲ್ಲದೇ ತ್ವಚೆಯ ಸೆಳೆತ ಹೆಚ್ಚಿಸಿ ಜೋಲುಬೀಳುವುದನ್ನು ತಪ್ಪಿಸುತ್ತದೆ. ಇದಕ್ಕಾಗಿ ನುಗ್ಗೆಯ ಬೀಜದ ಎಣ್ಣೆಯನ್ನು ಹಚ್ಚಿಕೊಳ್ಳಬೇಕು. ಇದು ಸಾಧ್ಯವಾಗದಿದ್ದರೆ ನುಗ್ಗೆ ಎಲೆಗಳನ್ನು ಅರೆದು ತೆಳುವಾಗಿ ಹಚ್ಚಿಕೊಳ್ಳಬಹುದು.

 ಚರ್ಮದ ಕಾಂತಿ ಹೆಚ್ಚಲು ಸಹಕರಿಸುತ್ತದೆ

ಚರ್ಮದ ಕಾಂತಿ ಹೆಚ್ಚಲು ಸಹಕರಿಸುತ್ತದೆ

ನುಗ್ಗೆ ಎಲೆಯ ಪೋಷಕಾಂಶಗಳನ್ನು ಪಟ್ಟಿಮಾಡಿದಾಗ ಸುಮಾರು ಮೂವತ್ತು ವಿಧದ ಆಂಟಿ ಆಕ್ಸೆಡೆಂಟುಗಳು ಇದರಲ್ಲಿರುವುದು ಕಂಡುಬಂದಿದೆ. ಚರ್ಮದ ಕಾಂತಿ ಹೆಚ್ಚಿಸಲು ನೆರವಾಗುವ ಈ ಆಂಟಿ ಆಕ್ಸಿಡೆಂಟುಗಳನ್ನು ಪಡೆಯಲು ಹಸಿ ಎಲೆಗಳನ್ನು ಅರೆದು ಚರ್ಮಕ್ಕೆ ಲೇಪಿಸಬಹುದು. ಇಲ್ಲದಿದ್ದರೆ ಇದರ ಎಲೆಗಳನ್ನು ಒಣಗಿಸಿ ಹಿಂಡಿ ತೆಗೆದ ತೈಲವನ್ನೂ ಹಚ್ಚಿಕೊಳ್ಳಬಹುದು. ಇನ್ನೊಂದು ವಿಧಾನವಿದೆ ನೋಡಿ... ಸುಮಾರು ಒಂದು ಮುಷ್ಠಿಯಷ್ಟು ನುಗ್ಗೆ ಎಲೆಗಳಿಗೆ ನಾಲ್ಕಾರು ಹನಿ ಲಿಂಬೆರಸ, ಚಿಟಿಕೆ ಅರಿಶಿನ ಪುಡಿ, ಚಿಟಿಕೆ ಗಂಧದ ಒಣ ಪುಡಿ (ಅಥವಾ ಹೊಟ್ಟು) ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ. (ಕಲ್ಲಿನ ಮೇಲೆ ಅರೆದರೆ ಉತ್ತಮ, ಮಿಕ್ಸಿಯಲ್ಲಿ ಅರೆದರೆ ಬಿಸಿಯಾಗುವ ಮೂಲಕ ಎಲೆಗಳು ಗುಣಗಳನ್ನು ಕಳೆದುಕೊಳ್ಳಬಹುದು). ಈ ಲೇಪವನ್ನು ಮುಖ, ಕುತ್ತಿಗೆ ಮತ್ತು ಕೈಗಳ ಮೇಲೆ ಹಚ್ಚಿ ಸುಮಾರು ಇಪ್ಪತ್ತು ನಿಮಿಷ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಸೋಪು ಬಳಸದಿರಿ. ಸಂಜೆ ಈ ಲೇಪನವನ್ನು ಹಚ್ಚಿ ಮರುದಿನ ಸ್ನಾನ ಮಾಡಿದರೆ ಉತ್ತಮ ಪರಿಣಾಮ ದೊರಕುತ್ತದೆ.

ತುಟಿಗಳನ್ನು ಮೃದುವಾಗಿಸುತ್ತದೆ

ತುಟಿಗಳನ್ನು ಮೃದುವಾಗಿಸುತ್ತದೆ

ನುಗ್ಗೆಯಲ್ಲಿರುವ ತೇವಕಾರಕ ಗುಣ ತುಟಿಗಳ ಚರ್ಮದಲ್ಲಿ ಆರ್ದ್ರತೆಯನ್ನು ಒದಗಿಸುವ ಮೂಲಕ ಹೆಚ್ಚಿನ ಆರೈಕೆ ಒದಗಿಸುತ್ತದೆ. ನುಗ್ಗೆಯಲ್ಲಿರುವ ಈ ಗುಣವೇ ತುಟಿಗಳನ್ನು ಆರೋಗ್ಯಕರ ಹಾಗೂ ಮೃದುವಾಗಿರಿಸಲು ನೆರವಾಗುತ್ತದೆ. ಇದಕ್ಕಾಗಿ ನುಗ್ಗೆಬೀಜದ ಎಣ್ಣೆ ಅಥವಾ ಎಲೆಗಳನ್ನು ನುಣ್ಣಗೆ ಅರೆದು ತುಟಿಗಳಿಗೆ ಪ್ರತಿರಾತ್ರಿ ಮಲಗುವ ಮುನ್ನ ತೆಳುವಾಗಿ ಲೇಪಿಸಿ ಮಲಗಬೇಕು. ಇದರಿಂದ ತುಟಿಗಳಿಗೆ ಅಗತ್ಯವಾದ ಆರ್ದ್ರತೆ ದೊರಕುತ್ತದೆ ಹಾಗೂ ತುಟಿಗಳು ಸಹಜಸೌಂದರ್ಯದಿಂದ ಕಂಗೊಳಿಸುತ್ತವೆ.

ತ್ವಚೆಗೆ ದೊಡ್ಡ ರಂಧ್ರಗಳನ್ನು ಚಿಕ್ಕದಾಗಿಸುತ್ತದೆ

ತ್ವಚೆಗೆ ದೊಡ್ಡ ರಂಧ್ರಗಳನ್ನು ಚಿಕ್ಕದಾಗಿಸುತ್ತದೆ

ನುಗ್ಗೆಯಲ್ಲಿರುವ ಪೋಷಕಾಂಶಗಳು ಚರ್ಮದಲ್ಲಿ ಕೊಲ್ಯಾಜೆನ್ ಪ್ರಮಾಣವನ್ನು ಹೆಚ್ಚಿಸಿ ಚರ್ಮ ಹೆಚ್ಚು ತುಂಬಿಕೊಳ್ಳುವಂತೆ ಮಾಡುವ ಮೂಲಕ ಚರ್ಮದ ಸೆಳೆತ ಹೆಚ್ಚಿಸುತ್ತದೆ ಹಾಗೂ ತ್ವಚೆ ಸಹಜವರ್ಣ ಪಡೆಯಲು ನೆರವಾಗುತ್ತದೆ. ಎಲ್ಲಾ ಗುಣಗಳು ಒಗ್ಗೂಡುವ ಮೂಲಕ ತ್ವಚೆಯಲ್ಲಿರುವ ದೊಡ್ಡ ರಂಧ್ರಗಳು ಚಿಕ್ಕದಾಗುತ್ತವೆ ಹಾಗೂ ಉತ್ತಮ ಕಾಂತಿ ಪಡೆಯುತ್ತದೆ.

ನುಗ್ಗೆಯ ಮುಖಲೇಪವನ್ನು ಮನೆಯಲ್ಲಿಯೇ ತಯಾರಿಸುವುದು ಹೇಗೆ?

ನುಗ್ಗೆಯ ಮುಖಲೇಪವನ್ನು ಮನೆಯಲ್ಲಿಯೇ ತಯಾರಿಸುವುದು ಹೇಗೆ?

ಅಗತ್ಯವಿರುವ ಸಾಮಾಗ್ರಿಗಳು:

• ½ ದೊಡ್ಡಚಮಚ ನುಗ್ಗೆಪುಡಿ

• 1 ½ ದೊಡ್ಡಚಮಚ ಅಪ್ಪಟ ಜೇನು

• 1 ½ ದೊಡ್ಡಚಮಚ ಗುಲಾಬಿ ನೀರು

• ಕೆಲವು ಹನಿ ಲಿಂಬೆರಸ

ತಯಾರಿಕಾ ವಿಧಾನ

ತಯಾರಿಕಾ ವಿಧಾನ

1. ಒಂದು ಸ್ವಚ್ಛವಾದ ಬೋಗುಣಿಯಲ್ಲಿ ನುಗ್ಗೆಪುಡಿ, ಜೇನು, ಗುಲಾಬಿ ನೀರು ಮತ್ತು ಲಿಂಬೆರಸವನ್ನು ಹಾಕಿ ಮಿಶ್ರಣ ಮಾಡಿ.

2. ಎಲ್ಲಾ ಸಾಮಾಗ್ರಿಗಳನ್ನು ಚೆನ್ನಾಗಿ ಮಿಶ್ರಣ ಮಾಡಿ ಲೇಪನ ತಯಾರಿಸಿ.

3. ಅಗತ್ಯಬಿದ್ದರೆ ಕೆಲವು ತೊಟ್ಟು ನೀರನ್ನು ಬೆರೆಸಿ ಲೇಪನವನ್ನು ಅಗತ್ಯಕ್ಕೆ ತಕ್ಕಷ್ಟು ತೆಳುವಾಗಿಸಬಹುದು.

4. ಈ ಲೇಪನವನ್ನು ಈಗತಾನೇ ತೊಳೆದು ಒರೆಸಿಕೊಂಡ ಮುಖ, ಕುತ್ತಿಗೆ ಮತ್ತು ಕೈಗಳಿಗೆ ತೆಳುವಾಗಿ ಹಚ್ಚಿಕೊಳ್ಳಿ.

5. ಈ ಲೇಪನವನ್ನು ಸುಮಾರು ಇಪ್ಪತ್ತು ನಿಮಿಷ ಒಣಗಲು ಬಿಡಿ, ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.

6. ಬಳಿಕ ದಪ್ಪ ಟವೆಲ್ಲಿನಿಂದ ಒತ್ತಿ ಒರೆಸಿಕೊಳ್ಳಿ ಹಾಗೂ ನಂತರ ನಿಮ್ಮ ಆಯ್ಕೆಯ ತೇವಕಾರಕ ಅಥವಾ ಮಾಯಿಶ್ಚರೈಸರ್ ಹಚ್ಚಿಕೊಂಡು ನಯವಾಗಿ ಮಸಾಜ್ ಮಾಡಿ.

ನುಗ್ಗೆ ಸೊಪ್ಪಿನ ರೆಸಿಪಿ: ಸರ್ವ ರೋಗಕ್ಕೂ ರಾಮಬಾಣ

English summary

Beauty Benefits Of Drumsticks face mask

Drumsticks or moringa has always been one of the favourite vegetables of Indians. It is widely used in Indian dishes like sambhar, pickles, etc., due to its health benefits. Almost every part of the drumstick tree can be consumed like the fruit, leaves, flowers, etc., due to its nutrient value. But did you ever know that drumsticks can help in your beauty regime? Yes, you read that right. Drumstick is becoming a common ingredient in cosmetic products these days because of its beauty enhancing properties.
X
Desktop Bottom Promotion