For Quick Alerts
ALLOW NOTIFICATIONS  
For Daily Alerts

ಮೈಕಾಂತಿ ಹೆಚ್ಚಿಸುವ ಅಡುಗೆ ಸೋಡಾ-ಜೇನುತುಪ್ಪ ಬೆರೆಸಿ ಮಾಡಿದ ಪೇಸ್ಟ್

|

ನಿಮಗೆ ಯಾವುದಾದರೂ ಕಾರ್ಯಕ್ರಮದಲ್ಲಿ ಭಾಗಿಯಾಗಲು ಇದೆಯಾ? ಇದಕ್ಕಾಗಿ ಮುಖದಲ್ಲಿ ತಕ್ಷಣ ಕಾಂತಿ ಪಡೆಯಬೇಕೇ? ಇಂತವರು ಈ ಲೇಖನವನ್ನು ಓದಲೇಬೇಕು. ಆದರೆ ನೀವು ಹೆಚ್ಚು ಹಣ ವ್ಯಯ ಮಾಡದೆ, ಮನೆಯಲ್ಲೇ ಸಿಗುವಂತಹ ಕೆಲವೊಂದು ಸಾಮಗ್ರಿಗಳನ್ನು ಬಳಸಿಕೊಂಡು ಫೇಸ್ ಮಾಸ್ಕ್ ತಯಾರಿಸಬಹುದು.

ಅಡುಗೆ ಸೋಡಾ, ಜೇನುತುಪ್ಪ ಮತ್ತು ಆಲಿವ್ ತೈಲ ಬಳಸಿಕೊಂಡು ಫೇಸ್ ಮಾಸ್ಕ್ ನ್ನು ತಯಾರಿಸಬಹುದು. ಈ ಸಾಮಗ್ರಿಗಳು ಪ್ರತಿಯೊಂದು ಮನೆಯಲ್ಲೂ ಲಭ್ಯವಿದೆ ಮತ್ತು ಇದು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುವುದು. ಯಾವುದೇ ಅಡ್ಡಪರಿಣಾಮಗಳು ಇಲ್ಲದೆ ಕಾಂತಿಯುತ ಹಾಗೂ ಆರೋಗ್ಯಕರ ತ್ವಚೆಯು ನಿಮ್ಮದಾಗುವುದು.

 ಬೇಕಾಗುವ ಸಾಮಗ್ರಿಗಳು

ಬೇಕಾಗುವ ಸಾಮಗ್ರಿಗಳು

1 ಚಮಚ ಆಲಿವ್ ತೈಲ

11/2 ಚಮಚ ಜೇನುತುಪ್ಪ

1 ಚಮಚ ಅಡುಗೆ ಸೋಡಾ

ತಯಾರಿಸುವ ವಿಧಾನ

ತಯಾರಿಸುವ ವಿಧಾನ

1.ಒಂದು ಪಿಂಗಾಣಿಗೆ ಆಲಿವ್ ತೈಲ ಮತ್ತು ಜೇನುತುಪ್ಪ ಹಾಕಿ.

2.ಎರಡನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.

3.ಮುಂದಿನ ಹಂತವೆಂದರೆ ಈ ಮಿಶ್ರಣಕ್ಕೆ ಅಡುಗೆ ಸೋಡಾವನ್ನು ಹಾಕುವುದು ಮತ್ತು ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡುವುದು.

4.ಈ ಪೇಸ್ಟ್ ತುಂಬಾ ತೆಳುವಾಗಿದೆ ಎಂದು ನಿಮಗೆ ಅನಿಸಿದರೆ ಆಗ ನೀವು ಇದಕ್ಕೆ ಮತ್ತಷ್ಟು ಅಡುಗೆ ಸೋಡಾ ಹಾಕಬಹುದು.

5.ಗಡ್ಡೆಗಳು ಹಾಗದಂತೆ ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿ.

ಬಳಸುವ ವಿಧಾನ

ಬಳಸುವ ವಿಧಾನ

1. ಮೊದಲಿಗೆ ಮುಖ ಹಾಗೂ ಕುತ್ತಿಗೆಯನ್ನು ಸರಿಯಾಗಿ ತೊಳೆಯಿರಿ.

2. ಮಾಸ್ಕ್ ನ್ನು ಈಗ ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಲ್ಳಿ.

3. ವೃತ್ತಾಕಾರದಲ್ಲಿ 2-3 ನಿಮಿಷ ಕಾಲ ಹಾಗೆ ಮಸಾಜ್ ಮಾಡಿ.

4. ಮಸಾಜ್ ಮಾಡಿಕೊಂಡ ಬಳಿಕ 20 ನಿಮಿಷ ಕಾಲ ಹಾಗೆ ಬಿಡಿ.

5. ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.

6. ಈ ಮಾಸ್ಕ್ ಬಳಸಿದ ಬಳಿಕ ಮುಖವು ಸ್ವಲ್ಪ ಹೆಚ್ಚು ಎಣ್ಣೆಯಂಶವಿರುವಂತೆ ಕಾಣಿಸಬಹುದು. ಆದರೆ ಇದರ ಬಳಿಕ ನೀವು ಟೋನರ್ ಹಚ್ಚಿಕೊಲ್ಳಬಹದು. ನೀವು ಈಗ ನಯ ಹಾಗೂ ಕಾಂತಿಯುತ ತ್ವಚೆ ಪಡೆಯುವಿರಿ.

ಅಡುಗೆ ಸೋಡಾದ ಲಾಭಗಳು

ಅಡುಗೆ ಸೋಡಾದ ಲಾಭಗಳು

ಮುಖದ ಸೌಂದರ್ಯದಲ್ಲಿ ಅಡುಗೆ ಸೋಡಾ ಅಥವಾ ಬೇಕಿಂಗ್ ಸೋಡಾ ಅಸಾಧಾರಣವಾಗಿ ಕಾರ್ಯ ನಿರ್ವಹಿಸುತ್ತಿದ್ದು ನಿಮ್ಮ ಕೂದಲು ಮತ್ತು ತಲೆಬುರುಡೆಯ ಸ್ವಾಸ್ಥ್ಯಕ್ಕೂ ಇದು ಹೇಳಿಮಾಡಿಸಿರುವಂಥದ್ದಾಗಿದೆ. ಇನ್ನು ಸಂಪೂರ್ಣ ದೇಹ ಚಿಕಿತ್ಸೆಯನ್ನು ಇದನ್ನು ಬಳಸಿ ಮಾಡಬಹುದಾಗಿದ್ದು, ಅದಕ್ಕೂ ಮುನ್ನ ಪ್ಯಾಚ್ ಟೆಸ್ಟ್ ಅನ್ನು ನೀವು ಮಾಡಿಸಿಕೊಳ್ಳಬೇಕಾಗುತ್ತದೆ. ನಿಮ್ಮ ಕೂದಲು ಮತ್ತು ತ್ವಚೆಗೆ ಇದು ಯಾವುದೇ ರೀತಿಯ ಸಮಸ್ಯೆಯನ್ನುಂಟು ಮಾಡುವುದಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಂಡು ನಂತರವೇ ಮುಂದುವರಿಯಿರಿ. ಅದರಲ್ಲೂ ನಿಮ್ಮದು ಸೂಕ್ಷ್ಮ ತ್ವಚೆಯಾಗಿದ್ದರೆ ಕಾಳಜಿ ಬೇಕೇ ಬೇಕು. ಇನ್ನು ಅಡುಗೆ ಸೋಡಾವು ನೈಸರ್ಗಿಕವಾಗಿ ಕಿತ್ತೊಗೆಯುವ ಕೆಲಸ ಮಾಡಿ ಸತ್ತ ಚರ್ಮದ ಕೋಶಗಳನ್ನು ತೆಗೆಯುವುದು. ಇದರಿಂದ ತ್ವಚೆಯಲ್ಲಿ ಕಾಂತಿ ಹಾಗೂ ಹೊಳಪು ಬರುವುದು. ಉರಿಯೂತ ಶಮನಕಾರಿ ಮತ್ತು ನಂಜುನಿರೋಧಕ ಗುಣವಿರುವಂತಹ ಅಡುಗೆ ಸೋಡಾವು ಚರ್ಮದಲ್ಲಿ ರಕ್ತ ಸಂಚಾರವನ್ನು ಹೆಚ್ಚಿಸಿ, ಯಾವುದೇ ರೀತಿಯ ಸೋಂಕು ಅಥವಾ ಚರ್ಮ ಕೆಂಪಾಗುವುದನ್ನು ತಡೆಯುವುದು. ರಕ್ತ ಸಂಚಾರವು ಉತ್ತಮವಾದಾಗ ಇದು ತುಂಬಾ ಆರೋಗ್ಯಕರ ಹಾಗೂ ಹೊಳೆಯುವುದು. ಇದರಿಂದ ಮೊಡವೆ ಹಾಗೂ ಕಲೆಗಳು ಮಾಯವಾಗುವುದು.

ಆಲಿವ್ ತೈಲದ ಲಾಭಗಳು

ಆಲಿವ್ ತೈಲದ ಲಾಭಗಳು

ಅನಾದಿ ಕಾಲದ ಈಜಿಪ್ಟ್ ಮಂದಿ ಈ ಆಲಿವ್ ಎಣ್ಣೆಯನ್ನು ಕಂಡು ಹಿಡಿದರು ಮತ್ತು ಇದರ ಪೋಷಕಾಂಶ ಭರಿತ ಗುಣಗಳಿಂದಾಗಿ ಇದರ ಬಳಕೆ ಮಾಡಲು ಪ್ರಾರಂಭಿಸಿದರು. ನಿಮಗೆಲ್ಲ ಕ್ಲಿಯೋಪಾತ್ರ ಗೊತ್ತಿರಬಹುದು. ಆಕೆ ಸೌಂದರ್ಯದ ಖನಿ ಎಂದೇ ಪ್ರಸಿದ್ಧಳಾಗಿರುವವರು. ಆಕೆ ತನ್ನ ಸೌಂದರ್ಯ ಹೆಚ್ಚಿಸಿಕೊಳ್ಳಲು, ಚರ್ಮದ ಕಾಂತಿ ವೃದ್ಧಿಸಿಕೊಳ್ಳಲು ಈ ಎಣ್ಣೆಯನ್ನು ಬಳಕೆ ಮಾಡುತ್ತಿದ್ದಳು ಎಂದು ಹೇಳಲಾಗುತ್ತದೆ. ಆಲಿವ್ ಎಣ್ಣೆಯು ಚರ್ಮದ ಕಂಡೀಷನ್ ನ್ನು ಅಭಿವೃದ್ಧಿ ಪಡಿಸುತ್ತದೆ ಮತ್ತು ಶುಷ್ಕ ತ್ವಚೆ, ನೆರಿಗೆಗಳು, ಚರ್ಮದಲ್ಲಿ ಉರಿಯೂತ ಮತ್ತು ಕೆಂಪಗಾಗುವುದು, ಬ್ಲಾಕ್ ಹೆಡ್ಸ್ ಗಳ ನಿವಾರಣೆ, ವೈಟ್ ಹೆಡ್ಸ್ ಗಳ ನಿವಾರಣೆಗೆ, ಸತ್ತ ಜೀವಕೋಶಗಳನ್ನು ತೆಗೆದು ಹಾರುವುದು. ಇನ್ನು ಆಲಿವ್ ತೈಲವು ಚರ್ಮದ ಆಳಕ್ಕೆ ತೆರಳು ನಯ ಹಾಗೂ ಸುಂದರ ಚರ್ಮವನ್ನು ನೀಡುವುದು. ಆಲಿವ್ ತೈಲದಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ನ ಗುಣಗಳು ಫ್ರೀ ರ್ಯಾಡಿಕಲ್ ನಿಂದ ಆಗಿರುವ ಹಾನಿಯನ್ನು ಸರಿಪಡಿಸಿ ಚರ್ಮದ ಕೋಶಗಳನ್ನು ಸರಿಪಡಿಸುವುದು. ಇದು ನಿಸ್ತೇಜ ಮತ್ತು ಹಾನಿಗೀಡಾಗಿರುವ ಚರ್ಮಕ್ಕೆ ಚಿಕಿತ್ಸೆ ನೀಡಿ ಚರ್ಮದ ಕಾಂತಿ ವೃದ್ಧಿಸಲು ನೆರವಾಗುವುದು.

ಜೇನುತುಪ್ಪದ ಲಾಭಗಳು

ಜೇನುತುಪ್ಪದ ಲಾಭಗಳು

ನೈಸರ್ಗಿಕದತ್ತವಾಗಿ ಸಿಗುವಂತಹ ಪ್ರತಿಯೊಂದು ನಮ್ಮ ಆರೋಗ್ಯಕ್ಕೆ ತುಂಬಾ ಲಾಭದಾಯಕವಾಗಿರುತ್ತದೆ. ಅದರಲ್ಲೂ ಜೇನುತುಪ್ಪದಿಂದ ನಮ್ಮ ಆರೋಗ್ಯಕ್ಕೆ ಹಲವಾರು ರೀತಿಯ ಲಾಭಗಳು ಇವೆ. ಜೇನುತುಪ್ಪ ಕೇವಲ ಆರೋಗ್ಯಕ್ಕೆ ಮಾತ್ರವಲ್ಲದೆ ಸೌಂದರ್ಯವನ್ನು ಅದರಿಂದ ವೃದ್ಧಿಸಬಹುದು. ಜೇನುತುಪ್ಪದಿಂದ ಕಾಂತಿಯುತ ಮೈಕಾಂತಿಯನ್ನು ಪಡೆಯ ಬಹುದು. ಅದರಲ್ಲೂ ಮಾರುಕಟ್ಟೆಯಲ್ಲಿ ಸಿಗುವಂತಹ ಕ್ರೀಮ್‌ಗಳನ್ನು ಬಳಸಿ ಮುಖವನ್ನು ಕೆಡಿಸುವ ಬದಲು ನೈಸರ್ಗಿಕದತ್ತವಾದ ಜೇನುತುಪ್ಪವನ್ನು ಬಳಸಿಕೊಂಡರೆ ಅದರಿಂದ ಹೆಚ್ಚಿನ ಲಾಭ ಪಡೆಯಬಹುದು. ಜೇನುತುಪ್ಪವು ನೈಸರ್ಗಿಕವಾಗಿ ಬ್ಲೀಚಿಂಗ್ ಗುಣಗಳನ್ನು ಹೊಂದಿರುವ ಕಾರಣದಿಂದ ಇದು ಚರ್ಮದ ಬಣ್ಣವನ್ನು ಸುಧಾರಿಸುವುದು. ಇದರೊಂದಿಗೆ ಇದು ಚರ್ಮಕ್ಕೆ ತೇವಾಂಶ ನೀಡುವುದು. ಜೇನುತುಪ್ಪ ಬಳಸುವ ಕಾರಣದಿಂದ ಚರ್ಮವು ಮೃಧು, ನಯ ಮತ್ತು ಸುಂದರವಾಗುವುದು. ಇನ್ನು ಚರ್ಮದಲ್ಲಿನ ರಂಧ್ರಗಳು ಮುಚ್ಚಿಕೊಂಡು ಸಮಸ್ಯೆ ಎದುರಿಸುತ್ತಾ ಇದ್ದರೆ ನಿಮಗೆ ಇದರಿಂದ ಹಲವಾರು ರೀತಿಯ ಲಾಭಗಳು ಸಿಗಲಿದೆ. ಜೇನುತುಪ್ಪವು ನೈಸರ್ಗಿಕವಾಗಿ ಚರ್ಮದ ರಂಧ್ರಗಳಲ್ಲಿ ತುಂಬಿಕೊಂಡಿರುವ ಕಲ್ಮಶ ಹಾಗೂ ಧೂಳನ್ನು ತೆಗೆದುಹಾಕುವುದು. ಜೇನುತುಪ್ಪದಲ್ಲಿ ಇರುವಂತಹ ಬ್ಯಾಕ್ಟೀರಿಯಾ ವಿರೋಧಿ ಹಾಗೂ ಉರಿಯೂತ ಶಮನಕಾರಿ ಗುಣವು ಚರ್ಮವನ್ನು ಆರೋಗ್ಯವಾಗಿಡುವುದು ಮಾತ್ರವಲ್ಲದೆ ಸೋಂಕು ತಗುಲದಂತೆ ತಡೆಯುವುದು. ಈ ಮನೆಮದ್ದ ನಿಮ್ಮ ಸೌಂದರ್ಯ ವೃದ್ಧಿಸಲು ನೆರವಾಗಿದ್ದರೆ ನಮಗೆ ಕಮೆಂಟ್ ಬಾಕ್ಸ್ ನಲ್ಲಿ ಬರೆದು ಕಳುಹಿಸಿ. ಫೇಸ್ ಬುಕ್, ಟ್ವಿಟ್ಟರ್ ಮತ್ತು ಇನ್ ಸ್ಟಾ ಗ್ರಾಮ್ ನಲ್ಲಿಯೂ ನೀವು ಬ್ಯೂಟಿ ಟಿಪ್ಸ್ ಗಳನ್ನು ಪಡೆಯಬಹುದು.

English summary

Baking Soda And Honey Mask For Instant Glow

Do you have an event to attend? Are you looking for ways to get an instant glow on your skin? Then probably this article will help you with that. You can achieve that instant glow through this DIY face mask made with baking soda, honey and olive oil. These ingredients can be found in every household and can work effectively in making your skin look healthy and fresh. Here is the secret recipe!
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more