For Quick Alerts
ALLOW NOTIFICATIONS  
For Daily Alerts

ಹಣೆಯ ಮೇಲಿನ ಮೊಡವೆಗಳಿಗೆ ಸರಳ ಆಯುರ್ವೇದ ಮನೆಮದ್ದುಗಳು

|

ಹರೆಯಕ್ಕೆ ಕಾಲಿಟ್ಟು ಹಲವಾರು ಕನಸು ಕಾಣುವ ಸಮಯದಲ್ಲಿ ಆಗಾಗ ಕಿರಿಕಿರಿಯನ್ನು ಉಂಟುಮಾಡುತ್ತಾ, ಬೇಸರವನ್ನು ಉಂಟುಮಾಡುವುದು ಮುಖದ ಮೇಲೆ ಏಳುವ ಮೊಡವೆಗಳು. ನಿತ್ಯದ ಕೆಲಸ ನಿರ್ವಹಿಸಲು ಸಹ ಅಡ್ಡಗಾಲಿಡುವಂತೆ ಮಾಡುವ ಈ ಮೊಡವೆಗಳಿಂದ ಉಂಟಾಗುವ ತೊಂದರೆ ಒಂದೆರಡಲ್ಲ. ಒಮ್ಮೆ ಮೊಡವೆಗಳು ಎದ್ದವು ಎಂದರೆ ಮುಖದಲ್ಲಿ ಜಿಡ್ಡುಗಳು, ಕಲೆ, ತ್ವಚೆಯಲ್ಲಿ ಕುಳಿ ಹಾಗೂ ಧೂಳಿನ ಕಣಗಳು ಕುಳಿತುಕೊಳ್ಳುತ್ತವೆ.

ಹರೆಯದ ಹುಮ್ಮಸ್ಸಿನಲ್ಲಿ ಇನ್ನೇನು ಎಲ್ಲರೆದುರು ಆಕರ್ಷಕ ವ್ಯಕ್ತಿಯಾಗಿ ಮಿಂಚುತ್ತೇನೆ ಎನ್ನುವ ಆಸೆಯಲ್ಲಿರುವಾಗಲೇ ಆಸೆಗಳಿಗೆ ತಣ್ಣೀರೆರೆಚುವುದು ಮೊಡವೆಗಳು. ಇವು ಹುಟ್ಟಿಕೊಳ್ಳಲು ಅನೇಕ ಕಾರಣಗಳಿವೆ. ಅವುಗಳಲ್ಲಿ ಹಾರ್ಮೋನ್‍ಗಳ ಸಮಸ್ಯೆಯೂ ಒಂದು.

ನೋವಿನಿಂದ ಕೂಡಿರುವಂತಹ ಈ ಮೊಡವೆಗಳು ಮೂಗು, ಗಲ್ಲ, ಹಣೆ ಹಾಗೂ ದೇಹದ ಇತರ ಭಾಗಗಳಲ್ಲೂ ಕಾಣಿಸಿಕೊಳ್ಳುವವು. ಇವುಗಳ ಅತಿರೇಖದ ಹುಟ್ಟು ಗಲ್ಲ ಮತ್ತು ಹಣೆಯ ಭಾಗ ಎನ್ನಬಹುದು. ಚರ್ಮವು ಅಧಿಕ ಪ್ರಮಾಣದ ಮೆದೋಗ್ರಂಥಿಗಳನ್ನು ಉತ್ಪಾದಿಸಿದರೆ ಹಣೆಯ ಭಾಗದಲ್ಲಿ ಅಧಿಕ ಮೊಡವೆಗಳು ಕಾಣಿಸಿಕೊಳ್ಳುತ್ತವೆ ಎಂದು ಹೇಳಲಾಗುವುದು.

ಸಾಮಾನ್ಯವಾಗಿ ದೀರ್ಘ ಸಮಯಗಳ ಕಾಲ ಮುಖದ ಮೇಲೆ ಗೋಚರಿಸುವ ಈ ಮೊಡವೆಗಳಿಗೆ ಅನೇಕ ಬಗೆಯ ಚಿಕಿತ್ಸಾ ಕ್ರಮಗಳಿವೆ. ಅವುಗಳಲ್ಲಿ ಯಾವುದೇ ಅಡ್ಡ ಪರಿಣಾಮ ಬೀರದೆ ಉತ್ತಮ ಆರೈಕೆ ನೀಡುವುದು ಎಂದರೆ ಆಯುರ್ವೇದದ ಚಿಕಿತ್ಸಾ ವಿಧಾನ. ನೀವು ನಿಮ್ಮ ಹಣೆಯ ಮೇಲೆ ಅಥವಾ ಮುಖದಲ್ಲಿ ಮೊಡವೆಗಳನ್ನು ಹೊಂದಿದ್ದೀರಿ, ಅವುಗಳ ನಿವಾರಣೆಗೆ ವಿಶೇಷ ಪರಿಹಾರವನ್ನು ಹುಡುಕುತ್ತಿದ್ದೀರಿ ಎಂದಾದರೆ ಈ ಮುಂದೆ ನೀಡಿರುವ ವಿವರಣೆಯನ್ನು ಪರಿಶೀಲಿಸಿ...

 ಗುಲಾಬಿ ನೀರು ಮತ್ತು ಬೇವಿನ ಎಲೆ

ಗುಲಾಬಿ ನೀರು ಮತ್ತು ಬೇವಿನ ಎಲೆ

ಸಾಮಾಗ್ರಿಗಳು:

- ಒಂದು ಹಿಡಿ ಬೇವಿನ ಎಲೆ

- 2 ಟೀಚಮಚ ಗುಲಾಬಿ ನೀರು.

ವಿಧಾನ:

1. ಬೇವಿನ ಎಲೆಯನ್ನು ನೀರಿನಲ್ಲಿ ಹಾಕಿ 3-4 ನಿಮಿಷಗಳ ಕಾಲ ಕುದಿಸಿ.

2. ಚೆನ್ನಾಗಿ ಕುದಿ ಬಂದ ನಂತರ ನುಣ್ಣನೆಯ ಪೇಸ್ಟ್ ನಂತೆ ರುಬ್ಬಿಕೊಳ್ಳಿ.

3. ಬೇವಿನ ಎಲೆಯ ಪೇಸ್ಟ್ ಗೆ ಗುಲಾಬಿ ನೀರನ್ನು ಸೇರಿಸಿ, ಮಿಶ್ರಗೊಳಿಸಿ.

4. ಮಿಶ್ರಣವನ್ನು ಹಣೆ ಹಾಗೂ ಪೀಡಿತ ಪ್ರದೇಶಗಳಿಗೆ ಅನ್ವಯಿಸಿ. ಸ್ವಲ್ಪ ಸಮಯದ ಬಳಿಕ ಮೃದು ನೀರಿನಿಂದ ಸ್ವಚ್ಛಗೊಳಿಸಿ.

5. ಉತ್ತಮ ಫಲಿತಾಂಶಕ್ಕೆ ವಾರದಲ್ಲಿ 3-4 ಬಾರಿ ಈ ಕ್ರಮವನ್ನು ಅನ್ವಯಿಸಿ.

ಕೊತ್ತಂಬರಿ ಸೊಪ್ಪು ಮತ್ತು ದಾಲ್ಚಿನ್ನಿ

ಕೊತ್ತಂಬರಿ ಸೊಪ್ಪು ಮತ್ತು ದಾಲ್ಚಿನ್ನಿ

ಸಾಮಾಗ್ರಿಗಳು

- ಒಂದು ಹಿಡಿ ಕೊತ್ತಂಬರಿ ಸೊಪ್ಪು

- 1 ಟೀಚಮಚ ಚಾಲ್ಚಿನ್ನಿ ಪುಡಿ.

ವಿಧಾನ:

1. ಕೊತ್ತಂಬರಿ ಸೊಪ್ಪನ್ನು ತೊಳೆದು, ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ.

2. ನುಣ್ಣಗಾದ ಪೇಸ್ಟ್‍ಗೆ ದಾಲ್ಚಿನ್ನಿ ಪುಡಿಯನ್ನು ಸೇರಿಸಿ, ಮಿಶ್ರಗೊಳಿಸಿ.

3. ಮಿಶ್ರಣವನ್ನು ಹಣೆ ಹಾಗೂ ಪೀಡಿತ ಪ್ರದೇಶಗಳಿಗೆ ಅನ್ವಯಿಸಿ.

4. 15-20 ನಿಮಿಷಗಳ ಬಳಿಕ ಮೃದು ನೀರಿನಿಂದ ಸ್ವಚ್ಛಗೊಳಿಸಿ.

5. ಮೊಡವೆಗಳು ಬಹುಬೇಗ ನಿವಾರಣೆಯಾಗಲು ಈ ಕ್ರಮವನ್ನು ವಾರದಲ್ಲಿ 2 ಬಾರಿ ಪುನರಾವರ್ತಿಸಿ.

 ನಿಂಬೆಹಣ್ಣು

ನಿಂಬೆಹಣ್ಣು

ಸಾಮಾಗ್ರಿಗಳು:

- 2 ನಿಂಬೆ ಹಣ್ಣು

- ನೀರು.

ವಿಧಾನ:

1. ನಿಂಬೆ ಹಣ್ಣನ್ನು ಕತ್ತರಿಸಿ ರಸವನ್ನು ಬೇರ್ಪಡಿಸಿಕೊಳ್ಳಿ.

2. ನಿಂಬೆ ರಸಕ್ಕೆ 2 ಟೀಚಮಚ ನೀರನ್ನು ಸೇರಿಸಿ.

3. ಹತ್ತಿ ಉಂಡೆಯನ್ನು ಈ ಮಿಶ್ರಣದಲ್ಲಿ ಅದ್ದಿ, ಬಳಿಕ ಪೀಡಿತ ಪ್ರದೇಶಗಳಿಗೆ ಅನ್ವಯಿಸಿ.

4. ಮಲಗುವ ಮುನ್ನ ಇದನ್ನು ಅನ್ವಯಿಸಿಕೊಳ್ಳಿ.

5. ಮುಂಜಾನೆ ತಣ್ಣನೆಯ ನೀರಿನಲ್ಲಿ ಸ್ವಚ್ಛಗೊಳಿಸಿ.

6. ಮೊಡವೆ ನಿವಾರಣೆ ಹೊಂದುವವ ತನಕ ನಿತ್ಯವೂ ಈ ಕ್ರಮವನ್ನು ಅನುಸರಿಸಬಹುದು.

ಗಂಧದ ಪುಡಿ ಮತ್ತು ಪಪ್ಪಾಯ

ಗಂಧದ ಪುಡಿ ಮತ್ತು ಪಪ್ಪಾಯ

ಸಾಮಾಗ್ರಿಗಳು:

- 1 ಟೀ ಚಮಚ ಶ್ರೀಗಂಧದ ಪುಡಿ.

- 1/2 ಪಪ್ಪಾಯ.

ವಿಧಾನ:

1. ಪಪ್ಪಾಯ ಹಣ್ಣನ್ನು ಕತ್ತರಿಸಿ ನುಣ್ಣಗೆ ರುಬ್ಬಿಕೊಳ್ಳಿ.

2. ಹಣ್ಣಿನ ಪೇಸ್ಟ್‍ಗೆ ಗಂಧದ ಪುಡಿಯನ್ನು ಸೇರಿಸಿ, ಮಿಶ್ರಗೊಳಿಸಿ.

3. ಮಿಶ್ರಣವನ್ನು ಹಣೆ ಹಾಗೂ ಪೀಡಿತ ಪ್ರದೇಶಗಳಿಗೆ ಅನ್ವಯಿಸಿ.

4. 15-20 ನಿಮಿಷಗಳ ಬಳಿಕ ಮೃದು ನೀರಿನಿಂದ ಸ್ವಚ್ಛಗೊಳಿಸಿ.

5. ಮೊಡವೆಗಳು ಬಹುಬೇಗ ನಿವಾರಣೆಯಾಗಲು ಈ ಕ್ರಮವನ್ನು ವಾರದಲ್ಲಿ 3-4 ಬಾರಿ ಪುನರಾವರ್ತಿಸಿ.

ನೆಲ್ಲಿಕಾಯಿ ಮತ್ತು ಫೀನ್ನೆಲ್ ಬೀಜಗಳು

ನೆಲ್ಲಿಕಾಯಿ ಮತ್ತು ಫೀನ್ನೆಲ್ ಬೀಜಗಳು

ಸಾಮಾಗ್ರಿಗಳು:

- 3-4 ಒಣಗಿರುವ ನೆಲ್ಲಿಕಾಯಿ.

- 1 ಟೀಚಮಚ ಫೀನ್ನೆಲ್ ಬೀಜಗಳು.

ವಿಧಾನ:

1. ಒಣಗಿರುವ ನೆಲ್ಲಿಕಾಯನ್ನು ತುಂಡರಿಸಿಕೊಂಡು ರುಬ್ಬಿಕೊಳ್ಳಿ.

2. ಫೀನ್ನೆಲ್ ಬೀಜಗಳನ್ನು ಸೇರಿಸಿ ರುಬ್ಬಿಕೊಳ್ಳಿ, ಎರಡು ಮಿಶ್ರಣವನ್ನು ಚೆನ್ನಾಗಿ ಮಿಶ್ರಗೊಳಿಸಿ.

3. ಮಿಶ್ರಣವನ್ನು ಹಣೆ ಹಾಗೂ ಪೀಡಿತ ಪ್ರದೇಶಗಳಿಗೆ ಅನ್ವಯಿಸಿ.

4. 15-20 ನಿಮಿಷಗಳ ಬಳಿಕ ಮೃದು ನೀರಿನಿಂದ ಸ್ವಚ್ಛಗೊಳಿಸಿ.

5. ಉತ್ತಮ ಫಲಿತಾಂಶಕ್ಕೆ ದಿನದಲ್ಲಿ ಮುಂಜಾನೆ ಮತ್ತು ರಾತ್ರಿಯ ವೇಳೆಯಲ್ಲಿ ಮುಖಕ್ಕೆ ಅನ್ವಯಿಸಿ.

 ಮಾವಿನ ಎಲೆ ಮತ್ತು ಪೇರಲೆ ಎಲೆ

ಮಾವಿನ ಎಲೆ ಮತ್ತು ಪೇರಲೆ ಎಲೆ

ಸಾಮಾಗ್ರಿಗಳು:

- 3-4 ಮಾವಿನ ಎಲೆ

- 3-4 ಪೇರಳೆ ಎಲೆ

ವಿಧಾನ:

1. ಮಾವಿನ ಎಲೆ ಮತ್ತು ಪೇರಳೆ ಎಲೆಯನ್ನು ಒಟ್ಟಿಗೆ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.

2. ನಂತರ ಅಗತ್ಯಕ್ಕೆ ತಕ್ಕಂತೆ ನೀರನ್ನು ಸೇರಿಸಿ, ಪೇಸ್ಟ್‍ನ ಮಾದರಿಗೆ ತನ್ನಿ.

3. ಮಿಶ್ರಣವನ್ನು ಹಣೆ ಮತ್ತು ಪೀಡಿತ ಪ್ರದೇಶಕ್ಕೆ ಅನ್ವಯಿಸಿ, 30 ನಿಮಿಷಗಳ ಕಾಲ ಆರಲು ಬಿಡಿ.

4. ಬಳಿಕ ಮೃದು ನೀರಿನಲ್ಲಿ ಸ್ವಚ್ಛಗೊಳಿಸಿ.

5. ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ 2-3 ಬಾರಿ ಪುನರಾವರ್ತಿಸಿ

ಟೊಮೇಟೊ ಜ್ಯೂಸ್

ಟೊಮೇಟೊ ಜ್ಯೂಸ್

ಒಂದು ಚಿಕ್ಕ ಬೋಗುಣಿಯಲ್ಲಿ ಎರಡು ದೊಡ್ಡ ಚಮಚ ಟೊಮೇಟೊ ಜ್ಯೂಸ್ (ಸಿಪ್ಪೆ ಮತ್ತು ಬೀಜ ತೆಗೆದ ತಿರುಳನ್ನು ಮಿಕ್ಸಿಯಲ್ಲಿ ಕಡೆಯುವ ಮೂಲಕ ಪಡೆದ ರಸ), ಒಂದು ದೊಡ್ಡಚಮಚ ಜೇನು ಮತ್ತು ಅರ್ಧ ಚಿಕ್ಕಚಮಚ ಅಡುಗೆಸೋಡಾ ಬೆರೆಸಿ ಮಿಶ್ರಣ ಮಾಡಿ. ಇನ್ನು ಈ ಮಿಶ್ರಣವನ್ನು ಈಗ ತಾನೇ ತಣ್ಣೀರಿನಿಂದ ತೊಳೆದುಕೊಂಡ ಮೊಡವೆಯ ಮೇಲೆ ನೇರವಾಗಿ, ದಪ್ಪನಾಗಿ ಹಚ್ಚಿ. ಹತ್ತು ನಿಮಿಷ ಬಿಟ್ಟು ಈ ಮಿಶ್ರಣವನ್ನು ತಣ್ಣಗಿನ ಹಾಲು ಉಪಯೋಗಿಸಿ ತೂಳೆದುಕೊಳ್ಳಿ. ದಿನಕ್ಕೆರಡು ಬಾರಿಯಂತೆ ಒಂದು ವಾರ ಈ ವಿಧಾನವನ್ನು ಅನುಸರಿಸಿದರೆ ಮೊಡವೆಗಳು ಪೂರ್ಣವಾಗಿ ಮಾಯವಾಗುತ್ತವೆ.

ಚಕ್ಕೆ-ಜೇನು ತುಪ್ಪದ ಪೇಸ್ಟ್

ಚಕ್ಕೆ-ಜೇನು ತುಪ್ಪದ ಪೇಸ್ಟ್

ಒಂದು ಅಥವಾ ಎರಡು ಮಧ್ಯಮ ಗಾತ್ರದ ಚಕ್ಕೆ ಕಡ್ಡಿಗಳನ್ನು ತೆಗೆದುಕೊಂಡು, ನುಣ್ಣಗೆ ಪುಡಿ ಮಾಡಿಕೊಳ್ಳಿ. ಒಂದು ವೇಳೆ ನಿಮ್ಮ ಮನೆಯಲ್ಲಿ ಸಿದ್ಧಗೊಳಿಸಿದ ಚಕ್ಕೆ ಪುಡಿ ಇದ್ದಲ್ಲಿ, ಅದನ್ನು ಬಳಸಿಕೊಳ್ಳಬಹುದು. 1/4 ಸ್ಪೂನ್ ಚಕ್ಕೆ ಪುಡಿಯನ್ನು ತೆಗೆದುಕೊಂಡು, ಅದಕ್ಕೆ ಒಂದೆರಡು ಹನಿ ಜೇನು ತುಪ್ಪವನ್ನು ಬೆರೆಸಿಕೊಂಡು ಪೇಸ್ಟ್ ಮಾಡಿಕೊಳ್ಳಿ. (3 ಜೇನು ತುಪ್ಪ : 1 ಚಕ್ಕೆ ಪುಡಿ ಅನುಪಾತವನ್ನು ಬಳಸಿ). ಇದೀಗ ಈ ಪೇಸ್ಟ್ ಅನ್ನು ನಿಮ್ಮ ಮೊಡವೆ ಮೇಲೆ ಲೇಪಿಸಿ ಮತ್ತು ಅದನ್ನು ಒಣಗಲು ಬಿಡಿ. ರಾತ್ರಿ ಮಲಗುವ ಮುನ್ನ ಈ ಪೇಸ್ಟ್ ಅನ್ನು ಮೊಡವೆಗಳು ಇರುವ ಭಾಗಕ್ಕೆ ಲೇಪಿಸಿ, ಬೆಳಗ್ಗೆ ಎದ್ದ ಮೇಲೆ ಅದನ್ನು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಈ ಪರಿಹಾರವನ್ನು ನೀವು ವಾರಕ್ಕೆ ಎರಡು - ಮೂರು ಬಾರಿ ಬಳಸಿ. ಮೊಡವೆಗಳಿಂದ ಮುಕ್ತರಾಗಿ.

English summary

Ayurvedic Remedies To Treat Pimples On Forehead

Forehead pimples can appear if your skin produces excess sebum. It can also appear if you have dandruff on your scalp. So, what is the best way to cure these zits? It's nothing else but ayurveda. Ayurvedic remedies are known for their slow but permanent healing processes. Here are some ayurvedic remedies that you can easily make at home to treat pimples on your foreheads. Let's find out how to make and use them for attaining a pimple-free skin.
X
Desktop Bottom Promotion