ಮೊಡವೆ ಕಲೆ ನಿವಾರಣೆಗೆ, ಸರಳ ಟಿಪ್ಸ್-ತ್ವರಿತ ಪರಿಹಾರ

Posted By: Divya Pandith
Subscribe to Boldsky

ಪ್ರತಿಯೊಬ್ಬರು ತಮ್ಮ ತ್ವಚೆಯು ಆರೋಗ್ಯ ಪೂರ್ಣವಾಗಿ ನಳನಳಿಸುತ್ತಿರಬೇಕು ಹಾಗೂ ಇತರರನ್ನು ಆಕರ್ಷಿಸುವಂತಿರಬೇಕು ಎಂದು ಬಯಸುವುದು ಸಹಜ. ಆದರೆ ಹವಾಮಾನದ ವ್ಯತ್ಯಾಸ, ಆನುವಂಶಿಕ ಪ್ರಭಾವ ಹಾಗೂ ಮಾಲಿನ್ಯದ ಕಾರಣಗಳಿಂದಾಗಿ ವಿವಿಧ ಬಗೆಯ ಚರ್ಮದ ಸಮಸ್ಯೆಗಳು ಕಾಡುವುದನ್ನು ನಾವು ಕಾಣಬಹುದು. ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಕೇವಲ ಗುಣಮುಖವಾಗಿಸುವುದು ಮಾತ್ರವಲ್ಲ. ಅದು ಪುನಃ ಮರುಕಳಿಸದಂತಹ ಆರೈಕೆಗೆ ಮೊರೆಹೋಗಬೇಕು. ಆಗಲೇ ಚರ್ಮವು ಸದಾ ಆರೋಗ್ಯದಿಂದ ಕೂಡಿರುತ್ತದೆ. ಜೊತೆಗೆ ಆಕರ್ಷಕ ಕಾಂತಿಯನ್ನು ಪಡೆದುಕೊಳ್ಳುತ್ತದೆ.

ಮುಖದ ಕಲೆ ಹೋಗಲಾಡಿಸಬೇಕೆ? ಈ ರೀತಿ ಮಾಡಿ

ಚರ್ಮಕ್ಕೆ ಒಂದು ಉತ್ತಮ ಆರೈಕೆಯನ್ನು ನೀಡಬೇಕು ಎನ್ನುವ ಆಸೆಯಿದ್ದರೆ ಮೊದಲು ನೈಸರ್ಗಿಕ ಉತ್ಪನ್ನಗಳ ಬಳಕೆಯತ್ತ ಮುಖ ಮಾಡಬೇಕು. ಆಯುರ್ವೇದದ ಪರಿಹಾರಗಳು ಶೇ.100ರಷ್ಟು ಸುರಕ್ಷಿತ ಮತ್ತು ಉತ್ತಮ ಚಿಕಿತ್ಸೆಯನ್ನು ನೀಡುತ್ತವೆ. ನಿತ್ಯವೂ ನಮ್ಮ ತ್ವಚೆಯ ಮೇಲೆ ಉಂಟಾಗುವ ಕೆಲವು ದುಷ್ಪರಿಣಾಮಗಳನ್ನು ಹೇಗೆ ತಡೆಯಬಹುದು? ಅದಕ್ಕಾಗಿ ನೈಸರ್ಗಿಕವಾದ ಆರೈಕೆ ವಿಧಾನಗಳು ಏನು? ಎನ್ನುವುದನ್ನು ಬೋಲ್ಡ್ ಸ್ಕೈ ನಿಮಗಾಗಿ ಪರಿಚಯಿಸುತ್ತಿದೆ. ನಿಮಗೂ ಈ ವಿಚಾರದ ಕುರಿತು ಇನ್ನಷ್ಟು ತಿಳಿದುಕೊಳ್ಳಬೇಕು ಎನ್ನುವ ಕುತೂಹಲವಿದ್ದರೆ ಈ ಮುಂದೆ ವಿವರಿಸಿರುವ ವಿಚಾರಗಳನ್ನು ಪರಿಶೀಲಿಸಿ....

ಶ್ರೀಗಂಧದ ಪುಡಿ ಮತ್ತು ಬಾದಾಮಿ ಎಣ್ಣೆ

ಶ್ರೀಗಂಧದ ಪುಡಿ ಮತ್ತು ಬಾದಾಮಿ ಎಣ್ಣೆ

*ಒಂದು ಟೀ ಚಮಚ ಶ್ರೀಗಂಧದ ಪುಡಿಗೆ 1 ಟೀ ಚಮಚ ಬಾದಾಮಿ ಎಣ್ಣೆಯನ್ನು ಸೇರಿಸಿ, ಮಿಶ್ರಗೊಳಿಸಿ.

*ಮಿಶ್ರಣವನ್ನು ಮುಖ ಮತ್ತು ಕತ್ತಿನ ಭಾಗದವರೆಗೆ ಅನ್ವಯಿಸಿ.

*10 ನಿಮಿಷಗಳ ಕಾಲ ಆರಲು ಬಿಡಿ. ಬಳಿಕ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

*ವಾರಕ್ಕೆ 3-4 ಬಾರಿ ಈ ಕ್ರಮವನ್ನು ಅನುಸರಿಸಿದರೆ ಚರ್ಮದ ಆರೋಗ್ಯವನ್ನು ಕಾಪಾಡಬಹುದು ಮತ್ತು ಮೊಡವೆಯಿಂದ ಮುಕ್ತಿ ಹೊಂದಬಹುದು.

 ಅರಿಶಿನ ಮತ್ತು ಹಾಲು

ಅರಿಶಿನ ಮತ್ತು ಹಾಲು

*1 ಟೀ ಚಮಚ ಹಾಲಿಗೆ 1/2 ಟೀ ಚಮಚ ಅರಿಶಿನವನ್ನು ಸೇರಿಸಿ, ಮಿಶ್ರಗೊಳಿಸಿ.

ಮಿಶ್ರಣವನ್ನು ತೆಳುವಾದ ಲೇಪನದೊಂದಿಗೆ ಮುಖ ಮತ್ತು ಕತ್ತಿನ ಭಾಗದವರೆಗೆ ಅನ್ವಯಿಸಿ.

*5-10 ನಿಮಿಷಗಳ ಕಾಲ ಆರಲು ಬಿಡಿ. ಬಳಿಕ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

*ಗಮನಾರ್ಹ ಫಲಿತಾಂಶ ಪಡೆಯಲು ವಾರದಲ್ಲಿ 2 ಬಾರಿ ಅನ್ವಯಿಸಿ.

ಕಡ್ಲೆ ಹಿಟ್ಟು ಮತ್ತು ಜೇನುತುಪ್ಪ

ಕಡ್ಲೆ ಹಿಟ್ಟು ಮತ್ತು ಜೇನುತುಪ್ಪ

*ಒಂದು ಬೌಲ್‍ನಲ್ಲಿ 1/2 ಟೀ ಚಮಚ ಕಡ್ಲೆ ಹಿಟ್ಟು ಮತ್ತು 1 ಟೇಬಲ್ ಚಮಚ ಜೇನುತುಪ್ಪ ಸೇರಿಸಿ, ಮಿಶ್ರಗೊಳಿಸಿ.

*ಮಿಶ್ರಣವನ್ನು ಪೀಡಿತ ಪ್ರದೇಶ ಮತ್ತು ಮುಖದ ಭಾಗಕ್ಕೆ ಅನ್ವಯಿಸಿ.

*5-10 ನಿಮಿಷಗಳ ಕಾಲ ಆರಲು ಬಿಡಿ. ಬಳಿಕ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

*ಗಮನಾರ್ಹ ಫಲಿತಾಂಶ ಪಡೆಯಲು ವಾರದಲ್ಲಿ 2-3 ಬಾರಿ ಅನ್ವಯಿಸಿ.

ಚಂಡುಹೂವು/ಮಾರಿಗೋಲ್ಡ್ ಮತ್ತು ಗುಲಾಬಿ ನೀರು

ಚಂಡುಹೂವು/ಮಾರಿಗೋಲ್ಡ್ ಮತ್ತು ಗುಲಾಬಿ ನೀರು

*2-3 ಚಂಡುಹೂವಿನ ದಳವನ್ನು ಒಣಗಿಸಿ ಪುಡಿಮಾಡಿಕೊಂಡಿರಬೇಕು. ಇದರ ಪುಡಿಗೆ 2 ಟೇಬಲ್ ಚಮಚ ಗುಲಾಬಿ ನೀರನ್ನು ಬೆರೆಸಿ ಮಿಶ್ರಗೊಳಿಸಿ.

*ಮಿಶ್ರಣವನ್ನು ಪೀಡಿತ ಪ್ರದೇಶ ಮತ್ತು ಮುಖದ ಭಾಗಕ್ಕೆ ಅನ್ವಯಿಸಿ.

*10 ನಿಮಿಷಗಳ ಕಾಲ ಆರಲು ಬಿಡಿ. ಬಳಿಕ ಮೃದುವಾದ ನೀರಿನಲ್ಲಿ ತೊಳೆಯಿರಿ.

*ವಾರದಲ್ಲಿ 2 ಬಾರಿ ಅನ್ವಯಿಸುವುದರಿಂದ ಮೊಡವೆಯಿಂದ ಮುಕ್ತಿ ಹಾಗೂ ಆರೋಗ್ಯಕರ ತ್ವಚೆಯನ್ನು ಪಡೆಯಬಹುದು.

ಬೇವಿನ ಎಲೆ ಮತ್ತು ಆಲೋವೆರಾ

ಬೇವಿನ ಎಲೆ ಮತ್ತು ಆಲೋವೆರಾ

*ಒಂದು ಮುಷ್ಟಿ ಬೇವಿನ ಎಲೆಯನ್ನು ಮಿಕ್ಸಿ/ಬ್ಲೆಂಡರ್‍ಅಲ್ಲಿ ರುಬ್ಬಿಕೊಳ್ಳಿ. 1/2 ಟೀ ಚಮಚ ಬೇವಿನ ಪುಡಿಗೆ 2 ಟೀ ಚಮಚ ಅಲೋವೆರಾ ಜೆಲ್ ಸೇರಿಸಿ, ಮಿಶ್ರಗೊಳಿಸಿ.

*ಮಿಶ್ರಣವನ್ನು ಪೀಡಿತ ಪ್ರದೇಶ ಮತ್ತು ಮುಖದ ಭಾಗಕ್ಕೆ ಅನ್ವಯಿಸಿ.

*5 ನಿಮಿಷಗಳ ಕಾಲ ಆರಲು ಬಿಡಿ. ಬಳಿಕ ಮೃದುವಾದ ನೀರಿನಲ್ಲಿ ತೊಳೆಯಿರಿ.

*ವಾರದಲ್ಲಿ 3-4 ಬಾರಿ ಅನ್ವಯಿಸುವುದರಿಂದ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಬಹುದು.

ಮುಲ್ತಾನಿ ಮಿಟ್ಟಿ/ಮಣ್ಣು ಮತ್ತು ತೆಂಗಿನ ಎಣ್ಣೆ

ಮುಲ್ತಾನಿ ಮಿಟ್ಟಿ/ಮಣ್ಣು ಮತ್ತು ತೆಂಗಿನ ಎಣ್ಣೆ

*ಒಂದು ಬೌಲ್‍ನಲ್ಲಿ 1 ಟೀ ಚಮಚ ಮುಲ್ತಾನಿ ಮಣ್ಣು ಮತ್ತು 1 ಟೇಬಲ್ ಚಮಚ ತೆಂಗಿನ ಎಣ್ಣೆಯನ್ನು ಸೇರಿಸಿ, ಮಿಶ್ರಗೊಳಿಸಿ.

*ಮಿಶ್ರಣವನ್ನು ಪೀಡಿತ ಪ್ರದೇಶ ಮತ್ತು ಮುಖದ ಭಾಗಕ್ಕೆ ಅನ್ವಯಿಸಿ.

*10 ನಿಮಿಷಗಳ ಕಾಲ ಆರಲು ಬಿಡಿ. ಬಳಿಕ ಮೃದುವಾದ ನೀರಿನಲ್ಲಿ ತೊಳೆಯಿರಿ.

*ವಾರದಲ್ಲಿ 2-3 ಬಾರಿ ಅನ್ವಯಿಸುವುದರಿಂದ ಮೊಡವೆಗಳನ್ನು ನಿವಾರಿಸಬಹುದು.

ಆಲಿವ್ ಎಣ್ಣೆ ಮತ್ತು ನಿಂಬೆ ರಸ

ಆಲಿವ್ ಎಣ್ಣೆ ಮತ್ತು ನಿಂಬೆ ರಸ

*1 ಟೀ ಚಮಚ ಆಲಿವ್ ಎಣ್ಣೆಗೆ 1 ಟೀ ಚಮಚ ನಿಂಬೆ ರಸವನ್ನು ಸೇರಿಸಿ, ಮಿಶ್ರಗೊಳಿಸಿ.

*ಮಿಶ್ರಣವನ್ನು ಪೀಡಿತ ಪ್ರದೇಶ ಮತ್ತು ಮುಖದ ಭಾಗಕ್ಕೆ ಅನ್ವಯಿಸಿ.

*10 ನಿಮಿಷಗಳ ಕಾಲ ಆರಲು ಬಿಡಿ. ಬಳಿಕ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

*ವಾರದಲ್ಲಿ 3-4 ಬಾರಿ ಅನ್ವಯಿಸುವುದರಿಂದ ಮೊಡವೆಯಿಂದ ಮುಕ್ತಿ ಕಾಣಬಹುದು.

ಅಲೋವೇರ ರಸ

ಅಲೋವೇರ ರಸ

*ಮೊಡವೆಗಳ ಕಲೆಯನ್ನು ಗುಣಪಡಿಸುವುದಕ್ಕೆ ಅಲೋಳೆಸರ ರಸವು ಸಹಾಯಕವಾಗಿದೆ ಮತ್ತು ಕಲೆಗಳು ಮತ್ತೆ ಕಾಣಿಸಿಕೊಂಡಾಗ ಕೂಡ ಇದು ಸರಿಪಡಿಸಲು ಬಹಳ ಸಹಕಾರಿಯಾಗಿರುತ್ತದೆ.

*ಈ ರಸವನ್ನು ಕ್ರಮಬದ್ಧವಾಗಿ ಉಪಯೋಗಿಸಿದರೆ ಮೊಡವೆಯ ಕೆಟ್ಟದಾದ ಕಲೆಗಳನ್ನು ಅಳಿಸಿಹಾಕುತ್ತದೆ.

ಜೇನುತುಪ್ಪ

ಜೇನುತುಪ್ಪ

*ಜೇನು ತುಪ್ಪವನ್ನು ಕಲೆಗಳಮೇಲೆ ಹಚ್ಚಿ.

*ಸ್ವಲ್ಪ ಸಮಯ ಕಳೆದ ಮೇಲೆ ಅದನ್ನು ತೊಳೆದು ಹಾಕಿಬಿಡಿ. ಜೇನಿನಲ್ಲಿ ಅನ್ಟಿಬ್ಯಾಕ್ಟೀರಿಯಾ ಗುಣಗಳಿರುವುದರಿಂದ ಕಲೆಗಳು ಕ್ರಮೇಣ ಮಾಯವಾಗಬಹುದು.

ಅಡುಗೆ ಸೋಡಾ

ಅಡುಗೆ ಸೋಡಾ

ಬೇಕಾಗುವ ಪದಾರ್ಥಗಳು:

*ಅಡುಗೆ ಸೋಡಾ

*ನೀರು

ಉಪಯೋಗಿಸುವ ವಿಧಾನ

*ಅಡಿಗೆ ಸೋಡಾ ಮತ್ತು ಸ್ವಲ್ಪ ನೀರನ್ನು ಒಂದು ಸಣ್ಣ ಬಟ್ಟಲಿನಲ್ಲಿ ಪೇಸ್ಟ್ಆಗುವ ಹಾಗೆ ಮಿಶ್ರ ಮಾಡಿ.

*ಈ ಪೇಸ್ಟ್ ಅನ್ನು ಮುಖಕ್ಕೆ ಲೇಪಿಸಿ.

*20 ನಿಮಿಷಗಳ ಬಳಿಕ ಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆದುಕೊಳ್ಳಿ.

ಕಿತ್ತಳೆ ಹಣ್ಣಿನ ಫೇಸ್ ಪ್ಯಾಕ್

ಕಿತ್ತಳೆ ಹಣ್ಣಿನ ಫೇಸ್ ಪ್ಯಾಕ್

ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಬಿಸಿಲಿನಲ್ಲಿ ಒಣಗಿಸಿ ಹುಡಿ ಮಾಡಿಕೊಂಡು ಅದನ್ನು ಹಾಲಿಗೆ ಹಾಕಿ ಫೇಸ್ ಪ್ಯಾಕ್ ಮಾಡಿಕೊಳ್ಳಬೇಕು.

ರೆಟಿನಾಲ್ ಅಧಿಕವಾಗಿರುವಂತಹ ಕಿತ್ತಳೆ ಹಣ್ಣು ಈಗಿರುವ ಚರ್ಮವನ್ನು ಒಣಗಿಸುವುದು ಮತ್ತು ಕಲೆ ಹಾಗೂ ಮೊಡವೆಗಳು ಇಲ್ಲದೆ ಇರುವಂತಹ ಹೊಸ ಚರ್ಮ ಬರುವಂತೆ ಮಾಡುವುದು. ಒಳ್ಳೆಯ ಚರ್ಮವನ್ನು ಪಡೆಯಲು ಇದು ನಿಮಗೆ ನೆರವಾಗುವುದು.

English summary

Ayurvedic Face Masks To Get Rid Of Pimple Scars

Though a pimple may last for a few days, the scar it leaves behind may last for weeks. These scars are stubborn and not easy to get rid of. However, with the help of Ayurvedic remedies, it is quite possible to fade away these scars. Unlike the store-bought spot correctors, Ayurvedic remedies are 100% natural and safe-to-use. To simplify things for you, today at Boldsky, we're letting you know about certain Ayurvedic face masks that can make your pimple scars a thing of the past.