For Quick Alerts
ALLOW NOTIFICATIONS  
For Daily Alerts

ಸಿಂಪಲ್ ಬ್ಯೂಟಿ ಟಿಪ್ಸ್: ಎಣ್ಣೆಯುಕ್ತ ತ್ವಚೆಗೆ ಸೇಬಿನ ಸ್ಕ್ರಬ್

|

ಸೌಂದರ್ಯವನ್ನು ಕಾಪಾಡುವಲ್ಲಿ ಎಣ್ಣೆಯುಕ್ತ ಚರ್ಮವಿರುವವರಿಗೆ ದೊಡ್ಡ ಸವಾಲಿನ ಕೆಲಸವಾಗಿರುವುದು. ಯಾಕೆಂದರೆ ಇಂತಹ ಚರ್ಮವಿರುವಂತಹವರಿಗೆ ಯಾವಾಗಲೂ ತಮ್ಮ ಬ್ಯಾಗ್ ನಲ್ಲಿ ಟಿಶ್ಯೂ ಪೇಪರ್ ಇಟ್ಟುಕೊಂಡು ಹೋಗಬೇಕಾಗುತ್ತದೆ. ಪದೇ ಪದೇ ಮುಖವನ್ನು ಒರೆಸಿಕೊಳ್ಳುತ್ತಿರುವುದು ಅವರಿಗೆ ಯಾವಾಗಲೂ ಮುಜುಗರ ಕೂಡ ಉಂಟು ಮಾಡಬಹುದು.

ಎಷ್ಟೇ ಮೇಕಪ್ ಮಾಡಿಕೊಂಡರೂ ಎಣ್ಣೆಯುಕ್ತ ಚರ್ಮವಿದ್ದರೆ ಆಗ ಮೇಕಪ್ ಕೂಡ ಕೆಲಸ ಮಾಡುವುದಿಲ್ಲ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಂಡರೆ ದೊಡ್ಡ ಕಿರಿಕಿರಿಯು ತಪ್ಪುವುದು. ಎಣ್ಣೆಯುಕ್ತ ಚರ್ಮದಿಂದ ಪರಿಹಾರ ಕಂಡುಕೊಳ್ಳಲು ಮತ್ತು ಅದು ಮತ್ತೆ ಉಸಿರಾಡಲು ಏನು ಮಾಡಬೇಕು? ಇದಕ್ಕೆ ಉತ್ತರ ತುಂಬಾ ಸರಳವಾಗಿದೆ. ಅದೇನೆಂದರೆ ಮನೆಮದ್ದುಗಳು.

ನೈಸರ್ಗಿಕದತ್ತವಾಗಿರುವಂತಹ ಮನೆಮದ್ದುಗಳನ್ನು ಬಳಸುವಾಗ ಮುಖವಾಗಿ ಹಣ್ಣುಗಳನ್ನು ಮೊದಲು ಆಯ್ಕೆ ಮಾಡಿಕೊಳ್ಳಬೇಕು. ಅದರಲ್ಲೂ ಸೇಬಿನಿಂದ ಎಣ್ಣೆಯುಕ್ತ ಚರ್ಮಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಹೇಗೆ ಎಂದು ನೀವು ಈ ಲೇಖನದಲ್ಲಿ ತಿಳಿಯಬಹುದು. ಯಾಕೆಂದರೆ ಸೇಬಿನಲ್ಲಿ ಆ್ಯಂಟಿಆಕ್ಸಿಡೆಂಟ್ ಗಳು, ಪೋಷಕಾಂಶಗಳು ಮತ್ತು ಖನಿಜಾಂಶಗಳು ಇವೆ. ಚರ್ಮಕ್ಕೆ ಇವುಗಳು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುವುದು.

Apple Scrub For Oily Skin

ಎಣ್ಣೆಯುಕ್ತ ಚರ್ಮಕ್ಕೆ ನೀವು ಸೇಬಿನ ಸ್ಕ್ರಬ್ ನ್ನು ಮನೆಯಲ್ಲೇ ಮಾಡಿಕೊಳ್ಳಬಹುದು. ಸೇಬಿನಿಂದ ಚರ್ಮಕ್ಕೆ ಆಗುವ ಕೆಲವೊಂದು ಅದ್ಭುತ ಲಾಭಗಳು ಮತ್ತು ಸೇಬು ಹಾಗೂ ಸಕ್ಕರೆ ಬಳಸಿಕೊಂಡು ಮನೆಯಲ್ಲೇ ಸ್ಕ್ರಬ್ ಮಾಡಿಕೊಳ್ಳುವುದು ಹೇಗೆ ಎಂದು ತಿಳಿಯಿರಿ.

Most Read: ಮುಖದ ಕಾಂತಿ ಹೆಚ್ಚಿಸಲು ಗೋಧಿ ಹಿಟ್ಟಿನ ಫೇಸ್ ಪ್ಯಾಕ್

ತ್ವಚೆಗೆ ಸೇಬಿನ ಲಾಭಗಳು

ವಿಟಮಿನ್ 'ಸಿ' ಯಿಂದ ಸಮೃದ್ಧವಾಗಿರುವಂತಹ ಸೇಬು ತ್ವಚೆಗೆ ಹಲವಾರು ರೀತಿಯ ಲಾಭಗಳನ್ನು ಉಂಟು ಮಾಡುವುದು. ಇದರಲ್ಲಿ ಕೆಲವನ್ನು ಇಲ್ಲಿ ನೀಡಲಾಗಿದೆ.
•ತ್ವಚೆಯನ್ನು ಬಿಳಿಯಾಗಿಸುವುದು.
•ಚರ್ಮಕ್ಕೆ ತೇವಾಂಶ, ಪೋಷಣೆ ಮತ್ತು ಮೊಶ್ಚಿರೈಸ್ ನೀಡುವುದು.
•ಇದರಲ್ಲಿ ವಯಸ್ಸಾಗುವ ವೇಳೆ ಕಂಡುಬರುವ ಲಕ್ಷಣಗಳನ್ನು ವಿಳಂಬಗೊಳಿಸುವಂತಹ ಗುಣಗಳು ಇವೆ.
•ಇದು ಚರ್ಮವನ್ನು ಹಾನಿಕಾರಕ ಯುವಿ ಕಿರಣಗಳಿಂದ ರಕ್ಷಿಸುವುದು.
•ಇದು ಚರ್ಮಕ್ಕೆ ಬಣ್ಣ ನೀಡುವ ಗುಣ ಹೊಂದಿದೆ.
•ಮೊಡವೆ, ಬೊಕ್ಕೆಗಳು, ಕಲೆಗಳು ಮತ್ತು ಕಪ್ಪು ಕಲೆಗಳನ್ನು ನಿವಾರಿಸುವಂತಹ ಗುಣಗಳು ಸೇಬಿನಲ್ಲಿದೆ.
•ಉಬ್ಬಿರುವ ಕಣ್ಣುಗಳ ನಿವಾರಣೆಗೆ ಸೇಬು ಅದ್ಭುತವಾಗಿ ನೆರವಾಗುವುದು.

ಎಣ್ಣೆಯುಕ್ತ ಚರ್ಮಕ್ಕೆ ಸೇಬಿನ ಸ್ಕ್ರಬ್ ತಯಾರಿ ಹೇಗೆ?

ಬೇಕಾಗುವ ಸಾಮಗ್ರಿಗಳು
•½ ಸೇಬು
•ಒಂದು ಚಮಚ ಓಟ್ ಮೀಲ್-ಹದವಾಗಿ ಹುಡಿ ಮಾಡಿಕೊಂಡಿಕೊಡಿರುವುದು.
•1 ಚಮಚ ಕಾರ್ನ್ ಮೀಲ್-ಹದವಾಗಿ ಹುಡಿ ಮಾಡಿರುವುದು.
•ಒಂದು ಚಮಚ ಜೇನುತುಪ್ಪ
•2-3 ವಾಲ್ ನಟ್(ಆಕ್ರೊಡ)
•2 ಚಮಚ ಸಕ್ಕರೆ

Most Read: ಮುಖದ ಕಾಂತಿ ಹೆಚ್ಚಿಸಲು ಹಾಗೂ ಇತರ ಸೌಂದರ್ಯ ಸಮಸ್ಯೆಗಳಿಗೆ 'ತುಳಸಿ ಎಲೆಗಳ' ಫೇಸ್ ಪ್ಯಾಕ್

ತಯಾರಿಸುವ ವಿಧಾನ
•ಅರ್ಧ ಸೇಬನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿ ಮತ್ತು ಇದನ್ನು ಸ್ವಲ್ಪ ಮಟ್ಟಿಗೆ ರುಬ್ಬಿಕೊಳ್ಳಿ.
•ಒಂದು ಸಣ್ಣ ಪಿಂಗಾಣಿ ತೆಗೆದುಕೊಂಡು ಅದಕ್ಕೆ ಓಟ್ ಮೀಲ್ ಹುಡಿ ಹಾಕಿಕೊಳ್ಳಿ.
•ಇದಕ್ಕೆ ಈಗ ನೀವು ಕಾರ್ನ್ ಮೀಲ್ ಹುಡಿ ಹಾಕಿ ಮತ್ತು ಸರಿಯಾಗಿ ಮಿಶ್ರಣ ಮಾಡಿ.
•ಇದರ ಬಳಿಕ ಜೇನುತುಪ್ಪ ಹಾಕಿ ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.
•ವಾಲ್ ನಟ್ ನ್ನು ರುಬ್ಬಿಕೊಂಡು ಹುಡಿ ಮಾಡಿ ಮತ್ತು ಈ ಮಿಶ್ರಣಕ್ಕೆ ಸ್ವಲ್ಪ ಸಕ್ಕರೆ ಹಾಕಿಕೊಳ್ಳಿ.
•ಈಗ ಸೇಬಿನ ತಿರುಳು ಹಾಕಿಕೊಂಡು ಅದನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.
•ನೀರಿನಲ್ಲಿ ಮೊದಲು ಮುಖ ತೊಳೆದುಕೊಂಡು ಬಳಿಕ ಒರೆಸಿಕೊಂಡು ಸೇಬಿನ ಸ್ಕ್ರಬ್ ಮಾಡಿಕೊಳ್ಳಿ.
•ಬೇಕಾದಷ್ಟು ಪ್ರಮಾಣದಲ್ಲಿ ಸೇಬಿನ ಸ್ಕ್ರಬ್ ನ್ನು ತೆಗೆದುಕೊಂಡು ಮುಖಕ್ಕೆ ಹಚ್ಚಿ, ಕೈಬೆರಳುಗಳಿಂದ ಸರಿಯಾಗಿ ಮಸಾಜ್ ಮಾಡಿಕೊಳ್ಳಿ. ವೃತ್ತಾಕಾರದಲ್ಲಿ ಹತ್ತು ನಿಮಿಷ ಕಾಲ ಮಸಾಜ್ ಮಾಡಿಕೊಳ್ಳಿ. ಇದರಿಂದ ರಕ್ತ ಸಂಚಾರವು ಸರಿಯಾಗಿ ಆಗುವುದು.
•ಐದು ನಿಮಿಷ ಕಾಲ ಮುಖದ ಮೇಲೆ ಹಾಗೆ ಇರಲಿ. ಬಳಿಕ ಬಿಸಿ ನೀರಿನಿಂದ ತೊಳೆಯಿರಿ.
•ಎಣ್ಣೆಯಂಶವಿರುವ ತ್ವಚೆಯಿಂದ ಶಾಶ್ವತವಾಗಿ ಮುಕ್ತಿ ಪಡೆಯಲು ವಾರದಲ್ಲಿ ಮೂರು ಸಲ ಇದನ್ನು ಬಳಸಿ.

ಇದು ಹೇಗೆ ಕೆಲಸ ಮಾಡುವುದು?
•ಸೇಬಿನಲ್ಲಿ ಕೆಲವೊಂದು ಪ್ರಮುಖ ಪೋಷಕಾಂಶಗಳು ಹಾಗೂ ವಿಟಮಿನ್ ಗಳು ಇವೆ. ಇದು ಸತ್ತ ಚರ್ಮವನ್ನು ಕಿತ್ತುಹಾಕುವುದು ಮತ್ತು ಯಾವುದೇ ರೀತಿಯ ಕೊಳೆ, ಧೂಳು ಮತ್ತು ಸತ್ತ ಚರ್ಮದ ಕೋಶ ತೆಗೆದುಹಾಕುವುದು. ಇದು ಚರ್ಮ ಎಣ್ಣೆಯಿಂದ ಕೂಡಿರಲು ಪ್ರಮುಖ ಕಾರಣವಾಗಿದೆ.
•ಓಟ್ ಮೀಲ್ ಮತ್ತು ಕಾರ್ನ್ ಮೀಲ್ ನಲ್ಲಿ ಕಿತ್ತೊಗೆಯುವ ಗುಣಗಳು ಇವೆ ಮತ್ತು ಇದು ಚರ್ಮದ ಸತ್ತ ಕೋಶಗಳನ್ನು ತೆಗೆಯುವುದು ಮತ್ತು ಚರ್ಮದ ಕಲ್ಮಷಗಳನ್ನು ಶಾಶ್ವತವಾಗಿ ತೆಗೆದುಹಾಕುವುದು.
•ಸಕ್ಕರೆ ಹರಳುಗಳಲ್ಲಿ ಚರ್ಮವನ್ನು ತುಂಬಾ ಮೃದು, ನಯ ಮತ್ತು ಸುಂದರವಾಗಿಸುವುದು. ಇದು ಚರ್ಮದಲ್ಲಿರುವ ಅತಿಯಾದ ಎಣ್ಣೆಯಂಶವನ್ನು ತೆಗೆಯುವುದು ಮತ್ತು ಮೊಡವೆ ಹಾಗೂ ಬೊಕ್ಕೆಗಳ ನಿವಾರಣೆ ಮಾಡುವುದು.
•ಜೇನುತುಪ್ಪವು ಚರ್ಮಕ್ಕೆ ಮಾಯಿಶ್ಚರೈಸ್ ನೀಡಿ ತೇವಾಂಶದಿಂದ ಇಡುವುದು. ಇದನ್ನು ನಿಯಮಿತವಾಗಿ ಬಳಸಿಕೊಂಡರೆ ಆಗ ಚರ್ಮವು ತುಂಬಾ ಕಾಂತಿಯುತವಾಗಿಸುವುದು.
•ವಾಲ್ ನಟ್ ನಲ್ಲಿ ಚರ್ಮವನ್ನು ಮೃದುಗೊಳಿಸುವ ಅದ್ಭುತ ಗುಣಗಳು ಇವೆ. ಚರ್ಮವನ್ನು ತುಂಬಾ ಮೃಧು ಹಾಗೂ ಸುಂದರವಾಗಿಡುವುದು.

English summary

Apple Scrub For Oily Skin

Apples are rich in antioxidants, nutrients, and minerals that are beneficial for your skin. You can now make your very own apple scrub at home for oily skin. They also brighten your complexion and possess anti-ageing benefits. Besides, apples ork the best for skin conditions like acne, pimples, blemishes, and dark spots or dark patches.
X
Desktop Bottom Promotion