For Quick Alerts
ALLOW NOTIFICATIONS  
For Daily Alerts

ಬ್ಯೂಟಿ ಟಿಪ್ಸ್: 'ಹಲಸಿನ ಹಣ್ಣಿನ' ಫೇಸ್ ಪ್ಯಾಕ್

By Deepu
|

ಸೌಂದರ್ಯ ಪ್ರತಿ ಮಹಿಳೆಯ ಕನಸು. ಆಕೆ ಸೌಂದರ್ಯವತಿಯಾಗಿರಬೇಕು ಅಂದ್ರೆ ಕೇವಲ ಆಕೆ ತೆಗೆದುಕೊಳ್ಳುವ ಆಹಾರ ಕ್ರಮದಿಂದ ಮಾತ್ರ ಸಾಧ್ಯವಲ್ಲ. ಸ್ವಲ್ಪ ಆಕೆಯ ಬಗ್ಗೆ ಸ್ವಯಂ ಕಾಳಜಿ ತೆಗೆದುಕೊಂಡಾಗ ಮಾತ್ರ ಇನ್ನಷ್ಟು ಬ್ಯೂಟಿಫುಲ್ ಆಗಿ ಕಾಣಲು ಸಾಧ್ಯವಾಗುತ್ತೆ. ಆ ನಿಟ್ಟಿನಲ್ಲಿ ನಮ್ಮ ಪ್ರಕೃತಿ ಆಯಾ ಕಾಲಕ್ಕೆ ನೀಡುವ ಕೊಡುಗೆಗಳನ್ನೇ ಬಳಸಿಕೊಳ್ಳಬಹುದು. ಆದ್ರೆ ಹಾಗೆ ಬಳಸಿಕೊಂಡು ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವ ಬಗೆ ಹೆಚ್ಚಿನ ಮಹಿಳೆಯರಿಗೆ ತಿಳಿದಿರೋದಿಲ್ಲ. ಹಣ್ಣುಗಳು ಯಾವಾಗಲೂ ಕೂಡ ಸೌಂದರ್ಯ ವರ್ಧಕಗಳೇ.

ಆ ನಿಟ್ಟಿನಲ್ಲಿ ಹಲಸಿನ ಹಣ್ಣಿನ ಕೊಡುಗೆ ಕೂಡ ಅಪಾರ.. ವರ್ಷದ ಕೆಲವೇ ತಿಂಗಳು ಮಾರುಕಟ್ಟೆಯಲ್ಲಿ ಲಭ್ಯವಿರುವ ಹಣ್ಣುಗಳಲ್ಲಿ ಹಲಸು ಕೂಡ ಒಂದು. ಇನ್ನೇನು ಹಲಸಿನ ಸೀಸನ್ ಶುರುವಾಗಿದೆ. ವೆರೈಟಿ ಹಲಸುಗಳು, ಅದರ ವಾಸನೆ ಮೂಗಿಗೆ ಬಡಿಯುವ ಸಂದರ್ಭ ಇದು.. ಕೇವಲ ಹಲಸಿನ ವಾಸನೆ ಸವಿದ್ರೆ ಹೇಗೆ ಸಾಧ್ಯ ಹೇಳಿ. ಹಲಸು ಅಂದ ಕೂಡಲೇ ಬಾಯಲ್ಲಿ ಕೆಲವರಿಗೆ ನೀರೂರುತ್ತೆ.

ಹಲಸಿನ ಹಣ್ಣಿನ ಬೀಜ ಎಸೆಯುವ ಮುನ್ನ ಎರಡು ಬಾರಿ ಆಲೋಚಿಸಿ!

ಹಾಗಂತ ಬಾಯಲ್ಲಿ ನೀರೂರಿಸಿ, ತಿನ್ನಲು ಮಾತ್ರ ಟೇಸ್ಟಿಯಾಗಿರುವ ಹಣ್ಣು ಹಲಸು ಅಂತ ಅಂದುಕೊಳ್ಳಬೇಡಿ.. ಬದಲಾಗಿ ಹಲಸು ನಿಮ್ಮ ಸೌಂದರ್ಯವರ್ಧಕ ಕೂಡ ಹೌದು.. ಹಲಸಿನ ಹಣ್ಣನ್ನು ಬಳಸಿ ಹೇಗೆ ನಿಮ್ಮ ಮುಖದ ಕಾಂತಿ ಹೆಚ್ಚಿಸಿಕೊಳ್ಳಬಹುದು ಅನ್ನೋದನ್ನು ನಾವ್ ನಿಮಗೆ ಸಿಂಪಲ್ ಆಗಿ ತಿಳಿಸಿಕೊಡ್ತೀವಿ. ಅದಕ್ಕಾಗಿ ಈ ಲೇಖನವನ್ನು ಮುಂದೆ ಓದಿ..

ಮೊಡವೆ ನಿವಾರಣೆಗೆ

ಮೊಡವೆ ನಿವಾರಣೆಗೆ

ಕೆಲವು ಹಲಸಿನ ಹಣ್ಣನ್ನು ತೆಗೆದುಕೊಂಡು ಅದನ್ನು ಗ್ರೈಂಡ್ ಮಾಡ್ಕೊಳ್ಳಿ. ಬಲಿತಿರುವ ಹಣ್ಣು ಚೆನ್ನಾಗಿ ಪೇಸ್ಟ್ ಆಗುತ್ತೆ. ಪಲ್ಪ್ ನ್ನು ಮೊಡವೆಗಳಿರುವ ಜಾಗಕ್ಕೆ ಅಪ್ಲೈ ಮಾಡಿ.. ಮೊಡವೆಗಳನ್ನು ಬೇಗನೆ ನಿವಾರಸಿ, ಮತ್ತೆ ಮೊಡವೆಗಳು ಏಳದಂತೆ ನೋಡಿಕೊಳ್ಳುವ ಸಾಮರ್ಥ್ಯ ಹಲಸಿನ ಹಣ್ಣುಗಳಿಗಿದೆ.

ಒಣತ್ವಚೆಗೆ ಹಲಸಿನ ಹಣ್ಣು

ಒಣತ್ವಚೆಗೆ ಹಲಸಿನ ಹಣ್ಣು

ಒಣ ತ್ವಚೆ ಮತ್ತು ತುರಿಕೆ ಸಮಸ್ಯೆಯನ್ನು ಹೋಗಲಾಡಿಸಲು ಹಲಸಿನ ಹಣ್ಣಿನ ರಸದಿಂದ ಮುಖಕ್ಕೆ ಮಸಾಜ್ ಮಾಡಿಕೊಳ್ಳಿ. ಈ ರಸ ಮುಖದಲ್ಲಿ ಹಾಗೆಯೇ ಇರಲು ಬಿಡಿ. 20 ನಿಮಿಷಗಳ ನಂತರ ಮುಖವನ್ನು ತೊಳೆದುಕೊಳ್ಳಿ.

ನೆರಿಗೆಗಳನ್ನು ದೂರ ಮಾಡಲು

ನೆರಿಗೆಗಳನ್ನು ದೂರ ಮಾಡಲು

ನೆರಿಗೆಗಳು ನಿಮ್ಮನ್ನು ವೃದ್ಧಾಪ್ಯಕ್ಕೆ ತಳ್ಳುತ್ತವೆ. ನೆರಿಗೆಗಳಿಂದ ದೂರಾಗಲು, ಹಣ್ಣಿನಿಂದ ಪೇಸ್ಟ್ ತಯಾರಿಸಿಕೊಂಡು ಅದನ್ನು ಮುಖಕ್ಕೆ ಹಚ್ಚಿಕೊಳ್ಳಬಹುದಾಗಿದೆ. ಈ ಪೇಸ್ಟ್‎ಗೆ ಒಂದು ಚಮಚ ಹಾಲನ್ನು ಸೇರಿಸಿಕೊಳ್ಳಿ ನಂತರ ಇದನ್ನು ಮಿಶ್ರಮಾಡಿಕೊಂಡು ನೆರಿಗೆಗಳ ಭಾಗಕ್ಕೆ ಹಚ್ಚಿಕೊಳ್ಳಿ. ನಂತರ 10 ನಿಮಿಷಗಳ ತರುವಾಯ ಅದನ್ನು ತೆಗೆಯಿರಿ. ಮುಖವನ್ನು ತಣ್ಣಗಿನ ನೀರಿನಿಂದ ತೊಳೆದುಕೊಂಡು ಐಸ್‎ನಿಂದ ಮುಖಕ್ಕೆ ಮಾಲೀಸು ಮಾಡಿಕೊಳ್ಳಿ.

ಕಪ್ಪು ಕಲೆಗಳನ್ನು ನಿವಾರಿಸಲು

ಕಪ್ಪು ಕಲೆಗಳನ್ನು ನಿವಾರಿಸಲು

ಹಲಸಿನ ಹಣ್ಣಿನ ಮೂರು ಹಣ್ಣು ಮತ್ತು ಬೀಜವನ್ನು ನುಣ್ಣಗೆ ಅರೆದುಕೊಳ್ಳಿ. ಈ ಮಿಶ್ರಣ ಒರಟಾಗಿರಲಿ. ಇದನ್ನು ಮೇಲ್ಮುಖವಾಗಿ ಕಪ್ಪು ಕಲೆಗಳ ಮೇಲೆ ಹಚ್ಚಿಕೊಳ್ಳಿ. 10 ನಿಮಿಷಗಳ ನಂತರ ಮುಖವನ್ನು ತೊಳೆದುಕೊಳ್ಳಿ.

ತ್ವಚೆಯ ಗಾಯಗಳನ್ನು ಹೋಗಲಾಡಿಸಲು

ತ್ವಚೆಯ ಗಾಯಗಳನ್ನು ಹೋಗಲಾಡಿಸಲು

ಹಲಸಿನ ಹಣ್ಣಿನಿಂದ ಗಾಯಗಳನ್ನು ಸುಲಭವಾಗಿ ಹೋಗಲಾಡಿಸಬಹುದು. ಹಲಸಿನ ಹಣ್ಣಿನ ಬೀಜಗಳನ್ನು ಹುಡಿ ಮಾಡಿಟ್ಟುಕೊಳ್ಳಿ ಇದಕ್ಕೆ ಒಂದು ಚಮಚ ಜೇನನ್ನು ಬೆರೆಸಿ ಪೇಸ್ಟ್ ತಯಾರಿಸಿಕೊಳ್ಳಿ. ಗಾಯದ ಮೇಲ್ಭಾಗಕ್ಕೆ ಈ ಪೇಸ್ಟ್ ಅನ್ನು ಸವರಿ ನಂತರ ಒಣಗಲು ಬಿಡಿ. 10 ನಿಮಿಷಗಳ ನಂತರ ಮುಖವನ್ನು ತೊಳೆದುಕೊಳ್ಳಿ.

ಕಣ್ಣಿನ ಸುತ್ತಲಿನ ನೆರಿಗೆಯ ನಿವಾರಣೆಗೆ

ಕಣ್ಣಿನ ಸುತ್ತಲಿನ ನೆರಿಗೆಯ ನಿವಾರಣೆಗೆ

ಕಣ್ಣಿನ ಸುತ್ತ ಡಾರ್ಕ್ ಸರ್ಕಲ್ ಆಗಿ, ಅದೇ ಕ್ರಮೇಣ ನೆರಿಗೆಗಳಂತೆ ಕಾಣಿಸಿಕೊಳ್ಳೋದಿದೆ. ನಿಮ್ಮ ಸೌಂದರ್ಯ ಹಾಳು ಮಾಡುವ ಇಂತಹ ನೆರಿಗೆಗಳ ನಿವಾರಣೆಗೆ ನೀವು ಹಲಸಿನ ಹಣ್ಣನ್ನು ಬಳಸಿಕೊಳ್ಳಬಹುದು. ಕೆಲವು ಹಲಸಿನ ಹಣ್ಣಿನ ತುಂಡು, ತಣ್ಣನೆಯ ಹಾಲು ಮಿಕ್ಸ್ ಮಾಡಿ ಅಪ್ಲೈ ಮಾಡಿ ಪೇಸ್ಟ್ ತಯಾರಿಸಿಕೊಳ್ಳಿ. ಇದನ್ನು ಕಣ್ಣಿನ ಸುತ್ತ ಅಪ್ಲೈ ಮಾಡಿ.

ತುಟಿಯ ಸುತ್ತಲಿನ ಕಪ್ಪು ಕಲೆಗಳಿಗೆ..

ತುಟಿಯ ಸುತ್ತಲಿನ ಕಪ್ಪು ಕಲೆಗಳಿಗೆ..

ಹಲಸಿನ ಹಣ್ಣು ನಿಮ್ಮ ತುಟಿಗಳಿಗೆ ಬೆಸ್ಟ್ ಲಿಪ್ ಕೇರ್ ಆಗಲಿದೆ..ಈಗಿನ ಶುಷ್ಕ ವಾತಾವರಣದ ಪರಿಣಾಮವಾಗಿ ತುಟಿಗಳಲ್ಲಿ ಸೀಳು ಕಾಣಿಸಿಕೊಳ್ಳೋದು, ಒಡೆದು ರಕ್ತ ಸೋರುವ ಹಂತಕ್ಕೂ ಹೋಗಬಹುದು. ನಂತ್ರ ಅದು ತುಟಿಯ ಸುತ್ತ ಕಪ್ಪು ಕಲೆಗಳಿಗೆ ಕಾರಣವಾಗುತ್ತೆ. ಇನ್ನು ಕೆಲವರಿಗೆ ರಾತ್ರಿ ಮಲಗಿದ ಸಂದರ್ಬದಲ್ಲಿ ಜೊಲ್ಲು ಸೋರಿ, ಕಪ್ಪು ಕಲೆಗಳಾಗುವ ಸಾಧ್ಯತೆ ಇರುತ್ತೆ. ಅಂತವರು ಕೆಲವು ಹಲಸಿನ ಹಣ್ಣುಗಳನ್ನು ತುಟಿಗಳಿಗೆ ತಿಕ್ಕಿಕೊಳ್ಳೋದ್ರಿಂದ ಉತ್ತಮ ಪರಿಣಾಮವನ್ನು ಪಡೆದುಕೊಳ್ಳಬಹುದು.. ಯಾವುದೇ ಇತರೆ ವಸ್ತುಗಳನ್ನು ಇದಕ್ಕೆ ಮಿಶ್ರಣ ಮಾಡುವ ಅಗತ್ಯವಿಲ್ಲ. ಹಲಸಿನ ಹಣ್ಣಿನ ತಿರುಳನ್ನು ನೀಟಾಗಿ ತೆಗೆದುಕೊಳ್ಳಿ. ಇಲ್ಲದೇ ಇದ್ರೆ ತುಟಿಗಳಿಗೆ ಅಂಟಿಕೊಳ್ಳುವ ಸಾಧ್ಯತೆಗಳಿರುತ್ತೆ.

ಕುತ್ತಿಗೆಯ ಭಾಗದ ನೆರಿಗೆಗಳ ನಿವಾರಣೆಗೆ

ಕುತ್ತಿಗೆಯ ಭಾಗದ ನೆರಿಗೆಗಳ ನಿವಾರಣೆಗೆ

ಅರ್ಧ ಹಲಸಿನ ಹಣ್ಣಿನ ತಿರುಳು, 1 ಬಾಳೆಹಣ್ಣು, 1 ಗ್ರಾಂ ಕಡಲೆಹಿಟ್ಟು, ಹಾಲು ಇವಿಷ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. ಕುತ್ತಿಗೆಯ ಭಾಗಕ್ಕೂ ಅಪ್ಲೈ ಮಾಡಿ. ಈ ಮಿಶ್ರಣ ಬೇಗನೇ ಡ್ರೈ ಆಗಲ್ಲ. ಹಾಗಾಗಿ ಮುಖದಲ್ಲಿ ಪೂರ್ತಿ ಒಣಗುವವರೆಗೆ ಹಾಗೆಯೇ ಇಡಿ. ಸುಮಾರು ಅರ್ಧ ಗಂಟೆಯ ನಂತ್ರ ವಾಶ್ ಮಾಡಿ..ಪರಿಣಾಮವನ್ನು ನೀವೇ ಗಮನಿಸಿಕೊಳ್ಳಬಹುದು. ವಾರಕ್ಕೆ ಎರಡು ಬಾರಿ ನೀವಿದನ್ನು ಮಾಡಿಕೊಳ್ಳೋದು ಉತ್ತಮ.

English summary

Amazing Beauty Benefits of Jackfruit Face Packs

We are usually attracted by the fruits for their taste. It gives the taste to the tongue and the nutrients to the body. In India mango, jack and Banana are the triple fruits and the Jackfruit is in the second place in giving the sweet taste of all the fruits. Let us discuss about the beauty benefits of Jackfruit.
X
Desktop Bottom Promotion