For Quick Alerts
ALLOW NOTIFICATIONS  
For Daily Alerts

ಬ್ಯೂಟಿ ಟಿಪ್ಸ್: ಒಂದೆರಡು ನೆಲ್ಲಿಕಾಯಿ ಬಳಸಿ-ಮುಖದ ಸೌಂದರ್ಯ ವೃದ್ಧಿಸಿ!

|

ನೆಲ್ಲಿಕಾಯಿಯಲ್ಲಿ ಹಲವಾರು ರೀತಿಯ ಆರೋಗ್ಯ ಗುಣಗಳು ಇರುವ ಕಾರಣದಿಂದಾಗಿ ಆಯುರ್ವೇದವು ಇದನ್ನು ಹಿಂದಿನಿಂದಲೂ ಬಳಸಿಕೊಂಡು ಬರುತ್ತಿದೆ. ಅದೇ ರೀತಿಯ ನಮ್ಮ ಹಿರಿಯರು ಕೂಡ ನೆಲ್ಲಿಕಾಯಿಯನ್ನು ಕೂದಲು ಹಾಗೂ ಚರ್ಮದ ಆರೈಕೆಯಲ್ಲಿ ಪ್ರಮುಖವಾಗಿ ಬಳಸಿಕೊಂಡಿದ್ದಾರೆ. ನೆಲ್ಲಿಕಾಯಿಯಿಂದ ಸಿಗುವಂತಹ ಲಾಭಗಳಲ್ಲಿ ಕೂದಲು ಮತ್ತು ಚರ್ಮದ ಆರೈಕೆ ಮಾಡಬಹುದು. ಆದರೆ ಇದೆಲ್ಲವೂ ನಮಗೆ ತಿಳಿದಿಲ್ಲ. ಈ ಕಾರಣದಿಂದಲೇ ಕೂದಲು ಹಾಗೂ ಚರ್ಮದ ಹಲವಾರು ಸಮಸ್ಯೆಗಳು ನಮ್ಮನ್ನು ಕಾಡುತ್ತಲಿರುವುದು. ನೆಲ್ಲಿಕಾಯಿಯನ್ನು ನಿಮ್ಮ ಸೌಂದರ್ಯವರ್ಧಕದ ಡಬ್ಬಿಗೆ ಯಾವ ರೀತಿ ಸೇರಿಸಿಕೊಳ್ಳಬೇಕು ಮತ್ತು ಅದರ ಬಳಕೆ ಹೇಗೆ ಎಂದು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ಇದಕ್ಕೂ ಮೊದಲು ನೀವು ನೆಲ್ಲಿಕಾಯಿಯಿಂದಾಗಿ ಚರ್ಮಕ್ಕೆ ಆಗುವಂತಹ ಲಾಭಗಳ ಬಗ್ಗೆ ತಿಳಿಯಲೇಬೇಕು.

Amla

• ವಯಸ್ಸಾಗುವ ಲಕ್ಷಣ ತಡೆಯಲು ಸಹಕಾರಿ.
• ಇದು ನೆರಿಗೆ ಮತ್ತು ವಯಸ್ಸಾಗುವ ವೇಳೆ ಬೀಳುವ ಗೆರೆ ನಿವಾರಿಸುವುದು.
• ಚರ್ಮದಲ್ಲಿ ಕಾಲಜನ್ ಉತ್ಪತ್ತಿಯನ್ನು ಹೆಚ್ಚಿಸುವ ನೆಲ್ಲಿಕಾಯಿಯು ನಿಮ್ಮ ಚರ್ಮವು ನಯ, ಆರೋಗ್ಯ ಮತ್ತು ಕಾಂತಿಯುತವಾಗಿರುವಂತೆ ಮಾಡುವುದು.
• ಪೋಷಣೆ ನೀಡುವುದು ಮತ್ತು ಚರ್ಮ ಬಿಗಿಗೊಳಿಸುವುದು.
• ಚರ್ಮ ವರ್ಣ ಕಳೆದುಕೊಳ್ಳುವುದನ್ನು ತಡೆಯುವುದು.
• ಚರ್ಮದ ಬಣ್ಣವನ್ನು ಇದು ಸುಧಾರಣೆ ಮಾಡುವುದು.
• ಸತ್ತ ಚರ್ಮದ ಕೋಶ ಕಿತ್ತು ಹಾಕಿ ಶುದ್ಧೀಕರಿಸುವುದು.
• ಮೊಡವೆ, ಬೊಕ್ಕೆ ಮತ್ತು ಗಾಯ ನಿವಾರಿಸುವುದು.

ನೆಲ್ಲಿಕಾಯಿಯನ್ನು ಹಸಿಯಾಗಿ ತಿಂದರೆ ಅದರಿಂದ ಕೂದಲು ಮತ್ತು ಚರ್ಮಕ್ಕೆ ಹೆಚ್ಚಿನ ಲಾಭಗಳು ಸಿಗುವುದು. ಫೇಸ್ ಮಾಸ್ಕ್, ಸ್ಕ್ರಬ್ ಮತ್ತು ಟೋನರ್ ನಲ್ಲಿ ಇದನ್ನು ಬಳಸಿಕೊಂಡು ಚರ್ಮದ ಆರೈಕೆ ಮಾಡಬಹುದು. ಇದು ಹೇಗೆ ಎಂದು ಮುಂದೆ ಓದುತ್ತಾ ತಿಳಿಯಿರಿ.

ನಿಮ್ಮ ತ್ವಚೆಯ ಸೌಂದರ್ಯವರ್ಧಕದಲ್ಲಿ ನೆಲ್ಲಿಕಾಯಿಯನ್ನು ಯಾವ ರೀತಿಯಲ್ಲಿ ಸುಲಭವಾಗಿ ಸೇರಿಸಿಕೊಳ್ಳಬಹುದು. ಇನ್ನು ನಾಲ್ಕು ಅದ್ಭುತ ಮತ್ತು ನೈಸರ್ಗಿಕ ವಿಧಾನದ ಮೂಲಕ ನೆಲ್ಲಿಕಾಯಿಯನ್ನು ನಿಮ್ಮ ತ್ವಚೆಯ ಆರೈಕೆಯಲ್ಲಿ ಸೇರಿಸಿಕೊಳ್ಳುವುದು.

1. ನೆಲ್ಲಿಕಾಯಿ, ಅರಿಶಿನ ಮತ್ತು ಮೊಸರಿನ ಫೇಸ್ ಮಾಸ್ಕ್(ಚರ್ಮದ ಕಾಂತಿ ಮತ್ತು ಕಲೆ ನಿವಾರಣೆಗೆ )

1. ನೆಲ್ಲಿಕಾಯಿ, ಅರಿಶಿನ ಮತ್ತು ಮೊಸರಿನ ಫೇಸ್ ಮಾಸ್ಕ್(ಚರ್ಮದ ಕಾಂತಿ ಮತ್ತು ಕಲೆ ನಿವಾರಣೆಗೆ )

ಬೇಕಾಗುವ ಸಾಮಗ್ರಿಗಳು

*2 ಚಮಚ ನೆಲ್ಲಿಕಾಯಿ ಹುಡಿ

*ಒಂದು ಚಿಟಿಕೆ ಅರಿಶಿನ

*2 ಚಮಚ ಮೊಸರು

ತಯಾರಿಸುವ ವಿಧಾನ

• ಒಂದು ಪಿಂಗಾಣಿಯಲ್ಲಿ ನೆಲ್ಲಿಕಾಯಿ ಹುಡಿ ಮತ್ತು ಚಿಟಿಕೆ ಅರಶಿನ ಹಾಕಿಕೊಳ್ಳಿ.

• ಇದಕ್ಕೆ ಮೊಸರು ಹಾಕಿ ಮತ್ತು ರುಬ್ಬಿಕೊಂಡು ಪೇಸ್ಟ್ ಮಾಡಿ.

• ಮುಖಕ್ಕೆ ಹಚ್ಚಿಕೊಳ್ಳುವ ಮೊದಲು ಇದನ್ನು ಸ್ವಲ್ಪ ಸಮಯ ಹಾಗೆ ಬಿಡಿ. ಹಚ್ಚಿಕೊಳ್ಳುವ ಮೊದಲು ಮುಖ ಸರಿಯಾಗಿ ತೊಳೆಯಿರಿ.

• ಹಚ್ಚಿಕೊಂಡ ಬಳಿಕ 20 ನಿಮಿಷ ಕಾಲ ಹಾಗೆ ಬಿಡಿ. ಬಳಿಕ ನೀರಿನಿಂದ ತೊಳೆಯಿರಿ ಮತ್ತು ಒಣಗಲು ಬಿಡಿ. ಫೇಸ್ ವಾಶ್ ಅಥವಾ ಸೋಪ್ ಬಳಸಬೇಡಿ. ಕೇವಲ ನೀರಿನಿಂದ ತೊಳೆಯಿರಿ.

• ವಾರದಲ್ಲಿ ಎರಡು ಸಲ ಇದನ್ನು ಬಳಸಿದರೆ ಫಲಿತಾಂಶ ಖಚಿತ.

Most Read: ಸಾಲ ಮಾಡಿಯಾದ್ರೂ ತುಪ್ಪ ತಿನ್ನಿ! ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು

ಇದು ಹೇಗೆ ಕೆಲಸ ಮಾಡುವುದು?

ನೆಲ್ಲಿಕಾಯಿ ನೀಡುವಂತಹ ಹಲವಾರು ರೀತಿಯ ಲಾಭಗಳೊಂದಿಗೆ ಅರಶಿನದಲ್ಲಿ ಉರಿಯೂತ ಶಮನಕಾರಿ ಗುಣಗಳು ಇವೆ. ಇದು ಮೊಡವೆ ನಿವಾರಣೆ ಮಾಡುವುದು ಮತ್ತು ಚರ್ಮಕ್ಕೆ ಕಾಂತಿ ನೀಡುವುದು. ಮೊಸರಿನಲ್ಲಿ ತಂಪುಕಾರಕ ಗುಣಗಳು ಇವೆ. ಇದರಲ್ಲಿ ಇರುವಂತಹ ಲ್ಯಾಕ್ಟೊಸ್ ಕಿಣ್ವವು ಕೊಳೆ ಹಾಗೂ ಕಲ್ಮಷ ತೆಗೆದುಹಾಕಿ, ಚರ್ಮಕ್ಕೆ ಪೋಷಣೆ ನೀಡುವುದು.

2. ನೆಲ್ಲಿಕಾಯಿ ಹುಡಿ ಮತ್ತು ರೋಸ್ ವಾಟರ್(ಎಣ್ಣೆಯುಕ್ತ ಚರ್ಮಕ್ಕೆ ಟೋನರ್)

2. ನೆಲ್ಲಿಕಾಯಿ ಹುಡಿ ಮತ್ತು ರೋಸ್ ವಾಟರ್(ಎಣ್ಣೆಯುಕ್ತ ಚರ್ಮಕ್ಕೆ ಟೋನರ್)

ಬೇಕಾಗುವ ಸಾಮಗ್ರಿಗಳು

*2 ಚಮಚ ನೆಲ್ಲಿಕಾಯಿ ಹುಡಿ

*4 ಚಮಚ ರೋಸ್ ವಾಟರ್

ತಯಾರಿಸುವ ವಿಧಾನ

• ಒಂದು ಪಿಂಗಾಣಿಯಲ್ಲಿ ಸ್ವಲ್ಪ ನೆಲ್ಲಿಕಾಯಿ ಹುಡಿ ಹಾಕಿ.

•ಇದಕ್ಕೆ ರೋಸ್ ವಾಟರ್ ಬೆರೆಸಿಕೊಂಡು ಸರಿಯಾಗಿ ಮಿಶ್ರಣ ಮಾಡಿ ದ್ರವ ರೂಪಕ್ಕೆ ಬರಲಿ.

•ಸ್ಪ್ರೇ ಬಾಟಲಿಗೆ ಹಾಕಿಡಿ.

•ಮಲಗುವ ಮೊದಲು ಪ್ರತಿನಿತ್ಯ ಇದನ್ನು ಮುಖಕ್ಕೆ ಸ್ಪ್ರೇ ಮಾಡಿ ಮತ್ತು ಹಾಗೆ ಬಿಡಿ. ಇದು ಚರ್ಮದಲ್ಲಿ ಒಳ್ಳೆಯ ಕೆಲಸ ಮಾಡಿ, ನಿಮಗೆ ಉತ್ತಮ ಫಲಿತಾಂಶ ನೀಡುವುದು.

•ಉತ್ತಮ ಫಲಿತಾಂಶ ಪಡೆಯಲು ನೀವು ಪ್ರತಿನಿತ್ಯ ರಾತ್ರಿ ಮಲಗುವ ಮೊದಲು ಹೀಗೆ ಮಾಡಿ.

ಇದು ಹೇಗೆ ಕೆಲಸ ಮಾಡುವುದು?

ರೋಸ್ ವಾಟರ್ ಚರ್ಮದಲ್ಲಿ ಪಿಎಚ್ ಮಟ್ಟವನ್ನು ಕಾಪಾಡುವುದು. ಇದರಲ್ಲಿ ಇರುವಂತಹ ಎಣ್ಣೆಯನ್ನು ನಿಯಂತ್ರಿಸುವ ಗುಣಗಳು ಜಿಡ್ಡಿನ ಚರ್ಮವಿರುವವವರಿಗೆ ತುಂಬಾ ಲಾಭಕಾರಿಯಾಗಿರಲಿದೆ. ಇದರಲ್ಲಿ ಉರಿಯೂತ ಶಮನಕಾರಿ ಮತ್ತು ಸೂಕ್ಷ್ಮಾಣು ವಿರೋಧಿ ಗುಣಗಳು ಇದ್ದು, ಚರ್ಮದ ಕಿರಿಕಿರಿ ತಪ್ಪಿಸುವುದು.

Most Read: ಇಂತಹ ವಸ್ತುಗಳನ್ನು ಭಗವಾನ್ ಹನುಮಂತನಿಗೆ ಅರ್ಪಿಸಿ- ಆತ ಸಂತುಷ್ಟನಾಗುವನು

3.ನೆಲ್ಲಿಕಾಯಿ, ಲಿಂಬೆ ಮತ್ತು ಸಕ್ಕರೆಯ ಸ್ಕ್ರಬ್ (ಸತ್ತ ಚರ್ಮ ತೆಗೆಯಲು)

3.ನೆಲ್ಲಿಕಾಯಿ, ಲಿಂಬೆ ಮತ್ತು ಸಕ್ಕರೆಯ ಸ್ಕ್ರಬ್ (ಸತ್ತ ಚರ್ಮ ತೆಗೆಯಲು)

ಬೇಕಾಗುವ ಸಾಮಗ್ರಗಳು

*1 ಚಮಚ ನೆಲ್ಲಿಕಾಯಿ ರಸ

*2 ಚಮಚ ಸಕ್ಕರೆ

*ಲಿಂಬೆರಸ ಸ್ವಲ್ಪ

ತಯಾರಿಕೆ ವಿಧಾನ

•ಒಂದು ಪಿಂಗಾಣಿಯಲ್ಲಿ ಸ್ವಲ್ಪ ನೆಲ್ಲಿಕಾಯಿ ರಸ ಮತ್ತು ಲಿಂಬೆರಸವನ್ನು ಹಾಕಿಕೊಂಡು ಸರಿಯಾಗಿ ಬೆರೆಸಿಕೊಳ್ಳಿ.

•ಇದಕ್ಕೆ ಸಕ್ಕರೆ ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿ. ಆದರೆ ಸಕ್ಕರೆ ಸಂಪೂರ್ಣವಾಗಿ ಕರಗುವುದು ಬೇಡ.

•ತಣ್ಣೀರಿನಿಂದ ಮುಖ ತೊಳೆಯಿರಿ. ಈಗ ಮಿಶ್ರಣವನ್ನು ಕೈಯಲ್ಲಿ ತೆಗೆದುಕೊಂಡು ಮುಖಕ್ಕೆ ಹಚ್ಚಿ ಸ್ಕ್ರಬ್ ಮಾಡಿ. ವೃತ್ತಾಕಾರದಲ್ಲಿ ಸ್ಕ್ರಬ್ ಮಾಡಿ.

•5 ನಿಮಿಷ ಕಾಲ ಸ್ಕ್ರಬ್ ಮಾಡಿ. ಮೆತ್ತಗೆ ಸ್ಕ್ರಬ್ ಮಾಡಿ.

•ತಣ್ಣೀರಿನಿಂದ ಮುಖ ತೊಳೆದು, ಒರೆಸಿಕೊಳ್ಳಿ.

•ವಾರದಲ್ಲಿ ಎರಡು ಸಲ ಬಳಸಿ.

ಇದು ಹೇಗೆ ಕೆಲಸ ಮಾಡುವುದು?

ಸಕ್ಕರೆಯು ಸತ್ತ ಚರ್ಮವನ್ನು ತೆಗೆದುಹಾಕುವುದು ಮತ್ತು ಇದು ನೈಸರ್ಗಿಕ ಸ್ಕ್ರಬ್. ಇದು ಚರ್ಮಕ್ಕೆ ಪೋಷಣೆ ನೀಡ, ರಂಧ್ರಗಳನ್ನು ಶುಚಿಗೊಳಿಸುವುದು ಮತ್ತು ಸ್ಕ್ರಬ್ ಆಗಿ ಬಳಸಿದಾಗ ಇದು ಸತ್ತ ಚರ್ಮವನ್ನು ಕಿತ್ತುಹಾಕುವುದು. ಲಿಂಬೆಯು ಚರ್ಮದ ಕಾಂತಿ ಹೆಚ್ಚಿಸುವುದು. ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ. ಮೊಡವೆ ಹಾಗೂ ಬೊಕ್ಕೆಗಳ ನಿವಾರಣೆ ಮಾಡುವುದು. ಕಪ್ಪು ಕಲೆಗಳನ್ನು ತೆಗೆದುಹಾಕುವುದು.

4.ನೆಲ್ಲಿಕಾಯಿ ಮತ್ತು ಪಪ್ಪಾಯಿ ಫೇಸ್ ಮಾಸ್ಕ್(ಚರ್ಮದ ಬಣ್ಣ ವೃದ್ಧಿಸಲು)

4.ನೆಲ್ಲಿಕಾಯಿ ಮತ್ತು ಪಪ್ಪಾಯಿ ಫೇಸ್ ಮಾಸ್ಕ್(ಚರ್ಮದ ಬಣ್ಣ ವೃದ್ಧಿಸಲು)

ಬೇಕಾಗುವ ಸಾಮಗ್ರಿಗಳು

*2 ಚಮಚ ನೆಲ್ಲಿಕಾಯಿ ರಸ

*2 ಚಮಚ ಪಪ್ಪಾಯಿ ತಿರುಳು

*1 ಚಮಚ ಜೇನುತುಪ್ಪ

ತಯಾರಿಸುವ ವಿಧಾನ

•ಒಂದು ಪಿಂಗಾಣಿಯಲ್ಲಿ ನೆಲ್ಲಿಕಾಯಿ ರಸ ಹಾಕಿ.

•ಇದಕ್ಕೆ ಪಪ್ಪಾಯಿ ತಿರುಳು ಹಾಕಿ ಮತ್ತು ರುಬ್ಬಿಕೊಳ್ಳಿ.

•ಈಗ ಜೇನುತುಪ್ಪ ಹಾಕಿ ಮತ್ತು ಮಿಶ್ರಣ ಮಾಡಿ.

•ಕೆಲವು ನಿಮಿಷ ಕಾಲ ಮಿಶ್ರಣವು ಹಾಗೆ ಇರಲಿ. ಇದನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಂಡ ಬಳಿಕ 20 ನಿಮಿಷ ಕಾಲ ಹಾಗೆ ಬಿಡಿ.

•ತಣ್ಣೀರಿನಿಂದ ತೊಳೆದು ಮುಖ ಒರೆಸಿಕೊಳ್ಳಿ.

•ವಾರದಲ್ಲಿ ಎರಡು ಸಲ ಬಳಸಿ.

Most Read:ಈ 5 ರಾಶಿಯವರಿಗೆ ಮಾತು ಕಮ್ಮಿ-ಆದರೆ ಇವರ ಆಲೋಚನೆಗಳನ್ನು ಊಹಿಸುವುದೂ ಕಷ್ಟ!

ಹೇಗೆ ಕೆಲಸ ಮಾಡುವುದು?

ಹೇಗೆ ಕೆಲಸ ಮಾಡುವುದು?

ಪಪ್ಪಾಯಿಯು ನೈಸರ್ಗಿಕವಾಗಿ ಚರ್ಮದ ಬಣ್ಣವನ್ನು ವೃದ್ಧಿಸುವುದು. ಇದು ವರ್ಣ ಕುಂದುವುದು ಮತ್ತು ಕಲೆಗಳ ನಿವಾರಣೆ ಮಾಡುವುದು. ನಿಮ್ಮ ಪ್ರತಿನಿತ್ಯದ ಸೌಂದರ್ಯದ ಆರೈಕೆಯಲ್ಲಿ ಪಪ್ಪಾಯಿ ಬಳಸಿಕೊಂಡರೆ ಕಾಂತಿಯುತ ಹಾಗೂ ನಯವಾದ ಚರ್ಮ ಪಡೆಯಬಹುದು. ಜೇನುತುಪ್ಪದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ ಮತ್ತು ಆ್ಯಂಟಿಆಕ್ಸಿಡೆಂಟ್ ಸಮೃದ್ಧವಾಗಿದೆ. ಇದು ವಯಸ್ಸಾಗುವ ಲಕ್ಷಣ ತಡೆಯುವುದು ಮತ್ತು ಚರ್ಮದ ಆರೈಕೆಗೆ ಅತ್ಯುತ್ತಮವಾಗಿರುವುದು.

ನೆಲ್ಲಿಕಾಯಿಯಿಂದ ತ್ವಚೆಯ ಆರೈಕೆ ಮಾಡುವುದು ಹೇಗೆ ಎಂದು ನಿಮಗೆ ಈಗ ತಿಳಿದಿದೆ ತಾನೇ? ಇದನ್ನು ನಿಮ್ಮ ತ್ವಚೆಯ ಆರೈಕೆಯಲ್ಲಿ ಬಳಸಿಕೊಳ್ಳಿ ಮತ್ತು ಸುಂದರವಾದ ತ್ವಚೆ ಪಡೆಯಿರಿ.

English summary

Amazing & Natural Ways To Use Amla For Beautiful Skin

Our grandmother has probably been pestering us all our lives to include amla in our hair care and skin care routine. But, have we ever listened to her? Is amla a part of your beauty regime? Well, if it's not, you better start having it in your skin care routine. Why? Because it has numerous benefits to offer - the most essential one being anti-ageing. If you are wondering how to make amla a part of your beauty regime, here's some help! But before that, there is something you must know
X
Desktop Bottom Promotion